ಹೋಲಿಕೆಗಳು (ಸಮಾನ ಅಂಶಗಳು) :
- ರಾಜಕೀಯವಾಗಿ ಹೋಲಿಕೆ : ಅನುವಂಶಿಕ ರಾಜಪ್ರಭುತ್ವ, ರಾಜನ ಕರ್ತವ್ಯಗಳು, ಸಭಾ ಮತ್ತು ಸಮಿತಿಗಳ ಅಸ್ತಿತ್ವ ಉತ್ತರ ವೇದಗಳ ಕಾಲದಲ್ಲೂ ಮುಂದುವರೆಯಿತು.
- ಸಾಮಾಜಿಕವಾಗಿ ಹೋಲಿಕೆ : ಅವಿಭಕ್ತ ಕೌಟುಂಬಿಕ ವ್ಯವಸ್ಥೆ, ಪಿತೃ ಪ್ರಧಾನ ಕುಟುಂಬ, ಗಂಡು ಸಂತಾನ ಇಷ್ಟ ಪಡುವುದು, ಆಹಾರ ಪಾನೀಯ, ಮನರಂಜನೆ, ಉಡುಗೆ ತೊಡುಗೆ, ಪೂರ್ವ ವೇದಗಳ ಕಾಲದಲ್ಲಿದ್ದಂತೆ ಉತ್ತರ ವೇದಗಳ ಕಾಲದಲ್ಲೂ ಮುಂದುವರೆಯಿತು.
- ಆರ್ಥಿಕವಾಗಿ ಹೋಲಿಕೆ : ಕೃಷಿ ಪ್ರಧಾನ ಆರ್ಥಿಕ ವ್ಯವಸ್ಥೆ, ಕಬ್ಬಿಣದ ಬಳಕೆ, ವ್ಯಾಪಾರ ವಾಣಿಜ್ಯ, ಕೈಗಾರಿಕೆ ಪೂರ್ವ ವೇದಗಳ ಕಾಲದಲ್ಲಿ ಇದ್ದಂತೆ ಉತ್ತರ ವೇದಗಳ ಕಾಲದಲ್ಲಿ ಮುಂದುವರೆಯಿತು.
- ಧಾರ್ಮಿಕವಾಗಿ ಹೋಲಿಕೆ : ಹಸು ಪೂಜನೀಯವಾಗಿತ್ತು, ಪುರೋಹಿತರ ಪ್ರಾಬಲ್ಯವಿತ್ತು. ಜಾತಿ ಪದ್ಧತಿ, ಧಾರ್ಮಿಕ ಆಚರಣೆಗಳು ಎಂದಿನಂತೆ ಉತ್ತರ ವೇದಗಳ ಕಾಲದಲ್ಲಿ ಮುಂದುವರೆಯಿತು.
|
ವ್ಯತ್ಯಾಸಗಳು |
|||
|
ಉತ್ತರ ವೇದಗಳ ಕಾಲ |
ಉತ್ತರ ವೈದಿಕ ಕಾಲ |
||
|
1. |
ರಾಜನು ಬಲಿಷ್ಯನಾಗಿರಲಿಲ್ಲ, ಆತ ಧರ್ಮ ಮತ್ತು ಕಾನೂನುಗಳಿಗೆ ತಲೆ ಭಾಗಬೇಕಿತ್ತು. |
1. |
ರಾಜನ ಬಲಿಷ್ಠನಾಗಿದ್ದನು. ಆತ ದೈವಾಂಶ ಸಂಭೂತನೆಂದು ಪರಿಗಣಿಸಲ್ಪಟ್ಟಿದ್ದನು. |
|
2. |
ಪುರೋಹಿತನ ಸ್ಥಾನಮಾನ ಉತ್ತಮವಾಗಿತ್ತು. ಪುರೋಹಿತಶಾಹಿ ಪ್ರಾಬಲ್ಯ ಇದ್ದಿತು. |
2. |
ಪುರೋಹಿತನ ಸ್ಥಾನಮಾನ ಕುಗ್ಗಿತು. ರಾಜತ್ವ ಪ್ರಾಬಲ್ಯ ಪಡೆಯಿತು. |
|
3. |
ಸಭಾ ಮತ್ತು ಸಮಿತಿಗಳು ಪ್ರಾಬಲ್ಯವಾಗಿದ್ದವು. ಅವು ರಾಜನನ್ನು ನಿಯಂತ್ರಿಸಿದ್ದವು. |
3. |
ಸಭಾ ಮತ್ತು ಸಮಿತಿಗಳ ಪ್ರಾಬಲ್ಯ ಕುಗ್ಗಿತು. ಕೇವಲ ರಾಜನ ಸಲಹಾ ಅಂಗಗಳಾಗಿ ಉಳಿದವು. |
|
4. |
ಜಾತಿಪದ್ಧತಿ ಅಸ್ತಿತ್ವದಲ್ಲಿರಲಿಲ್ಲ ಕರ್ತವ್ಯವಾಗಿತ್ತು. |
4. |
ಜಾತಿಪದ್ಧತಿ ಅಸ್ತಿತ್ವದಲ್ಲಿತ್ತು. ಅದು ತುಂಬಾ ಸಂಕೀರ್ಣದತ್ತ ಸಾಗಿತ್ತು. |
|
5. |
ರಾಜನು ನಿರಂಕುತನಾಗಿರಲಿಲ್ಲ. ಪ್ರಜಾ ಕಲ್ಯಾಣ ಅವನ ಆದ್ಯ ಕರ್ತವ್ಯವಾಗಿತ್ತು. |
5. |
ರಾಜನು ನಿರಂಕುಶನಾದನು. ಅವನು ದೈವತ್ವ ಸ್ಥಾನಕ್ಕೇರಿದನು. |
|
6. |
ಸ್ತ್ರೀಯರಿಗೆ ಗೌರವ ಸ್ಥಾನಮಾನಗಳಿದ್ದವು. |
6. |
ಸ್ತ್ರೀಯರ ಸ್ಥಾನಮಾನಗಳು ಕುಗ್ಗಿದವು. |
|
7. |
ಗ್ರಾಮೀಣ ಜೀವನ ಪ್ರಧಾನವಾಗಿತ್ತು. |
7. |
ನಗರ ಜೀವನ ಸಾಮಾನ್ಯವಾಯಿತು. |
|
8. |
ಅಂತರಜಾತಿ ವಿವಾಹ, ಬಾಲ್ಯ ವಿವಾಹ, ಬಹುಪತ್ನಿತ್ವಗಳು ಇರಲಿಲ್ಲ |
8. |
ಇವೆಲ್ಲವೂ ರೂಢಿಗೆ ಬಂದವು. |
|
9. |
9. ಇಂದ್ರ, ವರುಣ, ಮಿತ್ರ, ಅಗ್ನಿ, ಸೂರ್ಯ ದೇವತೆಗಳ ಜನಪ್ರಿಯತೆ, ಮೂರ್ತಿಪೂಜೆ ಇರಲಿಲ್ಲ. |
9. |
ಬ್ರಹ್ಮ, ವಿಷ್ಣು, ಶಿವ ದೇವರುಗಳ ಜನಪ್ರಿಯತೆ, ದೇವತಾವತಾರಗಳಲ್ಲಿ ನಂಬಿಕೆ ಉಂಟಾಯಿತು. |
|
10. |
ಯಜ್ಞಗಳ ಆಚರಣೆ ಸರಳವಾಗಿತ್ತು. ಧರ್ಮಾಚರಣೆ ಸುಲಭವಾಗಿತ್ತು. |
10. |
ಯಜ್ಞಗಳ ಆಚರಣೆ ದುಬಾರಿಯಾಯಿತು. ಈಗ ವೈದಿಕ ಧರ್ಮ ತುಂಬಾ ಜಟಿಲವಾಯಿತು. |
|
11. |
ವೃತ್ತಿ ಸಂಘಗಳು ಇರಲಿಲ್ಲ |
11. |
ವೃತ್ತಿ ಸಂಘಗಳು ಇದ್ದವು. |
|
12. |
ರಾಜನಿಗೆ ನೆರವಾಗುತ್ತಿದ್ದ ಅಧಿಕಾರಿಗಳ ಸಂಖ್ಯೆ ಕಡಿಮೆ ಇದ್ದಿತು. |
12. |
ರಾಜನಿಗೆ ನೆರವಾಗುತ್ತಿದ್ದ ಅಧಿಕಾರಿಗಳ ಸಂಖ್ಯೆ ಹೆಚ್ಚಾಯಿತು. |
|
13. |
ಆಂತರಿಕ ವ್ಯಾಪಾರ ಜನಪ್ರಿಯವಾಯಿತು. |
13. |
ವಿದೇಶಿ ವ್ಯಾಪಾರ ಜನಪ್ರಿಯವಾಯಿತು. |
|
14. |
ಮಂತ್ರ, ತಂತ್ರ, ಭೂತಗಳಲ್ಲಿ ನಂಬಿಕೆ ಇರಲಿಲ್ಲ. |
14. |
ಇವುಗಳಲ್ಲಿ ನಂಬಿಕೆ ಬೆಳೆಯಿತು. |
|
15. |
ಬ್ರಾಹ್ಮಣರ ಪ್ರಾಬಲ್ಯ ಇತ್ತು. |
15. |
ಕ್ಷತ್ರಿಯರ ಪ್ರಾಬಲ್ಯವಿತ್ತು. |
|
16. |
ಮಾಂಸಹಾರ ವಿರಳವಾಗಿತ್ತು. |
16. |
ಮಾಂಸಹಾರ ಸಾಮಾನ್ಯವಾಯಿತು. |
|
17. |
ಸಪ್ತಸಿಂಧೂ ಆರರ ನೆಲೆ. |
17. |
ಆರ್ಯಾವರ್ತ ಆರ್ಯರ ನೆಲೆ. |