ಮಣ್ಣಿನ ಸವೆತ ಹಾಗೂ ನಿಯಂತ್ರಣ ಕ್ರಮಗಳು

ಮಣ್ಣಿನ ಸವೆತ ಹಾಗೂ ನಿಯಂತ್ರಣ ಕ್ರಮಗಳು

ಕನ್ನಡದ ಮಣ್ಣು ಎಂಬ ಶಬ್ದವು ಆಂಗ್ಲ ಭಾಷೆಯ soil ಎಂಬ ಪದದಿಂದ ಬಂದಿದೆ. ಆಂಗ್ಲ ಭಾಷೆಯ soil ಎಂಬ ಪದವು ಲ್ಯಾಟಿನ್ ಭಾಷೆಯ ಸೋಲಮ್ ಎಂಬ ಪದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ ಭೂಕವಚದ ಅತ್ಯಂತ ಮೇಲ್ಪದರು ಎಂದಾಗುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ soil ಎಂದರೆ ಕನ್ನಡದಲ್ಲಿ ಹುಡಿ ಅಥವಾ ಹುಡಿಯಾಗಿರುವ ಶಿಲಾವಸ್ತುಗಳ ತೆಳುವಾದ ಪದರು ಎಂದು ಅರ್ಥ. ಇದನ್ನೇ ಮಣ್ಣು ಎಂದು ಕರೆಯಲಾಗಿದೆ. ಹಲವಾರು ವರ್ಷಗಳಿಂದ ಗಾಳಿ ಮಳೆಗೆ ಶಿಲೆಗಳು ಒಡೆದು ಚೂರು ಚೂರಾಗಿ ಚಿಕ್ಕ ಚಿಕ್ಕ ಕಣಗಳಾಗಿ ಹಾಗೂ ನಶಿಸಿ ಹುಡಿಯ ರೂಪದಲ್ಲಿಯೇ ಭೂಮೇಲ್ಮೈಯಲ್ಲಿ ಹರಡಿರುವುದು. ಈ ಭೂಮಿಯ ಮೇಲ್ಪದರಿನಲ್ಲಿ ಹರಡಿರುವ ಹುಡಿ ಪ್ರಾಕೃತಿಕ ಹೊಡೆತದಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಹೊಂದುವ ಪ್ರಕ್ರಿಯೆಯನ್ನು ಮಣ್ಣಿನ ಸವೆತ ಎಂದು ಕರೆಯುವರು. ಆದರೆ ಮಣ್ಣಿನ ಸವೆತ ಹೆಚ್ಚಾದಾಗ ಪರಿಣಾಮ ಗಂಭೀರವಾಗುತ್ತದೆ.

ಮಣ್ಣಿನ ಸವಕಳಿಗೆ ಕಾರಣಗಳು: (Causes for soil erosion)

1. ಗಾಳಿ ರಭಸವಾಗಿ ಬೀಸುವುದು, ಜನರ ಮಿತಿಮೀರಿದ ಓಡಾಟ, ದನಕರುಗಳನ್ನು ಮೇಯಿಸುವುದು, ಬಿರುಗಾಳಿ, ಮಳೆ, ರಸಾಯನಿಕ ಗೊಬ್ಬರಗಳ ಬಳಕೆ, ಬೇಸಾಯ ಹಾಗೂ ಕಾಡು ನಾಶದಿಂದ ಮಣ್ಣಿನ ಮೇಲ್ಪದರು ಜಾರಿ ಹೋಗಿ ಮಣ್ಣಿನ ಸವಕಳಿ ಉಂಟಾಗುತ್ತದೆ.

2. ಪ್ರಸ್ತುತ ದಿನಗಳಲ್ಲಿ ಕಾಡಿನ ನಾಶ ಹೇಳತೀರದಷ್ಟು ಆಗುತ್ತಿದೆ. ಪರಿಣಾಮವಾಗಿ ಮಣ್ಣಿನ ಫಲವತ್ತತೆ ನಾಶವಾಗಿ ಆಹಾರ ಉತ್ಪಾದನೆಯಲ್ಲಿ ತೀವ್ರ ಹಿನ್ನಡೆಯಾಗುತ್ತಿದೆ. ಮಳೆಗಾಲದಲ್ಲಿ ಬಿದ್ದ ನೀರನ್ನು ತಡೆ ಹಿಡಿಯುವಂತಹ ಕಾಡುಗಳು ಇಲ್ಲದಿರುವುದರಿಂದ ಮಣ್ಣಿನ ಸವೆತ ಉಂಟಾಗುತ್ತದೆ.

3. ಕಾಡು ನಾಶದ ಪರಿಣಾಮದಿಂದ ಪ್ರತಿ ವರ್ಷ ಸುಮಾರು ಏಳು ಮಿಲಿಯನ್ ಹೆಕ್ಟರ್‌ನಷ್ಟು ಮಣ್ಣು ನಾಶವಾಗುತ್ತಿದೆ.

4. ಭಾರತೀಯ ಗ್ರಾಮೀಣ ಪ್ರದೇಶಗಳಲ್ಲಿ ಜನರು ತಮ್ಮ ತಮ್ಮ ಹೊಲಗಳಲ್ಲಿ ಒಡ್ಡುಗಳನ್ನು ನಿರ್ಮಿಸಿಲ್ಲ. ಹೀಗಾಗಿ ಇಳಿಜಾರು ಇರುವ ಹೊಲಗಳಲ್ಲಿ ಬಿದ್ದ ಮಳೆ ನೀರಿನಿಂದ ಮಣ್ಣಿನ ಸವಕಳಿ ನಿರಂತರವಾಗಿ ಆಗುತ್ತಿದೆ. ಅದನ್ನು ತಪ್ಪಿಸಲು ರೈತರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಇಂತಹ ಸಮಸ್ಯೆಗಳು ಕಾಡುತ್ತವೆ.

5. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮಣ್ಣು ಕೊಚ್ಚಿಕೊಂಡು ಹೋಗಿ ಹತ್ತಿರದ ಕೆರೆ, ಹೊಂಡ ಹಾಗೂ ಸರೋವರಗಳನ್ನು ಸೇರುತ್ತದೆ. ಆಗ ಅವುಗಳು ಹೂಳಿನಿಂದ ತುಂಬಿ ನೀರಿನ ಆಳ ಕಡಿಮೆಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

  • ಭಾರತದಲ್ಲಿರುವ ಸಾವಿರಾರು ಕೆರೆಗಳು ಮತ್ತು ಜಲಾಶಯಗಳಿಗೆ ಮಳೆಗಾಲದಲ್ಲಿ ಮಣ್ಣು ಬಂದು ಸೇರುವುದರಿಂದ ಕೆರೆಗಳಲ್ಲಿ ಹೂಳು ತುಂಬಿಕೊಳ್ಳುತ್ತದೆ. ಆಗ ಕೆರೆಗಳ ಆಯುಷ್ಯವು ಕಡಿಮೆಯಾಗುತ್ತದೆ.
  • ಕಾಡಿನ ನಡುವೆ ವರ್ಗಾವಣೆ ಬೇಸಾಯಕ್ಕಾಗಿ ಗಿಡಮರಗಳನ್ನು ಕಡಿಯುವುದರಿಂದ ಕಾಡುಗಳು ಹಾಳಾಗಿ ಮಣ್ಣಿನ ಸವೆತ ಕಂಡು ಬರುತ್ತದೆ.
  • ಹೆಂಚು, ಇಟ್ಟಿಗೆ ತಯಾರಿಕೆ ಹಾಗೂ ಮಡಿಕೆ ಮುಂತಾದ ವಸ್ತುಗಳ ತಯಾರಿಕೆಗಾಗಿ ಫಲವತ್ತಾದ ಮಣ್ಣಿನ ಮೇಲ್ಭಾಗವನ್ನು ತೆಗೆಯುವುದು ಸಹ ಮಣ್ಣಿನ ಸವೆತಕ್ಕೆ ಕಾರಣವಾಗುತ್ತದೆ.
  • ಕೈಗಾರಿಕರಣ, ಅಣೆಕಟ್ಟು, ರಸ್ತೆ, ರೈಲು ಮಾರ್ಗ ಹಾಗೂ ವಸತಿ ನಿರ್ಮಾಣ ಮುಂತಾದ ಉದ್ದೇಶಗಳಿಗಾಗಿ ಅರಣ್ಯವನ್ನು ಕಡಿದು ನಾಶ ಮಾಡುವುದರಿಂದ ಮಣ್ಣಿನ ಸವೆತ ಕಂಡುಬರುತ್ತದೆ.

ಮಣ್ಣಿನ ಸವೆತವನ್ನು ನಿಯಂತ್ರಿಸುವ ಕ್ರಮಗಳು: (Control soil erosion)

  1. ಇಳಿಜಾರಿಗೆ ಅಡ್ಡಲಾಗಿ ಕೃಷಿ ಕಾರ್ಯಗಳನ್ನು ಮಾಡುವುದರಿಂದ ಮಣ್ಣಿನ ಸವಕಳಿಯನ್ನು ತಪ್ಪಿಸುವುದು.
  2. ಇಳಿಜಾರು ಪ್ರದೇಶಗಳ ಹೊಲಗಳಿಗೆ ಅಡ್ಡಲಾಗಿ ಒಡ್ಡುಗಳನ್ನು ನಿರ್ಮಿಸುವುದು.
  3. ಕಾಡುಗಳನ್ನು ಕಡಿಯದಂತೆ ಕ್ರಮಕೈಗೊಳ್ಳುವುದು ಮತ್ತು ಅರಣ್ಯವನ್ನು ಬೆಳೆಸುವುದು.
  4. ದನಕರುಗಳನ್ನು ಹುಲ್ಲುಗಾವಲು ಪ್ರದೇಶಗಳಲ್ಲಿ ಮೇಯಿಸುವುದನ್ನು ನಿಯಂತ್ರಿಸುವುದು.
  5. ನೀರಾವರಿ ಪ್ರದೇಶಗಳಲ್ಲಿ ಪ್ರವಾಹಗಳುಂಟಾಗದಂತೆ ಎಚ್ಚರಿಕೆ ವಹಿಸುವುದು.
  6. ಅಂತರ ಬೇಸಾಯಕ್ಕೆ ಆದ್ಯತೆ ನೀಡುವುದು.
  7. ಎಲ್ಲಿ ಮಣ್ಣಿನ ಸವೆತ ಹೆಚ್ಚಾಗಿದೆಯೋ ಅಲ್ಲಿ ಹುಲ್ಲನ್ನು ಬೆಳೆಸುವುದು.
  8. ಇಳಿಜಾರಿಗೆ ಅಡ್ಡಲಾಗಿ ಚಿಕ್ಕ ಚಿಕ್ಕ ಹಳ್ಳಗಳನ್ನು ತೋಡಿ ಗಿಡಗಳನ್ನು ಬೆಳೆಸುವುದು.
  9. ವೇಗವಾಗಿ ಗಾಳಿ ಬೀಸುವ ಕಡೆಗಳಲ್ಲಿ ಮರಗಳನ್ನು ಬೆಳೆಸುವುದು.
  10. ಭತ್ತ, ಗೋಧಿಯ ಹುಲ್ಲು, ಭತ್ತದ ಹೊಟ್ಟು ಹಾಗೂ ಎಲೆಗಳಂತಹ ಕೊಳೆತ ವಸ್ತುಗಳನ್ನು ಮಣ್ಣಿನ ಮೇಲ್ಭಾಗದಲ್ಲಿ ಹಾಕುವುದರಿಂದ ಮಣ್ಣಿನ ಸವೆತವನ್ನು ತಡೆಯಬಹುದು.
  11. ಮಣ್ಣಿನ ಸವೆತದಿಂದಾಗುವ ಪರಿಣಾಮಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡುವುದು.
  12. ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಸವಕಳಿಯಿಂದ ಆಗುವ ತೊಂದರೆಗಳ ಬಗ್ಗೆ ತಿಳುವಳಿಕೆ ನೀಡುವಂತಹ ಸಾಕ್ಷ್ಯ ಚಿತ್ರಗಳನ್ನು ತೋರಿಸುವುದು.

ಉಪಸಂಹಾರ

ಮಣ್ಣಿನ ಸವೆತವು ಕೃಷಿ ಉತ್ಪಾದನೆ, ಜಲಾಶಯಗಳ ಆಯುಷ್ಯ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದನ್ನು ನಿಯಂತ್ರಿಸಲು ವೈಜ್ಞಾನಿಕ ಕೃಷಿ ಪದ್ಧತಿಗಳು, ಅರಣ್ಯ ಸಂರಕ್ಷಣೆ ಮತ್ತು ಜನಜಾಗೃತಿ ಅತ್ಯಂತ ಅಗತ್ಯವಾಗಿದೆ. ರೈತರು ಮತ್ತು ಸಾರ್ವಜನಿಕರು ಮಣ್ಣಿನ ಮಹತ್ವವನ್ನು ಅರಿತು ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. ಸರ್ಕಾರ ಮತ್ತು ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಮಣ್ಣಿನ ಸವೆತವನ್ನು ಪರಿಣಾಮಕಾರಿಯಾಗಿ ತಡೆಹಿಡಿಯಲು ಸಾಧ್ಯ. ಮಣ್ಣನ್ನು ಉಳಿಸುವುದು ಭವಿಷ್ಯ ಪೀಳಿಗೆಗೆ ನಮ್ಮ ಜವಾಬ್ದಾರಿಯಾಗಿದೆ.

ಪರಿಸರ ಸಂಖ್ಯಾ ಪಿರಾಮಿಡ್

ಪರಿಸರ ಸಂಖ್ಯಾ ಪಿರಾಮಿಡ್

ʻʻಪ್ರತಿ ಪೋಷಣಾಸ್ತರಗಳಲ್ಲೂ ಎಷ್ಟು ಜೀವಗಳಿರುತ್ತವೆ ಎಂಬುದನ್ನು ಲೆಕ್ಕ ಹಾಕುವ ರೇಖಾಚಿತ್ರವನ್ನು ಸಂಖ್ಯಾ ಪಿರಾಮಿಡ್ ಎಂದು ಕರೆಯುತ್ತೇವೆʼʼ. ಒಂದು ಪರಿಸರ ವ್ಯವಸ್ಥೆಯ ನಿರ್ದಿಷ್ಟ ಪ್ರದೇಶವೊಂದರಲ್ಲಿ ನಿರ್ದಿಷ್ಟ ಸಮಯದಲ್ಲಿ ಪ್ರತಿ ಪೋಷಣಾಸ್ತರಗಳಲ್ಲಿ ಕಂಡುಬರುವ ಜೀವಿಗಳ ಒಟ್ಟು ಸಂಖ್ಯೆಯ ಆಧಾರದ ಮೇಲೆ ಸಂಖ್ಯಾ ಪಿರಾಮಿಡ್‌ನ್ನು ರಚಿಸಲಾಗುತ್ತದೆ. ಪಿರಾಮಿಡ್ ಅಡಿಯಲ್ಲಿ ಉತ್ಪಾದಕ ಜೀವಿಗಳಿದ್ದು ಅವುಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಅಲ್ಲಿಂದ ಹಂತ ಹಂತವಾಗಿ ಮೇಲಕ್ಕೆ ಹೋದಂತೆ ಉಪಯೋಜತ ಜೀವಿಗಳಿದ್ದು ಅವುಗಳ ಸಂಖ್ಯೆ ಇಳಿಮುಖವಾಗುತ್ತಾ ಹೋಗುತ್ತದೆ. ಹೀಗಾಗಿ ಈ ಚಿತ್ರವು ಪಿರಾಮಿಡ್ ಆಕಾರದಲ್ಲಿ ಗೋಚರಿಸುತ್ತದೆ. ಸಂಖ್ಯಾ ಪಿರಾಮಿಡ್‌ಗಳಲ್ಲಿ ಎರಡು ಪ್ರಕಾರಗಳಿವೆ  ಅವುಗಳೆಂದರೆ:

  1. ಮೇಲ್ಮುಖವಾಗಿರುವ ಸಂಖ್ಯಾ ಪಿರಾಮಿಡ್:
  2. ಕೆಳಮುಖವಾಗಿರುವ ಸಂಖ್ಯಾ ಪಿರಾಮಿಡ್

1. ಮೇಲ್ಮುಖವಾಗಿರುವ ಸಂಖ್ಯಾ ಪಿರಾಮಿಡ್: (Upright Pyramid of Number)

ಮೇಲ್ಮುಖವಾದ ಪಿರಾಮಿಡ್‌ನಲ್ಲಿ ಜೀವಿಗಳ ಸಂಖ್ಯೆಯು ಕೆಳಭಾಗದಿಂದ ಮೇಲ್ಭಾಗದ ಕಡೆಗೆ ಹೋದ ಹಾಗೆ ಕಡಿಮೆಗೊಳ್ಳುತ್ತಾ ಸಾಗುತ್ತದೆ. ಇಲ್ಲಿ ಪ್ರಥಮ ಉಪಭೋಗಿಗಳ ಸಂಖ್ಯೆಯು ದ್ವಿತೀಯ ಉಪಯೋಗಿಗಳ ಸಂಖ್ಯೆಗಿಂತ ಹೆಚ್ಚಿನದಾಗಿರುತ್ತದೆ. ಹಾಗೂ ಪ್ರಥಮ ಉಪಪಯೋಗಿಗಳ ಸಂಖ್ಯೆಯು ಉತ್ಪಾದಕ ಜೀವಿಗಳಿಗಿಂತ ಕಡಿಮೆಯಾಗುತ್ತದೆ. ಈ ಪಿರಾಮಿಡ್‌ನಲ್ಲಿ ಪೋಷಣಾಸ್ತರಗಳ ಹಂತವು ಹೆಚ್ಚಿದಂತೆ ಜೀವಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ.

2. ಕೆಳಮುಖ ಸಂಖ್ಯಾ ಪಿರಾಮಿಡ್‌ಗಳು:  (Inverted Pyramid of Number)

ಈ ರೀತಿಯ ಪಿರಾಮಿಡ್‌ನಲ್ಲಿ ಪೋಷಣಾಸ್ತರಗಳಿಂದ ಮೇಲೆ ಹೋದ ಹಾಗೆ ಜೀವಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಕೆಳಮುಖ ಸಂಖ್ಯಾಪಿರಾಮಿಡ್‌ನಲ್ಲಿ ಪೋಷಣಾಸ್ತರಗಳ ಮೇಲೆ ಪರಾವಲಂಬಿಗಳು ಇವೆ. ನಂತರ ಮೇಲಿನ ಹಂತಕ್ಕೆ ತಲುಪಿದಾಗ ಪರಾವಲಂಬಿಗಳ ಮೇಲೆ ಅವಲಂಬಿತ ಪರಾವಲಂಬಿಗಳು ಕಂಡುಬರುತ್ತವೆ. ಹಾಗಾಗಿ ಇದನ್ನು ಕೆಳಮುಖ ಸಂಖ್ಯಾಪಿರಾಮಿಡ್ ಎಂದು ಕರೆಯಲಾಗುತ್ತದೆ.

ಉಪಸಂಹಾರ:

ಸಂಖ್ಯಾ ಪಿರಾಮಿಡ್‌ಗಳು ಪರಿಸರ ವ್ಯವಸ್ಥೆಯಲ್ಲಿನ ಜೀವಿಗಳ ಸಂಖ್ಯಾತ್ಮಕ ಸಮತೋಲನವನ್ನು ವಿವರಿಸುತ್ತವೆ. ಮೇಲ್ಮುಖ ಮತ್ತು ಕೆಳಮುಖ ಸಂಖ್ಯಾ ಪಿರಾಮಿಡ್‌ಗಳ ಮೂಲಕ ವಿಭಿನ್ನ ಪರಿಸರ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬಹುದು. ಇವು ಪೋಷಣಾಸ್ತರಗಳ ನಡುವಿನ ಅವಲಂಬನೆ ಮತ್ತು ಜೀವಿಗಳ ಪಾತ್ರವನ್ನು ಸ್ಪಷ್ಟಪಡಿಸುತ್ತವೆ. ಪರಿಸರ ಸಂರಕ್ಷಣೆ ಮತ್ತು ಸಮತೋಲನದ ಅರಿವಿಗೆ ಸಂಖ್ಯಾ ಪಿರಾಮಿಡ್‌ಗಳ ಅಧ್ಯಯನ ಅತ್ಯಂತ ಅಗತ್ಯವಾಗಿದೆ. ಇದರಿಂದ ಜೀವಜಾಲದ ಸ್ಥಿರತೆಯನ್ನು ಕಾಪಾಡುವ ಮಹತ್ವ ತಿಳಿಯುತ್ತದೆ.

ಸಾಗರ ಜಲಚರ ಪರಿಸರ ವ್ಯವಸ್ಥೆ

ಸಾಗರ ಜಲಚರ ಪರಿಸರ ವ್ಯವಸ್ಥೆ

ಸಾಗರ ಜಲಚರ ಪರಿಸರ ವ್ಯವಸ್ಥೆ

ಸಾಗರದ ನೀರು ಲವಣಾಂಶಗಳಿಂದ ಕೂಡಿದ ಕಾರಣ ಆ ನೀರನ್ನು ಕೃಷಿ ಹಾಗೂ ಕುಡಿಯುವ ನೀರಿಗಾಗಿ ಬಳಕೆ ಮಾಡಲಾಗುವುದಿಲ್ಲ. ಸಾಗರಗಳು ಭೂಮಿಯ ಶೇಕಡ 71 ಭಾಗವನ್ನು ಹೊಂದಿವೆ. ಇವುಗಳ ಆಳ ಅಂದಾಜು 3800 ಕಿ.ಮೀಗೂ ಹೆಚ್ಚಿದೆ. ನದಿ ಹಾಗೂ ತೊರೆಗಳಿಂದ ಹರಿಯುವ ನೀರು, ಸಮುದ್ರವನ್ನು ಸೇರುತ್ತದೆ. ಅಲ್ಲಿ ಹೆಚ್ಚು ಬೆಳಕು ಹಾಗೂ ಆಳ ಕಡಿಮೆ ಇರುವುದರಿಂದ ಸಾಗರ ಪ್ರದೇಶದಲ್ಲಿ ಹಲವು ಬಗೆಯ ಸಸ್ಯಗಳು ಕಂಡುಬರುತ್ತವೆ ಕ್ರಿಮಿಕೀಟ, ಮೀನು, ತಿಮಿಂಗಿಲಗಳು, ಬಹುತೇಕ ಸಾಗರದ ಎಲ್ಲಾ ಕಡೆಗಳಲ್ಲಿ ಲಭ್ಯವಿರುತ್ತದೆ. ಸಾಗರದಲ್ಲಿ ಹವಳದ ದ್ವೀಪಗಳು ಇವೆ. ಮನ್ನಾರ್ ಗಲ್ಫ್‌ನಲ್ಲಿ 3600 ವಿವಿಧ ಪ್ರಭೇದ ಪ್ರಾಣಿಗಳು ಇವೆ. ಸಮುದ್ರದ ಹಸು, ಕಡಲು ಕುದುರೆಗಳು ಇಲ್ಲಿ ವಾಸಿಸುತ್ತವೆ.

ಸಾಗರದಲ್ಲಿರುವ ಆಳ, ಉಷ್ಣತೆ, ಬೆಳಕು ಮುಂತಾದ ಭೌತಿಕ ಅಂಶಗಳಿಗೆ ಅನುಸಾರವಾಗಿ ಸಮುದ್ರವನ್ನು 3 ವಲಯಗಳನ್ನಾಗಿ ವಿಂಗಡಿಸಲಾಗಿದೆ.

  1. ತೀರಕ್ಕೆ ಸಮೀಪದ ಪ್ರದೇಶ
  2. ದ್ಯುತಿ ವಲಯ
  3. ಅಂಧಕಾರ ಕೂಪ

1. ತೀರಕ್ಕೆ ಸಮೀಪದ ಪ್ರದೇಶ: (Littoral region)

ಇದು ಸಾಗರಗಳ ಖಂಡಾವರಣ ಪ್ರದೇಶವನ್ನು ಅಂದರೆ ಸುಮಾರು 200 ಮೀ ಆಳದವರೆಗಿನ ಸಾಗರದ ಅಂಚಿನ ಭಾಗವನ್ನು ಒಳಗೊಂಡಿದೆ. ಸುಮಾರು 50 ಮೀ ಆಳದವರೆಗೆ ಸೂರ್ಯನ ಕಿರಣಗಳು ಸುಲಭವಾಗಿ ಒಳಗೆ ಸೇರುವುದರಿಂದ ಮತ್ತು ಅಲೆಗಳಿಂದ ನೀರು ಮಿಶ್ರಣ ಹೊಂದುತ್ತದೆ. ಹಾಗಾಗಿ ಇಲ್ಲಿ ಅತಿ ಹೆಚ್ಚಾಗಿ ಹಸಿರು ಅಲ್ಗೆಗಳು ಎಂಬ ಸಸ್ಯ ಸಮುದಾಯ ಕಂಡುಬರುತ್ತದೆ. ಇಲ್ಲಿ ಶಂಕು ಹುಳುಗಳು, ಕೀಟಗಳು ಹಾಗೂ ಜಲ ಚಿಟ್ಟೆಗಳು ಹೆಚ್ಚಾಗಿ ವಾಸಿಸುತ್ತವೆ. ಈ ವಲಯದಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಹಾಗಾಗಿ ಈ ಪ್ರದೇಶವನ್ನು ʻʻಅಂಚಿನ ವಲಯʼʼ ಎಂದು ಕರೆಯುತ್ತಾರೆ.

2. ದ್ಯುತಿ ವಲಯ: (Eupothic Region)

ಸಾಗರದಲ್ಲಿ ಸೂರ್ಯನ ಕಿರಣಗಳು ನೀರಿನ ಆಳದಲ್ಲಿ ಎಲ್ಲಿಯವರೆಗೆ ಹೋಗಿ ತಲುಪುತ್ತವೆಯೋ ಆ ಪ್ರದೇಶವನ್ನು ದ್ಯುತಿ ವಲಯ ಎಂದು ಕರೆಯಲಾಗುವುದು. ಈ ಪ್ರದೇಶದಲ್ಲಿ ಜೀವಿಗಳು ಹೆಚ್ಚಿನ ಪ್ರಮಾಣದಲ್ಲಿ ಹಾಗೂ ವೈವಿಧ್ಯಮಯವಾಗಿ ಕಂಡುಬರುತ್ತದೆ. ಭೂಮಿಯ ಮೇಲೆ ನಡೆಯುವ ದ್ಯುತಿ ಸಂಶ್ಲೇಷಣೆಯ ಶೇ 90ರಷ್ಟು ಭಾಗ ಸಾಗರ ಮತ್ತು ಸಮುದ್ರ ದ್ಯುತಿ ವಲಯದಲ್ಲಿಯೇ ಆಗುತ್ತದೆ. ಇಲ್ಲಿ ಚಿಕ್ಕ ಹಾಗೂ ದೊಡ್ಡ ಮೀನುಗಳು, ತಿಮಿಂಗಲ, ಡಾಲ್ಫಿನ್, ಆಮೆ ಹಾಗೂ ಮತ್ತು ಅಷ್ಟ ಪದಿಗಳು ವಾಸಿಸುತ್ತವೆ.

 3. ಅಂಧಕಾರ ಕೂಪ: (Abbas)

ದ್ಯುತಿ ವಲಯದ ತಳಭಾಗದಲ್ಲಿರುವ ಸೂರ್ಯನ ಬೆಳಕು ಪ್ರವೇಶಮಾಡಲಾಗದ ನೀರಿನ ಭಾಗವನ್ನು ʻʻಅಂಧಕಾರ ಕೂಪ ಅಥವಾ ಅಂಧಕಾರವಲಯʼʼ ಎಂದು ಕರೆಯಲಾಗಿದೆ. ಈ ವಲಯದಲ್ಲಿ ಸಸ್ಯರಾಶಿಗಳ ಸಂಖ್ಯೆ ಬಹಳ ಕಡಿಮೆ. ವಿವಿಧ ಪ್ರಾಣಿಗಳು ಮತ್ತು ವಿಘಟಕ ಜೀವಿಗಳು ಮಾತ್ರ ಕಂಡುಬರುತ್ತವೆ. ಈ ವಲಯದಲ್ಲಿನ ಪ್ರಾಣಿಗಳು ದ್ಯುತಿವಲಯದ ಸತ್ತ ಪ್ರಾಣಿಗಳನ್ನು ತಿಂದು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತವೆ.

ಸಾಗರದ ಉಪಯೋಗಗಳು:

  1. ಸಿಗಡಿ ಏಡಿ ಹಾಗೂ ಮೀನುಗಳು ಕರಾವಳಿ ತೀರದ ಜನರ ಪ್ರಮುಖ ಆಹಾರ ಪದಾರ್ಥಗಳಾಗಿವೆ.
  2. ಸಾಗರದ ತಳಗಳು ಫಾಸಿಲ್‌ ಇಂಧನ ಹಾಗೂ ಅಮೂಲ್ಯ ಖನಿಜ ಸಂಪತ್ತನ್ನು ಹೊಂದಿದೆ.
  3. ಸಮುದ್ರದ ಪಾಚಿಗಳು, ಐಸ್‌ಕ್ರೀಂ ಹಾಗೂ ಸೌಂದರ್ಯವರ್ಧಕ ವಸ್ತುಗಳ ತಯಾರಿಕೆಗೆ ಅಗತ್ಯವಾದ ʻಅಗಾರ್ʼ ಗಳಿಂದ ಪಡೆಯುತ್ತವೆ. ಸಮುದ್ರದ ಪಾಚಿಗಳಿಗೆ ಜೀವ ರಕ್ಷಕ ಔಷಧಿಗಳ ಗುಣಗಳಿವೆ.
  4. ಸಮುದ್ರ ತೀರ ಪ್ರದೇಶಗಳು ಪ್ರವಾಸಿ ಸ್ಥಳಗಳಾಗಿವೆ

ಉಪಸಂಹಾರ

ಸಾಗರ ಮತ್ತು ಅಳಿವೆ ಪರಿಸರ ವ್ಯವಸ್ಥೆಗಳು ನಮ್ಮ ಆಹಾರ, ಇಂಧನ ಮತ್ತು ಬಯೋಮೂಲಗಳಲ್ಲಿ ಮಹತ್ವವನ್ನು ಹೊಂದಿವೆ. ಇವುಗಳ ವೈವಿಧ್ಯತೆಯು ಜಲಚರ ಜೀವಿಗಳ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಸೂರ್ಯನ ಬೆಳಕು, ಉಷ್ಣತೆ, ಆಳ ಮುಂತಾದ ಭೌತಿಕ ಅಂಶಗಳು ಜೀವಿಗಳ ವಾಸಸ್ಥಳವನ್ನು ನಿರ್ಧರಿಸುತ್ತವೆ. ಸಮುದ್ರ ಮತ್ತು ಅಳಿವೆ ಪರಿಸರದ ಸಂರಕ್ಷಣೆಯ ಮೂಲಕ ನಾವು ಈ ಅಮೂಲ್ಯ ಸಂಪತ್ತನ್ನು ಭವಿಷ್ಯಕಾಲಕ್ಕೂ ಉಳಿಸಬಹುದು.

ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವರೂಪ

ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವರೂಪ

ಪರಿಸರ ಅಧ್ಯಯನ ಎಂಬುದು ಮಾನವ ಮತ್ತು ಪ್ರಕೃತಿ ಪರಿಸರದ ನಡುವಿನ ಪರಸ್ಪರ ಸಂಬಂಧವನ್ನು ಅಧ್ಯಯನ ಮಾಡುವ ವಿಶಾಲ ಹಾಗೂ ಸಮಗ್ರ ವಿಷಯವಾಗಿದೆ. ಮಾಲಿನ್ಯ, ಹವಾಮಾನ ಬದಲಾವಣೆ, ಅರಣ್ಯ ನಾಶ, ಜೀವ ವೈವಿಧ್ಯತೆಯ ಹಾನಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಕ್ಷಯದಂತಹ ಪರಿಸರ ಸಮಸ್ಯೆಗಳು ಬಹಳ ಸಂಕೀರ್ಣ ಸ್ವಭಾವದ್ದಾಗಿವೆ. ಇವುಗಳನ್ನು ಒಂದೇ ವಿಷಯದ ಮೂಲಕ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪರಿಸರ ಅಧ್ಯಯನವು ವಿಜ್ಞಾನ, ಸಾಮಾಜಿಕ ವಿಜ್ಞಾನ, ಅರ್ಥಶಾಸ್ತ್ರ, ಕಾನೂನು, ತಂತ್ರಜ್ಞಾನ ಮತ್ತು ಮಾನವಿಕ ಶಾಸ್ತ್ರಗಳಿಂದ ಜ್ಞಾನವನ್ನು ಒಳಗೊಂಡ ಬಹುಶಾಸ್ತ್ರೀಯ ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರಿಸರ ಸಮಸ್ಯೆಗಳ ಸಮಗ್ರ ಅರಿವು ದೊರೆಯುತ್ತದೆ.

ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವಭಾವ

1. ಪರಿಸರ ಅಧ್ಯಯನ ಮತ್ತು ನೈಸರ್ಗಿಕ ವಿಜ್ಞಾನಗಳು

ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೂವಿಜ್ಞಾನ ಮತ್ತು ಪರಿಸರಶಾಸ್ತ್ರದಂತಹ ನೈಸರ್ಗಿಕ ವಿಜ್ಞಾನಗಳು ಪರಿಸರ ಅಧ್ಯಯನದ ಮೂಲಭೂತ ಆಧಾರವಾಗಿವೆ. ಜೀವಶಾಸ್ತ್ರವು ಪರಿಸರ ವ್ಯವಸ್ಥೆಗಳು ಮತ್ತು ಜೀವ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ರಸಾಯನಶಾಸ್ತ್ರವು ಗಾಳಿ, ನೀರು, ಮಣ್ಣು ಮತ್ತು ಮಾಲಿನ್ಯಕಾರಕಗಳ ರಾಸಾಯನಿಕ ಸ್ವಭಾವವನ್ನು ವಿವರಿಸುತ್ತದೆ. ಭೌತಶಾಸ್ತ್ರವು ಶಕ್ತಿ ಪ್ರವಾಹ ಮತ್ತು ಹವಾಮಾನ ವ್ಯವಸ್ಥೆಗಳ ಅಧ್ಯಯನಕ್ಕೆ ಸಹಕಾರಿ.

2. ಪರಿಸರ ಅಧ್ಯಯನ ಮತ್ತು ಸಾಮಾಜಿಕ ವಿಜ್ಞಾನಗಳು

ಪರಿಸರ ಸಮಸ್ಯೆಗಳು ಮಾನವ ಚಟುವಟಿಕೆಗಳೊಂದಿಗೆ ನಿಕಟವಾಗಿ ಸಂಬಂಧಿಸಿದ್ದಾಗಿವೆ. ಸಮಾಜಶಾಸ್ತ್ರ, ಮಾನವಶಾಸ್ತ್ರ, ರಾಜಕೀಯ ಶಾಸ್ತ್ರ ಮತ್ತು ಭೂಗೋಳಶಾಸ್ತ್ರವು ಜನಸಂಖ್ಯೆ ವೃದ್ಧಿ, ನಗರೀಕರಣ, ಸಾಂಸ್ಕೃತಿಕ ಆಚರಣೆಗಳು ಮತ್ತು ಸಾಮಾಜಿಕ ಅಸಮಾನತೆಗಳು ಪರಿಸರದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿವರಿಸುತ್ತವೆ. ಇವು ಮಾನವ ಸಮಾಜ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.

3. ಪರಿಸರ ಅಧ್ಯಯನ ಮತ್ತು ಅರ್ಥಶಾಸ್ತ್ರ

ಪರಿಸರ ಅಧ್ಯಯನದಲ್ಲಿ ಅರ್ಥಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತದೆ. ಪರಿಸರ ಅರ್ಥಶಾಸ್ತ್ರವು ನೈಸರ್ಗಿಕ ಸಂಪನ್ಮೂಲಗಳ ಬಳಕೆ, ವೆಚ್ಚ–ಲಾಭ ವಿಶ್ಲೇಷಣೆ, ಪರಿಸರ ಹಾನಿಯ ಆರ್ಥಿಕ ಪರಿಣಾಮಗಳು ಮತ್ತು ಸುಸ್ಥಿರ ಸಂಪನ್ಮೂಲ ನಿರ್ವಹಣೆಯನ್ನು ಅಧ್ಯಯನ ಮಾಡುತ್ತದೆ. ಇದು ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ.

4. ಪರಿಸರ ಅಧ್ಯಯನ ಮತ್ತು ಕಾನೂನು

ಪರಿಸರ ಸಂರಕ್ಷಣೆಗೆ ಬಲಿಷ್ಠ ಕಾನೂನು ವ್ಯವಸ್ಥೆಯ ಅಗತ್ಯವಿದೆ. ಪರಿಸರ ಅಧ್ಯಯನವು ಪರಿಸರ ಸಂಬಂಧಿತ ಕಾನೂನುಗಳು, ನೀತಿಗಳು ಮತ್ತು ನಿಯಮಾವಳಿಗಳನ್ನು ಒಳಗೊಂಡಿದೆ. ಇವು ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಮಾರ್ಗದರ್ಶನ ನೀಡುತ್ತವೆ. ಪರಿಸರ ಕಾನೂನುಗಳ ಜ್ಞಾನವು ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಯಲು ಸಹಾಯಕವಾಗುತ್ತದೆ.

5. ಪರಿಸರ ಅಧ್ಯಯನ ಮತ್ತು ತಂತ್ರಜ್ಞಾನ

ತಂತ್ರಜ್ಞಾನವು ಪರಿಸರ ಸಮಸ್ಯೆಗಳ ಪರಿಹಾರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನವೀಕರಿಸಬಹುದಾದ ಇಂಧನ, ತ್ಯಾಜ್ಯ ನಿರ್ವಹಣೆ, ಮಾಲಿನ್ಯ ನಿಯಂತ್ರಣ ಸಾಧನಗಳು, ಜಿಐಎಸ್ (GIS) ಮತ್ತು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಗಳನ್ನು ಪರಿಸರ ಅಧ್ಯಯನ ಒಳಗೊಂಡಿದೆ. ಇವು ಪರಿಸರ ಹಾನಿಯನ್ನು ಕಡಿಮೆ ಮಾಡಿ ಸುಸ್ಥಿರ ಅಭಿವೃದ್ಧಿಗೆ ಸಹಾಯ ಮಾಡುತ್ತವೆ.

6. ಪರಿಸರ ಅಧ್ಯಯನ ಮತ್ತು ಮಾನವಿಕ ಶಾಸ್ತ್ರಗಳು

ನೈತಿಕತೆ, ತತ್ವಶಾಸ್ತ್ರ, ಇತಿಹಾಸ ಮತ್ತು ಸಾಹಿತ್ಯದಂತಹ ಮಾನವಿಕ ಶಾಸ್ತ್ರಗಳು ಪರಿಸರ ಅಧ್ಯಯನಕ್ಕೆ ಮೌಲ್ಯಾಧಾರಿತ ದೃಷ್ಟಿಕೋನವನ್ನು ನೀಡುತ್ತವೆ. ಪರಿಸರ ನೈತಿಕತೆ ಪ್ರಕೃತಿಯತ್ತ ಮಾನವನ ಜವಾಬ್ದಾರಿಯನ್ನು ಒತ್ತಿ ಹೇಳುತ್ತದೆ. ಇತಿಹಾಸವು ಮಾನವ–ಪರಿಸರ ಸಂಬಂಧಗಳ ಬೆಳವಣಿಗೆಯನ್ನು ತಿಳಿಸುತ್ತದೆ.

7. ಪರಿಸರ ಅಧ್ಯಯನ ಮತ್ತು ಸಾರ್ವಜನಿಕ ಆರೋಗ್ಯ

ಪರಿಸರ ಪರಿಸ್ಥಿತಿಗಳು ಮಾನವ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಮಾಲಿನ್ಯ, ವಿಷಕಾರಿ ಪದಾರ್ಥಗಳು, ಅಶುದ್ಧ ನೀರು ಮತ್ತು ಅಸಮರ್ಪಕ ಸ್ವಚ್ಛತೆ ಮಾನವ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಪರಿಸರ ಅಧ್ಯಯನವು ಆರೋಗ್ಯ ವಿಜ್ಞಾನಗಳೊಂದಿಗೆ ಸಂಯೋಜನೆಗೊಂಡು ಆರೋಗ್ಯಕರ ಪರಿಸರದ ಅಗತ್ಯವನ್ನು ವಿವರಿಸುತ್ತದೆ.

ಉಪಸಂಹಾರ

ಪರಿಸರ ಅಧ್ಯಯನವು ನೈಸರ್ಗಿಕ ವಿಜ್ಞಾನಗಳು, ಸಾಮಾಜಿಕ ವಿಜ್ಞಾನಗಳು, ಅರ್ಥಶಾಸ್ತ್ರ, ಕಾನೂನು, ತಂತ್ರಜ್ಞಾನ, ಮಾನವಿಕ ಶಾಸ್ತ್ರಗಳು ಮತ್ತು ಆರೋಗ್ಯ ವಿಜ್ಞಾನಗಳನ್ನು ಒಟ್ಟುಗೂಡಿಸುವ ಬಹುಶಾಸ್ತ್ರೀಯ ವಿಷಯವಾಗಿದೆ. ಈ ಸಮಗ್ರ ದೃಷ್ಟಿಕೋನವು ಪರಿಸರ ಸಮಸ್ಯೆಗಳ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಹಿಡಿಯಲು ಅತ್ಯಂತ ಅಗತ್ಯವಾಗಿದೆ. ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವಭಾವವು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ, ಜಾಗೃತ ಮತ್ತು ಪರಿಸರ ಸ್ನೇಹಿ ನಾಗರಿಕರನ್ನಾಗಿ ರೂಪಿಸುತ್ತದೆ.

ಪರಿಸರದ ಘಟಕಗಳು

ಪರಿಸರದ ಘಟಕಗಳು

ಪರಿಚಯ

ನಮ್ಮ ಸುತ್ತಲೂ ಇರುವ ಎಲ್ಲವೂ ಪರಿಸರವಾಗಿದೆ. ಇದು ಭೂಮಿಯ ಮೇಲೆ ಜೀವವನ್ನು ಬೆಂಬಲಿಸುವ ಜೀವಂತ ಹಾಗೂ ಅಜೀವಾಂಶಗಳನ್ನು ಒಳಗೊಂಡಿದೆ. ಮಾನವರು, ಸಸ್ಯಗಳು, ಪ್ರಾಣಿಗಳು ಮತ್ತು ಎಲ್ಲಾ ಜೀವಿಗಳು ಬದುಕಲು ಪರಿಸರದ ಮೇಲೆ ಅವಲಂಬಿತರಾಗಿವೆ.

ಪರಿಸರವು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಜೀವವು ಹೇಗೆ ಉಳಿಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅದರ ಘಟಕಗಳ ಅಧ್ಯಯನ ಅತ್ಯಂತ ಅಗತ್ಯ. ಪರಿಸರ ಅಧ್ಯಯನದಲ್ಲಿ (EVS), ಪರಿಸರವನ್ನು ಮುಖ್ಯವಾಗಿ ಸ್ವಾಭಾವಿಕ ಹಾಗೂ ಮಾನವ ನಿರ್ಮಿತ ಘಟಕಗಳಾಗಿ ವಿಂಗಡಿಸಲಾಗಿದೆ.

1. ಲಿಥೋಸ್ಫಿಯರ್ (ಭೂಮಿಯ ಘಟಕ)

ಲಿಥೋಸ್ಫಿಯರ್ ಎಂದರೆ ಭೂಮಿಯ ಘನ ಮೇಲ್ಮೈ ಭಾಗ. ಇದರಲ್ಲಿ ಪರ್ವತಗಳು, ಪೀಠಭೂಮಿಗಳು, ಸಮತಟ್ಟುಗಳು, ಕಣಿವೆಗಳು, ಶಿಲೆಗಳು ಮತ್ತು ಮಣ್ಣು ಸೇರಿವೆ.

ಮಾನವ ವಾಸಸ್ಥಾನ, ಕೃಷಿ, ಅರಣ್ಯ ಮತ್ತು ಕೈಗಾರಿಕೆಗಳಿಗೆ ಭೂಮಿ ಒದಗಿಸುತ್ತದೆ

ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಮಣ್ಣು ದೊರೆಯುತ್ತದೆ

ಖನಿಜಗಳು, ಕಲ್ಲಿದ್ದಲು, ಪೆಟ್ರೋಲಿಯಂ ಮುಂತಾದ ನೈಸರ್ಗಿಕ ಸಂಪನ್ಮೂಲಗಳ ಮೂಲವಾಗಿದೆ

ಅದರ ಮೂಲಕ ಲಿಥೋಸ್ಫಿಯರ್ ಜೀವಸಂಕಲನಕ್ಕೆ ಅತ್ಯಂತ ಮುಖ್ಯವಾಗಿದೆ.

2. ಹೈಡ್ರೋಸ್ಫಿಯರ್ (ಜಲ ಘಟಕ)

ಹೈಡ್ರೋಸ್ಫಿಯರ್ ಎಂದರೆ ಭೂಮಿಯಲ್ಲಿರುವ ಎಲ್ಲಾ ಜಲ ಸಂಪತ್ತುಗಳು. ಇದರಲ್ಲಿ ಸಾಗರಗಳು, ಸಮುದ್ರಗಳು, ನದಿಗಳು, ಕೆರೆಗಳು, ಭೂಗರ್ಭ ಜಲ, ಹಿಮನದಿಗಳು ಹಾಗೂ ವಾಯುಮಂಡಲದಲ್ಲಿರುವ ನೀರಾವಿ ಸೇರಿವೆ.

ಕುಡಿಯಲು, ಕೃಷಿಗೆ ಮತ್ತು ಕೈಗಾರಿಕೆಗಳಿಗೆ ನೀರು ಅಗತ್ಯ

ಜಲಚರ ಜೀವಿಗಳು ನೀರಿನ ಮೇಲೆ ಅವಲಂಬಿತರಾಗಿವೆ

ಜಲಚಕ್ರವು ಹವಾಮಾನ ಮತ್ತು ತಾಪಮಾನ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ

ನೀರಿಲ್ಲದೆ ಭೂಮಿಯ ಮೇಲೆ ಜೀವನ ಅಸಾಧ್ಯ.

3. ವಾಯುಮಂಡಲ (ಗಾಳಿ ಘಟಕ)

ವಾಯುಮಂಡಲ ಭೂಮಿಯನ್ನು ಸುತ್ತುವರಿದಿರುವ ಅನಿಲಗಳ ಪದರವಾಗಿದೆ. ಇದರಲ್ಲಿ ನೈಟ್ರೋಜನ್, ಆಮ್ಲಜನಕ, ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಅನಿಲಗಳು ಸೇರಿವೆ.

ಆಮ್ಲಜನಕ ಜೀವಿಗಳ ಉಸಿರಾಟಕ್ಕೆ ಅಗತ್ಯ

ಕಾರ್ಬನ್ ಡೈಆಕ್ಸೈಡ್ ಸಸ್ಯಗಳ ಪ್ರಕಾಶ ಸಂಶ್ಲೇಷಣೆಗೆ ಸಹಾಯಕ

ಸೂರ್ಯನ ಹಾನಿಕಾರಕ ಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತದೆ

ಹವಾಮಾನ ಮತ್ತು ಋತುಚಕ್ರವನ್ನು ನಿಯಂತ್ರಿಸುತ್ತದೆ

ವಾಯುಮಂಡಲ ಜೀವನದ ರಕ್ಷಣಾಕವಚವಾಗಿದೆ.

4. ಜೀವಮಂಡಲ (ಬಯೋಸ್ಫಿಯರ್)

ಜೀವಮಂಡಲ ಎಂದರೆ ಭೂಮಿಯ ಮೇಲಿರುವ ಎಲ್ಲಾ ಜೀವಿಗಳು — ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಗಳು.

ಸಸ್ಯಗಳು ಆಹಾರ ಮತ್ತು ಆಮ್ಲಜನಕವನ್ನು ಉತ್ಪಾದಿಸುತ್ತವೆ

ಪ್ರಾಣಿಗಳು ಆಹಾರಕ್ಕಾಗಿ ಸಸ್ಯ ಮತ್ತು ಇತರ ಪ್ರಾಣಿಗಳ ಮೇಲೆ ಅವಲಂಬಿತರಾಗಿವೆ

ಸೂಕ್ಷ್ಮಜೀವಿಗಳು ಅವಶೇಷಗಳ ಕ್ಷಯ ಮತ್ತು ಪೋಷಕಾಂಶಗಳ ಪುನಃಚಕ್ರದಲ್ಲಿ ಸಹಾಯ ಮಾಡುತ್ತವೆ

ಜೀವಮಂಡಲವು ಭೂಮಿ, ನೀರು ಮತ್ತು ಗಾಳಿಯೊಂದಿಗೆ ಸಂವಹನ ನಡೆಸಿ ಜೀವನವನ್ನು ಉಳಿಸುತ್ತದೆ.

5. ಮಾನವ ನಿರ್ಮಿತ (ಸಾಂಸ್ಕೃತಿಕ) ಪರಿಸರ

ಮಾನವರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿರ್ಮಿಸಿದ ಪರಿಸರವೇ ಮಾನವ ನಿರ್ಮಿತ ಪರಿಸರ.

ಮನೆಗಳು, ರಸ್ತೆಗಳು, ಸೇತುವೆಗಳು, ಕೈಗಾರಿಕೆಗಳು, ಅಣೆಕಟ್ಟುಗಳು

ಕೃಷಿಭೂಮಿ, ಸಾರಿಗೆ ವ್ಯವಸ್ಥೆ, ತಂತ್ರಜ್ಞಾನ

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳು

ಇವು ಮಾನವ ಜೀವನವನ್ನು ಸುಲಭಗೊಳಿಸಿದರೂ, ಸರಿಯಾದ ನಿರ್ವಹಣೆ ಇಲ್ಲದೆ ಪರಿಸರ ಸಮಸ್ಯೆಗಳಿಗೆ ಕಾರಣವಾಗಬಹುದು.

ಉಪಸಂಹಾರ

ಪರಿಸರವು ಲಿಥೋಸ್ಫಿಯರ್, ಹೈಡ್ರೋಸ್ಫಿಯರ್, ವಾಯುಮಂಡಲ, ಜೀವಮಂಡಲ ಮತ್ತು ಮಾನವ ನಿರ್ಮಿತ ಘಟಕಗಳಿಂದ ಕೂಡಿದ ಸಂಕೀರ್ಣ ವ್ಯವಸ್ಥೆಯಾಗಿದೆ. ಪ್ರತಿಯೊಂದು ಘಟಕವೂ ಜೀವಸಂಕಲನ ಮತ್ತು ಪರಿಸರ ಸಮತೋಲನಕ್ಕೆ ಮಹತ್ವದ ಪಾತ್ರ ವಹಿಸುತ್ತದೆ.

ಪರಿಸರದ ಘಟಕಗಳ ಅರಿವು ವಿದ್ಯಾರ್ಥಿಗಳಿಗೆ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸ್ಥಿರ ಅಭಿವೃದ್ಧಿಯ ಮಹತ್ವವನ್ನು ತಿಳಿಸುತ್ತದೆ. ಇಂದಿನ ಮತ್ತು ಭವಿಷ್ಯದ ಪೀಳಿಗೆಗಳ ಹಿತಕ್ಕಾಗಿ ಪರಿಸರವನ್ನು ಜವಾಬ್ದಾರಿಯುತವಾಗಿ ಬಳಸುವುದು ಅತ್ಯವಶ್ಯಕ.