ಶಾಸನಗಳು ಚರಿತ್ರೆಯ ರಚನೆಯಲ್ಲಿ ಸಿಂಹಪಾಲು ಪಾತ್ರವನ್ನು ಹೊಂದಿವೆ. ಶಾಸನಗಳು ಇತಿಹಾಸ ರಚನೆಗೆ ಬಹು ಉಪಯುಕ್ತ ಆಕರಗಳು, ಶಾಸನಗಳ ರಚನಾಕಾರ್ಯ ಅಶೋಕ ಮಹಾಶಯನ ಕಾಲದಿಂದ ಆರಂಭಗೊಂಡಿತು. ಹೀಗಾಗಿ ಅಶೋಕನನ್ನು ಶಾಸನಗಳ ಆದ್ಯ ಪ್ರವರ್ತಕನೆಂದು ಹೆಸರಿಸಲಾಗಿದೆ. ಅಶೋಕನ ಶಾಸನಗಳನ್ನು ಶಿಲಾಶಾಸನಗಳು, ಗೌಣಶಿಲಾಶಾಸನಗಳು, ಸ್ತಂಭಶಾಸನಗಳು, ಬಂಡೆಕಲ್ಲು ಶಾಸನಗಳೆಂದು ವಿಂಗಡಿಸಲಾಗಿದೆ. ಅಶೋಕನ ಶಾಸನಗಳು ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಗಳಲ್ಲಿವೆ. ಪ್ರಾಚೀನ ಭಾರತದ ಚರಿತ್ರೆಯ ರಚನೆಯಲ್ಲಿ ಅನೇಕ ಶಾಸನಗಳು ಕಂಡು ಬರುತ್ತವೆ.
ಈ ಶಾಸನಗಳಿಂದ ರಾಜರ ದಿಗ್ವಿಜಯಗಳು, ಸಾಮ್ರಾಜ್ಯ ವಿಸ್ತರಣೆ, ಆಡಳಿತ ಕ್ರಮ, ರಾಜರು ನೀಡಿದ ದಾನದತ್ತಿಗಳು, ಮೊದಲಾದ ಹಲವು ಹತ್ತು ವಿಷಯಗಳು ತಿಳಿದುಬರುತ್ತವೆ. ಶಾಸನಗಳಲ್ಲಿ ಕೆಲವು ಕೂಟ ಶಾಸನಗಳಿರುತ್ತವೆ. ಅಧ್ಯಯನ ಮಾಡುವಾಗ ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ಪ್ರತ್ಯೇಕಿಸಿ ಮಹತ್ವವನ್ನು ಅರಿಯಬಹುದು.
ಇತಿಹಾಸ ಅಧ್ಯಯನಕ್ಕೆ ಶಾಸನಗಳ ಪ್ರಯೋಜನಗಳು :
- ನಮ್ಮ ಪ್ರಾಚೀನರಲ್ಲಿ ಐತಿಹಾಸಿಕ ಪ್ರಜ್ಞೆ ಇತ್ತು ಎಂಬುದಕ್ಕೆ ಶಾಸನಗಳು ಸಾಕ್ಷಿ ಒದಗಿಸುತ್ತದೆ.
- ಶಾಸನಗಳಿಂದ ರಾಜರ ಸೈನಿಕ ಸಾಧನೆಯನ್ನು ತಿಳಿಯಬಹುದು.
- ಶಾಸನಗಳು ದೊರೆತ ಸ್ಥಳದ ಆಧಾರದ ಮೇಲೆ ಸಾಮ್ರಾಜ್ಯದ ವ್ಯಾಪ್ತಿಯನ್ನು ಗುರುತಿಸಬಹುದು.
- ಶಾಸನಗಳಿಂದ ಖಚಿತ ಕಾಲ ಗಣನೆ ಮಾಡಲು ಸಾಧ್ಯವಾಗುತ್ತದೆ.
- ಶಾಸನಗಳಿಂದ ಅರಸರ ಬಿರುದು ಬಾವಲಿಗಳು ಮತ್ತು ಅವರ ವಂಶಾವಳಿ ತಿಳಿಯುತ್ತದೆ.
- ಶಾಸನಗಳ ಸಹಾಯದಿಂದ ಭಾಷೆ ಮತ್ತು ಲಿಪಿ ಬೆಳೆದು ಬಂದ ಬಗೆಯನ್ನು ಗುರುತಿಸಬಹುದು.
- ಶಾಸನಗಳು ಹಿಂದಿನವರ ಸಂಪ್ರದಾಯ, ಆಚರಣೆ, ನಂಬಿಕೆ ಮತ್ತು ಆರಾಧನೆಯ ಮೇಲೆ ಬೆಳಕು ಚೆಲ್ಲುತ್ತದೆ.
- ಮೆಹರೂಲಿ ಕಬ್ಬಿಣ ಸ್ತಂಭ ಶಾಸನದಿಂದ ಲೋಹಶಾಸ್ತ್ರದ ಪ್ರಗತಿಯನ್ನು ತಿಳಿಯಬಹುದು.
- ಶಾಸನಗಳು ದೇವಾಲಯ, ಬಸದಿ, ಚೈತ್ಯಾಲಯಗಳ ನಿರ್ಮಾತೃಗಳು ಯಾರೆಂಬುದನ್ನು ತಿಳಿಸುತ್ತದೆ.
- ಭಾರತದ ಹೆಚ್ಚಿನ ಶಾಸನಗಳು ದಾನ ದತ್ತಿಗೆ ಸಂಬಂಧ ಪಟ್ಟಿರುವುದರಿಂದ ಅವುಗಳ ವಿವರಗಳು ಶಾಸನ ಮುಖೇನ ತಿಳಿಯುತ್ತದೆ. ದತ್ತಿ ನೀಡಿ ಜಮೀನಿನ ಮೇರೆಯೂ ಲಭ್ಯವಾಗುತ್ತದೆ.
ಕೆಲವು ಪ್ರಮುಖ ಶಾಸನಗಳು
|
ಶಾಸನದ ಹೆಸರು |
ಶಾಸನದ ಕತೃ |
ಒದಗಿಸುವ ಐತಿಹಾಸಿಕ ಮಾಹಿತಿ |
|
ರುಮ್ಮಿಂಡೈ ಶಾಸನ |
ಅಶೋಕ |
ಅಶೋಕನ ಬೌದ್ಧಧರ್ಮಕ್ಕೆ ಮತಾಂತರನಾದ ಸಂಗತಿ ಇದೆ. |
|
ಹಾಥಿಗುಂಪ ಶಾಸನ |
ಖಾರವೇಲ |
ಕಳಿಂಗ ಅರಸ ಖಾರವೇಲನ ಸಾಧನೆಗಳು |
|
ಗಿರ್ನಾರ್ ಶಾಸನ |
ರುದ್ರದಾಮ |
ಮೌರ್ಯ ಮತ್ತು ಗುಪ್ತಾರ ನೀರಾವರಿ ಕಾರ್ಯಗಳನ್ನು ಕುರಿತು ಮಾಹಿತಿ ನೀಡುತ್ತದೆ. |
|
ಅಲಹಾಬಾದ್ ಸ್ಥಂಭ ಶಾಸನ |
ಹರಿಷೇಣ |
ಸಮುದ್ರಗುಪ್ತನ ದಿಗ್ವಿಜಯಗಳು, ಇದು ಪ್ರಶಸ್ತಿ ಶಾಸನ |
|
ಮಹ್ರೌಲಿ ಕಬ್ಬಿಣ ಸ್ಥಂಬ ಶಾಸನ |
2ನೇ ಚಂದ್ರಗುಪ್ತ |
2ನೇ ಚಂದ್ರಗುಪ್ತನ ಸಾಧನೆಗಳು |
|
ಮಂದಸಾರ ಶಾಸನ |
2ನೇ ಕುಮಾರಗುಪ್ತ |
2ನೇ ಕುಮಾರಗುಪ್ತನ ಸಾಧನೆಗಳು |
|
ಬಿತೈರಿ ಶಾಸನ |
ಸ್ಕಂದ ಗುಪ್ತ |
ಸ್ಕಂದಗುಪ್ತನ ಸಾಧನೆಗಳು |
|
ಜುನಾಗಡ ಶಾಸನ |
ಸ್ಕಂದ ಗುಪ್ತ |
ಸ್ಕಂದ ಗುಪ್ತನ ಸಾಧನೆಗಳು |
|
ಮಧುಬಾನ್ ಶಾಸನ |
ಹರ್ಷವರ್ಧನ |
ಹರ್ಷನ ಸಾಧನೆಗಳು |
|
ಉತ್ತರಮೇರೂರು ಶಾಸನ |
1ನೇ ಪಾರಂತಕಚೋಳ |
ಚೋಳರ ಗ್ರಾಮಾಡಳಿತ ವಿವರಣೆ |
|
ನಾಸಿಕ್ ಶಾಸನ |
ಗೌತಮಿ ಬಾಳಶ್ರೀ |
ಗೌತಮಿಪುತ್ರನ ಸಾಧನೆಗಳು ಗುಪ್ತರ ಆಡಳಿತ |
|
ಉದಯಗಿರಿ ಮಲೈ ಶಾಸನ |
1ನೇಮಹೇಂದ್ರವರ್ಮ |
1ನೇ ಮಹೇಂದ್ರವರ್ಮನ ಸಾಧನೆಗಳು |
|
ತಾಳಗುಂದ ಶಾಸನ |
ಶಾಂತಿವರ್ಮ |
ಕದಂಬರ ಮೂಲ ಪ್ರಸ್ತಾಪ |
|
ಚಂದ್ರವಳ್ಳಿ ಶಾಸನ |
ಮಯೂರವರ್ಮ |
ಮಯೂರವರ್ಮನ ಸಾಧನೆಗಳು |
|
ಐಹೊಳೆ ಶಾಸನ |
ರವಿಕೀರ್ತಿ |
ಇಮ್ಮಡಿ ಪುಲಿಕೇಶಿಯ ದಿಗ್ವಿಜಯಗಳು |
|
ಗ್ವಾಲಿಯಾರ್ ಶಾಸನ |
ಭೋಜರಾಜ |
ಪ್ರತಿಹಾರ ರಾಜ ಭೋಜರಾಜನ ಸಾಧನೆಗಳು |