ಸಾಮಾಜೀಕರಣದ ಮಹತ್ವ ಅಥವಾ ಪ್ರಾಮುಖ್ಯತೆ

ಸಾಮಾಜೀಕರಣದ ಮಹತ್ವ ಅಥವಾ ಪ್ರಾಮುಖ್ಯತೆ

ಸಾಮಾಜೀಕರಣವು ವ್ಯಕ್ತಿಗೆ ಸಮಾಜದ ಮೌಲ್ಯಗಳು, ಸಂಸ್ಕೃತಿ, ನಿಯಮಗಳು ಮತ್ತು ನಡವಳಿಕೆಗಳನ್ನು ಕಲಿಸಿ, ಅವನನ್ನು ಸಮಾಜದ ಒಬ್ಬ ಜವಾಬ್ದಾರಿಯುತ ಸದಸ್ಯನನ್ನಾಗಿ ರೂಪಿಸುತ್ತದೆ. ಇದು ವ್ಯಕ್ತಿತ್ವದ ವಿಕಾಸಕ್ಕೆ ನೆರವಾಗಿ, ಸಮಾಜದಲ್ಲಿ ಪರಸ್ಪರ ಸಹಕಾರ, ಹೊಂದಾಣಿಕೆ ಹಾಗೂ ಸಮನ್ವಯದಿಂದ ಬದುಕಲು ಅಗತ್ಯವಾದ ಆಧಾರ ಒದಗಿಸುವುದರಿಂದ ಮಾನವನ ಬದುಕಿನಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ.
1) ಸಾಮಾಜೀಕರಣವು ಮಾನವನನ್ನು ಸಮೂಹ ಜೀವಿಯನ್ನಾಗಿಸುತ್ತದೆ:

ಮಾನವ ಜನ್ಮತ: ಸಮೂಹ ಜೀವಿಯಾಗಿರುವುದಿಲ್ಲ. ಸಮೂಹ ಸಂಪರ್ಕ, ಸಂಸ್ಕಾರ ಹಾಗೂ ಶಿಕ್ಷಣವಿಲ್ಲದೆ ಮಾನವ ಸಮೂಹ ಜೀವನದ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಲಾರ. ನವಜಾತ ಶಿಶುವಿಗೆ ಸಾಮಾಜಿಕ ಶಿಕ್ಷಣವನ್ನು ನೀಡಿ ಅದನ್ನು ಸಮೂಹ ಜೀವನಕ್ಕೆ ಅಣಿಗೊಳಿಸುವುದು ಸಾಮಾಜೀಕರಣದ ಪ್ರಮುಖ ಕಾರ್ಯವಾಗಿದೆ. ಮಾನವ ಸಾಮಾಜಿಕ ಜೀವಿಯಾಗಲು ಜ್ಞಾನ, ನಂಬಿಕೆ, ಅಭ್ಯಾಸಗಳು ಹಾಗೂ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಈ ಅಂಶಗಳನ್ನು ಅವನು ಈಗಾಗಲೇ ಪಡೆದವರಿಂದ ಸಂಪರ್ಕ ಹೊಂದುವ ಮೂಲಕ ಪಡೆಯಬಹುದಾಗಿದೆ. ಮಾನವ ಹುಟ್ಟಿನಿಂದ ಕೇವಲ ಒಂದು ಜೈವಿಕ ಪದಾರ್ಥ ಅದು ಕೇವಲ ಮಾಂಸದ ಮುದ್ದೆ, ನಿರಂತರ ಸಂಪರ್ಕ ಸಾಧನೆಯಿಂದ ಸಂಸ್ಕಾರವನ್ನು ಕಲಿಯಬೇಕು. ಇಲ್ಲದೆ ಹೋದರೆ ಅದು ನಿಜಮಾನವನಾಗಿ ಬಾಳಲು ಸಾಧ್ಯವಿಲ್ಲ. ಈ ಸಂಸ್ಕಾರ ಸಮಾಜದಿಂದಲೇ ಬರುವುದು ಎಂಬುದು ಕಮಲ, ಅಮಲ, ಅನ್ನಾ, ಇಸಬೆಲ್ಲಾ ಹಾಗೂ ಕ್ಯಾನ್ಸರ್ ಹೌಸರ್ ಪ್ರಕರಣಗಳಿಂದ ಸ್ಪಷ್ಟವಾಗಿದೆ.

2) ಸಾಮಾಜೀಕರಣವು ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿದೆ;

ಸಾಮಾಜೀಕರಣವು ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿದೆ. ವ್ಯಕ್ತಿತ್ವವೆಂಬುದು ಹುಟ್ಟಿನಿಂದ ಬರುವುದಿಲ್ಲ. ಅದನ್ನು ಪ್ರತಿಯೊಬ್ಬರೂ ಸಾಮಾಜಿಕ ಸಂಪರ್ಕದಿಂದ ಬೆಳೆಸಿಕೊಳ್ಳಬೇಕು. ಸಮೂಹ ಅಥವಾ ಸಮಾಜದ ಹೊರತಾಗಿ ಯಾರೂ ವ್ಯಕ್ತಿತ್ವವನ್ನು ಹೊಂದಲು ಸಾಧ್ಯವಿಲ್ಲ. ಅದೇ ರೀತಿಯಾಗಿ ಸಾಮಾಜೀಕರಣದ ಹೊರತಾಗಿ ವ್ಯಕ್ತಿತ್ವ ರೂಪುಗೊಳ್ಳುವುದಿಲ್ಲ. ಆದುದರಿಂದ ವ್ಯಕ್ತಿ ಸಮಾಜ ಹಾಗೂ ಸಂಸ್ಕೃತಿಗಳ ಸಂಪರ್ಕದಿಂದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾನೆ. ಇವೆಲ್ಲವೂ ಸಾಮಾಜೀಕರಣದಿಂದಲೇ ಬರುತ್ತದೆ. ಇದರ ಮೂಲಕವೇ ಮಾನವನಲ್ಲಿ ಉತ್ತಮ ಆಸೆ ಆಕಾಂಕ್ಷೆಗಳು, ಧ್ಯೇಯಧೋರಣೆಗಳು, ಜೀವನ ಮೌಲ್ಯಗಳು ಮೈಗೂಡಿ ಬರುತ್ತವೆ. ವ್ಯಕ್ತಿಯ ತಂದೆ, ತಾಯಿ, ಬಂಧು, ಬಳಗ, ಗುರು, ಹಿರಿಯರು, ಅಧಿಕಾರಿ, ಪ್ರಜೆ, ಆಡಳಿತಗಾರ ಮೊದಲಾದ ಯಾವುದೇ ಅಂತಸ್ತಿನಲ್ಲಿರುವ ಅದಕ್ಕೆ ಅವನು ತಕ್ಕ ಪಾತ್ರವಹಿಸಲು ಶಕ್ತನಾಗುತ್ತಾನೆ.

3) ಸಾಮಾಜೀಕರಣದಿಂದ ಶಿಸ್ತು ಮೂಡುತ್ತದೆ:

ಸಾಮಾಜೀಕರಣದ ಒಂದು ಕಲಿಕೆಯ ಪ್ರಕ್ರಿಯೆ. ಆದುದರಿಂದ ಆತ ಸಾಮಾಜೀಕರಣದಿಂದ ಶಿಸ್ತನ್ನು ಕಲಿಯುತ್ತಾನೆ. ಮೇಲಾಗಿ ವ್ಯಕ್ತಿಯು ಸಮಾಜದ ರೀತಿನೀತಿಗಳು, ರೂಢಿ ಸಂಪ್ರದಾಯಗಳು, ಆಚಾರವಿಚಾರಗಳನ್ನು ಪಡೆದುಕೊಳ್ಳುತ್ತಾನೆ. ಶಿಸ್ತು ಸಾಮಾಜಿಕ ವ್ಯವಸ್ಥೆಯ ಸೂಚಕ, ಅಶಿಸ್ತು ಅವ್ಯವಸ್ಥೆಯ ದ್ಯೋತಕ, ಶಿಸ್ತು ವ್ಯಕ್ತಿಯ ಬದುಕಿಗೆ ಪೂರಕ. ಆದುದರಿಂದ “ಶಿಸ್ತು” ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಹೀಗೆ ವ್ಯಕ್ತಿಯ ಶಿಸ್ತುಬದ್ಧನಾಗಿದ್ದರೆ ಸಮಾಜದಲ್ಲಿ ಕ್ರಮಬದ್ಧತೆ. ಸ್ಥಿರತೆ, ಭದ್ರತೆ ಹಾಗೂ ಸುವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ.

4) ಸಾಮಾಜೀಕರಣವು ಪಾತ್ರ ನಿರ್ವಹಣೆಯಲ್ಲಿ ಸಹಕಾರಿಯಾಗುವುದು:

ಪ್ರತಿಯೊಬ್ಬ ಮಾನವನೂ ತನ್ನ ಜೀವಮಾನದುದ್ದಕ್ಕೂ ಹಲವಾರು ಸಾಮಾಜಿಕ ಪಾತ್ರಗಳನ್ನು ನಿರ್ವಹಿಸುತ್ತಾನೆ. ಅದು ಹಲವು ರೀತಿಯ ನೀತಿ ನಿಯಮಗಳನ್ನು ಒಳಗೊಂಡಿರುತ್ತದೆ. ಈ ರೀತಿ ನಿಯಮಗಳನ್ನು ಅರಿತುಕೊಳ್ಳಲು ಹಾಗೂ ಪಾತ್ರ ನಿರ್ವಹಣೆಗೆ ಅಗತ್ಯವಾದ ಮನೋಭಾವನೆಗಳನ್ನು ಬೆಳೆಸಿಕೊಳ್ಳಲು ಸಾಮಾಜೀಕರಣವು ಸಹಕಾರಿಯಾಗಿದೆ. ಸ್ತ್ರೀ ಪುರುಷ ಎಂಬ ಲಿಂಗ ಅಂತಸ್ತು, ಜನಾಂಗ ಅಂತಸ್ತು, ಜಾತಿ ಅಂತಸ್ತು ಮೊದಲಾದವುಗಳ ಬಗೆಗಿನ ಪರಂಪರಾಗತ ಕಲ್ಪನೆಗಳ ಹಿಂದಿರುವ ಸತ್ಯಾಸತ್ಯತೆಗಳನ್ನು ಅರ್ಥಮಾಡಿಕೊಳ್ಳಲು ವೈಚಾರಿಕ, ವೈಜ್ಞಾನಿಕ ಮನೋಭಾವ, ಪ್ರಜಾಸತಾತ್ಮಕ ಮೌಲ್ಯಗಳನ್ನು ರೂಢಿಸಿಕೊಳ್ಳಲು ಪ್ರೇರೇಪಿಸುತ್ತದೆ.

5) ಸಾಮಾಜೀಕರಣವು ವಿವಿಧ ಕೌಶಲ್ಯಗಳ ಬಗ್ಗೆ ಜ್ಞಾನವನ್ನು ನೀಡುತ್ತದೆ:

ಸಾಮಾಜೀಕರಣದಿಂದ ಅನೇಕ ಕುಶಲತೆಗಳ ಪರಿಜ್ಞಾನವು ಲಭ್ಯವಾಗುವುದು. ಅದರಿಂದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಮೊದಲಾದ ಕ್ಷೇತ್ರಗಳಲ್ಲಿನ ಪಾತ್ರ ನಿರ್ವಹಣೆಗೆ ಅಗತ್ಯವಾದ ಜ್ಞಾನವನ್ನು ಸಾಮಾಜೀಕರಣ ನೀಡುತ್ತದೆ. ಅತ್ಯಂತ ಸರಳವಾದ ಕೆಲಸಗಳಾದ ಬಟ್ಟೆ ತೊಳೆಯುವುದು, ಸ್ನಾನಮಾಡುವುದು, ಹಲ್ಲುಜ್ಜುವುದು, ಪಾತ್ರೆ ತೊಳೆಯುವುದು, ಮನೆ ಶುದ್ಧವಾಗಿಟ್ಟುಕೊಳ್ಳುವುದರಿಂದ ಹಿಡಿದು ವಾಹನ ಓಡಿಸುವುದು, ಕಂಪ್ಯೂಟರ್ ಬಳಸುವುದು. ಯಂತ್ರಗಳನ್ನು ರಿಪೇರಿ ಮಾಡುವುದು. ವ್ಯಾಪಾರ ಮಾಡುವುದು ಮುಂತಾದ ಕಷ್ಟಮಯ ಕ್ರಿಯೆಗಳನ್ನು ಮಾಡುವುದನ್ನು ಸಾಮಾಜೀಕರಣದಿಂದ ಕಲಿಯಬಹುದು.

6) ಸಾಮಾಜೀಕರಣವು ಸರಿಯಾದ ಆಕಾಂಕ್ಷೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ.

ಸಾಮಾಜೀಕರಣವು ವ್ಯಕ್ತಿಯು ಸರಿಯಾದ ಆಕಾಂಕ್ಷೆಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಸಾಮಾಜೀಕರಣದಿಂದ ವ್ಯಕ್ತಿಯಲ್ಲಿ ಉತ್ತಮ ಆಸೆ ಆಕಾಂಕ್ಷೆಗಳು ಧ್ಯೇಯ ಧೋರಣೆಗಳು ಹಾಗೂ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಅನುವುಮಾಡಿಕೊಡುತ್ತದೆ. ಸಮಾಜದ ಹಿತಕ್ಕೆ ಮಾರಕವಾಗುವ ಆಸೆ ಆಕಾಂಕ್ಷೆಗಳನ್ನು ಕೈಬಿಟ್ಟು ಸಮಾಜದ ನಿರೀಕ್ಷೆಗೆ ಪ್ರತಿರೋಧಕವಲ್ಲದ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವಂತೆ ಪ್ರಚೋದಿಸುತ್ತದೆ. ವ್ಯಕ್ತಿಗಳ ಪ್ರವೃತ್ತಿ ಇಚ್ಛೆ ಹಾಗೂ ಸಮೂಹ ನಿರೀಕ್ಷೆ ಸಮಾಜ ಹಿತ ಇವುಗಳ ನಡುವೆ ಸಂಘರ್ಷ ಉಂಟಾದಾಗ ತಾನು ಪಡೆದ ಸಂಸ್ಕಾರ ಹಾಗೂ ಸಾಮಾಜಿಕ ಶಿಕ್ಷಣದ ಫಲವಾಗಿ ಆತ ಹೆಚ್ಚಿನ ಸಂದರ್ಭದಲ್ಲಿ ಸಮಾಜ ಹಿತಕ್ಕೆ ಅನುಸಾರವಾಗಿಯೇ ನಡೆದುಕೊಳ್ಳುತ್ತಾನೆ.

7) ಸಾಮಾಜೀಕರಣವು ಸಾಮಾಜಿಕ ಭದ್ರತೆಗೆ ಸಹಕಾರಿಯಾಗಿದೆ:

ಸಾಮಾಜೀಕರಣವು ಸಂಸ್ಕೃತಿಯ ಪರಂಪರೆಯ ಮುಂದುವರೆಯುವಿಕೆಗೆ ಸಹಾಯ ಮಾಡುತ್ತದೆ. ತನ್ಮೂಲಕ ಸಾಮಾಜಿಕ ಭದ್ರತೆ ಹಾಗೂ ಸ್ಥಿರತೆಯನ್ನು ತಂದು ಕೊಡುತ್ತದೆ. ಹೊಸ ಸಾಧನೆಗಳಿಗೆ ಅವಕಾಶ ಕಲ್ಪಿಸುತ್ತದೆ. ಸಮಾಜದ ಹಿತದಲ್ಲಿ ತನ್ನ ಹಿತವೂ ಅಡಗಿದೆ ಎಂಬುದನ್ನು ಅರ್ಥೈಸಿಕೊಡುತ್ತದೆ. ಬದುಕು- ಬದುಕಲು ಬಿಡು ಎಂಬ ಧೋರಣೆಯಿಂದ ನಡೆದುಕೊಳ್ಳಲು ಮನವರಿಕೆ ಮಾಡಿಕೊಡುತ್ತದೆ. ಕೊಲೆ, ಸುಲಿಗೆ, ದರೋಡೆ, ಕಳ್ಳತನ, ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರ, ಮುಂತಾದವುಗಳು ಸಮಾಜ ಬಾಹಿರವಾದವುಗಳು ಎಂಬುದನ್ನು ತಿಳಿಸಿಕೊಡುತ್ತದೆ. ರಾಷ್ಟ್ರಕ್ಕೆ ಗೌರವ ಸಲ್ಲಿಸುವುದು ಪ್ರಜೆಯ ಆದ್ಯ ಕರ್ತವ್ಯವೆಂದು, ತೆರಿಗೆ ನೀಡುವುದು ಸಾಮಾಜಿಕ ನ್ಯಾಯವೆಂದೂ, ರಸ್ತೆಯ ನಿಯಮ ಪಾಲಿಸದಿರುವುದು ಮಹಾಪಾಪವೆಂದೂ ಸಮಾಜೀಕರಣದಿಂದ ತಿಳಿಯಬಹುದು.

8) ಸಾಮಾಜೀಕರಣವು ಸಾಮಾಜಿಕ ಅಂತರವನ್ನು ಕಡಿಮೆ ಮಾಡುತ್ತದೆ:

ಭಾರತೀಯ ಸಮಾಜವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಸಮಾಜ. ಇದು ಹಲವಾರು ರೂಢಿ-ನಿಯಮಗಳು, ಲೋಕಾಚಾರಗಳು, ಸಂಪ್ರದಾಯ ಹಾಗೂ ಸಂಸ್ಕೃತಿಯ ಆಗರ. ಇಲ್ಲಿ ಹಲವಾರು ಜಾತಿ, ಮತ, ಪಂಗಡ, ಪಕ್ಷ, ಭಾಷೆ, ಪ್ರಾಂತ್ಯ ಮೊದಲಾದ ಸಮೂಹಗಳಿವೆ. ಈ ಬಗೆಯ ಸಮೂಹಗಳ ಜನರು ದ್ವೇಷ, ಅಸೂಯೆ, ಪೂರ್ವಾಗ್ರಹ ಪೀಡಿತರಾಗಿರಬಹುದಾದ ಸಂಭವನೀಯತೆ ಹೆಚ್ಚು. ಆದರೆ ಸಾಮಾಜೀಕರಣದ ಮುಖಾಂತರ ಸಮಾಜದ ವಿಭಿನ್ನ ಸಮೂಹಗಳ ನಡುವಿನ ಅಂತರವನ್ನು ತಗ್ಗಿಸಬಹುದಾಗಿದೆ.

9) ಸಾಮಾಜೀಕರಣವು ಭವ್ಯ ಭವಿಷ್ಯವನ್ನು ರೂಪಿಸಲು ಅವಕಾಶ ನೀಡುವುದು:

ಸಾಮಾಜೀಕರಣವು ಭವ್ಯ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಿದೆ. ಇದು ಸಮಾಜದ ಪ್ರಭಾವಿ ಸಾಧನವಾಗಿದೆ. ಕಿಂಗ್ಲಲೇ ಡೇವಿಸ್ ಹೇಳಿರುವಂತೆ ಸಾಮಾಜೀಕರಣವನ್ನು ಉತ್ತಮಗೊಳಿಸುವುದರಿಂದ ಮುಂಬರುವ ದಿನಗಳಲ್ಲಿ, ಮಾನವನ ಸ್ವಭಾವ ಮತ್ತು ಮಾನವ ಸಮಾಜಗಳನ್ನು ಮಾರ್ಪಡಿಸುವುದು ಸಾಧ್ಯವಿದೆ. ಹೊಸ ಪೀಳಿಗೆಗೆ ಯೋಜನಾ ಬದ್ಧವಾಗಿ ಮತ್ತು ವ್ಯವಸ್ಥಿತವಾಗಿ ಸಾಮಾಜಿಕ ಶಿಕ್ಷಣವನ್ನು ನೀಡುವುದರ ಮೂಲಕ ಭವಿಷ್ಯದಲ್ಲಿ ನಿರೀಕ್ಷಿತ ಮಾರ್ಪಾಡುಗಳನ್ನು ತರುವುದು ಸಾಧ್ಯವಾಗದ ಮಾತೇನಲ್ಲ.

10) ಸಾಮಾಜೀಕರಣವು ಸಂಸ್ಕೃತಿಯ ನಿರಂತರತೆಯ ಮುಂದುವರಿಕೆಗೆ ಸಹಾಯ ಮಾಡುತ್ತದೆ:

ಸಾಮಾಜೀಕರಣವು ಸಂಸ್ಕೃತಿಯ ಸತತ ಮುಂದುವರಿಕೆಗೆ ಸಹಾಯವಾಗಿದೆ. ಸಾಂಸ್ಕೃತಿಕ ಅಂಶಗಳಾದ ಆಚರಣೆಗಳು, ನಂಬಿಕೆಗಳು, ಮೌಲ್ಯಗಳು, ಆದರ್ಶಗಳು, ಭಾಷೆ, ಕೌಶಲ್ಯ ಮುಂತಾದವುಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಯವರೆಗೆ ಮುಂದುವರೆಯುವಂತೆ ಮಾಡುವುದೇ ಸಾಮಾಜೀಕರಣ.

ಉಪಸಂಹಾರ:

ಸಾಮಾಜೀಕರಣವು ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ವ್ಯಕ್ತಿಯ ಮಾನಸಿಕ, ನೈತಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಸಹಾಯಕವಾಗುವಂತೆ ಸಮಾಜದ ಮೌಲ್ಯಗಳು, ನಂಬಿಕೆಗಳು ಮತ್ತು ಆಚರಣೆಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಕುಟುಂಬ, ಶಾಲೆ, ಸ್ನೇಹಿತರು, ಮಾಧ್ಯಮ ಮತ್ತು ಸಮುದಾಯವು ಮುಖ್ಯವಾದ ಸಾಮಾಜೀಕರಣ ಏಜೆನ್ಸಿಗಳಾಗಿ ಕೆಲಸ ಮಾಡುತ್ತವೆ. ಸಾಮಾಜೀಕರಣದ ಮೂಲಕ ವ್ಯಕ್ತಿ ಸಮಾಜದಲ್ಲಿ ಹೇಗೆ ವರ್ತಿಸಬೇಕು, ಉತ್ತಮ ಬಾಂಧವ್ಯಗಳನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ಕಲಿಯುತ್ತಾನೆ. ಇದರಿಂದ ಸಾಮಾಜಿಕ ಸಾಮರಸ್ಯ ಹೆಚ್ಚುವುದು, ಸೌಹಾರ್ದತೆಯು ತಲೆಮಾರುಗಟ್ಟಲೆ ಸಾಗುವುದು. ಅಲ್ಲದೆ, ಪ್ರಜಾಪ್ರಭುತ್ವ ಮತ್ತು ಜವಾಬ್ದಾರಿಯುಳ್ಳ ನಾಗರಿಕತ್ವ ಬೆಳೆಸಲು ಇದು ಅಗತ್ಯವಾಗಿದೆ.

ಸಾಮಾಜೀಕರಣದ ಮಹತ್ವ ಅಥವಾ ಪ್ರಾಮುಖ್ಯತೆ

Importance of Socialization

Socialization plays a pivotal role in shaping individuals and fostering a harmonious society. This complex process not only transforms individuals into social beings but also embeds within them the values, beliefs, and knowledge necessary for a cohesive community. Here, we delve into ten key reasons why socialization is crucial for both personal development and societal stability.

1. Socialization Transforms Humans into Social Beings

Humans are not born with the qualities necessary for group life; instead, they acquire them through socialization. As a child interacts with others, they learn behaviors, beliefs, and values that are fundamental to participating in society. Cases like Kamala, Amala, and Anna—children who lacked early human contact—demonstrate how essential socialization is to cultivating human characteristics. Through socialization, individuals evolve from biological entities into social beings, learning the norms that allow them to engage meaningfully with others.

2. Personality Development through Socialization

Personality is not an innate trait but a developed attribute, and socialization is key to its formation. Interacting with society imbues individuals with the characteristics that shape personality, from moral values to personal aspirations. Socialization enables one to take on various roles, such as family member, professional, or citizen. In these interactions, people cultivate values that contribute to their personal and social identities, allowing them to relate better within the larger framework of society.

3. Discipline and Order Stemming from Socialization

Discipline is an outcome of learning societal rules, norms, and practices through socialization. A disciplined individual contributes to social order, while indiscipline leads to societal chaos. By instilling discipline, socialization helps people respect social boundaries and rules, which in turn fosters stability and security. This structure not only enables personal success but also reinforces a well-ordered society, facilitating mutual respect and peaceful coexistence.

4. Development of Social Roles and Rational Attitudes

Throughout life, individuals assume various social roles that require distinct ethics and behaviors. Socialization imparts the attitudes necessary to perform these roles responsibly, challenging traditional biases and inspiring a rational, democratic perspective on issues like gender, race, and caste. This process encourages individuals to adopt progressive views, contributing to a more equitable society where roles are defined by personal merit rather than by stereotypes.

5. Knowledge Acquisition and Skill Development

Socialization is fundamental to acquiring a wide range of skills, from basic life skills to complex professional competencies. Through social interaction, individuals learn the practical knowledge required for social, cultural, and economic participation. Socialization imparts skills that range from daily tasks like personal hygiene and household management to specialized activities like operating technology and conducting business, making individuals more self-reliant and capable members of society.

6. Fostering Right Aspirations and Moral Values

Socialization aids individuals in developing aspirations that align with social welfare. As people internalize societal expectations, they become more inclined to pursue aspirations that support community harmony. When personal desires conflict with societal norms, socialization helps individuals choose actions that benefit society as a whole, promoting a balance between self-interest and social good.

7. Social Security through Cultural Continuity

Socialization preserves cultural heritage, which in turn fosters social security and stability. By passing down cultural practices, values, and norms from one generation to the next, socialization enables societies to uphold traditions while making room for new achievements. This shared cultural foundation unites individuals under a common identity and encourages behaviors that uphold social stability and communal respect.

8. Bridging Social Gaps

India, with its diverse social structure, faces challenges of prejudice and discrimination across caste, creed, language, and region. Socialization can play a significant role in reducing these social distances. By fostering understanding and mutual respect, socialization diminishes prejudices, building a sense of unity amidst diversity and encouraging individuals to appreciate the varied backgrounds within society.

9. Socialization as a Path to a Brighter Future

Socialization is a powerful societal tool for shaping a prosperous future. As Kingsley Davis notes, by refining socialization practices, societies can transform human nature and promote positive changes. By imparting systematic social education, society can cultivate a new generation capable of tackling the unique challenges of tomorrow, paving the way for more enlightened communities.

10. Cultural Continuity through Socialization

Socialization ensures the continuation of culture by transmitting essential cultural elements—like beliefs, practices, language, and ideals—across generations. This continuity strengthens society’s cultural fabric, preserving identity and fostering a shared sense of belonging. By socializing each generation, society secures its values and traditions while adapting to the changing world, enabling a harmonious balance between heritage and innovation.

Conclusion

Socialization is integral to the personal growth of individuals and the stability of society. It empowers people with the knowledge, skills, and values necessary to lead fulfilling lives within a larger community, building a more connected, disciplined, and forward-looking society.

ಸಾರ್ವಭೌಮತ್ವದ ವಿಧಗಳು

ಸಾರ್ವಭೌಮತ್ವದ ವಿಧಗಳು

ಸಾರ್ವಭೌಮತ್ವವು ರಾಜ್ಯದಲ್ಲಿ ಇರುವ ಅಂತಿಮ ಅಧಿಕಾರ ಅಥವಾ ಅಧಿಕಾರವನ್ನು ಸೂಚಿಸುತ್ತದೆ. ವಿವಿಧ ರೀತಿಯ ಸಾರ್ವಭೌಮತ್ವವು ಇತಿಹಾಸದುದ್ದಕ್ಕೂ ವಿಕಸನಗೊಂಡಿದೆ, ಪ್ರತಿಯೊಂದೂ ಅನನ್ಯ ರಾಜಕೀಯ ರಚನೆಗಳು ಮತ್ತು ತತ್ತ್ವಚಿಂತನೆಗಳನ್ನು ಪ್ರತಿಬಿಂಬಿಸುತ್ತದೆ. ಈ ಲೇಖನದಲ್ಲಿ , ನಾವು ಮೂರು ಮಹತ್ವದ ಸಾರ್ವಭೌಮತ್ವವನ್ನು ಅನ್ವೇಷಿಸುತ್ತೇವೆ: ಕಾನೂನು ಸಾರ್ವಭೌಮತ್ವ, ರಾಜಕೀಯ ಸಾರ್ವಭೌಮತ್ವ ಮತ್ತು ಜನತಾ ಸಾರ್ವಭೌಮ (ಅಥವಾ ಜನರ ಸಾರ್ವಭೌಮತ್ವ). ಹೆಚ್ಚುವರಿಯಾಗಿ, ಸಾರ್ವಭೌಮತ್ವದ ಸ್ಥಳೀಕರಣಕ್ಕೆ ಸಂಬಂಧಿಸಿದ ಸಂಕೀರ್ಣತೆಗಳನ್ನು ನಾವು ತಿಳಿಸುತ್ತೇವೆ.

1. ಕಾನೂನು ಸಾರ್ವಭೌಮತ್ವ

ಕಾನೂನು ಸಾರ್ವಭೌಮತ್ವವನ್ನು ಶಾಸಕಾಂಗ ಸಾರ್ವಭೌಮತ್ವ ಎಂದೂ ಕರೆಯುತ್ತಾರೆ, ಕಾನೂನುಗಳನ್ನು ಮಾಡುವ ಮತ್ತು ಜಾರಿಗೊಳಿಸುವ ಅಧಿಕಾರವನ್ನು ಸೂಚಿಸುತ್ತದೆ. ಇದು ಕಾನೂನು ಶಾಸನಗಳು ಅಥವಾ ಶಾಸನವನ್ನು ರೂಪಿಸುವ ಸರ್ವೋಚ್ಚ ಅಧಿಕಾರವನ್ನು ಹೊಂದಿರುವ ಸಂಸ್ಥೆಗಳು ಅಥವಾ ವ್ಯಕ್ತಿಗಳಲ್ಲಿ ವಾಸಿಸುತ್ತದೆ. ಈ ರೀತಿಯ ಸಾರ್ವಭೌಮತ್ವವು ಅದರ ಡೊಮೇನ್‌ನೊಳಗೆ ಸಂಪೂರ್ಣ ಮತ್ತು ಅನಿಯಂತ್ರಿತವಾಗಿದೆ, ಇದು ರಾಜ್ಯದ ಅಂತಿಮ ಕಾನೂನು ಶಕ್ತಿಯನ್ನು ಪ್ರತಿನಿಧಿಸುತ್ತದೆ.

ಕಾನೂನು ಸಾರ್ವಭೌಮತ್ವದ ಗುಣಲಕ್ಷಣಗಳು:

ಸ್ಪಷ್ಟವಾಗಿ ಗೋಚರಿಸುತ್ತದೆ: ಕಾನೂನು ಸಾರ್ವಭೌಮತ್ವವನ್ನು ಹೆಚ್ಚಾಗಿ ಉತ್ತಮವಾಗಿ ವ್ಯಾಖ್ಯಾನಿಸಲಾಗಿದೆ ಮತ್ತು ಸ್ಪಷ್ಟವಾಗಿರುತ್ತದೆ.

ಸಂಸ್ಥೆ ಆಧಾರಿತ: ಇದು ಒಬ್ಬ ವ್ಯಕ್ತಿ ಅಥವಾ ರಾಜ್ಯವನ್ನು ಪ್ರತಿನಿಧಿಸುವ ಸಂಸ್ಥೆಯಲ್ಲಿದೆ.

ದಂಡನಾತ್ಮಕ ಅಧಿಕಾರ: ಕಾನೂನನ್ನು ಉಲ್ಲಂಘಿಸುವವರು ಕಾನೂನು ಪರಿಣಾಮಗಳಿಗೆ ಒಳಪಟ್ಟಿರುತ್ತಾರೆ.

ಸರ್ವೋಚ್ಚ ಅಧಿಕಾರ: ಸರಿಯಾದ ಶಾಸಕಾಂಗ ಕ್ರಮವಿಲ್ಲದೆ ಕಾನೂನು ಸಾರ್ವಭೌಮತ್ವದಿಂದ ರಚಿಸಲಾದ ಕಾನೂನು ಬದಲಾಗುವುದಿಲ್ಲ.

ಅನಿಯಮಿತ ಶಕ್ತಿ: ದೇಶೀಯ ಮತ್ತು ಅಂತರರಾಷ್ಟ್ರೀಯ ವಿಷಯಗಳಲ್ಲಿ ಕಾನೂನು ಸಾರ್ವಭೌಮತ್ವವು ಅಂತಿಮ ಮತ್ತು ಅಂತಿಮ ಅಧಿಕಾರವಾಗಿದೆ.

ಉದಾಹರಣೆ: ಬ್ರಿಟನ್‌ನ ಕಿಂಗ್-ಇನ್-ಪಾರ್ಲಿಮೆಂಟ್ ಪರಿಕಲ್ಪನೆಯು ಕಾನೂನು ಸಾರ್ವಭೌಮತ್ವದ ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಸಂಸತ್ತು ಪರಿಣಾಮಕಾರಿಯಾಗುವ ಮೊದಲು ಅವರು ಅಂಗೀಕರಿಸಿದ ಕಾನೂನುಗಳನ್ನು ರಾಜನು ಅನುಮೋದಿಸಬೇಕು ಮತ್ತು ಒಮ್ಮೆ ಅನುಮೋದನೆ ನೀಡಿದ ನಂತರ ಯಾರೂ ಅವುಗಳನ್ನು ಉಲ್ಲಂಘಿಸಲಾಗುವುದಿಲ್ಲ.

2. ರಾಜಕೀಯ ಸಾರ್ವಭೌಮತ್ವ

ರಾಜಕೀಯ ಸಾರ್ವಭೌಮತ್ವವು ಜನರು ಅಥವಾ ಮತದಾರರ ಇಚ್ by ೆಯಿಂದ ಪಡೆದ ಅಧಿಕಾರವಾಗಿದೆ. ಇದು ಕಾನೂನು ಸಾರ್ವಭೌಮತ್ವಕ್ಕಿಂತ ಕಡಿಮೆ formal ಪಚಾರಿಕವಾಗಿದೆ ಆದರೆ ಪ್ರಜಾಪ್ರಭುತ್ವ ಸಮಾಜಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ರಾಜಕೀಯ ಸಾರ್ವಭೌಮತ್ವವನ್ನು ಕಾನೂನಿನ ಹಿಂದಿನ ಶಕ್ತಿ ಎಂದು ವಿವರಿಸಬಹುದು, ಏಕೆಂದರೆ ಇದು ಕಾನೂನು ಅಧಿಕಾರಕ್ಕೆ ಆಧಾರವಾಗಿರುವ ರಾಜಕೀಯ ಇಚ್ will ೆಯನ್ನು ಪ್ರತಿಬಿಂಬಿಸುತ್ತದೆ.

ರಾಜಕೀಯ ಸಾರ್ವಭೌಮತ್ವದ ಗುಣಲಕ್ಷಣಗಳು:

ಕಾನೂನು ಸಾರ್ವಭೌಮತ್ವಕ್ಕೆ ಪೂರಕ: ರಾಜಕೀಯ ಸಾರ್ವಭೌಮತ್ವವು ಕಾನೂನು ಸಾರ್ವಭೌಮತ್ವದೊಂದಿಗೆ ಕೈಯಲ್ಲಿ ಕೆಲಸ ಮಾಡುತ್ತದೆ ಆದರೆ ನೇರವಾಗಿ ಕಾನೂನುಗಳನ್ನು ಮಾಡುವುದಿಲ್ಲ.

ಪ್ರಸರಣ ಮತ್ತು ಅಸ್ಪಷ್ಟ: ಕಾನೂನು ಸಾರ್ವಭೌಮತ್ವಕ್ಕಿಂತ ಭಿನ್ನವಾಗಿ, ರಾಜಕೀಯ ಸಾರ್ವಭೌಮತ್ವವು ನಿರ್ದಿಷ್ಟ ಅಥವಾ ಗೋಚರಿಸುವುದಿಲ್ಲ.

ಮತದಾರರ ಕೇಂದ್ರಿತ: ಇದು ಮತದಾರರೊಂದಿಗೆ ವಾಸಿಸುತ್ತದೆ, ಅವರು ಮತದಾನದ ಮೂಲಕ ಕಾನೂನು ಮತ್ತು ರಾಜಕೀಯ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಾರೆ.

ಕಾನೂನು ಸ್ಥಿತಿ ಇಲ್ಲ: ರಾಜಕೀಯ ಸಾರ್ವಭೌಮತ್ವವು ಕಾನೂನು ತೂಕವನ್ನು ಸ್ವತಃ ಒಯ್ಯುವುದಿಲ್ಲ ಆದರೆ ಕಾನೂನುಗಳ ಸೂತ್ರೀಕರಣದ ಮೇಲೆ ಪರಿಣಾಮ ಬೀರುತ್ತದೆ.

ಉದಾಹರಣೆ: ಪ್ರಜಾಪ್ರಭುತ್ವ ದೇಶಗಳಲ್ಲಿ, ಮತದಾರರು ಕಾನೂನುಗಳನ್ನು ಮಾಡುವ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಶಾಸಕಾಂಗ ಸಂಸ್ಥೆಗಳು ಕಾನೂನುಬದ್ಧ ಸಾರ್ವಭೌಮತ್ವವನ್ನು ಹೊಂದಿದ್ದರೂ, ಅವರ ಅಧಿಕಾರವು ಜನರ ರಾಜಕೀಯ ಸಾರ್ವಭೌಮತ್ವದಿಂದ ಹುಟ್ಟಿಕೊಂಡಿದೆ.

3. ಜನತಾ ಸಾರ್ವಭೌಮ (ಜನರ ಸಾರ್ವಭೌಮತ್ವ)

ಜನತಾ ಸಾರ್ವಭೌಮ, ಅಥವಾ ಜನರ ಸಾರ್ವಭೌಮತ್ವ, ಅಂತಿಮ ಅಧಿಕಾರವು ರಾಜ್ಯದ ಜನರೊಂದಿಗೆ ಇರುತ್ತದೆ ಎಂಬ ಕಲ್ಪನೆ. ಈ ಪರಿಕಲ್ಪನೆಯು ಸಾಮಾಜಿಕ ಗುತ್ತಿಗೆ ಸಿದ್ಧಾಂತಗಳಲ್ಲಿ ಬೇರುಗಳನ್ನು ಹೊಂದಿದೆ ಮತ್ತು 16 ಮತ್ತು 17 ನೇ ಶತಮಾನಗಳಲ್ಲಿ ವಿಶೇಷವಾಗಿ ಪ್ರಮುಖವಾಯಿತು. ಜೀನ್-ಜಾಕ್ವೆಸ್ ರೂಸೋ ಅವರಂತಹ ಚಿಂತಕರು ಸಾರ್ವಭೌಮತ್ವವನ್ನು ಜನರ ಸಾಮೂಹಿಕ ಇಚ್ will ೆಯಿಂದ ಪಡೆಯಲಾಗಿದೆ ಎಂದು ವಾದಿಸಿದರು, ಇದನ್ನು ಜನರಲ್ ವಿಲ್ ಎಂದು ಕರೆಯಲಾಗುತ್ತದೆ.

ಜನತಾ ಸಾರ್ವಭೌಮನ ಗುಣಲಕ್ಷಣಗಳು:

ಜನರು ಕೇಂದ್ರಿತ: ಜನರ ಹಿತಾಸಕ್ತಿಗಳನ್ನು ಪೂರೈಸಲು ಸರ್ಕಾರ ಅಸ್ತಿತ್ವದಲ್ಲಿದೆ.

ಕ್ರಾಂತಿಕಾರಿ ಸಾಮರ್ಥ್ಯ: ಜನರ ಇಚ್ will ೆಯನ್ನು ಸರ್ಕಾರ ನಿರ್ಲಕ್ಷಿಸಿದರೆ, ಅದು ದಂಗೆಗೆ ಕಾರಣವಾಗಬಹುದು.

ಸಾರ್ವಜನಿಕ ಅಭಿಪ್ರಾಯವು ಒಂದು ಸಾಧನವಾಗಿ: ಜನರು ಚುನಾವಣೆಗಳು, ಜನಾಭಿಪ್ರಾಯ ಸಂಗ್ರಹಣೆ ಮತ್ತು ಸಾರ್ವಜನಿಕ ಪ್ರವಚನದ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.

ಸರ್ಕಾರದ ಹೊಣೆಗಾರಿಕೆ: ಆವರ್ತಕ ಚುನಾವಣೆಗಳ ಮೂಲಕ ಸರ್ಕಾರಗಳು ಜನರಿಗೆ ಉತ್ತರಿಸಬೇಕು.

ಅಲ್ಟಿಮೇಟ್ ಪವರ್: ಪ್ರಜಾಪ್ರಭುತ್ವದಲ್ಲಿ, ಜನರು ಅಂತಿಮವಾಗಿ ಸರ್ಕಾರವನ್ನು ಮತದಾನದ ಮೂಲಕ ನಿಯಂತ್ರಿಸುತ್ತಾರೆ.

ಉದಾಹರಣೆ: ಅಮೆರಿಕದ ಸ್ವಾತಂತ್ರ್ಯ ಘೋಷಣೆಯು ಈ ಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ, ಸರ್ಕಾರಗಳು ತಮ್ಮ ಅಧಿಕಾರವನ್ನು ಆಡಳಿತದ ಒಪ್ಪಿಗೆಯಿಂದ ಪಡೆಯುತ್ತವೆ ಎಂದು ಹೇಳುತ್ತದೆ.

ಸಾರ್ವಭೌಮತ್ವದ ಸ್ಥಳೀಕರಣ

ರಾಜಕೀಯ ಸಿದ್ಧಾಂತದ ಪ್ರಮುಖ ವಿಷಯವೆಂದರೆ ಸಾರ್ವಭೌಮತ್ವವು ವಾಸಿಸುತ್ತದೆ. ಇದು ರಾಜ್ಯ, ಜನರು ಅಥವಾ ನಿರ್ದಿಷ್ಟ ಸಂಸ್ಥೆಯಲ್ಲಿದೆ? ಕಾಲಾನಂತರದಲ್ಲಿ, ವಿಭಿನ್ನ ಉತ್ತರಗಳು ಹೊರಹೊಮ್ಮಿವೆ.

1. ರಾಜ್ಯದಲ್ಲಿ: ಸಾರ್ವಭೌಮತ್ವವು ರಾಜ್ಯದೊಳಗಿನ ಒಂದು ಅಮೂರ್ತ ಶಕ್ತಿಯಾಗಿದೆ ಎಂದು ಕೆಲವರು ವಾದಿಸುತ್ತಾರೆ, ಇದನ್ನು ಸಂಸ್ಥೆಗಳು ಮತ್ತು ಅಧಿಕಾರವನ್ನು ಚಲಾಯಿಸುವ ವ್ಯಕ್ತಿಗಳು ಪ್ರತಿನಿಧಿಸುತ್ತಾರೆ.

2. ಆಡಳಿತಗಾರನಲ್ಲಿ: ರಾಜಪ್ರಭುತ್ವಗಳಲ್ಲಿ, ಸಾರ್ವಭೌಮತ್ವವು ಆಡಳಿತಗಾರನಲ್ಲಿ ವಾಸಿಸುತ್ತದೆ ಎಂದು ಹೇಳಲಾಗುತ್ತದೆ (ಉದಾ., ಫ್ರಾನ್ಸ್‌ನ ಪ್ರಸಿದ್ಧ ಹೇಳಿಕೆಯ ಲೂಯಿಸ್ XIV “ನಾನು ರಾಜ್ಯ”).

3. ಶಾಸಕಾಂಗ ಸಂಸ್ಥೆಗಳಲ್ಲಿ: ಅನೇಕ ಆಧುನಿಕ ಪ್ರಜಾಪ್ರಭುತ್ವಗಳು ಶಾಸಕಾಂಗ ಸಂಸ್ಥೆಗಳಲ್ಲಿ ಸಾರ್ವಭೌಮತ್ವವನ್ನು ಇಡುತ್ತವೆ, ಇದು ಕಾನೂನುಗಳನ್ನು ರಚಿಸುವ ಮತ್ತು ಜಾರಿಗೊಳಿಸುವ ಅಧಿಕಾರವನ್ನು ಹೊಂದಿದೆ.

4. ಜನರಲ್ಲಿ: ಪ್ರಜಾಪ್ರಭುತ್ವಗಳಲ್ಲಿ, ಸಾರ್ವಭೌಮತ್ವವು ಜನರಲ್ಲಿದೆ, ಅವರು ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ ಮತ್ತು ರಾಜಕೀಯ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಾರೆ.

5. ಸಂವಿಧಾನದಲ್ಲಿ: ಸಾಂವಿಧಾನಿಕ ಸಾರ್ವಭೌಮತ್ವವು ರಾಜ್ಯದೊಳಗಿನ ಎಲ್ಲಾ ಕ್ರಮಗಳನ್ನು ಸಂವಿಧಾನದಿಂದ ನಿಯಂತ್ರಿಸುತ್ತದೆ ಎಂದು ಸೂಚಿಸುತ್ತದೆ, ಇದು ಎಲ್ಲಾ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಅಧಿಕಾರದ ಮಿತಿಗಳನ್ನು ವ್ಯಾಖ್ಯಾನಿಸುತ್ತದೆ.

ಉಪಸಂಹಾರ

ಸಾರ್ವಭೌಮತ್ವವು ಬಹು ಆಯಾಮದ ಪರಿಕಲ್ಪನೆಯಾಗಿದ್ದು ಅದು ವಿವಿಧ ರಾಜಕೀಯ ವ್ಯವಸ್ಥೆಗಳಲ್ಲಿ ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ. ಕಾನೂನು ಸಾರ್ವಭೌಮತ್ವ, ರಾಜಕೀಯ ಸಾರ್ವಭೌಮತ್ವ ಮತ್ತು ಜನತಾ ಸಾರ್ವಭೌಮರು ರಾಜ್ಯದೊಳಗೆ ಅಂತಿಮ ಶಕ್ತಿ ಎಲ್ಲಿ ವಾಸಿಸುತ್ತಾರೆ ಎಂಬ ವಿಕಾಸದ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ, ಸಾರ್ವಭೌಮತ್ವದ ಸ್ಥಳೀಕರಣವು ಕಾನೂನು ಅಧಿಕಾರ, ರಾಜಕೀಯ ಶಕ್ತಿ ಮತ್ತು ಜನರ ಇಚ್ಚೆ ಮತ್ತು will ಗಳ ನಡುವಿನ ಕ್ರಿಯಾತ್ಮಕ ಪರಸ್ಪರ ಕ್ರಿಯೆಯಾಗುತ್ತದೆ. ಈ ರೀತಿಯ ಸಾರ್ವಭೌಮತ್ವವನ್ನು ಅರ್ಥಮಾಡಿಕೊಳ್ಳುವುದು ಆಧುನಿಕ ರಾಜ್ಯಗಳಲ್ಲಿ ಆಡಳಿತದ ರಚನೆ ಮತ್ತು ಕಾರ್ಯವನ್ನು ಸ್ಪಷ್ಟಪಡಿಸಲು ಸಹಾಯ ಮಾಡುತ್ತದೆ.

ಸಾರ್ವಭೌಮತ್ವದ ವಿಧಗಳು

Theories of Sovereignty

Monistic vs. Pluralistic Approaches

Sovereignty is a core concept in political theory, shaping how states exercise power and authority. Over the centuries, scholars have debated the nature and location of sovereignty, leading to two primary schools of thought: the Monistic Theory of Sovereignty and the Pluralistic Theory of Sovereignty. These two theories explore different ideas on who holds ultimate authority within a political community.

1. Monistic Theory of Sovereignty

1. The Monistic Theory of Sovereignty, also known as the Traditional Theory or Legal Theory of Sovereignty, holds that sovereignty is absolute and resides in one central authority. This view has been widely supported by thinkers like Jean Bodin, Thomas Hobbes, John Locke, Rousseau, Bentham, and John Austin.

According to this theory, the state holds supreme power. Austin, a key proponent, argued that sovereignty is the command of the highest authority, to which all other members of society must submit. His works, particularly the Lectures on Jurisprudence (1832), emphasized that the sovereign’s power is absolute, binding, and indivisible.

Key Points of Monistic Sovereignty:

Supreme Authority: A single person or group holds the power to make, enforce, and revoke laws. Sovereignty is centralized in one authority.

Indivisibility: Sovereignty cannot be divided among different entities; it remains with the state or the governing authority.

Arbitrary and Absolute: The sovereign power is uncontrolled and has absolute authority over the state and its citizens.

Laws as Commands: Laws are seen as the commands of the sovereign, and failure to obey these commands can result in punishment.

Eternal and Permanent: Sovereignty is considered a constant and unchallengeable authority.

For Austin, sovereignty had to be seen from a scientific perspective. His analysis portrayed sovereignty as something that stems from a recognized authority in society, which governs without needing the consent of the governed once in power.

2. Pluralistic Theory of Sovereignty

The Pluralistic Theory of Sovereignty emerged as a counter to the monistic approach. Thinkers like H.J. Laski, G.D.H. Cole, and Ernest Barker argued that sovereignty is not exclusive to the state. Instead, it is shared among various organizations, institutions, and groups that form part of the broader societal structure.

This theory acknowledges that power exists not just within the government but also in other social organizations—religious bodies, labor unions, professional associations, and more. Lion Duguit and others in this tradition proposed that focusing sovereignty solely on the state is an oversimplification and that real power is distributed across multiple centers in society.

Key Points of Pluralistic Sovereignty:

Decentralized Power: Sovereignty is dispersed among various institutions, not concentrated solely in the state.

Social Groups as Power Centers: Sovereignty is shared by different social organizations like churches, trade unions, and communities, each of which has its influence and authority.

Limitations on State Authority: The state is not the only source of legal and moral authority. It operates alongside other organizations that hold legitimate power.

Focus on Cooperation: In pluralism, power is seen as cooperative rather than coercive. Society functions as a network of groups that balance and check each other’s authority.

Flexibility in Authority: Unlike monistic sovereignty, pluralistic theory allows for flexible authority structures where power can shift and adapt to societal needs.

Comparing the Two Theories

The Monistic Theory views sovereignty as an unchallengeable, indivisible power residing in the state. It stresses the centralization of authority and the legalistic nature of governance. In contrast, the Pluralistic Theory breaks this monopoly, arguing that sovereignty is spread across various institutions, making society more democratic and decentralized. While the Monistic Theory supports the supremacy of the state, the Pluralistic Theory recognizes the existence of multiple power sources within a society.

Conclusion

Both the Monistic and Pluralistic Theories of Sovereignty offer valuable insights into how power and authority operate within political systems. While the Monistic Theory emphasizes the centrality and absoluteness of state power, the Pluralistic Theory provides a more flexible and nuanced understanding of sovereignty, seeing it as shared across various social institutions. These theories have shaped modern political thought, influencing how we view the relationship between state power and the diverse groups that make up a society. Understanding these theories helps clarify the ongoing debates about the nature of political authority in both historical and contemporary contexts.

ಅರ್ಥಶಾಸ್ತ್ರದ ವ್ಯಾಖ್ಯೆಗಳು

ಅರ್ಥಶಾಸ್ತ್ರದ ವ್ಯಾಖ್ಯೆಗಳು

ಅರ್ಥಶಾಸ್ತ್ರವು ಸಾಮಾಜಿಕ ವಿಜ್ಞಾನಗಳಲ್ಲೇ ಅತ್ಯಂತ ಪ್ರಮುಖ ವಿಜ್ಞಾನವಾಗಿ ಸಾಮಾಜಿಕ ವಿಜ್ಞಾನಗಳ ರಾಣಿ ಎಂದು ಕರೆಸಿಕೊಂಡಿದೆ. ಶ್ರೀಮತಿ ಬಾರ್ಬರಾ ವ್ಯೂಟನ್ ಎಂಬ ಅರ್ಥಶಾಸ್ತ್ರಜ್ಞರು ಅರ್ಥಶಾಸ್ತ್ರದ ಪ್ರಾಮುಖ್ಯತೆಯನ್ನು ವಿವರಿಸುತ್ತಾ ನಿಮಗೆ ಸ್ವಲ್ಪವೇ ಸ್ವಲ್ಪವಾದರೂ ಅರ್ಥಶಾಸ್ತ್ರದ ಜ್ಞಾನ ಇರದೇ ಹೋದರೆ ನೀವು ನಿಜವಾದ ನಾಗರೀಕರಾಗಲಾರಿರಿ ಎಂದು ಹೇಳಿದ್ದಾರೆ. ಅರ್ಥಶಾಸ್ತ್ರದ ಅಧ್ಯಯನವು ಕೇವಲ ಜ್ಞಾನದಾಯಕವಲ್ಲದೆ ಫಲದಾಯಕವೂ ಆಗಿದೆ ಎಂದು ಪ್ರೊ.ಎ.ಸಿ.ಪಿಗು ಎಂಬ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಅರ್ಥಶಾಸ್ತ್ರದ ಹುಟ್ಟು

“ಎಕನಾಮಿಕ್ಸ್‌” ಎಂಬ ಪದವನ್ನು ಗ್ರೀಕ್ ಭಾಷೆಯ ʻʻಇಕೋಸ್” ಮತ್ತು “ನೋಮಸ್” ಎಂಬ ಎರಡು ಪದಗಳಿಂದ ಪಡೆಯಲಾಗಿದೆ. ಗ್ರೀಕ್ ಭಾಷೆಯಲ್ಲಿ ʻʻಇಕೋಸ್” ಎಂದರೆ ಮನೆ ಎಂತಲೂ, “ನೋಮಸ್” ಎಂದರೆ ನಿರ್ವಹಣೆ ಎಂಬ ಅರ್ಥವುಂಟು. ಆದ್ದರಿಂದ ಗ್ರೀಕ್ ಮೂಲದ ಪ್ರಕಾರ ಏಕನಾಮಿಕ್ಸ್‌ ಅಥವಾ ಎಕೋನೋಮಿಯಾ ಎಂದರೆ “ಗೃಹ ಕೃತ್ಯ ನಿರ್ವಹಣೆ” ಅಥವಾ ಲಭ್ಯವಿರುವ ಮಿತವಾದ ಸಂಪನ್ಮೂಲಗಳನ್ನು ದಕ್ಷವಾಗಿ ಬಳಸಿಕೊಂಡು ಕುಟುಂಬವನ್ನು ನಿರ್ವಹಿಸುವುದು ಎನ್ನುವ ಅರ್ಥ ಬರುತ್ತದೆ. ಕ್ರಿಸ್ತ ಪೂರ್ವದಲ್ಲಿ ಗ್ರೀಕರ ಕಾಲದಿಂದ ತೀರ ಇತ್ತೀಚಿನವರೆಗೆ ಅಂದರೆ ಕ್ರಿ.ಶ. 1890ರ ವರೆಗೂ ಅರ್ಥಶಾಸ್ತ್ರವು ರಾಜನೀತಿ ಶಾಸ್ತ್ರದ ಭಾಗವಾಗಿ ʻʻರಾಜನೀತಿ ಅರ್ಥಶಾಸ್ತ್ರ” ಎಂದು ಕರೆಯಿಸಿಕೊಂಡಿತ್ತು.

ಕ್ರಿ.ಶ. 1890 ರಲ್ಲಿ ಪ್ರೋ. ಆಲ್ ಫ್ರೆಡ್ ಮಾರ್ಷಲ್ ರವರು ತಮ್ಮ “ಪ್ರಿನ್ಸಿಪಲ್ಸ್ ಆಫ್ ಎಕನಾಮಿಕ್ಸ್” ಎಂಬ ಗ್ರಂಥದಲ್ಲಿ ಅರ್ಥಶಾಸ್ತ್ರ ಎಂಬ ಪದನಾಮವನ್ನು ಸ್ವತಂತ್ರವಾಗಿ ಬಳಸಿದರು. ಅರ್ಥಶಾಸ್ತ್ರವನ್ನು ಬೇರೆಲ್ಲ ಸಾಮಾಜಿಕ ವಿಜ್ಞಾನಗಳಿಂದ ಬೇರ್ಪಡಿಸಿ ಒಂದು ಸ್ವತಂತ್ರ ಶಾಖೆಯನ್ನಾಗಿ ಮಾಡಿದ ಕೀರ್ತಿಯು ಮಾರ್ಷಲ್ ಅವರಿಗೆ ಸಲ್ಲುತ್ತದೆ.

ಅರ್ಥಶಾಸ್ತ್ರದ ವ್ಯಾಖ್ಯೆಗಳು.

ಅರ್ಥಶಾಸ್ತ್ರಕ್ಕೆ ಹಲವಾರು ಶತಮಾನಗಳ ಇತಿಹಾಸವಿದ್ದು ಒಂದು ಪ್ರಮುಖ ಸಾಮಾಜಿಕ ವಿಜ್ಞಾನವಾಗಿದ್ದರೂ, ಇದಕ್ಕೆ ಒಂದು ಖಚಿತವಾದ ವ್ಯಾಖ್ಯೆ ಲಭ್ಯವಿಲ್ಲವೆಂದೇ ಹೇಳಬಹುದು. ಇಂತಹ ಪರಿಸ್ಥಿತಿಗೆ ಅರ್ಥಶಾಸ್ತ್ರದ ಸ್ವರೂಪ ಮತ್ತು ವ್ಯಾಪ್ತಿ ಹಾಗೂ ಅರ್ಥಶಾಸ್ತ್ರಜ್ಞರಲ್ಲಿರುವ ಭಿನ್ನಾಭಿಪ್ರಾಯಗಳೇ ಕಾರಣವೆಂದು ಹೇಳಬಹುದು. ಶ್ರೀಮತಿ ಬಾರ್ಬರ್ ವ್ಯೂಟನ್ ಎಂಬ ಅರ್ಥಶಾಸ್ತ್ರಜ್ಞರು ʻʻಆರು ಜನ ಅರ್ಥಶಾಸ್ತ್ರಜ್ಞರು ಒಂದು ಕಡೆ ಕುಳಿತು ಅರ್ಥಶಾಸ್ತ್ರಕ್ಕೆ ವ್ಯಾಖ್ಯೆಯನ್ನು ಹುಡುಕಿದರೆ ಆಗ ಏಳು ವ್ಯಾಖ್ಯೆಗಳು ಹೊರಹೊಮ್ಮುತ್ತವೆ ” ಎಂದು ಹೇಳಿದ್ದಾರೆ. ಜೆ.ಎಂ.ಕೇನ್ಸ್‌ರವರ ಪ್ರಕಾರ “ಅರ್ಥಶಾಸ್ತ್ರವು ಅಸಂಖ್ಯ ವ್ಯಾಖ್ಯೆಗಳಿಂದ ಕತ್ತು ಹಿಸುಕಲ್ಪಟ್ಟಿದೆ”. ಅರ್ಥಶಾಸ್ತ್ರದ ಕುರಿತಾದ ವ್ಯಾಖ್ಯೆಗಳನ್ನು ಒಟ್ಟು ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ,

1. ಸಂಪತ್ತಿನ ವ್ಯಾಖ್ಯೆ

2. ಯೋಗಕ್ಷೇಮ ವ್ಯಾಖ್ಯೆ

3. ವಿರಳತೆಯ ವ್ಯಾಖ್ಯೆ

4. ಅಭಿವೃದ್ಧಿಪರ ವ್ಯಾಖ್ಯೆ

1. ಸಂಪತ್ತಿನ ವ್ಯಾಖ್ಯೆ :

ಅರ್ಥಶಾಸ್ತ್ರದ ಪಿತಾಮಹ ಆಡಂಸ್ಮಿತ್ ಮತ್ತು ಅವನ ಅನುಯಾಯಿಗಳು ಸಂಪತ್ತಿನ ವ್ಯಾಖ್ಯೆಯನ್ನು ನೀಡಿದರು. ಇದು ಅರ್ಥಶಾಸ್ತ್ರದ ಮೊದಲ ವ್ಯಾಖ್ಯಾನವಾಗಿರುವುದಲ್ಲದೆ ಸಂಪ್ರದಾಯ ವ್ಯಾಖ್ಯಾನವೆಂದೂ ಕರೆಸಿಕೊಂಡಿದೆ. 1776 ರಲ್ಲಿ ಪ್ರಕಟವಾದ ಆಡಂಸ್ಮಿತ್ ರವರ ಮೇರು ಕೃತಿ ‘ರಾಷ್ಟ್ರಗಳ ಸಂಪತ್ತಿನ ಸ್ವರೂಪ ಮತ್ತು ಕಾರಣಗಳ ಪರಿಶೀಲನೆʼ (An enquiry into the nature and causes of wealth of nations) ಎಂಬ ಗ್ರಂಥದಲ್ಲಿ ಅರ್ಥಶಾಸ್ತ್ರವು ಸಂಪತ್ತಿನ ವಿಜ್ಞಾನವಾಗಿದೆ ಎಂದು ವ್ಯಾಖ್ಯಾನಿಸಿದರು. ಮಾನವನು ಸಂಪತ್ತನ್ನು ಹೇಗೆ ಗಳಿಸುತ್ತಾನೆ ಮತ್ತು ಅದನ್ನು ಹೇಗೆ ಅನುಭೋಗಿಸುತ್ತಾನೆ ಎಂಬುದನ್ನು ಅಭ್ಯಸಿಸುವುದೇ ಅರ್ಥಶಾಸ್ತ್ರದ ಗುರಿ ಎಂದು ಆಡಂಸ್ಮಿತ್ ರವರು ಅಭಿಪ್ರಾಯಪಡುತ್ತಾರೆ.

ಆಡಂಸ್ಮಿತ್‌ರ ಈ ಅಭಿಪ್ರಾಯವನ್ನು ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರಾದ ಜೆ.ಬಿ.ಸೇ, ಡೇವಿಡ್ ರಿಕಾರ್ಡೊ, ಜೆ.ಎಸ್.ಮಿಲ್, ಎಫ್.ಎ.ವಾಕರ್, ಸೀನಿಯರ್ ಮೊದಲಾದವರು ಬೆಂಬಲಿಸಿದರು. ಫ್ರೆಂಚ್ ಅರ್ಥಶಾಸ್ತ್ರಜ್ಞ ಜೆ.ಬಿ.ಸೇ. ಅವರು, ‘ಅರ್ಥಶಾಸ್ತ್ರ ಸಂಪತ್ತನ್ನು ಪರಿಗಣಿಸುವ ವಿಜ್ಞಾನʼ ಎಂದು ವ್ಯಾಖ್ಯಾನಿಸಿ ಸ್ಮಿತ್ ಅಭಿಪ್ರಾಯವನ್ನು ಅನುಮೋದಿಸಿದರು. ಅದೇ ರೀತಿ ಜೆ.ಎಸ್.ಮಿಲ್ ಅವರು “ಅರ್ಥಶಾಸ್ತ್ರವು ಸಂಪತ್ತಿನ ಉತ್ಪಾದನೆ ಮತ್ತು ವಿತರಣೆಯ ಪ್ರಾಯೋಗಿಕ ವಿಜ್ಞಾನ” ಎಂದು ವ್ಯಾಖ್ಯಾನಿಸಿದರು. ಅರ್ಥಶಾಸ್ತ್ರವು ಸಂಪತ್ತಿನ ಉತ್ಪಾದನೆ ಮತ್ತು ವಿತರಣೆ ಮತ್ತು ವಿನಿಮಯದ ಪ್ರಾಯೋಗಿಕ ವಿಜ್ಞಾನ ಎಂದು ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ಪರಿಗಣಿಸಿದ್ದರು

ಸಂಪತ್ತಿನ ವ್ಯಾಖ್ಯಾನದ ಪ್ರಮುಖ ಅಂಶಗಳು ಇಂತಿವೆ.

1. ಅರ್ಥಶಾಸ್ತ್ರ ಸಂಪತ್ತಿನ ಅಧ್ಯಯನ ಮಾಡುತ್ತದೆ.

2. ಸಂಪತ್ತಿನ ಉತ್ಪಾದನೆ, ಅನುಭೋಗ, ವಿತರಣೆಯನ್ನು ಕುರಿತಾಗಿ ಅಭ್ಯಸಿಸುತ್ತದೆ.

3. ಸಂಪತ್ತಿನ ಗಳಿಕೆ ಮತ್ತು ಬಳಕೆ ಅರ್ಥಶಾಸ್ತ್ರದ ಮೊದಲ ಆದ್ಯತೆಯ ಅಂಶಗಳು.

ವಿಮರ್ಶೆ: ಈ ವ್ಯಾಖ್ಯಾನವು ಸಂಪತ್ತಿಗೆ ಅತಿಯಾದ ಪ್ರಾಮುಖ್ಯತೆಯನ್ನು ನೀಡಿದ್ದರಿಂದ ಉಗ್ರ ಟೀಕೆಗೆ ಗುರಿಯಾಯಿತು. ರೆಸ್ಕಿನ್, ಕಾರ್ಲೈಲ್, ಡಿಕಿನ್ಸ್, ಮ್ಯಾಥ್ ಆರ್ನಾಲ್ಡ್ ಮುಂತಾದವರು ಈ ವ್ಯಾಖ್ಯೆಯನ್ನು ಟೀಕಿಸಿದ್ದಾರೆ. ಸಂಪತ್ತು ಎಂದರೆ ಹಣ, ಕೇವಲ ಹಣವನ್ನು ಕುರಿತು ಅಭ್ಯಸಿಸುವುದಾದರೆ ಅದೊಂದು ಕೀಳು ದರ್ಜೆಯ ಶಾಸ್ತ್ರ ಮತ್ತು ಗೌರವಿಸಲು ಅನರ್ಹವಾದ “ಘೋರಶಾಸ್ತ್ರ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಂಪತ್ತಿನ ವ್ಯಾಖ್ಯಾನದ ಪ್ರಮುಖ ದೋಷಗಳೆಂದರೆ :

1. ಸಂಪತ್ತಿಗೆ ಮಿತಿ ಮೀರಿದ ಪ್ರಾಶಸ್ತ್ಯವನ್ನು ನೀಡಿದೆ. ತನ್ಮೂಲಕ ಅರ್ಥಶಾಸ್ತ್ರದ ವ್ಯಾಪ್ತಿಯನ್ನು ಸಂಕುಚಿತಗೊಳಿಸಿದೆ.

2. ಮಾನವನ ಯೋಗಕ್ಷೇಮವನ್ನು ಕಡೆಗಣಿಸಿದೆ.

3. ಈ ವ್ಯಾಖ್ಯಾನ ಕೇವಲ ಭೌತಿಕ ವಸ್ತುಗಳನ್ನು ಮಾತ್ರ ಪರಿಗಣಿಸಿ, ಅಭೌತಿಕ ವಸ್ತುಗಳ ಉತ್ಪಾದನೆ ಮತ್ತು ಅನುಭೋಗಕ್ಕೆ ಸಂಬಂಧಿಸಿದ ಆರ್ಥಿಕ ಚಟುವಟಿಕೆಗಳನ್ನು ಅರ್ಥಶಾಸ್ತ್ರದ ಪರಿಧಿಯಿಂದ ಹೊರಗಿರಿಸಿದೆ.

4. ಸಂಪತ್ತಿನ ವ್ಯಾಖ್ಯಾನವು ವಿವಾದಾತ್ಮಕವೂ ಮತ್ತು ಆವೈಜ್ಞಾನಿಕವೂ ಆಗಿದೆ.

5. ಸಂಪತ್ತಿನ ವ್ಯಾಖ್ಯಾನವು ಅರ್ಥಶಾಸ್ತ್ರ ಸಂಪತ್ತಿನ ವಿಜ್ಞಾನ ಎಂದು ಪರಿಗಣಿಸುವುದರ ಮೂಲಕ ಅರ್ಥಶಾಸ್ತ್ರದ ವ್ಯಾಪ್ತಿಯನ್ನು ಸಂಕುಚಿತಗೊಳಿಸಿದೆ.

2. ಯೋಗಕ್ಷೇಮ ವ್ಯಾಖ್ಯಾನ

ಆಲ್‌ ಫ್ರೆಡ್ ಮಾರ್ಷಲ್, ಎ.ಸಿ.ಪಿಗು, ಎಡ್ರಿನ್ ಕ್ಯಾನನ್, ಬೆವರಿಜ್ ಮುಂತಾದ ಅರ್ಥಶಾಸ್ತ್ರಜ್ಞರು ಈ ಯೋಗಕ್ಷೇಮ ವ್ಯಾಖ್ಯಾನದ ಪ್ರತಿಪಾದಕರಾಗಿದ್ದಾರೆ. ಈ ಎಲ್ಲಾ ಅರ್ಥಶಾಸ್ತ್ರಜ್ಞರು ನವ ಸಂಪ್ರದಾಯ ಪಂಥಕ್ಕೆ ಸೇರಿದವರಾಗಿರುವುದರಿಂದ 

ಈ ವ್ಯಾಖ್ಯೆಯನ್ನು “ನವ ಸಂಪ್ರದಾಯ ಪಂಥದ ವ್ಯಾಖ್ಯೆ” ಎಂದೂ ಕರೆಯಲಾಗಿದೆ. ಮಾರ್ಷಲ್ ಮತ್ತು ಅವರ ಅನುಯಾಯಿಗಳು ಸಂಪತ್ತಿಗಿಂತಲೂ ಮಾನವನ ಯೋಗಕ್ಷೇಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದುದರಿಂದ ಈ ವ್ಯಾಖ್ಯಾನವನ್ನು ಯೋಗಕ್ಷೇಮ ವ್ಯಾಖ್ಯೆ ಎಂದು ಕರೆಯಲಾಗಿದೆ.

ಮಾರ್ಷಲ್‌ ರವರು 1890 ರಲ್ಲಿ ಪ್ರಕಟಿಸಿದ “ದಿ ಪಿನ್ಸಿಪಲ್ಸ್ ಆಫ್ ಎಕನಾಮಿಕ್ಸ್” ಎಂಬ ಗ್ರಂಥದಲ್ಲಿ ಅರ್ಥಶಾಸ್ತ್ರವು ಮಾನವನ ದೈನಂದಿನ ವ್ಯವಹಾರಗಳನ್ನು ಕುರಿತು ಅಭ್ಯಸಿಸುತ್ತದೆ. ಮಾನವನ ಯೋಗಕ್ಷೇಮಕ್ಕೆ ಅಗತ್ಯವಿರುವ ಭೌತಿಕ ವಸ್ತುಗಳ ಗಳಿಕೆ ಮತ್ತು ಅವುಗಳ ಉಪಯೋಗದ ವಿಷಯದಲ್ಲಿ ವ್ಯಕ್ತಿ ಮತ್ತು ಸಮಾಜ ನಿರ್ವಹಿಸುವ ಕ್ರಿಯೆಗಳನ್ನು ಅದು ಪರಿಶೀಲಿಸುತ್ತದೆ. ಈ ರೀತಿಯಾಗಿ ಅರ್ಥಶಾಸ್ತ್ರ ಒಂದು ಕಡೆ ಸಂಪತ್ತನ್ನು ಕುರಿತು ಅಭ್ಯಸಿಸಿದರೆ ಮತ್ತೊಂದು ಕಡೆ ಮಾನವನನ್ನೇ ಕುರಿತು ಅಭ್ಯಸಿಸುತ್ತದೆ.

ಮಾರ್ಷಲ್ ಅವರ ವ್ಯಾಖ್ಯಾನ ಅರ್ಥಶಾಸ್ತ್ರದ ಅಭ್ಯಾಸ ವಸ್ತುವನ್ನು ಸಂಪತ್ತಿನಿಂದ ಯೋಗಕ್ಷೇಮಕ್ಕೆ ವರ್ಗಾಯಿಸಿತು. ಮಾರ್ಷಲರ ವ್ಯಾಖ್ಯಾನವು ಮುಖ್ಯವಾಗಿ ನಾಲ್ಕು ಅಂಶಗಳನ್ನು ಒಳಗೊಂಡಿದೆ. ಅವುಗಳು ಈ ಕೆಳಗಿನಂತಿದೆ.

) ಅರ್ಥಶಾಸ್ತ್ರ ಸಂಪತ್ತನ್ನು ಗಳಿಸುವುದನ್ನೇ ಆರ್ಥಿಕ ಚಟುವಟಿಕೆಗಳ ಪರಮ ಉದ್ದೇಶವನ್ನಾಗಿ ಪರಿಗಣಿಸುವುದಿಲ್ಲ. ಮಾರ್ಷಲರ ಪ್ರಕಾರ ಸಂಪತ್ತು ಮಾನವನ ಕಲ್ಯಾಣಕ್ಕೋಸ್ಕರ ಇದೆಯೇ ಹೊರತು ಮಾನವನು ಸಂಪತ್ತಿಗಲ್ಲ, ಸಂಪತ್ತು ಕೇವಲ ಸಾಧನ ಮಾತ್ರ: ಮಾನವನ ಯೋಗಕ್ಷೇಮವನ್ನು ಹೆಚ್ಚಿಸುವುದು ಸಂಪತ್ತು ಗಳಿಕೆಯ ಗುರಿ, ಆದ್ದರಿಂದ ಮಾರ್ಷಲರು ಸಂಪತ್ತನ್ನು ಎರಡನೇ ಸ್ಥಾನಕ್ಕೆ ತಳ್ಳಿದರು.

) ಅರ್ಥಶಾಸ್ತ್ರ ಪ್ರೀತಿ ಮತ್ತು ವಿಶ್ವಾಸ ಹೊಂದಿ ಸಹಬಾಳ್ವೆಯನ್ನು ಇಷ್ಟಪಡುವ ಜನ ಸಾಮಾನ್ಯರನ್ನು ಕುರಿತು ಅಭ್ಯಸಿಸುತ್ತದೆಯೇ ಹೊರತು, ಸಂಪತ್ತಿಗಾಗಿಯೇ ವರ್ತಿಸುವ ಅರ್ಥವನ್ನು ಹೊಂದಿಲ್ಲ.

) ಅರ್ಥಶಾಸ್ತ್ರ ಒಂದು ಸಮಾಜ ವಿಜ್ಞಾನವಾಗಿದ್ದು ಅದು ಸಮಾಜದಲ್ಲಿ ಜೀವಿಸುವ, ಸಮಾಜದ ಮೇಲೆ ಪ್ರಭಾವ ಬೀರುವ ಮತ್ತು ಪ್ರಭಾವಿತನಾಗುವ ವ್ಯಕ್ತಿಯನ್ನು ಕುರಿತು ಅಭ್ಯಸಿಸುತ್ತದೆ. ಅರ್ಥಶಾಸ್ತ್ರ ಮಾನವನನ್ನು ಸಮಾಜದಿಂದ ಪ್ರತ್ಯೇಕಿಸಿ ಅಭ್ಯಸಿಸುವುದಿಲ್ಲ.

) ಅರ್ಥಶಾಸ್ತ್ರ ಕೇವಲ ಭೌತಿಕ ಯೋಗಕ್ಷೇಮವನ್ನು ಕುರಿತು ಅಭ್ಯಸಿಸುತ್ತದೆ ಹಾಗು ಅಭೌತಿಕ ಅಂಶಗಳನ್ನು ನಿರ್ಲಕ್ಷಿಸುತ್ತದೆ. ಮಾರ್ಷಲ್ ಅವರ ಈ ಅಭಿಪ್ರಾಯವನ್ನು ಪ್ರೊ.ಎ.ಸಿ.ಪಿಗು, ಎಡ್ರಿನ್ ಕ್ಯಾನನ್, ಬೆವರಿಚ್ ಮುಂತಾದವರು ಸಮರ್ಥಿಸಿದರು. ಪ್ರೊ.ಪಿಗು ಅವರ ಪ್ರಕಾರ, ‘ಆರ್ಥಶಾಸ್ತ್ರವು ಆರ್ಥಿಕ ಯೋಗಕ್ಷೇಮದ ಪರಿಶೀಲನೆಯ ಶಾಸ್ತ್ರ, ಆರ್ಥಿಕ ಯೋಗಕ್ಷೇಮವೆಂದರೆ ಹಣದ ಮಾನದಂಡದಿಂದ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಅಳೆಯಲು ಸಾಧ್ಯವಾಗುವಂತಹುದು’. ಎಡ್ರಿನ್ ಕ್ಯಾನನ್ ರವರ ಪ್ರಕಾರ ‘ಮಾನವನ ಭೌತಿಕ ಯೋಗಕ್ಷೇಮಕ್ಕೆ ಕಾರಣವಾಗುವ ಅಂಶಗಳನ್ನು ಪರಿಶೀಲಿಸುವ ಶಾಸ್ತ್ರವೇ ಅರ್ಥಶಾಸ್ತ್ರ’.

ಟೀಕೆಗಳು : ಮಾರ್ಷಲ್‌ರ ಯೋಗಕ್ಷೇಮ ವ್ಯಾಖ್ಯಾನವು ಸಂಪತ್ತಿನ ವ್ಯಾಖ್ಯಾನದಿಂದ ಅರ್ಥಶಾಸ್ತ್ರಕ್ಕೆ ಅಂಟಿಕೊಂಡಿದ್ದ ಅಪಖ್ಯಾತಿಯನ್ನು ನಿವಾರಿಸಿ ಅದರ ಮಹತ್ವ ಮತ್ತು ವ್ಯಾಪ್ತಿಯನ್ನು ಹಿಗ್ಗಿಸುವಲ್ಲಿ ಯಶಸ್ವಿಯಾದರೂ ಕೂಡ ಅನೇಕ ಕಾರಣಗಳಿಂದ ಟೀಕಿಸಲ್ಪಟ್ಟಿದೆ. ಪ್ರೊ.ಲಿಯೋನೆಲ್ ರಾಬಿನ್ಸ್‌ರವರು ಯೋಗಕ್ಷೇಮ ವ್ಯಾಖ್ಯಾನದ ಪ್ರಮುಖ ಟೀಕಾಕಾರರಾಗಿದ್ದಾರೆ. ಅವರ ಪ್ರಮುಖ ಟೀಕೆಗಳು ಇಂತಿವೆ.

1. ಮಾರ್ಷಲರ ವ್ಯಾಖ್ಯಾನದ ಪ್ರಕಾರ ಕೇವಲ ಭೌತಿಕ ಸರಕುಗಳು ಮಾತ್ರ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಆದರೆ ವಾಸ್ತವದಲ್ಲಿ ವೈದ್ಯರು, ಉಪಾಧ್ಯಾಯರು, ವಕೀಲರು, ವಿಜ್ಞಾನಿಗಳು ಮುಂತಾದವರ ಸೇವೆಗಳು ಕೂಡ ಮಾನವನ ಯೋಗಕ್ಷೇಮವನ್ನು ಹೆಚ್ಚಿಸಬಲ್ಲವು. ಆದುದರಿಂದ ಮಾರ್ಷಲ್‌ರವರ ವ್ಯಾಖ್ಯಾನವು ಸಂಕುಚಿತ ಮತ್ತು ಅವೈಜ್ಞಾನಿಕವಾದುದಾಗಿದೆ ಎಂದು ರಾಬಿನ್ಸ್‌ರವರು ಟೀಕಿಸುತ್ತಾರೆ.

2. ಮಾರ್ಷಲ್ ಪ್ರಕಾರ ಭೌತಿಕ ಸರಕುಗಳು ಮಾನವನ ಕಲ್ಯಾಣ ಅಥವಾ ಯೋಗಕ್ಷೇಮವನ್ನು ಹೆಚ್ಚಿಸುತ್ತವೆ. ಆದರೆ ವಾಸ್ತವವಾಗಿ ಎಲ್ಲಾ ಭೌತಿಕ ಸರಕುಗಳು ಮಾನವನ ಯೋಗಕ್ಷೇಮವನ್ನು ಹೆಚ್ಚಿಸುವುದಿಲ್ಲ ಉದಾಹರಣೆಗೆ: ಭೌತಿಕ ಸರಕುಗಳಾದ ತಂಬಾಕು, ಅಫೀಮು, ಮದ್ಯ, ಮುಂತಾದವು ಮಾನವನ ಕಲ್ಯಾಣವನ್ನು ಹೆಚ್ಚಿಸುವುದರ ಬದಲು ಕಡಿಮೆಗೊಳಿಸುತ್ತವೆ.

3. ಪ್ರೊ. ರಾಬಿನ್ಸ್‌ರವರ ಪ್ರಕಾರ ‘ಯೋಗಕ್ಷೇಮ ಎಂಬ ಪದವು ನೈತಿಕ ಮೌಲ್ಯಗಳನ್ನು ಒಳಗೊಂಡಿರುವುದರಿಂದ ಅರ್ಥಶಾಸ್ತ್ರ ಎಂಬ ಪರಿಶುದ್ಧ ವಿಜ್ಞಾನದಲ್ಲಿ ಅಂತಹ ಪದಗಳನ್ನು ಬಳಸಲೇಬಾರದು’.

4. ಮಾನವನ ಯೋಗಕ್ಷೇಮವನ್ನು ಹಣದ ಅಳತೆಗೋಲಿನಿಂದ ಅಳೆಯುವುದು ಸಾಧ್ಯವಿದೆ ಎಂದು ಯೋಗಕ್ಷೇಮ ವ್ಯಾಖ್ಯಾನ ಅಭಿಪ್ರಾಯ ತಾಳುತ್ತದೆ ಆದರೆ ವಾಸ್ತವವಾಗಿ ಯೋಗಕ್ಷೇಮದ ನೇರ ಮಾಪನ ಅಸಾಧ್ಯ. ಏಕೆಂದರೆ ಯೋಗಕ್ಷೇಮ ವ್ಯಕ್ತಿಯಿಂದ ವ್ಯಕ್ತಿಗೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ ಹಾಗು ಅದು ಮಾನಸಿಕವಾದುದಾಗಿದೆ.

5. ಮಾರ್ಷಲರ ವ್ಯಾಖ್ಯಾನವು ಅರ್ಥಶಾಸ್ತ್ರದ ಮೂಲ ಸಮಸ್ಯೆಗಳಾದ ಮಿತವಾದ ಸಂಪನ್ಮೂಲಗಳು, ಅಪರಿಮಿತ ಬಯಕೆಗಳು, ಆಯ್ಕೆಯ ಸಮಸ್ಯೆ ಮುಂತಾದವುಗಳನ್ನು ಪರಿಗಣಿಸುವುದಿಲ್ಲ. ಇಷ್ಟೇ ಅಲ್ಲದೆ ಆಧುನಿಕ ಆರ್ಥಿಕ ವ್ಯವಸ್ಥೆಗಳ ಜಟಿಲ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಆರ್ಥಿಕ ಆವರ್ತಗಳು, ಅನಭಿವೃದ್ಧಿ ಮುಂತಾದವುಗಳನ್ನು ಪರಿಗಣಿಸುವುದಿಲ್ಲ.

ಈ ಮೇಲಿನ ಟೀಕೆಗಳಿದ್ದರೂ ಕೂಡ ಯೋಗಕ್ಷೇಮ ವ್ಯಾಖ್ಯಾನವು ಸಾಕಷ್ಟು ಜನಪ್ರಿಯವಾಗಿದೆ.

3. ಕೊರತೆಯ ವ್ಯಾಖ್ಯಾನ (ವಿರಳತೆಯ ವ್ಯಾಖ್ಯೆ)

ಮಾರ್ಷಲರ ಯೋಗಕ್ಷೇಮ ವ್ಯಾಖ್ಯಾನವು ಬಹು ಕಾಲದವರೆಗೆ ಸ್ವೀಕೃತವಾದಂತಹ ಸಿದ್ಧಾಂತವಾಗಿತ್ತು. ಆದರೆ 1932 ರಲ್ಲಿ ಪ್ರಕಟಗೊಂಡ ಪ್ರೊ.ಲಿಯೋನೆಲ್ ರಾಬಿನ್ಸ್‌ರವರ ಗ್ರಂಥ ‘ನೇಚರ್ ಅಂಡ್ ಸಿಗ್ನಿಫಿಕೆನ್ಸ್ ಆಫ್ ಎಕನಾಮಿಕ್ ಸೈನ್ಸ್’ ಅರ್ಥಶಾಸ್ತ್ರದ ವ್ಯಾಖ್ಯಾನದ ಬಗ್ಗೆ ಪುನಃ ಚರ್ಚೆಯನ್ನು ಹುಟ್ಟು ಹಾಕಿತು. ಪ್ರೊ. ರಾಬಿನ್ಸ್‌ರವರು ಮಾರ್ಷಲ್‌ ರ ಯೋಗಕ್ಷೇಮ ವ್ಯಾಖ್ಯಾನವನ್ನು ಸಂಪೂರ್ಣವಾಗಿ ತಿರಸ್ಕರಿಸಿ ತಮ್ಮದೇ ಆದಂತಹ ಕೊರತೆಯ ಅಥವಾ ವಿರಳತೆಯ ವ್ಯಾಖ್ಯಾನವನ್ನು ನೀಡಿದರು. ರಾಬಿನ್ಸ್‌ರವರ ಅಭಿಪ್ರಾಯದಲ್ಲಿ ‘ಅರ್ಥಶಾಸ್ತ್ರವು ಮಾನವನ ಅಪರಿಮಿತ ಬಯಕೆಗಳು ಮತ್ತು ಈ ಬಯಕೆಗಳನ್ನು ಈಡೇರಿಸಿಕೊಳ್ಳಲು ಅಗತ್ಯವಿರುವ ವಿವಿಧ ಉಪಯೋಗಗಳನ್ನು ಹೊಂದಿರುವ ಕೊರತೆಯ ಸಾಧನಗಳಿಗೂ ಇರುವ ಸಂಬಂಧವನ್ನು ಅಧ್ಯಯನ ಮಾಡುತ್ತದೆʼ.

ರಾಬಿನ್ಸ್‌ರವರ ವ್ಯಾಖ್ಯಾನದ ಪ್ರಮುಖ ಅಂಶಗಳೆಂದರೆ,

1. ಮಾನವನ ಬಯಕೆಗಳು ಅಪರಿಮಿತವಾಗಿದೆ.

2. ಮಾನವನ ಬಯಕೆಗಳನ್ನು ತೃಪ್ತಿ ಪಡಿಸಲು ಲಭ್ಯವಿರುವ ಸಂಪನ್ಮೂಲಗಳು ಕೊರತೆಯಲ್ಲಿದೆ ಅಥವಾ ವಿರಳವಾಗಿದೆ.

3. ಮಿತ ಪ್ರಮಾಣದಲ್ಲಿರುವ ಸಂಪನ್ಮೂಲಗಳನ್ನು ಪರ್ಯಾಯ ಬಳಕೆಗಳಲ್ಲಿ ಬಳಸಲು ಸಾಧ್ಯವಿದೆ. ಈ ರೀತಿ ಬಳಸಿಕೊಳ್ಳುವಾಗ ದಕ್ಷವಾಗಿ ಅಂದರೆ ಹೆಚ್ಚು ಪ್ರತಿಫಲ ದೊರೆಯುವ ಉಪಯೋಗದಲ್ಲಿ ಬಳಸಬೇಕಾಗುತ್ತದೆ.

4. ಬಯಕೆಗಳು ಅಪರಿಮಿತವಾಗಿರುವುದರಿಂದ ಮತ್ತು ಸಂಪನ್ಮೂಲಗಳು ಮಿತವಾಗಿರುವುದರಿಂದ ಆಯ್ಕೆಯ ಸಮಸ್ಯೆಯು ಉದ್ಭವಿಸುತ್ತವೆ.

ಉದಾಹರಣೆಗೆ ಕಲ್ಲಿದ್ದಲನ್ನು ಕಬ್ಬಿಣ ತಯಾರಿಸಲು, ರೈಲುಗಳನ್ನು ಓಡಿಸಲು, ವಿದ್ಯುತ್ ಶಕ್ತಿ ಉತ್ಪಾದಿಸಲು, ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸಲು ಇನ್ನು ಮುಂತಾದ ಉಪಯೋಗಗಳಲ್ಲಿ ಬಳಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಅಗತ್ಯವಿರುವ ಹಾಗೂ ಜರೂರಾಗಿರುವ ಬಳಕೆಯಲ್ಲಿ ಕಲ್ಲಿದ್ದಲನ್ನು ಬಳಸಬೇಕಾಗುತ್ತದೆ.

ರಾಬಿನ್ಸ್‌ರವರ ವಿರಳತೆಯ ವ್ಯಾಖ್ಯೆಯನ್ನು ಅರ್ಥಶಾಸ್ತ್ರಜ್ಞರಾದ ಜಾರ್ಜ್‌ ಸ್ಟಿಗ್ಲರ್, ಎರಿಕ್‌ರಾಲ್, ಎ.ಪಿ.ಲರ್ನರ್, ವಿಕ್‌ಸ್ಪೀಡ್ ಮುಂತಾದವರು ಸಮರ್ಥಿಸಿದ್ದಾರೆ. ‘ಗರಿಷ್ಠ ಸಂಖ್ಯೆಯ ಬಯಕೆಗಳ ತೃಪ್ತಿಯೇ ಕೊರತೆಯ ಸಾಧನಗಳ ಹಂಚಿಕೆಯ ಉದ್ದೇಶ ʼ ಎಂದು ಜಾರ್ಜ್ ಸ್ಟಿಗ್ಲರ್ ರವರು ಅಭಿಪ್ರಾಯ ಪಟ್ಟಿದ್ದಾರೆ.

ರಾಬಿನ್ಸ್‌ರವರ ದೃಷ್ಟಿಯಲ್ಲಿ ಅರ್ಥಶಾಸ್ತ್ರವು ಒಂದು ʻತಟಸ್ಥ ಹಾಗೂ ಪರಿಶುದ್ಧ’ ವಿಜ್ಞಾನವಾಗಿದೆ. ಅಂದರೆ ಅರ್ಥಶಾಸ್ತ್ರವು ಯಾವುದೇ ವಿಷಯದ ಬಗ್ಗೆ ʻಹೇಗಿದೆ ಎಂದು ತಿಳಿಸುತ್ತದೆಯೇ ಹೊರತು ಹೇಗಿರಬೇಕು’ ಎಂದು ತಿಳಿಸುವುದಿಲ್ಲ. ಆದ್ದರಿಂದ ಅರ್ಥಶಾಸ್ತ್ರವು ಬಯಕೆಗಳ ನಡುವಿನ ಆಯ್ಕೆಯ ವಿಷಯದಲ್ಲಿ ತಟಸ್ಥವಾಗಿರುತ್ತದೆ ಎಂಬುದು ರಾಬಿನ್ಸ್‌ನ ಅಭಿಮತವಾಗಿದೆ.

ವಿರಳತೆಯ ವ್ಯಾಖ್ಯೆಯ ಶ್ರೇಷ್ಟತೆ :

ವಿರಳತೆಯ ವ್ಯಾಖ್ಯೆಯು ಈ ಹಿಂದಿನ ವ್ಯಾಖ್ಯೆಗಳಿಗಿಂತ ಈ ಕೆಳಗಿನ ಕಾರಣಗಳಿಂದಾಗಿ ಶ್ರೇಷ್ಟವಾಗಿದೆ.

1. ರಾಬಿನ್ಸ್ ವ್ಯಾಖ್ಯಾನವು ಭೌತಿಕ ಮತ್ತು ಅಭೌತಿಕ ಅಂಶಗಳೆರಡನ್ನೂ ಪರಿಗಣಿಸುವುದರಿಂದ ಅದು ಮಾರ್ಷಲ್ ರ ವ್ಯಾಖ್ಯಾನಕ್ಕಿಂತ ಶ್ರೇಷ್ಟವಾಗಿದೆ.

2. ಅರ್ಥಶಾಸ್ತ್ರ ಎಲ್ಲ ನೈತಿಕ ಅಂಶಗಳಿಂದ ಮುಕ್ತವಾಗಿದೆ. ಅದೊಂದು ಪರಿಶುದ್ಧ ವಿಜ್ಞಾನ ಎಂದು ತಿಳಿಸಿ ರಾಬಿನ್ಸ್ ಅರ್ಥಶಾಸ್ತ್ರವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಿಲ್ಲಿಸಲು ಯತ್ನಿಸಿದನು.

3. ರಾಬಿನ್ಸ್ ವ್ಯಾಖ್ಯಾನವು ಹೆಚ್ಚು ವಿವರಣಾತ್ಮಕವೂ, ವಿಶ್ಲೇಷಣಾತ್ಮಕವೂ ಹಾಗು ಸಾರ್ವತ್ರಿಕವೂ ಆಗಿದೆ.

4. ರಾಬಿನ್ಸ್‌ನನ್ನು ಅರ್ಥಶಾಸ್ತ್ರವು ಬಯಕೆಗಳ ನಡುವೆ ತಟಸ್ಥವಾಗಿದೆ ಎಂದು ಹೇಳಿ ಅರ್ಥಶಾಸ್ತ್ರ ಕೇವಲ ಕೊರತೆಯ ಸಂಪನ್ಮೂಲಗಳ ಉಪಯೋಗಕ್ಕೆ ಸಂಬಂಧಿಸಿದೆ ಎಂದು ತಿಳಿಸಿದರು.

5. ಆರ್ಥಿಕ ವಿಶ್ಲೇಷಣೆಯ ಮಹತ್ವದ ಪರಿಕಲ್ಪನೆಗಳಾಗಿರುವ ‘ಅವಕಾಶವೆಚ್ಚ’ ಮತ್ತು ‘ಆಯ್ಕೆಯ ಪರಧಿ’ಗಳು ರಾಬಿನ್ಸ್ ವ್ಯಾಖ್ಯಾನದಿಂದ ಹೊರಹೊಮ್ಮಿವೆ.

6. ರಾಬಿನ್ಸ್ ವ್ಯಾಖ್ಯಾನವು ಆರ್ಥಿಕ ಯೋಜನೆಗಳ ತಯಾರಿಕೆಗೆ ತಳಹದಿಯಾಗಿದೆ. ಏಕೆಂದರೆ ಅದು ಕೊರತೆಯ ಸಂಪನ್ಮೂಲಗಳ ಹಂಚಿಕೆ ಮತ್ತು ಉಪಯೋಗದ ವಿಷಯಕ್ಕೆ ಹೆಚ್ಚು ಒತ್ತು ನೀಡಿದೆ.

ವಿಮರ್ಶೆ: ರಾಬಿನ್ಸ್‌ರವರ ವ್ಯಾಖ್ಯಾನವು ಎಷ್ಟೆಲ್ಲಾ ವೈಜ್ಞಾನಿಕವಾಗಿದ್ದರೂ ಸಹ ಅನೇಕ ಅರ್ಥಶಾಸ್ತ್ರಜ್ಞರಿಂದ ಟೀಕಿಸಲ್ಪಟ್ಟಿದೆ. ಬಾರ್ಬರಾ ವೋಟನ್, ಬೆವರಿಜ್‌, ಪ್ರೇಸರ್, ಡರ್ಬನ್ ಮೊದಲಾದ ಅರ್ಥಶಾಸ್ತ್ರಜ್ಞರು ರಾಬಿನ್ಸ್ ವ್ಯಾಖ್ಯಾನವನ್ನು ಕಟುವಾಗಿ ಟೀಕಿಸಿದರು. ಅವರ ಟೀಕೆಗಳು ಈ ಕೆಳಗಿನಂತಿವೆ.

1. ರಾಬಿನ್ಸ್ ಅವರ ವ್ಯಾಖ್ಯಾನ ತುಂಬಾ ಸಂಕುಚಿತವಾದುದು. ಅದು ಅರ್ಥಶಾಸ್ತ್ರದ ವ್ಯಾಪ್ತಿಯನ್ನು ಸಂಕುಚಿತಗೊಳಿಸಿದೆ ಎಂದು ಟೀಕಿಸಲಾಗಿದೆ. ಕೊರತೆಯ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನೇ ಪ್ರಮುಖ ಅಂಶವನ್ನಾಗಿ ಪರಿಗಣಿಸಿ ರಾಬಿನ್ಸ್ ಅರ್ಥಶಾಸ್ತ್ರವನ್ನು ಕೇವಲ ಮೌಲ್ಯ ಸಿದ್ಧಾಂತದ ಮಟ್ಟಕ್ಕಿಳಿಸಿದ್ದಾನೆ ಎಂದು ದೂರಲಾಗಿದೆ.

2. ಆಧುನಿಕ ಆರ್ಥಿಕ ವ್ಯವಸ್ಥೆಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಬಡತನ, ದಾರಿದ್ರ್ಯ, ನಿರುದ್ಯೋಗ, ಆದಾಯ ಅಸಮಾನತೆ, ಆರ್ಥಿಕ ಆವರ್ತಗಳು ಮುಂತಾದ ಸಮಸ್ಯೆಗಳನ್ನು ರಾಬಿನ್ಸ್ ವ್ಯಾಖ್ಯಾನ ಪರಿಗಣಿಸುವುದೇ ಇಲ್ಲ.

3. ರಾಬಿನ್ಸ್ ವ್ಯಾಖ್ಯೆಯಲ್ಲಿ ಮಾನವೀಯ ಅಂಶ ನಿರ್ಲಕ್ಷಕ್ಕೊಳಗಾಗಿದೆಯೆಂದು ಟೀಕಿಸಲಾಗಿದೆ. ರಾಬಿನ್ಸ್ ಪ್ರಕಾರ ಬಯಕೆಗಳ ನಡುವೆ ಅರ್ಥಶಾಸ್ತ್ರ ತಟಸ್ಥವಾಗಿರುತ್ತದೆ. ಒಳಿತು ಕೆಡಕುಗಳ ಬಗ್ಗೆ ನಿರ್ಣಯ ಕೈಗೊಳ್ಳುವುದು ಅರ್ಥಶಾಸ್ತ್ರದ ಕೆಲಸವಲ್ಲ ಎಂದು ತಿಳಿಸುತ್ತಾರೆ. ಆದರೆ ಅರ್ಥಶಾಸ್ತ್ರ ಸಾಮಾಜಿಕ ಉದ್ದೇಶಗಳನ್ನು ಈಡೇರಿಸಬೇಕೆಂದರೆ ಅದು ನೈತಿಕ ನೆಲೆಗಟ್ಟಿನ ಮೇಲೆ ಕಾರ್ಯನಿರ್ವಹಿಸಬೇಕಾಗುತ್ತದೆ. ಏಕೆಂದರೆ ಒಳಿತು ಕೆಡಕುಗಳ ತೀರ್ಮಾನ ಕೈಗೊಂಡು ನಿರ್ಣಯ ನೀಡಿದಾಗಲೇ ಮಾನವ ಕಲ್ಯಾಣ ಸಾಧ್ಯವಾಗುವುದು.

4. ಕೆಲ ವಿಮರ್ಶಕರ ಪ್ರಕಾರ ರಾಬಿನ್ಸ್, ಮಾರ್ಷಲನ ವ್ಯಾಖ್ಯೆಯನ್ನು ಎಷ್ಟೇ ಟೀಕಿಸಿದರೂ ಸಹ ಮಾರ್ಷಲನ ಪ್ರಭಾವವನ್ನು ರಾಬಿನ್ಸ್‌ನ ವ್ಯಾಖ್ಯೆಯಲ್ಲಿ ಕಾಣಬಹುದೆನ್ನುತ್ತಾರೆ. ವಿರಳ ಸಂಪನ್ಮೂಲಗಳನ್ನು ಅಪರಿಮಿತ ಬಯಕೆಗಳ ನಡುವೆ ಹಂಚುವ ಮತ್ತು ಹೊಂದಾಣಿಕೆ ಮಾಡುವ ವೇಳೆಯಲ್ಲಿ ಗರಿಷ್ಟ ತೃಪ್ತಿ ಸಿಗುವ ಬಯಕೆಗೆ ಸಂಪನ್ಮೂಲ ಲಭ್ಯವಾಗಬೇಕು ಎಂದು ರಾಬಿನ್ಸ್ ಹೇಳುತ್ತಾರೆ. ಇದರಿಂದಾಗಿ ನೈತಿಕ ಅಂಶ ಹಿಂಬಾಗಿಲಿನಿಂದ ಪ್ರವೇಶ ಮಾಡಿದಂತಾಗಿದೆ.

5. ರಾಬಿನ್ಸ್ ವ್ಯಾಖ್ಯಾನ ಆರ್ಥಿಕ ಪ್ರಗತಿ ಮತ್ತು ಬೆಳವಣಿಗೆಯ ಅಂಶಗಳನ್ನು ನಿರ್ಲಕ್ಷಿಸುತ್ತದೆ. ಆಧುನಿಕ ಯುಗದಲ್ಲಿ ಎಲ್ಲಾ ಚಟುವಟಿಕೆಗಳಿಗಿಂತ ಅತ್ಯಂತ ಮುಖ್ಯವಾದುದೆಂದರೆ ಬೆಳವಣಿಗೆಯ ವಿಷಯವಾಗಿದೆ. ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಯಾವ ಮಾರ್ಗ ಸೂಕ್ತವಾದುದು. ಯಾವ ಧೋರಣೆಯನ್ನು ಪಾಲಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬುವುದುಬಹುಮುಖ್ಯ ಪ್ರಶ್ನೆಗಳಾಗಿವೆ. ಆದರೆ ರಾಬಿನ್ಸ್ ವ್ಯಾಖ್ಯಾನ ಈ ಸಮಸ್ಯೆಗಳತ್ತ ಗಮನಹರಿಸುವುದಿಲ್ಲ.

6. ರಾಬಿನ್ಸ್ ಪ್ರಕಾರ ಅಪರಿಮಿತ ಬಯಕೆಗಳು ಮತ್ತು ಮಿತ ಸಾಧನಗಳಿಂದ ಆರ್ಥಿಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆದರೆ ವಾಸ್ತವವಾಗಿ ಸಾಧನ ಸಂಪತ್ತುಗಳು ಹೇರಳವಾಗಿದ್ದಾಗಲೂ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದನ್ನು ಮರೆಯುವಂತಿಲ್ಲ. ಉದಾಹರಣೆಗೆ ಜನಸಂಖ್ಯಾ ಸಮಸ್ಯೆ.

7. ರಾಬಿನ್ಸ್ ವ್ಯಾಖ್ಯಾನ ಸ್ಥಿರಾತ್ಮಕವಾದುದೆಂದೂ ಸಹ ಟೀಕಿಸಲಾಗಿದೆ. ಈ ವ್ಯಾಖ್ಯಾನವು ಕೇವಲ ಕೆಲವು ಸೀಮಿತ ಸನ್ನಿವೇಶಗಳಿಗೆ ಮಾತ್ರ ಸರಿಹೊಂದುವಂತಹುದು ಎಂದು ದೂರಲಾಗಿದೆ.

4. ಅಭಿವೃದ್ಧಿ ಪರ ವ್ಯಾಖ್ಯಾನ

1930ರ ದಶಕದವರೆಗೆ ರಾಬಿನ್ಸ್‌ರವರ ವ್ಯಾಖ್ಯಾನವನ್ನು ವೈಜ್ಞಾನಿಕ ಮತ್ತು ಸಮಂಜಸವಾದುದು ಎಂದೇ ತಿಳಿಯಲಾಗಿತ್ತು. ಆದರೆ ನಂತರದಲ್ಲಿ ಸಂಭವಿಸಿದ ಅನೇಕ ವಿದ್ಯಮಾನಗಳು ಅರ್ಥಶಾಸ್ತ್ರಕ್ಕೆ ಹೊಸ ವ್ಯಾಖ್ಯಾನವನ್ನು ಹುಡುಕುವ ಅಗತ್ಯವನ್ನು ಸೃಷ್ಟಿ ಮಾಡಿದವು. ಏಕೆಂದರೆ ಅರ್ಥಶಾಸ್ತ್ರವು ಕೇವಲ ಸಂಪನ್ಮೂಲ ಹಂಚಿಕೆಯ ಶಾಸ್ತ್ರವಾಗಿ ಉಳಿಯದೆ ತನ್ನ ಸ್ವರೂಪ, ವ್ಯಾಪ್ತಿ ಮತ್ತು ಮಹತ್ವವನ್ನು ವಿಸ್ತಾರಗೊಳಿಸಿಕೊಂಡಿತ್ತು. ಆದ್ದರಿಂದ ಲಾರ್ಡ್ ಕೇನ್ಸ್, ಪಾಲ್ ಎ.ಸ್ಯಾಮ್ಯುಯೆಲ್ಸನ್, ಬೆನ್ ಹ್ಯಾಮ್ ಮುಂತಾದ ಆಧುನಿಕ ಅರ್ಥಶಾಸ್ತ್ರಜ್ಞರು ಅರ್ಥಶಾಸ್ತ್ರಕ್ಕೆ ಒಂದು ಹೊಸ ವ್ಯಾಖ್ಯೆಯನ್ನು ನೀಡಲು ಪ್ರಯತ್ನಿಸಿದರು.

ಪ್ರೊ.ಪಾಲ್.ಎ. ಸ್ಯಾಮ್ಯುಯೆಲ್‌ಸನ್ ಅವರ ಪ್ರಕಾರ, ಅರ್ಥಶಾಸ್ತ್ರವು ಜನರು ಮತ್ತು ಸಮಾಜ ವಿರಳವಾಗಿರುವ ಮತ್ತು ವಿವಿಧ ಉಪಯೋಗ ಹೊಂದಿರುವ ಸಂಪನ್ಮೂಲಗಳನ್ನು ವಿವಿಧ ಸರಕುಗಳ ಉತ್ಪಾದನೆಗೆ ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಹಾಗು ಉತ್ಪಾದಿತ ಸರಕುಗಳನ್ನು ಸಮಾಜದ ವಿವಿಧ ಜನರ ನಡುವೆ ಅನುಭೋಗಕ್ಕಾಗಿ ಈಗ ಹಾಗು ಭವಿಷ್ಯದಲ್ಲಿ ಹೇಗೆ ವಿತರಿಸುತ್ತಾರೆ ಎಂಬುದನ್ನು ಕುರಿತು ಅಭ್ಯಸಿಸುತ್ತದೆ’.

ಲಾರ್ಡ್ ಕೇನ್ಸ್ ಅವರ ಪ್ರಕಾರ ‘ಅರ್ಥಶಾಸ್ತ್ರವು ಸಮಾಜದಲ್ಲಿ ಉದ್ಯೋಗ ಮತ್ತು ವರದಾನಗಳು ಹೇಗೆ ನಿರ್ಧಾರವಾಗುತ್ತವೆ ಹಾಗು ರಾಷ್ಟ್ರೀಯ ವರಮಾನ ಕಾಲಾನಂತರದಲ್ಲಿ ಹೇಗೆ ಬೆಳೆಯುತ್ತದೆ ಎಂಬುದನ್ನು ಅಭ್ಯಸಿಸುತ್ತದೆ’.

ಪ್ರೊ.ಬೆನ್ ಹ್ಯಾಮ್ ಅವರ ಮೇರೆಗೆ ಅರ್ಥಶಾಸ್ತ್ರವು ʻರಾಷ್ಟ್ರದ ರಾಷ್ಟ್ರೀಯ ಆದಾಯದ ಗಾತ್ರ, ಹಂಚಿಕೆ ಮತ್ತು ಸ್ಥಿರತೆಯ ಅಂಶಗಳನ್ನು ನಿರ್ಧರಿಸುವ ಸಂಗತಿಗಳನ್ನು ಕುರಿತು ಅಭ್ಯಸಿಸುತ್ತದೆ’.

ಪ್ರೊ. ಹೆನ್ರಿ ಸ್ಮಿತ್, ಬೌಲ್ಡಿಂಗ್ ಮೊದಲಾದ ಆಧುನಿಕ ಅರ್ಥಶಾಸ್ತ್ರಜ್ಞರೂ ಕೂಡ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಈ ಎಲ್ಲಾ ಅರ್ಥಶಾಸ್ತ್ರಜ್ಞರ ಪ್ರಕಾರ ಅರ್ಥಶಾಸ್ತ್ರವು ಪೂರ್ಣ ಉದ್ಯೋಗ, ರಾಷ್ಟ್ರೀಯ ವರಮಾನ, ಬಂಡವಾಳ ಸಂಚಯನ, ಆರ್ಥಿಕ ಪ್ರಗತಿ ಮುಂತಾದ ವಿಷಯಗಳನ್ನು ಕುರಿತು ಅಭ್ಯಸಿಸುತ್ತದೆ.

ಅಭಿವೃದ್ಧಿಪರ ವ್ಯಾಖ್ಯಾನದ ಶ್ರೇಷ್ಟತೆ

ಅಭಿವೃದ್ಧಿಪರ ವ್ಯಾಖ್ಯಾನ ಅಥವಾ ಆಧುನಿಕ ವ್ಯಾಖ್ಯಾನವು ಪ್ರೊ.ರಾಬಿನ್ಸ್ ಅವರ ವ್ಯಾಖ್ಯಾನಕ್ಕಿಂತಲೂ ಈ ಕೆಳಗಿನ ಅಂಶಗಳ ಕಾರಣದಿಂದಾಗಿ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ.

1. ಅಭಿವೃದ್ಧಿಪರ ವ್ಯಾಖ್ಯಾನವು ಹೆಚ್ಚು ಸಮಂಜಸ ಮತ್ತು ಚಲನಾತ್ಮಕವಾದುದೆಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ ಈ ವ್ಯಾಖ್ಯಾನ ವಿರಳವಾದ ಸಂಪನ್ಮೂಲಗಳನ್ನು ಬಯಕೆಗಳ ಈಡೇರಿಕೆಗಾಗಿ ಬಳಸುವ ವಿಧಾನ ಮತ್ತು ಆ ಮೂಲಕ ಅಭಿವೃದ್ಧಿ ಸಾಧನೆಯ ಸತ್ಯಸಂಗತಿಯನ್ನು ಹೊರಗೆಡವಿದೆ. ರಾಬಿನ್ಸ್ ವ್ಯಾಖ್ಯಾನದಲ್ಲಿದ್ದ ಸ್ಥಿರಾತ್ಮಕ ಮುಸುಕನ್ನು ಕಿತ್ತೊಗೆಯುವಲ್ಲಿ ಅಭಿವೃದ್ಧಿ ಪರ ವ್ಯಾಖ್ಯಾನ ಯಶಸ್ವಿಯಾಗಿದೆ.

2. ಅಭಿವೃದ್ಧಿ ಪರ ವ್ಯಾಖ್ಯಾನ ಮಿತ ಸಂಪನ್ಮೂಲಗಳ ಹಂಚಿಕೆಯ ಅಂಶದ ಜೊತೆಗೆ ಉದ್ಯೋಗ, ವರಮಾನ, ಉತ್ಪಾದನೆ ಮತ್ತು ರಾಷ್ಟ್ರೀಯ ಆದಾಯದ ವಿಚಾರಗಳನ್ನೂ ಪರಿಗಣಿಸಿ ಅರ್ಥಶಾಸ್ತ್ರದ ವ್ಯಾಪ್ತಿಯನ್ನು ವಿಸ್ತರಿಸಿದೆ. ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದ ಎಲ್ಲಾ ಆಯಾಮಗಳನ್ನು ಅದು ಪರಿಗಣಿಸಿದೆ.

3. ಅಭಿವೃದ್ಧಿ ಪರ ವ್ಯಾಖ್ಯಾನವು ಹಣ ಸಹಿತ ಮತ್ತು ಹಣ ರಹಿತ ಆರ್ಥಿಕತೆಗಳನ್ನು ಪರಿಗಣಿಸುವುದರ ಮೂಲಕ ವ್ಯಾಪಕ ಮನ್ನಣೆಗಳಿಸಿದೆ. ಈ ಎರಡೂ ರೀತಿಯ ಆರ್ಥಿಕತೆಯ ಸಮಸ್ಯೆಗಳ ಕೂಲಂಕುಷ ಅಧ್ಯಯನಕ್ಕೆ ಈ ವ್ಯಾಖ್ಯೆ ಮನ್ನಣೆ ನೀಡಿದೆ.

4. ಆಧುನಿಕ ವ್ಯಾಖ್ಯಾನವು ಮೂಲಭೂತ ಸಮಸ್ಯೆಗಳತ್ತ ಗಮನಹರಿಸಿ ವಾಸ್ತವ ಸ್ಥಿತಿಗೆ ಹತ್ತಿರವೆನ್ನಿಸಿದೆ. ಕೊರತೆಯ ಸಂಪನ್ಮೂಲಗಳು, ಅವುಗಳ ವಿವಿಧ ಉಪಯೋಗಗಳು ಮತ್ತು ಆಯ್ಕೆಯ ಸಮಸ್ಯೆ ಮುಂತಾದ ಅಂಶಗಳ ಜೊತೆಗೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕೊರತೆಯ ಸಂಪನ್ಮೂಲಗಳ ಪಾತ್ರವನ್ನು ಕುರಿತು ಚರ್ಚಿಸಿದೆ. ಇದರಿಂದಾಗಿ ಮೂಲಭೂತ ಆರ್ಥಿಕ ಸಮಸ್ಯೆಗಳ ವಿಶ್ಲೇಷಣೆ ಮತ್ತು ಅವುಗಳ ಪರಿಹಾರದ ಒಳನೋಟ ಈ ವ್ಯಾಖ್ಯೆಯಲ್ಲಿ ಲಭ್ಯವಾಗುತ್ತದೆ.

5. ಈ ವ್ಯಾಖ್ಯಾನವು ಕೊರತೆಯಿಂದಿರುವ ಸಂಪನ್ಮೂಲಗಳನ್ನು ವಿವಿಧ ಉಪಯೋಗಗಳ ನಡುವೆ ಹಂಚಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ವಿಧಾನವನ್ನು ತಿಳಿಯಪಡಿಸುತ್ತದೆ. ಅಲ್ಲದೆ ರಾಷ್ಟ್ರೀಯ ಆದಾಯ ಮತ್ತು ಉದ್ಯೋಗ ಪ್ರಮಾಣಗಳ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಅದು ಪರಿಗಣಿಸುತ್ತದೆ. ಆದ್ದರಿಂದ ಈ ವ್ಯಾಖ್ಯಾನ ಹೆಚ್ಚು ಸಮಂಜಸ ಮತ್ತು ವೈಜ್ಞಾನಿಕವೆಂದು ಹೇಳಬಹುದಾಗಿದೆ.

ವ್ಯಾಖ್ಯೆ ರಹಿತ ಪಂಥ

ಅರ್ಥಶಾಸ್ತ್ರವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಒಂದು ಸಾಮಾಜಿಕ ವಿಜ್ಞಾನವಾಗಿದೆ. ಅದರ ವ್ಯಾಪ್ತಿಯಲ್ಲಿ ಬರುವಂತಹ ವಿಷಯಗಳು ಆಸಂಖ್ಯವಾಗಿದೆ ಮತ್ತು ಕ್ಲಿಷ್ಟಕರವಾಗಿದೆ. ಹೀಗೆ ವಿಶಾಲ ಮತ್ತು ಪ್ರಬುದ್ಧಮಾನವಾಗಿ ಬೆಳೆಯುತ್ತಿರುವ ಅರ್ಥಶಾಸ್ತ್ರಕ್ಕೆ ಸಮರ್ಪಕವಾದ ಮತ್ತು ಸರ್ವಸಮ್ಮತವಾದಂತಹ ವ್ಯಾಖ್ಯೆಯನ್ನು ನೀಡುವುದು ಅತ್ಯಂತ ಜಟಿಲ ವಿಷಯವಾಗಿದೆ. ಒಂದು ವೇಳೆ ವ್ಯಾಖ್ಯೆ ನೀಡಿದರೂ ಕೂಡ ಅದು ಅರ್ಥಶಾಸ್ತ್ರದ ವ್ಯಾಪ್ತಿಯನ್ನು ಸಂಕುಚಿತಗೊಳಿಸುವ ಸಂಭವವೇ ಹೆಚ್ಚು. ಆದ್ದರಿಂದ ಅರ್ಥಶಾಸ್ತ್ರಕ್ಕೆ ವ್ಯಾಖ್ಯೆಯನ್ನು ಕೊಡುವ ಅಗತ್ಯವೇ ಇಲ್ಲ ಎಂದು ಕೆಲ ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಗುಂಪಿಗೆ ಸೇರಿದ ಅರ್ಥಶಾಸ್ತ್ರಜ್ಞರನ್ನು ವ್ಯಾಖ್ಯೆ ರಹಿತ ಪಂಥವೆಂದು ಪರಿಗಣಿಸಲಾಗಿದೆ.

ಸ್ವೀಡನ್ನಿನ ಅರ್ಥಶಾಸ್ತ್ರಜ್ಞರಾದ ಗುನ್ನಾರ್ ಮಿರ್ಡಾಲ್ ಮೇರೆಗೆ “ಅರ್ಥಶಾಸ್ತ್ರಕ್ಕೆ ವ್ಯಾಖ್ಯೆಯೊಂದನ್ನು ಹುಡುಕುವುದು ತೀರ ಅನಗತ್ಯ ಮತ್ತು ಅನಪೇಕ್ಷಣೀಯ. ಅರ್ಥಶಾಸ್ತ್ರಕ್ಕೆ ಸಮಂಜಸ ವ್ಯಾಖ್ಯಾನವನ್ನು ಹುಡುಕುವ ಬಗ್ಗೆ ಅರ್ಥಶಾಸ್ತ್ರಜ್ಞರು ಕಾಳಜಿ ವಹಿಸಬೇಕಾದ ಅಗತ್ಯವೇ ಇಲ್ಲ”.

ಮಾರಿಸ್ ಡಾಬ್ ಅವರ ಪ್ರಕಾರ ʻʻಈಗಾಗಲೇ ಜನಪ್ರಿಯವಾಗಿರುವ ಅರ್ಥಶಾಸ್ತ್ರಕ್ಕೆ ಒಂದು ತರ್ಕಬದ್ದವಾದ ವ್ಯಾಖ್ಯೆಯನ್ನು ಹುಡುಕುವುದು ನಿರರ್ಥಕವಾದ ಕೆಲಸ”.

ಪ್ರೊ.ಪ್ಯಾರಟೋ ಅವರ ಪ್ರಕಾರ “ಅರ್ಥಶಾಸ್ತ್ರಕ್ಕೆ ಒಂದು ಯೋಗ್ಯವಾದ ವ್ಯಾಖ್ಯೆಯನ್ನು ಹುಡುಕುವ ಕಾರ್ಯ ಸಮಯದ ಅಪವ್ಯಯಕ್ಕೆ ಕಾರಣವಾಗುತ್ತದೆ”.

ಆರ್ಥಿಕ ಚಟುವಟಿಕೆಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಇಂತಹ ಬದಲಾವಣೆ ಮತ್ತು ಹೊಸ ಬೆಳವಣಿಗೆಗಳನ್ನು ಅರ್ಥಶಾಸ್ತ್ರದ ವ್ಯಾಪ್ತಿಯೊಳಗೆ ತರುವ ಪ್ರಯತ್ನವು ನಿರಂತರವಾಗಿ ನಡೆಯುತ್ತಿರಬೇಕಾಗುತ್ತದೆ. ಇಲ್ಲವಾದಲ್ಲಿ ಹಳೆಯ ವ್ಯಾಖ್ಯೆಗಳು ತಮ್ಮ ಸತ್ವವನ್ನು ಕಳೆದುಕೊಳ್ಳುತ್ತವೆ. ಆದ್ದರಿಂದ ಯಾವುದೇ ಒಂದು ಕಾಲದಲ್ಲಿ ನೀಡಲಾದ ವ್ಯಾಖ್ಯೆ ಆ ಕಾಲಕ್ಕೆ ಮಾತ್ರ ಸರಿ ಹೊಂದುತ್ತದೆ. ಅದು ಸರ್ವಕಾಲಕ್ಕೂ ಪ್ರಾಯೋಗಿಕವಾಗಿರುವುದು ಸಾಧ್ಯವೇ ಇಲ್ಲದ ಮಾತು. ಈ ಹಿನ್ನೆಲೆಯಲ್ಲಿ ಅರ್ಥಶಾಸ್ತ್ರಕ್ಕೆ ಸರ್ವಸಮ್ಮತವಾದ ಮತ್ತು ಸರ್ವಕಾಲಿಕವಾದ ವ್ಯಾಖ್ಯೆ ನೀಡುವುದು ಕಷ್ಟಸಾಧ್ಯದ ಮಾತು. ಈ ಕಾರಣದಿಂದಾಗಿ ಪ್ರೊ.ಜೇಕಬ್ ವೈನರ್ ಅವರು “ಅರ್ಥಶಾಸ್ತ್ರಜ್ಞರು ಏನನ್ನು ಮಾಡುತ್ತಾರೋ ಅದೇ ಅರ್ಥಶಾಸ್ತ್ರವಾಗಿದೆ” ಎಂದು ಹೇಳಿದ್ದಾರೆ.