ಹಣಕಾಸು ನೀತಿ ಎಂದರೇನು?

ಹಣಕಾಸು ನೀತಿ ಎಂದರೇನು?

ಆರ್ಥಿಕತೆಯನ್ನು ನಿರ್ವಹಿಸಲು ಸರ್ಕಾರಗಳು ಬಳಸುವ ನಿರ್ಣಾಯಕ ಸಾಧನವೆಂದರೆ ಹಣಕಾಸು ನೀತಿ. ಇದು ಉದ್ಯೋಗ, ಹಣದುಬ್ಬರ, ಸರಕು ಮತ್ತು ಸೇವೆಗಳಿಗೆ ಒಟ್ಟು ಬೇಡಿಕೆ ಮತ್ತು ಆರ್ಥಿಕ ಬೆಳವಣಿಗೆ ಸೇರಿದಂತೆ ರಾಷ್ಟ್ರದ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ಮೇಲೆ ಪ್ರಭಾವ ಬೀರಲು ಸರ್ಕಾರಿ ಖರ್ಚು ಮತ್ತು ತೆರಿಗೆಯ ಬಳಕೆಯನ್ನು ಸೂಚಿಸುತ್ತದೆ.

ಸರ್ಕಾರವು ತೆರಿಗೆಗಳ ಮೂಲಕ ಎಷ್ಟು ಆದಾಯವನ್ನು ಸಂಗ್ರಹಿಸುತ್ತದೆ ಮತ್ತು ರಕ್ಷಣೆ, ಕಲ್ಯಾಣ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಈ ಆದಾಯವನ್ನು ಹೇಗೆ ಹಂಚುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡುತ್ತದೆ. ಆರ್ಥಿಕತೆಯನ್ನು ಸಮತೋಲನಗೊಳಿಸಲು ಹಣಕಾಸು ನೀತಿಯು ವಿತ್ತೀಯ ನೀತಿಯೊಂದಿಗೆ (ಕೇಂದ್ರ ಬ್ಯಾಂಕುಗಳಿಂದ ನಿಯಂತ್ರಿಸಲ್ಪಡುತ್ತದೆ) ಕೈಜೋಡಿಸುತ್ತದೆ. ವಿತ್ತೀಯ ನೀತಿಯು ಹಣ ಮತ್ತು ಸಾಲದ ಪೂರೈಕೆಯನ್ನು ನಿರ್ವಹಿಸುತ್ತದೆ, ಆದರೆ ವಿತ್ತೀಯ ನೀತಿಯು ಆರ್ಥಿಕ ಬೆಳವಣಿಗೆ ಮತ್ತು ಆದಾಯ ಪುನರ್ವಿತರಣೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಹಣಕಾಸು ನೀತಿಯ ಉದ್ದೇಶಗಳು

ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳು ನಿರ್ದಿಷ್ಟ ಉದ್ದೇಶಗಳೊಂದಿಗೆ ವಿತ್ತೀಯ ನೀತಿಗಳನ್ನು ಅಳವಡಿಸಿಕೊಳ್ಳುತ್ತವೆ. ಈಗ ಹಣಕಾಸು ನೀತಿಯ ಐದು ಉದ್ದೇಶಗಳನ್ನು ಅರ್ಥಮಾಡಿಕೊಳ್ಳೋಣ.

1. ಆರ್ಥಿಕ ಬೆಳವಣಿಗೆ

ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಸರ್ಕಾರಗಳು ಹೂಡಿಕೆ ಮತ್ತು ಉಪಭೋಗವನ್ನು ಪ್ರೋತ್ಸಾಹಿಸುವ ಮೂಲಕ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತವೆ. ಆದರೆ, ಅತಿಯಾಗಿ ಹಣಕಾಸು ನೀತಿಯ ಅನುಸರಣೆ, ಉದಾಹರಣೆಗೆ ಅತಿ ಹೆಚ್ಚು ಸರ್ಕಾರಿ ವೆಚ್ಚ ಅಥವಾ ತೆರಿಗೆ ಕಡಿತ, ದೀರ್ಘಕಾಲದ ಆರ್ಥಿಕ ಅಸ್ಥಿರತೆಗೆ ಕಾರಣವಾಗಬಹುದು. ಇದರಿಂದ ಹಣದ  ಮೌಲ್ಯ ಕುಸಿತ, ಹೆಚ್ಚಿದ ಸರ್ಕಾರಿ ಸಾಲ ಉಂಟಾಗಿ, ನಿರ್ವಹಿಸಬಹುದಾದ ಬೆಳವಣಿಗೆಯ ಬದಲಿಗೆ ಆರ್ಥಿಕ ಸಂಕಷ್ಟ ಉಂಟಾಗಬಹುದು

2. ಪೂರ್ಣ ಉದ್ಯೋಗ

ಪೂರ್ಣ ಉದ್ಯೋಗವನ್ನು ಸಾಧಿಸುವುದು ಒಂದು ನಿರ್ಣಾಯಕ ಗುರಿಯಾಗಿದೆ. ಸರ್ಕಾರಗಳು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತವೆ ಮತ್ತು ತೆರಿಗೆಗಳನ್ನು ಕಡಿಮೆ ಮಾಡುತ್ತವೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುತ್ತವೆ ಮತ್ತು ಗ್ರಾಹಕ ವೆಚ್ಚಕ್ಕೆ ಹೆಚ್ಚಿನ ಹಣವನ್ನು ಒದಗಿಸುತ್ತವೆ, ಇದು ಪರೋಕ್ಷವಾಗಿ ಉದ್ಯೋಗ ಬೆಳವಣಿಗೆಗೆ ಕಾರಣವಾಗುತ್ತದೆ.

ಸಮಗ್ರ ಅರ್ಥಶಾಸ್ತ್ರವು ಆರ್ಥಿಕತೆಯ ಹಲವಾರು ಪ್ರಮುಖ ಅಂಶಗಳನ್ನು ಒಳಗೊಂಡಿದೆ, ಅವುಗಳೆಂದರೆ:

3. ಸಾಲ ನಿಯಂತ್ರಣ

ಅತಿಯಾದ ರಾಷ್ಟ್ರೀಯ ಸಾಲವನ್ನು ತಡೆಗಟ್ಟಲು ನಿಯಂತ್ರಿತ ಹಣಕಾಸಿನ ಕೊರತೆ ಅಗತ್ಯ. ತರ್ಕಬದ್ಧ ಹಣಕಾಸು ನೀತಿಗಳು ದೀರ್ಘಾವಧಿಯ ಆರ್ಥಿಕ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಆದಾಯ ಉತ್ಪಾದನೆ ಮತ್ತು ವೆಚ್ಚವನ್ನು ಸಮತೋಲನಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತವೆ.

4. ಆದಾಯ ಪುನರ್ವಿತರಣೆ

ಹಣಕಾಸಿನ ನೀತಿಗಳು ಶ್ರೀಮಂತರು ಮತ್ತು ಬಡವರ ನಡುವಿನ ಸಂಪತ್ತಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ. ಪ್ರಗತಿಶೀಲ ತೆರಿಗೆ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಸಮಾನತೆಯನ್ನು ಉತ್ತೇಜಿಸಲು ಸಂಪತ್ತನ್ನು ಮರುಹಂಚಿಕೆ ಮಾಡುತ್ತವೆ. ಆದರೂ ಅತಿಯಾದ ತೆರಿಗೆ ಕೆಲವೊಮ್ಮೆ ತೆರಿಗೆ ವಂಚನೆಗೆ ಕಾರಣವಾಗಬಹುದು.

5. ಹಣದುಬ್ಬರ ನಿಯಂತ್ರಣ

ಬಲವಾದ ಆರ್ಥಿಕ ಬೆಳವಣಿಗೆಯ ಅವಧಿಯಲ್ಲಿ, ಹಣದುಬ್ಬರ ಹೆಚ್ಚಾಗಬಹುದು. ಸರ್ಕಾರಗಳು ಆದಾಯವನ್ನು ಕಡಿಮೆ ಮಾಡಲು ಮತ್ತು ಅತಿಯಾದ ಖರ್ಚನ್ನು ನಿಗ್ರಹಿಸಲು ತೆರಿಗೆಗಳನ್ನು ಹೆಚ್ಚಿಸುವಂತಹ ಹಣಕಾಸಿನ ಕ್ರಮಗಳನ್ನು ಜಾರಿಗೆ ತರುತ್ತವೆ, ಹೀಗಾಗಿ ಹಣದುಬ್ಬರವನ್ನು ನಿಯಂತ್ರಿಸುತ್ತವೆ.

ಉಪಸಂಹಾರ

ಆರ್ಥಿಕತೆಯನ್ನು ರೂಪಿಸಲು ಸರ್ಕಾರ ಬಳಸುವ ಪ್ರಮುಖ ಸಾಧನಗಳಲ್ಲಿ ಹಣಕಾಸು ನೀತಿಯೂ ಒಂದು. ಇದು ತೆರಿಗೆಗಳು, ಸರ್ಕಾರಿ ಖರ್ಚು ಮತ್ತು ಸಾಲವನ್ನು ಸರಿಹೊಂದಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ, ಇದು ಒಟ್ಟಾರೆ ಬೆಳವಣಿಗೆ, ಉದ್ಯೋಗ ಸೃಷ್ಟಿ, ಹಣದುಬ್ಬರ ಮತ್ತು ಆದಾಯ ವಿತರಣೆಯ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಹಣಕಾಸು ಯೋಜನೆಯು ಅಲ್ಪಾವಧಿಯಲ್ಲಿ ಆರ್ಥಿಕತೆಯನ್ನು ಸ್ಥಿರವಾಗಿಡಲು ಮತ್ತು ದೀರ್ಘಾವಧಿಯಲ್ಲಿ ಬಲವಾಗಿಡಲು ಸಹಾಯ ಮಾಡುತ್ತದೆ. ಭಾರತದ ಹಣಕಾಸು ನೀತಿಯು ಸಾಮಾಜಿಕ ಬೆಂಬಲ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಪರಿಸರ ಕಾಳಜಿಯನ್ನು ಸಮತೋಲನಗೊಳಿಸುವ ಮೂಲಕ ನ್ಯಾಯಯುತ, ಸ್ಥಿರ ಮತ್ತು ಬೆಳೆಯುತ್ತಿರುವ ಆರ್ಥಿಕತೆಯನ್ನು ನಿರ್ಮಿಸುವತ್ತ ಗಮನಹರಿಸುತ್ತದೆ. ಆರ್ಥಿಕ ಸವಾಲುಗಳು ಬದಲಾದಂತೆ, ದೇಶವನ್ನು ನಿರಂತರ ಪ್ರಗತಿಯತ್ತ ಮಾರ್ಗದರ್ಶನ ಮಾಡಲು ಹೊಂದಿಕೊಳ್ಳುವ ಹಣಕಾಸು ತಂತ್ರಗಳು ಪ್ರಮುಖವಾಗಿವೆ.

ಹಣದುಬ್ಬರದ ಅರ್ಥ ಮತ್ತು ಅದರ ವಿಧಗಳು

ಹಣದುಬ್ಬರದ ಅರ್ಥ ಮತ್ತು ಅದರ ವಿಧಗಳು

ಅರ್ಥ:

‘ಹಣದುಬ್ಬರ’ ಅಥವಾ ‘ಹಣದ ಅತಿಪ್ರಸರಣ’ ಎಂಬ ಪದಕ್ಕೆ ಸರಿಯಾದ ಹಾಗೂ ಸಮರ್ಪಕವಾದ ವ್ಯಾಖ್ಯೆಯನ್ನು ನೀಡುವುದು ಬಹು ಕಠಿಣ. ವಿವಿಧ ಅರ್ಥಶಾಸ್ತ್ರಜ್ವರು ತಮ್ಮದೇ ಆದ ರೀತಿಯಲ್ಲಿ ಅದರ ವ್ಯಾಖ್ಯೆಯನ್ನು ನೀಡಿದ್ದಾರೆ. ಸಾಮಾನ್ಯವಾಗಿ ಒಂದೇ ಸಮನೆ ಬೆಲೆಗಳ ಏರಿಕೆಯ ಸ್ಥಿತಿಗೆ ‘ಹಣದುಬ್ಬರ’ ಎಂದು ಹೆಸರು. ಅಂದರೆ ಹಣದ ಮೌಲ್ಯವು ಇಳಿಯುತ್ತಿರುವ ಹಾಗೂ ಸರಕು ಮತ್ತು ಸೇವೆಗಳ ಬೆಲೆಗಳು ಸತತವಾಗಿ ಏರುತ್ತಿರುವ ಸ್ಥಿತಿಯೇ ಹಣದುಬ್ಬರ. ಹಣದುಬ್ಬರದ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅದರ ಮೇಲಿರುವ ಪ್ರಮುಖ ವ್ಯಾಖ್ಯೆಗಳನ್ನು ಪರಿಶೀಲಿಸುವುದು ಅಗತ್ಯ.

ಪ್ರೊ || ಕ್ರೌಥರ್ : ಹಣದುಬ್ಬರವೆಂದರೆ ಹಣದ ಮೌಲ್ಯವು ಇಳಿಮುಖವಾಗುತ್ತಿರುವ ಮತ್ತು ಬೆಲೆಗಳು ಏರಿಕೆಯಾಗುತ್ತಿರುವ ಪರಿಸ್ಥಿತಿಯಾಗಿದೆ.

ಪ್ರೊ|| ಕೆಮ್ಮರ್ : ಉದ್ಯಮದ ಭೌತಿಕ ಗಾತ್ರಕ್ಕೆ ಹೋಲಿಸಿದಂತೆ ಮಿತಿಮೀರಿದ ಪ್ರಮಾಣದ ಹಣದ ಇರುವಿಕೆಯೇ ಹಣದುಬ್ಬರ.

ಪ್ರೊ|| ಕೋಲ್‌ಬರ್ನ್ : ಅತಿ ಹೆಚ್ಚು ಪ್ರಮಾಣದ ಹಣವು ಅತಿ ಕಡಿಮೆ ಸರಕುಗಳನ್ನು ಬೆನ್ನಟ್ಟುವ ಸ್ಥಿತಿಯೇ ಹಣದುಬ್ಬರವಾಗಿದೆ.

ಮಿಲ್ಟನ್ ಫ್ರೀಡ್‌ಮನ್ : ಹಣದ ಮೌಲ್ಯವು ಇಳಿಯುತ್ತಿರುವ ಪರಿಸ್ಥಿತಿ, ಅಂದರೆ ಸರಕು ಮತ್ತು ಸೇವೆಗಳ ಬೆಲೆಗಳು ಏರುತ್ತಿರುವ ಪರಿಸ್ಥಿತಿಯೇ ಹಣದುಬ್ಬರ.

ಹಣದುಬ್ಬರದ ವಿಧಗಳು (Types of Inflation)

ಹಣದುಬ್ಬರದ ಸ್ವರೂಪ ಮತ್ತು ಕಾರಣಗಳನ್ನು ಅನ್ವೇಷಿಸುವಾಗ ಅದನ್ನು ಎರಡು ವಿಶಾಲ ಭಾಗಗಳಾಗಿ

ವಿಭಜಿಸಬಹುದು ಅವುಗಳೆಂದರೆ,

1. ಬೇಡಿಕೆ ಪ್ರೇರಿತ ಹಣದುಬ್ಬರ ಅಥವಾ ಬೇಡಿಕೆ ಎಳೆತದ ಹಣದುಬ್ಬರ

2. ವೆಚ್ಚ ಪ್ರೇರಿತ ಹಣದುಬ್ಬರ ಅಥವಾ ವೆಚ್ಚ ತಳ್ಳುವ ಹಣದುಬ್ಬರ

ಅ. ಬೇಡಿಕೆ ಎಳೆತದ ಹಣದುಬ್ಬರ (Demand -Pull Inflation)

ಉತ್ಪಾದನೆ ಕಡಿಮೆಯಾಗಿರುವ ಅಥವಾ ಉತ್ಪಾದನೆಯು ಸ್ಥಗಿತವಾಗಿರುವ ಸಂದರ್ಭದಲ್ಲಿ ಬೇಡಿಕೆಯು ನಿರಂತರವಾಗಿ ಮತ್ತು ರಭಸವಾಗಿ ಏರುತ್ತಿದ್ದರೆ ಹಣದುಬ್ಬರ ಉಂಟಾಗುತ್ತದೆ. ಇದೇ ‘ಬೇಡಿಕೆ ಎಳೆತದ ಹಣದುಬ್ಬರ’. ಏಕೆಂದರೆ ಆಗಾಧವಾಗಿ ಏರುತ್ತಿರುವ ಬೇಡಿಕೆಯು ಬೆಲೆಗಳನ್ನು ಮೇಲಕ್ಕೆ ಎಳೆಯುತ್ತದೆ. ಸರಕುಗಳ ಪೂರೈಕೆಗಿಂತ ಹಣದ ಪೂರೈಕೆಯು ಅತಿ ಹೆಚ್ಚಾಗಿರುವುದುದೇ ಬೆಲೆ ಏರಿಕೆಗೆ ಕಾರಣವೆಂಬುದು ಬೇಡಿಕೆ-ಎಳೆತ ಹಣದುಬ್ಬರದ ಸಿದ್ಧಾಂತವಾಗಿದೆ. ಹಣದ ಪೂರೈಕೆಯ ಹೆಚ್ಚಳದಿಂದ ಸ್ವಾಭಾವಿಕವಾಗಿ ಜನರ ಆದಾಯಗಳು ಜಾಸ್ತಿಯಾಗುತ್ತದೆ. ಹಣದ ಪೂರೈಕೆ ಮತ್ತು ಆದಾಯಗಳ ಹೆಚ್ಚಳದ ಜೊತೆಗೆ ಉತ್ಪಾದನೆಯೂ ಹೆಚ್ಚಿದರೆ ಬೆಲೆಯ ಏರಿಕೆಗೆ ಒತ್ತಡ ಗೋಚರಿಸುವುದಿಲ್ಲ. ಆದರೆ ಜನರ ಆದಾಯದ ಮತ್ತು ಬೇಡಿಕೆಯ ಮಟ್ಟದಲ್ಲಿ ಏರಿಕೆಯಾದಾಗ ಅದಕ್ಕೆ ತಕ್ಕನಾಗಿ ಉತ್ಪಾದನೆ ಮತ್ತು ಪೂರೈಕೆಗಳು ಏರದಿದ್ದರೆ ಹಣದುಬ್ಬರ ಸಂಭವಿಸುತ್ತದೆ. ಹೀಗೆ ಬೆಲೆಗಳ ಏರಿಕೆಗೆ ಹೆಚ್ಚಿದ ಬೇಡಿಕೆಯು ಪ್ರೇರಣೆಯನ್ನು ಒದಗಿಸುತ್ತದೆ.

ಆ. ವೆಚ್ಚ-ತಳ್ಳಿದ ಹಣದುಬ್ಬರ (Cost-push Inflation)

ಕೆಲವು ಸಂದರ್ಭಗಳಲ್ಲಿ ವೆಚ್ಚ ಹಾಗೂ ಉತ್ಪಾದನಾಂಗಗಳ ಬೆಲೆಯ ಹೆಚ್ಚಳದಿಂದ ಬೆಲೆ ಏರಿಕೆ ತಲೆದೋರಿರಬಹುದು. ಉದಾಹರಣೆಗೆ ಕಾರ್ಮಿಕ ಸಂಘಗಳ ಮುಷ್ಕರದ ಬೆದರಿಕೆಯಿಂದ ಮಾಲೀಕರು ವೇತನಗಳನ್ನು ಹೆಚ್ಚಿಸಬೇಕಾಗಬಹುದು. ಈ ಪರಿಣಾಮವಾಗಿ ಉತ್ಪಾದನಾ ವೆಚ್ಚ ಏರುವುದರಿಂದ ಹೆಚ್ಚಿನ ಬೆಲೆಯನ್ನು ನಿರ್ಧರಿಸಲೇಬೇಕಾಗುತ್ತದೆ. ಉದ್ಯಮಿಗಳು ಹೆಚ್ಚು ಲಾಭದ ದರವನ್ನು ನಿಗದಿಪಡಿಸಿ ಸರಕುಗಳ ಮಾರಾಟದಲ್ಲಿ ತೊಡಗಿದಾಗಲೂ ಬೆಲೆಗಳು ಏರುತ್ತವೆ. ಸರ್ಕಾರದಿಂದ ಹೊಸ ತೆರಿಗೆಗಳನ್ನು ವಿಧಿಸುವಿಕೆ ಹಾಗೂ ಅಸ್ತಿತ್ವದಲ್ಲಿರುವ ತೆರಿಗೆಗಳ ದರವನ್ನು ಹೆಚ್ಚಿಸುವಿಕೆಯು ಉತ್ಪಾದನಾ ವೆಚ್ಚವನ್ನು ಏರಿಸುವ ಮೂಲಕ ಬೆಲೆಯ ಹೆಚ್ಚಳದಲ್ಲಿ ಪರಿಣಮಿಸುತ್ತದೆ. ಹೀಗೆ ಏರಿದ ವೆಚ್ಚವು ಬೆಲೆಗಳನ್ನು ಮೇಲಕ್ಕೆ (ಏರಿಕೆಗೆ) ತಳ್ಳುವುದರಿಂದ ಇದಕ್ಕೆ ವೆಚ್ಚ-ತಳ್ಳಿದ ಹಣದುಬ್ಬರ ಎಂದು ಕರೆಯಲಾಗುತ್ತದೆ.

ಹಣದುಬ್ಬರದ ತೀವ್ರತೆಯನ್ನು ಆಧರಿಸಿ ಅದರಲ್ಲಿ ಇನ್ನೊಂದು ರೀತಿಯ ವಿಭಜನೆಯನ್ನು ಕಾಣಬಹುದಾಗಿದೆ.

1) ತೆವಳುವ ಹಣದುಬ್ಬರ (Creeping Inflation)

ಬೆಲೆಗಳು ಅತಿ ನಿಧಾನವಾಗಿ, ಬಹಳ ಕಡಿಮೆ ದರದಲ್ಲಿ ಏರುತ್ತಿದ್ದರೆ ಅದಕ್ಕೆ ತೆವಳುವ ಹಣದುಬ್ಬರವೆಂದು ಹೆಸರು.

2) ನಡೆಯುತ್ತಿರುವ ಹಣದುಬ್ಬರ (Walking Inflation) :

ಹಣದುಬ್ಬರ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಬೆಲೆಗಳು ಸ್ವಲ್ಪ ಹೆಚ್ಚಿನ ದರದಲ್ಲಿ ಏರುತ್ತಿರುವುದು ಗೋಚರಿಸತೊಡಗುತ್ತದೆ. ಈ ಸನ್ನಿವೇಶದಲ್ಲಿ ಸಾವಕಾಶವಾಗಿ ಮಗು ಆರಂಭದಲ್ಲಿ ನಡೆಯಲು ಪ್ರಾರಂಭಿಸಿದಂತೆ ಏರತೊಡಗುತ್ತವೆ. ಇದು ನಡೆಯುತ್ತಿರುವ ಹಣದುಬ್ಬರವಾಗಿದೆ.

3) ಓಡುತ್ತಿರುವ ಹಣದುಬ್ಬರ (Running Inflation) :

ಬೆಲೆಗಳು ನಿರಂತರವಾಗಿ ಅಪಾಯಕಾರಿ ಮಟ್ಟದಲ್ಲಿ ಏರುವ ಸನ್ನಿವೇಶವೇ ಓಡುತ್ತಿರುವ ಹಣದುಬ್ಬರ, ಈ ಸನ್ನಿವೇಶದಲ್ಲಿ ಬೆಲೆಗಳು ವೇಗದಿಂದ ಅಂದರೆ ಮಗು ನಡೆಯಲು ಕಲಿತ ನಂತರ ಓಡಲು ಹೇಗೆ ಪ್ರಾರಂಭಿಸುವುದೋ ಹಾಗೆಯೇ ಏರುತ್ತದೆ.

4) ನಾಗಾಲೋಟದ ಹಣದುಬ್ಬರ (Galloping Inflation) :

ಬೆಲೆಗಳು ಬಹಳ ಹೆಚ್ಚಿನ ದರದಲ್ಲಿ, ಎಲ್ಲ ನಿಯಂತ್ರಣ ವಿಧಾನಗಳನ್ನು ಮೀರಿ ರಭಸವಾಗಿ ಏರುತ್ತಿರುವ ಸ್ಥಿತಿಯೇ ನಾಗಾಲೋಟದ ಹಣದುಬ್ಬರ, ಜರ್ಮನಿಯಲ್ಲಿ 1923-24ರ ಅವಧಿಯಲ್ಲಿ ಸಂಭವಿಸಿದ ಬೆಲೆ ಏರಿಕೆಯು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಹಣದುಬ್ಬರದ ನಿಯಂತ್ರಣ ಅಥವಾ ಅನಿಯಂತ್ರಣದ ಮೇರೆಗೆ ಅದನ್ನು ಮತ್ತೂ ಒಂದು ವಿಧದಲ್ಲಿ ವರ್ಗಿಕರಿಸಬಹುದಾಗಿದೆ.
1.ತೆರೆದ ಹಣದುಬ್ಬರ (Open Inflation):

ಸರ್ಕಾರದ ನಿಯಂತ್ರಣಕ್ಕೆ ಒಳಗಾಗದೆ ಬೆಲೆಗಳು ಏರುವ ಸ್ಥಿತಿಗೆ ತೆರೆದ ಹಣದುಬ್ಬರ ಎಂದು ಹೆಸರು. ಇಲ್ಲಿ ಬೆಲೆಗಳು ಮುಕ್ತವಾಗಿ ಏರುತ್ತದೆ. ಹಣದುಬ್ಬರದ ನಿಯಂತ್ರಣಕ್ಕೆ ಸರಕಾರವು ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ.

2.ಹತ್ತಿಕ್ಕಿದ ಹಣದುಬ್ಬರ (Suppressed Inflation):

ಸರ್ಕಾರದ ಬೆಲೆ ನಿಯಂತ್ರಣ ಕ್ರಮಗಳ ಮೂಲಕ ಹತೋಟಿಗೆ ಒಳಗಾದ ಬೆಲೆ ಏರಿಕೆಗೆ ಹತ್ತಿಕ್ಕಿದ ಹಣದುಬ್ಬರವೆಂದು ಹೆಸರು. ಬೆಲೆಗಳ ಏರಿಕೆಗೆ ಸೂಕ್ತ ಅವಕಾಶಗಳಿದ್ದರೂ ಸರ್ಕಾರದ ಕ್ರಮಗಳಿಂದ ಅದು ನಿಯಂತ್ರಿಸಲ್ಪಟ್ಟಿರುತ್ತದೆ.

ಕೇನ್ಸನ ಉದ್ಯೋಗ ಸಿದ್ಧಾಂತ

ಕೇನ್ಸನ ಉದ್ಯೋಗ ಸಿದ್ಧಾಂತ

ಕೇನ್ಸ್‌ನು ಕ್ರಿ.ಶ. 1936ರಲ್ಲಿ ಪ್ರಕಟವಾದ ತನ್ನ ‘ಉದ್ಯೋಗ, ಬಡ್ಡಿ ಮತ್ತು ಹಣದ ಸಾಮಾನ್ಯ ಸಿದ್ಧಾಂತ’ (General theory of Employment, Interest and Money) ಎಂಬ ಕೃತಿಯಲ್ಲಿ ಸಂಪ್ರದಾಯ ಪಂಥದವರ ಉದ್ಯೋಗ ಸಿದ್ಧಾಂತವನ್ನು ಕಟುವಾಗಿ ಟೀಕಿಸಿರುವುದಲ್ಲದೇ ತಮ್ಮದೇ ಆದಂತಹ ಒಂದು ಹೊಸ ಉದ್ಯೋಗ ಸಿದ್ದಾಂತವನ್ನು ಪ್ರತಿಪಾದಿಸಿದರು. ಈ ಕೃತಿಯು ಪ್ರಕಟವಾಗುವುದಕ್ಕೆ ಮುಂಚಿತವಾಗಿ ರಾಷ್ಟ್ರೀಯ ವರಮಾನ ಮತ್ತು ಉದ್ಯೋಗ ಸಿದ್ದಾಂತದ ಬಗ್ಗೆ ನವೀನ ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ಹೆಚ್ಚು ಗಮನ ನೀಡಿರಲಿಲ್ಲ. ಅವರು ಜೆ.ಬಿ.ಸೇ, ಅವರ “ಮಾರುಕಟ್ಟೆಯ ನಿಯಮ”ದಲ್ಲಿ ಅಪಾರವಾದ ನಂಬಿಕೆ ಇಟ್ಟಿದ್ದರಲ್ಲದೇ, ಅರ್ಥವ್ಯವಸ್ಥೆಯಲ್ಲಿ ಯಾವಾಗಲೂ ಪೂರ್ಣೋದ್ಯೋಗ ಇರುತ್ತದೆಯೆಂದು ಭಾವಿಸಿದ್ದರು. ಆದರೆ 1929-30ರ ಅವಧಿಯಲ್ಲಿ ಅಮೇರಿಕದಲ್ಲಿ ಸಂಭವಿಸಿದ ‘ಮಹಾ ಆರ್ಥಿಕ ಮುಗ್ಗಟ್ಟು’ ಸಂಪ್ರದಾಯ ಪಂಥದ ಔಚಿತ್ಯವನ್ನೇ ಪ್ರಶ್ನಿಸುವಂತೆ ಮಾಡಿತು. ಏಕೆಂದರೆ ಈ ಮಹಾ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸಲು ಸಂಪ್ರದಾಯ ಪಂಥದವರ ವಿಶ್ಲೇಷಣೆಯು ವಿಫಲವಾಯಿತು. ಪರಿಣಾಮವಾಗಿ ಹೊಸ ಪರಿಣಾಮಕಾರಿ ಆರ್ಥಿಕ ಅಸ್ತ್ರವೊಂದರ ಅಗತ್ಯ ಉಂಟಾಯಿತು. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೇನ್ಸ್‌ರವರು ತಮ್ಮ ಅದ್ವಿತೀಯ ಪಾಂಡಿತ್ಯವನ್ನು ಬಳಸಿ ಒಂದು ಹೊಸ ಮೀಮಾಂಸೆಯಾದ ‘ಸಾಮಾನ್ಯ ಸಿದ್ಧಾಂತ’ವನ್ನು ರಚಿಸಿದರು. ಈ ಕೃತಿಯು ಅರ್ಥಶಾಸ್ತ್ರದ ವಿಚಾರಧಾರೆಯಲ್ಲಿ ಕ್ರಾಂತಿಯನ್ನೆ ಉಂಟುಮಾಡಿದುದಲ್ಲದೇ ಒಂದು ಹೊಸ ಮಾರ್ಗವನ್ನೇ ಹುಟ್ಟುಹಾಕಿತು. ಕೇನ್ಸ್‌ರವರ ಅರ್ಥಶಾಸ್ತ್ರಕ್ಕೆ ‘ನವೀನ ಅರ್ಥಶಾಸ್ತ್ರ’ (Neo Economics) ಎಂಬ ಹೆಸರು ಸಹ ಇದೆ. 18ನೇ ಶತಮಾನದಲ್ಲಿ ಆಡಂಸ್ಮಿತ್‌ರ ‘ರಾಷ್ಟ್ರಗಳ ಸಂಪತ್ತು’ (Wealth of Nations) ಎಂಬ ಗ್ರಂಥಕ್ಕೂ ಮತ್ತು 19ನೇ ಶತಮಾನದಲ್ಲಿ ಕಾರ್ಲ್‌ಮಾರ್ಕ್ಸರ “ದಾಸ್ ಕ್ಯಾಪಿಟಲ್” ಎಂಬ ಗ್ರಂಥಕ್ಕೂ ದೊರೆತಷ್ಟು ಮನ್ನಣೆ ಇಪ್ಪತ್ತನೇ ಶತಮಾನದಲ್ಲಿ ಕೇನ್ಸ್‌ರವರ ‘ಸಾಮಾನ್ಯ ಸಿದ್ಧಾಂತ’ಕ್ಕೆ ದೊರೆತಿದೆ ಮತ್ತು ಸರಕಾರದ ಹಸ್ತಕ್ಷೇಪ ರಹಿತ ತಾಟಸ್ಯ ನೀತಿಯ ನಿರಾಕರಣೆಯಾಗಿದೆ ಎಂದು ಪ್ರೊ. ಡಡ್ಲೆ ಡಿಲಾರ್ಡ್ ಅವರು ಅಭಿಪ್ರಾಯ ಪಡುತ್ತಾರೆ. ಕೇನ್ಸ್‌ರವರು ತಮ್ಮ ಸಿದ್ಧಾಂತದ ವಿಶ್ಲೇಷಣೆಯ ಸರಳತೆಗೋಸ್ಕರ ಕೆಲವು ಅಂಶಗಳನ್ನು ಊಹಿಸಿ ತಮ್ಮ ಸಿದ್ಧಾಂತವನ್ನು ಸೃಜಿಸಿದ್ದಾರೆ. ಅವುಗಳು ಈ ಕೆಳಗಿನಂತಿವೆ.

1. ಅರ್ಥ ವ್ಯವಸ್ಥೆಯಲ್ಲಿ ಪರಿಪೂರ್ಣ ಪೈಪೋಟಿ ಅಸ್ತಿತ್ವದಲ್ಲಿರುತ್ತದೆ.

2. ಉತ್ಪಾದನೆಯು ಇಳಿಮುಖ ಪ್ರತಿಫಲ ನಿಯಮಕ್ಕೊಳಪಡುತ್ತದೆ.

3. ಆರ್ಥಿಕ ಸಮಸ್ಯೆಗಳು ಅಲ್ಪಾವಧಿಗೆ ಸಂಬಂಧಿಸಿರುತ್ತದೆ.(ಈ ಕಾರಣದಿಂದಲೇ ಕೇನ್ಸ್‌ರವರ ಅರ್ಥಶಾಸ್ತ್ರವನ್ನು ಅಲ್ಪಾವಧಿಯ ಅರ್ಥಶಾಸ್ತ್ರವೆಂದು ಕರೆಯಲಾಗಿದೆ.)

4. ಮುಕ್ತ ಆರ್ಥಿಕತೆಗೆ ಬದಲಾಗಿ ನಿರ್ಬಂಧಿತ ಆರ್ಥಿಕ ವ್ಯವಸ್ಥೆ ಇರುತ್ತದೆ.

5. ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪವಿರುತ್ತದೆ.

6. ಅರ್ಥ ವ್ಯವಸ್ಥೆಯಲ್ಲಿ ಪೂರ್ಣೋದ್ಯೋಗವಿರದೆ ಅರೆ ಉದ್ಯೋಗವಿರುತ್ತದೆ.

7. ಅಲ್ಪಾವಧಿಯಲ್ಲಿ ಜನಸಂಖ್ಯೆ, ಶ್ರಮ ಬಲ, ಶ್ರಮದಕ್ಷತೆ ಮತ್ತು ತಂತ್ರಜ್ಞಾನ ಸ್ಥಿರವಿರುತ್ತದೆ.

ಪೂರೈಕೆ ಮತ್ತು ಬೇಡಿಕೆಗಳು ಆರ್ಥಿಕ ವಿಶ್ಲೇಷಣೆಯ ಎರಡು ಮುಖ್ಯ ಭಾಗಗಳಾಗಿವೆ. ಆರ್ಥಿಕ ಚಟುವಟಿಕೆಗಳ ಕಾರಣ- ಪರಿಣಾಮಗಳನ್ನು ಈ ಎರಡು ಅಂಶಗಳ ಸಹಾಯದಿಂದ ಅಧ್ಯಯನ ಮಾಡಬಹುದಾಗಿದೆ. ಆ ಮೇರೆಗೆ ಕೇನ್ಸ್‌ರವರು ಪೂರೈಕೆಯ ಭಾಗಕ್ಕಿಂತ ಬೇಡಿಕೆಯ ಭಾಗಕ್ಕೆ ಹೆಚ್ಚು ಒತ್ತು ನೀಡಿರುತ್ತಾರೆ. ಕೇನ್ಸ್‌ರ ಅರ್ಥಶಾಸ್ತ್ರವು ಅಲ್ಪಾವಧಿಗೆ ಸಂಬಂಧಿಸಿರುವುದರಿಂದ ಈ ಸಮಯದಲ್ಲಿ ಪೂರೈಕೆಯು ಯಾವುದೇ ಬದಲಾವಣೆಗಳಿಲ್ಲದೆ ಸ್ಥಿರವಾಗಿರುತ್ತದೆಂದು ಅವರು ಊಹಿಸುತ್ತಾರೆ. ಅಷ್ಟೇ ಅಲ್ಲದೆ ಸಮಗ್ರ ನೀಡಿಕೆಯ ಕಾರ್ಯವು ಸ್ಥಿರವಾಗಿರುತ್ತದೆಂದು ಅವರು ಊಹಿಸುತ್ತಾರೆ. ಕೇನ್ಸರು ಸಮಗ್ರ ಬೇಡಿಕೆಯ ಕಾರ್ಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿರುತ್ತಾರೆ. ಕೇನ್ಸರ ಪ್ರಕಾರ ಸಮಗ್ರ ಬೇಡಿಕೆಯ ಕಾರ್ಯವು ಎರಡು ಅಂಶಗಳನ್ನು ಅವಲಂಬಿಸಿದೆ. ಅವುಗಳೆಂದರೆ,

1. ಅನುಭೋಗ ಕಾರ್ಯ ಅಥವಾ ಅನುಭೋಗ ವೆಚ್ಚ

2. ಹೂಡಿಕೆಯ ಕಾರ್ಯ ಅಥವಾ ಹೂಡಿಕೆಯ ವೆಚ್ಚ

ಆದ್ದರಿಂದ ಸಮಗ್ರ ಬೇಡಿಕೆಯ ಕಾರ್ಯವನ್ನು ಈ ರೀತಿಯಾಗಿ ವ್ಯಾಖ್ಯಾನಿಸಬಹುದು.

ಸಮಗ್ರ ಬೇಡಿಕೆ = ಅನುಭೋಗ ಕಾರ್ಯ (ವೆಚ್ಚ+ ಹೂಡಿಕೆಯ ಕಾರ್ಯ (ವೆಚ್ಚ)

ಸಂಪ್ರದಾಯ ಪಂಥದ ಉಳಿತಾಯ ಮತ್ತು ಹೂಡಿಕೆ ಸಿದ್ಧಾಂತ

ಕೇನ್ಸರ ಉದ್ಯೋಗ ಸಿದ್ಧಾಂತಕ್ಕೆ ‘ಬೇಡಿಕೆ ಕೊರತೆಯ ಸಿದ್ಧಾಂತ’ (Demand Deficiency Theory) ಎಂಬ ಹೆಸರು ಕೂಡ ಇದೆ. ಕೇನ್ಸ್‌ರವರ ಅಭಿಪ್ರಾಯದಲ್ಲಿ ಪೂರ್ಣೋದ್ಯೋಗವು ಎಂದೆಂದಿಗೂ ಕೂಡ ಅಸ್ತಿತ್ವದಲ್ಲಿರುವುದಿಲ್ಲ. ಅರ್ಥವ್ಯವಸ್ಥೆಯಲ್ಲಿ ಪೂರ್ಣೋದ್ಯೋಗ ನೆಲೆಸಿದರೆ ನಮ್ಮ ಕಷ್ಟಗಳೆಲ್ಲವು ದೂರಾದಂತೆಯೇ ಎಂದು ಕೇನ್ಸ್ ಘೋಷಿಸುತ್ತಾರೆ. ಯಾವಾಗಲೂ ಅರ್ಥವ್ಯವಸ್ಥೆಯಲ್ಲಿ ಅರೆ ಉದ್ಯೋಗ ಮಟ್ಟವಿರುತ್ತದೆ. ಪರಿಣಾಮಕಾರಿ ಬೇಡಿಕೆಯ ಕೊರತೆಯೇ ನಿರುದ್ಯೋಗಕ್ಕೆ ಕಾರಣವಾಗಿದೆ ಎಂದು ಕೇನ್ಸ್‌ರವರು ಅಭಿಪ್ರಾಯ ಪಡುತ್ತಾರೆ. ಪರಿಣಾಮಕಾರಿ ಬೇಡಿಕೆ ಪರಿಭಾವನೆಯು ಕೇನ್ಸರ ಉದ್ಯೋಗ ಸಿದ್ಧಾಂತದ ಆಧಾರಸ್ತಂಭವಾಗಿದೆ. ಪರಿಣಾಮಕಾರಿ ಬೇಡಿಕೆ ಎಂದರೆ ಸರಕು ಮತ್ತು ಸೇವೆಗಳನ್ನು ಕೊಳ್ಳುವ ಶಕ್ತಿ ಮತ್ತು ಕೊಳ್ಳುವ ಮನಸ್ಸು ಮತ್ತು ವಾಸ್ತವ ಕೊಳ್ಳುವಿಕೆಯ ಪ್ರಮಾಣ. ಪರಿಣಾಮಕಾರಿ ಬೇಡಿಕೆಯು ಎರಡು ಅಂಶಗಳನ್ನು ಒಳಗೊಳ್ಳುತ್ತದೆ. ಅವುಗಳೆಂದರೆ;

) ಅನುಭೋಗ ವೆಚ್ಚ

) ಹೂಡಿಕೆಯ ವೆಚ್ಚ

ಜನರು ಅನುಭೋಗಕ್ಕಾಗಿ ಕೊಳ್ಳುವ ಸರಕು ಮತ್ತು ಸೇವೆಗಳ ಮೇಲಿನ ವೆಚ್ಚವು ಅನುಭೋಗ ವೆಚ್ಚವಾಗಿದೆ. ಅರ್ಥವ್ಯವಸ್ಥೆಯಲ್ಲಿ ಹೊಸ ಕಾರ್ಖಾನೆಗಳ ನಿರ್ಮಾಣ, ಉತ್ಪಾದನೆಗೆ ಅಗತ್ಯವಿರುವ ಸಾಧನ ಸಾಮಗ್ರಿಗಳ ಖರೀದಿ, ಯಂತ್ರಗಳ ಸ್ಥಾಪನೆ ಮೊದಲಾದವುಗಳ ಮೇಲೆ ಮಾಡಲಾಗುವ ವೆಚ್ಚವು ಹೂಡಿಕೆಯ ವೆಚ್ಚ ಎನಿಸಿಕೊಳ್ಳುತ್ತದೆ. ಅರ್ಥವ್ಯವಸ್ಥೆಯಲ್ಲಿನ ಒಟ್ಟು ವೆಚ್ಚವು ಈ ಎರಡು ರೀತಿಯ ವೆಚ್ಚಗಳನ್ನು ಒಳಗೊಂಡಿರುತ್ತದೆ. ಈ ಒಟ್ಟು ವೆಚ್ಚವು ಒಟ್ಟು ರಾಷ್ಟ್ರೀಯ ಆದಾಯಕ್ಕೆ ಸಮನಾಗಿರುತ್ತದೆ. ಈ ಅಂಶವನ್ನು ಒಂದು ಸೂತ್ರದ ಮೂಲಕ ವ್ಯಕ್ತಪಡಿಸಬಹುದು.

= C + I

ಈ ಸಮೀಕರಣದಲ್ಲಿ,

Y = ಒಟ್ಟು ರಾಷ್ಟ್ರೀಯ ಆದಾಯ

C = ಒಟ್ಟು ಅನುಭೋಗ ವೆಚ್ಚ

I = ಒಟ್ಟು ಹೂಡಿಕೆಯ ವೆಚ್ಚ

ಕೇನ್ಸ್‌ರವರ ಪ್ರಕಾರ ಪರಿಣಾಮಕಾರಿ ಬೇಡಿಕೆಯು ಅರ್ಥವ್ಯವಸ್ಥೆಯಲ್ಲಿ ಉದ್ಯೋಗ, ಉತ್ಪನ್ನ ಮತ್ತು ಆದಾಯವನ್ನು ನಿರ್ಧರಿಸುತ್ತದೆ. ಪರಿಣಾಮಕಾರಿ ಬೇಡಿಕೆಯು ಹೆಚ್ಚಿದ್ದರೆ ಉದ್ಯೋಗ, ಉತ್ಪನ್ನ, ಆದಾಯ ಮತ್ತು ಹೂಡಿಕೆಗಳು ಅಧಿಕವಾಗಿರುತ್ತವೆ ಮತ್ತು ಪರಿಣಾಮಕಾರಿ ಬೇಡಿಕೆಯು ಕಡಿಮೆಯಾದರೆ ಈ ಅಂಶಗಳು ಕೂಡ ಕುಗ್ಗುತ್ತವೆ. ಆದರೆ ಪರಿಣಾಮಕಾರಿ ಬೇಡಿಕೆಯು ಸಾಮಾನ್ಯವಾಗಿ ಕುಗ್ಗಿದ ಮಟ್ಟದಲ್ಲಿರುತ್ತದೆ. ಈ ಕೊರತೆಗೆ ಕಾರಣವೆಂದರೆ ಆದಾಯ ಮತ್ತು ಅನುಭೋಗದ ನಡುವಿನ ಅಂತರವಾಗಿದೆ. ಆದಾಯವು ಹೆಚ್ಚಳಗೊಂಡ ದರದಲ್ಲಿಯೇ ಅನುಭೋಗವು ಹೆಚ್ಚದಿರುವುದರಿಂದ ಬೇಡಿಕೆಯ ಕೊರತೆ ಸಂಭವಿಸುತ್ತದೆ. ಈ ಕೊರತೆಯನ್ನು ಹೂಡಿಕೆಯ ಹೆಚ್ಚಳದ ಮೂಲಕ ತುಂಬದಿದ್ದರೆ ನಿರುದ್ಯೋಗವು ಉಂಟಾಗುತ್ತದೆಂದು ಕೇನ್ಸರು ಹೇಳುತ್ತಾರೆ. ಪರಿಣಾಮಕಾರಿ ಬೇಡಿಕೆಯು ಎರಡು ಅಂಶಗಳಿಂದ ನಿರ್ಧಾರವಾಗುತ್ತದೆ. ಅವುಗಳೆಂದರೆ :

1. ಸಮಗ್ರ ಬೇಡಿಕೆಯ ಬೆಲೆ ಅಥವಾ ಸಮಗ್ರ ಬೇಡಿಕೆಯ ಕಾರ್ಯ.

2. ಸಮಗ್ರ ನೀಡಿಕೆಯ ಬೆಲೆ ಅಥವಾ ಸಮಗ್ರ ನೀಡಿಕೆಯ ಕಾರ್ಯ.

» ಈಗ ಈ ಎರಡು ಅಂಶಗಳನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

1.ಸಮಗ್ರ ಬೇಡಿಕೆಯ ಕಾರ್ಯ:-

ಒಂದು ರಾಷ್ಟ್ರದ ಎಲ್ಲ ಉದ್ಯಮಗಳು ವಿವಿಧ ಉದ್ಯೋಗ ಮಟ್ಟಗಳಲ್ಲಿ ಉತ್ಪಾದಿಸಿದ ಉತ್ಪನ್ನಗಳ ಮಾರಾಟದಿಂದ ನಿರೀಕ್ಷಿಸುವ ವರಮಾನದ ಒಟ್ಟು ಮೊತ್ತ ಅಥವಾ ಮೊಬಲಗನ್ನು ಸಮಗ್ರ ಬೇಡಿಕೆಯ ಬೆಲೆ ಅಥವಾ ಸಮಗ್ರ ಬೇಡಿಕೆಯ ಕಾರ್ಯ ಎಂದು ಕರೆಯಲಾಗಿದೆ. ತಮ್ಮ ಉತ್ಪನ್ನಗಳ ಮಾರಾಟದಿಂದ ಉದ್ಯಮಿಗಳಿಗೆ ಸಂದಾಯವಾಗಬೇಕಿರುವ ಹಣದ ಮೊತ್ತವನ್ನು ಇದು ಸೂಚಿಸುತ್ತದೆ. ಉದ್ಯೋಗದ ಪ್ರಮಾಣ ಹೆಚ್ಚಿದಂತೆ ಉತ್ಪಾದನೆಯೂ ಹೆಚ್ಚಿ ಸಮಗ್ರ ಬೇಡಿಕೆಯ ಮೊತ್ತವು ಅಧಿಕಗೊಳ್ಳುತ್ತದೆ. ಉದ್ಯೋಗದ ಪ್ರಮಾಣ ಕಡಿಮೆಯಾದರೆ ಸಮಗ್ರ ಬೇಡಿಕೆಯ ಬೆಲೆಯೂ ಕೂಡ ಕಡಿಮೆಯಾಗುತ್ತದೆ.

2)ಸಮಗ್ರ ನೀಡಿಕೆಯ ಕಾರ್ಯ:-

ಉದ್ಯಮಿಗಳು ಕೆಲಸಗಾರರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವಾಗ ಮಾಡಬೇಕಾದ ವೆಚ್ಚವನ್ನು ಸಮಗ್ರ ನೀಡಿಕೆಯ ಕಾರ್ಯವು ಸೂಚಿಸುತ್ತದೆ. ಉದ್ಯಮಿಗಳು ಉತ್ಪಾದನೆಯನ್ನು ಕೈಗೊಳ್ಳಲು ಕಾರ್ಮಿಕರನ್ನು ನೇಮಿಸಿಕೊಳ್ಳಬೇಕಾಗಿರುತ್ತದೆ ಹಾಗೂ ಅವರ ವೇತನಕ್ಕಾಗಿ ಒಂದಷ್ಟು ಆದಾಯವನ್ನು ಪಡೆಯಲೇಬೇಕಾಗಿರುತ್ತದೆ. ಪರಿಣಾಮವಾಗಿ ಎಲ್ಲಾ ಉದ್ಯಮಿಗಳು ವಿವಿಧ ಉದ್ಯೋಗ ಮಟ್ಟಗಳಲ್ಲಿ ತಮ್ಮ ಉತ್ಪನ್ನಗಳ ಮಾರಾಟದಿಂದ ಪಡೆಯಲೇಬೇಕಾದ ಆದಾಯದ ಮೊತ್ತವೇ ಸಮಗ್ರ ನೀಡಿಕೆಯ ಕಾರ್ಯ ಅಥವಾ ಸಮಗ್ರ ನೀಡಿಕೆಯ ಕಾರ್ಯವಾಗಿದೆ.

ಕಾರ್ಮಿಕರನ್ನು ನೇಮಿಸಿಕೊಳ್ಳಲು ತಗಲುವ ವೆಚ್ಚ ಕಡಿಮೆ ಇದ್ದಷ್ಟೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳಲು ಉದ್ಯಮಿಗಳು ಮುಂದಾಗುತ್ತಾರೆ. ವೆಚ್ಚ ಅಧಿಕವಾದಂತೆಲ್ಲಾ ಕಾರ್ಮಿಕರ ನೇಮಕದ ಪ್ರಮಾಣ ಕುಗ್ಗತೊಡಗುತ್ತದೆ.

ಆದಾಯ ಮತ್ತು ಉದ್ಯೋಗದ ಸಮತೋಲನ

ಸಮಗ್ರ ಬೇಡಿಕೆಯ ಕಾರ್ಯವು ಉದ್ಯಮಿಗಳ ನಿರೀಕ್ಷಿತ ಆದಾಯವನ್ನು ಮತ್ತು ಸಮಗ್ರ ನೀಡಿಕೆಯ ಕಾರ್ಯವು ಉದ್ಯಮಿಗಳು ಮಾಡಲೇಬೇಕಾದಂತಹ ವೆಚ್ಚವನ್ನು ಪ್ರತಿನಿಧಿಸುತ್ತದೆ. ಆದಾಯ ಮತ್ತು ವೆಚ್ಚಗಳು ಸಮನಾಗುವವರೆಗೆ ಉದ್ಯಮಿಗಳು ಕಾರ್ಮಿಕರನ್ನು ನೇಮಿಸಿಕೊಂಡು ಉತ್ಪಾದನೆಯನ್ನು ವೃದ್ಧಿಸತೊಡಗುತ್ತಾರೆ. ವೆಚ್ಚವು ಆದಾಯವನ್ನು ಮೀರುವ ಹಂತದಲ್ಲಿ ಉದ್ಯಮಿಗಳು ಹೊಸ ಶ್ರಮಿಕರ ನೇಮಕಾತಿಯನ್ನು ನಿಲ್ಲಿಸಿ ಉತ್ಪಾದನೆಯ ಹೆಚ್ಚಳವನ್ನು ಸ್ಥಗಿತಗೊಳಿಸುತ್ತದೆ.

ಸಮಗ್ರ ಬೇಡಿಕೆಯ ಕಾರ್ಯ ಮತ್ತು ಸಮಗ್ರ ನೀಡಿಕೆಯ ಕಾರ್ಯಗಳ ಸಮತೋಲನದ ಬಿಂದುವಿನಲ್ಲಿ ಪರಿಣಾಮಕಾರಿ ಬೇಡಿಕೆಯು ನಿರ್ಧರಿತವಾಗುತ್ತದೆ. ಇದು ಸಮತೋಲನದ ಉದ್ಯೋಗ ಮಟ್ಟವಾಗಿದೆ. ಈ ಅಂಶವನ್ನು ಒಂದು ರೇಖಾಚಿತ್ರದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಈ ಮೇಲಿನ ರೇಖಾಚಿತ್ರದಲ್ಲಿ AD ಸಮಗ್ರ ಬೇಡಿಕೆಯ ಕಾರ್ಯದ ರೇಖೆ ಮತ್ತು AS ಸಮಗ್ರ ನೀಡಿಕೆಯ ಕಾರ್ಯದ ರೇಖೆಗಳಾಗಿವೆ. ಈ ಎರಡು ರೇಖೆಗಳು N ಬಿಂದುವಿನಲ್ಲಿ ಸಂಧಿಸಿವೆ. ಈ ಬಿಂದುವಿನಲ್ಲಿ ಆದಾಯ ಮತ್ತು ವೆಚ್ಚಗಳು ಸಮನಾಗಿರುತ್ತವೆ. OQ ಸಮತೋಲನ ಮಟ್ಟದ ಆದಾಯ ಮತ್ತು ವೆಚ್ಚಗಳಾಗಿವೆ. OM ಸಮತೋಲನದ ಉದ್ಯೋಗ ಮಟ್ಟವಾಗಿದೆ. ಇದನ್ನು ಹೊರತುಪಡಿಸಿ ಬೇರಾವುದೇ ಉದ್ಯೋಗ ಮಟ್ಟದಲ್ಲಿ ಆದಾಯ ಮತ್ತು ವೆಚ್ಚದ ಸಮತೋಲನವು ಕದಡುತ್ತದೆ. ಉದಾ : OM1 ಉದ್ಯೋಗ ಮಟ್ಟದಲ್ಲಿ ಸಮಗ್ರ ಬೇಡಿಕೆಯ ಕಾರ್ಯವು (ಆದಾಯ) M1N1 ಆಗಿರುತ್ತದೆ  ಮತ್ತು ಸಮಗ್ರ  ನೀಡಿಕೆಯ ಕಾರ್ಯವು (ವೆಚ್ಚ) M1 P ಆಗಿರುತ್ತದೆ. ಉದ್ಯಮಿಗಳಿಗೆ ದೊರೆಯುವ ಆದಾಯವು PN ನಷ್ಟು ಅಧಿಕವಾಗಿರುವುದರಿಂದ ಉದ್ಯಮಿಗಳು ಇನ್ನೂ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗುತ್ತಾರೆ. ಬದಲಾಗಿ OMಉದ್ಯೋಗ ಮಟ್ಟದಲ್ಲಿ ಸಮಗ್ರ ಬೇಡಿಕೆಯು ಕಾರ್ಯವು (ಆದಾಯ) M2P1 ಮತ್ತು ಸಮಗ್ರ ನೀಡಿಕೆಯ ಕಾರ್ಯವು (ವೆಚ್ಚ) M2N2, ಆಗಿದೆ. ವೆಚ್ಚವು ಆದಾಯಕ್ಕಿಂತ N2P1 ನಷ್ಟು ಅಧಿಕವಾಗಿರುವುದರಿಂದ ಈ ಮಟ್ಟದಲ್ಲಿ ಕಾರ್ಮಿಕರನ್ನು ನೇಮಿಸಿಕೊಂಡರೆ ಉದ್ಯಮಿಗಳಿಗೆ ನಷ್ಟವಾಗುತ್ತದೆ. ಪರಿಣಾಮವಾಗಿ ಉದ್ಯಮಿಗಳು OM ಪ್ರಮಾಣದಲ್ಲಿಯೇ ಉದ್ಯೋಗ ಸೃಷ್ಟಿಸುವುದನ್ನು ನಿಲ್ಲಿಸುತ್ತಾರೆ. ಅಂತಿಮವಾಗಿ OM ಸಮತೋಲನ ಉದ್ಯೋಗ ಮಟ್ಟ ಮತ್ತು OQ ಸಮತೋಲನ ಆದಾಯ ಮತ್ತು ವೆಚ್ಚ ಪ್ರಮಾಣವಾಗಿದೆ. 

ಅನುಭೋಗ ಕಾರ್ಯ(Consumption Function)

ಅನುಭೋಗ ಕ್ರಿಯೆ ಪರಿಭಾವನೆಯನ್ನು ಮಾಲ್ತಸ್ ಮೊದಲಾದ ಅರ್ಥಶಾಸ್ತ್ರಜ್ಞರು ಉಪಯೋಗಿಸಿದ್ದರೂ ಕೂಡ ಅದಕ್ಕೊಂದು ಸ್ಪಷ್ಟ ರೂಪವನ್ನು ನೀಡಿದ ಶ್ರೇಯಸ್ಸು ಕೇನ್ಸರಿಗೆ ಸಲ್ಲುತ್ತದೆ. ಅನುಭೋಗ ಕಾರ್ಯ ಅಥವಾ ಅನುಭೋಗ ಕ್ರಿಯೆ ಅಥವಾ ಅನುಭೋಗ ಪ್ರವೃತ್ತಿಯು ಪರಿಣಾಮಕಾರಿ ಬೇಡಿಕೆಯು ಪ್ರಮುಖ ನಿರ್ಧಾರಕವೆಂದು ಕೇನ್ಸ್‌ರವರು ಪ್ರತಿಪಾದಿಸಿದ್ದಾರೆ.

ಅನುಭೋಗ ಕಾರ್ಯವು ಕುಗ್ಗಿದ್ದರೆ ಪರಿಣಾಮಕಾರಿ ಬೇಡಿಕೆಯೂ ಕೊರತೆಯಿಂದ ಕೂಡಿರುತ್ತದೆ. ತತ್ಪರಿಣಾಮವಾಗಿ ಉತ್ಪನ್ನ, ಆದಾಯ ಮತ್ತು ಉದ್ಯೋಗದ ಮಟ್ಟಗಳೂ ಕಡಿಮೆ ಇರುತ್ತವೆ.

ಆದಾಯದಲ್ಲಿ ಒಂದು ನಿರ್ದಿಷ್ಟ ಮೊತ್ತವನ್ನು ಅನುಭೋಗಕ್ಕಾಗಿ ಖರ್ಚು ಮಾಡಲಾಗುತ್ತದೆ. ಇದುವೇ ಅನುಭೋಗ ವೆಚ್ಚ ಎನಿಸಿಕೊಳ್ಳುತ್ತದೆ. ಆದರೆ ಅನುಭೋಗ ಕಾರ್ಯ ಅಥವಾ ಅನುಭೋಗ ಕ್ರಿಯೆ ಎನ್ನುವುದು ವಿವಿಧ ಮಟ್ಟಗಳ ಆದಾಯದಲ್ಲಿ ಅನುಭೋಗದ ಉದ್ದೇಶಕ್ಕಾಗಿ ಖರ್ಚು ಮಾಡಲಾಗುವ ಒಟ್ಟು ಮೊತ್ತವನ್ನು ವ್ಯಕ್ತಪಡಿಸುವ ಒಂದು ಅನುಸೂಚಿ ಅಥವಾ ಪಟ್ಟಿಯಾಗಿದೆ. ಅಂದರೆ ಅನುಭೋಗ ಕಾರ್ಯವು ಆದಾಯ ಮತ್ತು ಅನುಭೋಗದ ನಡುವಿನ ಸಂಬಂಧವನ್ನು ತೋರಿಸುವ ಒಂದು ಅನುಸೂಚಿಯಾಗಿದೆ. ಆದಾಯದಲ್ಲಿನ ಬದಲಾವಣೆಯೊಂದಿಗೆ ಅನುಭೋಗದಲ್ಲಿ ಉಂಟಾಗುವ ಬದಲಾವಣೆಯ ಪ್ರಮಾಣವನ್ನು ವ್ಯಕ್ತ ಪಡಿಸುತ್ತದೆ. ಈ ಸಂಬಂಧವನ್ನು ಒಂದು ಸಮೀಕರಣದ ಮೂಲಕ ವ್ಯಕ್ತಪಡಿಸಬಹುದಾಗಿದೆ.

C = f(y)  ಈ ಸಮೀಕರಣದಲ್ಲಿ

C – ಅನುಭೋಗ

y – ಆದಾಯ

f – ಕಾರ್ಯ

ಕೇನ್ಸ್‌ನ ಅನುಭೋಗದ ಮಾನಸಿಕ ನಿಯಮ

ಕೇನ್ನನು ತನ್ನ “ಅನುಭೋಗ ಮೀಮಾಂಸೆ”ಯಲ್ಲಿ ಅನುಭೋಗದ ಮಾನಸಿಕ ನಿಯಮವನ್ನು ಪ್ರತಿಪಾದಿಸಿದ್ದಾನೆ. ಜನರ ಆದಾಯದ ಮಟ್ಟ ಹೆಚ್ಚಿದಂತೆಲ್ಲಾ ಅನುಭೋಗದ ಪ್ರಮಾಣವು ಹೆಚ್ಚಾಗತೊಡಗುತ್ತದೆ. ಆದರೆ ಆದಾಯ ಹೆಚ್ಚಿದ ಪ್ರಮಾಣದಲ್ಲಿಯೇ ಅವರ ಅನುಭೋಗವೂ ಹೆಚ್ಚುವುದಿಲ್ಲ. ಹೆಚ್ಚಿನ ಆದಾಯ ಮಟ್ಟದಲ್ಲಿ ಜನರು ಹಣವನ್ನು ಅಧಿಕವಾಗಿ ಉಳಿತಾಯ ಮಾಡುವ ಮನೋಭಾವನೆ ಅಥವಾ ಪ್ರವೃತ್ತಿಯನ್ನು ತೋರ ತೊಡಗುತ್ತಾರೆ. ಇದೊಂದು ಮಾನಸಿಕ ಪ್ರವೃತ್ತಿಯಾಗಿದೆ.

ಅನುಭೋಗದ ಮಾನಸಿಕ ನಿಯಮವು ವ್ಯಕ್ತ ಪಡಿಸುವ ಪ್ರಮುಖ ಸಂಗತಿಗಳೆಂದರೆ

) ಆದಾಯದ ಮಟ್ಟದಲ್ಲಿನ ಹೆಚ್ಚಳದೊಡನೆ ಅನುಭೋಗದ ಪ್ರಮಾಣವು ಹೆಚ್ಚುತ್ತದೆ. ಆದರೆ ಅನುಭೋಗದಲ್ಲಿನ ಹೆಚ್ಚಳದ ಪ್ರಮಾಣವು ಆದಾಯದ ಹೆಚ್ಚಳ ಪ್ರಮಾಣಕ್ಕಿಂತ ಕಡಿಮೆ ಇರುತ್ತದೆ. ಉದಾ: ಆದಾಯವು 100ರೂ ಹೆಚ್ಚಿದರೆ ಅನುಭೋಗವು ರೂ 80 ರಷ್ಟು ಹೆಚ್ಚುತ್ತದೆ. ಏಕೆಂದರೆ ಜನರು ಕಡಿಮೆ ಆದಾಯ ಮಟ್ಟದಲ್ಲಿ ಹೆಚ್ಚು ಪ್ರಮಾಣದ ಹಣವನ್ನು ಜೀವನಾಶ್ಯಕ ಹಾಗೂ ತುರ್ತು ಅಗತ್ಯವಿರುವ ವಸ್ತುಗಳನ್ನು ಕೊಳ್ಳಲು ಖರ್ಚು ಮಾಡಿರುತ್ತಾರೆ. ಆದರೆ ಹೆಚ್ಚಿನ ಆದಾಯ ಮಟ್ಟದಲ್ಲಿ ಜನರು ಜೀವನಾವಶ್ಯಕ ವಸ್ತುಗಳ ಮೇಲೆ ಮಾಡುವ ವೆಚ್ಚವು ಕಡಿಮೆ ಇರುತ್ತದೆ.

ಆದಾಯ ಹೆಚ್ಚಳದೊಂದಿಗೆ ಅನುಭೋಗ ಮತ್ತು ಉಳಿತಾಯಗಳೆರಡೂ ಅಧಿಕಗೊಳ್ಳುತ್ತ ಹೋಗುತ್ತದೆ.

) ಹೆಚ್ಚುವರಿಯಾಗಿ ದೊರಕಿದ ಆದಾಯವು ಅನುಭೋಗ ಮತ್ತು ಉಳಿತಾಯದ ನಡುವೆ ಹಂಚಿ ಹೋಗುತ್ತದೆ. ಅಂದರೆ ಅಧಿಕ ಮಟ್ಟದ ಹೆಚ್ಚುವರಿ ಆದಾಯವು ದೊರಕಿದಾಗ ಸ್ವಲ್ಪ ಮೊತ್ತವನ್ನು ಅನುಭೋಗಕ್ಕಾಗಿ ವೆಚ್ಚಮಾಡಿ ಉಳಿದ ಮೊತ್ತವನ್ನು ಉಳಿತಾಯ ಮಾಡಲಾಗುತ್ತದೆ.

ಈ ನಿಯಮವು ಕೆಲವು ಕಲ್ಪನೆಗಳ ಮೇಲೆ ಆಧಾರಿತವಾಗಿದೆ. ಅವುಗಳೆಂದರೆ,

1.ಅಲ್ಪಾವಧಿಯಲ್ಲಿ ಅನುಭೋಗದ ಕ್ರಿಯೆಯು ಸ್ಥಿರವಾಗಿರುತ್ತದೆ. ಈ ಅವಧಿಯಲ್ಲಿ ಕೇವಲ ಆದಾಯದಲ್ಲಿ ಬದಲಾವಣೆಯಾಗಬಹುದೇ ಹೊರತು ಜನಸಂಖ್ಯೆ, ಬೆಲೆ ಮತ್ತು ಆದಾಯದ ಹಂಚಿಕೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

2.ಸರ್ಕಾರವು ಜನರ ಅನುಭೋಗದ ಮೇಲೆ ಯಾವುದೇ ನಿಯಂತ್ರಣಗಳನ್ನು ವಿಧಿಸಿರುವುದಿಲ್ಲ.

3.ಅರ್ಥವ್ಯವಸ್ಥೆಯಲ್ಲಿ ಮುಗ್ಗಟ್ಟು, ಮಿತಿ ಮೀರಿದ ಹಣದುಬ್ಬರ ಮುಂತಾದ ಸನ್ನಿವೇಶಗಳಿರುವುದಿಲ್ಲ. 

Sacred Heart English Higher Primary School E-Magazine

ಉದ್ಯೋಗದ ಶಾಸ್ತ್ರೀಯ ಸಿದ್ಧಾಂತ

ಉದ್ಯೋಗದ ಶಾಸ್ತ್ರೀಯ ಸಿದ್ಧಾಂತ

ಸಂಪ್ರದಾಯ ಪಂಥದ ಅರ್ಥಶಾಸ್ತ್ರ ಎಂಬ ಪದವನ್ನು ಮೊದಲ ಬಾರಿಗೆ ಕಾರ್ಲಮಾರ್ಕ್ಸ್ ರವರು ಉಪಯೋಗಿಸಿದರು. ಇವರ ಪ್ರಕಾರ ಡೇವಿಡ್ ರಿಕಾರ್ಡೋ ಮತ್ತು ಆತನಿಗಿಂತ ಹಿಂದಿನ ಅರ್ಥಶಾಸ್ತ್ರಜ್ಞರು ಸಂಪ್ರದಾಯ ಪಂಥಕ್ಕೆ ಸೇರುತ್ತಾರೆ. ಕಾರಣ ಅರ್ಥಶಾಸ್ತ್ರದ ತತ್ವಗಳನ್ನು ಇವರು ಮೊದಲ ಬಾರಿಗೆ ಪ್ರತಿಪಾದಿಸಿದ್ದು. ಇವರ ತತ್ವಗಳು ಒಂದಕ್ಕೊಂದು ಪೂರಕವು, ಹೋಲಿಕಾತ್ಮಕವಾಗಿಯೂ ಇರುವುದರಿಂದ ಇವರ ಅಭಿಪ್ರಾಯ ಮತ್ತು ಸಿದ್ಧಾಂತಗಳು ಸಂಪ್ರದಾಯಪಂಥದ ಸಿದ್ಧಾಂತಗಳೆಂದು ಕರೆಯಲ್ಪಡುತ್ತದೆ. ಆದರೆ ಜೆ.ಎಂ. ಕೇನ್ಸರವರು ಡೇವಿಡ್ ರಿಕಾರ್ಡೋ, ಜೆ.ಎಸ್. ಮಿಲ್. ಜೆ.ಬಿ. ಸೇ. ವಿಲಿಯಮ್ ಸೀನಿಯರ್, ಟಿ.ಆರ್.ಮಾಲ್ವಸ್ ಇವರುಗಳ ಜೊತೆಗೆ ಆಲೆಡ್ ಮಾರ್ಷಲ್, ಎ.ಸಿ.ಪಿಗು ಮುಂತಾದವರನ್ನು ಈ ಗುಂಪಿಗೆ ಸೇರಿಸಿ ಇವರುಗಳು ಪ್ರತಿಪಾದಿಸಿದ ತತ್ವಗಳು ಸಂಪ್ರದಾಯ ಪಂಥದ ತತ್ವಗಳು ಎಂದು ಕರೆಯುತ್ತಾರೆ.

ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ತಮ್ಮ ಆರ್ಥಿಕ ತತ್ವಗಳನ್ನು ವಿವೇಚಿಸುವಲ್ಲಿ ಈ ಕೆಳಗಿನ ಊಹೆಗಳನ್ನು ಮಾಡಿಕೊಂಡಿದ್ದಾರೆ.

1.ಪೂರ್ಣೋದ್ಯೋಗ:-

ಅಂದರೆ ಆರ್ಥಿಕತೆಯಲ್ಲಿ ಶ್ರಮ ಮತ್ತು ಸಂಪನ್ಮೂಲಗಳು ಸಂಪೂರ್ಣವಾಗಿ ಉತ್ಪಾದನೆಯಲ್ಲಿ ತೊಡಗಿರುತ್ತವೆ. ಆದ್ದರಿಂದಲೇ ನಿರುದ್ಯೋಗ ಮತ್ತು ಉತ್ಪಾದನೆಯ ಹೆಚ್ಚಳ ಸಾಧ್ಯವಿಲ್ಲ.

2.ಮುಕ್ತ ವ್ಯಾಪಾರ ನೀತಿ ಮತ್ತು ಸರಕಾರ ತಟಸ್ಥ ನೀತಿ:-

ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ಸರ್ಕಾರವು ಆರ್ಥಿಕ ಚಟುವಟಿಕೆಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪವನ್ನು ಮಾಡದೆ ತಟಸ್ಥ ನೀತಿಯನ್ನು ಅನುಸರಿಸುತ್ತದೆ ಹಾಗೂ ಸರ್ಕಾರವು ಮುಕ್ತ ವ್ಯಾಪಾರ ನೀತಿಯನ್ನು ಅನುಸರಿಸುತ್ತದೆ ಎಂದು ನಂಬಿರುತ್ತಾರೆ.

3.ಪರಿಪೂರ್ಣ ಪೈಪೋಟಿ:-

ಆರ್ಥಿಕತೆಯಲ್ಲಿ ಪೂರ್ಣೋದ್ಯೋಗ ಮತ್ತು ಮುಕ್ತ ವ್ಯಾಪಾರ ನೀತಿ ಇರುವುದರಿಂದ ಪೈಪೋಟಿಯು ಪರಿಪೂರ್ಣವಾಗಿರುತ್ತದೆ ಎಂದು ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ಭಾವಿಸಿದ್ದರು.

4.ಉಳಿತಾಯ ಮತ್ತು ಹೂಡಿಕೆಯ ಸಮಾನತೆ:-

ಅರ್ಥವ್ಯವಸ್ಥೆಯಲ್ಲಿ ಉಳಿತಾಯ ಮತ್ತು ಹೂಡಿಕೆಗಳು ಒಂದಕ್ಕೊಂದು ಪರಿಪೂರ್ಣವಾಗಿ ಸಮಾನವಾಗಿರುತ್ತವೆ ಎಂದು ಸಂಪ್ರದಾಯ ಪಂಥದವರು ನಂಬಿದ್ದರು. ಅವರ ಅಭಿಪ್ರಾಯದಲ್ಲಿ ಬಡ್ಡಿಯ ದರವು ಉಳಿತಾಯ ಮತ್ತು ಹೂಡಿಕೆಗಳ ನಡುವೆ ಸಮತೋಲನವನ್ನು ಏರ್ಪಡಿಸುವ ಅಂಶವಾಗಿದೆ.

5.ಸೇನ ಮಾರುಕಟ್ಟೆಯ ನಿಯಮ:-

ಸೇನ ನಿಯಮದ ಪ್ರಕಾರ ಪೂರೈಕೆಯು ತನ್ನದೆ ಆದ ಬೇಡಿಕೆಯನ್ನು ಸೃಷ್ಟಿಸುತ್ತದೆ. ಸಂಪ್ರದಾಯ ಪಂಥದ ಅರ್ಥಶಾಸ್ತ್ರವು ಈ ನಿಯಮದ ಮೇಲೆ ಆಧಾರಿತವಾಗಿದೆ.

6.ಬೆಲೆ ಮತ್ತು ಕೂಲಿಯ ನಮ್ಯತೆ:-

ಬೆಲೆ ಮತ್ತು ಕೂಲಿಯ ದರಗಳು ಸುಲಭವಾಗಿ ಬದಲಾಗುವ ಪ್ರವೃತ್ತಿಯನ್ನು ಹೊಂದಿರುವುದರಿಂದ ಪೂರ್ಣ ಉದ್ಯೋಗವನ್ನು ಸುಲಭವಾಗಿ ಸ್ಥಾಪಿಸಬಹುದು ಎಂಬುದು ಸಂಪ್ರದಾಯ ಪಂಥದವರ ನಂಬಿಕೆಯಾಗಿದೆ.

7.ನೈಜ ಅಂಶಗಳು:-

ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ಹಣರೂಪಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೇವಲ ನೈಜ ಅಂಶಗಳನ್ನು ಪರಿಗಣಿಸಿದ್ದಾರೆ.

ಸಂಪ್ರದಾಯ ಪಂಥದ ಉಳಿತಾಯ ಮತ್ತು ಹೂಡಿಕೆ ಸಿದ್ಧಾಂತ

ಈ ಸಿದ್ಧಾಂತವನ್ನು ಬಡ್ಡಿದರದ ಸಿದ್ದಾಂತ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಸಿದ್ದಾಂತದ ಮೇರೆಗೆ ಉಳಿತಾಯ ಮತ್ತು ಹೂಡಿಕೆಗಳ ಸಮತೋಲನದಿಂದ ಬಡ್ಡಿದರವು ನಿರ್ಧಾರವಾಗುತ್ತದೆ. ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಬಡ್ಡಿದರವು ಬಂಡವಾಳನಿಧಿಗಳ ಉಪಯೋಗಕ್ಕಾಗಿ ಸಂದಾಯ ಮಾಡುವ ಬೆಲೆಯಾಗಿದೆ. ಇತರ ಯಾವುದೇ ಬೆಲೆಗಳಂತೆಯೇ ಬಡ್ಡಿದರವು ಸಹ ಬಂಡವಾಳದ ಬೇಡಿಕೆ ಮತ್ತು ಪೂರೈಕೆಯ ಒತ್ತಡಗಳಿಂದ ನಿರ್ಧಾರವಾಗುತ್ತದೆ.

ಬಂಡವಾಳದ ಬೇಡಿಕೆ

ಹೂಡಿಕೆಯ ಉದ್ದೇಶಕ್ಕಾಗಿ ಬಂಡವಾಳಕ್ಕೆ ಬೇಡಿಕೆ ಇರುತ್ತದೆ. ಹೂಡಿಕೆದಾರರು ವ್ಯಕ್ತಿಗಳಾಗಿರಬಹುದು, ಸಂಸ್ಥೆಗಳಾಗಿರಬಹುದು ಅಥವಾ ಸರ್ಕಾರವೇ ಆಗಿರಬಹುದು. ಬಂಡವಾಳದ ಬೇಡಿಕೆ ಮತ್ತು ಬಡ್ಡಿಯ ದರ ವ್ಯತಿರಿಕ್ತ ಸಂಬಂಧವನ್ನು ಹೊಂದಿವೆ. ಅಂದರೆ ಕಡಿಮೆ ಬಡ್ಡಿದರದಲ್ಲಿ ಅಧಿಕ ಮೊತ್ತದ ಬಂಡವಾಳಕ್ಕೆ ಬೇಡಿಕೆ ಇರುತ್ತದೆ ಮತ್ತು ಹೆಚ್ಚಿನ ಬಡ್ಡಿ ದರದಲ್ಲಿ ಕಡಿಮೆ ಬೇಡಿಕೆ ಇರುತ್ತದೆ. ಹೂಡಿಕೆ ಮಾಡಲಾದ ಬಂಡವಾಳಕ್ಕೆ ದೊರೆಯುವ ಪ್ರತಿಫಲವು ಇಳಿಮುಖ ಪ್ರತಿಫಲ ನಿಯಮಕ್ಕೆ ಒಳಪಟ್ಟಿರುವುದರಿಂದ ಬಂಡವಾಳವು ಕಡಿಮೆ ಬಡ್ಡಿ ದರದಲ್ಲಿ ದೊರೆಯುವಂತಿದ್ದರೆ ಮಾತ್ರ ಬಂಡವಾಳದಾರರು ಹೂಡಿಕೆಯನ್ನು ಕೈಗೊಳ್ಳಲು ಮುಂದಾಗುತ್ತಾರೆ. ಬಂಡವಾಳದ ಸೀಮಾಂತ ಉತ್ಪಾದಕತೆಯು ಬಡ್ಡಿದರಕ್ಕೆ ಸಮನಾದ ಹಂತದಲ್ಲಿ ಉದ್ಯಮಿಗಳು ಬಂಡವಾಳಕ್ಕೆ ಬೇಡಿಕೆಯನ್ನು ನಿಲ್ಲಿಸುತ್ತಾರೆ. ಏಕೆಂದರೆ ಆ ಬಳಿಕವು ಅವರು ಹೂಡಿಕೆಯನ್ನು ಕೈಗೊಂಡರೆ ದೊರೆಯುವ ಪ್ರತಿಫಲಕ್ಕಿಂತ ಬಡ್ಡಿಯ ದರವು ಅಂದರೆ ವೆಚ್ಚವು ಅಧಿಕವಾಗುವುದರಿಂದ ನಷ್ಟವು ಉಂಟಾಗುತ್ತವೆ.

ಬಂಡವಾಳದ ನೀಡಿಕೆ

ಬಂಡವಾಳದ ಪೂರೈಕೆಯು ಉಳಿತಾಯಗಾರರಿಂದ ನಡೆಯುತ್ತವೆ. ವ್ಯಕ್ತಿಗಳು, ಸಂಸ್ಥೆಗಳು, ಬ್ಯಾಂಕುಗಳು ಮತ್ತು ಸರ್ಕಾರ ಹಣವನ್ನು ಉಳಿತಾಯ ಮಾಡಿ ಬಂಡವಾಳವನ್ನು ಪೂರೈಕೆ ಮಾಡುತ್ತವೆ. ಬಡ್ಡಿಯ ದರವು ಅಧಿಕವಾಗಿರುವಾಗ ಹೆಚ್ಚಿನ ಪ್ರಮಾಣದಲ್ಲಿ ಉಳಿತಾಯಗಳನ್ನು ಮಾಡಲಾಗುತ್ತದೆ ಮತ್ತು ಬಡ್ಡಿಯ ದರವು ಕಡಿಮೆ ಇರುವಾಗ ಉಳಿತಾಯವು ಕಡಿಮೆಯಾಗುತ್ತದೆ.

ಬಂಡವಾಳದ ಬೇಡಿಕೆ ಮತ್ತು ಪೂರೈಕೆಗಳ ಸಮತೋಲನ

ಬಂಡವಾಳದ ಬೇಡಿಕೆ ಮತ್ತು ಪೂರೈಕೆಯ ಸಮತೋಲನವನ್ನು ಒಂದು ರೇಖಾಚಿತ್ರದ ಮೂಲಕ ತಿಳಿದುಕೊಳ್ಳಬಹುದು.

ರೇಖಾಚಿತ್ರದಲ್ಲಿ OX ಅಕ್ಷದಲ್ಲಿ ಬಂಡನಾಳದ ಬೇಡಿಕೆ ಮತ್ತು ಪೂರೈಕೆಯನ್ನು ಮತ್ತು OY ಅಕ್ಷದಲ್ಲಿ ಬಡ್ಡಿದರವನ್ನು ಅಳೆಯಲಾಗಿದೆ. II ಮತ್ತು SS ರೇಖೆಗಳು ಕ್ರಮವಾಗಿ ಹೂಡಿಕೆ ಮತ್ತು ಉಳಿತಾಯದ ರೇಖೆಗಳಾಗಿವೆ. ಉಳಿತಾಯ ಮತ್ತು ಹೂಡಿಕೆಯ ಮಟ್ಟ ಬಡ್ಡಿ ದರವನ್ನು ಅವಲಂಬಿಸಿದೆ. ಆದ್ದರಿಂದ ಬಡ್ಡಿದರವು ಇವುಗಳೆರಡನ್ನು ನಿರ್ಧರಿಸುವ ಅಂಶವಾಗಿದೆ. OR ಸಮತೋಲನದ ಬಡ್ಡಿಯ ದರ ಅಥವಾ ಸಹಜ ಬಡ್ಡಿಯ ದರ ಆಗಿರುತ್ತದೆ. ಬಂಡವಾಳದ ಬೇಡಿಕೆಯ ಮತ್ತು ಪೂರೈಕೆಯ ರೇಖೆಗಳು E ಬಿಂದುವಿನಲ್ಲಿ ಸಂಧಿಸಿರುವುದರಿಂದ OR ಸಮತೋಲನದ ಬಡ್ಡಿಯ ದರ ಮತ್ತು ON ಸಮತೋಲನದ ಬಂಡವಾಳದ ಪೂರೈಕೆ ಮತ್ತು ಬೇಡಿಕೆ ಆಗಿವೆ. ಉಳಿತಾಯ ಮತ್ತು ಹೂಡಿಕೆಯ ಸಮತೋಲನವು ಉದ್ಯಮ ಸ್ಥಿಮಿತತೆ ಮತ್ತು ಪೂರ್ಣೋದ್ಯೋಗ ಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ.

ಬಡ್ಡಿಯ ದರವು OR, ಗೆ ಏರಿದಾಗ ಬಂಡವಾಳದ ಬೇಡಿಕೆಯ ಪ್ರಮಾಣವು ONಗೆ ಇಳಿಯುತ್ತದೆ ಮತ್ತು ಬಂಡವಾಳದ ಪೂರೈಕೆಯ ಪ್ರಮಾಣವು ONಗೆ ಅಧಿಕಗೊಳ್ಳುತ್ತದೆ. ಅಂದರೆ ಬಡ್ಡಿಯ ದರದ ಹೆಚ್ಚಳದೊಡನೆ ಹೂಡಿಕೆಗಾಗಿ ಬಂಡವಾಳದ ಬೇಡಿಕೆಯು ಬಂಡವಾಳದ ಪೂರೈಕೆಗಿಂತ ಕಡಿಮೆ ಇರುತ್ತದೆ. ತದ್ವಿರುದ್ಧವಾಗಿ, ಬಡ್ಡಿಯ ದರವು OR, ಗೆ ಕುಸಿದಾಗ ಬಂಡವಾಳದ ಬೇಡಿಕೆಯು ON ಪ್ರಮಾಣಕ್ಕೆ ವಿಸ್ತರಿಸುತ್ತದೆ ಮತ್ತು ಬಂಡವಾಳದ ಪೂರೈಕೆಯು ON, ಮಟ್ಟಕ್ಕೆ ಇಳಿಯುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬಡ್ಡಿಯ ದರದ ಕುಸಿತದೊಡನೆ ಹೂಡಿಕೆಗಾಗಿ ಬಂಡವಾಳದ ಬೇಡಿಕೆಯು ಬಂಡವಾಳದ ಪೂರೈಕೆಯ ಪ್ರಮಾಣಕ್ಕಿಂತ ಜಾಸ್ತಿಯಾಗುತ್ತದೆ. ಆ ಪ್ರಕಾರ, ಸಮತೋಲನದ ಬಡ್ಡಿಯ ದರದಲ್ಲಿ ಮಾತ್ರ ಉಳಿತಾಯ ಮತ್ತು ಹೂಡಿಕೆಯ ಸಮತೋಲನ ನೆಲೆಸುತ್ತದೆ. ಆ ಮೇರೆಗೆ ಈ ಮೇಲಿನ ರೇಖಾಚಿತ್ರದ ಮೂಲಕ ತಿಳಿದು ಬರುವ ಅಂಶವೇನೆಂದರೆ ಬಡ್ಡಿದರವು ಹೆಚ್ಚಿದಂತೆಲ್ಲಾ ಉಳಿತಾಯವು ಹೆಚ್ಚುತ್ತದೆ ಹಾಗೂ ಹೂಡಿಕೆಯು ಕಡಿಮೆಯಾಗುತ್ತದೆ. ಇದಕ್ಕೆ ಕಾರಣವೇನೆಂದರೆ ಬಡ್ಡಿದರದ ಹೆಚ್ಚಳವು ಉಳಿತಾಯಗಾರರಿಗೆ ಹೆಚ್ಚು ಆದಾಯವನ್ನು ಸೃಷ್ಟಿಸುವುದರಿಂದ ಉಳಿತಾಯಗಾರರು ಹೆಚ್ಚು ಉಳಿಸಲು ಯತ್ನಿಸುತ್ತಾರೆ. ಆದರೆ ಹೂಡಿಕೆದಾರರಿಗೆ ಇದು ಹೆಚ್ಚು ವೆಚ್ಚದಾಯಕವಾದುದರಿಂದ ಉಳಿತಾಯದ ಬೇಡಿಕೆ ಕಡಿಮೆಯಾಗುತ್ತದೆ. ಆದುದರಿಂದ ಉಳಿತಾಯವು ಹೂಡಿಕೆಗಿಂತ ಹೆಚ್ಚಿರುತ್ತದೆ. ಹೀಗೆ ಉಳಿತಾಯ ಮತ್ತು ಹೂಡಿಕೆಗಳ ನಡುವೆ ಅಸಮತೋಲನ ಉಂಟಾಗುತ್ತದೆ. ಅದೇ ರೀತಿ ಬಡ್ಡಿದರ ಕಡಿಮೆಯಾದರೆ ಹೂಡಿಕೆ ಹೆಚ್ಚಾದರೂ ಉಳಿತಾಯ ಹೆಚ್ಚುವುದಿಲ್ಲ. ಏಕೆಂದರೆ ಬಡ್ಡಿದರವು ಕಡಿಮೆ ಇರುವಾಗ ಜನರು ಕಡಿಮೆ ಪ್ರಮಾಣದಲ್ಲಿ ಉಳಿತಾಯ ಮಾಡುತ್ತಾರೆ. ಆದರೆ ಹೂಡಿಕೆದಾರರಿಗೆ ಇದು ಲಾಭದಾಯಕವಾದುದರಿಂದ ಹೆಚ್ಚು ಹೆಚ್ಚು ಉಳಿತಾಯದ ಹಣಕ್ಕಾಗಿ ಬೇಡಿಕೆ ಮಾಡತೊಡಗುತ್ತಾರೆ. ಪರಿಣಾಮವಾಗಿ ಉಳಿತಾಯ ಮತ್ತು ಹೂಡಿಕೆಗಳ ನಡುವೆ ಅಸಮತೋಲನ ಉಂಟಾಗುತ್ತದೆ. ಬಡ್ಡಿಯ ದರದಲ್ಲಿ ಸೂಕ್ತ ಬದಲಾವಣೆ ತರುವ ಮೂಲಕ ಈ ಅಸಮತೋಲವನ್ನು ನಿವಾರಿಸಬಹುದಾಗಿದೆ. ಆದ್ದರಿಂದ S=f(r), ಅಂದರೆ ಉಳಿತಾಯವು ಬಡ್ಡಿದರದ ಕ್ರಿಯೆಯಾಗಿದೆ. ಹಾಗೆಯೇ I=f(r), ಅಂದರೆ ಹೂಡಿಕೆಯು ಬಡ್ಡಿದರದ ಒಂದು ಕ್ರಿಯೆಯಾಗಿದೆ. ಹೀಗೆ ಉಳಿತಾಯ ಮತ್ತು ಹೂಡಿಕೆಗಳು ಬಡ್ಡಿದರದ ಕ್ರಿಯೆಗಳಾಗಿದ್ದು ಇವುಗಳ ನಡುವಿನ ಸಮತೋಲನವನ್ನು ಬಡ್ಡಿದರವು ನಿರ್ಧರಿಸುತ್ತದೆ.

ನಿರುದ್ಯೋಗಕ್ಕೆ ಸಂಪ್ರದಾಯ ಪಂಥದವರ ಪರಿಹಾರ (ಎ.ಸಿ. ಪಿಗೂರವರ ಕೂಲಿ ಕಡಿತ ನೀತಿ)

ಸಂಪ್ರದಾಯ ಪಂಥದವರ ಉದ್ಯೋಗ ಸಿದ್ಧಾಂತದಲ್ಲಿ ಪೂರ್ಣೋದ್ಯೋಗ ಇರುತ್ತದೆ ಎಂದು ಊಹಿಸಲಾಗಿದ್ದರೂ ಕೆಲವೊಮ್ಮೆ ನಿರುದ್ಯೋಗ ಸಮಸ್ಯೆ ಉಂಟಾಗಬಹುದು ಎಂದೂ ಸಹಾ ಭಾವಿಸಲಾಗಿದೆ. ಇದಕ್ಕೆ ವೇತನ ದರದಲ್ಲಿ ಹೆಚ್ಚಳ ಮತ್ತು ಕಾರ್ಮಿಕರಿಗಿರುವ ಬೇಡಿಕೆಯ ಪರಿಸ್ಥಿತಿಗಳೇ ಕಾರಣ. ಆ ಪ್ರಕಾರವಾಗಿ ಕಾರ್ಮಿಕರ ವೇತನ ದರದ ಹೆಚ್ಚಳವೇ ಕಾರ್ಮಿಕರ ಬೇಡಿಕೆ ಕಡಿಮೆಯಾಗುವುದಕ್ಕೆ ಕಾರಣ. ಇದರಿಂದಾಗಿ ನಿರುದ್ಯೋಗ ಮಟ್ಟವನ್ನು ತೆಗೆದುಹಾಕಿ ಪೂರ್ಣೋದ್ಯೋಗ ಮಟ್ಟವನ್ನು ಸಾಧಿಸಲು ‘ವೇತನದಲ್ಲಿ ಕಡಿತ ನೀತಿ’ಯನ್ನು (Wage Cut Policy) ಎ.ಸಿ. ಪಿಗೂರವರು ಮಂಡಿಸಿದ್ದಾರೆ. ಇದನ್ನೇ ಪಿಗೂರವರ ಪರಿಣಾಮ ಅಥವಾ ಪಿಗೂರವರ ‘ಕೂಲಿ ಕಡಿತ ನೀತಿ’ ಎಂದು ಕರೆಯಲಾಗಿದೆ. ಪಿಗೂರವರ ಪ್ರಕಾರ ವೇತನ ದರದಲ್ಲಿ ಉಂಟಾಗುವ ಕಡಿತವು ಪೂರ್ಣೋದ್ಯೋಗ ಮಟ್ಟವನ್ನು ಸಾಧಿಸಲು ಹಾಗೂ ನಿರುದ್ಯೋಗವನ್ನು ಹೊರದೂಡಲು ಸಾಧ್ಯವಾಗುತ್ತದೆ. ಈ ಅಂಶವನ್ನು ಒಂದು ರೇಖಾಚಿತ್ರದ ಮೂಲಕ ತಿಳಿದುಕೊಳ್ಳಬಹುದು.

ಈ ಮೇಲಿನ ರೇಖಾಚಿತ್ರದಲ್ಲಿ OX ಅಕ್ಷದಲ್ಲಿ ಉದ್ಯೋಗದ ಪ್ರಮಾಣವನ್ನು ಮತ್ತು OYಅಕ್ಷದಲ್ಲಿ ವೇತನ (ಕೂಲಿ) ದರವನು ವ್ಯಕ್ತಪಡಿಸಲಾಗಿದೆ. DD ಮತ್ತು SS ರೇಖೆಗಳು ಕ್ರಮವಾಗಿ ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆ ರೇಖೆಗಳಾಗಿವೆ. ಪರಿಪೂಣಕ ಪೈಪೋಟಿ ಪರಿಸ್ಥಿತಿಯಲ್ಲಿ ಕೂಲಿಯ ದರವು OWನಷ್ಟು ಇದ್ದಾಗ ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಗಳು OL ನಷ ಆಗಿರುತ್ತವೆ. ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಗಳು E ಬಿಂದುವಿನಲ್ಲಿ ಸಮನಾಗಿರುತ್ತವೆ. ಒಂದು ವೇಳೆ ಕೂಲಿದರವು OWನಿಂದ OW ಗೆ ಹೆಚ್ಚಿದಾಗ ಕಾರ್ಮಿಕರ ಬೇಡಿಕೆಯು OLಗೆ ಕಡಿಮೆಯಾಗಿ, ಪೂರೈಕೆಯು OLಗೆ ಹೆಚ್ಚಾಗುತ್ತದೆ. ಇಲ್ಲಿ ಕಾರ್ಮಿಕರ ಪೂರೈಕೆಯು ಬೇಡಿಕೆಗಿಂತ ಹೆಚ್ಚಾಗಿ ನಿರುದ್ಯೋಗ ಪರಿಸ್ಥಿತಿ (LLಯಷ್ಟು) ಉಂಟಾಗುತ್ತದೆ. ಆದ್ದರಿಂದ ಪೂರ್ಣೋದ್ಯೋಗ ಮಟ್ಟವನ್ನು ಸಾಧಿಸಲು ಕೂಲಿದರದಲ್ಲಿ ಕಡಿತವನ್ನು (ಅಂದರೆ OW ನಿಂದ OWಗೆ) ಮಾಡುವುದರಿಂದ ಪುನಃ ಕಾರ್ಮಿಕರಿಗೆ ಬೇಡಿಕೆಯು ಹೆಚ್ಚಾಗಿ ಉದ್ಯೋಗದ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ಈ ಹಂತದಲ್ಲಿ ಕಾರ್ಮಿಕರಿಗೆ ಕೂಲಿದರವು ಕಡಿಮೆಯಾಗುವುದಾದರೂ ಉದ್ಯೋಗದ ಪ್ರಮಾಣವನ್ನು ಹೆಚ್ಚಿಸಿ ತನ್ಮೂಲಕ ಆದಾಯದ ಸೃಷ್ಟಿ ಮಾಡಬಹುದಾಗಿರುತ್ತದೆ. ಈ ರೀತಿಯಾಗಿ ನಿರುದ್ಯೋಗಕ್ಕೆ ಕೂಲಿದರದ ಹೆಚ್ಚಳ ಮತ್ತು ಕಾರ್ಮಿಕರ ಪೂರೈಕೆಯ ದರದಲ್ಲಿ ಹೆಚ್ಚಳಗಳು ಕಾರಣವಾಗಿದ್ದು, ಕೂಲಿದರವನ್ನು ಕಡಿತಗೊಳಿಸುವುದರ ಮೂಲಕ ಉದ್ಯೋಗ ಪ್ರಮಾಣವನ್ನು ಹೆಚ್ಚಿಸಿ ಪೂರ್ಣ ಉದ್ಯೋಗ ಮಟ್ಟವನ್ನು ಸಾಧಿಸಬಹುದಾಗಿದೆ ಎಂದು ಎ.ಸಿ. ಪಿಗೂ ರವರು ಅಭಿಪ್ರಾಯ ಪಟ್ಟಿದ್ದಾರೆ. 

ಜೆ.ಬಿ.ಸೇ. ರವರ ಮಾರುಕಟ್ಟೆಯ ನಿಯಮ

ಸಂಪ್ರದಾಯ ಅರ್ಥಶಾಸ್ತ್ರಜ್ಞರ ಸಮಗ್ರ ಆರ್ಥಿಕ ನೀತಿಗೆ ಜೆ.ಬಿ. ಸೇರವರ ಮಾರುಕಟ್ಟೆಯ ನಿಯಮವು ಮೂಲಾಧಾರವಾಗಿದೆ. ಮುಕ್ತ ಆರ್ಥಿಕತೆಯಲ್ಲಿ ಪೂರ್ಣ ಉದ್ಯೋಗ ಮಟ್ಟವನ್ನು ಹೇಗೆ ಸಾಧಿಸಬಹುದು ಎಂಬುದನ್ನು ಫ್ರಾನ್ಸಿನ ಆರ್ಥಿಕ ತಜ್ಞರಾದ ಜೆ.ಬಿ. ಸೇರವರು ಪ್ರತಿಪಾದಿಸಿದ್ದಾರೆ. ಇದರ ವಿವರಣೆಯನ್ನು ‘ಸೇ’ರವರ ಮಾರುಕಟ್ಟೆಯ ನಿಯಮ ಎಂದು ಕರೆಯಲಾಗಿದೆ.

ಜೆ.ಬಿ. ಸೇರವರ ಪ್ರಕಾರ ಪೂರೈಕೆಯು ತನ್ನಷ್ಟಕ್ಕೆ ತಾನೇ ಬೇಡಿಕೆಯನ್ನು ಸೃಷ್ಟಿಸಿಕೊಳ್ಳುತ್ತದೆ. ಅಂದರೆ ಉತ್ಪಾದಿಸಲ್ಪಟ್ಟ ಸರಕು ಮತ್ತು ಸೇವೆಗಳಿಗೆ ಮಾರುಕಟ್ಟೆಯು ಸಹಜವಾಗಿ ಸಿಗುತ್ತದೆ. ಪ್ರತಿಯೊಬ್ಬ ಉತ್ಪಾದಕನು ತನ್ನ ವಸ್ತುಗಳಿಗೆ ಅನುಭೋಗಿಯನ್ನು (ಕೊಳ್ಳುವವನು) ಪಡೆದಿರುತ್ತಾನೆ. ವಿಶಾಲವಾಗಿ ಹೇಳುವುದಾದರೆ ಉತ್ಪಾದಿಸಲ್ಪಟ್ಟ ಸರಕುಗಳ ಪೂರೈಕೆಗೆ ಸಮನಾದ ಬೇಡಿಕೆಯು ಸೃಷ್ಟಿಯಾಗುತ್ತದೆ. ಆದ್ದರಿಂದಲೇ ಇವರ ಪ್ರಕಾರ ಆರ್ಥಿಕತೆಯಲ್ಲಿ ಉತ್ಪಾದನೆಯ ಅಧಿಕೃತೆ (ಹೆಚ್ಚಳ) ಮತ್ತು ನಿರುದ್ಯೋಗವು ಉದ್ಭವಿಸುವುದಿಲ್ಲ.

ಜೆ.ಬಿ. ಸೇರವರ ನಿಯಮದ ನಿರೂಪಣೆ

ಪೂರೈಕೆಯು ಬೇಡಿಕೆಯನ್ನು ಸೃಷ್ಟಿಸಿಕೊಳ್ಳುತ್ತದೆ. ಈ ನಿಯಮವನ್ನು ಹೀಗೆ ನಿರೂಪಿಸಬಹುದು. ಉತ್ಪಾದನಾ ವ್ಯವಸ್ಥೆಯಲ್ಲಿ ಸರಕುಗಳ ಪೂರೈಕೆಯು ಆದಾಯವನ್ನು ಸೃಷ್ಟಿಸುತ್ತದೆ. ಇಂತಹ ಆದಾಯವು ಅನುಭೋಗಿಗಳು ಅನುಭೋಗ ಸರಕುಗಳನ್ನು ಹೆಚ್ಚು ಹೆಚ್ಚು ಕೊಳ್ಳಲು ಸಹಾಯಕವಾಗುತ್ತದೆ. ಆದ್ದರಿಂದ ಸರಕುಗಳ ಬೇಡಿಕೆಯು ಅವರು ಗಳಿಸುವ ಆದಾಯಗಳಿಂದ ಸಾಧ್ಯ (ಉತ್ಪಾದನಾಂಗಗಳ ಬೆಲೆ). ಈ ಅಂಶವನ್ನು ಕೆಳಗಿನ ಉತ್ಪಾದನೆ, ಪೂರೈಕೆ, ಬೇಡಿಕೆ, ಆದಾಯ ಇವೇ ಮೊದಲಾದವುಗಳ ನಡುವಿನ ಸಂಬಂಧದ ಮೂಲಕ ತಿಳಿದುಕೊಳ್ಳಬಹುದು.

ಸರಕು & ಸೇವೆಗಳ ಒಟ್ಟು ಮೌಲ್ಯ

= ಉತ್ಪನ್ನ ರೂ 5,000

ಕೂಲಿ, ಗೇಣಿ, ಬಡ್ಡಿ, ಲಾಭದ ರೂಪದಲ್ಲಿ ಉತ್ಪಾದನಾಂಗಗಳ ಆದಾಯದ ಮೌಲ್ಯ ರೂ. 5,000

ಸರಕುಗಳ ಪೂರೈಕೆ ರೂ. 5,000

ಆರ್ಥಿಕತೆಯಲ್ಲಿನ ಆದಾಯದ (ಬೇಡಿಕೆಯ)  ಸೃಷ್ಟಿ ರೂ. 5,000

ಸರಕು ಮತ್ತು ಸೇವೆಗಳ ಉತ್ಪನ್ನ 5,000 ರೂಗಳ ಮೌಲ್ಯಕ್ಕೆ ಸಮನಾಗಿದ್ದು 5,000 ರೂ ಮೌಲ್ಯದಷ್ಟು ಆದಾಯವನ್ನು ಸೃಷ್ಟಿಸುತ್ತದೆ. ಇವುಗಳು ಕೂಲಿ, ಗೇಣಿ, ಬಡ್ಡಿ ಮತ್ತು ಲಾಭಗಳ ರೂಪದಲ್ಲಿರುತ್ತದೆ. ಆದಾಯವು ಹೆಚ್ಚಿದಂತೆಲ್ಲಾ ಬೇಡಿಕೆಯು ಹೆಚ್ಚುವುದರಿಂದ ಬೇಡಿಕೆಗೆ ಸಮನಾದ ಸರಕು & ಸೇವೆಗಳನ್ನು ಉದ್ಯಮ ಘಟಕಗಳು ಪೂರೈಸುತ್ತವೆ. ಹೀಗೆ ಒಂದು ಅರ್ಥ ವ್ಯವಸ್ಥೆಯಲ್ಲಿ ಆದಾಯವು ಹೆಚ್ಚಿದಂತೆ ಅಪೂರ್ಣವಾಗಿ ಉಳಿದಿರುವ ಎಲ್ಲಾ ಉತ್ಪಾದನಾಂಗಗಳು ಉತ್ಪಾದನೆಯಲ್ಲಿ ತೊಡಗಿ ಆದಾಯವನ್ನು ಹೆಚ್ಚಿಸುತ್ತದೆ. ಆದುದರಿಂದ ಪೂರೈಕೆಯು ಬೇಡಿಕೆಗೆ ಸಮನಾಗಿರುತ್ತದೆ.

ಸಂಪ್ರದಾಯ ಪಂಥದ ವಿಮರ್ಶೆ

ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೆ ಸಂಪ್ರದಾಯ ಪಂಥದ ಆರ್ಥಿಕ ಸಿದ್ದಾಂತವು ವ್ಯಾಪಕ ಜನಮನ್ನಣೆಯನ್ನು ಗಳಿಸಿದ್ದಿತು. ಆದರೆ ಕಾಲ ಕಳೆದಂತೆ ಈ ಸಿದ್ದಾಂತವು ಹಲವಾರು ಟೀಕೆಗಳಿಗೆ ಒಳಪಟ್ಟಿದೆಯಲ್ಲದೆ ಈ ಸಿದ್ಧಾಂತದ ಪ್ರಾಯೋಗಿಕ ಅನ್ವಯತೆಯನ್ನು ಮತ್ತು ಔಚಿತ್ಯವನ್ನು ಪ್ರಶ್ನಿಸಲಾಗಿದೆ. ಪ್ರಮುಖವಾಗಿ ಜೆ.ಎಂ. ಕೇನ್ಸನು ಈ ಸಿದ್ಧಾಂತದ ಪ್ರಮುಖ ಟೀಕಾಕಾರನಾಗಿದ್ದಾನೆ. ಸಂಪ್ರದಾಯ ಪಂಥದ ಸಿದ್ಧಾಂತಕ್ಕೆ ಮಾಡಲಾಗಿರುವ ಟೀಕೆಗಳು ಈ ಕೆಳಗಿನಂತಿವೆ.

1. ಸಂಪ್ರದಾಯ ಪಂಥದ ಸಿದ್ಧಾಂತವು ಪರಿಪೂರ್ಣ ಪೈಪೋಟಿ ಕಲ್ಪನೆಯ ಮೇಲೆ ಆಧಾರಿತವಾಗಿದೆ. ಆದರೆ ವಾಸ್ತವವಾಗಿ ಅಪರಿಪೂರ್ಣ ಪೈಪೋಟಿಯ ಸನ್ನಿವೇಶವು ಅಸ್ಥಿತ್ವದಲ್ಲಿರುತ್ತದೆ.

2. ಸಂಪ್ರದಾಯ ಪಂಥದ ಚಿಂತಕರು ತಮ್ಮ ಸಿದ್ಧಾಂತದಲ್ಲಿ ನೈಜ ಕೂಲಿಯನ್ನು ಪರಿಗಣಿಸಿದ್ದಾರೆ ಮತ್ತು ಏಕಪಕ್ಷೀಯವಾಗಿ ಉದ್ಯಮಗಳ ಮಾಲೀಕರೇ ಏಕಪಕ್ಷೀಯವಾಗಿ ಕೂಲಿಯನ್ನು ನಿರ್ಧರಿಸುತ್ತಾರೆಂದು ಪ್ರತಿಪಾದಿಸಿದ್ದರು. ಆದರೆ ಮಾಲೀಕರು ಮತ್ತು ಕಾರ್ಮಿಕರ ನಡುವೆ ಚೌಕಾಸಿ ಮತ್ತು ಘರ್ಷಣೆಯ ಮೂಲಕ

3. ಕೂಲಿಯ ದರವು ನಿರ್ಧಾರವಾಗುತ್ತದೆ. ಅಷ್ಟೇ ಅಲ್ಲದೆ ಕೂಲಿಯು ನೈಜ ಕೂಲಿಯಾಗಿರದೆ ಹಣದ ರೂಪದಲ್ಲಿರುತ್ತದೆ. ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ಸರ್ಕಾರದ ಹಸ್ತಕ್ಷೇಪ ರಹಿತ ಮುಕ್ತ ಆರ್ಥಿಕ ನೀತಿ ಮತ್ತು ಮುಕ್ತ ವ್ಯಾಪಾರವನ್ನು (ಆಂತರಿಕ ಮತ್ತು ಬಾಹ್ಯ ವ್ಯಾಪಾರ) ವನ್ನು ಬೆಂಬಲಿಸಿದ್ದಾರೆ. ಆದರೆ ಆರ್ಥಿಕ ಚಟುವಟಿಕೆಗಳು

4. ಸುಗಮವಾಗಿ ಮತ್ತು ಪ್ರಗತಿಪರವಾಗಿ ನೆರವೇರಲು ಸರ್ಕಾರದ ನಾಯಕತ್ವ, ನಿಯಂತ್ರಣ ಮತ್ತು ಹಸ್ತಕ್ಷೇಪ ಅತ್ಯಗತ್ಯ ಅರ್ಥವ್ಯವಸ್ಥೆಯಲ್ಲಿ ಪೂರ್ಣೋದ್ಯೋಗವಿರುತ್ತದೆ ಎಂದು ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ನಂಬಿದ್ದರು. ಈ ಪೂರ್ಣೋದ್ಯೋಗದ ಕಲ್ಪನೆಯನ್ನು ಕೇನ್ಸನು ಅಲ್ಲಗಳೆದಿದ್ದಾನೆ. ಅವನ ಪ್ರಕಾರ ಆರ್ಥಿಕತೆಯಲ್ಲಿ ಪೂರ್ಣೋದ್ಯೋಗವು ಅಸ್ಥಿತ್ವದಲ್ಲಿರದೆ ಅರೆ ಉದ್ಯೋಗವಿರುತ್ತದೆ. ಆದಾಯ ಮತ್ತು ವೆಚ್ಚದ ನಡುವೆ ಅಂತರವಿರುವುದರಿಂದ ಪರಿಣಾಮಕಾರಿ ಬೇಡಿಕೆ ಕಡಿಮೆ ಇರುತ್ತದೆ. ಪರಿಣಾಮವಾಗಿ ಅರೆ ಉದ್ಯೋಗದ ಸ್ಥಿತಿ ಇರುತ್ತದೆ. ಪೂರ್ಣೋದ್ಯೋಗದ ಸ್ಥಿತಿ ಇರುತ್ತದೆ ಎಂದು ಭಾವಿಸಿದರೆ ನಮ್ಮ ಕಷ್ಟಗಳೆಲ್ಲವೂ ಪರಿಹಾರವಾದಂತೆ ಎಂದು ಕೇನ್ಸ್ ಹೇಳಿದ್ದಾನೆ.

5. ಪೂರೈಕೆಯು ತನ್ನದೆ ಆದಂತಹ ಬೇಡಿಕೆಯನ್ನು ಸೃಷ್ಟಿಸುತ್ತದೆ ಎಂಬ ಸೇನ ನಿಯಮವು ಕಟುವಾಗಿ ಟೀಕಿಸಲ್ಪಟ್ಟಿದೆ. ಜನರು ತಮ್ಮ ಆದಾಯದಲ್ಲಿ ಎಲ್ಲವನ್ನು ವೆಚ್ಚಮಾಡದೆ ಸ್ವಲ್ಪ ಭಾಗವನ್ನು ಉಳಿತಾಯ ಮಾಡುವುದರಿಂದ ಬೇಡಿಕೆಯ ಕೊರತೆಯು ಉಂಟಾಗುತ್ತದೆ. ಉತ್ಪಾದನೆಯು ಅದಕ್ಕೆ ತಕ್ಕನಾದ ಕೊಳ್ಳುವ ಶಕ್ತಿಯನ್ನು ಸೃಷ್ಟಿಸುವುದಿಲ್ಲ. ಪರಿಣಾಮವಾಗಿ ಉತ್ಪಾದನಾ ಬಾಹುಳ್ಯ ಮತ್ತು ನಿರುದ್ಯೋಗ ಸಾರ್ವತ್ರಿಕವಾಗಿರುತ್ತದೆ ಎಂದು ಕೇನ್ಸನು ಅಭಿಪ್ರಾಯ ಪಟ್ಟಿದ್ದಾನೆ.

6. ನಿರುದ್ಯೋಗಕ್ಕೆ ಪರಿಹಾರವಾಗಿ ಕೂಲಿ ಕಡಿತ ನೀತಿಯನ್ನು ಕೇನ್ನನು ಪ್ರಬಲವಾಗಿ ವಿರೋಧಿಸಿದ್ದಾನೆ. ಕೂಲಿಯ ಕಡಿತದಿಂದ ಕಾರ್ಮಿಕರ ಜೀವನ ಸ್ಥಿತಿ ಕೆಡುತ್ತದೆ. ಪರಿಣಾಮವಾಗಿ ಶ್ರಮದ ದಕ್ಷತೆ ಮತ್ತು ಉತ್ಪಾದನೆ ಕುಂಠಿತವಾಗುತ್ತವೆ ಎಂದು ಕೇನ್ಸನು ಹೇಳಿದ್ದಾನೆ. ಅವನು ನಿರುದ್ಯೋಗಕ್ಕೆ ಪರಿಹಾರವಾಗಿ ಕೂಲಿಯ ಕಡಿತಕ್ಕೆ ಬದಲಾಗಿ ಪರಿಣಾಮಕಾರಿ ಬೇಡಿಕೆಯ ಹೆಚ್ಚಳವನ್ನು ಶಿಫಾರಸ್ಸು ಮಾಡಿದ್ದಾನೆ.

7. ಉಳಿತಾಯ ಮತ್ತು ಹೂಡಿಕೆಗಳು ಪರಸ್ಪರ ಪರಿಪೂರ್ಣವಾಗಿ ಸಮನಾಗಿರುತ್ತವೆ ಮತ್ತು ಬಡ್ಡಿಯ ದರವು ಈ ಎರಡು ಅಂಶಗಳ ನಡುವೆ ಸಮನ್ವಯ ತರುತ್ತದೆ ಎಂಬ ಅಂಶವು ಕೂಡ ಕೇನ್ನನಿಂದ ಟೀಕಿಸಲ್ಪಟ್ಟಿದೆ. ಅವನ ಪ್ರಕಾರ ಉಳಿತಾಯ ಮತ್ತು ಹೂಡಿಕೆಗಳು ವಿವಿಧ ಜನರಿಂದ ವಿವಿಧ ವಿಧ ಉದ್ದೇಶಗಳಿಗಾಗಿ ಜರುಗುತ್ತವೆ. ಪರಿಣಾಮವಾಗಿ ಇವುಗಳ ನಡುವೆ ಅಸಮತೋಲನ ಏರ್ಪಡುವುದು ಸಾಮಾನ್ಯ ಸಂಗತಿಯಾಗಿದೆ. ಅಷ್ಟೆ ಅಲ್ಲದೆ ಉಳಿತಾಯ ಮತ್ತು ಹೂಡಿಕೆಗಳನ್ನು ನಿರ್ಧರಿಸುವ ಅಂಶಗಳು ಬೇರೆ ಬೇರೆಯಾಗಿವೆ. ಉಳಿತಾಯವು ಬಡ್ಡಿದರ, ಆದಾಯದ ಮಟ್ಟ, ದೈನಂದಿನ ವ್ಯವಹಾರಗಳ ವೆಚ್ಚ ಮತ್ತು ಭವಿಷ್ಯದ ನಿರೀಕ್ಷಣೆಗಳನ್ನು ಅವಲಂಬಿಸಿದ್ದರೆ ಹೂಡಿಕೆಯು ಬಂಡವಾಳದ ಸೀಮಾಂತ ದಕ್ಷತೆ ಮತ್ತು ಬಡ್ಡಿದರವನ್ನು ಅವಲಂಬಿಸಿರುತ್ತದೆ.)

Sacred Heart English Higher Primary School E-Magazine

ಸಮಗ್ರ ಅರ್ಥಶಾಸ್ತ್ರದ ಅರ್ಥ, ವಿಧಗಳು ಮತ್ತು ವ್ಯಾಪ್ತಿ

ಸಮಗ್ರ ಅರ್ಥಶಾಸ್ತ್ರದ ಅರ್ಥ, ವಿಧಗಳು ಮತ್ತು ವ್ಯಾಪ್ತಿ

ಸಮಗ್ರ ಅರ್ಥಶಾಸ್ತ್ರ ಎಂದರೇನು?

ಸಮಗ್ರ ಅರ್ಥಶಾಸ್ತ್ರವು ಅರ್ಥಶಾಸ್ತ್ರದ ಒಂದು ಶಾಖೆಯಾಗಿದ್ದು ಅದು ಇಡೀ ಆರ್ಥಿಕತೆಯ ಕಾರ್ಯಕ್ಷಮತೆ, ರಚನೆ ಮತ್ತು ನಡವಳಿಕೆಯನ್ನು ಪರಿಶೀಲಿಸುತ್ತದೆ. ಇದು ಹಣದುಬ್ಬರ, ಆರ್ಥಿಕ ಬೆಳವಣಿಗೆ, ನಿರುದ್ಯೋಗ, ರಾಷ್ಟ್ರೀಯ ಆದಾಯ ಮತ್ತು ಮಾರುಕಟ್ಟೆಗಳು, ಕೈಗಾರಿಕೆಗಳು ಮತ್ತು ಸರ್ಕಾರಗಳ ಒಟ್ಟಾರೆ ಕಾರ್ಯಕ್ಷಮತೆಯಂತಹ ವಿಶಾಲ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ.

ವ್ಯಕ್ತಿಗಳು ತಮ್ಮ ದೈನಂದಿನ ಬದುಕಿನಲ್ಲಿ ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬಂತಹ ವೈಯಕ್ತಿಕ ನಡವಳಿಕೆಗಳನ್ನು ಅಧ್ಯಯನ ಮಾಡುವ ಸೂಕ್ಷ್ಮ ಅರ್ಥಶಾಸ್ತ್ರಕ್ಕಿಂತ ಭಿನ್ನವಾಗಿ, ಆರ್ಥಿಕತೆಗಳು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಮಗ್ರ ಅರ್ಥಶಾಸ್ತ್ರವು “ಪಕ್ಷಿನೋಟದ” ವಿಧಾನವನ್ನು ತೆಗೆದುಕೊಳ್ಳುತ್ತದೆ.

ಸಮಗ್ರ ಅರ್ಥಶಾಸ್ತ್ರದ ವಿಧಗಳು

ಸಮಗ್ರ ಅರ್ಥಶಾಸ್ತ್ರವನ್ನು ವಿಶಾಲವಾಗಿ ಎರಡು ಮುಖ್ಯ ವರ್ಗಗಳಾಗಿ ವಿಂಗಡಿಸಲಾಗಿದೆ:

1. ವಿವರಣಾತ್ಮಕ ಸ್ಥೂಲ ಅರ್ಥಶಾಸ್ತ್ರ

* ಆರ್ಥಿಕತೆಯ ಪ್ರಸ್ತುತ ಸ್ಥಿತಿಯನ್ನು ವಿವರಿಸಲು ನೈಜ-ಪ್ರಪಂಚದ ಮಾಹಿತಿ ಮತ್ತು ಅಂಕಿಅಂಶಗಳನ್ನು ವಿಶ್ಲೇಷಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

* ಉದಾಹರಣೆಗೆ ದೇಶದ GDP ಯನ್ನು ಅಧ್ಯಯನ ಮಾಡುವುದು ಅಥವಾ ಹಣದುಬ್ಬರ ದರಗಳನ್ನು ಅಳೆಯುವುದು ಸೇರಿವೆ.

2. ಸೈದ್ಧಾಂತಿಕ ಸಮಗ್ರ ಅರ್ಥಶಾಸ್ತ್ರ

* ಆರ್ಥಿಕತೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸುವ ತತ್ವಗಳು ಮತ್ತು ಸಿದ್ಧಾಂತಗಳನ್ನು ಅನ್ವೇಷಿಸುತ್ತದೆ.

* ಪ್ರಮುಖ ಚೌಕಟ್ಟುಗಳು ಕೀನೇಸಿಯನ್ ಅರ್ಥಶಾಸ್ತ್ರ ಮತ್ತು ಶಾಸ್ತ್ರೀಯ ಅರ್ಥಶಾಸ್ತ್ರದಂತಹ ಮಾದರಿಗಳನ್ನು ಒಳಗೊಂಡಿವೆ, ಅದು ಆರ್ಥಿಕ ನಡವಳಿಕೆಗಳನ್ನು ಊಹಿಸುತ್ತದೆ ಮತ್ತು ವಿವರಿಸುತ್ತದೆ.

ಸಮಗ್ರ ಅರ್ಥಶಾಸ್ತ್ರದ ವ್ಯಾಪ್ತಿ

ಸಮಗ್ರ ಅರ್ಥಶಾಸ್ತ್ರವು ಆರ್ಥಿಕತೆಯ ಹಲವಾರು ಪ್ರಮುಖ ಅಂಶಗಳನ್ನು ಒಳಗೊಂಡಿದೆ, ಅವುಗಳೆಂದರೆ:

1. ಆರ್ಥಿಕ ಉತ್ಪಾದನೆ ಮತ್ತು ಬೆಳವಣಿಗೆ

* ಆರ್ಥಿಕತೆಯಲ್ಲಿ ಉತ್ಪಾದಿಸುವ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವನ್ನು ಅಳೆಯಲು ಒಟ್ಟು ದೇಶೀಯ ಉತ್ಪನ್ನ (GDP) ವನ್ನು ಅಧ್ಯಯನ ಮಾಡುತ್ತದೆ.

* ಹೂಡಿಕೆಗಳು, ನಾವೀನ್ಯತೆ ಮತ್ತು ಸಂಪನ್ಮೂಲ ಹಂಚಿಕೆಯಂತಹ ಆರ್ಥಿಕ ಬೆಳವಣಿಗೆಗೆ ಕಾರಣವಾಗುವ ಅಂಶಗಳನ್ನು ವಿಶ್ಲೇಷಿಸುತ್ತದೆ.

2. ಹಣದುಬ್ಬರ ಮತ್ತು ಹಣದುಬ್ಬರವಿಳಿತ

* ಸರಕು ಮತ್ತು ಸೇವೆಗಳ ಸಾಮಾನ್ಯ ಬೆಲೆ ಮಟ್ಟದಲ್ಲಿನ ಬದಲಾವಣೆಗಳನ್ನು ಪರಿಶೀಲಿಸುತ್ತದೆ.

* ಹಣದುಬ್ಬರವು ಏರುತ್ತಿರುವ ಬೆಲೆಗಳನ್ನು ಸೂಚಿಸುತ್ತದೆ, ಆದರೆ ಹಣದುಬ್ಬರವು ಕುಸಿಯುತ್ತಿರುವ ಬೆಲೆಗಳನ್ನು ಪ್ರತಿಬಿಂಬಿಸುತ್ತದೆ. ಎರಡೂ ಖರೀದಿ ಶಕ್ತಿ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ.

3. ನಿರುದ್ಯೋಗ

* ಆರ್ಥಿಕತೆಯಲ್ಲಿ ನಿರುದ್ಯೋಗದ ಕಾರಣಗಳು ಮತ್ತು ಪರಿಣಾಮಗಳನ್ನು ಪರಿಶೀಲಿಸುತ್ತದೆ.

* ಪರಿಣಾಮಕಾರಿ ನೀತಿಗಳು ಮತ್ತು ಉದ್ಯೋಗ ಸೃಷ್ಟಿಯ ಮೂಲಕ ನಿರುದ್ಯೋಗ ದರಗಳನ್ನು ಕಡಿಮೆ ಮಾಡುವತ್ತ ಗಮನಹರಿಸುತ್ತದೆ.

4. ರಾಷ್ಟ್ರೀಯ ಆದಾಯ

* ರಾಷ್ಟ್ರದ ನಿವಾಸಿಗಳು ಗಳಿಸಿದ ಒಟ್ಟು ಆದಾಯವನ್ನು ಅಳೆಯುತ್ತದೆ.

* ವೇತನ, ಲಾಭ ಮತ್ತು ಹೂಡಿಕೆಗಳಂತಹ ಅಂಶಗಳನ್ನು ಒಳಗೊಂಡಿದೆ.

* ಹಣಕಾಸು ಮತ್ತು ಹಣಕಾಸಿನ ನೀತಿಗಳು

* ತೆರಿಗೆ ದರಗಳನ್ನು ಸರಿಹೊಂದಿಸುವುದು ಅಥವಾ ಬಡ್ಡಿದರಗಳನ್ನು ಬದಲಾಯಿಸುವಂತಹ ಸರ್ಕಾರಿ ನೀತಿಗಳು ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಅಧ್ಯಯನ ಮಾಡುತ್ತದೆ.

* ಬೆಳವಣಿಗೆ, ಹಣದುಬ್ಬರ ಮತ್ತು ಉದ್ಯೋಗದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಗುರಿಯನ್ನು ಹೊಂದಿದೆ.

5. ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಜಾಗತೀಕರಣ

* ಗಡಿಗಳಲ್ಲಿ ಸರಕುಗಳು, ಸೇವೆಗಳು ಮತ್ತು ಬಂಡವಾಳದ ಹರಿವನ್ನು ಪರಿಶೀಲಿಸುತ್ತದೆ.

* ವಿನಿಮಯ ದರಗಳು, ವ್ಯಾಪಾರ ಕೊರತೆಗಳು ಮತ್ತು ರಾಷ್ಟ್ರೀಯ ಆರ್ಥಿಕತೆಗಳ ಮೇಲೆ ಜಾಗತೀಕರಣದ ಪ್ರಭಾವದ ಮೇಲೆ ಕೇಂದ್ರೀಕರಿಸುತ್ತದೆ. 

ಸಮಗ್ರ ಅರ್ಥಶಾಸ್ತ್ರ ಏಕೆ ಮುಖ್ಯ?

ಆರ್ಥಿಕತೆಯ ಕಾರ್ಯನಿರ್ವಹಣೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಸಮಗ್ರ ಅರ್ಥಶಾಸ್ತ್ರವು ಪ್ರಮುಖ ಪಾತ್ರ ವಹಿಸುತ್ತದೆ ನೀತಿ ನಿರೂಪಕರು, ರಾಜಕೀಯ ಮತ್ತು ಆರ್ಥಿಕ ತಜ್ಞರು ಮತ್ತು ಸರ್ಕಾರಗಳು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಈ ರೀತಿಯ ಪ್ರಶ್ನೆಗಳನ್ನು ಪರಿಹರಿಸುತ್ತದೆ:

* ಆರ್ಥಿಕ ಬೆಳವಣಿಗೆಗೆ ಏನು ಕಾರಣವಾಗುತ್ತದೆ, ಅದನ್ನು ಹೇಗೆ ಸಾಧಿಸುವುದು?

* ನಾವು ನಿರುದ್ಯೋಗವನ್ನು ಹೇಗೆ ಕಡಿಮೆ ಮಾಡಬಹುದು?

* ಹಣದುಬ್ಬರಕ್ಕೆ ಕಾರಣವೇನು ಮತ್ತು ಅದನ್ನು ಹೇಗೆ ನಿಯಂತ್ರಿಸಬಹುದು?

ಸಮಗ್ರ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡುವ ಮೂಲಕ, ವಿದ್ಯಾರ್ಥಿಗಳು ಜಾಗತಿಕ ಆರ್ಥಿಕ ಸವಾಲುಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಿಕೊಳ್ಳಬಹುದು ಮತ್ತು ಪರಿಣಾಮಕಾರಿ ಪರಿಹಾರಗಳನ್ನು ರೂಪಿಸಲು ಕೊಡುಗೆ ನೀಡಬಹುದು. 

ಸಾರಾಂಶ:

ಸಮಗ್ರ ಅರ್ಥಶಾಸ್ತ್ರವು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಸ್ಥಿರಗಳ ಸಂಕೀರ್ಣ ಸಂವಹನಗಳನ್ನು ಅನ್ವೇಷಿಸುವ ಒಂದು ಆಕರ್ಷಕ ಮತ್ತು ಅಗತ್ಯವಾದ ಅಧ್ಯಯನ ಕ್ಷೇತ್ರವಾಗಿದೆ. ಹಣದುಬ್ಬರವನ್ನು ನಿರ್ವಹಿಸುವುದರಿಂದ ಹಿಡಿದು ಆರ್ಥಿಕ ಬೆಳವಣಿಗೆಯನ್ನು ಸಾಧಿಸುವವರೆಗೆ, ಸಮಗ್ರ ಅರ್ಥಶಾಸ್ತ್ರದ ವ್ಯಾಪ್ತಿಯು ಆಧುನಿಕ ಸಮಾಜದ ಎಲ್ಲಾ ಅಂಶಗಳಲ್ಲಿ ಹಾಗೂ ಸ್ತರಗಳಲ್ಲಿ ವಿಸ್ತರಿಸುತ್ತದೆ. ಇದು ನಾವು ವಾಸಿಸುವ ಪ್ರಪಂಚವನ್ನು ವಿಶ್ಲೇಷಿಸಲು ಮತ್ತು ಸುಧಾರಿಸಲು ಅಮೂಲ್ಯವಾದ ಸಾಧನವಾಗಿದೆ.

ಕೂಲಿಯ ದರಗಳಲ್ಲಿ ವ್ಯತ್ಯಾಸಗಳಿರಲು ಕಾರಣಗಳು

ಕೂಲಿಯ ದರಗಳಲ್ಲಿ ವ್ಯತ್ಯಾಸಗಳಿರಲು ಕಾರಣಗಳು

ವೇತನದ ದರಗಳು ವಿವಿಧ ಪ್ರದೇಶಗಳು, ಉದ್ಯೋಗಗಳು, ಮತ್ತು ಕಾಲಾವಧಿಗಳಲ್ಲಿ ಸಮಾನವಾಗುವುದಿಲ್ಲ. ಒಂದೇ ಪ್ರದೇಶದಲ್ಲೂ, ವಿವಿಧ ವೃತ್ತಿಗಳನ್ನು ಅವಲಂಬಿಸಿ ವೇತನದ ವ್ಯತ್ಯಾಸಗಳಿರುತ್ತದೆ. ಈ ವ್ಯತ್ಯಾಸಗಳಿಗೆ ಹಲವು ಕಾರಣಗಳಿವೆ, ಅವು ಕಾರ್ಯದ ಸ್ವರೂಪ, ಪ್ರದೇಶದ ವಿಶೇಷತೆಗಳು, ಮತ್ತು ಆರ್ಥಿಕ ಪರಿಸ್ಥಿತಿಗಳ ಪ್ರಕಾರ ಬದಲಾಗುತ್ತವೆ. ಈ ಪ್ರಮುಖ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

ಬೇರೆ ಬೇರೆ ಉದ್ಯೋಗಗಳಲ್ಲಿ ಕೂಲಿಯ ತರವು ವ್ಯತ್ಯಾಸ
1. ಕೆಲಸದ ಸ್ವರೂಪ (Nature of Work) :

ಅಪಾಯದ ತೀವ್ರತೆ ಮತ್ತು ಕಷ್ಟತೆಯು ವೇತನದ ಪ್ರಮಾಣವನ್ನು ಗಮನಾರ್ಹವಾಗಿ ಪ್ರಭಾವಿಸುತ್ತದೆ.

ಹೆಚ್ಚಿನ ವೇತನದ ಉದ್ಯೋಗಗಳು:

ದುಸ್ತರ, ಶ್ರಮಸಾಧ್ಯ ಅಥವಾ ಗಟ್ಟಿಯಾದ ಕೆಲಸಗಳು ಹೆಚ್ಚು ವೇತನ ನೀಡುತ್ತವೆ. (ಉದಾ: ಗಣಿ ಕಾರ್ಮಿಕರು)

ಕಡಿಮೆ ವೇತನದ ಉದ್ಯೋಗಗಳು:

ಶ್ರಮ ಕಡಿಮೆ ಇರುವ ಅಥವಾ ಸುಖಕರ ಕೆಲಸಗಳಿಗೆ ಕಡಿಮೆ ವೇತನ ನೀಡಲಾಗುತ್ತದೆ. (ಉದಾ: ಕೃಷಿ ಕಾರ್ಮಿಕರು)

2. ಅಪಾಯದ ಸಂಭವ (Possibility of Danger) :

ಕೆಲಸದ ಅಪಾಯದ ಮಟ್ಟವು ವೇತನವನ್ನು ಹೆಚ್ಚು ಮಾಡುತ್ತದೆ.

ಹೆಚ್ಚಿನ ಅಪಾಯದ ಕೆಲಸಗಳು:

ಅಪಘಾತದ ಪ್ರಮಾಣ ಹೆಚ್ಚಾಗಿರುವ ಅಥವಾ ಪ್ರಾಣಾಪಾಯದ ಕೆಲಸಗಳಿಗೆ (ಉದಾ: ವಿಮಾನ ಪೈಲಟ್‌ಗಳು) ಹೆಚ್ಚಿನ ವೇತನ ನೀಡಲಾಗುತ್ತದೆ.

ಕಡಿಮೆ ಅಪಾಯದ ಕೆಲಸಗಳು:

ಕ್ಲರ್ಕ್‌ಗಳು ಮತ್ತು ಕಚೇರಿ ಉದ್ಯೋಗಗಳಲ್ಲಿ ಅಪಾಯ ಕಡಿಮೆ ಇರುವುದರಿಂದ ವೇತನ ಕಡಿಮೆಯಾಗಿರುತ್ತದೆ.

3. ತರಬೇತಿಯ ವೆಚ್ಚ (Cost of Training):

ವಿದ್ಯಾಭ್ಯಾಸ ಮತ್ತು ಉನ್ನತ ತರಬೇತಿ ಅಗತ್ಯವಿರುವ ವೃತ್ತಿಗಳು ಸಾಮಾನ್ಯವಾಗಿ ಹೆಚ್ಚಿನ ವೇತನ ನೀಡುತ್ತವೆ.

ಉದಾಹರಣೆಗೆ, ಉನ್ನತ ವೈದ್ಯಕೀಯ ತರಬೇತಿ ಹೊಂದಿರುವ ಶಸ್ತ್ರಚಿಕಿತ್ಸಕ ಸಾಮಾನ್ಯ ಕಾರ್ಮಿಕನಿಗಿಂತ ಹೆಚ್ಚು ಸಂಪಾದಿಸುತ್ತಾರೆ. ನಿರುದ್ಯೋಗಿಗಳು ಹೆಚ್ಚಿನ ತರಬೇತಿ ಅಥವಾ ಶಿಕ್ಷಣವನ್ನು ಅಗತ್ಯವಿರುವ ಕೌಶಲ್ಯಗಳಿಗೆ ಮೌಲ್ಯ ನೀಡುತ್ತಾರೆ ಮತ್ತು ಹೆಚ್ಚಿನ ಹಣವನ್ನು ನೀಡಲು ಸಿದ್ಧರಾಗಿರುತ್ತಾರೆ.

ಕೌಶಲ್ಯಗಳ ಬೇಡಿಕೆ: Artificial intelligence ಅಥವಾ cybersecurity ಅವಶ್ಯಕತೆಯಿರುವ ಕ್ಷೇತ್ರಗಳಲ್ಲಿ, ಕೌಶಲ್ಯಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಈ ಕ್ಷೇತ್ರಗಳಲ್ಲಿ ಅರ್ಹ ವೃತ್ತಿಪರರ ಕೊರತೆ ಇದ್ದು, ವೇತನಗಳು ವಿಶೇಷವಾಗಿ ಜಾಸ್ತಿಯಾಗಿದೆ. ವಿಸ್ತೃತ ಉದ್ಯೋಗ ಮಾರುಕಟ್ಟೆಗಳಲ್ಲಿ, ವೇತನಗಳು ಕಡಿಮೆಯಾಗಿರುತ್ತವೆ.

4. ಕೆಲಸದ ನಿಯಮಿತತನ (Casualness of Work):

ಉದ್ಯಮದ ಲಾಭ: ವೇತನವು ಉದ್ಯಮದ ಲಾಭದಾಯಕತೆಯನ್ನು ಪ್ರತಿಬಿಂಬಿಸುತ್ತದೆ. ತಂತ್ರಜ್ಞಾನ ಸಂಸ್ಥೆಗಳು ಹೆಚ್ಚಿನ ಆದಾಯವನ್ನು ಪಡೆಯುತ್ತಿರುವುದರಿಂದ, ಅವರು ತಮ್ಮ ಉದ್ಯೋಗಿಗಳಿಗೆ ಹೆಚ್ಚಿನ ವೇತನವನ್ನು ನೀಡುತ್ತವೆ. ಉದಾಹರಣೆಗೆ ಸಾಫ್ಟ್‌ ವೇರ್‌ ತಂತ್ರಜ್ಞಾನ ಕ್ಷೇತ್ರಗಳು, ಕೃಷಿ ಉದ್ಯಮಗಳಿಗಿಂತ ಹೆಚ್ಚಿನ  ವೇತನ ನೀಡುತ್ತವೆ.

ಸರಕಾರಿ ಮತ್ತು ಖಾಸಗಿ ವಲಯ: ಖಾಸಗಿ ವಲಯದಲ್ಲಿ ಸಾಮಾನ್ಯವಾಗಿ ವೇತನ ಹೆಚ್ಚು ಇದ್ದರೂ, ಸರ್ಕಾರಿ ಉದ್ಯೋಗಗಳು ಕೆಲಸದ ಭದ್ರತೆ, ಸೌಲಭ್ಯಗಳು, ಮತ್ತು ನಿವೃತ್ತಿ ಯೋಜನೆಗಳನ್ನು ಒದಗಿಸುತ್ತವೆ.

5. ದಕ್ಷತೆಯಲ್ಲಿ ಅಂತರ (Difference in Capacity):

ಉದ್ಯೋಗದ ಶ್ರೇಣಿಯ ಸ್ಥಿರತೆಯು ವೇತನವನ್ನು ಪ್ರಭಾವಿಸುತ್ತದೆ.

ಅಸ್ಥಿರ ಉದ್ಯೋಗಗಳು:

ಅಸ್ಥಿರ ಮತ್ತು ನಿರ್ದಿಷ್ಟ ಸಮಯವಿಲ್ಲದ ಉದ್ಯೋಗಗಳು ಹೆಚ್ಚಿನ ವೇತನವನ್ನು ನೀಡುತ್ತವೆ.

ಸ್ಥಿರ ಉದ್ಯೋಗಗಳು:

ಶಾಶ್ವತವಾದ ಮತ್ತು ನಿಯಮಿತ ಉದ್ಯೋಗಗಳು ಕಡಿಮೆ ವೇತನ ನೀಡುತ್ತವೆ.

6. ಅನುಭವ

ಅನುಭವವು ಸಾಮಾನ್ಯವಾಗಿ ಉತ್ಪಾದಕತೆ ಮತ್ತು ದಕ್ಷತೆಯೊಂದಿಗೆ ಸಂಬಂಧಿಸುತ್ತದೆ. ವೃತ್ತಿಯಲ್ಲಿನ ಅನೇಕ ವರ್ಷಗಳ ಅನುಭವ ಹೊಂದಿರುವ ಕಾರ್ಮಿಕರು ಹೆಚ್ಚು ಸಂಬಳವನ್ನು ಸಂಪಾದಿಸುತ್ತಾರೆ.ಆದರೆ ಕಡಿಮೆ ಅನುಭವ ಹೊಂದಿರುವವರು ಕಡಿಮೆ ಸಂಬಳ ಪಡೆಯುವುದು ಸಾಮಾನ್ಯವಾಗಿದೆ.

7. ಸ್ಥಳ

ವೇತನವು ಒಂದು ಪ್ರದೇಶದ ಮೇಲೂ ಅವಲಂಬಿತವಾಗಿದೆ. ಉದಾಹರಣೆಗೆ, ಬೆಂಗಳೂರು ಅಥವಾ ಮುಂಬೈಯಂತಹ ನಗರ ಪ್ರದೇಶಗಳಲ್ಲಿ, ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ, ವೇತನ ಹೆಚ್ಚು.

ಸ್ಥಳೀಯ ಆರ್ಥಿಕ ಪರಿಸ್ಥಿತಿಗಳು: ಚುರುಕು ಆರ್ಥಿಕತೆ ಮತ್ತು ಉದ್ಯಮ ವೃದ್ಧಿ ಹೊಂದಿರುವ ಪ್ರದೇಶಗಳಲ್ಲಿ (ಉದಾ., ಬೆಂಗಳೂರು) ವೇತನ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ.

8. ಪೂರೈಕೆ ಮತ್ತು ಬೇಡಿಕೆ

ಕಾರ್ಮಿಕ ಮಾರುಕಟ್ಟೆ ಗತಿವಿಧಾನಗಳು: ನಿರ್ದಿಷ್ಟ ಕೌಶಲ್ಯ ಹೊಂದಿರುವ ಕಾರ್ಮಿಕರ ಪೂರೈಕೆ ಹೆಚ್ಚಾದರೆ, ಆ ಕೌಶಲ್ಯಕ್ಕೆ ವೇತನ ಕಡಿಮೆಯಾಗುತ್ತದೆ. ಅದೇ ರೀತಿ, ಬೇಡಿಕೆಯು ಪೂರೈಕೆಯನ್ನು ಮೀರಿದರೆ, ವೇತನಗಳು ಹೆಚ್ಚಾಗುತ್ತದೆ.

9. ಲಿಂಗ ಮತ್ತು ವೈಷಮ್ಯ

ಲಿಂಗ ವೇತನ ಅಂತರ: ಸಾಕಷ್ಟು ಪ್ರಗತಿಯಾದರೂ, ಅನೇಕ ಕ್ಷೇತ್ರಗಳಲ್ಲಿ ಪುರುಷರು ಮತ್ತು ಮಹಿಳೆಯರ ವೇತನ ವ್ಯತ್ಯಾಸ ಉಂಟಿದೆ. ಲಿಂಗ ಸಮಾನತೆಯ ಕೊರತೆಯಿಂದ ಮತ್ತು ಸಾಮಾಜಿಕ ರೂಢಿಗಳಿಂದ ಇದು ಉಂಟಾಗುತ್ತದೆ.

ಜಾತಿ ಮತ್ತು ಸಾಂಸ್ಕೃತಿಕ ದ್ವೇಷ: ಕೆಲಸದ ಗತಿವಿಧಾನದಲ್ಲಿ ಜಾತಿ ಅಥವಾ ಸಾಂಸ್ಕೃತಿಕ ವ್ಯಾಮೋಹವು ವೇತನ ಅಸಮಾನತೆಗೆ ಕಾರಣವಾಗುತ್ತದೆ.

10. ಸಂಘಟನೆ

ಸಾಮೂಹಿಕ ಚರ್ಚೆ: ಸಂಘಟಿತ ಕಾರ್ಮಿಕರು ಒಟ್ಟಾರೆ ಉತ್ತಮ ವೇತನ ಮತ್ತು ಸೌಲಭ್ಯಗಳನ್ನು ಹೊಂದಿರುತ್ತಾರೆ. ಅಸಂಘಟಿತ ಕಾರ್ಮಿಕರು ಕಡಿಮೆ ವೇತನ ಪಡೆಯುವ ಸಾಧ್ಯತೆ ಇದೆ.

11. ಸರ್ಕಾರದ ನೀತಿಗಳು

ಕನಿಷ್ಠ ವೇತನ ಕಾನೂನುಗಳು: ಸರ್ಕಾರಗಳು ಕನಿಷ್ಠ ವೇತನ ನಿಯಮಗಳನ್ನು ರೂಪಿಸುತ್ತವೆ. ಆದರೆ ಈ ಕಾನೂನುಗಳು ಸ್ಥಳ ಮತ್ತು ದೇಶದ ಪ್ರಕಾರ ವ್ಯತ್ಯಾಸ ಹೊಂದಿರುತ್ತವೆ.

12. ಜಾಗತೀಕರಣ

ಔಟ್‌ಸೋರ್ಸಿಂಗ್: ಜಾಗತೀಕರಣದ ಪರಿಣಾಮವಾಗಿ ಕಡಿಮೆ ವೆಚ್ಚದ ಕಾರ್ಮಿಕ ಪ್ರದೇಶಗಳಿಗೆ ಕೆಲಸಗಳನ್ನು ಔಟ್‌ಸೋರ್ಸ್ ಮಾಡಲಾಗಿದೆ, ಇದರಿಂದ ವೇತನದ ವ್ಯತ್ಯಾಸ ಉಂಟಾಗಿದೆ.

ಸ್ಪರ್ಧೆ: ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವೇತನವನ್ನು ಜಾಗತೀಕರಣವು ಹೆಚ್ಚಿಸಿದೆ.

13. ದಕ್ಷತೆಯಲ್ಲಿ ಅಂತರ (Difference in Capacity):

ವ್ಯಕ್ತಿಗತ ಸಾಮರ್ಥ್ಯವು ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

ವಿಶೇಷ ಕೌಶಲ್ಯಗಳು ಅಥವಾ ಹೆಚ್ಚಿನ ದಕ್ಷತೆ ಹೊಂದಿರುವ ನಿಪುಣ ಕಾರ್ಮಿಕರು  ಹೆಚ್ಚು ವೇತನ ಪಡೆಯುತ್ತಾರೆ.

ದಕ್ಷತೆಯ ಕೊರತೆ ಇರುವ ಅನಿಪುಣ ಕಾರ್ಮಿಕರು ಕಡಿಮೆ ವೇತನ ಪಡೆಯುತ್ತಾರೆ. 

14.ಆರ್ಥಿಕ ಬೆಳವಣಿಗೆ:

ದೇಶ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿದ್ದಂತೆ,ಸಹಜವಾಗಿ ಆರ್ಥಿಕ  ಚಟುವಟಿಕೆಗಳದೆಸೆಯಿಂದಾಗಿ ವೇತನ ಹೆಚ್ಚುತ್ತವೆ.

15.ಜೀವನೋಪಾಯದ ವೆಚ್ಚ:

ಬದುಕು ನಡೆಸುವ ವೆಚ್ಚಗಳು ಹೆಚ್ಚಾದಂತೆ, ವೇತನಗಳನ್ನು ಪುನರ್‌ ವಿಮರ್ಶೆ ಮಾಡುವುದು ಅನಿವಾರ್ಯವಾಗುತ್ತದೆ ಹಾಗೂ ಪರಿಣಾಮವಾಗಿ ವೇತನವೂ ಹೆಚ್ಚಾಗುತ್ತದೆ.

ಆದ್ದರಿಂದಲೇ ಕೆಲವು ವರ್ಷಗಳ ಹಿಂದಿನ ವೇತನದ ಪ್ರಮಾಣ ಇಂದಿಲ್ಲ ಮತ್ತು ಇಂದಿನ ವೇತನದ ಪ್ರಮಾಣ ಮುಂದಿನ ಕೆಲವು ವರ್ಷಗಳಲ್ಲಿ ಇರುವುದು ಅಸಾಧ್ಯ.

ಉಪಸಂಹಾರ

ವೇತನದ ವ್ಯತ್ಯಾಸಗಳು ವಿವಿಧ ವೃತ್ತಿಗಳು, ಪ್ರದೇಶಗಳು, ಮತ್ತು ಕಾಲಾವಧಿಗಳ ಬೇಡಿಕೆ-ಪೂರೈಕೆ ಬೇಧಗಳಿಂದ ಉಂಟಾಗುತ್ತವೆ. ಕಾರ್ಯದ ಸ್ವರೂಪ, ಅಪಾಯದ ಮಟ್ಟ, ತರಬೇತಿ ಅಗತ್ಯತೆ, ಪ್ರಾಂತೀಯ ವೈವಿಧ್ಯತೆ ಮತ್ತು ಆರ್ಥಿಕ ಬೆಳವಣಿಗೆ ಇತ್ಯಾದಿ ಎಲ್ಲವೂ ವೇತನದ ವ್ಯತ್ಯಾಸದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಮಾನತೆ ಮತ್ತು ನ್ಯಾಯಸಂಗತ ವೇತನ ವಿತರಣೆಗೆ ಈ ಎಲ್ಲ ಕಾರಣಗಳ ವಿವರಣೆ ಮುಖ್ಯವಾಗಿದೆ.