ಕುಶಾನ ಅರಸರಲ್ಲಿಯೇ ಅತ್ಯಂತ ಸಮರ್ಥ ಹಾಗೂ ಪ್ರಸಿದ್ದನಾದ ದೊರೆಯೆಂದರೆ ಕಾನಿಷ್ಕ. ಈತನ ಸಿಂಹಾಸನದ ಬಗ್ಗೆ ವಿದ್ವಾಂಸರಲ್ಲಿ ಅನೇಕ ಅಭಿಪ್ರಾಯಗಳಿವೆ. ಡಾ. ಪ್ಲೀಟ ಹಾಗೂ ಕನ್ನಿಹ್ಯಾಂರು ಈತನ ಅಧಿಕಾರಾವಧಿ ಕ್ರಿ.ಪೂ. 58 ವಿಕ್ರಮ ಶಕೆ ಎಂದು ಹೇಳಿದರೆ, ಡಾ. ಮುಜುಮದಾರರು ಕ್ರಿ.ಶ. 248ರಲ್ಲಿ ಕಾನಿಷ್ಕ ಸಿಂಹಾಸನಕ್ಕೆ ಬಂದ ವರ್ಷವೆಂದಿದ್ದಾರೆ. ಡಾ. ಜಿ. ಭಂಡಾರಕರವರು ಕ್ರಿ.ಶ. 278ರಲ್ಲಿ ಅಧಿಕಾರಕ್ಕೆ ಬಂದನು ಎಂದರೆ, ರಾಯ್ ಚೌದರಿಯವರು ಕಾನಿಷ್ಕ ಕ್ರಿ.ಶ. 78ರಲ್ಲಿ ಸಿಂಹಾಸನಾಧೀಶ್ವರನಾದನು ಎಂದಿದ್ದಾರೆ. ಈತ ಕ್ರಿ.ಶ. 78ರಲ್ಲಿ ಅಧಿಕಾರಕ್ಕೆ ಬಂದುದರಿಂದ ಶಾಲಿವಾಹನ ಶಕೆಯನ್ನು ಆರಂಭಿಸಿದನು.
ದಿಗ್ವಿಜಯಗಳು :
1) ಕಾಶ್ಮೀರ ಕಣಿವೆಯನ್ನು ಕಾನಿಷ್ಕ ಹೆಚ್ಚು ಇಷ್ಟಪಡುತ್ತಿದ್ದುದರಿಂದಾಗಿ ಅದರ ಮೇಲೆ ಯುದ್ಧ ಘೋಷಿಸಿ ಸುಲಭವಾಗಿ ವಶಪಡಿಸಿಕೊಂಡನು.
2) ಉತ್ತರ ಭಾರತದ ಪಂಜಾಬ್ ಹಾಗೂ ಮಥುರಾಗಳಲ್ಲಿ ಪ್ರಬಲರಾಗಿದ್ದ ಕ್ಷತ್ರಪರ ವಿರುದ್ಧ ಯುದ್ಧ ಕೈಗೊಂಡು ಆ ಪ್ರದೇಶಗಳನ್ನು ಯಾವುದೇ ಪ್ರಯಾಸವಿಲ್ಲದೆ ವಶಪಡಿಸಿಕೊಂಡನು.
3) ಮಾಳವದ ಕ್ಷತ್ರಪರನ್ನು ಸಹ ಸೋಲಿಸಿ ಆ ಪ್ರದೇಶವನ್ನು ಆಕ್ರಮಿಸಿದನು.
4) ಈತ ಚೀನಿಯರೊಂದಿಗೆ ಹೋರಾಡಿ ಅಂತಿಮವಾಗಿ ಕಾಸ್ಗರ್, ಖೊಟಾನ್ ಹಾಗೂ ಯಾರ್ಕಂಡ್ ಪ್ರದೇಶಗಳನ್ನು ಆಕ್ರಮಿಸಿದನು.
5) ಚೀನಾದ ಪಾನ್-ಪಾನ್ ಬಾವೋನ ಮೇಲೆ ಯುದ್ಧ ಘೋಷಿಸಿ ಅವನಿಂದ ಸೋತ ಕಾನಿಷ್ಕ ತನ್ನ ಮೊದಲ ಚೀನಾದ ದಂಡಯಾತ್ರೆಯನ್ನು ಕೊನೆಗಾಣಿಸಿದ.
6) ಎರಡನೆಯ ದಂಡಯಾತ್ರೆಯಲ್ಲಿ ಕಾನಿಷ್ಕ ಚೀನಾದ ಪಾನ್ ಚಾವೋನ ಮಗನಾದ ಪಾನ್ ಯಾಂಗನನ್ನು ಸೋಲಿಸಿ ಮೊದಲಿನ ಸೇಡನ್ನು ತೀರಿಸಿಕೊಂಡನು. ಕಾನಿಷ್ಕನ ಸಾಮ್ರಾಜ್ಯವು ಭಾರತದ ಆಚೆ ಅಪಘಾನಿಸ್ತಾನ್, ಬ್ಯಾಸ್ಟ್ರಿಯಾ, ಕಾಪ್ಟರ್, ಖೋಟಾನ್ ಹಾಗೂ ಯಾರ್ಕಂಡ್ ಪ್ರಾಂತ್ಯಗಳನ್ನು ಒಳಗೊಂಡಿದ್ದರೆ ಭಾರತದಲ್ಲಿ ಪಂಜಾಬ್, ಸಿಂಥ್, ಕಾಶ್ಮೀರ್ ಹಾಗೂ ಉತ್ತರ ಪ್ರದೇಶದ ಬಹುಭಾಗವನ್ನು ಒಳಗೊಂಡಿದ್ದಿತು.
ಕಾನಿಷ್ಕನ ಆಡಳಿತ : ಕಾನಿಷ್ಕ ಒಬ್ಬ ಯೋಧ, ಉತ್ತಮ ಆಡಳಿತಗಾರ, ಶ್ರೇಷ್ಠ ರಾಜಕಾರಿಣಿ ಹಾಗೂ ಧಾರ್ಮಿಕ ನೀತಿಯುಳ್ಳವನೂ ಆಗಿದ್ದನು. ಇವನು ನಿರಂಕುಶಾಧಿಕಾರಿಯಾಗಿ ಆಡಳಿತ ನಡೆಸಿದರೂ ಪ್ರಜೆಗಳಿಗೆ ಎಂದಿಗೂ ತೊಂದರೆಯನ್ನು ಕೊಡಲಿಲ್ಲ. ಕಾನಿಷ್ಕ ತನ್ನ ಆಡಳಿತಾವಧಿಯಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದನು.
1) ಕೃಷಿಯನ್ನು ಅಭಿವೃದ್ಧಿಗೊಳಿಸುವ ಮೂಲಕ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದನು.
2) ಆಹಾರ ಉತ್ಪಾದನೆಗೆ ಪ್ರೋತ್ಸಾಹ ನೀಡಿದನು.
3) ರೈತರು ಹೈನಿಗಾಗಿ ಹೆಚ್ಚು ಹೆಚ್ಚು ದನಕರುಗಳನ್ನು ಸಾಕುವಂತೆ ಪ್ರೋತ್ಸಾಹ ಕೊಟ್ಟನು.
4) ಪ್ರಕೃತಿ ವಿಕೋಪಗಳಾದ ಕ್ಷಾಮ, ನೆರೆಹಾವಳಿ ಹಾಗೂ ಬರಗಾಲದಂತಹ ಸಮಯದಲ್ಲಿ ಸರ್ಕಾರದಿಂದ ದವಸ ಧಾನ್ಯಗಳನ್ನು ಹಂಚುವ ವ್ಯವಸ್ಥೆ ಮಾಡಿದನು.
5) ಸಾಮ್ರಾಜ್ಯವನ್ನು ಅನೇಕ ಪ್ರಾಂತ್ಯಗಳನ್ನಾಗಿ ವಿಭಾಗಿಸಿ ಅವುಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿದನು.
6) ರಾಜ್ಯದ ಎಲ್ಲಾ ಆಗು ಹೋಗುಗಳನ್ನು ಬರೆದಿಡುವ ಪದ್ಧತಿಯನ್ನು ಜಾರಿಗೆ ತಂದನು.
ಕಾನಿಷ್ಕನ ಧಾರ್ಮಿಕ ನೀತಿ :
ಅಶೋಕನ ಹಾಗೆ ಕಾನಿಷ್ಕ ಬೌದ್ಧ ಮತಾವಲಂಬಿಯಾಗಿದ್ದನು. ಈತ ಬೌದ್ಧ ಮತವನ್ನು ಸ್ವೀಕರಿಸಿದ್ದರೂ ಇತರ ಧರ್ಮಗಳನ್ನು ಕಡೆಗಣಿಸಿರಲಿಲ್ಲ. ಈತನ ನಾಣ್ಯಗಳ ಮೇಲೆ ರೋಮನ್, ಗ್ರೀಕ್, ಪರ್ಶಿಯನ್ ಹಾಗೂ ಹಿಂದೂ ದೇವತೆಗಳ ಹೆಸರನ್ನು ಮುದ್ರಿಸಲಾಗಿದೆ.
ಕಾನಿಷ್ಕ ಮತ್ತು ಬೌದ್ಧ ಧರ್ಮ :
ಕಾನಿಷ್ಕ ಕೇವಲ ದಿಗ್ವಿಜಯಿಯಾಗಿರದೆ ಬೌದ್ಧ ಧರ್ಮದ ಮಹಾಪೋಷಕನಾಗಿ ಪ್ರಸಿದ್ದಿಯನ್ನು ಪಡೆದಿದ್ದಾನೆ. ಅಶೋಕನನ್ನು ಬಿಟ್ಟರೆ ಬೌದ್ಧ ಧರ್ಮದ ಖ್ಯಾತಿಗೆ ಶ್ರಮಿಸಿದವರಲ್ಲಿ ಕಾನಿಷ್ಕನೇ ಅಗ್ರಗಣ್ಯ. ಇವನ ಕಾಲದಲ್ಲಿ ಬೌದ್ಧ ಧರ್ಮ ಭಾರತವನ್ನು ದಾಟಿ ವಿದೇಶದಲ್ಲಿಯೂ ಹರಡಿತ್ತು. ಆ ಮೂಲಕ ಭಾರತ ವಿದೇಶಿ ಸಂಪರ್ಕವನ್ನು ಪಡೆಯಿತು. ಈತನ ಕಾಲದಲ್ಲಿಯೂ ದೇಶದಾದ್ಯಂತ ಅನೇಕ ಬೌದ್ಧ ಸ್ತೂಪಗಳು, ಸಂಘಾರಾಮಗಳು, ಗುಹಾಲಯಗಳು, ಅರಮನೆಗಳು ಹಾಗೂ ಬೌದ್ಧ ಮೂರ್ತಿಗಳು ನಿರ್ಮಾಣಗೊಂಡವು. ಪ್ರಥಮ ಬಾರಿಗೆ ಭಾರತದಲ್ಲಿ ಕಾನಿಷ್ಕನ ಕಾಲದಲ್ಲಿ ಬುದ್ಧನನ್ನು ಮೂರ್ತಿರೂಪದಲ್ಲಿ ಪೂಜಿಸುವ ಪದ್ಧತಿ ಜಾರಿಗೆ ಬಂದಿತು.
ನಾಲ್ಕನೆಯ ಬೌದ್ಧ ಸಮ್ಮೇಳನ : ಬೌದ್ಧ ಮತಾವಲಂಬಿಯಾಗಿದ್ದ ಕಾನಿಷ್ಕ ಬೌದ್ಧ ಧರ್ಮದ ಪ್ರಚಾರಕ್ಕಾಗಿ ವಿಶೇಷ ಕಾಳಜಿ ವಹಿಸಿದನು. ಈತ ಕಾಶ್ಮೀರಿನ ಕುಂಡಲಿವನ ಎಂಬಲ್ಲಿ ನಾಲ್ಕನೆಯ ಬೌದ್ಧ ಸಮ್ಮೇಳನವನ್ನು ಸಂಘಟಿಸಿದನು. ಈ ಸಭೆಯ ಅಧ್ಯಕ್ಷತೆಯನ್ನು ವಸುಮಿತ್ರನೂ ಉಪಾಧ್ಯಕ್ಷನಾಗಿ ಅಶ್ವಘೋಷನೂ ವಹಿಸಿದ್ದರು. ಬೌದ್ಧರಲ್ಲಿ ಕಾಣಿಸಿಕೊಂಡ ಆಂತರಿಕ ಒಡುಕು ಹಾಗೂ ಭಿನ್ನಮತವನ್ನು ಹೋಗಲಾಡಿಸುವುದು ಈ ಸಮ್ಮೇಳನದ ಉದ್ದೇಶವಾಗಿದ್ದಿತು. ಅಶ್ವಘೋಷ ಹಾಗೂ ವಸುಮಿತ್ರ ಸೇರಿದಂತೆ ಒಟ್ಟು 500ಕ್ಕೂ ಹೆಚ್ಚು ಬೌದ್ಧ ಸನ್ಯಾಸಿಗಳು ಈ ಸಭೆಗೆ ಹಾಜರಾಗಿದ್ದರು. ಬುದ್ಧನ ತ್ರಿಪಿಟಕಗಳ ವಿಷಯಗಳನ್ನು ಕ್ರೋಢೀಕರಿಸಿ ಮಹಾವಿಭಾಷ್ಯ ಎಂಬ ಗ್ರಂಥವನ್ನು ಹೊರತರಲಾಯಿತು. ಇವುಗಳನ್ನು ತಾಮ್ರಪಟಗಳ ಮೇಲೆ ಕೊರೆಯಿಸಿ ಶಿಲಾ ಪೆಟ್ಟಿಗೆಯಲ್ಲಿ ತುಂಬಿ ಇದರ ಮೇಲೆ ಸ್ತೂಪವನ್ನು ನಿರ್ಮಿಸಲಾಯಿತು.
ಈ ಮಹಾಸಭೆಯಲ್ಲಿ ಬೌದ್ಧರಲ್ಲಿದ್ದ ಆಂತರಿಕ ಭಿನ್ನಮತ ಮತ್ತಷ್ಟು ಗರಿಗೆದರಿ ಹೀನಾಯಾನ ಹಾಗೂ ಮಹಾಯಾನ ಎಂಬ ಎರಡು ಪಂಥಗಳು ಹುಟ್ಟಿಕೊಂಡವು.
|
ಹೀನಾಯಾನ ಪಂಥದವರು |
ಮಹಾಯಾನ ಪಂಥದವರು |
||
|
1. |
ಬುದ್ಧನನ್ನು ದೇವತಾ ರೂಪಕ್ಕೆ |
1. |
ಬುದ್ಧನನ್ನು ದೇವರೆಂದು ನಂಬಿದ್ದರು. |
|
2. |
ಇವರು ಬುದ್ಧನ ತತ್ವಗಳನ್ನು ಚಾಚು ತಪ್ಪದೆ ಪಾಲಿಸಿದರು. |
2. |
ಬೌದ್ಧ ಧರ್ಮದಲ್ಲಿ ಸಾಕಷ್ಟು ಬದಲಾವಣೆ |
|
3. |
ಅಶೋಕ ಈ ಪಂಥವನ್ನು ಪೋಷಿಸಿ ಬೆಳೆಸಿದನು |
3. |
ಕಾನಿಷ್ಕ ಈ ಪಂಥವನ್ನು ಪೋಷಿಸಿ ಬೆಳೆಸಿದನು. |
|
4. |
ಬುದ್ಧನನ್ನು ಚಿನ್ನೆಯ ರೂಪದಲ್ಲಿ ಪೂಜಿಸುವರು. |
4. |
ಮೂರ್ತಿ ರೂಪದಲ್ಲಿ ಪೂಜಿಸುವರು. |
|
5. |
ಬೋಧಿಸತ್ವನನ್ನೂ ಪೂಜಿಸುವದಿಲ್ಲ |
5. |
ಬೋಧಿಸತ್ವನ ಪೂಜೆ ಇಲ್ಲಿ ಕಡ್ಡಾಯ. |
|
6. |
ಇದು ಹಿಂದೂ ಧರ್ಮದಿಂದ ದೂರವಿದೆ. |
6. |
ಇದು ಹಿಂದು ಧರ್ಮಕ್ಕೆ ಹತ್ತಿರವಾಗಿದೆ. |
|
7. |
ಇವರು ಹಿಂದೂ ಧರ್ಮದಲ್ಲಿ ನಂಬಿಕೆ ಹೊಂದಿಲ್ಲ |
7. |
ಇವರು ದೇವರ ಅವತಾರದಲ್ಲಿ ನಂಬಿಕೆ ಇಟ್ಟಿದ್ದರು. |
|
8. |
ಇವರ ಸಾಹಿತ್ತಿಕ ಭಾಷೆ ಪಾಳಿ |
8. |
ಸಂಸ್ಕೃತ ಇವರ ಸಾಹಿತ್ತಿಕ ಭಾಷೆ. |
|
9. |
ಕರ್ಮದಲ್ಲಿ ಇವರಿಗೆ ನಂಬಿಕೆ ಹೆಚ್ಚು |
9. |
ಭಕ್ತಿಯಲ್ಲಿ ನಂಬಿಕೆ ಹೆಚ್ಚು. |
|
10. |
ನಿರ್ಮಾಣವೇ ಜೀವನದ ಪರಮ ಗುರಿ. |
10. |
ಸ್ವರ್ಗ ಪಡೆಯುವುದು ಇವರ ಗುರಿ |
|
11. |
ಅಷ್ಟಾಂಗ ಮಾರ್ಗವನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದರು. |
11. |
ಪೂಜಾವಿಧಾನಗಳ ಪಾಲನೆ. |
|
12. |
ಶ್ರೀಲಂಕಾ, ಬರ್ಮಾದಲ್ಲಿ ಇದರ ಜನಪ್ರಿಯತೆ |
12. |
ಟೆಬೇಟ ಕೋರಿಯಾದಲ್ಲಿ ಇದರ ಜನಪ್ರಿಯತೆ |
|
13 |
ಪಾಟಲಿಪುತ್ರ ಇವರ ಧಾರ್ಮಿಕ ಕೇಂದ್ರ |
13 |
ಗಾಂಧಾರ ಇವರ ಧಾರ್ಮಿಕ ಕೇಂದ್ರ |
|
14. |
ಸಂಸ್ಕಾರ ವಿಧಿಗಳಿಗೆ ಅವಕಾಶವಿಲ್ಲ |
14. |
ಸಂಸ್ಕಾರ ವಿಧಿಗಳಿಗೆ ಅವಕಾಶವಿದೆ. |
ಸಾಹಿತ್ಯ :
ಸಾಹಿತ್ಯಾಭಿಮಾನಿಯಾಗಿದ್ದ ಕಾನಿಷ್ಕ ವಿದ್ವಾಂಸರನ್ನು ಕಂಡರೆ ಅವನಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಈತ ಅನೇಕ ವಿದ್ವಾಂಸರಿಗೆ ಆಶ್ರಯ ನೀಡಿದ್ದನು. ಈತನ ಆಸ್ಥಾನದಲ್ಲಿ ಅನೇಕ ತತ್ವಜ್ಞಾನಿಗಳು, ಕವಿಗಳು, ವಿದ್ವಾಂಸರು, ನಾಟಕಗಾರರು ಹಾಗೂ ಸಂಗೀತಗಾರರಿದ್ದರು. ಅವರ ಹೆಸರು ಹಾಗೂ ಕೃತಿಗಳು ಈ ಕೆಳಗಿನಂತಿವೆ.
| ಕವಿಗಳು | ಕೃತಿಗಳು |
| 1) ಅಶ್ವಘೋಷ ಸುಂದರನಂದ ಹಾಗೂ ವಜ್ರಸೂಚಿ | 1) ಬುದ್ಧ ಚರಿತ ಹಾಗೂ ಸೂತ್ರಾಲಂಕಾರ, |
|
2) ನಾಗಾರ್ಜುನ (ಕುಶಾನರ ಕಾಲದ ಮಾರ್ಟಿನ್ ಲೂಥರ್) |
2) ಮಾಧ್ಯಮಿಕ ಸೂತ್ರ |
| 3) ವಸುಮಿತ್ರ | 3) ಮಹಾವಿಭಾಷ್ಯ (ಇದನ್ನು ಬೌದ್ಧರ ವಿಶ್ವಕೋಶ ಎನ್ನಲಾಗಿದೆ.) |
| 4) ಚರಕ | 4) ಚರಕ ಸಂಹಿತೆ |
| 5) ಎರಡನೆಯ ನಾಗಾರ್ಜುನ | 5) ರಸವೈದ್ಯ |
| 6) ಸುಶ್ರೂಷ | 6) ಸುಶ್ರೂಷ ಸಂಹಿತ |
| 7) ವಾಗ್ಭಟ | 7) ಅಷ್ಟಾಂಗ ಸಂಗ್ರಹ ಹಾಗೂ ಅಷ್ಟಾಂಗ ಹೃದಯ |