ಶಬ್ಧವು ಸಂವಹನದ ಪ್ರಮುಖ ಮಾಧ್ಯಮವಾಗಿದ್ದರೂ, ಅದರ ಅತಿಯಾದ ಬಳಕೆ ಮಾಲಿನ್ಯವಾಗಿ ಪರಿವರ್ತಿತವಾಗುತ್ತದೆ. ಇಂದಿನ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡಲ್ಲೂ ಶಬ್ಧ ಮಾಲಿನ್ಯ ವೇಗವಾಗಿ ಹೆಚ್ಚುತ್ತಿದೆ. ಯಂತ್ರೋಪಕರಣಗಳು, ವಾಹನ ಸಂಚಾರ, ಧ್ವನಿವರ್ಧಕಗಳು ಹಾಗೂ ಸಾಮಾಜಿಕ ಸಮಾರಂಭಗಳು ಶಬ್ಧ ಮಾಲಿನ್ಯದ ಪ್ರಮುಖ ಕಾರಣಗಳಾಗಿವೆ. ಇದರಿಂದ ನಿದ್ರಾಭಂಗ, ಕಿವಿ ಹಾನಿ, ತಲೆನೋವು ಮತ್ತು ಮಾನಸಿಕ ಒತ್ತಡದಂತಹ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಶಬ್ಧ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವುದು ಮತ್ತು ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ.

ಶಬ್ಧ ಮಾಲಿನ್ಯಕ್ಕೆ ಕಾರಣಗಳು:

  1. ಗುಡುಗು, ಸಿಡಿಲು, ಜ್ವಾಲಾಮುಖಿ, ಭೂಕಂಪ, ಭಾರಿ ಮಳೆ, ಜಲಪಾತ ಹಾಗೂ ಸಮುದ್ರದ ಅಲೆಗಳು ಇತ್ಯಾದಿ ಮೂಲಗಳಿಂದ ಶಬ್ಧಗಳು  ಹೊರ ಬರುತ್ತಿವೆಯಾದರು ಇವುಗಳು ಕಿವಿಗೆ ಅಷ್ಟೊಂದು ಅಪಾಯಕಾರಿಯಾಗಿ ಪರಿಣಾಮಿಸಲಾರವು.
  2.  ಹಿಟ್ಟಿನ ಗಿರಣಿಗಳು, ಬಾವಿ ತೋಡುವುದು, ರೈಲು ಮಾರ್ಗಗಳನ್ನು ಕೊರೆಯುವುದು, ಗಣಿಗಾರಿಕೆಯನ್ನು ಕೊರೆಯುವುದು ಹಾಗೂ ಕಾರ್ಖಾನೆಯಿಂದ ಹೊರಡುವ ಶಬ್ಧಗಳು ಕಿವಿಗೆ ಅಸಹನೀಯವಾಗುತ್ತವೆ.
  3.  ರಸ್ತೆಯ ಮೇಲಿನ ವಾಹನಗಳು, ರೈಲು, ವಿಮಾನ, ಲಾರಿಗಳು, ಬೈಕ್‌ಗಳು, ಅಗ್ನಿಶಾಮಕ ದಳದ ವಾಹನಗಳು ಆಂಬುಲೆನ್ಸ್, ಪೊಲೀಸ್ ವಾಹನಗಳು, ಬುಲ್ಡೋಜರ್, ಟ್ರ್ಯಾಕ್ಟರ್ ಹಾಗೂ ಜೆಟ್‌ಗಳ ಓಡಾಟದಿಂದ ಹೊರಡುವ ಶಬ್ಧ ಕಿವಿಗೆ ಅಪ್ಪಳಿಸಿದಂತಾಗುತ್ತದೆ.
  4. ಸಾಮಾಜಿಕ ಸಮಾರಂಭಗಳಲ್ಲಿ ಹಾಕಲಾಗುವ ಲೌಡ್‌ಸ್ಪೀಕರ್ ಹಾಗೂ ಗಣೇಶ ವಿಸರ್ಜನೆ ಸಮಯದಲ್ಲಿ ಹಾಕುವ ಡಿಜೇ ಸೌಂಡ್ ಹೃದಯವೇ ಒಡೆದು ಹೋದಂತಹ ಅನುಭವವನ್ನು ಉಂಟುಮಾಡುತ್ತದೆ.
  5.  ಮನೆ ಬಳಕೆಯ ವಸ್ತುಗಳಾದ ಗ್ರಾಂಡರ್, ಮಿಕ್ಸಿ, ವಾಷಿಂಗ್ ಮಷೀನ್, ಕೂಲರ್, ವ್ಯಾಕ್ಯೂಮ್ ಕ್ಲೀನರ್, ಹವಾ ನಿಯಂತ್ರಕಗಳು, ಫ್ಯಾನ್‌ಗಳು, ರೇಡಿಯೋ, ದೂರದರ್ಶನ, ವಾದ್ಯ ಸಂಗೀತ ಉಪಕರಣ, ಧ್ವನಿವರ್ಧಕಗಳು, ಶಬ್ಧ ಮಾಲಿನ್ಯಕ್ಕೆ  ಕಾರಣವಾಗಿದೆ.
  6. ನಗರಗಳಲ್ಲಿನ ಬೀದಿ ನಾಯಿಗಳು, ಬೆಕ್ಕುಗಳು ಬೊಗಳುವಾಗ ಹಾಗೂ ಚೀರಾಡುವಾಗ ಬರುವ ಶಬ್ಧಗಳಿಂದ ರಾತ್ರಿ ನಿದ್ರೆಗೆ ಭಂಗ ಉಂಟಾಗುತ್ತದೆ.
  7.  ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳ ಶಿಖರಗಳ ಮೇಲೆ ಲೌಡ್‌ಸ್ಪೀಕರ್ ಇಟ್ಟು ಬೆಳಗ್ಗೆ ಮತ್ತು ರಾತ್ರಿ ಅತಿ ಹೆಚ್ಚು ಸೌಂಡನ್ನು ಇಟ್ಟು ಹಾಡುಗಳನ್ನು ಹಾಕುವುದರಿಂದ ಜನರಿಗೆ ಮಾತನಾಡಲು ಕಿರಿಕಿರಿಯನ್ನುಂಟು ಮಾಡುತ್ತದೆ.
  8.  ಸಭೆ, ಸಮಾರಂಭ, ಮದುವೆ, ನಾಮಕರಣ ಹಾಗೂ ಸೀಮಂತ ಕಾರ್ಯಗಳಲ್ಲಿ ಇಂದು ಧ್ವನಿವರ್ಧಕಗಳನ್ನು ಬಳಸುವುದರಿಂದ ಸಾರ್ವಜನಿಕರಿಗೆ ಬಹಳ ಮುಜುಗರ ಉಂಟಾಗುತ್ತದೆ.
  9.  ನಗರ ಪ್ರದೇಶದಲ್ಲಿ ಜನಸಂದಣಿ ಇಂದ ಕೂಡಿದ ಮಾರುಕಟ್ಟೆ ಸಂಕೀರ್ಣ ಶಬ್ಧ ಮಾಲಿನ್ಯದ ಕೇಂದ್ರಗಳಾಗಿವೆ. ಗಿರಾಕಿಗಳನ್ನು ಜೋರಾಗಿ ಕೂಗುವ ವ್ಯಾಪಾರಿಗಳು, ಚೌಕಾಶಿಯಲ್ಲಿ ತೊಡಗಿದ ಗ್ರಾಹಕರು, ಓಡಾಡುವ ವಾಹನಗಳು ಪ್ರಚಾರ ಮಾಡುವವರು ಬಳಸುವ ದ್ವನಿವರ್ಧಕಗಳು, ಕರ್ಕಶವಾದ ಪರಿಸರವನ್ನು ಸೃಷ್ಟಿಸುತ್ತವೆ.
  10. ಸೈರನ್‌ಗಳು, ವಾಹನಗಳ ಹಾರನ್‌ಗಳು, ಪಟಾಕಿಗಳು, ಸಿಡಿಮದ್ದುಗಳು, ಡೈನಾಮೆಟ್‌ಗಳು, ಬಾಂಬ್‌ಗಳು ಹಾಗೂ ಡಿಸ್ಕೋ ಪಾರ್ಟಿಗಳು ಶಬ್ಧ ಮಾಲಿನ್ಯಕ್ಕೆ ಕಾರಣಗಳಾಗಿವೆ.

ಶಬ್ಧವನ್ನು ಗ್ರಹಿಸುವ ಪ್ರಮುಖ ಸಾಧನವೆಂದರೆ ಅದು ಕಿವಿಗಳು ಮಾತ್ರ. ಇವುಗಳು ಮಾನವನ ಪ್ರಮುಖ ಶ್ರವಣಕೇಂದ್ರಗಳಿದ್ದಂತೆ. ಮಾನವನ ಕಿವಿಗಳು ಅತಿ ಸೂಕ್ಷ್ಮತೆಯಿಂದ ಕೂಡಿವೆ. ಶಬ್ಧವನ್ನು ಗ್ರಹಿಸುವುದು ಧ್ವನಿ, ಸ್ವರ, ಸದ್ದು ಹಾಗೂ ಕಂಪನಗಳ ಮುಖಾಂತರ ಶಬ್ಧವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಚಲಿಸುತ್ತದೆ. ಶಬ್ಧವು ಒಂದು ಸೆಕೆಂಡಿಗೆ 330 ಮೀಟರ್ ವೇಗದಲ್ಲಿ ಚಲಿಸುತ್ತದೆ. ಶಬ್ಧವನ್ನು ಡೆಸಿಬಲ್‌ (Decibel dB) ಎಂಬ ಮೂಲ ಮಾನದಿಂದ ಅಳೆಯುತ್ತಾರೆ. ಒಂದು ಡೆಸಿಬಿಲ್ ಎಂದರೆ ಮನುಷ್ಯ ಕೇಳಬಹುದಾದ ಅತ್ಯಂತ ಸೂಕ್ಷ್ಮ ಪ್ರಮಾಣದ ಶಬ್ಧ ವಿಶ್ವಸಂಸ್ಥೆಯ WHO ಆರೋಗ್ಯ ಸಂಸ್ಥೆಯ ಶಿಫಾರಸು ಮಾಡಿದ ಶಬ್ಧದ ತೀವ್ರತೆಯ ಮಟ್ಟವಾಗಿದೆ. 

ಮೂಲಗಳು

ತೀವ್ರತೆ

ಹಗಲು

ರಾತ್ರಿ

1

ಮನುಷ್ಯನ ಉಸಿರಾಟ

10db

 ಕೈಗಾರಿಕಾ ಪ್ರದೇಶ      75

70db

2

 ಮೆಲ್ಲನೆ ಕಿವಿಮಾತು

20 ರಿಂದ 30db

 ವಾಣಿಜ್ಯ ಪ್ರದೇಶ    65

53db

3

 ಗ್ರಂಥಾಲಯ

30-35db

 ವಾಸದ ಸ್ಥಳಗಳು  55

45db

4

 ಸಾಮಾನ್ಯ ಸಂಭಾಷಣೆ

40-60db

 ನಿಶಬ್ಧ ವಲಯ  50

40db

5

 ವಾಹನ ಸಂಚಾರ

60-90 db

6

 ಮೋಟಾರ್ ಬೈಕ್

105db

7

ಸಿಂಹ ಘರ್ಜನೆ 

105 ರಿಂದ 110 db

8

ಜೆಟ್

120db

9

 ರಾಕೆಟ್ ಉಡಾವಣೆ

170-180db

ಉಪಸಂಹಾರ

ಶಬ್ಧ ಮಾಲಿನ್ಯವು ಕೇವಲ ಕಿವಿಗೆ ಮಾತ್ರವಲ್ಲದೆ ಮನಸ್ಸು, ಹೃದಯ ಹಾಗೂ ದೈನಂದಿನ ಜೀವನದ ಗುಣಮಟ್ಟದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ನಿಯಂತ್ರಣರಹಿತ ಧ್ವನಿವರ್ಧಕ ಬಳಕೆ, ವಾಹನಗಳ ಹಾರ್ನ್ ಹಾಗೂ ಕೈಗಾರಿಕಾ ಶಬ್ಧಗಳು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. WHO ಶಿಫಾರಸು ಮಾಡಿದ ಶಬ್ಧ ಮಿತಿಗಳನ್ನು ಪಾಲಿಸುವುದು ಅತ್ಯಂತ ಅಗತ್ಯ. ಸಾರ್ವಜನಿಕ ಜಾಗೃತಿ ಮತ್ತು ಕಾನೂನು ಪಾಲನೆಯ ಮೂಲಕ ಶಬ್ಧ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಶಾಂತ ಪರಿಸರವೇ ಆರೋಗ್ಯಕರ ಸಮಾಜದ ಆಧಾರ ಎಂಬುದನ್ನು ಪ್ರತಿಯೊಬ್ಬರೂ ಅರಿತು ನಡೆದುಕೊಳ್ಳಬೇಕು.