ವಾಯುಗಣದ ಬದಲಾವಣೆಗೆ ಎರಡು ಅಂಶಗಳು ಪ್ರಮುಖವಾಗಿ ಕಾರಣಗಳಾಗಿವೆ. ಅವುಗಳೆಂದರೆ ನೈಸರ್ಗಿಕ ಕಾರಣಗಳು ಮತ್ತು ಮಾನವ ನಿರ್ಮಿತ ಕಾರಣಗಳು.
ವಾಯುಗಣದ ಬದಲಾವಣೆಗೆ ಎರಡು ಅಂಶಗಳು ಪ್ರಮುಖವಾಗಿ ಕಾರಣಗಳಾಗಿವೆ. ಅವುಗಳೆಂದರೆ ನೈಸರ್ಗಿಕ ಕಾರಣಗಳು ಮತ್ತು ಮಾನವ ನಿರ್ಮಿತ ಕಾರಣಗಳು.
1. ನೈಸರ್ಗಿಕ ಕಾರಣಗಳು: (Natural Causes)
ಭೂಮಿಯ ವಾಯುಗುಣ ಯಾವಾಗಲೂ ಒಂದೇ ರೀತಿಯಾಗಿರುವುದಿಲ್ಲ. ಅದು ನಿರಂತರವಾಗಿ ಬದಲಾವಣೆಗೆ ಒಳಗಾಗುತ್ತಲೇ ಇರುತ್ತದೆ. ವಿವಿಧ ನೈಸರ್ಗಿಕ ಕಾರಣಗಳಿಂದಾಗಿ ವಾಯುಗುಣ ಬದಲಾಗುತ್ತಿರುವುದು ನಮಗೆ ಗೋಚರಿಸುತ್ತದೆ.
1.ಭೂಖಂಡಗಳ ಚಲನೆ: ಭೂ ಖಂಡಗಳು ವಿವಿಧ ವಾಯುಗುಣ ವಲಯಗಳಿಗೆ ಬದಲಾವಣೆಗೊಂಡಿದೆ. ಅಂಟಾರ್ಟಿಕ ಖಂಡ ಹಿಂದೆ ಉಷ್ಣವಲಯವಾಗಿದ್ದು ಈಗ ಹಿಮಾಲಯವಾಗಿ ಬದಲಾದ ಕಾರಣ ಅಲ್ಲಿ ಕಲ್ಲಿದ್ದಲು ನಿಕ್ಷೇಪಗಳು ಕಂಡುಬಂದಿವೆ.
2.ಜ್ವಾಲಾಮುಖಿಗಳು: ಪದೇ ಪದೇ ಭೂಮಿಯ ಮೇಲೆ ಜ್ವಾಲಾಮುಖಿಗಳು ಸಂಭವಿಸುವುದರಿಂದ ಗಂಧಕದ ಡೈಆಕ್ಸೈಡ್, ನೀರು, ಆವಿ, ಗಾಳಿ ಹಾಗೂ ದೂಳು ವಾಯುಮಂಡಲದಲ್ಲಿ ಸೇರುತ್ತವೆ. ಇದು ನೂರಾರು ವರ್ಷಗಳವರೆಗೆ ಹೀಗೆ ನಿರಂತರವಾಗಿ ನಡೆದಾಗ ವಾಯುಗುಣದಲ್ಲಿ ಸಹಜವಾಗಿ ಬದಲಾವಣೆ ಕಂಡುಬರುತ್ತದೆ.
3.ಭೂಮಿ ಅಕ್ಷದ ಬದಲಾವಣೆ: ಭೂಮಿಯ ತನ್ನ ಕಕ್ಷೆಯ ಮೇಲೆ 23½ ಕೋನದಲ್ಲಿ ಓರೆಯಾಗಿ ಸುತ್ತುತ್ತದೆ. ಈ ಓರೆಯಾಗುವಿಕೆ ಒಂದೇ ರೀತಿಯಾಗಿರದೆ ಅದು ಒಂದು ಶತಮಾನದಲ್ಲಿ ಅರ್ಧ ಡಿಗ್ರಿಉಷ್ಟು ಬದಲಾವಣೆ ಹೊಂದಿದೆಯೆಂದು ಅಂದಾಜು ಮಾಡಲಾಗಿದೆ. ಈ ಕಾರಣದಿಂದಲೂ ವಾಯುಗುಣದಲ್ಲಿ ಬದಲಾವಣೆ ಕಂಡು ಬರುತ್ತದೆ.
2.ಮಾನವ ನಿರ್ಮಿತ ಕಾರಣಗಳು: (Man Included Causes)
ಇತ್ತೀಚಿನ ದಶಕಗಳಲ್ಲಿ ವಾಯುಗುಣದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವುದು ದೃಢಪಟ್ಟಿದೆ. ಮಾನವನ ವಿವಿಧ ಬಗೆಯ ಅಹಿತಕರ ಘಟನೆಗಳ ಕಾರಣ ವಾಯುಮಂಡಲದಲ್ಲಿ ತೀವ್ರತರವಾದ ಬದಲಾವಣೆಗಳು ಗೋಚರಿಸುತ್ತವೆ. ಕೈಗಾರಿಕಾ ಕ್ರಾಂತಿಯ ನಂತರ ವಾಯುಮಂಡಲದ ಉಷ್ಣಾಂಶದಲ್ಲಿ ಸಾಕಷ್ಟು ಏರುಪೇರುಗಳು ಕಂಡುಬಂದವು. ವಿದ್ಯುತ್ ಉತ್ಪಾದನೆ, ಕಾಗದ ಉತ್ಪಾದನೆ, ವ್ಯವಸಾಯ, ಪ್ರಾಣಿ ಸಾಗಾಣಿಕೆ, ಮೀನುಗಾರಿಕೆ ವಿಸ್ತಾರ ಹೊಂದಿದಂತೆ ಕಾಡುಗಳ ನಾಶವು ಹೆಚ್ಚಾಯಿತು. ಇದರಿಂದಾಗಿ ನೈಸರ್ಗಿಕ ಪರಿಸರದಲ್ಲಿ ಬದಲಾವಣೆಗಳಾಗಿ ವಾಯುಮಂಡಲದಲ್ಲಿ ಬಿಸಿಯಾಗಿದೆ. 18ನೇ ಶತಮಾನದ ಆರಂಭದಲ್ಲಿ ಜಾಗತಿಕ ತಾಪಮಾನ 14೦c ಸೆ ನಷ್ಟಿತ್ತು. 2017ರ ವೇಳೆಗೆ ಅದು 10 ಡಿಗ್ರಿ ಸೆ ನಷ್ಟು ಹೆಚ್ಚಾಗಿದೆ. 2015ರ ಕಾನ್ಫರೆನ್ಸ್ ಆಫ್ ಪಾರ್ಟಿಸ್ ಸಮಾವೇಶದಲ್ಲಿ ಜಗತ್ತಿನ 195 ದೇಶಗಳು ಭಾಗವಹಿಸಿ ಜಾಗತಿಕ ತಾಪಮಾನವು ಕೈಗಾರಿಕಾ ಪೂರ್ವ ಹಂತಕ್ಕಿಂತ 1.5° ಸೆ ಗಿಂತ ಹೆಚ್ಚಾಗದಂತೆ ನಿಯಂತ್ರಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಆದರೂ ಯಾವ ಪ್ರಯೋಜನಗಳೂ ಸದ್ಯಕ್ಕೆ ಕಂಡು ಬರುತ್ತಿಲ್ಲ.
- ಕಾಡುಗಳ ನಾಶ: (Deforeststion) ಪ್ರಪಂಚದಲ್ಲಿ ಹಲವಾರು ಕಾರಣಗಳಿಂದ ಕಾಡುಗಳು ನಾಶಗೊಂಡಿದೆ. ವ್ಯವಸಾಯ, ಅಣೆಕಟ್ಟು ನಿರ್ಮಾಣ, ರೈಲು ಹಳಿಗಳ ನಿರ್ಮಾಣ, ನೀರಾವರಿ, ಪಶು ಸಂಗೋಪನೆ, ಅರಣ್ಯ ವಸ್ತುಗಳ ಬಳಕೆ, ವಸತಿ ಯೋಜನೆ, ಕಾಡಿಗೆ ಬೆಂಕಿ ಮೊದಲಾದ ಕಾರಣಗಳಿಂದ ಕಾಡುಗಳು ನಾಶವಾಗಿವೆ. ಇದರ ಪರಿಣಾಮದಿಂದ ವಾಯುಮಂಡಲದಲ್ಲಿ ಇಂಗಾಲಾಮ್ಲ ಹೆಚ್ಚಾಗಿದೆ. ಇದು ವಾಯುಗುಣದ ಬದಲಾವಣೆಗೆ ಕಾರಣವಾಗಿದೆ. ಇತ್ತೀಚಿಗೆ ಕಾಡುಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಅದರಿಂದ ಯಾವುದೇ ಯಶಸ್ಸು ಕಂಡುಬಂದಿಲ್ಲ.
2.ಕೈಗಾರಿಕೆಗಳ ಸ್ಥಾಪನೆ: (Establishment of Industries) ಪ್ರಪಂಚದಲ್ಲಿ ಬಿಲಿಯನ್ ಕೈಗಾರಿಕೆಗಳು ಸ್ಥಾಪನೆಯಾಗಿವೆ.. ಅವುಗಳಲ್ಲಿ ಸಿಮೆಂಟ್, ಕಬ್ಬಿಣ ಮತ್ತು ಉಕ್ಕು ರಾಸಾಯನಿಕ ಗೊಬ್ಬರ ಮುಂತಾದ ಕಾರ್ಖಾನೆಗಳು 23% ಅಧಿಕ ಹಸಿರು ಮನೆ ಅನಿಲಗಳಾದ ಇಂಗಾಲದ ಡೈಆಕ್ಸೈಡ್ ಹಾಗೂ ಇತರೆ ಅನಿಲಗಳನ್ನು ಉತ್ಪಾದಿಸುತ್ತವೆ. ಇವುಗಳು ವಾಯುಗುಣದ ಬದಲಾವಣೆಗೆ ಕಾರಣಗಳಾಗಿವೆಯಲ್ಲದೆ ಮಾನವನ ಆರೋಗ್ಯದ ಮೇಲೂ ಪರಿಣಾಮ ಬೀರಿವೆ.
3.ಶಾಕೋತ್ಪನ್ನ ಘಟಕಗಳು: (Thermal Plants) ಇಂದು ಮಾನವನ ಅಗತ್ಯಗಳಲ್ಲಿ ಒಂದಾದ ವಿದ್ಯುತ್ ಶಕ್ತಿ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ವಿಶ್ವದೆಲ್ಲೆಡೆ ಜಲವಿದ್ಯುತ್, ಅಣುವಿದ್ಯುತ್, ಶಾಖವಿದ್ಯುತ್, ಸೌರವಿದ್ಯುತ್, ಪವನವಿದ್ಯುತ್, ಮೊದಲಾದ ವಿದ್ಯುತ್ ಉತ್ಪಾದನೆ ಘಟಕಗಳು ಆರಂಭಿಸಲಾಗಿದೆ. ಇವುಗಳಲ್ಲಿ ಶಾಕೋತ್ಪನ್ನ ಪ್ರಮಾಣವೇ ಇಂದು ಹೆಚ್ಚಾಗಿದೆ. ಈ ಘಟಕಗಳಿಗೆ ಅಧಿಕ ಪ್ರಮಾಣದ ಕಲ್ಲಿದ್ದಲನ್ನು ಬಳಸುತ್ತಾರೆ. ಇದು ವಾಯುಮಂಡಲದಲ್ಲಿನ ಇಂಗಾಲದ ಡೈಆಕ್ಸೈಡ್ ಹೆಚ್ಚಳಕ್ಕೆ ಕಾರಣವಾಗಿದೆ. ಶೇಕಡ 25ರಷ್ಟು ಇಂಗಾಲದ ಡೈಆಕ್ಸೈಡ್ ವಾತಾವರಣವನ್ನು ಸೇರುವುದೆಂದು ಅಂದಾಜಿಸಲಾಗಿದೆ. ಶಾಕೋತ್ಪನ್ನ ಕೇಂದ್ರಗಳಲ್ಲಿ 1 ಕಿ.ವ್ಯಾಟ್ ವಿದ್ಯುತ್ ಉತ್ಪಾದಿಸಿದರೆ 950 ಗ್ರಾಂ ಇಂಗಾಲದ ಡೈಆಕ್ಸೈಡ್ ವಾಯು ಮಂಡಲವನ್ನು ಸೇರುತ್ತದೆ.
4.ಸಾರಿಗೆ: (Transport) ಆಧುನಿಕ ಜಗತ್ತಿನಲ್ಲಿ ಸಾರಿಗೆ-ಸಂಪರ್ಕಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಸಾರಿಗೆ ಸಂಪರ್ಕಗಳು ನಮ್ಮ ದೇಶದ ನರನಾಡಿಗಳು ಇದ್ದ ಹಾಗೆ. ರಸ್ತೆ ಸಾರಿಗೆ, ರೈಲು ಸಾರಿಗೆ, ವಾಯು ಸಾರಿಗೆ ಹಾಗೂ ಜಲ ಸಾರಿಗೆಗಳು ಇವೆ. ಇವೆಲ್ಲಾ ಸಾರಿಗೆಗಳಿಗೆ ಬಳಕೆಯಾಗುವುದು ಪೆಟ್ರೋಲಿಯಂ ಇಂಧನಗಳು. ಪೆಟ್ರೋಲಿಯಂ ಬಳಕೆಯಿಂದ ಸೋರಿದ ಹೊಗೆಯಲ್ಲಿ ಅಪಾರ ಪ್ರಮಾಣದ ಇಂಗಾಲದ ಮೊನಾಕ್ಸೈಡ್ ಹಾಗೂ ಸಾರಜನಕ ಆಕ್ಸೈಡ್‌ಗಳು ವಾಯುಮಂಡಲವನ್ನು ಸೇರುತ್ತವೆ. ಇವುಗಳು ವಾಯುಗುಣದ ಬದಲಾವಣೆ ಕಾರಣವಾಗುತ್ತದೆ.
5.ಕೃಷಿ: (Agriculture) ಆಧುನಿಕ ಬೇಸಾಯ ಪದ್ಧತಿಯಲ್ಲಿ ಮಾನವನು ಹೆಚ್ಚು ಇಳುವರಿಗಾಗಿ ವಿವಿಧ ಬಗೆಯ ರಸಗೊಬ್ಬ̧ರ ಕ್ರಿಮಿನಾಶಕ ಹಾಗೂ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾನೆ. ಇದರಿಂದ ಇಂಗಾಲದ ಡೈಆಕ್ಸೈಡ್ ಭೂಮಂಡಲವನ್ನು ಸೇರಿ ವಾಯುಗುಣದ ಏರುಪೇರಿಗೆ ಕಾರಣವಾಗುತ್ತದೆ.
6.ಘನ ತ್ಯಾಜ್ಯ: (Solid Waste) ಮಾನವನಿಂದ ದಿನವೊಂದಕ್ಕೆ ಸುಮಾರು 60 ದಶಲಕ್ಷ ಟನ್‌ಗಳಷ್ಟು ಘನ ತ್ಯಾಜ್ಯ ಉತ್ಪಾದನೆ ಯಾಗುತ್ತದೆ ಎಂದು ಅಂದಾಜಿಸಲಾಗಿದೆ. ನಗರ ಪ್ರದೇಶಗಳಲ್ಲಿ ಘನ ತ್ಯಾಜ್ಯ ಉತ್ಪಾದನೆ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇವುಗಳನ್ನು ವಿಲೇವಾರಿ ಮಾಡಲು ಈಗ ಸ್ಥಳವೇ ಇಲ್ಲದಂತಾಗಿದೆ. ಕೆಲವೊಂದು ತ್ಯಾಜ್ಯಗಳು ಕೊಳೆತು ಗಬ್ಬು ವಾಸನೆ ಹರಡುತ್ತವೆ. ಘನ ತ್ಯಾಜ್ಯ ವಸ್ತುಗಳಿಂದ ಇಂಗಲಾಮ್ಲ ಹಾಗೂ ಮಿಥೇನ್ ಬಿಡುಗಡೆ ಹೊಂದಿ ವಾಯುಮಂಡಲವನ್ನು ಸೇರುತ್ತವೆ. ಇವುಗಳು ವಾಯುಗುಣದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ.
7.ತೈಲ ಮತ್ತು ಅನಿಲ ಬಾವಿಗಳು: ಇಂದು ಜಗತ್ತಿನಲ್ಲಿ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೆ ಹೋಗುತ್ತಿದೆ. ಹೆಚ್ಚುತ್ತಿರುವ ವಾಹನಗಳಿಗೆ ಇಂಧನದ ಅಗತ್ಯವಿದೆ. ಹಾಗಾಗಿ ಜಗತ್ತಿನಾದ್ಯಂತ ತೈಲ ಬಾವಿಗಳನ್ನು ನಿರಂತರವಾಗಿ ಕೊರೆಯಲಾಗುತ್ತದೆ. ಹೀಗೆ ತೈಲ ಮತ್ತು ಅನಿಲ ಬಾವಿಗಳನ್ನು ಕೊರೆದಾಗ ಅಪಾರ ಪ್ರಮಾಣದಲ್ಲಿ ಮಿಥೇನ್ ಬಿಡುಗಡೆಯಾಗುತ್ತದೆ. ಜೊತೆಗೆ ಸಮುದ್ರದಲ್ಲಿ ಇಂಧನ ಸೋರಿಕೆಯಾಗುವುದು. ಇವೆಲ್ಲಾ ಕಾರಣಗಳಿಂದ ವಾಯುಮಂಡಲದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ.
8.ಕೊಳ್ಳುಬಾಕತನ: ಮೂಲಭೂತ ಅಗತ್ಯಗಳು ಈಡೇರಿದ ನಂತರ ತೆಪ್ಪಗಿರದ ಮನುಷ್ಯ ತಾನು ಸಮಾಜದಲ್ಲಿ ದೊಡ್ಡವನು ಎಂದು ತೋರಿಸಿಕೊಳ್ಳುವುದಕ್ಕೋ ಅಥವಾ ತನ್ನ ಸಾಮಾಜಿಕ ಅಂತಸ್ತನ್ನು ಹೆಚ್ಚಿಸಿಕೊಳ್ಳುವುದಕ್ಕೋ ತನಗೆ ಬೇಡವಾದ ವಸ್ತುಗಳನ್ನು ಅಥವಾ ಅಗತ್ಯವನ್ನು ಮೀರಿದ ವಸ್ತುಗಳನ್ನು ದಿನೇ ದಿನೇ ಕೊಂಡುಕೊಳ್ಳುತ್ತಾನೆ. ಉದಾ: ಚಿನ್ನ, ಮನೆ,ಉಡುಪು ಇತ್ಯಾದಿಗಳನ್ನು ಕೊಳ್ಳುವುದು ಹೆಚ್ಚಾಗಿದೆ. ಈ ಅಧಿಕ ಕೊಳ್ಳುವಿಕೆಯಿಂದ ಪ್ರತಿ ವಸ್ತುಗಳ ಉತ್ಪಾದನೆಗೂ ಅಧಿಕ ಸಂಪನ್ಮೂಲದ ಅಗತ್ಯತೆ ಇರುತ್ತದೆ. ಇದು ವಾಯುಗುಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಉಪಸಂಹಾರ
ವಾಯುಗುಣದ ಬದಲಾವಣೆ ನೈಸರ್ಗಿಕವಾಗಿಯೂ ಹಾಗೂ ಮಾನವ ನಿರ್ಮಿತ ಕಾರಣಗಳಿಂದಲೂ ಸಂಭವಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ವಿಶೇಷವಾಗಿ ಕೈಗಾರಿಕೆ, ಸಾರಿಗೆ, ಕಾಡುಗಳ ನಾಶ ಮತ್ತು ಅತಿಯಾದ ಸಂಪನ್ಮೂಲ ಬಳಕೆ ವಾಯುಗುಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಪರಿಸರ ಸ್ನೇಹಿ ತಂತ್ರಜ್ಞಾನಗಳ ಬಳಕೆ, ಅರಣ್ಯ ಸಂರಕ್ಷಣೆ ಹಾಗೂ ಜಾಗೃತ ಜೀವನಶೈಲಿ ಅಗತ್ಯವಾಗಿದೆ. ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯುತ ನಡೆ ಮಾತ್ರ ಭವಿಷ್ಯದ ಪೀಳಿಗೆಗೆ ಸುರಕ್ಷಿತ ಭೂಮಿಯನ್ನು ನೀಡಲು ಸಹಕಾರಿಯಾಗುತ್ತದೆ.