ನಮ್ಮ ದೈನಂದಿನ ಜೀವನದಲ್ಲಿ, ಹಂಚಿಕೊಂಡ ಉದ್ದೇಶಗಳು ಮತ್ತು ಆಸಕ್ತಿಗಳಿಗಾಗಿ ಜನರನ್ನು ಒಟ್ಟುಗೂಡಿಸುವಲ್ಲಿ ಸಂಘಗಳು ಮೂಲಭೂತ ಪಾತ್ರವನ್ನು ವಹಿಸುತ್ತವೆ. ಅವುಗಳು ಕೇವಲ ಜನರ ಗುಂಪುಗಳಿಗಿಂತ ಹೆಚ್ಚು; ಸಂಘಗಳು ಸಾಮಾನ್ಯ ಗುರಿಗಳಿಗಾಗಿ ಒಟ್ಟಾಗಿ ಕೆಲಸ ಮಾಡುವ ಸಂಘಟಿತ, ಉದ್ದೇಶಪೂರ್ವಕ ಸಮುದಾಯಗಳಾಗಿವೆ. ಇಲ್ಲಿ, ಸಂಘಗಳನ್ನು ವ್ಯಾಖ್ಯಾನಿಸುವ ಮತ್ತು ಇತರ ಅನೌಪಚಾರಿಕ ಕೂಟಗಳಿಂದ ಪ್ರತ್ಯೇಕಿಸುವ ಪ್ರಮುಖ ಗುಣಲಕ್ಷಣಗಳನ್ನು ನಾವು ತಿಳಿಯುತ್ತೇವೆ.
ಸಂಘದ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ.
1. ಸಂಘ ಒಂದು ಮಾನವ ಸಮೂಹ:
ಸಂಘವು ಮೂಲಭೂತವಾಗಿ ಒಂದು ಮಾನವ ಸಮೂಹವಾಗಿದೆ. ಅದರಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುತ್ತಾರೆ. ಇದು ವ್ಯವಸ್ಥಿತವಾದ, ಸುವ್ಯವಸ್ಥಿತವಾದ ಹಾಗೂ ಸುಸಂಘಟಿತವಾದ ಸಮೂಹವಾಗಿದೆ. ಜನರ ಹೊರತಾಗಿ ಸಮೂಹ ಇರಲು ಸಾಧ್ಯವೇ ಇಲ್ಲ. ಹಾಗೆಂದು ಎಲ್ಲಾ ಮಾನವ ಸಮೂಹಗಳು ಸಂಘಗಳಾಗಿರಲಾರವು. ಉದಾ:- ರೈಲು ನಿಲ್ದಾಣದಲ್ಲಿನ ಜನರು, ಕ್ರಿಕೇಟ್, ಪುಟ್ಬಾಲ್, ಹಾಕಿ, ನಾಟಕ, ಸರ್ಕಸ್ ಮುಂತಾದವುಗಳನ್ನು ವೀಕ್ಷಿಸುವ ಜನ ಸಂಘವಾಗಿರಲು ಸಾಧ್ಯವಿಲ್ಲ.
2. ಸಮಾನ ಆಸಕ್ತಿ ಇಲ್ಲವೆ ಆಸಕ್ತಿಗಳು:
ಸಂಘದ ಸದಸ್ಯರಿಗೆ ಒಂದು ಇಲ್ಲವೆ ಹಲವಾರು ಸಮಾನ ಆಸಕ್ತಿಗಳಿರುತ್ತವೆ. ಸಮಾನ ಆಸಕ್ತಿಯುಳ್ಳ ಜನರೇ ಸಂಘಟಿತರಾಗಿ ಸಂಘವನ್ನು ರೂಪಿಸಿಕೊಂಡಿರುತ್ತಾರೆ. ರಾಜಕೀಯ ಆಸಕ್ತಿ ಹೊಂದಿರುವವರು ರಾಜಕೀಯ ಪಕ್ಷಗಳಿಗೆ ಸೇರಿಕೊಂಡರೆ, ಧಾರ್ಮಿಕ ಆಸಕ್ತಿಯುಳ್ಳ ಜನರು ಧಾರ್ಮಿಕ ಕ್ಷೇತ್ರ ಅಥವಾ ಸಂಘಗಳಿಗೆ ಸೇರಿಕೊಳ್ಳುತ್ತಾರೆ. ಕ್ರೀಡೆಯಲ್ಲಿ ಆಸಕ್ತಿಯುಳ್ಳವರು ಕ್ರೀಡಾ ಸಂಘಗಳಿಗೆ ಸೇರಿಕೊಳ್ಳುತ್ತಾರೆ.
3. ಸಹಕಾರದ ಮನೋಭಾವ:
ಸಂಘವು ಒಂದು ಸಹಕಾರ ತತ್ವದ ಆಧಾರದ ಮೇಲೆ ನಿಂತಿದೆ. ತಮ್ಮ ಸಮಾನ ಬೇಡಿಕೆಗಳ ಹಾಗೂ ಉದ್ದೇಶಗಳ ಈಡೇರಿಕೆಗಾಗಿ ಜನರು ಪರಸ್ಪರ ಸಹಕಾರ ಹಾಗೂ ಸಹಾಯದ ಮನೋಭಾವನೆಯಿಂದ ಪ್ರಯತ್ನಿಸುತ್ತಾರೆ. ಅವರು ಒಬ್ಬರು ಎಲ್ಲರಿಗಾಗಿ, ಎಲ್ಲರೂ ಒಬ್ಬರಿಗಾಗಿ ಎಂಬ ತತ್ವವನ್ನು ಅಳವಡಿಸಿಕೊಂಡಿರುತ್ತಾರೆ. ಸಂಘವಿಲ್ಲದೆ ತಮ್ಮ ಅನನ್ಯ ಆಸೆ ಆಕಾಂಕ್ಷೆಗಳು ಈಡೇರಲಾರವು ಎಂಬುದು ಅವರ ಅರಿವಿಗೆ ಬಂದಿರುತ್ತದೆ.
4. ಸಂಘಟಿತ ಸಮೂಹ:
ಸಂಘವು ಒಂದು ಸಂಘಟಿತ ಸಮೂಹವಾಗಿದೆ. ಜನರು ಸಂಘದ ಸಾಧಕ ಬಾಧಕಗಳನ್ನು ವಿವೇಚನಾಪೂರ್ವಕವಾಗಿ ಅರಿತುಕೊಂಡು ಸಂಘದ ಸದಸ್ಯರಾಗಿರುತ್ತಾರೆ. ಸಂಘಟನೆಯು ಸಂಘಕ್ಕೆ ಒಂದು ರೂಪ ಹಾಗೂ ಸ್ಥಿರತೆಯನ್ನು ಒದಗಿಸುತ್ತದೆ. ಸಂಘಟನೆಯು ಸಂಘವೊಂದರಲ್ಲಿ ವಿವಿಧ ಅಂತಸ್ತುಗಳು ಹಾಗೂ ಪಾತ್ರಗಳು ವಿವಿಧ ಸದಸ್ಯರಲ್ಲಿ ಹೇಗೆ ಹಂಚಲ್ಪಟ್ಟಿವೆ ಎಂಬ ಅಂಶವನ್ನು ಸ್ಪಷ್ಟಪಡಿಸುತ್ತದೆ.
5. ಸಾಮಾಜಿಕ ಸಂಬಂಧಗಳ ನಿಯಂತ್ರಣ:
ಸಂಘವು ತನ್ನ ಸದಸ್ಯರ ವರ್ತನೆಯನ್ನು ನಿಯಂತ್ರಿಸಲು ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದೆ. ಅದಕ್ಕಾಗಿ ಸಂಘಗಳು ತಮ್ಮದೇ ಆದ ಸಂಸ್ಥೆಗಳನ್ನು ರಚಿಸಿಕೊಳ್ಳುತ್ತವೆ. ಉದಾ:- ಕುಟುಂಬ ಎಂಬ ಸಂಘವು ‘ವಿವಾಹ’ ಎಂಬ ಸಂಸ್ಥೆಯ ಮೂಲಕ ಸದಸ್ಯರುಗಳ ಲೈಂಗಿಕ ನಡವಳಿಕೆಯ ಮೇಲೆ ನಿಯಂತ್ರಣವನ್ನು ಸಾಧಿಸುತ್ತದೆ.
6. ಸಾಧನಗಳು:
ಸಂಘಗಳು ಸದಸ್ಯರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಾಧನಗಳಾಗಿರುತ್ತವೆ. ಆಧುನಿಕ ಸಂಕೀರ್ಣ ಸಮಾಜದಲ್ಲಿರುವ ವಿವಿಧ ಸಂಘಗಳಲ್ಲಿನ ಎಲ್ಲಾ ಸದಸ್ಯರು ಸಮಾನ ರೀತಿಯಲ್ಲಿ ಸಕ್ರೀಯರಾಗಿರುತ್ತಾರೆ ಎಂದು ಹೇಳಲು ಬರುವುದಿಲ್ಲ. ಬಹುತೇಕ ಸದಸ್ಯರು ನಿದ್ರಾ ಸ್ಥಿತಿಯಲ್ಲಿಯೂ ಇರುತ್ತಾರೆ.
7. ಸ್ಥಿರತೆ:
ಸಂಘವು ಸ್ಥಿರತೆಯನ್ನು ಹೊಂದಿರಬಹುದು ಅಥವಾ ಹೊಂದಿಲ್ಲದಿರಬಹುದು. ಉದಾ:- ಕುಟುಂಬ. ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಬ್ಯಾಂಕ್, ಆಸ್ಪತ್ರೆ ಮುಂತಾದವುಗಳು ಹೆಚ್ಚು ಸ್ಥಿರತೆಯನ್ನು ಹೊಂದಿವೆ. ಇನ್ನೂ ಕೆಲವು ಕಡಿಮೆ ಸ್ಥಿರತೆಯನ್ನು ಹೊಂದಿರುತ್ತವೆ. ಉದಾ:- ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು, ಸಾಹಿತಿಗಳು, ವಿಜ್ಞಾನಿಗಳು ಮೊದಲಾದವರನ್ನು ಸನ್ಮಾನಿಸುವುದಕ್ಕಾಗಿ ಹುಟ್ಟಿಕೊಂಡ ಸಂಘಗಳು ಅಲ್ಪಾವಧಿ ಸ್ಥಿರತೆ ಹೊಂದಿವೆ.
ಉಪಸಂಹಾರ
ಸಂಕ್ಷಿಪ್ತವಾಗಿ, ಸಂಘಗಳು ರಚನಾತ್ಮಕ, ಸಂಘಟಿತ ಸಮುದಾಯಗಳನ್ನು ಹಂಚಿಕೊಂಡ ಆಸಕ್ತಿಗಳು, ಸಹಕಾರ ಮತ್ತು ಉದ್ದೇಶದಲ್ಲಿ ಬೇರೂರಿದೆ. ಉತ್ತಮವಾಗಿ ವ್ಯಾಖ್ಯಾನಿಸಲಾದ ರಚನೆ ಮತ್ತು ಆಂತರಿಕ ನಿಯಂತ್ರಕ ಚೌಕಟ್ಟಿನ ಮೂಲಕ, ಅವರು ವೈಯಕ್ತಿಕ ಮತ್ತು ಸಾಮೂಹಿಕ ಅಗತ್ಯಗಳನ್ನು ಪೂರೈಸುವ ಮೂಲಕ ವ್ಯಕ್ತಿಗಳು ಒಟ್ಟಾಗಿ ಕೆಲಸ ಮಾಡುವ ವೇದಿಕೆಯನ್ನು ಒದಗಿಸುತ್ತಾರೆ. ದೀರ್ಘಕಾಲದ ಅಥವಾ ತಾತ್ಕಾಲಿಕವಾಗಿರಲಿ, ಸದಸ್ಯರ ನಡುವೆ ಏಕತೆ, ಸಹಯೋಗ ಮತ್ತು ಉದ್ದೇಶವನ್ನು ಬೆಳೆಸುವ ಮೂಲಕ ಸಮಾಜವನ್ನು ಶ್ರೀಮಂತಗೊಳಿಸುವಲ್ಲಿ ಸಂಘಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.
Call Us : +91 8431122691
Mail Us: admin@softonis.com
Visit Once: Opposite Abhishek optical Second cross right side, Ashok Nagara, Shivamogga, Karnataka 577202.