ಪ್ರವಾಸೋದ್ಯಮದ ಉತ್ಪನ್ನವಾಗಿ ಇತಿಹಾಸ (History as a product of Tourism)

ಪ್ರವಾಸೋದ್ಯಮದ ಉತ್ಪನ್ನವಾಗಿ ಇತಿಹಾಸ (History as a product of Tourism)

ಪೀಠಿಕೆ:

ಪ್ರವಾಸೋದ್ಯಮ ಹಾಗೂ ಇತಿಹಾಸ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಏಕೆಂದರೆ ಪ್ರವಾಸೋದ್ಯಮವು ಇತಿಹಾಸವನ್ನು ಸೃಷ್ಟಿಸಿದರೆ, ಇತಿಹಾಸವು ಪ್ರವಾಸೋದ್ಯಮವನ್ನು ಬೆಳೆಸುತ್ತದೆ. ಹಾಗಾಗಿ ಇತಿಹಾಸವು ಪ್ರವಾಸೋದ್ಯಮವನ್ನು ಕಟ್ಟುವ ಒಂದು ಕಾರ್ಖಾನೆಯಂತೆ ಕೆಲಸ ಮಾಡುತ್ತದೆ. ಐತಿಹಾಸಿಕ ಸ್ಮಾರಕಗಳಾದ ದೇವಾಲಯಗಳು ಅರಮನೆಗಳು, ಚರ್ಚುಗಳು, ಮಸೀದಿಗಳು, ವಾಸ್ತುಶಿಲ್ಪ ಹಾಗೂ ಶಿಲ್ಪ ಕಲೆಗಳು, ಪ್ರವಾಸೋದ್ಯಮದ ಉತ್ಪನ್ನಗಳಾಗಿವೆ. ಈ ಐತಿಹಾಸಿಕ ಸ್ಮಾರಕಗಳು ನಿರಂತರವಾಗಿ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತವೆ. ಅವುಗಳು ಪ್ರವಾಸಿಗರ ಸ್ವರ್ಗ ತಾಣಗಳೆನಿಸದ ಕಾರಣ ಪ್ರವಾಸಿಗರು ಆಕರ್ಷಿತರಾಗಿ ಸಾವಿರಾರು ಸಂಖ್ಯೆಯಲ್ಲಿ ಅವುಗಳ ವೀಕ್ಷಣೆಗಾಗಿ ಬರುತ್ತಾರೆ. ಈ ಸ್ಮಾರಕಗಳು ಗತಕಾಲದ ವೈಭವವನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಇವುಗಳ ವೀಕ್ಷಣೆಗೆ ಬೆಲೆಕಟ್ಟಲಾಗುತ್ತದೆ. ಹಾಗಾಗಿ ಇವುಗಳು ಲಾಭದಾಯಕ ಉತ್ಪನ್ನಗಳು ಎನಿಸಿಕೊಳ್ಳುತ್ತವೆ.

ಪ್ರಮುಖ ಕಲಾಸ್ಮಾರಕಗಳು : ಪ್ರವಾಸೋದ್ಯಮ ಆರಂಭಗೊಂಡಿದ್ದು ಈ ಕಲಾಸ್ಮಾರಕಗಳ ಸ್ಥಳಗಳಿಂದ ಎಂದು ಹೇಳಬಹುದು. ಇವುಗಳು ತುಂಬಾ ಆಕರ್ಷಕವಾಗಿದ್ದು ಪದೇಪದೇ ನೋಡಬೇಕೆನಿಸುವಷ್ಟು ಸುಂದರವಾಗಿರುತ್ತವೆ. ಇವುಗಳನ್ನು ನೋಡುತ್ತಾ ನಿಂತರೆ ನಾವೇ ಗತಕಾಲಕ್ಕೆ ಹೋದಂತೆ ಅನಿಸುತ್ತದೆ. ಉದಾ: ಚೀನಾದ ಮಹಾಗೋಡೆ, ಫ್ರಾನ್ಸಿನ ಐಫೆಲ್ ಗೋಪುರ, ಅಮೆರಿಕದ ಲಿಬರ್ಟಿ ಪ್ರತಿಮೆ, ಆಗ್ರಾದ ತಾಜ್‌ಮಹಲ್, ದೆಹಲಿಯ ಕೆಂಪುಕೋಟೆ ಮುಂತಾದವುಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಭಾರತವು ಶ್ರೀಮಂತ ಸಾಂಸ್ಕೃತಿಕ ನೆಲೆಗಳ ನಾಡು, ಧಾರ್ಮಿಕ ಬೀಡು, ಪ್ರಕೃತಿಯ ನೆಲೆವೀಡು. ಇದು ಸಾವಿರಾರು ವರ್ಷಗಳಿಂದಲೂ ಅನೇಕ ಇತಿಹಾಸಿಕ ಪರಂಪರೆಗಳನ್ನು ತನ್ನ ಮಡಿಲಲ್ಲಿ ಹುದುಗಿಸಿಟ್ಟುಕೊಂಡಿದೆ. ದೇವಾಲಯಗಳು ಅರಮನೆಗಳು, ಕೋಟೆಗಳು. ಗುಡಿ ಗೋಪುರಗಳು. ಚರ್ಚುಗಳು. ಮಸೀದಿಗಳು. ವಸ್ತು ಸಂಗ್ರಹಾಲಯಗಳು ಪ್ರವಾಸಿಗರ  ಸ್ವರ್ಗತಾಣಗಳಾಗಿವೆ. ಇವುಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇವುಗಳೆಲ್ಲವೂ ಪ್ರವಾಸೋದ್ಯಮಕ್ಕೆ ಆದಾಯವನ್ನು ತರುತ್ತವೆ.

ಧಾರ್ಮಿಕ ಕೇಂದ್ರಗಳು (Religious centers)

ಭಾರತವು ಹಲವು ಧರ್ಮಗಳ ಹಾಗೂ ಹಲವು ಮತ ಜಾತಿಗಳ ಕೇಂದ್ರವಾಗಿದೆ. ಇಲ್ಲಿ ಸಾವಿರಾರು ಭಾಷೆಗಳನ್ನಾಡುವ, ನೂರಾರು ಜಾತಿಗಳಿರುವ ಹಾಗೂ ಹಲವು ಧರ್ಮಗಳ ಜನರು ವಾಸಿಸುತ್ತಿದ್ದಾರೆ. ಉದಾ: ಹಿಂದೂ, ಜೈನ, ಬೌದ್ಧ, ಕ್ರೈಸ್ತ, ಪಾರ್ಶಿ ಹಾಗೂ ಇಸ್ಲಾಂ ಧರ್ಮಗಳಿರುವ ಈ ನಾಡಿನಲ್ಲಿ ಕೆಲವು ಧಾರ್ಮಿಕ ಕೇಂದ್ರಗಳಾಗಿ, ಇನ್ನು ಕೆಲವು ಪ್ರವಾಸಿ ಕೇಂದ್ರಗಳಾಗಿ, ಬೆಳೆದು ನಿಂತಿವೆ. ಅಮರನಾಥ, ಕಾಶಿ, ಕೇದಾರನಾಥ, ಹರಿದ್ವಾರ, ಕಾಶಿ, ಪುರಿ, ಸಾರನಾಥ, ಮೌಂಟ್ ಅಬು, ಗುರುದ್ವಾರ, ಶೇಕ್‌ಸಲೀಚೀಸ್ತಿ ಸಮಾಧಿ, ಸೆಂಟ್ ಫಿಲೋಮಿನಾ ಚರ್ಚ್ ಮುಂತಾದವುಗಳು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರ ತೀರ್ಥಯಾತ್ರೆ ಕ್ಷೇತ್ರಗಳಾಗಿವೆ.

ಭಾರತದ ದೇವಾಲಯಗಳು (Temples of India)

ಭಾರತದ ದೇವಾಲಯಗಳೇ ಇತಿಹಾಸದ ಮೇರು ಉತ್ಪನ್ನಗಳಾಗಿವೆ. ಅವುಗಳನ್ನು ನೋಡಿ ಕಣ್ತುಂಬಿಕೊಳ್ಳಲು ದಿನಕ್ಕೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಉದಾ: ಐಹೊಳೆ, ಬಾದಾಮಿ, ಪಟ್ಟದಕಲ್ಲು, ದೇವಾಲಯಗಳು ಹಂಪಿಯ ವಿಜಯ ವಿಠ್ಠಲ ಸ್ವಾಮಿ, ಹಾಜಾರ ರಾಮಸ್ವಾಮಿ, ಸಂಗೀತ ಮಂಟಪ, ಕೃಷ್ಣಸ್ವಾಮಿ, ಸಾಸಿವೆ ಕಾಳು ಗಣೇಶ, ಕಡಲೆ ಕಾಳು ಗಣೇಶ, ಸೂರ್ಯ ದೇವಾಲಯ, ಕೊನಾರ್ಕ ಜಗನ್ನಾಥ ದೇವಾಲಯ ಪುರಿ, ಕಾಶಿ ವಿಶ್ವನಾಥ ದೇವಾಲಯ, ಮಹಾಬಲಿಪುರಂ ದೇವಾಲಯ, ಬೃಹದೇಶ್ವರ ದೇವಾಲಯ, ಕೈಲಾಸನಾಥ ದೇವಾಲಯ, ಎಲ್ಲೋರ, ಖಜರಾಹೋ ದೇವಾಲಯ, ಹಳೇಬೀಡು, ಬೇಲೂರು ಹಾಗೂ ಸೋಮನಾಥಪುರದ ದೇವಾಲಯಗಳು, ತಲಕಾಡಿನ ದೇವಾಲಯಗಳು, ಭುವನೇಶ್ವರಿ ಚಾಮುಂಡಿ ದೇವಾಲಯಗಳಲ್ಲಿನ ಅಪೂರ್ವ ವಾಸ್ತುಶಿಲ್ಪ ಪ್ರವಾಸಿಗರ ಮನಸೂರೆಗೊಂಡಿದೆ.

ಬೌದ್ಧ ಕಲಾ ಕೇಂದ್ರಗಳು (centres of Buddist Art)

ಭಾರತದಲ್ಲಿನ ಅಜಂತಾ, ಎಲ್ಲೋರಾ, ನಾಸಿಕ್, ಕಾರ್ಲೆ, ಸಾಂಚಿ, ಅಮರಾವತಿ, ನಾಗಾರ್ಜುನ ಕೊಂಡಗಳಲ್ಲಿನ ಚೈತ್ಯಾಲಯ, ಸ್ಥೂಪಗಳು ಹಾಗೂ ವಿಹಾರಗಳು ಬೌದ್ಧ ಕಲೆಗೆ ಹೆಸರುವಾಸಿಯಾಗಿವೆ. ಇವುಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಾಂಚಿಯ ಸ್ತೂಪ ಭಾರತದ ಅತ್ಯಂತ ದೊಡ್ಡ ಸ್ತೂಪವಾಗಿದ್ದು ಅಶೋಕ ಚಕ್ರವರ್ತಿಯಿಂದ ನಿರ್ಮಾಣವಾಗಿದೆ. ಸಾರನಾಥದಲ್ಲಿ ಅಶೋಕ ಸ್ತಂಭವಿದೆ.

ಶಿಲ್ಪಕಲಾ ತಾಣಗಳು (Sculptures Sights)

ಕೈಲಾಸನಾಥ ದೇವಾಲಯ ಎಲ್ಲೋರಾ, ಅಜಂತಾದ ಗುಹಾಲಯಗಳು ಮಹಾರಾಷ್ಟ್ರ, ಪಗೋಡಗಳು, ಮಹಾಬಲಿಪುರಂ, ಏಕಶಿಲಾ ರಥ, ಹಂಪಿ, ಬಡವಿಲಿಂಗ, ಉಗ್ರನರಸಿಂಹ, ಗೊಮ್ಮಟೇಶ್ವರ ಮೂರ್ತಿ ಶ್ರವಣಬೆಳಗೊಳ ಮುಂತಾದವುಗಳು ಶಿಲ್ಪಕಲಾ ದೃಷ್ಟಿಯಿಂದ ಅಪಾರ ಜನಮನಗಳಿಸಿವೆ. ಇಂದು ಇವುಗಳು ದೊಡ್ಡ ಪ್ರವಾಸಿ ತಾಣಗಳಾಗಿ ಹೆಸರುವಾಸಿಯಾಗಿವೆ.

ಮುಸ್ಲಿಂ ಸ್ಮಾರಕಗಳು (Monuments of Muslims)

ಭಾರತಕ್ಕೆ ಬಂದ ಮುಸ್ಲಿಮರಲ್ಲಿ ದೆಹಲಿ ಸುಲ್ತಾನರು ಮತ್ತು ಮೊಘಲರು ಅಗ್ರಗಣ್ಯರಾಗಿದ್ದಾರೆ. ಅವರು ತಮ್ಮ ಆಡಳಿತದ ಜೊತೆಗೆ ಹಲವಾರು ಐತಿಹಾಸಿಕ ಸ್ಮಾರಕಗಳನ್ನು ನಿರ್ಮಿಸಿದರು. ಅವುಗಳೆಂದರೆ ಕುತುಬುದ್ದೀನ್‌ ಐಬಕ್‌ನಿಂದ ನಿರ್ಮಾಣವಾದ ಕುತುಬ್ ಮಿನಾರ್, ಷಹಜಹಾನ್‌ನಿಂದ ನಿರ್ಮಾಣಗೊಂಡ ಕೆಂಪು ಕೋಟೆ, ಆಗ್ರಾಕೋಟೆ, ತಾಜ್‌ಮಹಲ್ ಅಕ್ಬರ್‌ನಿಂದ ನಿರ್ಮಿತಗೊಂಡ ಫತೇಪುರ ಸಿಕ್ರಿ, ಜೋಧಬಾಯಿ ಅರಮನೆ, ಬೀರಬಲ್ ಅರಮನೆ, ಮಚ್ಚಿ ಮಹಲ್, ಸಿಕಂದರನ ಅಕ್ಬರ್‌ ಗೋರಿ, ಆದಿಲ್‌ಷಾಯಿಂದ ತಯಾರಾದ ಗೋಲ್‌ಗುಂಬಜ್, ಬಹಮನಿ ಸುಲ್ತಾನರು ನಿರ್ಮಿಸಿದ ಗುಲ್ಬರ್ಗಾದ ಜಾಮಿ ಮಸೀದಿ, ಮಹಮ್ಮದ್ ಗವಾನನಿಂದ ರಚಿತವಾದ ಮದರಸ ಮೊದಲಾದವುಗಳು ವಿಶ್ವ ಪರಂಪರೆಯ ತಾಣವಾಗಿವೆ. ತಾಜ್‌ಮಹಲ್ ಇಂದು ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಏಕಮೇವ ಕಟ್ಟಡವಾಗಿದೆ.

ವಸ್ತು  ಸಂಗ್ರಹಾಲಯಗಳು (Museums)

ಪ್ರವಾಸೋದ್ಯಮ ಉತ್ಪನ್ನಗಳಲ್ಲಿ ಪ್ರಮುಖವಾದ ಪಾತ್ರ ವಹಿಸುವ ಸಾಧನವೆಂದರೆ ಅದು ವಸ್ತು ಸಂಗ್ರಹಾಲಯ. ವಸ್ತು ಸಂಗ್ರಹಾಲಯಗಳು ಭಾರತದ ಸಾಂಸ್ಕೃತ ಭಂಡಾರ ಎಂದು ಹೇಳಬಹುದು. ಇವುಗಳು ಗತಕಾಲದ ವೈಭವವನ್ನು ಮರುಕಳಿಸುತ್ತವೆ. ವಸ್ತು ಸಂಗ್ರಹಾಲಗಳಲ್ಲಿ ಗತಕಾಲದ ಐತಿಹಾಸಿಕ ಕಂಚಿನ ಮೂರ್ತಿಗಳು, ಚಿನ್ನ ಬೆಳ್ಳಿ ಆಭರಣಗಳು, ಶಿರಾಸ್ತ್ರಣಗಳು, ಆಯುಧಗಳು, ನಾಣ್ಯಗಳು, ಬಟ್ಟೆಗಳು, ಮಡಿಕೆ ಕುಡಿಕೆಗಳು, ಕಲಾತ್ಮಕ ವಸ್ತುಗಳು, ಗಡಿಯಾರಗಳು, ದಿನನಿತ್ಯದ ವಸ್ತುಗಳು, ಖಡ್ಗಗಳು, ಕಸೂತಿಗಳು, ಸೌಂದರ್ಯವರ್ಧಕ ವಸ್ತುಗಳು, ಬಾಚಣಿಕೆಗಳು, ಕನ್ನಡಿಗಳು ಮುಂತಾದವುಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಅವುಗಳನ್ನು ನೋಡಲು ಆಗಮಿಸುವ ಪ್ರವಾಸಿಗರಿಂದ ಹಣವನ್ನು ಪಡೆಯಲಾಗುತ್ತದೆ. ದೆಹಲಿ, ಕಲ್ಕತ್ತಾ, ಬೆಂಗಳೂರು, ಮುಂಬೈ, ಹೈದರಾಬಾದ್ ಮೊದಲಾದ ವಸ್ತು ಸಂಗ್ರಾಲಯಗಳು ವಿಶ್ವ ಪ್ರಸಿದ್ಧಿಯನ್ನು ಪಡೆದಿವೆ.

ಪ್ರವಾಸೋದ್ಯಮದ ಉತ್ಪನ್ನಗಳು (Tourism Products)

ಪ್ರವಾಸೋದ್ಯಮದ ಉತ್ಪನ್ನಗಳು (Tourism Products)

ಪೀಠಿಕೆ:

ದೇಶದ ಯಾವುದೇ ಕೈಗಾರಿಕೆಯನ್ನು ತೆಗೆದುಕೊಂಡಾಗ ಅದು ಗ್ರಾಹಕನ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯನ್ನು ಮಾಡಿ ಸರಬರಾಜು ಮಾಡುತ್ತದೆ. ಆದರೆ ಪ್ರವಾಸೋದ್ಯಮವು ಸಹ ಒಂದು ಉದ್ದಿಮೆಯಾದರು ಸಹ ಅದು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮಾಡುವುದಿಲ್ಲ. ಮಾರಾಟ ಮಾಡುವುದು ಇಲ್ಲ. ಬದಲಾಗಿ ಸೇವೆಯನ್ನು ಗ್ರಾಹಕರಿಗೆ ಒದಗಿಸುತ್ತದೆ. ಇಲ್ಲಿ ಪ್ರವಾಸಿ ಆಕರ್ಷಣೆಗಳು, ಸೇವೆಗಳು ಹಾಗೂ ಸೌಕರ್ಯಗಳನ್ನು ಉತ್ಪಾದನೆಗಳು ಎಂದು ಕರೆಯಬಹುದು. ಉದಾ: ಸಾರಿಗೆ ಸೌಲಭ್ಯ, ವಸತಿ, ಊಟ, ಮನರಂಜನೆ, ಸಂಗೀತ, ನೃತ್ಯ, ವಾಹನ ಸರಬರಾಜು, ಮಾರ್ಗದರ್ಶನ ಇವುಗಳ ಪ್ರವಾಸೋದ್ಯಮ ನೀಡುವ ಸೌಲಭ್ಯಗಳು. ಈ ಸೌಲಭ್ಯಗಳನ್ನು ಉತ್ಪಾದನೆಗಳು ಎಂದು ಕರೆಯಲಾಗುವುದು. ಇವುಗಳನ್ನು ಪ್ರವಾಸಿಗಳಿಗೆ ಉತ್ಪನ್ನಗಳ ರೀತಿಯಲ್ಲಿಯೇ ಒದಗಿಸಿ ಅದಕ್ಕೆ ಇಂತಿಷ್ಟು ಹಣ ಎಂದು ಬೆಲೆ ಕಟ್ಟಲಾಗುವುದು. ಆಗ ಪ್ರವಾಸಿಗ ಅವುಗಳನ್ನು ಹಣವನ್ನು ನೀಡಿ ಪಡೆದುಕೊಳ್ಳುತ್ತಾರೆ. ಆದುದರಿಂದ ಅವುಗಳು ಪ್ರವಾಸೋದ್ಯಮದ ಉತ್ಪನ್ನಗಳು ಎಂದು ಕರೆಸಿಕೊಳ್ಳುತ್ತವೆ. ಪ್ರವಾಸಿಗರಿಗೆ ಪ್ರವಾಸೋದ್ಯಮವು ಈ ಉತ್ಪನ್ನಗಳನ್ನು ಆಕರ್ಷಿಸುವಂತೆ ಮಾಡುತ್ತದೆ. ಅವುಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

ಆಕರ್ಷಣೆಗಳು : (Attractions)

  1. ದೃಶ್ಯ ಆಕರ್ಷಣೆ (Sight Attraction)

ಪ್ರಾಕೃತಿಕ ದೃಶ್ಯಗಳಾದ ಕಡಲ ತೀರಗಳು, ಜಲಪಾತಗಳು, ನದಿ ತೊರೆಗಳು ಸರೋವರಗಳು, ಕಣಿವೆಗಳು, ಗಿರಿಧಾಮಗಳು, ಬೆಟ್ಟಗುಡ್ಡಗಳು, ಪ್ರಾಣಿ ಪಕ್ಷಿಗಳು, ಸಸ್ಯವರ್ಗಗಳು, ಹುಲ್ಲುಗಾವಲುಗಳು, ಪ್ರವಾಸಿಗರನ್ನು ದಿನನಿತ್ಯ ಆಕರ್ಷಿಸುತ್ತವೆ. ಇವುಗಳನ್ನು ಹತ್ತಿರದಿಂದ ಹೋಗಿ ನೋಡಬಹುದು ಹಾಗೂ ಸ್ಪರ್ಶಿಸಬಹುದು. ಇದರಿಂದ ಪ್ರವಾಸಿಗರಿಗೆ ಆನಂದ ಸಂತೋಷ ಹಾಗೂ ನೆಮ್ಮದಿ ಸಿಗುತ್ತದೆ.

  1. ಸಾಂದರ್ಭಿಕ ಆಕರ್ಷಣೆ : (Eventual Attractions)

ಇವು ದಿನನಿತ್ಯ ನೋಡುವ ಹಾಗೂ ಅನುಭವಿಸುವ ದೃಶ್ಯಗಳು ಅಲ್ಲ. ಉದಾ: ಜಾತ್ರೆಗಳು, ಹಬ್ಬಗಳು, ಉತ್ಸವಗಳು, ಕ್ರೀಡಾ ಚಟುವಟಿಕೆಗಳು, ಗುಡಿ ಕೈಗಾರಿಕಾ ಪ್ರದರ್ಶನಗಳು, ಮೊದಲಾದವುಗಳು ಇವುಗಳು ಸಹ ಪ್ರವಾಸೋದ್ಯಮದ ಒಂದು ಭಾಗವಾಗಿರುವುದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಮೈಸೂರು ದಸರಾ, ಕನ್ನಡ ರಾಜ್ಯೋತ್ಸವ, ಕರಗ ಇತ್ಯಾದಿಗಳು.

  1. ಸೌಕರ್ಯಗಳು (Facilities)

ಪ್ರವಾಸೋದ್ಯಮದ ಸೌಲಭ್ಯಗಳಾದ ಸಾರಿಗೆ, ಬಾಡಿಗೆ ವಾಹನಗಳು, ವಸತಿ, ರೈಲು ಸಾರಿಗೆ, ಹೋಟೆಲ್‌ಗಳು, ನೀರಿನ ವ್ಯವಸ್ಥೆ, ವಾಹನ ಚಾಲಕರು, ವಿದ್ಯುತ್ ಸೌಲಭ್ಯ ಇವುಗಳು ಸಮರ್ಪಕವಾಗಿ ದೊರೆಯುತ್ತಿದ್ದರೆ ಪ್ರವಾಸಿಗರು ಪ್ರವಾಸ ಕೈಗೊಳ್ಳಲು ಇಚ್ಛಿಸುತ್ತಾರೆ.

  1. ಪ್ರವಾಸೋದ್ಯಮ ಸೇವೆಗಳು (Services)

ಪ್ರವಾಸೋದ್ಯಮ ಎನ್ನುವುದು ಒಂದು ಉದ್ದಿಮೆ. ಅದರಲ್ಲೂ ಅದು ಹೊಗೆರಹಿತ ಉದ್ದಿಮೆ. ಇದು ಬರುವ ಪ್ರವಾಸಿಗರಿಗೆ ಮಾರ್ಗದರ್ಶನ, ವಿಮಾನ ಟಿಕೆಟು ಕಾಯ್ದಿರಿಸುವಿಕೆ, ವಸತಿ ಒದಗಿಸುವುದು, ಚಾಲಕರನ್ನು ಗೊತ್ತು ಮಾಡುವುದು ಮೊದಲಾದ ಸೇವೆಗಳನ್ನು ಉತ್ಪನ್ನದ ರೀತಿಯಲ್ಲಿ ಒದಗಿಸುತ್ತದೆ.

ಪ್ರವಾಸಕ್ಕೆ ಪ್ರೇರೇಪಿಸುವ ಅಂಶಗಳು

ಪ್ರವಾಸಕ್ಕೆ ಪ್ರೇರೇಪಿಸುವ ಅಂಶಗಳು

ಪ್ರವಾಸವು ಈಗ ಕೆಲವರಿಗಷ್ಟೇ ಸೀಮಿತವಾದ ಐಶಾರಾಮಿ ಚಟುವಟಿಕೆ ಅಲ್ಲ; ಇದು ಆರ್ಥಿಕ ಬೆಳವಣಿಗೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಜೀವನಶೈಲಿಯ ಬದಲಾವಣೆಗಳಿಂದ ಪ್ರಭಾವಿತವಾಗಿರುವ ಜಾಗತಿಕ ಪ್ರಕ್ರಿಯೆಯಾಗಿದೆ. ಪ್ರವಾಸಕ್ಕೆ ಜನರನ್ನು ಪ್ರೇರೇಪಿಸುವ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ಪ್ರವಾಸೋದ್ಯಮ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅತ್ಯಂತ ಮುಖ್ಯವಾಗಿದೆ.

ಕೆಳಗಿನವುಗಳು ಇಂದಿನ ಜಗತ್ತಿನಲ್ಲಿ ಪ್ರವಾಸಕ್ಕೆ ಪ್ರೇರೇಪಿಸುವ ಪ್ರಮುಖ ಅಂಶಗಳ ವಿಶ್ಲೇಷಣೆ:

💰 1. ಆರ್ಥಿಕ ಬೆಳವಣಿಗೆ ಮತ್ತು ಆದಾಯದ ಹೆಚ್ಚಳ

ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ವ್ಯಕ್ತಿಗಳ ಆದಾಯದ ಹೆಚ್ಚಳ.

  • ಹೆಚ್ಚಿನ ಆದಾಯವು ಮನರಂಜನೆ ಮತ್ತು ವಿಶ್ರಾಂತಿಗಾಗಿ ಖರ್ಚು ಮಾಡಲು ಸಹಾಯ ಮಾಡುತ್ತದೆ
  • ವಾರಾಂತ್ಯ ಪ್ರವಾಸವು ಉದ್ಯೋಗಿಗಳಲ್ಲಿ ಸಾಮಾನ್ಯವಾಗಿದೆ
  • ಪ್ರವಾಸವು ಕೆಲಸದ ಒತ್ತಡದಿಂದ ಮುಕ್ತಿಗೊಳ್ಳಲು ಒಂದು ಮಾರ್ಗವಾಗಿದೆ

👉 ಸರಳವಾಗಿ ಹೇಳುವುದಾದರೆ: ಆದಾಯ ಹೆಚ್ಚಿದಂತೆ ಪ್ರವಾಸವೂ ಹೆಚ್ಚುತ್ತದೆ.

🚆 2. ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಗಳ ಅಭಿವೃದ್ಧಿ

ಸಾರಿಗೆ ವ್ಯವಸ್ಥೆಗಳ ಅಭಿವೃದ್ಧಿಯಿಂದ ಪ್ರವಾಸವು ಸುಲಭವಾಗಿದೆ.

  • ಕಡಿಮೆ ವೆಚ್ಚದ ವಿಮಾನಗಳು, ರೈಲು ಮತ್ತು ರಸ್ತೆ ಸೌಲಭ್ಯಗಳು
  • ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಗಳು
  • ಕಡಿಮೆ ಸಮಯದಲ್ಲಿ ದೂರ ಪ್ರಯಾಣ ಸಾಧ್ಯ  – ಇದರಿಂದ ಜನರು ಸುಲಭವಾಗಿ ತಲುಪಬಹುದಾದ ಸ್ಥಳಗಳನ್ನು ಆಯ್ಕೆ ಮಾಡುತ್ತಾರೆ.

⏳ 3. ವಿಶ್ರಾಂತಿ ಸಮಯದ ಹೆಚ್ಚಳ

ಇಂದಿನ ಉದ್ಯೋಗ ವ್ಯವಸ್ಥೆಗಳು ವಿಶ್ರಾಂತಿ ಸಮಯವನ್ನು ಹೆಚ್ಚಿಸಿವೆ.

  • ವಾರಾಂತ್ಯ ಮತ್ತು ರಜೆಗಳ ವ್ಯವಸ್ಥೆ
  • ಮಾನಸಿಕ ಒತ್ತಡ ಕಡಿಮೆ ಮಾಡಲು ಪ್ರವಾಸ
  • ಚಿಕ್ಕ ಅವಧಿಯ ಪ್ರವಾಸಗಳ ಪ್ರಚಾರ

🧑‍🎓 4. ಯುವಕರ ಆಸಕ್ತಿ ಮತ್ತು ಪ್ರವಾಸ ಸಂಸ್ಕೃತಿ

ಯುವಕರು ಪ್ರವಾಸದಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ.

  • ಸಾಮಾಜಿಕ ಮಾಧ್ಯಮದ ಪ್ರಭಾವ
  • ಸಾಹಸ ಮತ್ತು ಅನ್ವೇಷಣೆಯ ಆಸಕ್ತಿ
  • ಬ್ಯಾಕ್‌ಪ್ಯಾಕಿಂಗ್ ಮತ್ತು ಗುಂಪು ಪ್ರವಾಸಗಳ ಬೆಳವಣಿಗೆ

🛕 5. ಧಾರ್ಮಿಕ, ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಗಳು

ಪ್ರವಾಸವು ವಿವಿಧ ಉದ್ದೇಶಗಳಿಗಾಗಿ ನಡೆಯುತ್ತದೆ:

  • ಧಾರ್ಮಿಕ ಯಾತ್ರೆಗಳು
  • ಶಿಕ್ಷಣ ಪ್ರವಾಸಗಳು
  • ಸಂಶೋಧನಾ ಕಾರ್ಯಗಳು   – ಇವು ಜ್ಞಾನವನ್ನು ವಿಸ್ತರಿಸುತ್ತವೆ

💸 6. ವೆಚ್ಚ ಮತ್ತು ಪ್ರವಾಸದ ಸೌಲಭ್ಯ

ಪ್ರವಾಸದ ವೆಚ್ಚವು ಪ್ರಮುಖ ಅಂಶವಾಗಿದೆ.

  • ಕಡಿಮೆ ವೆಚ್ಚದ ದೇಶಗಳಿಗೆ ಹೆಚ್ಚಿನ ಪ್ರವಾಸಿಗರು ಹೋಗುತ್ತಾರೆ
  • ಕೆಲವು ದೇಶಗಳಲ್ಲಿ ಹೆಚ್ಚು ವೆಚ್ಚ ಇರುವುದರಿಂದ ಪ್ರವಾಸ ಕಡಿಮೆ

👉 ಪ್ರವಾಸವು ಬೆಲೆಯ ಮೇಲೆ ಅವಲಂಬಿತವಾಗಿದೆ

🌐 7. ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳು

ಪ್ರವಾಸವು ಜನರನ್ನು ಸಂಪರ್ಕಿಸುತ್ತದೆ.

  • ವಿವಿಧ ಸಂಸ್ಕೃತಿಗಳ ಪರಿಚಯ
  • ಸಾಮಾಜಿಕ ಸಂಪರ್ಕಗಳ ವೃದ್ಧಿ
  • ಜಾಗತಿಕ ಅರಿವು ಹೆಚ್ಚಳ

🏥 8. ವೈದ್ಯಕೀಯ, ಕ್ರೀಡೆ ಮತ್ತು ವಿಶ್ರಾಂತಿ ಪ್ರವಾಸ

ಪ್ರವಾಸವು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿದೆ:

  • ವೈದ್ಯಕೀಯ ಚಿಕಿತ್ಸೆಗಾಗಿ
  • ಕ್ರೀಡಾ ಕಾರ್ಯಕ್ರಮಗಳಿಗಾಗಿ
  • ವಿಶ್ರಾಂತಿ ಮತ್ತು ಮನರಂಜನೆಗಾಗಿ

👑 9. ಪ್ರತಿಷ್ಠೆ ಮತ್ತು ಸಾಮಾಜಿಕ ಸ್ಥಾನಮಾನ

ಕೆಲವರಿಗೆ ಪ್ರವಾಸವು ಪ್ರತಿಷ್ಠೆಯ ಸಂಕೇತ.

  • ವಿದೇಶ ಪ್ರವಾಸದಿಂದ ಗೌರವ ಹೆಚ್ಚಳ
  • ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವ

💼 10. ಉದ್ಯೋಗ ಮತ್ತು ವ್ಯಾಪಾರ ಉದ್ದೇಶಗಳು

ಪ್ರವಾಸವು ವೃತ್ತಿಪರ ಬೆಳವಣಿಗೆಗೆ ಸಹಾಯಕ.

  • ವ್ಯವಹಾರ ಸಭೆಗಳು
  • ಅಂತಾರಾಷ್ಟ್ರೀಯ ಸಮ್ಮೇಳನಗಳು
  • ಉದ್ಯೋಗ ಅವಕಾಶಗಳು

🧠 11. ಕುತೂಹಲ ಮತ್ತು ಸಾಂಸ್ಕೃತಿಕ ಅಧ್ಯಯನ

ಮಾನವನ ಸಹಜ ಗುಣವೇ ಕುತೂಹಲ.

  • ಹೊಸ ಸಂಸ್ಕೃತಿಗಳ ಅರಿವು
  • ಇತಿಹಾಸ ಮತ್ತು ಪರಂಪರೆಯ ಅಧ್ಯಯನ
  • ಜಾಗತಿಕ ವೈವಿಧ್ಯತೆಯ ಅನುಭವ

👨‍👩‍👧‍👦 12. ಬಂಧುಗಳನ್ನು ಭೇಟಿಯಾಗುವುದು

ಪ್ರವಾಸವು ಕುಟುಂಬ ಸಂಬಂಧಗಳನ್ನು ಬಲಪಡಿಸುತ್ತದೆ.

  • ವಿದೇಶದಲ್ಲಿರುವ ಬಂಧುಗಳನ್ನು ಭೇಟಿ
  • ಕುಟುಂಬ ಸಮಾರಂಭಗಳಲ್ಲಿ ಭಾಗವಹಿಸುವುದು
  • ಭಾವನಾತ್ಮಕ ಬಂಧಗಳ ವೃದ್ಧಿ

✨ ಉಪಸಂಹಾರ

ಪ್ರವಾಸವು ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಯಕ್ತಿಕ ಅಂಶಗಳಿಂದ ಪ್ರೇರಿತವಾಗಿದೆ. ಇಂದಿನ ಜಗತ್ತಿನಲ್ಲಿ ಪ್ರವಾಸವು ಕೇವಲ ಸ್ಥಳಾಂತರವಲ್ಲ—it is a learning and life experience.

 

ಪ್ರವಾಸೋದ್ಯಮದ ಅಧ್ಯಯನದ ಮಾರ್ಗಗಳು (Approches of the Study of Tourism)

ಪ್ರವಾಸೋದ್ಯಮದ ಅಧ್ಯಯನದ ಮಾರ್ಗಗಳು (Approches of the Study of Tourism)

ಪ್ರವಾಸೋದ್ಯಮದ ಅಧ್ಯಯನ ಮಾರ್ಗಗಳು ಈ ಕೆಳಗಿನಂತಿವೆ.

 1. ಸಾಂಸ್ಥಿಕ ಮಾರ್ಗ (Institutional Approach)

ಇದು ಅತ್ಯಂತ ಪ್ರಮುಖ ಮಾರ್ಗವಾಗಿದೆ. ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ಭಾಗವಹಿಸುವ ಅನೇಕ ಸಂಘ ಸಂಸ್ಥೆಗಳು, ಸಂಘಟನೆಗಳು, ಅಂತರಾಷ್ಟ್ರೀಯಗಳು, ಮಧ್ಯವರ್ತಿಗಳು, ಪ್ರವಾಸಿ ಅಧ್ಯಯನದೊಂದಿಗೆ ಸಮ್ಮಿಳಿತಗೊಂಡಿದೆ. ಈ ಮಾರ್ಗವು ಪ್ರವಾಸಿ ಕಂಪನಿಗಳು, ಪ್ರವಾಸಿ ಏಜೆನ್ಸಿಗಳು, ಹೋಟೆಲ್‌ಗಳು, ವಿಮಾ ಕಂಪನಿಗಳು, ಪ್ರವಾಸದ ವೆಚ್ಚ, ಪ್ರವಾಸಿ ನಿರ್ವಾಹಕ, ಬಾಡಿಗೆ ಕಾರುಗಳ ಕಂಪನಿಗಳು, ಮೋಟರು ಕಂಪನಿಗಳು ನೀಡುವ ಸೇವೆಗಳನ್ನು ಮುಂತಾದವುಗಳನ್ನು ಸಾಂಸ್ಥಿಕ ಮಾರ್ಗದ ಅಧ್ಯಯನವನ್ನು ಮಾಡುವಾಗ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. 5 ವರ್ಷಗಳಿಗೊಮ್ಮೆ ಸಮೀಕ್ಷೆ ಮಾಡುವ ಅಮೆರಿಕದ ಸೆನ್ಸಸ್ ಬ್ಯೂರೋ, ಸಾಂಸ್ಥಿಕ ಅಧ್ಯಯನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

2. ಉತ್ಪನ್ನ ಮಾರ್ಗ (Product Apporoach)

ಈ ಮಾರ್ಗವು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅಂಕಿ ಅಂಶಗಳಾದ ಉತ್ಪಾದನೆ, ಮಾರುಕಟ್ಟೆ ಹಾಗೂ ಬಳಕೆಯ ಅಧ್ಯಯನವನ್ನು ಒಳಗೊಂಡಿರುತ್ತದೆ. ಉದಾ:  ಪ್ರವಾಸಿ ಒಬ್ಬನು ಹೊಟೇಲ್‌ಗೆ ಹೋಗಿ ವಾಸ್ತವ್ಯ ಹೂಡಬಹುದು ಅಥವಾ ವಿಮಾನ ಪ್ರಯಾಣ ಮಾಡಬಹುದು, ಕಾರನ್ನು ಪಡೆಯಬಹುದು, ಆದರೆ ಇವುಗಳನ್ನು ಹೇಗೆ ಉತ್ಪಾದಿಸಿ ಅಭಿವೃದ್ಧಿಗೊಳಿಸಲಾಯಿತು? ಹೇಗೆ ಪ್ರಚಾರ ಮಾಡಲಾಯಿತು ಎಂಬುದನ್ನು ತಿಳಿಯಲು ಉತ್ಪನ್ನ ಮಾರ್ಗವು ಪ್ರವಾಸೋದ್ಯಮಕ್ಕೆ ನೆರವಾಗುತ್ತದೆ.

3. ನಿರ್ವಾಹಣಾ ಮಾರ್ಗ (Managerial Approach)

ಈ ಮಾರ್ಗವು ಪ್ರವಾಸಿ ನಿರ್ವಹಣೆಗೆ ಅಗತ್ಯವಾದ ಯೋಜನೆ, ಸಂಶೋಧನೆ, ಮೌಲ್ಯ ನಿರ್ಧಾರ, ಮಾರುಕಟ್ಟೆ ಮೊದಲಾದ ಅಂಶಗಳ ಕುರಿತು ಅಧ್ಯಯನ ಮಾಡುತ್ತದೆ.

4. ಐತಿಹಾಸಿಕ ಅಧ್ಯಯನ ಮಾರ್ಗ (Historical Approach)

ಐತಿಹಾಸಿಕ ಸ್ಥಳಗಳು ಪ್ರವಾಸಿಗರನ್ನು ನಿರಂತರವಾಗಿ ಆಕರ್ಷಿಸುತ್ತವೆ. ಏಕೆಂದರೆ ಐತಿಹಾಸಿಕ ನೆಲೆಗಳು, ಅವಶೇಷಗಳು, ಸ್ಮಾರಕಗಳು ಪ್ರವಾಸೋದ್ಯಮದ ಅವಿಭಾಜ್ಯ ಅಂಗಗಳಾಗಿವೆ. ಇವುಗಳ ಐತಿಹಾಸಿಕ ಹಿನ್ನೆಲೆಯನ್ನು ತಿಳಿಯುವುದರ ಮೂಲಕ ಅದರ ಪ್ರಾಮುಖ್ಯತೆಯನ್ನು ಅರಿತುಕೊಳ್ಳಬೇಕು. ಇದನ್ನು ಅರಿತುಕೊಳ್ಳುವುದರಿಂದ ಪ್ರವಾಸವು ಅರ್ಥಪೂರ್ಣವೂ, ಆನಂದರಾಯಕವೂ ಆಗುತ್ತದೆ.

5. ಆರ್ಥಿಕ ಮಾರ್ಗ: (Economic Approach)  

ಪ್ರವಾಸೋದ್ಯಮವು ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು, ಅದರ ಬೇಡಿಕೆ ಹೆಚ್ಚುತ್ತಿರುವುದು ಹಾಗೂ ಅದು ಹೆಚ್ಚು ಪ್ರಗತಿಯನ್ನು ಕಾಣುತ್ತಿರುವುದನ್ನು ನೋಡಿದರೆ ಪ್ರವಾಸೋದ್ಯಮವು ಆರ್ಥಿಕ ವ್ಯವಸ್ಥೆಯನ್ನು ಅವಲಂಬಿಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಪ್ರವಾಸೋದ್ಯಮದ ಆರ್ಥಿಕ ವ್ಯಾಪ್ತಿ ಬಹಳ ವಿಶಾಲವಾದುದು. ಇದು ಪ್ರವಾಸಿಗರಿಗೆ ಸದಾ ಸೇವೆಯನ್ನು ಒದಗಿಸಲು ಸಿದ್ಧವಾಗಿದೆ. ಪ್ರವಾಸಿ ಉತ್ಪನ್ನಗಳ ಬೇಡಿಕೆ, ಪೂರೈಕೆ, ಮಾರಾಟ, ಬಳಕೆ, ವಸತಿ, ಊಟೋಪಚಾರ, ಸತ್ಕಾರ, ಸಾರಿಗೆ ಹಾಗೂ ಮನರಂಜನೆ ಎಲ್ಲವೂ ಆರ್ಥಿಕ ಅಂಶಗಳನ್ನು ಅವಲಂಬಿಸಿದೆ.  ಹೆರ್ಮನ್‌ ಪನ್‌ ಷುಲಾರ್ಡ್‌ ಎಂಬ ಆಸ್ಟ್ರಿಯಾದ ಆರ್ಥಿಕ ತಜ್ಞ ಪ್ರವಾಸೋದ್ಯಮವನ್ನು ಆರ್ಥಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ. ವಿದೇಶಿ ಪ್ರವಾಸಿಗರು ಒಂದು ನಾಡು, ಒಂದು ಪ್ರದೇಶ ಅಥವಾ ನಗರಗಳಿಗೆ ಬರುವುದು, ತಂಗುವುದು ಹಾಗೂ ಓಡಾಡುವುದು ನೇರವಾಗಿ ಆರ್ಥಿಕ ಸ್ವರೂಪದ್ದಾಗಿರುತ್ತದೆ. ಒಗ್ಲಿವಿ ಎಂಬ ಇನ್ನೊಬ್ಬ ಆರ್ಥಿಕ ತಜ್ಞ ಹೇಳುವಂತೆ ಎಲ್ಲಾ ವ್ಯಕ್ತಿಗಳು 12 ತಿಂಗಳಿಗಿಂತ ಕಡಿಮೆ ಕಾಲಾವಧಿಯವರೆಗೆ ತಮ್ಮ ಸ್ವಂತ ಸ್ಥಳದಿಂದ ಹೊರಗಡೆ ಇರಬೇಕು. ಎರಡನೆಯದು ತಾವು ಸಂದರ್ಶಿಸುವ ಸ್ಥಳದಲ್ಲಿ ಹಣವನ್ನು ಸಂಪಾದಿಸದೆ ಕೇವಲ ಖರ್ಚು ಮಾಡಬೇಕು.

6. ಸಮಾಜ ಅಧ್ಯಯನ ಮಾರ್ಗ (Social Study Approach)

 ಪ್ರವಾಸೋದ್ಯಮವು ಒಂದು ಸಾಮಾಜಿಕ ಚಟುವಟಿಕೆಯಾಗಿದೆ. ಏಕೆಂದರೆ ಅದು ಅತಿಥಿ ಹಾಗೂ ಅತಿಥೇಯರ ನಡುವೆ ನಿರಂತರವಾಗಿ ಸಂಪರ್ಕವನ್ನು ಏರ್ಪಡಿಸುವ ಕೊಂಡಿಯಾಗಿದೆ. ಇದರಿಂದ ಜನರ ಜೀವನ ಶೈಲಿಗಳು, ಲೋಕ ರೂಢಿಗಳು, ಹವ್ಯಾಸಗಳು, ಸಾಮಾಜಿಕ ವರ್ಗಗಳ ಮೇಲೆ ಪ್ರಭಾವ ಬೀರುತ್ತವೆ.

7. ಭೌಗೋಳಿಕ ಮಾರ್ಗ (Geographical Approach)

ಪ್ರವಾಸೋದ್ಯಮ ಹಾಗೂ ಭೂಗೋಳದ ನಡುವೆ ಅವಿನಾಭಾವ ಸಂಬಂಧವಿದೆ. ಅವುಗಳು ಒಂದನ್ನು ಬಿಟ್ಟು ಮತ್ತೊಂದು ಇರಲಾರವು. ಪ್ರವಾಸಿ ತಾಣದ ಭೌತಿಕ ಪರಿಸರ ಅದರ ಆರ್ಥಿಕ ಲಕ್ಷಣ, ಪರಿಸರ, ಹವಾಗುಣ, ವಾಯುಗುಣ, ಭೂಮಿಯ ತಾಪಮಾನ, ಪ್ರಕೃತಿ ದೃಶ್ಯ, ಮುಂತಾದವುಗಳ ಕುರಿತು ಪ್ರವಾಸಿಗನು ಅರಿತಿರಬೇಕು. ಇವೆಲ್ಲವುಗಳ ಅರಿವನ್ನು ಪ್ರವಾಸೋದ್ಯಮ ತಿಳಿಸಿಕೊಡುತ್ತದೆ.

 8. ಮನೋವೈಜ್ಞಾನಿಕ ಮಾರ್ಗ: (Psychological Approach)

ಪ್ರವಾಸ ಕೈಗೊಳ್ಳುವ ಪ್ರವಾಸಿಗನ ಮಾನಸಿಕ ಸ್ಥಿತಿ, ಅವನ ಅಭಿರುಚಿ, ಆಸೆ ಆಕಾಂಕ್ಷೆ, ಪ್ರವಾಸದ ಕುರಿತು ಅರಿವು ಹಾಗೂ ಅವನ ಮಾನಸಿಕ ಸಾಮರ್ಥ್ಯವನ್ನು ಮನೋವೈಜ್ಞಾನಿಕ ಆಧಾರದ ಮೇಲೆ ಅಭ್ಯಸಿಸುವ ಕಾರ್ಯವನ್ನು ಪ್ರವಾಸೋದ್ಯಮದ ಇಲಾಖೆ ಮಾಡಬೇಕು. ಒಂದು ವೇಳೆ ಅವನಿಗೆ ಪ್ರವಾಸದ ಕುರಿತು ಆಸಕ್ತಿ ಕಡಿಮೆಯಾಗಿದ್ದರೆ ಅವನಿಗೆ ಪ್ರೇರೇಪಣೆ ನೀಡಬೇಕು ಆಸಕ್ತಿಯನ್ನು ವೃದ್ಧಿಸಬೇಕು. ನಿರ್ದಿಷ್ಟ ಸ್ಥಳಕ್ಕೆ ಅವರು ಬರುವಂತೆ ಮಾಡಬೇಕು. ಇದು ಮನೋವೈಜ್ಞಾನಿಕ ಮಾರ್ಗದಿಂದ ಮಾತ್ರ ಸಾಧ್ಯ.

 9. ಅಂತರ ವಿಭಾಗಗಳ ಮಾರ್ಗ (Inter Disciplinary Approach)

ಪ್ರವಾಸೋದ್ಯಮವು ಸಾಮಾಜಿಕ ಆರ್ಥಿಕ, ರಾಜಕೀಯ, ಭೌಗೋಳಿಕ ಹಾಗೂ ಸಾಂಸ್ಕೃತಿಕ ಅಂಶಗಳೆಲ್ಲವನ್ನು ಅಧ್ಯಯನ ಮಾಡುತ್ತದೆ. ಹೀಗಾಗಿ ಪ್ರವಾಸಿಗನ ವರ್ತನೆ ಹಾಗೂ ಅಭಿವೃದ್ಧಿಗಳನ್ನು ತಿಳಿಯಲು ಮನಶಾಸ್ರ್ತೀಯ ಅಧ್ಯಯನವನ್ನು ಪ್ರವಾಸೋದ್ಯಮ ಮಾಡುತ್ತದೆ. ಪ್ರವಾಸಿಗನಿಗೆ ನೈಸರ್ಗಿಕ ಹಾಗೂ ಸಾಂಸ್ಕೃತಿಕ ತಾಣಗಳ ಕುರಿತು ಅರಿವು ಬೇಕಾದರೆ ಆತ ಭೌಗೋಳಿಕ ಮಾರ್ಗ ಬೇಕು. ಐತಿಹಾಸಿಕ ಸ್ಥಳಗಳ ಕುರಿತು ಮಾಹಿತಿ ಪಡೆಯಲು ಐತಿಹಾಸಿಕ ಮಾರ್ಗ, ಯೋಜನೆ ಹಾಗೂ ಅಭಿವೃದ್ಧಿಯನ್ನು ತಿಳಿಯಲು ಅರ್ಥಶಾಸ್ತ್ರದ ಮಾರ್ಗ, ವೀಸಾ ಹಾಗೂ ಪಾಸ್‌ಪೋರ್ಟ್ ಬಗ್ಗೆ ತಿಳಿಯಲು ರಾಜ್ಯಶಾಸ್ತ್ರದ ಮಾರ್ಗ ಕಾನೂನುಗಳ ಕುರಿತು ಮಾಹಿತಿ ಪಡೆಯಲು ಕಾನೂನು ಮಾರ್ಗಗಳನ್ನು ಅನುಸರಿಸಬೇಕು.

10. ಲಭ್ಯತೆಯ ಅಧ್ಯಯನ (Available Approach)

ಲಭ್ಯತೆಯ ಅಧ್ಯಯನದ ಮೂಲಕ ಪ್ರವಾಸಿ ತಾಣಗಳಲ್ಲಿ ಸಿಗುವ ಸೌಕರ್ಯಗಳೇನು? ಅವುಗಳಿಂದ ಪ್ರವಾಸಗಳಿಗೆ ಆಗುವ ಲಾಭಗಳೇನು? ಸ್ಥಳೀಯ ಸೌಕರ್ಯಗಳು ಪ್ರವಾಸಿಗರನ್ನು ಸಳೆಯಲು ಎಷ್ಟರಮಟ್ಟಿಗೆ ಸಾಧ್ಯವಾಗಿವೆ?. ಮೊದಲಾದ ಅಂಶಗಳನ್ನು ಅರಿಯಲು ಸಾಧ್ಯವಾಗುತ್ತದೆ.

ಪ್ರವಾಸೋದ್ಯಮದ ಮೂಲಭೂತ ಅಂಗಗಳು ಹಾಗೂ ಸಂಪನ್ಮೂಲಗಳು (Basic Components of Tourism & Resources)

ಪ್ರವಾಸೋದ್ಯಮದ ಮೂಲಭೂತ ಅಂಗಗಳು ಹಾಗೂ ಸಂಪನ್ಮೂಲಗಳು (Basic Components of Tourism & Resources)

ಪ್ರವಾಸೋದ್ಯಮವು ನಿಂತ ನೀರಲ್ಲ. ಅದು ನಿರಂತರವಾಗಿ ಚಲನಾತ್ಮಕವಾಗಿರುತ್ತದೆ. ಇದೊಂದು ಹೊಗೆರಹಿತ ಉದ್ದಿಮೆ. ಅದು ತನ್ನ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಈ ಕೆಳಗಿನ ಅಂಗಗಳ ಸಹಾಯಬೇಕು ಅವುಗಳೆಂದರೆ.

  1. ಪ್ರಾಕೃತಿಕ (ನಿಸರ್ಗ) 
  2. ಮಾನವಿಕ
  3. ಸಾಂಸ್ಕೃತಿಕ ಸಂಪನ್ಮೂಲಗಳು

1. ಸಾರಿಗೆ (Transport) :  ಪ್ರವಾಸೋದ್ಯಮವು ಸಾರಿಗೆಯನ್ನು ಅವಲಂಬಿಸಿದೆ ಏಕೆಂದರೆ ಸಾರಿಗೆ ಇಲ್ಲದ ಪ್ರವಾಸ ಉದ್ಯಮವು ಅದು ತಲೆಯಿಲ್ಲದ ದೇಹದಂತೆ. ಸಾರಿಗೆ ಇಲ್ಲವಾದರೆ ಪ್ರವಾಸೋದ್ಯಮ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಉದಾ: ರೈಲು, ಬಸ್ಸುಗಳು, ವಿಮಾನಗಳು, ಟ್ಯಾಕ್ಸಿಗಳು, ಕ್ಯಾಬ್‌ಗಳು, ಮೋಟರ್ ಸೈಕಲ್‌ಗಳು, ಹಡಗುಗಳು, ದೋಣಿಗಳು ಹಾಗೂ ಎತ್ತಿನ ಬಂಡಿಗಳು ಮೊದಲಾದವುಗಳನ್ನು ಅವಲಂಬಿಸಿ ಪ್ರವಾಸೋದ್ಯಮ ಮುಂದುವರಿಯುತ್ತದೆ.

 2. ವಸತಿ : ಪ್ರವಾಸಿಗನೊಬ್ಬನು ಬೇರೆ ಪ್ರದೇಶಕ್ಕೆ ಹೋದರೆ ಆ ಪ್ರದೇಶದಲ್ಲಿ ಸೂಕ್ತವಾದ ವಾಸ ಸ್ಥಳ ಬೇಕು. ಇದನ್ನು ಒದಗಿಸುವ ಕಾರ್ಯನಿರ್ವಹಿಸುವುದೇ ಹೋಟೆಲುಗಳು. ಇವುಗಳು ತಿಂಡಿ, ಊಟ, ವಸತಿ ಮುಂತಾದವುಗಳನ್ನು ಒದಗಿಸುವುದರಿಂದ ಪ್ರವಾಸಿಗ ಆನಂದದಾಯಕ ಪ್ರವಾಸವನ್ನು ಕೈಗೊಳ್ಳುತ್ತಾನೆ. ಇವುಗಳಲ್ಲದೆ ಕೆಲವು ಪ್ರದೇಶಗಳಲ್ಲಿ ಅನ್ನ ಛತ್ರಗಳು, ಧರ್ಮ ಶಾಲೆಗಳು, ಸಮುದಾಯ ಭವನಗಳು ಹಾಗೂ ವಸತಿಗೃಹಗಳಲ್ಲಿ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಪ್ರವಾಸಿಗನು ಆ ಪ್ರದೇಶದ ಬಗ್ಗೆ ತುಂಬಾ ಒಲವು ತೋರಿದಾಗಲೂ ಅಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ಹೋದರೆ ಆತ ಪ್ರವಾಸಕ್ಕೆ ಮನಸ್ಸು ಮಾಡಲಾರನು.

 3. ವಿಹಾರ ತಾಣ : ವಿಹಾರ ತಾಣಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಗಳಾಗಿದ್ದು ಪ್ರವಾಸಿಯು ಅಲ್ಲಿನ ನಿಸರ್ಗ ಸೌಂದರ್ಯ, ಸಾಂಸ್ಕೃತಿಕ ಪರಂಪರೆ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಪ್ರವಾಸವನ್ನು ನಿರ್ಧರಿಸುತ್ತಾನೆ. ಆ ಪ್ರದೇಶಗಳು ಆತನ ಅಭಿರುಚಿಯನ್ನು ಈಡೇರಿಸುವಂತಾದರೆ ಪ್ರವಾಸಿಗ ಪಡುವ ಸಂತೋಷಕ್ಕೆ ಪಾರವೇ ಇರುವುದಿಲ್ಲ.

 4. ಪ್ರಯಾಣ ಸೇವೆಗಳು :  ಒಂದು ಪ್ರದೇಶ ಪ್ರವಾಸೋದ್ಯಮಕ್ಕೆ ಹೆಸರಾಗಬೇಕಾದರೆ ಆ ಪ್ರದೇಶದ ಪ್ರವಾಸ ನಿರ್ವಾಹಕರು ಹಾಗೂ ಏಜೆಂಟರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಅವರು ಪ್ರವಾಸಿಗರಿಗೆ ಪ್ರವಾಸಕ್ಕೆ ಬೇಕಾದ ಮಾಹಿತಿ, ಪ್ರವಾಸ ದಾಖಲೆ, ಸಾರಿಗೆ ಟಿಕೇಟ್, ವಸತಿ ಕಾಯ್ದಿರಿಸುವಿಕೆ, ಆರೋಗ್ಯ ವಿಮೆ, ಕರೆನ್ಸಿ ಮೊದಲಾದ ಸೇವೆಗಳನ್ನು ಒದಗಿಸಿದರೆ ಪ್ರವಾಸ ಸುಖಕರವಾಗುತ್ತದೆ.

 5. ಪ್ರವಾಸಿಗ :  ಪ್ರವಾಸೋದ್ಯಮದ ಕೇಂದ್ರ ಬಿಂದು ಪ್ರವಾಸಿಗ. ಅವನು ಪ್ರವಾಸೋದ್ಯಮದ ಮೆದುಳು ಇದ್ದಂತೆ.ಮೆದಳು ಇಲ್ಲದೆ ಮಾನವನ ದೇಹ ಯಾವ ಕಾರ್ಯವನ್ನು ನಿರ್ವಹಿಸುವುದಿಲ್ಲ. ಹೀಗಾಗಿ ಪ್ರವಾಸೋದ್ಯಮ ಹಾಗೂ ಪ್ರವಾಸಿಗ ಒಂದು ದೇಹದ ಎರಡು ಕಣ್ಣುಗಳಂತೆ.

ಪ್ರವಾಸೋದ್ಯಮದ ಭೌಗೋಳಿಕ ಅಂಶಗಳು :

  1.    ಸಾರಿಗೆ, ವಸತಿ, ಊಟ, ತಿಂಡಿ, ಹೋಟೆಲ್‌ಗಳು.
  2. ನದಿಗಳು, ಸರೋವರಗಳು, ಸಾಗರಗಳು, ಸಮುದ್ರಗಳು, ಜಲಪಾತಗಳು, ಚಿಲುಮೆಗಳು, ಹುಲ್ಲುಗಾವಲು, ಕಣಿವೆಗಳು, ಬೆಟ್ಟಗುಡ್ಡಗಳು, ಕಡಲ ತೀರಗಳು, ಅರಣ್ಯಗಳು, ಮರುಭೂಮಿಗಳು, ರಾಷ್ಟ್ರೀಯ ಉದ್ಯಾನವನ, ಬಂದರುಗಳು, ಜಂಗಲ್ ರೆಸಾರ್ಟ್‌ಗಳು.
  3.  ಮೋಡ, ಮಂಜು, ಮಳೆ ಹಾಗೂ ಉಷ್ಣತೆ.
  4.  ವನ್ಯಪ್ರಾಣಿಧಾಮಗಳು, ಪಕ್ಷಿಧಾಮಗಳು ಹಾಗೂ ವಸ್ತು ಸಂಗ್ರಹಾಲಯಗಳು.
  5.  ಶಾಸನಗಳು, ದೇವಾಲಯಗಳು, ಶಸ್ತ್ರಾಸ್ತ್ರಗಳು, ನಾಣ್ಯಗಳು, ಕೋಟೆಗಳು, ನಗರಗಳು ಗ್ರಾಮಗಳು.
  6.  ಮನರಂಜನೆ, ಜನಪದ ಕಲೆ, ವಸ್ತು ಪ್ರದರ್ಶನ, ಚಿತ್ರಕಲೆ, ಸಂಗೀತ, ಹಬ್ಬಗಳು, ಕಲಾ ಮಂದಿರಗಳು.