ಹೋಲಿಕೆಗಳು (ಸಮಾನ ಅಂಶಗಳು)
- ಇವೆರಡೂ ಸಂಸ್ಕೃತ ಭಾಷೆಯನ್ನು ತಿರಸ್ಕರಿಸಿ ಪಾಳಿ ಭಾಷೆಯನ್ನು ಬಳಸಿಕೊಂಡವು.
- ಇವೆರಡೂ ವೈದಿಕ ಧರ್ಮದ ವಿರುದ್ಧ ಬಿರುಗಾಳಿಯನ್ನು ಎಬ್ಬಿಸಿದವು. ಅಂದರೆ ಹಿಂದೂಧರ್ಮ ಸುಧಾರಣೆಗಾಗಿ ಹುಟ್ಟಿಕೊಂಡ ಧರ್ಮಗಳು.
- ಇವೆರಡೂ ಸರಳವಾದ, ಪರಿಶುದ್ಧವಾದ, ಆಚಾರಯುತ ಜೀವನಕ್ಕೆ ಮಹತ್ವ ಕೊಟ್ಟಿದೆ.
- ಇವೆರಡೂ ಕರ್ಮಸಿದ್ಧಾಂತದಲ್ಲಿ ನಂಬಿಕೆ ಇಟ್ಟಿವೆ
- ಇವೆರಡೂ ಬ್ರಾಹ್ಮಣರಿಂದ ಹೊರತಾದ ಕ್ಷತ್ರಿಯರಿಂದ ಸ್ಥಾಪನೆಯಾದ ಧರ್ಮಗಳು,
- ಅಹಿಂಸೆ ಉತ್ತಮ ನಡತೆ, ಉತ್ತಮ ಜ್ಞಾನಕ್ಕೆ ಮಹತ್ವ, ಜಾತಿಪದ್ಧತಿ, ಧಾರ್ಮಿಕ ವಿಧಿ, ವೇದ, ಬ್ರಾಹ್ಮಣತ್ವ, ಯಜ್ಞಯಾಗಗಳನ್ನು ಖಂಡಿಸಿ ಸಮಾನತೆಯನ್ನು ಪ್ರತಿಪಾದಿಸಿದವು.
- ಕಲೆ, ಸಾಹಿತ್ಯಕ್ಕೆ ಎರಡೂ ಅಪೂರ್ವ ಕೊಡುಗೆ ನೀಡಿದವು.
- ಇವೆರಡೂ ಪ್ರಜಾಪ್ರಭುತ್ವ ಸಂಘ ಮಾದರಿಯಲ್ಲಿ ರಚಿಸಲ್ಪಟ್ಟಿವೆ.
- ಎರಡೂ ಶ್ರಮಜೀವನವನ್ನು ಒತ್ತಿ ಹೇಳಿವೆ.
- ಧಾರ್ಮಿಕ ಸಹಿಷ್ಣುತೆಯಲ್ಲಿ ನಂಬಿಕೆ ಹೊಂದಿವೆ.
- ಇವೆರಡೂ ಪ್ರಾಣಿಬಲಿಯನ್ನು ಖಂಡಿಸಿದವು. ಅಹಿಂಸೆಯನ್ನು ಒತ್ತಿ ಹೇಳಿದವು.
- ಇವೆರಡೂ ಮತ ಪ್ರಚಾರಕ (ಮಿಷನರಿ) ಧರ್ಮಗಳು.
- ಎರಡೂ ಜನಸಾಮಾನ್ಯರ ಆಡುಭಾಷೆಯಲ್ಲಿ ಬೋಧಿಸಿದವು.
- ಇವೆರಡೂ ಭಾರತದಲ್ಲಿ ಹುಟ್ಟಿದ ಧರ್ಮಗಳಾಗಿವೆ.
- ಎರಡೂ ವೇದ ಮತ್ತು ಬ್ರಾಹ್ಮಣರ ಶ್ರೇಷ್ಠತೆಯನ್ನು ಖಂಡಿಸಿದವು.
- ಇವೆರಡೂ ದೇವರು ಇರುವಿಕೆಯನ್ನು ನಂಬಲಿಲ್ಲ.
- ಎರಡೂ ಸನ್ಯಾಸತ್ವವನ್ನು ಒತ್ತಿ ಹೇಳಿದವು.
| ವ್ಯತ್ಯಾಸಗಳು | |||
| ಜೈನಧರ್ಮ | ಬೌದ್ಧ ಧರ್ಮ | ||
| 1. | ಅಹಿಂಸೆಗೆ ಹೆಚ್ಚಿನ ಮಹತ್ವ ಕೊಟ್ಟಿದೆ | 1. | ಅಹಿಂಸೆಗೆ ಅಷ್ಟಾಗಿ ಮಹತ್ವ ಕೊಟ್ಟಿಲ್ಲ. |
| 2. | ತಪಸ್ಸು, ದೇಹ ದಂಡನೆಗೆ ಮಹತ್ವ ಕೊಟ್ಟಿದೆ. | 2. | ಇಂದ್ರಿಯಗಳ ನಿಗ್ರಹಕ್ಕೆ ಹೆಚ್ಚಿನ ಮಹತ್ವ ನೀಡಿದೆ. |
| 3 | ಭಾರತದೊಳಗೆ ಮಾತ್ರ ಜನಪ್ರಿಯವಾಯಿತು. | 3 | ಭಾರತವಲ್ಲದೆ ಹೊರದೇಶಗಳಲ್ಲೂ ಪ್ರಖ್ಯಾತಿ ಪಡೆಯಿತು. |
| 4. | ಮೋಕ್ಷ ಸಾಧನೆಗೆ ಉಪವಾಸವ್ರತ, ಸಲ್ಲೇಖನ ವ್ರತ ಆಚರಣೆಯನ್ನು ನಂಬುತ್ತದೆ. ದೇಹನಗ್ನತೆಯಲ್ಲಿ ನಂಬಿಕೆ | 4. |
ಮೋಕ್ಷ ಸಾಧನೆಗೆ ಅಷ್ಟಾಂಗ ಮಾರ್ಗವನ್ನು ಒತ್ತಿ ಹೇಳಿದೆ. ನಗ್ನತೆಯಲ್ಲಿ ನಂಬಿಕೆ ಹೊಂದಿಲ್ಲ. |
| 5. | ಜೈನ ತೀರ್ಥಂಕರ ಪೂಜೆ | 5. | ಬೋಧಿಸತ್ವರ ಪೂಜೆ |
| 6. | ಹಿಂದೂ ಧರ್ಮದೊಂದಿಗೆ ನಿಕಟ ಸಂಬಂಧ ಹೊಂದಿದೆ | 6. | ಹಿಂದೂ ಧರ್ಮದಿಂದ ಸ್ವಲ್ಪ ಪ್ರತ್ಯೇಕ |
| 7. | ಪವಿತ್ರ ಗ್ರಂಥಗಳು – ಜೈನ ಅಂಗಗಳು | 7. | ಪವಿತ್ರ ಗ್ರಂಥಗಳು – ತ್ರಿಪಿಟಕಗಳು |
| 8. | ಸಂಘ ಜನಪ್ರಿಯವಾಗಿ ಸಂಘಟಿತವಾಗಿಲ್ಲ. | 8. | ಸಂಘ ಬಲಿಷ್ಠವಾಗಿ ಸಂಘಟನೆಗೊಂಡಿತ್ತು. |
| 9. | ನಿರ್ವಾಣ ಮತ್ತು ತ್ರಿರತ್ನಗಳಲ್ಲಿ ನಂಬಿಕೆ | 9. | ಅಷ್ಟಾಂಗ ಮಾರ್ಗದಲ್ಲಿ ನಂಬಿಕೆ |
| 10. | ಸ್ತ್ರೀಯರು, ಸಂಸಾರಿಗಳಿಗೆ ಮೋಕ್ಷ ಪಡೆಯಲು ಅರ್ಹರಲ್ಲ. | 10. | ಇದರಲ್ಲಿ ಅರ್ಹರಾಗಿರುತ್ತಾರೆ. |
| 11. | ಮುಕ್ತಿಯು ಮರಣದ ನಂತರ ಲಭಿಸುತ್ತದೆ. | 11. | ಮುಕ್ತಿ ಮರಣ ಮುನ್ನವೇ ಸಿಗುತ್ತದೆ. |
ಹೀಗೆ ಜೈನ ಮತ್ತು ಬೌದ್ಧ ಧರ್ಮಗಳ ನಡುವೆ ಪರಸ್ಪರ ಹೋಲಿಕೆ ಮತ್ತು ವ್ಯತ್ಯಾಸಗಳಿದ್ದರೂ, ಇವೆರೆಡೂ ಮಾನವ ಕುಲಕೋಟಿಯ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರಿವೆ.