ಪ್ರವಾಸಿಗರ ವಿಧಗಳು (Types of Tourists)

ಪ್ರವಾಸಿಗರ ವಿಧಗಳು (Types of Tourists)

ಪ್ರಯಾಣ ಮಾಡುವ ಎಲ್ಲರನ್ನೂ ಪ್ರವಾಸಿಗರು ಎಂದು ಪರಿಗಣಿಸಲು ಬರುವುದಿಲ್ಲ. ಯಾರು ಪ್ರವಾಸೋದ್ಯಮಕ್ಕಾಗಿ ಪ್ರಯಾಣಿಸುವವರೋ ಅವರನ್ನು ಮಾತ್ರ ಪ್ರವಾಸಿಗರು ಎಂದು ಹೇಳಬಹುದು.

 1. ಪ್ರಯಾಣಿಕರು: ತಮ್ಮ ಕೆಲಸ, ಸಂಬಳ ಹಾಗೂ ವಾಸಸ್ಥಾನಗಳನ್ನು ಅರಸಿ ಪ್ರಯಾಣ ಮಾಡುವವರನ್ನು ಪ್ರಯಾಣಿಕರು ಎಂದು ಕರೆಯಬಹುದಾಗಿದೆ. ಇವರು ಯಾವುದೇ ಮನರಂಜನೆ, ವಿರಾಮ ಹಾಗೂ ನಿಖರವಾದ ಉದ್ದೇಶಗಳಿಗಾಗಿ ಪ್ರಯಾಣಿಸುವವರಲ್ಲ. ಇವರಿಗೆ ತಾವು ಪ್ರಯಾಣಿಸುವ ದೂರ ಹಾಗೂ ಸ್ಥಳದ ಬಗ್ಗೆ ನಿರ್ಬಂಧವಿರುವುದಿಲ್ಲ.

 2. ಪ್ರವಾಸಿಗರು: ಒಬ್ಬ ವ್ಯಕ್ತಿ ಸಂತೋಷ, ಮನರಂಜನೆ, ವಿರಾಮ ಹಾಗೂ ಕ್ರೀಡಾ ಉದ್ದೇಶಗಳನ್ನು ಇಟ್ಟುಕೊಂಡು ಪ್ರಯಾಣಿಸಿದರೆ ಅವನನ್ನು ಪ್ರವಾಸಿಗ ಎಂದು ಕರೆಯಬಹುದಾಗಿದೆ. ಅಂತವರು ತಾವು ತಮ್ಮ ಮೂಲ ವಾಸ ಸ್ಥಳದಿಂದ ಹೊರಗೆ ಕನಿಷ್ಠ 24 ಗಂಟೆಗಳಿಗಿಂತ ಹೆಚ್ಚು ಕಾಲ ಹೊರಗೆ ಹೋಗಿ ಸಂತೋಷವಾಗಿ ಕಾಲ ಕಳೆಯುತ್ತಾರೆ. ಇವರು ತಮ್ಮ ಸ್ವಂತ ಖರ್ಚಿನಿಂದಲೇ ಪ್ರವಾಸವನ್ನು ಕೈಗೊಂಡು ವಿರಾಮದಲ್ಲಿ ತೊಡಗುತ್ತಾರೆ. ಇವರು ಸ್ವಂತ ಸಂಪಾದನೆಗೆ ಬೇರೆಡೆಗೆ ಹೋದವರಲ್ಲ ಇವರಿಗೆ ಯಾವುದೇ ಸ್ವಂತ ಮನೆಗಳು ಅಲ್ಲಿ ಇರುವುದಿಲ್ಲ. ಇವರು ತಾತ್ಕಾಲಿಕವಾಗಿ ನೆಲೆ ನಿಂತು ಮತ್ತೆ ತಮ್ಮ ಸ್ವಂತ ಸ್ಥಳಕ್ಕೆ ಬರುತ್ತಾರೆ.

 3. ವಿಹಾರಿಗಳು: 24 ಗಂಟೆಗಳಿಗಿಂತಲೂ ಕಡಿಮೆ ಕಾಲಾವಧಿಯಲ್ಲಿ ತಂಗುವ ತಾತ್ಕಾಲಿಕ ಸಂದರ್ಶಕವನ್ನು ವಿಹಾರಿಗಳು ಎಂದು ಕರೆಯುವರು. ಇವರು ತಮ್ಮ ವಾಸ ಸ್ಥಳದಿಂದ ಹೊರಟು 24 ಗಂಟೆಗಳ ಅವಧಿಯ ಒಳಗೆ ತಮ್ಮ ನಿವಾಸವನ್ನು ಬಂದು ಸೇರಿಕೊಳ್ಳುತ್ತಾರೆ. ಉದಾ: ಶಿವಮೊಗ್ಗದಿಂದ ಹೊರಟ ಸಂದರ್ಶಕನು ಅದೇ ದಿನ ಜೋಗ ಜಲಪಾತವನ್ನು ನೋಡಿಕೊಂಡು ಮತ್ತೆ ಶಿವಮೊಗ್ಗಕ್ಕೆ ಹಿಂತಿರುಗುತ್ತಾನೆ. ವಿಮಾನಯಾನ ಮಾಡುವವರು ನೌಕಯಾನಿಗಳು ಈ ವರ್ಗಕ್ಕೆ ಸೇರಿದವರಾಗಿರುತ್ತಾರೆ.

 4. ಸ್ವದೇಶಿ ಪ್ರವಾಸಿಗರು: ದೇಶದ ಪರಿಮಿತಿ ಒಳಗೆ ತನ್ನ ಸ್ವಸ್ಥಾನದಿಂದ ಹೊರಟು 24 ಗಂಟೆಗಳಿಗಿಂತ ಹೆಚ್ಚು ಹಾಗೂ 12 ತಿಂಗಳುಗಳ ಒಳಗೆ ಹೊರಗೆ ಹೋಗಿ ವಿರಾಮ ಅಥವಾ ಸಂತೋಷದಿಂದ ಕಾಲ ಕಳೆದು ಬರುವ ಪ್ರವಾಸಿಗನನ್ನು ಸ್ವದೇಶಿ ಪ್ರವಾಸಿಗ ಎಂದು ಕರೆಯಲಾಗಿದೆ ಈ ರೀತಿ ಪ್ರಯಾಣವನ್ನು ಮಾಡುವವರು ಕಡ್ಡಾಯವಾಗಿ ವೀಸಾ, ವಿದೇಶಿ ಹಣ ಹಾಗೂ ಪಾಸ್‌ಪೋರ್ಟ್‌ನ್ನು ಪಡೆಯಬೇಕಾಗಿಲ್ಲ.

 5. ವಿದೇಶಿ ಪ್ರವಾಸಿಗರು: ಒಬ್ಬ ವ್ಯಕ್ತಿ ತನ್ನ ದೇಶದ ಗಡಿ ಭಾಗವನ್ನು ದಾಟಿಕೊಂಡು ಹೋಗಿ ವಿದೇಶದಲ್ಲಿ ಕನಿಷ್ಟ 24 ಗಂಟೆಗಳ ಕಾಲ ಅಥವಾ ಅದಕ್ಕಿಂತಲೂ ಹೆಚ್ಚಿನ ಅವಧಿಯವರೆಗೆ ಪ್ರವಾಸ ಕೈಗೊಂಡರೆ ಆತನನ್ನು ವಿದೇಶಿ ಪ್ರವಾಸಿಗ ಎಂದು ಕರೆಯುತ್ತಾರೆ. ಈತ ಕನಿಷ್ಟ 12 ತಿಂಗಳುಗಳ ಕಾಲ ವಿದೇಶಗಳಲ್ಲಿ ವಿಹಾರ ಮಾಡಬೇಕೆ ಹೊರತು ಯಾವುದೇ ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗಬಾರದು. ಇವರಿಗೆ ವೀಸಾ, ಪಾಸ್‌ಪೋರ್ಟ್ ಹಾಗೂ ವಿದೇಶಿ ಕರೆನ್ಸಿ ಕಡ್ಡಾಯವಾಗಿ ಬೇಕೇ ಬೇಕು.

 6. ಹಂಗಾಮಿ ಅತಿಥಿ: ಒಬ್ಬ ಪ್ರವಾಸಿಯು ಒಂದು ದೇಶದಿಂದ ಬೇರೊಂದು ದೇಶಕ್ಕೆ ಹೋಗುವಾಗ ಕನಿಷ್ಟ 12 ಗಂಟೆಗಳಿಗಿಂತಲೂ ಕಡಿಮೆ ಅವಧಿಯವರೆಗೆ ಉಳಿದುಕೊಳ್ಳುವವರನ್ನು ಹಂಗಾಮಿ ಅತಿಥಿ ಎಂದು ಕರೆಯುತ್ತಾರೆ. ಉದಾ: ಪ್ರವಾಸಿ ಚೀನಾ ದೇಶಕ್ಕೆ ಹೋಗುವಾಗ ಭಾರತದ ದೆಹಲಿಯಲ್ಲಿ ಇಳಿದು ಕೆಲವು ತಾಸುಗಳವರೆಗೆ ಸುತ್ತಾಡಿ ಎಲ್ಲಿಯೂ ನಿಲ್ಲದೆ ಚೀನಾಕ್ಕೆ ಹೋದರೆ ಅವನನ್ನು ಹಾದುಹೋಗುವ ಸಂದರ್ಶಕ ಎಂದು ಕರೆಯುತ್ತಾರೆ.

 7. ವಲಸಿಗ: ಒಬ್ಬ ಪ್ರವಾಸಿಗನು ಭಾರತಕ್ಕೆ ಬಂದು ಒಂದು ವರ್ಷವಿಡೀ ಇಲ್ಲಿಯೇ ಉಳಿದುಕೊಂಡರೆ ಅವನು ಪ್ರವಾಸಿಗ ಅನಿಸಿಕೊಳ್ಳದೆ ವಲಸಿಗನೆಂದು ಕರೆಸಿಕೊಳ್ಳುತ್ತಾನೆ.

 ಒಬ್ಬ ವ್ಯಕ್ತಿ ಪ್ರವಾಸಕ್ಕೆ ಹೋಗುತ್ತಾನೆ ಎಂದರೆ ಅವನು ಸಂತೋಷ, ವಿನೋದ ಹಾಗೂ ವಿರಾಮವನ್ನು ಪಡೆಯಲು ಕಾತುರನಾಗಿದ್ದಾನೆ ಎಂದರ್ಥ. ಇದರೊಂದಿಗೆ ಆತ ವಿರಾಮದ ಸಮಯವನ್ನು ಮನರಂಜನೆಗಾಗಿ ಬಳಸಿಕೊಳ್ಳುತ್ತಾನೆ. ತಾನು ವಾರವಿಡೀ ದುಡಿದು ದಣಿದಿದ್ದ ಕಾರಣದಿಂದ ಅವನು ದಣಿವಾರಿಸಿಕೊಳ್ಳಲು ಬಯಸುತ್ತಾನಲ್ಲದೆ ಹೊಸ ಚೈತನ್ಯ ಪಡೆಯುವ ಆಸೆಯನ್ನು ಹೊಂದಿರುತ್ತಾನೆ.

ಪ್ರವಾಸೋದ್ಯಮದ ಅರ್ಥ ಮತ್ತು ವ್ಯಾಖ್ಯೆ

ಪ್ರವಾಸೋದ್ಯಮದ ಅರ್ಥ ಮತ್ತು ವ್ಯಾಖ್ಯೆ

ಪ್ರವಾಸೋದ್ಯಮ ಹಾಗೂ ಪ್ರವಾಸಿಗರ ನಡುವೆ ಅವಿನಾಭಾವ ಸಂಬಂಧವಿದೆ. ಏಕೆಂದರೆ ಪ್ರವಾಸ ಉದ್ಯಮವು ಪ್ರವಾಸಿಗರನ್ನು ಅವಲಂಬಿಸಿದೆ. ಪ್ರವಾಸಿಗರಲ್ಲದೆ ಪ್ರವಾಸೋದ್ಯಮವು ನಡೆಯಲಾರದು. ಪ್ರವಾಸಿಗರು ಎಂಬ ಪದವು ಆಂಗ್ಲ ಭಾಷೆಯ Turists  ಎಂದಾದರೆ ಪ್ರವಾಸೋದ್ಯಮ ಎಂಬ ಪದವು ಆಂಗ್ಲ ಭಾಷೆಯಲ್ಲಿ Turism  ಎಂದು ಅರ್ಥವಾಗುತ್ತದೆ. ಈ ಎರಡೂ ಪದಗಳು ಲ್ಯಾಟಿನ್ ಭಾಷೆಯ Tour  ಎಂಬ ಪದದಿಂದ ಉತ್ಪತ್ತಿಯಾಗಿದೆ. Tour  ಎಂಬ ಲ್ಯಾಟಿನ್ ಪದವು ಲ್ಯಾಟಿನ್ ಪದವಾದ “ ಟೋರನಸ್ʼʼ ಎಂಬ ಪದದಿಂದ ಬಂದಿದೆ. ಟೋರನಸ್ ಎಂದರೆ ಸುತ್ತಾಟ ಮಾಡುವುದು ಅಥವಾ ಚಲಿಸುವುದು ಎಂದಾಗುತ್ತದೆ.  ಸರಳವಾಗಿ ಹೇಳಬೇಕೆಂದರೆ ಪ್ರವಾಸೋದ್ಯಮ ಎಂದರೆ ವ್ಯಕ್ತಿಗಳು ತಾವು ವಾಸ ಮಾಡುವ ಸ್ಥಳದಿಂದ ಮನರಂಜನೆ, ವಿಶ್ರಾಂತಿ, ವ್ಯಾಪಾರ, ಶಿಕ್ಷಣ, ಆರೋಗ್ಯ, ಧಾರ್ಮಿಕ ಅಥವಾ ಇತರ ಉದ್ದೇಶಗಳ ಸಲುವಾಗಿ ತಾತ್ಕಾಲಿಕವಾಗಿ ಬೇರೆ ಸ್ಥಳಗಳಿಗೆ ಹೋಗುವುದು. ಅಂದರೆ ಪ್ರವಾಸಿಗನು ಬೇರಡೆ ಹೋದಾಗ ಅಲ್ಲಿ ಶಾಶ್ವತವಾಗಿ ನೆಲೆನಿಲ್ಲದೆ ಆದಾಯ ಗಳಿಸುವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದನ್ನು ಮಾಡದಿರುವುದಾಗಿದೆ. Tour and Turist  ಎಂಬ ಎರಡು ಪದಗಳು 1800 ರಲ್ಲಿ ಪ್ರಥಮ ಬಾರಿಗೆ ಬಳಕೆಯಲ್ಲಿ ಬಂದವು. ಆಂಗ್ಲ ಭಾಷೆಯಲ್ಲಿ ಟ್ರ್ಯಾವೆಲ್ ಎಂದರೆ ಸಂಕಷ್ಟ ಅಥವಾ ಯಾತನೆ ಎಂದರ್ಥ. ಅಂದರೆ ಹಿಂದಿನ ಕಾಲದಲ್ಲಿ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣದಿಂದ ಪ್ರಯಾಣ ತುಂಬಾ ಕಷ್ಟದಿಂದ ಕೂಡಿತ್ತು. ಎಂದು ಹೇಳಲಾಗಿದೆ. ಹೀಗಾಗಿ ಪ್ರಯಾಣವೆಂದರೆ ಅದು ನರಕ ಸದೃಶ್ಯವಾಗಿತ್ತು. ಈ ಕಾರಣದಿಂದ ಟ್ರ್ಯಾವೆಲ್ ಎಂಬ ಶಬ್ದವು ಹುಟ್ಟಿಕೊಂಡಿತು. 1800ರ ವೇಳೆಗೆ ಥಾಮಸ್ ಪೇಜ್ ಎಂಬುವರು ಟೂರಿಸ್ಟ್ ಎಂಬ ಪದವನ್ನು ಪ್ರವಾಸಿಗ ಎಂಬ ಪದಕ್ಕೆ ಸರಿಸಾಟಿಯಾಗಿ ಬಳಸಿದರು. ತದನಂತರ ಎಲ್ಲಾ ಪ್ರವಾಸಿ ಚಟುವಟಿಕೆಗಳನ್ನು ಸೇರಿಸಿ ಟೂರಿಸಂ ಎಂಬ ಪದವನ್ನು ಬಳಕೆಯಲ್ಲಿ ತರಲಾಯಿತು. ಆಕ್ಸ್‌ಫರ್ಡ್ ಶಬ್ದಕೋಶದ ಪ್ರಕಾರ ಪ್ರವಾಸಿಗ ಎಂದರೆ ʻʻವ್ಯಕ್ತಿಯೊಬ್ಬನು ಕುತೂಹಲ ಅಥವಾ ಮೋಜಿಗಾಗಿ ಪ್ರಯಾಣ ಮಾಡುವವನು ಎಂದರ್ಥ.

                                                                                              ವ್ಯಾಖ್ಯೆಗಳು

ಪ್ರವಾಸ, ಪ್ರವಾಸಿ ಹಾಗೂ ಪ್ರವಾಸೋದ್ಯಮದ ತಾಂತ್ರಿಕ ವ್ಯಾಖ್ಯಾನಗಳ ಬಗ್ಗೆ ಸಾಮಾನ್ಯ ಗ್ರಹಿಕೆ ಇರುವುದಾದರೂ ಅವುಗಳ ವ್ಯಾಖ್ಯಾನದ ವ್ಯಾಪ್ತಿ ಬಹಳ ವಿಶಾಲವಾಗಿದೆ. ಪ್ರವಾಸೋದ್ಯಮದ ಕುರಿತು ವಿವಿಧ ಪಂಡಿತರು ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದಾಗಿದೆ.

1.ಹ್ರನ್ಜಿಕರ್‌ ಹಾಗೂ ಕ್ರಾಪ್‌ರವರ ಪ್ರಕಾರ: ಪ್ರವಾಸೋದ್ಯಮವೆಂದರೆ ನಿವಾಸಿಯಲ್ಲದ ವ್ಯಕ್ತಿಗಳು ಪ್ರಯಾಣ ಮಾಡುವುದು ಹಾಗೂ ಶಾಶ್ವತವಾಗಿ ನೆಲೆಯೂರದೆ ಆದಾಯ ಗಳಿಕೆ ಉದ್ದೇಶವನ್ನು ಚಟುವಟಿಕೆಯಾಗಿ ಹೊಂದಿರದ ಪರಿಸ್ಥಿತಿಯನ್ನು ಪ್ರವಾಸೋದ್ಯಮ ಎಂದು ಕರೆದಿದ್ದಾರೆ.

2.ಯುನೈಟೆಡ್ ನೇಶನ್ಸ್ ವರ್ಲ್ಡ್ ಟೂರಿಸಂ ಆರ್ಗನೈಜೇಷನ್: ʻʻಪ್ರವಾಸೋದ್ಯಮವೆಂದರೆ ವ್ಯಕ್ತಿಗಳು ತಮ್ಮ ಸಾಮಾನ್ಯ ಪರಿಸರದ ಹೊರಗಿನ ಸ್ಥಳಗಳಿಗೆ ಮನರಂಜನೆ, ವ್ಯಾಪಾರ ಅಥವಾ ಇತರೆ ಉದ್ದೇಶಗಳಿಗಾಗಿ ಒಂದು ವರ್ಷದ ಅವಧಿಗೆ ಪ್ರಯಾಣಿಸಿ ವಾಸಿಸುವ ಚಟುವಟಿಕೆಗಳಾಗಿವೆ.

3. ವೆಬ್ ಸ್ಟರ್ ವಿಶ್ವಕೋಶದ ಪ್ರಕಾರ: ಸಂಭಾವನೆಯ ಉದ್ದೇಶವನ್ನು ಹೊಂದಿರದ ಒಬ್ಬ ವ್ಯಕ್ತಿ ತಾನು ವಾಸವಾಗಿದ್ದ ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗಿ ವಿಶ್ರಾಂತಿಯ ಸಮಯವನ್ನು ವಿನೋದಕ್ಕಾಗಿ ಕಳೆಯುವವನು ಪ್ರವಾಸಿಗ ಎಂದು ಹೇಳಿದ್ದಾರೆ.

4. ಹರ್ಮನ್ ವಿ ಶುಲಾರ್ಡ್‌ರವರ ಪ್ರಕಾರ: ಒಂದು ಗೊತ್ತಾದ ಪ್ರದೇಶಕ್ಕೆ ವಿದೇಶಿಯರು ಹೋಗಿ ಅಲ್ಲಿ ತಾತ್ಕಾಲಿಕವಾಗಿ ವಾಸಿಸಿ ನಂತರ ಅಲ್ಲಲ್ಲಿ ತಿರುಗಾಡಿ ಬರುವ ಎಲ್ಲಾ ಪ್ರಕ್ರಿಯೆಗಳನ್ನು ಪ್ರವಾಸೋದ್ಯಮ ಎಂದು ಕರೆಯುವರು. 

5. 1937ರಲ್ಲಿ ಸಂಯುಕ್ತ ರಾಷ್ಟ್ರಸಂಘವು ಪ್ರವಾಸೋದ್ಯಮದ ವ್ಯಾಖ್ಯಾನವನ್ನು ಈ ರೀತಿಯಾಗಿ ಮಾಡಿತು. ಒಬ್ಬ ವ್ಯಕ್ತಿ ತಾನು ವಾಸಮಾಡಿದ ನಾಡನ್ನು ಹೊರತುಪಡಿಸಿ ಬೇರೆ ನಾಡಿನಲ್ಲಿ ಕನಿಷ್ಠ 24 ಗಂಟೆಗಿಂತಲೂ ಅಧಿಕ ಸಮಯದವರೆಗೆ ಪ್ರಯಾಣಿಸಿದರೆ ಅದು ಅವನನ್ನು ಪ್ರವಾಸಿಗ ಎಂದು ಕರೆಯುವರು.

6. ಡಾ|| ಜಿವಾದಿನ್‌ ಜೋವಿಯಾಕೆ ಸಾಂಸ್ಕೃತಿಕ ಅಗತ್ಯಗಳನ್ನು ಈಡೇರಿಸಿಕೊಳ್ಳಲು ವಿಹಾರ ಮತ್ತು ವಿರಾಮದಂತ ಸಾಮಾಜಿಕ ಚಲನೆಯನ್ನು ಪ್ರವಾಸೋದ್ಯಮ ಎಂದು ಕರೆಯುವರು.

7. ಸಿ.ಪಿ ಕೂಪರ್‌ರವರ ಪ್ರಕಾರ: ಪ್ರವಾಸಿಗನು ತನ್ನ ಮೂಲ ವಾಸ ಸ್ಥಳದಿಂದ ಗಮ್ಯ ಸ್ಥಳಗಳಿಗೆ ತಾತ್ಕಾಲಿಕವಾಗಿ ಹೋಗಿ ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿದರೆ ಅದನ್ನು ಪ್ರವಾಸೋದ್ಯಮ ಎನ್ನುವರು.

8. ರಾಬಿನ್ ಸನ್ ಹೇಳಿದಂತೆ: ಬಹು ಆಕರ್ಷಕವಾದ ಮತ್ತು ಕಡಿಮೆ ಖರ್ಚಿನ ಹಾಗೂ ವಿಶೇಷ ಸೌಲಭ್ಯಗಳ ಭೌಗೋಳಿಕ ಸುಂದರವಾದ ಸ್ಥಳಗಳಿಗೆ ಜನರು ಮನಸೋತು ಹೋಗುವುದನ್ನು ಪ್ರವಾಸೋದ್ಯಮ ಎಂದು ಕರೆಯುವರು.

9. ವಿಶ್ವಸಂಸ್ಥೆಯ ಪ್ರಕಾರ ವೃತ್ತಿ ಸಂಭಾವನೆಯ ಕಾರಣಕ್ಕಾಗಿ ಒಬ್ಬ ವ್ಯಕ್ತಿ ಯಾವುದೇ ಪ್ರದೇಶಕ್ಕೆ ಭೇಟಿ ನೀಡದೆ. ತನ್ನ ಸ್ವಸ್ಥಳದಿಂದ ಅನ್ಯ ಸ್ಥಳಕ್ಕೆ ತಾತ್ಕಾಲಿಕವಾಗಿ ಹೋಗಿ ಬರುವುದನ್ನು ಪ್ರವಾಸೋದ್ಯಮ ಎಂದು ಕರೆಯಲಾಗುತ್ತದೆ. 

10. WTO ದ ಪ್ರಕಾರ ವ್ಯಕ್ತಿಯೊಬ್ಬನು ವಿರಾಮ ವ್ಯಾಪಾರ ಹಾಗೂ ಇನ್ನಿತರ ಉದ್ದೇಶಗಳಿಗಾಗಿ ಒಂದು ವರ್ಷದ ಒಳಗೆ ತನ್ನ ವಾಸ ಸ್ಥಳದಿಂದ ಹೋಗಿ ಬೇರೆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ತಂಗಿ ಬರುವ ಚಟುವಟಿಕೆಗಳನ್ನು ಪ್ರವಾಸೋದ್ಯಮ ಎಂದು ಕರೆಯುವರು. 

11. ಕಾರ್ಡಿಪ್‌ ಪ್ರಕಾರ: ವ್ಯಕ್ತಿಯೊಬ್ಬನು ತಾನು ವಾಸಮಾಡುವ ಸ್ಥಳದಿಂದ ಹೊರಗೆ ಹೋಗಿ ತನಗೆ ಮನಸ್ಸಿಗೆ ಬಂದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಬರುವುದನ್ನು ಪ್ರವಾಸೋದ್ಯಮ ಎಂದು ಕರೆದಿದ್ದಾರೆ. 

12. ಪ್ರವಾಸಿಗರ ಅಗತ್ಯಗಳನ್ನು ಪೂರೈಸುವ ವಸ್ತುಗಳು ಹಾಗೂ ಸೇವೆಗಳ ಮೂಲಕ ಆದಾಯ ಹಾಗೂ ಉದ್ಯೋಗವನ್ನು ಸೃಷ್ಟಿಸುವ ಕೈಗಾರಿಕೆಯೆ ಪ್ರವಾಸೋದ್ಯಮವಾಗಿದೆ.

 ಈ ಕೆಳಕಂಡ ವ್ಯಕ್ತಿಯು ಪ್ರವಾಸಿಗನಾಗಲಾರನು:

  1. ಪ್ರವಾಸಿಗನು 24 ಗಂಟೆಗಳ ಕಡಿಮೆ ಕಾಲ ಪ್ರಯಾಣಿಸಿ ಒಂದು ಕಡೆಯಲ್ಲಿ ವಾಸವಿದ್ದು ಮರಳಿ ಸ್ವಸ್ಥಾನಕ್ಕೆ ಬರುತ್ತಾನೆ.
  2. ಹಣ ಗಳಿಗೆಗಾಗಿ, ವ್ಯಾಪಾರ ಹಾಗೂ ವೃತ್ತಿ ಕಾರಣಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಿ ಬರುವವರು ಪ್ರವಾಸಿ ಎನಿಸಿಕೊಳ್ಳುವುದಿಲ್ಲ.
  3. ಸರ್ಕಾರಿ ಉದ್ಯೋಗದಿಂದ ನಿವೃತ್ತನಾಗಿ ವಿಶ್ರಾಂತಿಯನ್ನು ಪಡೆಯಲು ಹೋಗುವವರನ್ನು ಪ್ರವಾಸಿಗರು ಎಂದು ಕರೆಯಲಾಗದು.
  4. ಬೇರೆ ದೇಶಗಳಿಗೆ ಶಾಶ್ವತವಾಗಿ ನೆಲೆನಿಲ್ಲಲು ಪ್ರವಾಸ ಕೈಗೊಳ್ಳುವವರನ್ನು ಪ್ರವಾಸಿಗರು ಎಂದು ಪರಿಗಣಿಸಲಾಗುವುದಿಲ್ಲ.
  5. ವಿಹಾರಾರ್ಥಿಗಳು ಹಾಗೂ ವಲಸೆಗಾರರನ್ನು ಪ್ರವಾಸಿಗರು ಎಂದು ಹೇಳಲು ಸಾಧ್ಯವಿಲ್ಲ.
  6. ಹಂಗಾಮಿ ಅತಿಥಿಗಳು, ನೌಕೆಗಳಲ್ಲಿ ಸಂಚರಿಸುವವರು ಹಾಗೂ ರೈಲುಗಳಲ್ಲಿ ತಂಗುವವರನ್ನು ಪ್ರವಾಸಿಗರು ಎಂದು ಕರೆಯಲಾಗುವುದಿಲ್ಲ.
  7. ಸಂಶೋಧನೆ, ಶಿಕ್ಷಣ ಹಾಗೂ ಕರಾರಿನ ಮೇಲೆ ನೌಕರಿ ಮಾಡಲು ದೀರ್ಘಕಾಲದವರೆಗೆ ಬರುವ ಪ್ರವಾಸಿಗರನ್ನು ಪ್ರವಾಸಿಗರನ್ನಾಗಿ ಪರಿಗಣಿಸಲು ಬರುವುದಿಲ್ಲ.

ವಿದೇಶಿ ಪ್ರವಾಸಿಗರು

ಮನರಂಜನೆ, ರಜಾ ದಿನಗಳಲ್ಲಿ ಆನಂದದಿಂದ ಕಾಲಕಳೆಯುವಿಕೆ, ಸಂಶೋಧನೆ, ಅಧ್ಯಯನ, ಶಿಕ್ಷಣ, ಆರೋಗ್ಯ, ವಿರಾಮ, ಕೌಟುಂಬಿಕ ಸಮಾವೇಶ, ಕ್ರೀಡೆ, ಧಾರ್ಮಿಕ ಮೊದಲಾದ ಕಾರಣಗಳಿಗಾಗಿ ಪಾಸ್‌ಪೋರ್ಟ್‌ನ್ನು ಹೊಂದಿ ತನ್ನ ವಾಸಸ್ಥಳದಿಂದ ಅಥವಾ ದೇಶದಿಂದ ಹೊರಗೆ ಕನಿಷ್ಠ 24 ಗಂಟೆಗಳ ಕಾಲ ತಂಗುವವರನ್ನು ವಿದೇಶಿ ಪ್ರವಾಸಿಗರು ಎಂದು ಕರೆಯಬಹುದಾಗಿದೆ. ಆದರೆ ಭಾರತವು ಈ ಕೆಳಕಂಡವರನ್ನು ವಿದೇಶಿ ಪ್ರವಾಸಿಗರೆಂದು ಪರಿಗಣಿಸುವುದಿಲ್ಲ.

  1. ಗಡಿ ಭಾಗಗಳಲ್ಲಿ ವಾಸಮಾಡುವವರು.
  2. ಬೇರೆ ದೇಶಗಳಿಂದ ಭಾರತಕ್ಕೆ ಸಂಬಳಕ್ಕಾಗಿ ಕರಾರಿನ ಮೇಲೆ ಬರುವವರು.
  3. ಶಾಲಾ ವಿದ್ಯಾರ್ಥಿಗಳು ಹಾಗೂ ಈ ದೇಶದಲ್ಲಿ ವಾಸ ಮಾಡಲು ಇಚ್ಛಿಸಿ ಬರುವವರು.
  4.  ವಿಹಾರಾರ್ಥಿಗಳಾಗಿ ಬಂದು ಕನಿಷ್ಠ 24 ಗಂಟೆಗಿಂತಲೂ ಕಡಿಮೆ ಅವಧಿಯವರೆಗೆ ತಂಗುವವರು ಒಂದು ಕಡೆ ಶಾಶ್ವತವಾಗಿ ನೆಲೆ ನಿಲ್ಲದ ಒಂದು ದೇಶದವರು. ಭಾರತದ ಮೂಲಕ ಹಾಯ್ದು ಹೋಗುವ ಸಂದರ್ಶಕರು ಪ್ರವಾಸಿಗರು ಎನಿಸಿಕೊಳ್ಳುವುದಿಲ್ಲ.
  5.  ಒಬ್ಬ ವ್ಯಕ್ತಿ 24 ಗಂಟೆಗಿಂತಲೂ ಹೆಚ್ಚುಕಾಲ ಸಂಚರಿಸಿ ಆತ ಎಲ್ಲಿಯೂ ತಂಗದೆ ಒಂದು ದೇಶದ ಮೂಲಕ ಹಾಯ್ದು ಹೋದರೆ ಅವನು ಪ್ರವಾಸಿಗನಲ್ಲ.
  6. ಬಾಂಗ್ಲಾದೇಶ ಹಾಗೂ ಪಾಕಿಸ್ಥಾನಿಯ ರಾಷ್ಟ್ರೀಯರು.
  7.  ಗಡಿಭಾಗದಲ್ಲಿ ನೆಲೆಸಿದ್ದವರು ಬೇರೆ ದೇಶದಲ್ಲಿ ಕೆಲಸ ನಿರ್ವಹಿಸುವಂಥವರು ಪ್ರವಾಸಿಗರು ಆಗಲಾರರು.
  8.  ರಸ್ತೆಯ ಮೂಲಕ ಭಾರತಕ್ಕೆ ಬರುವ ನೇಪಾಳಿಯರು ಹಾಗೂ ಭೂತಾನಿಗಳು ಪ್ರವಾಸಿಗರು ಆಗಲಾರರು.

 

ಶಿಲಾಯುಗದ ಹಂತಗಳು

ಶಿಲಾಯುಗದ ಹಂತಗಳು

1. ಪ್ರಾಚೀನ ಹಳೆಯ ಶಿಲಾಯುಗ (Lower Paleolithic):

ಈ ಹಂತವು ಸುಮಾರು 2.5 ಮಿಲಿಯನ್ ವರ್ಷಗಳ ಹಿಂದಿನಿಂದ 300,000 ವರ್ಷಗಳವರೆಗೆ ವಿಸ್ತರಿಸಿದೆ. ಈ ಕಾಲದಲ್ಲಿ ಮಾನವರು ಹ್ಯಾಂಡ್‌ಆಕ್ಸ್‌, ಕ್ಲೀವರ್‌, ಚಾಪರ್‌ ಮುಂತಾದ ಕಲ್ಲಿನ ಉಪಕರಣಗಳನ್ನು ಬಳಸಿದರು.

ಭಾರತದಲ್ಲಿ ಪುರಾತತ್ತ್ವ ಸಂಶೋಧನೆಗೆ ಮಹತ್ವದ ಆರಂಭವನ್ನು Robert Bruce Foote ನೀಡಿದರು. ಅವರು 1862 ಮೇ 31 ರಂದು Pallavaram(ಚೆನ್ನೈ ಸಮೀಪ)ದಲ್ಲಿ ಮೊದಲ ಕಲ್ಲು ಉಪಕರಣಗಳನ್ನು ಕಂಡುಹಿಡಿದರು. ಈ ಉಪಕರಣಗಳು ಕ್ವಾರ್ಟ್ಜೈಟ್ ಕಲ್ಲಿನಿಂದ ತಯಾರಿಸಲ್ಪಟ್ಟಿದ್ದವು.

2. ಪ್ರಾಚೀನ ಮಧ್ಯ ಶಿಲಾಯುಗ (Middle Paleolithic) :

ಈ ಹಂತವು ಸುಮಾರು 300,000 ರಿಂದ 40,000 ವರ್ಷಗಳವರೆಗೆ ವಿಸ್ತರಿಸಿದೆ. ಈ ಕಾಲದಲ್ಲಿ ಫ್ಲೇಕ್ಸ್‌, ಸ್ಕ್ರೇಪರ್‌ಗಳು ಮತ್ತು ಪಾಯಿಂಟ್‌ಗಳಂತಹ ಸುಧಾರಿತ ಉಪಕರಣಗಳು ಕಂಡುಬರುತ್ತವೆ.

ಭಾರತದಲ್ಲಿ ಈ ಹಂತವನ್ನು 1950ರಲ್ಲಿ H. D. Sankalia ಅವರು ಮಹಾರಾಷ್ಟ್ರದ Pravara River ದಡದಲ್ಲಿ ಕಂಡುಹಿಡಿದರು. ಈ ಸಂಶೋಧನೆ ಭಾರತೀಯ ಇತಿಹಾಸದ ಅಧ್ಯಯನದಲ್ಲಿ ಹೊಸ ತಿರುವು ತಂದಿತು.

3. ಪ್ರಾಚೀನ ಅಂತಿಮ ಶಿಲಾಯುಗ (Upper Paleolithic):

ಈ ಹಂತವು ಸುಮಾರು 40,000 ರಿಂದ 10,000 ವರ್ಷಗಳವರೆಗೆ ವಿಸ್ತರಿಸಿದೆ. ಈ ಕಾಲದಲ್ಲಿ ಸೂಕ್ಷ್ಮವಾದ ಮತ್ತು ಸುಂದರವಾಗಿ ತಯಾರಿಸಲಾದ ಕಲ್ಲಿನ ಉಪಕರಣಗಳು ಕಂಡುಬರುತ್ತವೆ.

1964ರಲ್ಲಿ M. L. K. Murthy ಅವರು ಆಂಧ್ರಪ್ರದೇಶದ Rallakalava Valley ನಲ್ಲಿ ಈ ಹಂತಕ್ಕೆ ಸೇರಿದ ಉಪಕರಣಗಳನ್ನು ಕಂಡುಹಿಡಿದರು.

4. ಮಧ್ಯಶಿಲಾ ಯುಗ (Mesolithic) :

ಈ ಯುಗವು ಸುಮಾರು ಕ್ರಿ.ಪೂ. 10,000 ರಿಂದ 6,000ರವರೆಗೆ ವಿಸ್ತರಿಸಿದೆ. ಈ ಕಾಲದ ಪ್ರಮುಖ ಲಕ್ಷಣವೆಂದರೆ ಮೈಕ್ರೊಲಿಥ್‌ಗಳು (ಸಣ್ಣ ಕಲ್ಲು ಉಪಕರಣಗಳು).

ಈ ಕಾಲದಲ್ಲಿ:

  • ಮಾನವರು ಅರ್ಧ ಶಾಶ್ವತ ವಾಸಸ್ಥಳಗಳನ್ನು ನಿರ್ಮಿಸಿದರು
  • ಪ್ರಾಣಿಗಳನ್ನು ಸಾಕುವ ಪ್ರಾರಂಭವಾಯಿತು
  • ಗುಹಾಚಿತ್ರಗಳಂತಹ ಕಲಾತ್ಮಕ ಚಟುವಟಿಕೆಗಳು ಆರಂಭವಾದವು

5. ನವ ಶಿಲಾಯುಗ ಮತ್ತು ಚಾಲ್ಕೋಲಿಥಿಕ್‌ ಯುಗ

ನವಶಿಲಾ ಯುಗವು ಮಾನವ ಇತಿಹಾಸದಲ್ಲಿ ಮಹತ್ವದ ತಿರುವಾಗಿದೆ. ಈ ಕಾಲದಲ್ಲಿ:

  • ಕೃಷಿಯ ಅಭಿವೃದ್ಧಿ
  • ಶಾಶ್ವತ ವಾಸಸ್ಥಳಗಳು
  • ಪಾಲಿಶ್ ಮಾಡಿದ ಕಲ್ಲು ಉಪಕರಣಗಳು
  • ಮಣ್ಣಿನ ಪಾತ್ರೆಗಳು

ನಂತರದ ಚಾಲ್ಕೊಲಿಥಿಕ್ ಯುಗದಲ್ಲಿ ಕಬ್ಬಿಣಕ್ಕಿಂತ ಮುಂಚೆ ತಾಮ್ರ ಉಪಕರಣಗಳ ಬಳಕೆ ಪ್ರಾರಂಭವಾಯಿತು.

6. ಕಂಚಿನ ಯುಗ ಮತ್ತು ಕಬ್ಬಿಣ ಯುಗ :

ಕಂಚಿನ ಯುಗದಲ್ಲಿ ಕಂಚಿನಿಂದ (ತಾಮ್ರ + ಟಿನ್) ಉಪಕರಣಗಳನ್ನು ತಯಾರಿಸಲಾಯಿತು. ಈ ಕಾಲದಲ್ಲಿ ನಗರ ಸಂಸ್ಕೃತಿಗಳು ಬೆಳವಣಿಗೆ ಕಂಡವು.

ಕಬ್ಬಿಣ ಯುಗದಲ್ಲಿ ಕಬ್ಬಿಣ ಉಪಕರಣಗಳ ಬಳಕೆ ಹೆಚ್ಚಾಯಿತು. ಕರ್ನಾಟಕದಲ್ಲಿ ಈ ಯುಗವನ್ನು ಮೆಗಾಲಿಥಿಕ್ ಸಂಸ್ಕೃತಿಯೊಂದಿಗೆ ಸಂಬಂಧಿಸಲಾಗುತ್ತದೆ.

ಭಾರತ ಮತ್ತು ಕರ್ನಾಟಕದಲ್ಲಿ ಶಿಲಾಯುಗದ ಸಂಶೋಧನೆ

ಭಾರತದಲ್ಲಿ ಶಿಲಾಯುಗದ ಸಂಶೋಧನೆಗೆ Robert Bruce Foote ಪ್ರಮುಖ ಕೊಡುಗೆ ನೀಡಿದ್ದಾರೆ.

ಕರ್ನಾಟಕದಲ್ಲಿ:

  • R. V. Joshi — ಮಲಪ್ರಭಾ ನದೀ ತೀರದಲ್ಲಿ ಸಂಶೋಧನೆ
  • Sampath Iyengar — ತುಮಕೂರು ಜಿಲ್ಲೆಯ ಕಿಬ್ಬನಹಳ್ಳಿ
  • S. Seshadri — ಮಂಡ್ಯ ಜಿಲ್ಲೆಯ Kaveri River ತೀರದಲ್ಲಿ ಆವಿಷ್ಕಾರ
  • Paddayya — ಹುಣಸಗಿ ಮತ್ತು ಸಾಲವಡಗಿ ಪ್ರದೇಶಗಳಲ್ಲಿ ಅಧ್ಯಯನ

ಇದಲ್ಲದೆ, ಬಾದಾಮಿ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಮತ್ತು ಚಿತ್ರದುರ್ಗ ಪ್ರದೇಶಗಳಲ್ಲಿ ಶಿಲಾಯುಗದ ಅವಶೇಷಗಳು ಕಂಡುಬಂದಿವೆ.

ಉಪಸಂಹಾರ

ಶಿಲಾ ಯುಗದ ಅಧ್ಯಯನವು ಮಾನವನ ಅಭಿವೃದ್ಧಿ, ತಂತ್ರಜ್ಞಾನ ಮತ್ತು ಸಮಾಜದ ರೂಪುಗೊಳಿಸುವಿಕೆಯನ್ನು ತಿಳಿಯಲು ಬಹಳ ಮುಖ್ಯವಾಗಿದೆ. ಸರಳ ಕಲ್ಲು ಉಪಕರಣಗಳಿಂದ ಪ್ರಾರಂಭಿಸಿ, ಲೋಹ ಉಪಕರಣಗಳ ಬಳಕೆಯವರೆಗೆ ಮಾನವನು ತನ್ನ ಜೀವನವನ್ನು ಕ್ರಮೇಣ ಸುಧಾರಿಸಿಕೊಂಡಿದ್ದಾನೆ.

ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ನಡೆದ ಪುರಾತತ್ತ್ವ ಸಂಶೋಧನೆಗಳು ಜಗತ್ತಿನ ಇತಿಹಾಸ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿವೆ.

ಪುರಾತತ್ವ ಶಾಸ್ತ್ರದ ವಿಧಗಳು (Kinds of Archaealogy)

ಪುರಾತತ್ವ ಶಾಸ್ತ್ರದ ವಿಧಗಳು (Kinds of Archaealogy)

ಪುರಾತನ ಅವಶೇಷಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವುದನ್ನು ಪುರಾತತ್ವಶಾಸ್ತ್ರ ಎಂದು ಕರೆಯಲಾಗಿದೆ. ಭೂಮಿಯ ಮೇಲೆ ವಾಸ ಮಾಡಿದ ಮಾನವ ಸಮಾಜ ತಾನು ಬಾಳಿ ಬದುಕಿದ ಸಮಾಜದಲ್ಲಿ ತಾನು ಉಪಯೋಗಿಸುತ್ತಿದ್ದ ದಿನನಿತ್ಯದ ವಸ್ತುಗಳು, ನಂಬಿಕೆಗಳು, ಸಾಮಾಜಿಕ ಕುರುಹುಗಳು, ವಸ್ತ್ರಗಳು, ಆಭರಣಗಳು, ಸಲಕರಣೆಗಳು ಹಾಗೂ ಆಯುಧಗಳನ್ನು ಬಿಟ್ಟು ಹೋಗುತ್ತಾನೆ. ಈತ ಬಿಟ್ಟು ಹೋಗಿದ್ದ ಕುರುಹುಗಳು ಸ್ಪಷ್ಟ ಹಾಗೂ ಪರಿಪೂರ್ಣವಾಗಿರುತ್ತವೆ ಎಂದು ಹೇಳಲು ಬರುವುದಿಲ್ಲ. ಆದರೂ ಲಿಖಿತ ಆಧಾರಗಳು ಇಲ್ಲದಿದ್ದಾಗಲೂ ಸಹ ಕೆಲವು ವಿಶಿಷ್ಟ ಅಧ್ಯಯನಗಳ ವಿಧಾನದಿಂದ ಈ ಕುರುಹುಗಳನ್ನು ಒರೆಗಲ್ಲಿಗೆ ಹಚ್ಚಿ ಆಯಾ ಸಮಾಜದ ಸಂಸ್ಕೃತಿ ವಿವರಗಳನ್ನು ಅಸ್ಪಷ್ಟವಾಗಿ ಚಿತ್ರಿಸಲು ಸಾಧ್ಯ ಎಂಬ ಸಂಗತಿಗಳನ್ನು ಪುರಾತತ್ವಶಾಸ್ತ್ರ ಮನವರಿಕೆ ಮಾಡಿಕೊಡುತ್ತದೆ. ಪುರಾತತ್ವಶಾಸ್ತ್ರವು ಪ್ರಮುಖವಾಗಿ ಎರಡು ಭಾಗಗಳನ್ನು ಒಳಗೊಂಡಿದೆ. ಅವುಗಳೆಂದರೆ.

  1. ಜನಾಂಗ ವಿವರಣ ಪುರಾತತ್ವಶಾಸ್ತ್ರ
  2. ಸಮುದ್ರ ತಳದ ಪುರಾತತ್ವಶಾಸ್ತ್ರ

1. ಜನಾಂಗ ವಿವರಣ ಪುರಾತತ್ವ ಶಾಸ್ತ್ರ (Ethno Archaeology): ಜನಾಂಗ ವಿವರಣ ಪುರಾತತ್ವಶಾಸ್ತ್ರವು ಭಾರತದಲ್ಲಿ ಇತ್ತೀಚಿಗೆ ಹೆಚ್ಚು ಪ್ರಚಲಿತವಾಗುತ್ತಿದೆ. ಔದ್ಯೋಗಿಕ ಕ್ರಾಂತಿಯ ನಂತರ ಪ್ರಗತಿಯ ಪ್ರಭಾವಕ್ಕೆ ಸಿಲುಕಿ ನಲುಗದೆ ಸಂಪ್ರದಾಯ ಹಾಗೂ ಸಂಸ್ಕೃತಿಗಳನ್ನು ಶುದ್ಧವಾಗಿ ಉಳಿಸಿಕೊಂಡು ಬಂದಿರುವ ಆದಿವಾಸಿ ಜನಾಂಗದ ಮತ್ತು ವಲಸೆ ಜನಾಂಗಗಳ ಕುರಿತು ಅಧ್ಯಯನ ಮಾಡುವುದು ಪುರಾತತ್ವ ಶಾಸ್ತ್ರದ ಪ್ರಮುಖ ಗುರಿಯಾಗಿದೆ. ಹೀಗಾಗಿ ಪುರಾತತ್ವ ಅಧ್ಯಯನದಿಂದ ಗುಡ್ಡಗಾಡು ಜನರ ನಿಜವಾದ ಸಂಸ್ಕೃತಿಯ ದಾಖಲೆಗಳು ಬೆಳಕಿಗೆ ಬಂದಿವೆ. ಆದಿವಾಸಿ ಜನರು ಪ್ರಾಣಿಗಳನ್ನು ಬೇಟೆಯಾಡುವ ರೀತಿ, ವಾಸಸ್ಥಳಕ್ಕೆ ಗುಡಿಸಲುಗಳನ್ನು ಕಟ್ಟಿಕೊಳ್ಳುವ ಪರಿ, ಅವುಗಳ ಸಾಮಾಜಿಕ ರಚನೆ ಮೊದಲಾದವುಗಳನ್ನು ಅಧ್ಯಯನದಿಂದ ತಿಳಿದುಕೊಂಡು ಪುರಾತತ್ವ ಅವಶೇಷಗಳು ನೀಡುವ ಚಿತ್ರಗಳನ್ನು ಬಳಸಿಕೊಂಡು ನಿಖರವಾದ ಮಾಹಿತಿಯನ್ನು ವರದಿಯ ಮೂಲಕ ಹೊರಹಾಕುವುದು ಪುರಾತತ್ವ ಶಾಸ್ತ್ರದ ಮೊದಲ ಆದ್ಯತೆಯಾಗಿದೆ. ಡೆಕ್ಕನ್ ಕಾಲೇಜಿನ ಸಿಬ್ಬಂದಿಯು ಆಹಾರ್, ನಾವಾತೋಲಿ ಹಾಗೂ ತೆಕ್ಕಲಕೋಟೆ ಸ್ಥಳಗಳನ್ನು ಉತ್ಖನನ ಮಾಡುವುದರ ಜೊತೆಗೆ ಅದರ ಸುತ್ತಮುತ್ತ ವಾಸಿಸುತ್ತಿದ್ದ ಜನರ ಅಧ್ಯಯನವನ್ನು ಮಾಡಿದರು. ಮಧ್ಯಪ್ರದೇಶದ ಬಸ್ತರ ಪ್ರದೇಶದ ಜನಾಂಗಗಳು ಮತ್ತು ಒಡಿಸ್ಸಾದ ಬೋಡೋ ಜನಾಂಗಗಳ ಹಾಗೂ ಆಂಧ್ರದ ಯಾನಾಡಿ ಜನಾಂಗದ ಜೀವನ ಶೈಲಿಯ ಕುರಿತು ಸಹ ಅಧ್ಯಯನವನ್ನು ಮಾಡಲಾಗಿದೆ.

2. ಜಲತಳ ಪುರಾತತ್ವ ಶಾಸ್ತ್ರ(Marine Archaeology): ಜಲತಳ ಅಥವಾ ಸಮುದ್ರತಳ ಪುರಾತತ್ವಶಾಸ್ತ್ರ ಎಂದು ಕರೆಯಲಾಗುವ ಶಾಸ್ತ್ರವು ಸಮುದ್ರ ಹಾಗೂ ಸರೋವರಗಳ ತಳಭಾಗದಲ್ಲಿ ಕಂಡುಬರುವ ಪ್ರಾಚೀನ ನೆಲೆಗಳು ಹಾಗೂ ಮುಳುಗಡೆ ಹೊಂದಿರುವ ಹಡಗುಗಳನ್ನು ಗುರುತಿಸಿ ಅಧ್ಯಯನ ಮಾಡುತ್ತದೆ. ಜಲತಳ ಅಧ್ಯಯನವು ಪ್ರಾಚ್ಯವಸ್ತು ಅಧ್ಯಯನಕ್ಕಿಂತ ಭಿನ್ನವಾಗಿದೆ. ಇದು ಜಲತಳದ ನೆಲೆಯನ್ನು ಗುರುತಿಸುವ, ಉತ್ಖನನ ಮಾಡುವ ಹಾಗೂ ಪ್ರಾಚೀನ ಅವಶೇಷಗಳನ್ನು ದಾಖಲು ಮಾಡುವ ವಿಶಿಷ್ಟ ತಂತ್ರಗಳನ್ನು ʻʻ ಸ್ಕ್ಯೂಬಾ ಡೈವಿಂಗ್‌ʼʼ ಎಂಬ ತಂತ್ರಜ್ಞಾನದಿಂದ ರೂಪಿಸಿಕೊಳ್ಳಲಾಗಿದೆ. ಜಮೈಕಾದ ಪೋರ್ಟ್ ರಾಯಲ್ ಉತ್ಖನನಗಳು, ಉತ್ತರ ಸೈಪ್ರಸ್‌ನ ಕೈರೇನಿಯಾ ಹಡಗಿನ ಪುನಾರಚನೆ ಮುಂತಾದ ಸಾಧನೆಗಳು ಸ್ಕ್ಯೂಬಾ ಡೈವಿಂಗ್‌ ತಂತ್ರಜ್ಞಾನದಿಂದಲೇ ಪತ್ತೆ ಹಚ್ಚಲಾಯಿತು.

ಭಾರತದಲ್ಲಿಯೂ ಸಹ ಜಲತಳ ಪುರಾತತ್ವಶಾಸ್ತ್ರ ಇತ್ತೀಚೆಗೆ ಬೆಳಕಿಗೆ ಬಂದು ಅದರಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಇದಕ್ಕಾಗಿ ಗೋವಾದಲ್ಲಿ ʻʻಭಾರತೀಯ ಸಾಗರ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸಲಾಗಿದೆʼʼ. ಇದು ʻʻಸಾಗರ ಪುರಾತತ್ವ ಘಟಕದ ಮೂಲಕ ಎಸ್‌. ಆರ್‌. ರಾವ್‌ ಅವರ ಅಧ್ಯಕ್ಷತೆಯಲ್ಲಿ ಭಾರತದ ಕರಾವಳಿ ಗುಂಟ ಸಂಶೋಧನೆ ಮಾಡಿ ಸುಮಾರು 200 ಹಡಗುಗಳು ಸಮುದ್ರದಲ್ಲಿ ಮುಳುಗಡೆಯಾದ ಕುರಿತು ನಿಖರ ಮಾಹಿತಿಗಳನ್ನು ಕಲೆ ಹಾಕಲಾಯಿತು. ನಂತರ ಗುಜರಾತಿನ ಕರಾವಳಿಯಲ್ಲಿ ದ್ವಾರಕಾ ನಗರದ ಅವಶೇಷಗಳನ್ನು ಗುರುತಿಸಲಾಗಿದೆ. 1983ರಲ್ಲಿ ಸ್ಕ್ಯೂಬಾ ಡೈವಿಂಗ್‌ ಮೂಲಕ ದ್ವಾರಕ ಹಾಗೂ ಬೇಟ್‌ ದ್ವಾರಕಗಳಲ್ಲಿ ಜಲತಳ ಅನ್ವೇಷಣೆ ಮಾಡಲು ಅರಬ್ಬಿ ಸಮುದ್ರದಲ್ಲಿ ಸುಮಾರು 10ಮೀಟರ್ ಆಳದಲ್ಲಿ ಇಳಿದು ಕಟ್ಟಡಗಳು ಹಾಗೂ ಕೋಟೆ ಕೊತ್ತಲುಗಳನ್ನು ಕಂಡು ಹಿಡಿಯಲಾಯಿತು. ಪ್ರಾಚೀನ ಕಾಲದ ತ್ರಿಕೋನಾಕಾರದ ಕಲ್ಲಿನ ಲಂಗರುಗಳು ಇಲ್ಲಿ ಪತ್ತೆಯಾಗಿವೆ. ಇವುಗಳು ಕ್ರಿಸ್ತಪೂರ್ವ 14 ನೇ ಶತಮಾನದ ಸೈಪ್ರಸ್‌ ಹಾಗೂ ಸಿರಿಯಾದ ಲಂಗರುಗಳನ್ನು ಹೋಲುತ್ತವೆ. ಬೇಟ್‌ ದ್ವಾರಕಾದಲ್ಲಿ ಸಿಕ್ಕ ಉತ್ತರ ಹರಪ್ಪಾ ಕಾಲದ ಮುದ್ರೆಯ ಮೇಲೆ ಮೂರು ತಲೆಯ ಪ್ರಾಣಿಯ ಚಿತ್ರವಿದೆ. ಇದು ಪರ್ಶಿಯನ್‌ ಕೊಲ್ಲಿಯ ಬೆಹ್ರನ್‌ನಲ್ಲಿ   ದೊರಕಿರುವ ಮುದ್ರೆಗಳನ್ನು ಹೋಲುತ್ತದೆ. ಇಲ್ಲಿನ ಸಾಗರ ತಳದಲ್ಲಿ ದೊರೆತ ಮಣ್ಣಿನ ಪಾತ್ರೆಯ ಮೇಲೆ ವಿಕಸಿತ ಹರಪ್ಪ ನೆಲೆಯ ಲಿಪಿಯ ಚಿತ್ರವಿದೆ. ಈ ಎಲ್ಲಾ ಪುರಾತತ್ವ ವಸ್ತುಗಳು ಬೇಟ್‌ ದ್ವಾರಕಾ ನೆಲೆ ಕ್ರಿಸ್ತಪೂರ್ವ 1500 ರಷ್ಟು ಹಿಂದೆ ಅಸ್ತಿತ್ವದಲ್ಲಿದ್ದು ತದನಂತರ ಸಮುದ್ರ ಪಾತಳಿಯ ಹೆಚ್ಚಳದಿಂದ ಮುಳುಗಡೆಯಾಗಿರ ಬಹುದೆಂದು ಉಲ್ಲೇಖಿಸಲಾಗಿದೆ.

ಇದೇ ರೀತಿ ತಮಿಳುನಾಡು ಕಾವೇರಿಪಟ್ಲಂ ಪ್ರದೇಶದಲ್ಲಿ ಅನ್ವೇಷಣೆ ಮಾಡಿ ಅನೇಕ ಅವಶೇಷಗಳನ್ನು ಹೊರ ತಗೆಯಲಾಗಿದೆ.

ಆಳವಾಗಿಲ್ಲದ ಸಾಗರ ತಳದ ನೆಲೆಯನ್ನು ವ್ಯೋಮ್‌ ಛಾಯಾಚಿತ್ರದ ಸಹಾಯದಿಂದ ಕಂಡುಹಿಡಿಯ ಬಹುದಾಗಿದೆ. ಒಂದು ವೇಳೆ ಅಲ್ಲಿ ಹಡಗುಗಳು ಮುಳಗಡೆಯಾದ ಕುರುಹುಗಳು ಇದ್ದರೆ ವ್ಯೋಮ ಛಾಯಾಚಿತ್ರ ಅದನ್ನು ಸೆರೆಹಿಡಿದು ವರದಿ ಮಾಡುತ್ತದೆ. ಸಾಗರದ ಆಳ ಹೆಚ್ಚಿದಂತೆ ವ್ಯೋಮ ಛಾಯಾಚಿತ್ರವು ಕೆಲಸ ಮಾಡಲಾರದು.

ಸಾಗರದ ಆಳದಲ್ಲಿ ಮುಳುಗಡೆಯಾಗಿರುವ ವಸ್ತುಗಳನ್ನು ಕಂಡುಹಿಡಿಯಲು ಪ್ರತಿಧ್ವನಿ ನಿನಾದಕ ಮತ್ತು ಆಕಾಸ್ಟಿಕ್‌ ವ್ಯವಸ್ಥೆ ಎಂಬ ಎರಡು ವೈಜ್ಞಾನಿಕ ಸಾಧನಗಳು ಸಹಕಾರಿಯಾಗಿವೆ. ಹಡಗು ಮುಳುಗಡೆಯಾದ ಸ್ಥಳದ ಮೇಲೆ ಈ ಉಪಕರಣ ಹಾಯ್ದು ಹೋಗುವಾಗ ನಿನಾದಕ ಹೊರಡಿಸುವ ಪ್ರತಿಧ್ವನಿಯಲ್ಲಿ ತೀವ್ರ ಹೆಚ್ಚಳ ಕಂಡು ಬರುತ್ತದೆ. ಇದರಿಂದ ಸಮುದ್ರ ತಳದಲ್ಲಿನ ಹಡಗುಗಳ ಅವಶೇಷಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ.

ಸಮುದ್ರದಲ್ಲಿ ಪೂರ್ತಿ ಮುಳುಗಿಹೋಗಿರುವ ವಸ್ತುಗಳನ್ನು ಗುರುತಿಸುವುದಕ್ಕೆ ʻʻ ಓರ್‌ ಪ್ರೊ ಫೈಲರ್‌ʼʼ ಎಂಬ ಉಪಕರಣವನ್ನು ಬಳಕೆ ಮಾಡಲಾಗುತ್ತದೆ. ಈ ಉಪಕರಣವು ಎಷ್ಟು ಆಳದಲ್ಲಿ ಬೇಕಾದರೂ ತೂರಿಕೊಳ್ಳಬಲ್ಲದು. ಸಮುದ್ರದಲ್ಲಿ ಇನ್ನೂ ಹೆಚ್ಚಿನ ಆಳದಲ್ಲಿ ಮುಳುಗಿರುವ ವಸ್ತುಗಳನ್ನು ಪತ್ತೆ ಹಚ್ಚಲು ʻʻ ಬೂಮರ್‌ ಹಾಗೂ ಸ್ವಾರ್ಕರ್‌” ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇವುಗಳು ತೀವ್ರವಾಗಿ ಶೋಧ ಕಾರ್ಯವನ್ನು ಮಾಡಿ ವಸ್ತುಗಳನ್ನು ಕಂಡು ಹಿಡಿಯುತ್ತವೆ.

ಹಾಗೆಯೇ ʻಸೈಡ್ ಸ್ಕ್ಯಾನ್ ಸೋನಾರ್ʼ ಎಂಬ ಉಪಕರಣವು ಸಮುದ್ರದ ತಳದಲ್ಲಿನ ವಸ್ತುಗಳ ಆಕೃತಿಗಳನ್ನು ಮತ್ತು ಅವುಗಳ ವಿಸ್ತಾರಗಳನ್ನು ಕಂಡುಹಿಡಿಯುವ ಪ್ರಮುಖ ಉಪಕರಣವಾಗಿದೆ. ಸರ್ವೇಕ್ಷಣ ಮಾಡುವ ಪಥದ ಎರಡೂ ಬದಿಗಳಲ್ಲಿನ ಲಕ್ಷಣಗಳನ್ನು ಸಹ ದಾಖಲು ಮಾಡುತ್ತದೆ. ಮುಳುಗಡೆಯಾಗಿರುವ ಹಡಗುಗಳು, ಲಂಗರುಗಳು ಹಾಗೂ ಕಟ್ಟಡ ರಚನೆಯ ಅವಶೇಷಗಳನ್ನು ಇದರ ಸಹಾಯದಿಂದ ದಾಖಲು ಮಾಡಿಕೊಳ್ಳಲಾಗುತ್ತದೆ.

    ಭಾರತೀಯ  ಪ್ರತಿಮಾಶಾಸ್ತ್ರ

    ಭಾರತೀಯ ಪ್ರತಿಮಾಶಾಸ್ತ್ರ

    ಹಿಂದೂ ಪ್ರತಿಮಾಶಾಸ್ತ್ರವು ಪೂಜೆ ಅಥವಾ ಆಚರಣೆಗಾಗಿ ಉದ್ದೇಶಿಸಲಾದ ಧಾರ್ಮಿಕ ಚಿತ್ರಗಳ (ಐಕಾನ್‌ಗಳು) ಅಧ್ಯಯನ ಮತ್ತು ವ್ಯಾಖ್ಯಾನವಾಗಿದೆ. ಇದನ್ನು ಭಾರತೀಯ ಸಂಪ್ರದಾಯದಲ್ಲಿ ಅರ್ಕಾ, ಬೇರಾ, ವಿಗ್ರಹ ಮತ್ತು ಪ್ರತಿಮಾ ಮುಂತಾದ ಪದಗಳಿಂದ ಸೂಚಿಸಲಾಗುತ್ತದೆ. ಇದು ಕಲಾತ್ಮಕ ಸಾಧನೆ ಮತ್ತು ವಿವಿಧ ಧಾರ್ಮಿಕ ಪಂಥಗಳ ವಿಕಾಸದ ಹಿಂದಿನ ಮಾನಸಿಕ ಅಂಶಗಳ ಸ್ಪಷ್ಟ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ.

    1. ಐತಿಹಾಸಿಕ ವಿಕಸನ ಮತ್ತು ಮೂಲ

    ಸಿಂಧೂ ಕಣಿವೆಯ ಬೇರುಗಳು: ಹಿಂದೂ ಪ್ರತಿಮಾಶಾಸ್ತ್ರದ ಆರಂಭಿಕ ಬೇರುಗಳು ಸಿಂಧೂ ಕಣಿವೆ ನಾಗರಿಕತೆಯಲ್ಲಿ ಕಂಡುಬರುತ್ತವೆ. ಮೊಹೆಂಜೊ-ದಾರೊದಂತಹ ಸ್ಥಳಗಳಲ್ಲಿ ಪತ್ತೆಯಾದ ಮುದ್ರೆಗಳು ಯೋಗ ಭಂಗಿಯಲ್ಲಿ ಕುಳಿತಿರುವ ಮೂರು ತಲೆಯ ಕೊಂಬಿನ ಆಕೃತಿಯನ್ನು ಚಿತ್ರಿಸುತ್ತವೆ. ಇದನ್ನು ವಿದ್ವಾಂಸರು ಶಿವ-ಪಶುಪತಿಯ ಮೂಲಮಾದರಿ ಎಂದು ವ್ಯಾಖ್ಯಾನಿಸುತ್ತಾರೆ.

    ವೈದಿಕ ಕಾಲದಲ್ಲಿ: ವಿದ್ವಾಂಸರಲ್ಲಿ ಆರಂಭಿಕ ವೈದಿಕ ಅವಧಿಯಲ್ಲಿ ಚಿತ್ರ-ಪೂಜೆಯ ಅಸ್ತಿತ್ವದ ಬಗ್ಗೆ ಚರ್ಚೆಗಳಿದ್ದವು. ಆರಂಭಿಕ ವೈದಿಕ ಧರ್ಮವು ಪ್ರಾಥಮಿಕವಾಗಿ ಅನಿಕೋನಿಕ್(ಸಾಂಕೇತಿಕವಾಗಿದ್ದು) ಆಗಿದ್ದು ಸೂರ್ಯನನ್ನು ಪ್ರತಿನಿಧಿಸಲು ಅಗ್ನಿ, ಬಲಿಪೀಠ ಅಥವಾ ಚಕ್ರದಂತಹ ಚಿಹ್ನೆಗಳನ್ನು ಬಳಸಿರುವುದನ್ನು ಕಾಣುತ್ತೇವೆ. ಋಗ್ವೇದದ ಕೆಲವು ಭಾಗಗಳು ಇಂದ್ರ, ರುದ್ರ ಮತ್ತು ವರುಣನಂತಹ ದೇವತೆಗಳ ಮಾನವರೂಪದ ವಿವರಣೆಗಳನ್ನು ಸಹ  ಒಳಗೊಂಡಿವೆ.

    ಭಕ್ತಿಯುಗದಲ್ಲಿ: ಭಕ್ತಿ ಚಳುವಳಿಯ ಹೊರಹೊಮ್ಮುವಿಕೆಯೊಂದಿಗೆ ಪ್ರತಿಮಾಶಾಸ್ತ್ರವು ಪ್ರವರ್ಧಮಾನಕ್ಕೆ ಬಂದಿತು. ಇದು ಧ್ಯಾನಕ್ಕಾಗಿ ವೈಯಕ್ತಿಕ ಪ್ರತಿಮೆಗಳನ್ನು ಅಗತ್ಯವಾಗಿಸಿತು. ಈ ಅವಧಿಯಲ್ಲಿ ವಾಸುದೇವ-ಕೃಷ್ಣರಂತಹ ಅಸಮಾನ್ಯ ವ್ಯಕ್ತಿಗಳು ಅನನ್ಯ ಭಕ್ತಿಯನ್ನು ಪಡೆಯುವ ದೇವತೆಗಳಾಗಿ ಪರಿವರ್ತನೆಗೊಂಡರು.

    2. ಪ್ರಮುಖ ಗುಣಲಕ್ಷಣಗಳು ಮತ್ತು ಸಾಂಕೇತಿಕತೆ

    ಬಹು ಗುಣಲಕ್ಷಣಗಳು: ದೈವಿಕ ಶಕ್ತಿ ಮತ್ತು ಕೌಶಲ್ಯಗಳ ಸಮೂಹವನ್ನು ಪ್ರತಿನಿಧಿಸಲು ದೇವತೆಗಳನ್ನು ಆಗಾಗ್ಗೆ ಬಹು ತೋಳುಗಳು ಮತ್ತು ತಲೆಗಳೊಂದಿಗೆ ಚಿತ್ರಿಸಲಾಗುತ್ತದೆ. ಕೈಗಳ ಸಂಖ್ಯೆಯು ಸಾಮಾನ್ಯವಾಗಿ ದೇವರು ಹೊಂದಿರುವ ದೈವಿಕ ಗುಣಲಕ್ಷಣಗಳು ಅಥವಾ ಆಯುಧಗಳ ಸಂಖ್ಯೆಗೆ ಅನುಗುಣವಾಗಿರುತ್ತದೆ.

    ಮುದ್ರೆಗಳು(ಕೈಸನ್ನೆಗಳು):ಇವು “ಆಂತರಿಕ ಸಂಕಲ್ಪ”ವನ್ನು ವ್ಯಕ್ತಪಡಿಸುವ ಮೌಖಿಕವಲ್ಲದ ಸಂವಹನ ವಿಧಾನವಾಗಿ ಕಾರ್ಯನಿರ್ವಹಿಸುತ್ತವೆ.

    ಅಭಯಮುದ್ರೆ: “ನಿರ್ಭಯತೆಯ ಸನ್ನೆ”, ಬಲಗೈಯನ್ನು ಭುಜದ ಮಟ್ಟಕ್ಕೆ ಎತ್ತಿ ಅಂಗೈಯನ್ನು ಹೊರಮುಖವಾಗಿ ಇರಿಸಿ ಮಾಡಲಾಗುತ್ತದೆ, ಇದು ರಕ್ಷಣೆ ಮತ್ತು ಶಾಂತಿಯನ್ನು ಸೂಚಿಸುತ್ತದೆ. ಶಿವ ನಟರಾಜನ ರೂಪದಲ್ಲಿ, ಈ ಸನ್ನೆಯು ಭಕ್ತರಿಗೆ ಯಾವುದೇ ಭಯವಿಲ್ಲ ಎಂಬ ಭರವಸೆ ನೀಡುತ್ತದೆ.

    ವಾಹನಗಳು : ದೈವಿಕ ವ್ಯಕ್ತಿಗಳು ಹೆಚ್ಚಾಗಿ ನಿರ್ದಿಷ್ಟ ಪ್ರಾಣಿಗಳು ಅಥವಾ ಪಕ್ಷಿಗಳೊಂದಿಗೆ ಇರುತ್ತಾರೆ. ಅವು ಶಿವನ ವೃಷಭ (ನಂದಿ), ವಿಷ್ಣುವಿನ ಪಕ್ಷಿ (ಗರುಡ), ಅಥವಾ ಲಕ್ಷ್ಮಿ ದೇವತೆಯ ಕಮಲದಂತಹ ವಾಹನಗಳಾಗಿ ಅಥವಾ ಸಂಕೇತಗಳಾಗಿ ಕಾರ್ಯನಿರ್ವಹಿಸುತ್ತವೆ.

    ಅಲಂಕಾರ: ಜೈನ ಧರ್ಮದ ಸರಳ, ಧ್ಯಾನಸ್ಥ ವಿಗ್ರಹಗಳಿಗಿಂತ ಭಿನ್ನವಾಗಿ, ಹಿಂದೂ ಪ್ರತಿಮೆಗಳು ಆಭರಣಗಳು, ಕಿರೀಟಗಳು ಮತ್ತು ವಿಸ್ತಾರವಾದ ಉಡುಪಿನಿಂದ ಸಮೃದ್ಧವಾಗಿ ಅಲಂಕರಿಸಲ್ಪಟ್ಟಿವೆ. ಇದು ಬ್ರಹ್ಮಾಂಡದ ಪ್ರಬಲ ನಿಯಂತ್ರಕರಾಗಿ ಅವರ ಸ್ಥಾನಮಾನವನ್ನು ಪ್ರತಿಬಿಂಬಿಸುತ್ತದೆ.

    3. ಪ್ರಮುಖ ಸಾಂಕೇತಿಕ ರೂಪಗಳು

    ಶಿವ ನಟರಾಜ: “ನೃತ್ಯದ ಪ್ರಭು” ಎಂಬುದು ಶಿವನು ಆನಂದದ ನೃತ್ಯವನ್ನು (ಆನಂದ ತಾಂಡವ) ಪ್ರದರ್ಶಿಸುವುದನ್ನು ಚಿತ್ರಿಸುವ ಸಂಕೀರ್ಣ ಸಂಕೇತವಾಗಿದೆ.”ಶಿವ ತಾಂಡವ” ನೃತ್ಯ ಪ್ರಸಿದ್ಧವಾಗಿದೆ. ಶಿವನ ಇತರೇ ಲಕ್ಷಣಗಳು ಸಹ ಅಧ್ಯಯನಯೋಗ್ಯವಾಗಿದೆ. 

            * ಸೃಷ್ಟಿಯ ಲಯವನ್ನು ಸಾರುವ ಡಮರು.

            * ವಿಶ್ವ ಚಕ್ರದ ಅಂತ್ಯವನ್ನು ಪ್ರತಿನಿಧಿಸುವ ವಿನಾಶದ ಜ್ವಾಲೆ.

            * ವಿಶ್ವ ಜ್ಞಾನವನ್ನು ಸೂಚಿಸುವ ಮೂರನೇ ಕಣ್ಣು.(ಅತೀಂದ್ರಿಯ ಶಕ್ತಿ)

            * ಅಜ್ಞಾನ ಎಂಬ ರಾಕ್ಷಸನನ್ನು ಅವನ ಪಾದಗಳ ಕೆಳಗೆ ನಾಶ ಮಾಡುವುದು.

    ಸುದರ್ಶನ: ವಿಷ್ಣುವಿನ ಸುದರ್ಶನ ಚಕ್ರವು ಶತೃನಾಶದ ಸಂಕೇತವಾಗಿ ಚಿತ್ರಿಸಲಾಗಿದೆ. ಅವನನ್ನು ಆಗಾಗ್ಗೆ ಎಂಟು ಕೈಗಳಲ್ಲಿ ಚಕ್ರ, ಶಂಖ ಮತ್ತು ಗದೆಯಂತಹ ವಿವಿಧ ಆಯುಧಗಳನ್ನು ಹೊಂದಿರುವಂತೆ ಚಿತ್ರಿಸಲಾಗಿದ್ದು ಅವುಗಳ ಅದಲು ಬದಲಿಕೆ ವಿಷ್ಣುವನ್ನು ವಿವಿಧ ರೂಪ ಮತ್ತು ಹೆಸರುಗಳಲ್ಲಿ ಆರಾಧಿಸಲು ಕಾರಣವಾಗಿದೆ.

    ಶಕ್ತಿ ಪ್ರತಿಮೆಗಳು: ಇವುಗಳಲ್ಲಿ ದುರ್ಗಿ,ಚಾಮುಂಡಿಯಂತಹ ದೇವತೆಗಳು ಸೇರಿದ್ದಾರೆ. ಅವರನ್ನು ಹೆಚ್ಚಾಗಿ ಮಹಿಷಾಸುರಮರ್ದಿನಿ (ಮಹಿಷ = ಎಮ್ಮೆ ರಾಕ್ಷಸನ ಸಂಹಾರಕ) ಎಂದು ಚಿತ್ರಿಸಲಾಗುತ್ತದೆ.

    4. ಪವಿತ್ರ ರೇಖಾಗಣಿತ – ಮಂಡಲಗಳು ಮತ್ತು ಯಂತ್ರಗಳು

    ಮಾನವರೂಪಗಳನ್ನು ಮೀರಿ, ಹಿಂದೂ ಪ್ರತಿಮಾಶಾಸ್ತ್ರವು ವಿಶ್ವಕ್ರಮವನ್ನು ಪ್ರತಿನಿಧಿಸಲು ಜ್ಯಾಮಿತೀಯ ರೇಖಾಚಿತ್ರಗಳನ್ನು ಬಳಸುತ್ತದೆ.

    • ಮಂಡಲಗಳು: ವಿಶ್ವವನ್ನು ಪ್ರತಿನಿಧಿಸುವ ವೃತ್ತಾಕಾರದ ರೇಖಾಚಿತ್ರಗಳು ಮತ್ತು ದೇವತೆಗಳಿಗೆ ಪವಿತ್ರ ಸ್ಥಳವಾಗಿ ಕಾರ್ಯನಿರ್ವಹಿಸುತ್ತವೆ.
    • ಯಂತ್ರಗಳು: ಶಿವ ಮತ್ತು ಶಕ್ತಿಯ (ಪುರುಷ ಮತ್ತು ಸ್ತ್ರೀ) ಒಕ್ಕೂಟವನ್ನು ಪ್ರತಿನಿಧಿಸುವ ಒಂಬತ್ತು ತ್ರಿಕೋನಗಳು, “ಶ್ರೀ” ಯಂತ್ರ,

    5. ತಾಂತ್ರಿಕ ಮತ್ತು ಸಾಹಿತ್ಯಿಕ ಅಡಿಪಾಯಗಳು

    ಈ ಚಿತ್ರಗಳ ರಚನೆಯು ವಾಸ್ತುಶಾಸ್ತ್ರಗಳು, ಆಗಮಗಳು ಮತ್ತು ತಂತ್ರಗಳು ಎಂದು ಕರೆಯಲ್ಪಡುವ ಅಗಾಧವಾದ ಸಾಹಿತ್ಯದಿಂದ ರೂಪಿಸಲ್ಪಟ್ಟಿದೆ. ಈ ಪಠ್ಯಗಳು “ಐಕಾನೋಮೆಟ್ರಿಯ ನಿಯಮಗಳನ್ನು” ಒದಗಿಸುತ್ತವೆ. ವಿವಿಧ ಚಿತ್ರಗಳು ಪೂಜೆಗೆ ಸೂಕ್ತವೆಂದು ಖಚಿತಪಡಿಸಿಕೊಳ್ಳಲು ಅವುಗಳ ಅನುಪಾತಗಳು, ಅಳತೆಗಳು ಮತ್ತು ವಿಶಿಷ್ಟ ಚಿಹ್ನೆಗಳಿಗೆ ನಿರ್ದಿಷ್ಟ ನಿಯಮಗಳನ್ನು ನಿಗದಿಪಡಿಸುತ್ತವೆ.

    ಆರಂಭಿಕ ಬುದ್ಧ ಪ್ರತಿಮೆಗಳ ಮೇಲೆ ಗ್ರೀಕ್ ಶೈಲಿಗಳ ಪ್ರಭಾವ

        ಪ್ರಾಥಮಿಕವಾಗಿ ಗ್ರೀಕೋ-ಬೌದ್ಧ ಅಥವಾ ಗಾಂಧಾರ ಕಲೆ ಎಂದು ಕರೆಯಲ್ಪಡುವ ಆರಂಭಿಕ ಬುದ್ಧ ಪ್ರತಿಮೆಗಳ ಮೇಲಿನ ಗ್ರೀಕ್ ಪ್ರಭಾವವು ಭಾರತೀಯ ಉಪಖಂಡದ ವಾಯುವ್ಯ ಪ್ರದೇಶದಲ್ಲಿ ಪ್ರಾಚೀನ ಗ್ರೀಕ್ ಕಲೆ ಮತ್ತು ಬೌದ್ಧಧರ್ಮದ ನಡುವಿನ ಸಾಂಸ್ಕೃತಿಕ ಸಮನ್ವಯದಿಂದ ಉಂಟಾಯಿತು. ಈ ಸಮ್ಮಿಳನದಿಂದ ಮಾನವ ರೂಪದಲ್ಲಿ ಗೌತಮ ಬುದ್ಧನ ಕೆಲವು ಮೊದಲ ಪ್ರಾತಿನಿಧ್ಯಗಳನ್ನು ಕಾಣಬಹುದು. ಇದು ಬುದ್ಧನನ್ನು ಹೆಜ್ಜೆಗುರುತುಗಳು ಅಥವಾ ಬೋಧಿ ವೃಕ್ಷದಂತಹ ಚಿಹ್ನೆಗಳಿಂದ ಮಾತ್ರ ಪ್ರತಿನಿಧಿಸುವ ಬೌದ್ಧ ಧರ್ಮದ ಆರಂಭಿಕ ಸಾಂಕೇತಿಕ ಅವಧಿಯ ಕಾಲಘಟ್ಟವನ್ನು ಕೊನೆಗೊಳಿಸಿತು.

    1. ವಾಸ್ತವಿಕ ಕಲಾತ್ಮಕ ಶೈಲಿ

    • ಆದರ್ಶವಾದಿ ವಾಸ್ತವಿಕತೆ: ಗಾಂಧಾರ ಕಲೆಯು ಹೆಲೆನಿಸ್ಟಿಕ್ ಕಲೆಯ ವಿಶಿಷ್ಟವಾದ ಬಲವಾದ ಆದರ್ಶವಾದಿ ವಾಸ್ತವಿಕತೆ ಮತ್ತು ಇಂದ್ರಿಯ ವಿವರಣೆಗಳನ್ನು ಅಳವಡಿಸಿಕೊಂಡಿದೆ.
    • ಮುಖದ ವೈಶಿಷ್ಟ್ಯಗಳು: ಈ ಆರಂಭಿಕ ಪ್ರತಿಮೆಗಳ ಮುಖಗಳನ್ನು “ಅಳತೆ ಮಾಡಿದ ಗುಣಮಟ್ಟ” ಮತ್ತು ಬಲವಾದ ಕಲಾತ್ಮಕ ವಾಸ್ತವಿಕತೆಯೊಂದಿಗೆ ನಿರೂಪಿಸಲಾಗಿದೆ.
    1. ಉಡುಪು ಮತ್ತು ದೈಹಿಕ ನಿಲುವು
    • ಹಿಮೇಷನ್(ಗ್ರೀಕ್‌ ನಿಲುವಂಗಿ-Himation) ಅನುಕರಣೆ: ಆರಂಭಿಕ ಪ್ರತಿಮೆಗಳಲ್ಲಿ, ಬುದ್ಧನನ್ನು ಹೆಚ್ಚಾಗಿ ಗ್ರೀಕ್ ರಾಜನಾಗಿ ಚಿತ್ರಿಸಲಾಗಿದೆ. ಇದು ಎರಡೂ ಭುಜಗಳನ್ನು ಆವರಿಸುವ ಹಗುರವಾದ, ಟೋಗಾ ತರಹದ ಅಲೆಅಲೆಯಾದ ನಿಲುವಂಗಿಯಾಗಿದೆ.
    • ಕಾಂಟ್ರಾಪೋಸ್ಟೊ(Contrapposto) ನಿಲುವು: ಶಿಲ್ಪಗಳು ಹೆಚ್ಚಾಗಿ ಕಾಂಟ್ರಾಪೋಸ್ಟೊ ನಿಲುವನ್ನು ಬಳಸುತ್ತಿದ್ದವು ಇದು ಗ್ರೀಕ್ ಪ್ರತಿಮೆಯಲ್ಲಿ ಸಾಮಾನ್ಯವಾಗಿ ತೂಕವನ್ನು ಒಂದು ಕಾಲಿನ ಮೇಲೆ ವರ್ಗಾಯಿಸುವ ವಾಸ್ತವಿಕ ನಿಂತಿರುವ ಭಂಗಿಯಾಗಿದೆ.
    1. ಕೂದಲು ಮತ್ತು ಪ್ರತಿಮಾಶಾಸ್ತ್ರದ ಗುಣಲಕ್ಷಣಗಳು
    • ಮೆಡಿಟರೇನಿಯನ್ ಕೇಶವಿನ್ಯಾಸ: ಪ್ರತಿಮೆಗಳು ಶೈಲೀಕೃತ ಮೆಡಿಟರೇನಿಯನ್ ಸುರುಳಿಯಾಕಾರದ ಕೂದಲು ಮತ್ತು ಮೇಲ್ಭಾಗದ ಗಂಟು (ಉಷ್ನಿಶಾ) ಅನ್ನು ಒಳಗೊಂಡಿತ್ತು, ಇದು ಸ್ಪಷ್ಟವಾಗಿ ಬೆಲ್ವೆಡೆರೆ ಅಪೊಲೊ(Belvedere Apollo)ಎಂಬ ಗ್ರೀಕಿನ ಸುಮಾರು ಕ್ರಿ.ಪೂ. 330ರ ಅಮೃತ ಶಿಲೆಯ ವಿಗ್ರಹದಿಂದ ಪ್ರಭಾವಿತವಾಗಿದೆ.
    • ಪ್ರಭಾವಲಯ: ಬುದ್ಧನ ತಲೆಯ ಸುತ್ತಲಿನ ಪ್ರಭಾವಲಯವು ದೈವತ್ವವನ್ನು ಸೂಚಿಸುತ್ತದೆ, ಇದನ್ನು ಗ್ರೀಕ್ ಪ್ರಭಾವದ ಅಂಶವೆಂದು ಪರಿಗಣಿಸಲಾಗುತ್ತದೆ.
    1. ಗ್ರೀಕ್ ದೇವತೆಗಳು ಮತ್ತು ಲಕ್ಷಣಗಳ ಸಂಯೋಜನೆ

    ಇತರ ದೇವತೆಗಳು: ಅಟ್ಲಾಸ್‌ನಂತಹ ಗ್ರೀಕ್ ದೇವತೆಗಳನ್ನು ಬೌದ್ಧ ಸ್ಮಾರಕಗಳಿಗೆ ರಕ್ಷಕಭಟರಾಗಿ ಚಿತ್ರಿಸಲಾಗಿದೆ ಮತ್ತು ಗ್ರೀಕ್ ಗಾಳಿ ದೇವರು “ಬೋರಿಯಾಸ್” ಗಾಳಿ ದೇವತೆಗಳ ಆರಂಭಿಕ ಬೌದ್ಧ ಪ್ರಾತಿನಿಧ್ಯಗಳ ಮೇಲೆ ಪ್ರಭಾವ ಬೀರಿದೆ. ವಿಶೇಷವಾಗಿ ಬುದ್ಧನನ್ನು ಗ್ರೀಕಿನ ಪ್ರಸಿದ್ಧ ದೇವರಾದ ಅಪೋಲೊ ರೀತಿಯಲ್ಲಿ  ಚಿತ್ರಿಸಿರುವುದನ್ನು ಕಾಣಬಹುದು.

    ಈ ಪ್ರಭಾವಗಳು ಕ್ರಿಸ್ತಪೂರ್ವ 1 ನೇ ಶತಮಾನ ಮತ್ತು ಕ್ರಿಸ್ತಶಕ 1 ನೇ ಶತಮಾನದ ನಡುವೆ, ವಿಶೇಷವಾಗಿ ಕುಶಾನ ಸಾಮ್ರಾಜ್ಯದ ಅವಧಿಯಲ್ಲಿ, ಗಾಂಧಾರ ಶೈಲಿಯು ಶಿಲ್ಪಕಲೆಯ ಅತ್ಯಾಧುನಿಕತೆಯ ಉನ್ನತ ಮಟ್ಟವನ್ನು ತಲುಪಿತು.

    ವಿಭಿನ್ನ ನಂಬಿಕೆಗಳಲ್ಲಿ ಅಭಯಮುದ್ರೆಯ ಪರಿಕಲ್ಪನೆ

    ಅಭಯಮುದ್ರೆ (ಸಂಸ್ಕೃತದಲ್ಲಿ “ನಿರ್ಭಯತೆಯ ಸನ್ನೆ”) ಎಂಬುದು ವಿವಿಧ ಭಾರತೀಯ ಧರ್ಮಗಳಲ್ಲಿ ರಕ್ಷಣೆ, ಭರವಸೆ, ಸುರಕ್ಷತೆ ಮತ್ತು ಭಯವನ್ನು ಹೋಗಲಾಡಿಸುವಿಕೆಯನ್ನು ಪ್ರತಿನಿಧಿಸಲು ಬಳಸಲಾಗುವ ಪವಿತ್ರ ಹಸ್ತ ಸನ್ನೆಯಾಗಿದೆ. ದೈಹಿಕವಾಗಿ, ಇದನ್ನು ಬಲಗೈಯನ್ನು ಭುಜದ ಎತ್ತರಕ್ಕೆ ಎತ್ತಿ, ಮೊಣಕೈಯನ್ನು ಬಗ್ಗಿಸಿ, ಅಂಗೈಯನ್ನು ಹೊರಮುಖವಾಗಿ ಬೆರಳುಗಳನ್ನು ಚಾಚಿರುವಂತೆ ಚಿತ್ರಿಸಲಾಗಿರುತ್ತದೆ.

    ಮುದ್ರೆಯು ವಿವಿಧ ನಂಬಿಕೆಗಳಲ್ಲಿ ರಕ್ಷಣೆಯನ್ನು ಈ ಕೆಳಗಿನ ವಿಧಾನಗಳಲ್ಲಿ ಪ್ರತಿನಿಧಿಸುತ್ತದೆ:

    ಹಿಂದೂ ಧರ್ಮ

    ಶಿವ ನಟರಾಜ: ನೃತ್ಯಭಂಗಿಯಲ್ಲಿ ಶಿವನ ಪ್ರತಿಮಾರೂಪವನ್ನು ಕಾಣುತ್ತೇವೆ. ಅವನ ಎರಡನೇ ಬಲಗೈ ಅಭಯಮುದ್ರೆಯನ್ನು ಮಾಡುತ್ತದೆ. ಈ ಸನ್ನೆಯು ಆರಾಧಕನಿಗೆ ಯಾವುದೇ ಭಯವಿಲ್ಲ ಎಂದು ಸೂಚಿಸುತ್ತದೆ ಮತ್ತು ನೀತಿಯ ಮಾರ್ಗವನ್ನು (ಧರ್ಮ) ಅನುಸರಿಸುವವರಿಗೆ ದುಷ್ಟ ಮತ್ತು ಅಜ್ಞಾನ ಎರಡರಿಂದಲೂ ದೈವಿಕ ರಕ್ಷಣೆಯನ್ನು ನೀಡುವ ಭಂಗಿಯಾಗಿರುತ್ತದೆ.

    • ಸೂರ್ಯ: ಸೂರ್ಯ ದೇವರ ನಾಲ್ಕು ಕೈಗಳ ಚಿತ್ರಗಳನ್ನು ಕೆಲವೊಮ್ಮೆ ಅಭಯ ಭಂಗಿಯಲ್ಲಿ ಚಿತ್ರಿಸಲಾಗುತ್ತದೆ, ಇದು ರಕ್ಷಣಾತ್ಮಕ ದೇವತೆಯಾಗಿ ಅವನ ಪಾತ್ರವನ್ನು ಒತ್ತಿಹೇಳುತ್ತದೆ.
    • ದೈವಿಕ ಗುಣಲಕ್ಷಣಗಳು: ಹಿಂದೂ ಪ್ರತಿಮಾಶಾಸ್ತ್ರದಲ್ಲಿ, ಮುದ್ರೆಯನ್ನು ಹೆಚ್ಚಾಗಿ ದೇವತೆಯ ಸ್ವರೂಪ ಮತ್ತು ಶಕ್ತಿಯನ್ನು ಸೂಚಿಸಲು ನಿರ್ದಿಷ್ಟ ಸಾಂಕೇತಿಕ ಆಯುಧಗಳೊಂದಿಗೆ (ಆಯುಧಗಳು) ಜೋಡಿಸಲಾಗುತ್ತದೆ.

    ಬೌದ್ಧಧರ್ಮ

    • ಆನೆಯ ದಂತಕಥೆ: ಸಂಪ್ರದಾಯದ ಪ್ರಕಾರ, ಗೌತಮ ಬುದ್ಧನು ತನ್ನ ಅಸೂಯೆ ಪಟ್ಟ ಸೋದರಸಂಬಂಧಿ ದೇವದತ್ತನು ಅವನನ್ನು ಕೊಲ್ಲಲು ಕಳುಹಿಸಿದ್ದ ಉಗ್ರಗಾಮಿ ಆನೆಯನ್ನು ನಿಗ್ರಹಿಸಲು ಈ ಸನ್ನೆಯನ್ನು ಬಳಸಿದನು. ಆನೆ ಸಮೀಪಿಸುತ್ತಿದ್ದಂತೆ, ಬುದ್ಧನು ಅಭಯಮುದ್ರೆಯನ್ನು ಪ್ರದರ್ಶಿಸಿದನು, ಅದು ಪ್ರಾಣಿಯನ್ನು ತಕ್ಷಣವೇ ಶಾಂತಗೊಳಿಸಿತು. ಇದು ಶಾಂತಿಯ ಶಕ್ತಿ ಮತ್ತು ಭಯದ ಅನುಪಸ್ಥಿತಿಯನ್ನು ಸಂಕೇತಿಸುತ್ತದೆ.
    • ಅಮೋಘಸಿದ್ಧಿ: ಈ ಮುದ್ರೆಯು ಐದನೇ ಧ್ಯಾನಿ ಬುದ್ಧ ಮತ್ತು ಕರ್ಮದ ಪ್ರಭು ಅಮೋಘಸಿದ್ಧಿಯ ನಿರ್ದಿಷ್ಟ ಲಕ್ಷಣವಾಗಿದೆ. ಈ ಸಂದರ್ಭದಲ್ಲಿ, ಇದು ಅಸೂಯೆಯ ಭ್ರಮೆಯನ್ನು ಸಾಧನೆಯ ಬುದ್ಧಿವಂತಿಕೆಯಾಗಿ ಪರಿವರ್ತಿಸುವುದನ್ನು ಪ್ರತಿನಿಧಿಸುತ್ತದೆ.
    • ಪ್ರಾದೇಶಿಕ ವ್ಯತ್ಯಾಸಗಳು:
    • ಗಾಂಧಾರ ಕಲೆಯಲ್ಲಿ, ಧರ್ಮೋಪದೇಶದ ಕ್ರಿಯೆಯನ್ನು ಸೂಚಿಸಲು ಈ ಸನ್ನೆಯನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು.
    • ಥೈಲ್ಯಾಂಡ್ ಮತ್ತು ಲಾವೋಸ್‌ನಲ್ಲಿ, ಇದು ʼನಡೆಯುವ ಬುದ್ಧʼನೊಂದಿಗೆ ಸಂಬಂಧಿಸಿದೆ. ಅವರನ್ನು ಕೆಲವೊಮ್ಮೆ ಎರಡೂ ಕೈಗಳಿಂದ ಎರಡು ಅಭಯಮುದ್ರೆಯಲ್ಲಿ ತೋರಿಸಲಾಗುತ್ತದೆ.
    • ತೇರವಾದ ​​ಬೌದ್ಧಧರ್ಮದಲ್ಲಿ, ಇದನ್ನು ಸಾಮಾನ್ಯವಾಗಿ ಬಲಗೈಯನ್ನು ಮೇಲಕ್ಕೆತ್ತಿ ಎಡಗೈಯನ್ನು ನೈಸರ್ಗಿಕವಾಗಿ ಪಕ್ಕಕ್ಕೆ ನೇತಾಡುವಂತೆ ತೋರಿಸಲಾಗುತ್ತದೆ.

    ಜೈನ ಧರ್ಮ ಮತ್ತು ಸಿಖ್ ಧರ್ಮ

    ಜೈನ ಧರ್ಮ ಮತ್ತು ಸಿಖ್ ಧರ್ಮ ಎರಡರ ಧಾರ್ಮಿಕ ಚಿತ್ರಣಗಳಲ್ಲಿ ಚಿತ್ರಿಸಲಾದ ಆರಂಭಿಕ ಮುದ್ರೆಗಳಲ್ಲಿ ಅಭಯಮುದ್ರೆಯೂ ಒಂದು ಎಂದು ಗುರುತಿಸಲಾಗಿದೆ. ಜೈನ ಧರ್ಮದಲ್ಲಿ, ವಿಗ್ರಹಗಳನ್ನು ಹೆಚ್ಚಾಗಿ ಅವುಗಳ ಸರಳತೆ ಮತ್ತು ಧ್ಯಾನಸ್ಥ ಭಂಗಿಗಳಿಂದ (ಪದ್ಮಾಸನ ಅಥವಾ ಕಾಯೋತ್ಸರ್ಗ) ನಿರೂಪಿಸಲಾಗಿದ್ದರೂ, ಅಭಯಮುದ್ರೆಯು ಆಧ್ಯಾತ್ಮಿಕ ಶಕ್ತಿ ನೀಡುವ ದೈವಿಕ ಭರವಸೆಯ ಗುರುತಿಸಲ್ಪಟ್ಟ ಸಂಕೇತವಾಗಿ ಉಳಿದಿದೆ.

    ಐತಿಹಾಸಿಕ ಮತ್ತು ಜಾತ್ಯತೀತ ಬೇರುಗಳು

    ನಿರ್ದಿಷ್ಟ ಧಾರ್ಮಿಕ ಸಿದ್ಧಾಂತಗಳನ್ನು ಮೀರಿ, ಈ ಸನ್ನೆಯು ಇತಿಹಾಸಪೂರ್ವ ಕಾಲದಲ್ಲಿ ಸ್ನೇಹ ಮತ್ತು ಒಳ್ಳೆಯ ಉದ್ದೇಶಗಳ ಸಂಕೇತವಾಗಿ ಹುಟ್ಟಿಕೊಂಡಿರಬಹುದು. ಅಪರಿಚಿತನ ಕಡೆಗೆ ನಿರಾಯುಧ ಕೈಯನ್ನು ಎತ್ತುವುದು ಒಬ್ಬ ವ್ಯಕ್ತಿಯು ಯಾವುದೇ ಶಸ್ತ್ರಾಸ್ತ್ರಗಳನ್ನು ಹೊಂದಿರುವುದಿಲ್ಲ ಮತ್ತು ಶಾಂತಿಯನ್ನು ಪ್ರಸ್ತಾಪಿಸುತ್ತಾನೆ ಎಂಬುದರ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ.

    ಪ್ರತಿಮಾಶಾಸ್ತ್ರ

    ಪ್ರತಿಮಾಶಾಸ್ತ್ರ

    1. ಅರ್ಥ

    ಇಂಗ್ಲೀಷಿನಲ್ಲಿ ಪ್ರತಿಮಾಶಾಸ್ತ್ರವನ್ನು ʼಐಕನೋಗ್ರಫಿʼ ಎಂದು ಕರೆಯಲಾಗುತ್ತದೆ. ʼಐಕಾನ್ʼ ಎಂಬ ಪದವು ಗ್ರೀಕ್ ‘ಐಕಾನ್’ ನಿಂದ ಬಂದಿದೆ.  ʼಐಕಾನ್ʼ ಎಂಬ ಪದವು ಚಿತ್ರಕಲೆ, ಶಿಲ್ಪಕಲೆ ಅಥವಾ ಮೊಸಾಯಿಕ್‌ನಲ್ಲಿ ದೇವತೆ ಅಥವಾ ಸಂತನನ್ನು ಪ್ರತಿನಿಧಿಸುವ ಆಕೃತಿಯನ್ನು ಸೂಚಿಸುತ್ತದೆ.

    ಭಾರತೀಯ ಸಂಪ್ರದಾಯದಲ್ಲಿ, ಐಕಾನ್‌ಗಳನ್ನು ಅರ್ಕಾ, ಬೇರಾ, ವಿಗ್ರಹ, ಪ್ರತಿಮಾ ಮತ್ತು ವಿಂಬಾ ಮುಂತಾದ ಪದಗಳಿಂದ ಸೂಚಿಸಲಾಗುತ್ತದೆ.

    ಪ್ರತಿಮಾಶಾಸ್ತ್ರವು ಈ ಧಾರ್ಮಿಕ ಚಿತ್ರಗಳ ವ್ಯಾಖ್ಯಾನ ಮತ್ತು ಗುಣಲಕ್ಷಣಗಳನ್ನು ನಿರ್ವಹಿಸುವ ಅಧ್ಯಯನದ ಶಾಖೆಯಾಗಿದೆ. ವಿಶಾಲ ಅರ್ಥದಲ್ಲಿ, ಇದು ಧಾರ್ಮಿಕ ಕಲೆಯ ವ್ಯಾಖ್ಯಾನಾತ್ಮಕ ಅಂಶವನ್ನು ಸೂಚಿಸುತ್ತದೆ. ಇದು ಸಂಸ್ಕೃತಿಯ ಧಾರ್ಮಿಕ ಜೀವನ ಮತ್ತು ಆಧ್ಯಾತ್ಮಿಕ ವಿಕಾಸವನ್ನು ಪ್ರತಿಬಿಂಬಿಸುತ್ತದೆ.

    2. ಪರಿಚಯ

    ಭಾರತೀಯ ಪ್ರತಿಮಾಶಾಸ್ತ್ರವು ಭಾರತೀಯ ಉಪಖಂಡದ ಧಾರ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಆಳವಾಗಿ ಬೇರೂರಿದೆ. ಇದು ಧಾರ್ಮಿಕ ಪಂಥಗಳ ಮೂಲ ಮತ್ತು ವಿಕಾಸದ ಹಿಂದಿನ ಕಲಾತ್ಮಕ ಸಾಧನೆಗಳು ಮತ್ತು ಮಾನಸಿಕ ಅಂಶಗಳ ಸ್ಪಷ್ಟವಾದ ಸೂಚಿಯನ್ನು ಒದಗಿಸುತ್ತದೆ. ಪ್ರತಿಮಾಶಾಸ್ತ್ರದ ಅಧ್ಯಯನವು ಸಂಶೋಧಕರಿಗೆ ಧಾರ್ಮಿಕ ಆಚರಣೆಗಳು, ಪುರಾಣಗಳಲ್ಲಿನ ಕ್ರಮೇಣ ಬದಲಾವಣೆಗಳು ಮತ್ತು ಪ್ರತಿಸ್ಪರ್ಧಿ ಪಂಥಗಳ ನಡುವಿನ ಸಮನ್ವಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ, ಉದಾಹರಣೆಗೆ ಶಿವ ಮತ್ತು ವಿಷ್ಣು (ಹರಿ-ಹರ) ಅವರ ವೈಶಿಷ್ಟ್ಯಗಳನ್ನು ಸಂಯೋಜಿಸುವ ಚಿತ್ರಗಳು.

    3. ಭಾರತೀಯ ಪ್ರತಿಮಾಶಾಸ್ತ್ರದ ಮೂಲ

    • ಆರಂಭಿಕ ಅವಧಿ: ಆರಂಭಿಕ ಬೇರುಗಳು ಸಿಂಧೂ ಕಣಿವೆ ನಾಗರಿಕತೆಯಲ್ಲಿ ಕಂಡುಬರುತ್ತವೆ, ಅಲ್ಲಿ ಮುದ್ರೆಗಳು ಮಾನವ ಮತ್ತು ಪ್ರಾಣಿಗಳ ಆಕೃತಿಗಳನ್ನು ಚಿತ್ರಿಸುತ್ತವೆ. ಇದರಲ್ಲಿ ಯೋಗ ಭಂಗಿಯಲ್ಲಿ ಕುಳಿತಿರುವ ಮೂರು ಮುಖದ ಕೊಂಬಿನ ದೇವತೆಯೂ ಸೇರಿದೆ. ಪಶುಪತಿ ಎಂದು ಕರೆಯಲ್ಪಡುವ ಇದನ್ನು ಹೆಚ್ಚಾಗಿ ಶಿವನ ಮೂಲ ಮಾದರಿ ಎಂದು ಅರ್ಥೈಸಲಾಗುತ್ತದೆ.
    • ವೈದಿಕ ಕಾಲದಲ್ಲಿ: ಆರಂಭಿಕ ವೈದಿಕ ಯುಗದ ಚಿತ್ರ-ಪೂಜೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಕೆಲವು ವಿದ್ವಾಂಸರು ಧರ್ಮವು ಮೂಲತಃ ಅನಿಕೋನಿಕ್(Aniconic-ಸಾಂಕೇತಿಕ) ಆಗಿತ್ತು. ಅಂದರೆ ಮಾನವ ರೂಪಗಳಿಗಿಂತ ಚಿಹ್ನೆಗಳನ್ನು ಬಳಸುತ್ತಿದ್ದರು. ಆದರೆ ಋಗ್ವೇದದಲ್ಲಿ ಇಂದ್ರ, ರುದ್ರ ಮತ್ತು ವರುಣನಂತಹ ದೇವತೆಗಳ ಮಾನವರೂಪದ ವಿವರಣೆಗಳನ್ನು ಆರಂಭಿಕ ಪ್ರತಿಮಾಶಾಸ್ತ್ರೀಯ ಸಂಪ್ರದಾಯದ ಪುರಾವೆಯಾಗಿ ಉಲ್ಲೇಖಿಸುತ್ತಾರೆ.
    • ಭಕ್ತಿ ಯುಗದಲ್ಲಿ: ನಂತರದ ವೈದಿಕ ಮತ್ತು ಮಹಾಕಾವ್ಯ ಅವಧಿಗಳಲ್ಲಿ ಭಕ್ತಿ ಚಳುವಳಿಯ ಬೆಳವಣಿಗೆಯು ಧ್ಯಾನ ಮತ್ತು ಪೂಜೆಗೆ ವೈಯಕ್ತಿಕ ಪ್ರತಿಮೆಗಳ ಅಗತ್ಯವನ್ನು ಉಂಟುಮಾಡಿತು. ಈ ಬದಲಾವಣೆಯು ಅಮೂರ್ತ ಪರಿಕಲ್ಪನೆಗಳಿಂದ ಧಾರ್ಮಿಕ ಮೂರ್ತ ಚಿತ್ರಗಳ ಪರಿವರ್ತನೆಗೆ ಕಾರಣವಾಯಿತು.

    ಗ್ರೀಕ್ ಪ್ರತಿಮಾಶಾಸ್ತ್ರದಲ್ಲಿ (Greek iconography), ದೃಶ್ಯ ಚಿಹ್ನೆಗಳು ದೇವರುಗಳ ಸಂಕೀರ್ಣ ವ್ಯಕ್ತಿತ್ವ ಮತ್ತು ಅವರ ಆಳ್ವಿಕೆಯ ಕ್ಷೇತ್ರಗಳನ್ನು ಗುರುತಿಸಲು ಸಂಕ್ಷಿಪ್ತ ಮಾರ್ಗಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಪ್ರೇಕ್ಷಕರಿಗೆ ದೈವಿಕ ವ್ಯಕ್ತಿಗಳನ್ನು ತಕ್ಷಣವೇ ಗುರುತಿಸಲು ಸಹಾಯ ಮಾಡುತ್ತದೆ. ಈ ಸಂಪ್ರದಾಯವು ಇಲ್ಲಿರುವ ಚಿತ್ರದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ; ಕೇಂದ್ರದಲ್ಲಿ ಜ಼್ಯೂಸ್ (Zeus) ಮತ್ತು ಹೆರಾ (Hera) ತಮ್ಮ ಚಿನ್ನದ ಸಿಂಹಾಸನದ ಮೇಲೆ ಕುಳಿತಿದ್ದಾರೆ. ಜ಼್ಯೂಸ್ ತನ್ನ ರಾಜಗಾಂಭೀರ್ಯದ ಹದ್ದು ಇರುವ ರಾಜದಂಡದಿಂದ ಗುರುತಿಸಲ್ಪಟ್ಟರೆ, ಹೆರಾ ತನ್ನ ಪಾದದ ಬಳಿ ಇರುವ ನವಿಲಿನಿಂದ ಗುರುತಿಸಲ್ಪಡುತ್ತಾಳೆ. ಅವರ ಸುತ್ತಲೂ ಇರುವ ಇತರ ಒಲಿಂಪಿಯನ್ ದೇವರುಗಳು ತಮ್ಮದೇ ಆದ ವಿಶಿಷ್ಟ “ಲಕ್ಷಣಗಳ” ಮೂಲಕ ಗುರುತಿಸಲ್ಪಡುತ್ತಾರೆ: ಪೊಸೈಡನ್ (Poseidon) ತನ್ನ ತ್ರಿಶೂಲವನ್ನು ಹಿಡಿದಿದ್ದಾನೆ, ಅಥೇನಾ (Athena) ತನ್ನ ವಿಶಿಷ್ಟವಾದ ಕೊರಿಂಥಿಯನ್ ಶಿರಸ್ತ್ರಾಣವನ್ನು ಧರಿಸಿದ್ದಾಳೆ ಮತ್ತು ಹರ್ಮ್ಸ್ (Hermes) ತನ್ನ ರೆಕ್ಕೆಗಳಿರುವ ಪಾದರಕ್ಷೆಗಳು ಹಾಗೂ ಕ್ಯಾಡುಸಿಯಸ್ (caduceus) ದಂಡದಿಂದ ಗುರುತಿಸಲ್ಪಡುತ್ತಾನೆ.

    4. ಪ್ರತಿಮಾಶಾಸ್ತ್ರದ ಬೆಳವಣಿಗೆ

    • ಸಾಹಿತ್ಯ ನಿಯಮಗಳು: ಪ್ರತಿಮಾಶಾಸ್ತ್ರದ ಬೆಳವಣಿಗೆಯು ವಾಸ್ತುಶಾಸ್ತ್ರಗಳು, ಆಗಮಗಳು ಮತ್ತು ತಂತ್ರಗಳು ಸೇರಿದಂತೆ ಅಪಾರ ಸಾಹಿತ್ಯದಿಂದ ಮಾರ್ಗದರ್ಶಿಸಲ್ಪಟ್ಟಿತು. ಇದು ಶಿಲ್ಪಗಳ ಅಥವಾ ವಿಗ್ರಹಗಳ ನಿರ್ಮಾಣಕ್ಕೆ ವಿಭಿನ್ನ ನಿಯಮಗಳನ್ನು ನಿಗದಿಪಡಿಸಿತು.
    • ಪುರಾತತ್ತ್ವ ಶಾಸ್ತ್ರ ಮೂಲಗಳು: ಆರಂಭಿಕ ಸ್ಥಳೀಯ ನಾಣ್ಯಗಳು (ಸುಮಾರು ಕ್ರಿ.ಪೂ. 600) ಚಿಹ್ನೆಗಳನ್ನು ಒಳಗೊಂಡಿದ್ದವು. ಅದು ಅಂತಿಮವಾಗಿ ಸ್ಪಷ್ಟ ಪ್ರತಿಮಾಶಾಸ್ತ್ರವಾಗಿ ವಿಕಸನಗೊಂಡಿತು.
    • ಪಂಥೀಯ ಬೆಳವಣಿಗೆ: ವೈಷ್ಣವ ಧರ್ಮ ಮತ್ತು ಶೈವ ಧರ್ಮದಂತಹ ಧಾರ್ಮಿಕ ಪಂಥಗಳು ವಿಸ್ತರಿಸಿದಂತೆ, ಪ್ರತಿಮಾಶಾಸ್ತ್ರವು ಹೆಚ್ಚು ಸಂಕೀರ್ಣವಾಯಿತು. ದೈವಿಕ ಶಕ್ತಿ ಮತ್ತು ವಿವಿಧ ಪೌರಾಣಿಕ ಕಥೆಗಳನ್ನು ಹಾಗೂ ಗುಣಲಕ್ಷಣಗಳನ್ನು ಪ್ರತಿನಿಧಿಸಲು ವಿಗ್ರಹಗಳಿಗೆ ಅನೇಕ ಕೈ ಮತ್ತು ತಲೆಗಳನ್ನು ಅಳವಡಿಸಲಾಯಿತು.

    5.  ಹೊರದೇಶದ ಪ್ರಭಾವ

    ಭಾರತೀಯ ಶಿಲ್ಪಗಳ ಮೇಲೆ ಹೊರದೇಶದ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ. ಭಾರತದ ಮೇಲೆ ದಾಳಿ ಮಾಡಿದ ಅಲೆಗ್ಸಾಂಡರ್‌ ಜೊತೆಗೆ ಅನೇಕ ಶಿಲ್ಪಿಗಳು ಸಹ ಬಂದಿರಬಹುದಾದ ಸಾಧ್ಯತೆಗಳಿದ್ದು, ಅವರುಗಳು ಇಲ್ಲಿಯೇ ನೆಲಸಿ ತಮ್ಮ ರಚನೆಗಳ ಮೂಲಕ ಹೊಸದಾದ ಪರಂಪರೆಯನ್ನು ಹುಟ್ಟು ಹಾಕಿದರು. ಅದೇ ಗಾಂಧಾರ ಕಲೆ ಎಂದು ಖ್ಯಾತವಾಗಿದೆ. ವಿದೇಶಿ ಶಿಲ್ಪಿಗಳು ವಾಯುವ್ಯ ಭಾರತದಲ್ಲಿ  ನೆಲಸಿ(ಈಗಿನ ಅಪ್ಘಾನಿಸ್ತಾನ- ಗಾಂಧಾರ ನಾಡು) ಭಾರತೀಯ ಬುದ್ಧನನ್ನು ಹಾಗೂ ಇನ್ನಿತರೇ ಶಿಲ್ಪಗಳನ್ನು ಕೆತ್ತುವಾಗ ತಮ್ಮ ಗ್ರೀಕ್‌ ಶೈಲಿಯನ್ನು ಅನುಸರಿಸಿದರು. ಟೋಗ ರೀತಿಯ ನಿಲುವಂಗಿ, ಸುರುಳಿಯಾಕಾರದ ಕೂದಲು, ವಾಸ್ತವಿಕತೆಗೆ ಹೆಚ್ಚು ಹತ್ತಿರವಾದ ಮುಖಭಾವಗಳು  ಗ್ರೀಕ್‌ ಪ್ರಭಾವವನ್ನು ಪ್ರತಿನಿಧಿಸುತ್ತವೆ. ಆದರೆ ಕುಶಾನರ ಆಳ್ವಿಕೆಯ ನಂತರ ಗಾಂಧಾರ ಕಲೆಯು ಮುಂದುವರೆಯಲಿಲ್ಲ.

    6. ಹಿಂದೂ ಧರ್ಮ, ಬೌದ್ಧಧರ್ಮ ಮತ್ತು ಜೈನ ಧರ್ಮದಲ್ಲಿ ಪ್ರತಿಮಾಶಾಸ್ತ್ರ

    ಹಿಂದೂ ಧರ್ಮ

    • ಬಹು ಗುಣಲಕ್ಷಣಗಳು: ದೇವತೆಗಳನ್ನು ಹೆಚ್ಚಾಗಿ ಬಹು ಅಂಗಗಳೊಂದಿಗೆ ಸಾಂಕೇತಿಕ ಆಯುಧಗಳನ್ನು ಹಿಡಿದುಕೊಳ್ಳುವಂತೆ ಅಥವಾ ನಿರ್ದಿಷ್ಟ ಕೈ ಸನ್ನೆಗಳನ್ನು (ಮುದ್ರೆಗಳು) ರೂಪಿಸುವುದು ಎಂದು ತೋರಿಸಲಾಗುತ್ತದೆ.
    • ಸಾಂಕೇತಿಕ ಸನ್ನೆಗಳು: ಅಭಯಮುದ್ರೆ (ನಿರ್ಭಯತೆಯ ಸನ್ನೆ) ಆರಂಭಿಕ ಮುದ್ರೆಗಳಲ್ಲಿ ಒಂದಾಗಿದೆ, ಇದು ರಕ್ಷಣೆ ಮತ್ತು ಭರವಸೆಯನ್ನು ಸೂಚಿಸುತ್ತದೆ.
    • ಅವತಾರಗಳು ಮತ್ತು ವಾಹನಗಳು: ಹಿಂದೂ ಪ್ರತಿಮಾಶಾಸ್ತ್ರವು ದೇವರುಗಳಿಗೆ ಪ್ರಾಣಿಗಳ ಮೂಲಕವೂ ಪ್ರತಿನಿಧಿಸುವುದನ್ನು ಕಾಣುತ್ತೇವೆ. ವಿವಿಧ ಅವತಾರಗಳ ಮೂಲಕ ವಿಷ್ಣುವನ್ನು ಪ್ರತಿನಿಧಿಸಲಾಗಿದ್ದು “ದಶಾವತಾರ”ದ ಹುಟ್ಟಿಗೆ ಕಾರಣವಾಗಿದೆ.
    • ನಟರಾಜ: ಸೃಷ್ಟಿ ಮತ್ತು ವಿನಾಶದ ಕಾಸ್ಮಿಕ್ ಚಕ್ರವನ್ನು ಪ್ರತಿನಿಧಿಸುವ ನೃತ್ಯದ ಪ್ರಭುವಾಗಿ ಶಿವ ನನ್ನು ಚಿತ್ರಿಸಲಾಗಿದೆ.
    • ಪವಿತ್ರ ರೇಖಾಗಣಿತ: ದೈವಿಕ ಮತ್ತು ಬ್ರಹ್ಮಾಂಡದ ಜ್ಯಾಮಿತೀಯ ಪ್ರಾತಿನಿಧ್ಯಗಳಾಗಿ ಮಂಡಲಗಳು ಮತ್ತು ಯಂತ್ರಗಳ ಬಳಕೆ (ಉದಾ. ಶ್ರೀ ಯಂತ್ರ).

    ಬೌದ್ಧಧರ್ಮ

    • ಸಾಂಕೇತಿಕ ಹಂತ: ಆರಂಭಿಕ ಬೌದ್ಧ ಕಲೆ ಕಟ್ಟುನಿಟ್ಟಾಗಿ ಅನಿಕೋನಿಕ್(Aniconic-ಸಾಂಕೇತಿಕ) ಆಗಿತ್ತು, ಬೋಧಿ ವೃಕ್ಷ, ಧರ್ಮಚಕ್ರ ಮತ್ತು ಪಾದದ ಗುರುತುಗಳಂತಹ ಚಿಹ್ನೆಗಳ ಮೂಲಕ ಬುದ್ಧನನ್ನು ಪ್ರತಿನಿಧಿಸುವುದನ್ನು ಕಾಣುತ್ತೇವೆ.
    • ಮಾನವರೂಪದ ಹಂತ: ಬುದ್ಧನ ಮಾನವ ರೂಪವು ಕ್ರಿಸ್ತಪೂರ್ವ 2 ನೇ ಶತಮಾನ ಮತ್ತು ಕ್ರಿ.ಶ. 1 ನೇ ಶತಮಾನದ ನಡುವೆ ಹೊರಹೊಮ್ಮಿತು. ಇದು ಗಾಂಧಾರ ಮತ್ತು ಮಥುರಾ ಶೈಲಿಗಳಿಂದ ಹೆಚ್ಚು ಪ್ರಭಾವಿತವಾಗಿದೆ.
    • ಮುದ್ರೆಗಳು: ಪ್ರಮುಖ ಮುದ್ರೆಗಳಲ್ಲಿ ಧರ್ಮಚಕ್ರ ಮುದ್ರೆ (ಉಪದೇಶ) ಮತ್ತು ಅಭಯ ಮುದ್ರೆ ಸೇರಿವೆ.
    • ಸ್ತೂಪ: ಸ್ತೂಪವನ್ನು ಬುದ್ಧನ ಅತೀಂದ್ರಿಯ ದೇಹದ ಸ್ಮಾರಕ ಪ್ರಾತಿನಿಧ್ಯವಾಗಿ ನೋಡಲಾಗುತ್ತದೆ.

    ಜೈನ ಧರ್ಮ

    ತೀರ್ಥಂಕರ ವ್ಯಕ್ತಿಗಳು: ಪ್ರತಿಮೆಗಳು ಎರಡು ನಿರ್ದಿಷ್ಟ ಭಂಗಿಗಳಲ್ಲಿ ಆಧ್ಯಾತ್ಮಿಕತೆಯನ್ನು  ಪ್ರತಿನಿಧಿಸುತ್ತವೆ: ಪದ್ಮಾಸನ (ಕುಳಿತುಕೊಂಡಿರುವುದು) ಮತ್ತು ಕಾಯೋತ್ಸರ್ಗ (ನಿಂತಿರುವ ಧ್ಯಾನ).

    ಸರಳತೆ: ಜೈನ ವಿಗ್ರಹಗಳು ಸಾಮಾನ್ಯವಾಗಿ ಸರಳ ಮತ್ತು ಅಲಂಕಾರರಹಿತವಾಗಿರುತ್ತವೆ. ಇದು ತ್ಯಾಗ ಮತ್ತು ಆಧ್ಯಾತ್ಮಿಕ ಶುದ್ಧತೆಯನ್ನು ಒತ್ತಿಹೇಳುತ್ತವೆ.

    ಲಾಂಛನಗಳು: ಪ್ರತಿಯೊಂದು ಜಿನನನ್ನು ತಳದಲ್ಲಿ ಒಂದು ಸಣ್ಣ ಚಿಹ್ನೆ ಮೂಲಕ ಗುರುತಿಸಲಾಗುತ್ತದೆ. ಉದಾಹರಣೆಗೆ ಮಹಾವೀರನಿಗೆ ಸಿಂಹ ಅಥವಾ ಋಷಭನಾಥನಿಗೆ ವೃಷಭ.

    ನವದೇವತಾ ಚಕ್ರ: ಜೈನ ಧರ್ಮದಲ್ಲಿ ಪೂಜೆಗಾಗಿ ಬಳಸಲಾಗುವ ವಿಶಿಷ್ಟ ಪವಿತ್ರ ಜ್ಯಾಮಿತಿ ರೇಖಾಚಿತ್ರವು ಪವಿತ್ರ ಆತ್ಮಗಳು ಮತ್ತು ಧರ್ಮ ಚಕ್ರವನ್ನು ಚಿತ್ರಿಸುತ್ತದೆ.

    7. ಉಪಸಂಹಾರ

    ಭಾರತೀಯ ಪ್ರತಿಮಾಶಾಸ್ತ್ರವು ಕೇವಲ ಅಲಂಕಾರಿಕವಲ್ಲ. ಆದರೆ ಮಾನವ ಅನುಭವವನ್ನು ವಿಶ್ವ ಕ್ರಮದೊಂದಿಗೆ ಸಂಪರ್ಕಿಸುವ ಆಳವಾದ ಆಧ್ಯಾತ್ಮಿಕ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ. ಆರಂಭಿಕ ವೇದದ ಚಿಹ್ನೆಗಳಿಂದ ಅತ್ಯಾಧುನಿಕ ಹೆಲೆನಿಸ್ಟಿಕ್-ಪ್ರಭಾವಿತ ಶಿಲ್ಪಗಳವರೆಗೆ, ಇದು ಧಾರ್ಮಿಕ ತತ್ವಶಾಸ್ತ್ರಗಳು ಮತ್ತು ಧ್ಯಾನ ಪದ್ಧತಿಗಳನ್ನು ವ್ಯಕ್ತಪಡಿಸಲು ಅನಿವಾರ್ಯ ಮಾಧ್ಯಮವಾಗಿ ಉಳಿದಿದೆ. ಶತಮಾನಗಳ ಸಂಪ್ರದಾಯದಲ್ಲಿ ಬೇರೂರಿರುವ ಈ ಪ್ರತಿಮಾಶಾಸ್ತ್ರೀಯ ರೂಪಗಳು ಪ್ರಾದೇಶಿಕ ಜಾನಪದ ಕಲೆಗಳ ಮೂಲಕ ವಿಕಸನಗೊಳ್ಳುತ್ತಲೇ ಇರುತ್ತವೆ. ಇವುಗಳು ಆಧುನಿಕ ಭಾರತೀಯ ಜೀವನದಲ್ಲಿಯೂ ಅವುಗಳ ಪ್ರಸ್ತುತತೆಯನ್ನು ಕಾಯ್ದುಕೊಳ್ಳುತ್ತಿವೆ.