ʻʻಪ್ರತಿ ಪೋಷಣಾಸ್ತರಗಳಲ್ಲೂ ಎಷ್ಟು ಜೀವಗಳಿರುತ್ತವೆ ಎಂಬುದನ್ನು ಲೆಕ್ಕ ಹಾಕುವ ರೇಖಾಚಿತ್ರವನ್ನು ಸಂಖ್ಯಾ ಪಿರಾಮಿಡ್ ಎಂದು ಕರೆಯುತ್ತೇವೆʼʼ. ಒಂದು ಪರಿಸರ ವ್ಯವಸ್ಥೆಯ ನಿರ್ದಿಷ್ಟ ಪ್ರದೇಶವೊಂದರಲ್ಲಿ ನಿರ್ದಿಷ್ಟ ಸಮಯದಲ್ಲಿ ಪ್ರತಿ ಪೋಷಣಾಸ್ತರಗಳಲ್ಲಿ ಕಂಡುಬರುವ ಜೀವಿಗಳ ಒಟ್ಟು ಸಂಖ್ಯೆಯ ಆಧಾರದ ಮೇಲೆ ಸಂಖ್ಯಾ ಪಿರಾಮಿಡ್‌ನ್ನು ರಚಿಸಲಾಗುತ್ತದೆ. ಪಿರಾಮಿಡ್ ಅಡಿಯಲ್ಲಿ ಉತ್ಪಾದಕ ಜೀವಿಗಳಿದ್ದು ಅವುಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಅಲ್ಲಿಂದ ಹಂತ ಹಂತವಾಗಿ ಮೇಲಕ್ಕೆ ಹೋದಂತೆ ಉಪಯೋಜತ ಜೀವಿಗಳಿದ್ದು ಅವುಗಳ ಸಂಖ್ಯೆ ಇಳಿಮುಖವಾಗುತ್ತಾ ಹೋಗುತ್ತದೆ. ಹೀಗಾಗಿ ಈ ಚಿತ್ರವು ಪಿರಾಮಿಡ್ ಆಕಾರದಲ್ಲಿ ಗೋಚರಿಸುತ್ತದೆ. ಸಂಖ್ಯಾ ಪಿರಾಮಿಡ್‌ಗಳಲ್ಲಿ ಎರಡು ಪ್ರಕಾರಗಳಿವೆ ಅವುಗಳೆಂದರೆ:
- ಮೇಲ್ಮುಖವಾಗಿರುವ ಸಂಖ್ಯಾ ಪಿರಾಮಿಡ್:
- ಕೆಳಮುಖವಾಗಿರುವ ಸಂಖ್ಯಾ ಪಿರಾಮಿಡ್
1. ಮೇಲ್ಮುಖವಾಗಿರುವ ಸಂಖ್ಯಾ ಪಿರಾಮಿಡ್: (Upright Pyramid of Number)
ಮೇಲ್ಮುಖವಾದ ಪಿರಾಮಿಡ್‌ನಲ್ಲಿ ಜೀವಿಗಳ ಸಂಖ್ಯೆಯು ಕೆಳಭಾಗದಿಂದ ಮೇಲ್ಭಾಗದ ಕಡೆಗೆ ಹೋದ ಹಾಗೆ ಕಡಿಮೆಗೊಳ್ಳುತ್ತಾ ಸಾಗುತ್ತದೆ. ಇಲ್ಲಿ ಪ್ರಥಮ ಉಪಭೋಗಿಗಳ ಸಂಖ್ಯೆಯು ದ್ವಿತೀಯ ಉಪಯೋಗಿಗಳ ಸಂಖ್ಯೆಗಿಂತ ಹೆಚ್ಚಿನದಾಗಿರುತ್ತದೆ. ಹಾಗೂ ಪ್ರಥಮ ಉಪಪಯೋಗಿಗಳ ಸಂಖ್ಯೆಯು ಉತ್ಪಾದಕ ಜೀವಿಗಳಿಗಿಂತ ಕಡಿಮೆಯಾಗುತ್ತದೆ. ಈ ಪಿರಾಮಿಡ್‌ನಲ್ಲಿ ಪೋಷಣಾಸ್ತರಗಳ ಹಂತವು ಹೆಚ್ಚಿದಂತೆ ಜೀವಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ.
2. ಕೆಳಮುಖ ಸಂಖ್ಯಾ ಪಿರಾಮಿಡ್‌ಗಳು: (Inverted Pyramid of Number)
ಈ ರೀತಿಯ ಪಿರಾಮಿಡ್‌ನಲ್ಲಿ ಪೋಷಣಾಸ್ತರಗಳಿಂದ ಮೇಲೆ ಹೋದ ಹಾಗೆ ಜೀವಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಕೆಳಮುಖ ಸಂಖ್ಯಾಪಿರಾಮಿಡ್‌ನಲ್ಲಿ ಪೋಷಣಾಸ್ತರಗಳ ಮೇಲೆ ಪರಾವಲಂಬಿಗಳು ಇವೆ. ನಂತರ ಮೇಲಿನ ಹಂತಕ್ಕೆ ತಲುಪಿದಾಗ ಪರಾವಲಂಬಿಗಳ ಮೇಲೆ ಅವಲಂಬಿತ ಪರಾವಲಂಬಿಗಳು ಕಂಡುಬರುತ್ತವೆ. ಹಾಗಾಗಿ ಇದನ್ನು ಕೆಳಮುಖ ಸಂಖ್ಯಾಪಿರಾಮಿಡ್ ಎಂದು ಕರೆಯಲಾಗುತ್ತದೆ.
ಉಪಸಂಹಾರ:
ಸಂಖ್ಯಾ ಪಿರಾಮಿಡ್‌ಗಳು ಪರಿಸರ ವ್ಯವಸ್ಥೆಯಲ್ಲಿನ ಜೀವಿಗಳ ಸಂಖ್ಯಾತ್ಮಕ ಸಮತೋಲನವನ್ನು ವಿವರಿಸುತ್ತವೆ. ಮೇಲ್ಮುಖ ಮತ್ತು ಕೆಳಮುಖ ಸಂಖ್ಯಾ ಪಿರಾಮಿಡ್‌ಗಳ ಮೂಲಕ ವಿಭಿನ್ನ ಪರಿಸರ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬಹುದು. ಇವು ಪೋಷಣಾಸ್ತರಗಳ ನಡುವಿನ ಅವಲಂಬನೆ ಮತ್ತು ಜೀವಿಗಳ ಪಾತ್ರವನ್ನು ಸ್ಪಷ್ಟಪಡಿಸುತ್ತವೆ. ಪರಿಸರ ಸಂರಕ್ಷಣೆ ಮತ್ತು ಸಮತೋಲನದ ಅರಿವಿಗೆ ಸಂಖ್ಯಾ ಪಿರಾಮಿಡ್‌ಗಳ ಅಧ್ಯಯನ ಅತ್ಯಂತ ಅಗತ್ಯವಾಗಿದೆ. ಇದರಿಂದ ಜೀವಜಾಲದ ಸ್ಥಿರತೆಯನ್ನು ಕಾಪಾಡುವ ಮಹತ್ವ ತಿಳಿಯುತ್ತದೆ.