ಪ್ರವಾಸೋದ್ಯಮದ ಸಾಮಾಜಿಕ-ಆರ್ಥಿಕ ಪರಿಣಾಮ

ಪ್ರವಾಸೋದ್ಯಮದ ಸಾಮಾಜಿಕ-ಆರ್ಥಿಕ ಪರಿಣಾಮ

ಆಧುನಿಕ ಜಗತ್ತಿನಲ್ಲಿ ಪ್ರವಾಸೋದ್ಯಮವು ಅತ್ಯಂತ ಕ್ರಿಯಾತ್ಮಕ ಮತ್ತು ಪ್ರಭಾವಶಾಲಿ ವಲಯಗಳಲ್ಲಿ ಒಂದಾಗಿದೆ. ವಿರಾಮ ಮತ್ತು ಪ್ರಯಾಣವನ್ನು ಮೀರಿ, ಇದು ಸಮಾಜಗಳನ್ನು ರೂಪಿಸುವಲ್ಲಿ ಮತ್ತು ಆರ್ಥಿಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಸಾಮಾಜಿಕ ಮತ್ತು ಆರ್ಥಿಕ ಕೊಡುಗೆಗಳ ಮೂಲಕ ಇದರ ಪ್ರಭಾವವನ್ನು ವಿಶಾಲವಾಗಿ ಅರ್ಥಮಾಡಿಕೊಳ್ಳಬಹುದು, ಇವೆರಡೂ ಅವಕಾಶಗಳು ಮತ್ತು ಸವಾಲುಗಳನ್ನು ತರುತ್ತವೆ.

1.  ಪ್ರವಾಸೋದ್ಯಮದ ಸಾಮಾಜಿಕ ಪರಿಣಾಮ:

ಪ್ರವಾಸೋದ್ಯಮವು ಗಮ್ಯಸ್ಥಾನಗಳ ಸಾಮಾಜಿಕ ರಚನೆ ಮತ್ತು ಸಾಂಸ್ಕೃತಿಕ ರಚನೆಯ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರುತ್ತದೆ.

*   ಪ್ರವಾಸೋದ್ಯಮವು ವಿಭಿನ್ನ ಹಿನ್ನೆಲೆಯ ಜನರನ್ನು ಒಟ್ಟಿಗೆ ತರುವ ಮೂಲಕ ಮತ್ತು ಶಾಂತಿಯುತ ಸಂವಹನಗಳನ್ನು ಪ್ರೋತ್ಸಾಹಿಸುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ.

*   ಇದು ದೇಶಗಳ ನಡುವೆ ಪರಸ್ಪರ ತಿಳುವಳಿಕೆ ಮತ್ತು ಸಹಕಾರವನ್ನು ಬೆಳೆಸುತ್ತದೆ, ಬಲವಾದ ಅಂತರರಾಷ್ಟ್ರೀಯ ಸಂಬಂಧಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

*   ಪ್ರವಾಸೋದ್ಯಮವು ವಿದೇಶಿಯರಿಗೆ ಸ್ಥಳೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಜೀವನ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಶಂಸಿಸಲು ಅನುವು ಮಾಡಿಕೊಡುತ್ತದೆ.

*   ಇದು ಕರಕುಶಲ ವಸ್ತುಗಳು ಮತ್ತು ಸ್ಥಳೀಯ ಕಲೆಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಸಾಂಪ್ರದಾಯಿಕ ಕೌಶಲ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುತ್ತದೆ.

*   ಪ್ರವಾಸೋದ್ಯಮವು ಶೈಕ್ಷಣಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಜೀವನಶೈಲಿ, ಪದ್ಧತಿಗಳು, ಸಂಪ್ರದಾಯಗಳು, ಭಾಷೆ ಮತ್ತು ಉಡುಗೆ ತೊಡುಗೆಗಳ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ.

*   ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ, ಪ್ರವಾಸಿಗರು ಆಧ್ಯಾತ್ಮಿಕ ಮೌಲ್ಯಗಳು ಮತ್ತು ಅಭ್ಯಾಸಗಳನ್ನು ಅನುಭವಿಸಬಹುದು ಮತ್ತು ಕೆಲವೊಮ್ಮೆ ಅಳವಡಿಸಿಕೊಳ್ಳಬಹುದು.

*   ಪ್ರವಾಸೋದ್ಯಮವು ಜಾತಿ, ಧರ್ಮ ಮತ್ತು ಬಡತನಕ್ಕೆ ಸಂಬಂಧಿಸಿದ ಸಾಮಾಜಿಕ ಅಡೆತಡೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಹಂಚಿಕೊಂಡ ಅನುಭವಗಳನ್ನು ಪ್ರೋತ್ಸಾಹಿಸುತ್ತದೆ.

ಆದಾಗ್ಯೂ, ಪ್ರವಾಸೋದ್ಯಮವು ಕೆಲವು ನಕಾರಾತ್ಮಕ ಸಾಮಾಜಿಕ ಪರಿಣಾಮಗಳನ್ನು ಬೀರಬಹುದು:

*   ಕೆಲವು ಸಂದರ್ಭಗಳಲ್ಲಿ, ಪ್ರಾಚೀನ ಕಟ್ಟಡಗಳು ಮತ್ತು ಪರಂಪರೆಯ ರಚನೆಗಳನ್ನು ಆಧುನಿಕ ಮೂಲಸೌಕರ್ಯ ಮತ್ತು ಪ್ರವಾಸಿ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ಕೆಡವಬಹುದು ಅಥವಾ ಬದಲಾಯಿಸಬಹುದು.

* ಅತಿಯಾದ ಪ್ರವಾಸೋದ್ಯಮವು ಸಾಂಸ್ಕೃತಿಕ ದುರ್ಬಲತೆಗೆ ಕಾರಣವಾಗಬಹುದು, ಅಲ್ಲಿ ಸ್ಥಳೀಯ ಸಂಪ್ರದಾಯಗಳನ್ನು ಪ್ರವಾಸಿಗರ ನಿರೀಕ್ಷೆಗಳಿಗೆ ತಕ್ಕಂತೆ ಮಾರ್ಪಡಿಸಲಾಗುತ್ತದೆ.

* ಜನಪ್ರಿಯ ತಾಣಗಳಲ್ಲಿ ಜನದಟ್ಟಣೆ ಸ್ಥಳೀಯ ಜೀವನಶೈಲಿಯನ್ನು ಅಡ್ಡಿಪಡಿಸಬಹುದು ಮತ್ತು ನಿವಾಸಿಗಳ ಜೀವನದ ಗುಣಮಟ್ಟವನ್ನು ಕಡಿಮೆ ಮಾಡಬಹುದು.

2.  ಪ್ರವಾಸೋದ್ಯಮದ ಆರ್ಥಿಕ ಪರಿಣಾಮ

ಪ್ರವಾಸೋದ್ಯಮವು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಪ್ರಬಲ ಚಾಲಕವಾಗಿದೆ.

*   ಇದು ಪ್ರಯಾಣ, ವಸತಿ, ಆಹಾರ ಮತ್ತು ಮನರಂಜನೆಗಾಗಿ ಖರ್ಚು ಮಾಡುವ ಮೂಲಕ ದೇಶಕ್ಕೆ ಆದಾಯವನ್ನು ಗಳಿಸುತ್ತದೆ.

*   ಪ್ರವಾಸೋದ್ಯಮವು ವಿದೇಶಿ ವಿನಿಮಯ ಗಳಿಕೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ, ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುತ್ತದೆ.

*   ಇದು ನೇರ (ಹೋಟೆಲ್‌ಗಳು, ಮಾರ್ಗದರ್ಶಿಗಳು, ಸಾರಿಗೆ) ಮತ್ತು ಪರೋಕ್ಷ (ಕರಕುಶಲ ವಸ್ತುಗಳು, ಕೃಷಿ, ಸೇವೆಗಳು) ಎರಡರಲ್ಲೂ ವ್ಯಾಪಕ ಶ್ರೇಣಿಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

*   ಪ್ರವಾಸೋದ್ಯಮವು ಸಾರಿಗೆ, ಆತಿಥ್ಯ ಮತ್ತು ಸ್ಥಳೀಯ ಕರಕುಶಲ ವಸ್ತುಗಳಂತಹ ಸಂಬಂಧಿತ ಸೇವೆ ಮತ್ತು ಕೈಗಾರಿಕೆಗಳ ಬೆಳವಣಿಗೆಯನ್ನು ಬೆಂಬಲಿಸುತ್ತದೆ.

*   ಇದು ಗ್ರಾಮೀಣ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

*   ಪ್ರವಾಸೋದ್ಯಮವು ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ, ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಬಲೀಕರಣವನ್ನು ಉತ್ತೇಜಿಸುತ್ತದೆ.

*   ಇದು ರಸ್ತೆಗಳು, ವಿಮಾನ ನಿಲ್ದಾಣಗಳು, ಹೋಟೆಲ್‌ಗಳು ಮತ್ತು ಮನರಂಜನಾ ಸೌಲಭ್ಯಗಳು ಸೇರಿದಂತೆ ಮೂಲಸೌಕರ್ಯದಲ್ಲಿ ದೇಶೀಯ ಮತ್ತು ವಿದೇಶಿ ಹೂಡಿಕೆಯನ್ನು ಪ್ರೋತ್ಸಾಹಿಸುತ್ತದೆ.

ಹೆಚ್ಚುವರಿ ಆರ್ಥಿಕ ಪ್ರಯೋಜನಗಳು ಸೇರಿವೆ:

*   ಸ್ಥಳೀಯ ವ್ಯವಹಾರಗಳು ಮತ್ತು ಸಣ್ಣ-ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿ.

* ನೈರ್ಮಲ್ಯ, ಸಂವಹನ ಮತ್ತು ಸಂಪರ್ಕದಂತಹ ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ಸುಧಾರಣೆ.

*   ತೆರಿಗೆಗಳು ಮತ್ತು ಪ್ರವಾಸೋದ್ಯಮ ಸಂಬಂಧಿತ ಶುಲ್ಕಗಳ ಮೂಲಕ ಸರ್ಕಾರಿ ಆದಾಯವನ್ನು ಉತ್ಪಾದಿಸುವುದು.

ಅದೇ ಸಮಯದಲ್ಲಿ, ಕೆಲವು ಆರ್ಥಿಕ ಸವಾಲುಗಳಿವೆ:

*    ಪ್ರವಾಸೋದ್ಯಮದ ಮೇಲಿನ ಅತಿಯಾದ ಅವಲಂಬನೆಯು ಆರ್ಥಿಕತೆಯನ್ನು ಕಾಲೋಚಿತ ಏರಿಳಿತಗಳು ಮತ್ತು ಜಾಗತಿಕ ಬಿಕ್ಕಟ್ಟುಗಳಿಗೆ ಗುರಿಯಾಗಿಸಬಹುದು.

*   ಪ್ರವಾಸಿ ಪ್ರದೇಶಗಳಲ್ಲಿನ ಹಣದುಬ್ಬರವು ಸ್ಥಳೀಯ ನಿವಾಸಿಗಳ ಜೀವನ ವೆಚ್ಚವನ್ನು ಹೆಚ್ಚಿಸಬಹುದು.

*   ಪ್ರವಾಸೋದ್ಯಮ ಆದಾಯದ ಅಸಮಾನ ಹಂಚಿಕೆಯು ಆರ್ಥಿಕ ಅಸಮಾನತೆಗಳಿಗೆ ಕಾರಣವಾಗಬಹುದು.

ಉಪಸಂಹಾರ

ಪ್ರವಾಸೋದ್ಯಮವು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಪ್ರಬಲ ಸಾಧನವಾಗಿದೆ. ಇದು ಸಾಂಸ್ಕೃತಿಕ ವಿನಿಮಯವನ್ನು ಹೆಚ್ಚಿಸುತ್ತದೆ, ಏಕತೆಯನ್ನು ಉತ್ತೇಜಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಪ್ರವಾಸೋದ್ಯಮವು ಸುಸ್ಥಿರವಾಗಿ ಉಳಿಯಲು, ಸಂಸ್ಕೃತಿ, ಪರಿಸರ ಮತ್ತು ಸ್ಥಳೀಯ ಸಮುದಾಯಗಳ ಸಂರಕ್ಷಣೆಯೊಂದಿಗೆ ಅಭಿವೃದ್ಧಿಯನ್ನು ಸಮತೋಲನಗೊಳಿಸಲು ಅದನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಪ್ರವಾಸೋದ್ಯಮವು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಪ್ರಯೋಜನವನ್ನು ನೀಡುವುದನ್ನು ಜವಾಬ್ದಾರಿಯುತ ವಿಧಾನವು ಖಾತರಿಪಡಿಸಬೇಕು..

ಪ್ರವಾಸೋದ್ಯಮದ ಅನುಕೂಲ ಮತ್ತು ಅನಾನುಕೂಲಗಳು

ಪ್ರವಾಸೋದ್ಯಮದ ಅನುಕೂಲ ಮತ್ತು ಅನಾನುಕೂಲಗಳು

ಪ್ರವಾಸೋದ್ಯಮದಿಂದ ಎಷ್ಟು ಒಳಿತಾಗುವುದೋ ಅಷ್ಟೇ ಕೆಡಕುಗಳೂ ಆಗುತ್ತವೆ. ಹೀಗಾಗಿ ಅದು ರಾಜಕೀಯ, ಆರ್ಥಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗಗಳ ಮೇಲೂ ತನ್ನ ಪ್ರಭಾವವನ್ನು ಬೀರಿದೆ ಅವುಗಳು ಹೀಗಿವೆ.

 ಪ್ರವಾಸೋದ್ಯಮದ ಅನುಕೂಲತೆಗಳು (Positive Impacts of Tourism)

ಪ್ರವಾಸೋದ್ಯಮವು ಲಕ್ಷಾಂತರ ಪ್ರವಾಸಿಗರನ್ನು ದಿನನಿತ್ಯ ಆಕರ್ಷಿಸುವುದರಿಂದ ಅದು ಆರ್ಥಿಕವಾಗಿ ತುಂಬಾ ಪ್ರಭಾವಶಾಲಿಯಾಗಿದೆ. ಇದರಿಂದ ಪ್ರವಾಸ ಉದ್ಯಮವು ದೊಡ್ಡ ಉದ್ದಿಮೆಯಾಗಿ ಬೆಳೆದು ನಿಂತಿದೆ.

 1. ಆರ್ಥಿಕ ಏರುಪೇರು ನಿವಾರಣೆ : (Solve the Econamic up and down)

ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ರಾಷ್ಟ್ರಗಳ ನಡುವಿನ ಆರ್ಥಿಕ ಏರುಪೇರು ನಿವಾರಣೆಗೆ ಪ್ರವಾಸೋದ್ಯಮ ನೆರವಾಗುತ್ತದೆ. ಅಭಿವೃದ್ಧಿಶೀಲ ದೇಶಗಳು ಬಂಡವಾಳ ರಹಿತವಾಗಿ ಹಣವನ್ನು ಗಳಿಸುತ್ತವೆ. ಹಾಗಾಗಿ ಅಲ್ಲಿ ಹೋಟೆಲ್, ಸಾರಿಗೆ ಉದ್ಯಮಗಳು ಬೆಳೆಯುತ್ತವೆ. ಉದ್ಯೋಗಾವಕಾಶ ಹೆಚ್ಚುತ್ತದೆ 1967ನೇ ವರ್ಷವನ್ನು ವಿಶ್ವಸಂಸ್ಥೆ ಅಂತರಾಷ್ಟ್ರೀಯ ಪ್ರವಾಸಿ ವರ್ಷ ಎಂದು ಘೋಷಿಸಿತು.

2. ರಾಷ್ಟ್ರೀಯ ಆದಾಯದ ಮೂಲ (Source of National Income)

ಪ್ರವಾಸೋದ್ಯಮವು ರಾಷ್ಟ್ರೀಯ ಆದಾಯದ ಮೂಲವಾಗಿದೆ. ಹೇಗಂದರೆ ಪ್ರವಾಸಿಗನು ಖರ್ಚು ಮಾಡುವ ಹಣವೇ ದೇಶದ ಆದಾಯವಾಗಿದೆ. ಈ ಪ್ರವಾಸೋದ್ಯಮವನ್ನು ಅವಲಂಬಿಸಿ ಬದುಕುವ ಸಾರಿಗೆ, ವಸತಿ, ಕರಕುಶಲ ಉದ್ದಿಮೆಗಳಿಂದಲೂ ದೇಶಕ್ಕೆ ವರಮಾನ ಬರುತ್ತದೆ. ಪ್ರವಾಸೋದ್ಯಮದಿಂದ ದೇಶಕ್ಕೆ 1980-85 ರಲ್ಲಿ, 1874-6 ಮಿಲಿಯನ್‌, 1990 ರಲ್ಲಿ  24,560 ಮಿಲಿಯನ್‌, 1993 ರಲ್ಲಿ 372.6 ಬಿಲಿಯನ್‌, 1999 ರಲ್ಲಿ 13041 ಕೋಟಿ, 2000 ರಲ್ಲಿ 14408 ಕೋಟಿ, 2008 ರಲ್ಲಿ 1170 ಕೋಟಿ ಹಾಗೂ 2025 ರಲ್ಲಿ 43.7 ಬಿಲಿಯನ್‌ ಆದಾಯ ಬಂದಿದೆ.

3. ಉದ್ಯೋಗಾವಕಾಶಗಳು (Job Opportunities)

ಪ್ರವಾಸೋದ್ಯಮವು ಒಂದು ಹೊಗೆ ರಹಿತ ಉದ್ದಿಮೆ. ಇಲ್ಲಿ ಅಸಂಖ್ಯಾತ ಉದ್ಯೋಗಾವಕಾಶಗಳಿವೆ ಸಾರಿಗೆ ಹೋಟೆಲ್ ಪ್ರವಾಸಿ ನಿರ್ವಾಹಕ ಏಜೆನ್ಸಿ, ಪ್ರವಾಸಿ ಏಜೆನ್ಸಿ, ಶಾಪಿಂ,ಗ್ ಕರ ಕುಶಲ ಕೈಗಾರಿಕೆ, ಮಾರುಕಟ್ಟೆಗಳಲ್ಲಿ ನಿರತರಾದ ಅಸಂಖ್ಯಾತ ಜನರಿಗೆ ಪ್ರವಾಸೋದ್ಯಮ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವಾರು ಉದ್ಯೋಗಗಳನ್ನು ನೀಡಿದೆ 1975ರಲ್ಲಿ 9,33,000 ಜನ ಉದ್ಯೋಗ ಪಡೆದಿದ್ದಾರೆ 1977ಕ್ಕೆ ಅದು 1.08 ಮಿಲಿಯನ್ ಗೆ ಏರಿತು. 1980ರಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯೋಗಿಗಳ ಸಂಖ್ಯೆ 1.3 ಮಿಲಿಯನ್ ಇದ್ದಿತು. 1965 ರಿಂದ 66ರಲ್ಲಿ 3,89,341  1968-69 ರಲ್ಲಿ 518871,  1972 ರಿಂದ 73 9,33,766, 2002 ರಲ್ಲಿಯೇ ಶೇಕಡಾ 9.24 ರಷ್ಟು ಹಾಗೂ 2025ರ ವೇಳೆಗೆ ಅದು 48 ಮಿಲಿಯನ್ ಗಳಷ್ಟು ಆಗಿದೆ.

4. ವಿದೇಶಿ ವಿನಿಮಯ ಗಳಿಕೆ : (Earning of Foreign Exchange)

ಭಾರತವು ಪ್ರವಾಸೋದ್ಯಮದಿಂದ 1981 ರಲ್ಲಿ ಜಗತ್ತಿನಲ್ಲಿ ಮೂರನೇ ಸ್ಥಾನ ಗಳಿಸಿತ್ತು. 2008 ರಲ್ಲಿ 11.7 ಶತಕೋಟಿ ಡಾಲರ್ 2002ರಲ್ಲಿ 3.1 ಶತ ಕೋಟಿ ಡಾಲರ್, 2003 ರಲ್ಲಿ 13,000 ಶತಕೋಟಿ ಹಾಗೂ 2022 ರಲ್ಲಿ 2.3 ಲಕ್ಷ ಕೋಟಿ ವಿದೇಶಿ ವಿನಿಮಯ ಗಳಿಸಿದೆ.

5. ಸಂದಾಯ ಬಾಕಿ ಪಾವತಿ (Balance of Payment)

ಪ್ರವಾಸಿಗರಿಂದ ಬರುವ ವಿದೇಶಿ ವಿನಿಮಯವನ್ನು ಸಂದಾಯ ಬಾಕಿ ಪಾವತಿಸಲು ಒಂದು ದೇಶಕ್ಕೆ ಪ್ರವಾಸೋದ್ಯಮ ನೆರವಾಗುತ್ತದೆ.

6. ಸಾಂಸ್ಕೃತಿಕ ಪ್ರಭಾವ (Cultural Impact)

ವಿವಿಧ ಸಂಸ್ಕೃತಿಯ ಹಿನ್ನೆಲೆಯುಳ್ಳ ಪ್ರವಾಸಿಗರು ಒಂದು ಕಡೆ ಸೇರುವುದರಿಂದ ಅವರ ಆಹಾರ ವಿಹಾರ, ಜೀವನ ಶೈಲಿ, ವಿಚಾರಗಳು, ಶಿಕ್ಷಣ ವಿಧಾನ, ಸಾಂಸ್ಕೃತಿಕ ಪದ್ಧತಿ, ಕಲೆ ಹಾಗೂ ವಾಸ್ತುಶಿಲ್ಪ, ಸಂಗೀತ ವೇಷಭೂಷಣ ಮುಂತಾದವುಗಳಿಂದ ಪರಸ್ಪರರು ಆಕರ್ಷಿತರಾಗುತ್ತಾರೆ ಅವರ ನಡುವೆ ಸಾಂಸ್ಕೃತಿಕ ಅರಿವು ಮೂಡುತ್ತದೆ. ಪರಸ್ಪರ ಸಾಮಾಜಿಕ ಜೀವನವನ್ನು ಅರಿತುಕೊಳ್ಳಲು ಸಹಾಯಕವಾಗುತ್ತದೆ.

7. ನೈಸರ್ಗಿಕ ಸಂಪನ್ಮೂಲ ರಕ್ಷಣೆ (Conservation of Natural Resources)

ಪ್ರವಾಸೋದ್ಯಮ ನಿಂತಿರುವುದೇ ನೈಸರ್ಗಿಕ ಪರಿಸರದ ಮೇಲೆ. ಪ್ರಾಕೃತಿಕ ಪರಿಸರ ಇದ್ದರೆ ಮಾತ್ರ ಪ್ರವಾಸೋದ್ಯಮ ನಡೆಯುತ್ತದೆ. ಹಾಗಾಗಿ ನಾವುಗಳು ವನ್ಯಪ್ರಾಣಿ ಧಾಮ,  ಪಕ್ಷಿಧಾಮ,  ಗಿರಿಗಳು, ಕಡಲ ದಂಡೆಗಳು,  ನದಿ,  ಸರೋವರಗಳು, ಜಲಪಾತಗಳು, ಕಣಿವೆಗಳು, ಪರ್ವತಗಳನ್ನು ರಕ್ಷಿಸಿ ಸುಸ್ಥಿರವಾಗಿ ಅಭಿವೃದ್ಧಿಪಡಿಸಬೇಕು. ಇಲ್ಲದೆ ಹೋದರೆ ಪ್ರವಾಸೋದ್ಯಮ ಅವನತಿಗೊಳ್ಳುತ್ತದೆ.

8. ಸಾಂಸ್ಕೃತಿಕ ಪರಂಪರೆಯ ರಕ್ಷಣೆ (Preservation of Cultural Heritage)

ಭಾರತದ ಸಾಂಸ್ಕೃತಿಕ ಪರಂಪರೆಗಳಾದ ದೇವಾಲಯಗಳು, ಅರಮನೆಗಳು, ಕೋಟೆ ಕೊತ್ತಲಗಳು, ಗೋಪುರಗಳು, ಚೈತ್ಯಗಳು, ಸ್ತೂಪಗಳು, ಮಸೀದಿಗಳು, ಚರ್ಚುಗಳು, ವಸ್ತು ಸಂಗ್ರಹಾಲಯಗಳು, ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರಗಳಾಗಿವೆ. ಅವುಗಳನ್ನು ಸಂರಕ್ಷಿಸಿ ಮುಂದಿನವರಿಗೆ ನೀಡಬೇಕಾದದ್ದು ಮುಖ್ಯವಾಗಿದೆ ಎಂಬುದನ್ನು ಪ್ರವಾಸೋದ್ಯಮವು ಜನರಿಗೆ ಮನವರಿಕೆ ಮಾಡಿಕೊಡಬೇಕು.

9. ಪ್ರವಾಸೋದ್ಯಮದಿಂದ ಹೋಟೆಲ್‌ಗಳು, ಸಾರಿಗೆ, ವಸತಿ ಹಾಗೂ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತವೆ. ಅವುಗಳಿಂದ ದೇಶಕ್ಕೆ ಆದಾಯ ಬರುತ್ತದೆ.

10. ಪ್ರವಾಸೋದ್ಯಮ ವಿವಿಧ ಸಂಸ್ಕೃತಿ, ಆಚಾರ ವಿಚಾರ, ಸಂಶೋಧನೆ ಹಾಗೂ ಶಿಕ್ಷಣದ ಕುರಿತು ಅರಿವನ್ನುಂಟು ಮಾಡುತ್ತದೆ.

11. ಪ್ರವಾಸೋದ್ಯಮವು ದೇಶೀಯ ಹಾಗೂ ವಿದೇಶಿ ಆಮದು ರಫ್ತುಗಳನ್ನು ಮಾಡಲು ಪ್ರೋತ್ಸಾಹ ನೀಡುತ್ತದೆ.

12. ಜನರು ಹಾಗೂ ಸಮಾಜಗಳ ನಡುವೆ ಪರಸ್ಪರ ಸಹಕಾರವನ್ನು ಉಂಟುಮಾಡುವ ಜವಾಬ್ದಾರಿಯನ್ನು ಪ್ರವಾಸೋದ್ಯಮ ನಿರ್ವಹಿಸುತ್ತದೆ.

13.  ಬಡತನ ನಿವಾರಣೆಯಾಗಿ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ.

14. ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು.

15.ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ಹೊಣೆಗಾರಿಕೆ ಪ್ರವಾಸೋದ್ಯಮದಾಗಿದೆ.

ಪ್ರವಾಸೋದ್ಯಮದ ಅನಾನುಕೂಲಗಳು (Negative Impacts)

1. ಪ್ರವಾಸೋದ್ಯಮವು ಜಲ ಮಾಲಿನ್ಯ, ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಪ್ರವಾಸಿಗರು ಬರುವ ನೂರಾರು ವಾಹನಗಳಿಂದ ಬಿಡುಗಡೆಯಾಗುವ ಹೊಗೆಯಿಂದ ಇಡೀ ವಾತಾವರಣವೇ ಕಲುಷಿತಗೊಳ್ಳುತ್ತದೆ. ಜೊತೆಗೆ ಪ್ರವಾಸಿಗರು ಎಸೆಯುವ ಕಸ ಕಡ್ಡಿ, ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಕಪ್ಪುಗಳು, ಐಸ್ ಕ್ರೀಮ್ ಕವರುಗಳು, ಚಾಕೋಲೇಟ್ ಕವರುಗಳು ವಾತಾವರಣವನ್ನು ಹದಗೆಡಿಸುತ್ತವೆ. ಪ್ರವಾಸಿ ಕೇಂದ್ರಗಳ ಹೋಟೆಲುಗಳು ಬಿಡುವ ಕಲ್ಮಶನೀರು, ನೀರಿನಲ್ಲಿ ಸಂಚರಿಸುವ ದೋಣಿಯಿಂದ ಬಿಡುವ ಕಾರ್ಬನ್‌ಗಳಿಂದ ಜಲ ಮಾಲಿನ್ಯ ಉಂಟಾಗುತ್ತದೆ. ಅನುಪಯುಕ್ತ ವಸ್ತುಗಳು ಕೊಳೆತು ಹೋಗುವುದರಿಂದ ಸುತ್ತಲೂ ದುರ್ನಾತ ಹರಡುತ್ತದೆ.

 2. ಪ್ರವಾಸೋದ್ಯಮವು ಹೋಟೆಲ್ ನಿರ್ಮಿಸಲು ಭೂಮಿಯನ್ನು ಬಳಸುವುದರಿಂದ ಸಾಗುವಳಿಗೆ ಯೋಗ್ಯವಾದ ಭೂಮಿಯ ಪ್ರಮಾಣ ಕಡಿಮೆಯಾಗುತ್ತದೆ. ಇದಕ್ಕಾಗಿ ಸಾಕಷ್ಟು ಅರಣ್ಯ ಭೂಮಿಯನ್ನು ಬಳಸಿಕೊಳ್ಳುವುದರಿಂದ ಕಾಡು ನಾಶವಾಗುತ್ತದೆ. ಮುಂದೆ ಆಹಾರ ಉತ್ಪಾದನೆ ಕಷ್ಟವಾಗಿ ತಿನ್ನಲು ಆಹಾರದ ಕೊರತೆ ಕಂಡು ಬರಬಹುದು.

 3. ಪ್ರವಾಸಿ ಕೇಂದ್ರಗಳಲ್ಲಿ ಎಲ್ಲೆಂದರಲ್ಲಿ ಕಟ್ಟಡಗಳು ತಲೆ ಎತ್ತುವುದರಿಂದ ನೈಸರ್ಗಿಕ ಸೌಂದರ್ಯ ಹಾಳಾಗುತ್ತದೆ.

 4. ಪ್ರವಾಸೋದ್ಯಮಕ್ಕಾಗಿ ಕಟ್ಟಡಗಳನ್ನು ನಿರ್ಮಿಸುವುದರಿಂದ ಕಾಡು ನಾಶ ಹೊಂದಿ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳ ಸಂತತಿ ಹಾಳಾಗುತ್ತದೆ.

 5. ಪ್ರವಾಸಿಗರ ಬೇಡಿಕೆಗಳನ್ನು ಈಡೇರಿಸುವ ಬರದಲ್ಲಿ ಪ್ರವಾಸೋದ್ಯಮ ಇಲಾಖೆ ಪರಿಸರವನ್ನು ಹಾಳುಮಾಡುತ್ತಿದೆ. ಉದಾ: ಕಾಶ್ಮೀರಿನ ದಾಲ್ ಸರೋವರ ವಿಪರೀತ ಹಾಳಾಗಿದೆ.

 6. ಪ್ರವಾಸಕ್ಕೆಂದು ಬಂದವರು ಐತಿಹಾಸಿಕ ಸ್ಮಾರಕಗಳ ಮೇಲೆ ಗಿರುವುದು, ಕಲ್ಲಿನಿಂದ ಹೊಡೆಯುವುದು ಮತ್ತು ಅವುಗಳ ಮೇಲೆ ತಮ್ಮ ಹೆಸರುಗಳನ್ನು ಬರೆಯುವುದನ್ನು ಮಾಡುವುದರಿಂದ ಅವುಗಳು ವಿರೂಪಗೊಳ್ಳುತ್ತವೆ.

 7. ವಿದೇಶಿ ಪ್ರವಾಸಿಗರು ಭಾರತಕ್ಕೆ ಬರುವುದರಿಂದ ಅವರಿಂದ ಕಾಲರಾ, ಮಲೇರಿಯಾ ಹರಡಿ ಸ್ಥಳೀಯ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. 2021 ರಲ್ಲಿ ವಿದೇಶಿ ಪ್ರವಾಸಿಗರಿಂದ ಕರೋನ ಕಾಯಿಲೆ ಬಂದು ಲಕ್ಷಾಂತರ ಜನರ ಸಾವಿಗೆ ಕಾರಣವಾಯಿತು.

 8. ಪ್ರವಾಸೋದ್ಯಮವು ವೇಶ್ಯಾವೃತ್ತಿ, ಅತ್ಯಾಚಾರ, ಕಳ್ಳತನ, ಸುಲಿಗೆ, ಕೊಲೆ, ಜೂಜು, ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಹಾಗೂ ಭಯೋತ್ಪಾದನೆಯಂತಹ ಅನಿಷ್ಟಗಳಿಗೆ ಕಾರಣವಾಗುತ್ತದೆ.

 9. ಭೂಮಿಯ ಬೆಲೆ ಏರಿಕೆ, ಸೇವೆಗಳ ಬೆಲೆ ಏರುವಿಕೆ, ಹೋಟೆಲ್ ವಸತಿಗಳ ಬೆಲೆಗಳು ಸಹ ಏರಿಕೆಯಾಗಿ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತದೆ.

 10. ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬರುವುದರಿಂದ ಸಾವು ನೋವುಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ

1945 ರ ನಂತರ ಭಾರತದ ಪ್ರವಾಸೋದ್ಯಮ  (Indian Tourism After 1945)

1945 ರ ನಂತರ ಭಾರತದ ಪ್ರವಾಸೋದ್ಯಮ (Indian Tourism After 1945)

ಸರ್. ಜಾನ್ ಸಾರ್ಜೆಂಟ್ ಆಯೋಗ.

ಭಾರತದ ಪ್ರವಾಸೋದ್ಯಮವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಬ್ರಿಟಿಷ್ ಸರ್ಕಾರ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕ್ರಮ ಕೈಗೊಂಡಿತು. ಇದರ ಪರಿಣಾಮವೇ ಸಾರ್ಜೆಂಟ್ ಆಯೋಗ. 1945ರಲ್ಲಿ ಭಾರತದ ಬ್ರಿಟಿಷ್ ಸರ್ಕಾರ ಭಾರತದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸರ್. ಜಾನ್ ಸಾರ್ಜೆಂಟ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು. ಈತ ಭಾರತ ಸರ್ಕಾರದ ಶೈಕ್ಷಣಿಕ ಸಲಹೆಗಾರನಾಗಿದ್ದ. ನಾಡಿನ ಪ್ರವಾಸಿ ಸಂಚಾರದ ಸಾಧಕ ಭಾದಕಗಳನ್ನು ಸಮೀಕ್ಷಿಸುವುದು ಸಾರ್ಜೆಂಟ್ ವರದಿಯ ಮುಖ್ಯ ಉದ್ದೇಶವಾಗಿತ್ತು.

 ಉದ್ದೇಶಗಳು (Objectives)

ಸಾರ್ಜೆಂಟ್ ಸಮಿತಿಯ ಉದ್ದೇಶಗಳು ಈ ಕೆಳಗಿನಂತಿವೆ.

  1. ಪ್ರಪಂಚದ ಮೊದಲ ಹಾಗೂ ದ್ವಿತೀಯ ಮಹಾಯುದ್ಧಗಳ ಮೊದಲು ಭಾರತದ ದೇಶಿಯ ಹಾಗೂ ವಿದೇಶಿ ಪ್ರವಾಸಿಗರ ಸಂಚಾರ ಸ್ವರೂಪ ಹಾಗೂ ವ್ಯಾಪ್ತಿಯ ಕುರಿತು ಅಧ್ಯಯನ ಮಾಡುವುದು.
  2.  ಭಾರತದ ಒಳಗೆ ಹಾಗೂ ಹೊರಗೆ ಭಾರತದ ಪುರಾತತ್ವ ನೆಲೆಗಳು, ತೀರ್ಥಯಾತ್ರೆ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು, ನೈಸರ್ಗಿಕ ಸುಂದರ ತಾಣಗಳು, ಹವಾಮಾನ ಸ್ಥಳಗಳು, ರಜೆಯ ವಿಶ್ರಾಂತಿ ಕೇಂದ್ರಗಳು, ಐತಿಹಾಸಿಕ ಕೇಂದ್ರಗಳು ಹಾಗೂ ಪ್ರಾಕೃತಿಕ ದೃಶ್ಯಾವಳಿಗಳ ಕುರಿತು ಹೆಚ್ಚು ಪ್ರಚಾರ ಮಾಡುವುದು.
  3.  ದೇಶಿಯ ಹಾಗೂ ವಿದೇಶಿ ಪ್ರವಾಸಿಗರಿಗೆ ಒದಗಿಸುವ ಸಾರಿಗೆ, ವಸತಿ, ಊಟ, ಮಾರ್ಗದರ್ಶಿ ಪುಸ್ತಕಗಳು, ಮಾರ್ಗದರ್ಶಕರು, ಸಾಹಿತ್ಯ ಪೂರೈಕೆ ಮೊದಲಾದ ಸೌಕರ್ಯಗಳ ಕುರಿತು ಮಾಹಿತಿ ನೀಡುವುದು.
  4. ಭಾರತದ ಪ್ರಾಂತ, ಸ್ಥಳಿಯ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಒದಗಿಸಬಹುದಾದ ಸೌಲಭ್ಯಗಳ ಬಗ್ಗೆ ಕ್ರಮ ಕೈಗೊಳ್ಳುವುದು.
  5.  ಪ್ರವಾಸಿ ಪ್ರಯಾಣದ ಬಗ್ಗೆ ಕ್ರಮ ಕೈಗೊಳ್ಳುವುದು.
  6.  ಬಿತ್ತಿ ಪತ್ರಗಳನ್ನು ಅಂಟಿಸುವ ಮೂಲಕ ಪ್ರವಾಸೋದ್ಯಮದ ಬಗ್ಗೆ ಪ್ರಚಾರ ಮಾಡುವುದು.
  7.  ಪ್ರವಾಸೋದ್ಯಮ ಇಲಾಖೆಯ ಮಾರ್ಗದರ್ಶಕರಿಗೆ ಸೂಕ್ತ ತರಬೇತಿ ನೀಡುವುದು.
  8.  ಪ್ರವಾಸೋದ್ಯಮದ ಅಂಕಿ ಅಂಶಗಳನ್ನು ಸಂಗ್ರಹಿಸುವುದು.

ವರದಿಯ ಶಿಫಾರಸ್ಸುಗಳು (Reports)

ಸಾರ್ಜೆಂಟ್ ಸಮಿತಿಯ 1946 ರ ಅಕ್ಟೋಬರ್‌ನಲ್ಲಿ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿತು. ಅದರ ಮುಖ್ಯಾಂಶಗಳು ಹೀಗಿವೆ.

  1. ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಪ್ರತ್ಯೇಕ ಸ್ವತಂತ್ರ ಪ್ರವಾಸೋದ್ಯಮವನ್ನು ಸ್ಥಾಪಿಸುವುದು.
  2.  ಪ್ರವಾಸಿ ಪ್ರಚಾರ ಕಚೇರಿಗಳನ್ನು ಮುಂಬೈ, ದೆಹಲಿ, ಕಲ್ಕತ್ತಾ ಹಾಗೂ ಮದ್ರಾಸ್‌ಗಳಲ್ಲಿ ಸ್ಥಾಪಿಸುವುದು.
  3.  ಭಾರತದ ಪ್ರವಾಸೋದ್ಯಮದ ಕುರಿತು ಭಾರತದ ಒಳಗೆ ಹಾಗೂ ವಿದೇಶಗಳಲ್ಲಿ ಪ್ರಚಾರ ಮಾಡುವುದು.
  4.  ಪ್ರವಾಸಿಗರಿಗೆ ಮಾಹಿತಿ ನೀಡಲು ಗೈಡ್‌ಗಳು, ಮಾರ್ಗದರ್ಶಿ ಪುಸ್ತಕಗಳು, ಕೈಪಿಡಿಗಳು ಹಾಗೂ ಬಿತ್ತಿ ಪತ್ರಗಳನ್ನು ಹಂಚುವುದು.
  5. ಹೋಟೆಲ್‌ಗಳಲ್ಲಿ ಊಟ ವಸತಿಗಳನ್ನು ಸಮರ್ಪಕವಾಗಿ ಒದಗಿಸುವುದು ಹಾಗೂ ಹೋಟೆಲ್ ಸಿಬ್ಬಂದಿ ಹಾಗೂ ಅಧಿಕಾರಗಳೊಂದಿಗೆ ನಿರಂತರ ಸಂಪರ್ಕ ಏರ್ಪಡಿಸುವುದು.
  6.  ಪ್ರವಾಸೋದ್ಯಮದ ಅಂಕಿ ಅಂಶಗಳನ್ನು ತಯಾರಿಸುವುದು.
  7.  ವಿಮಾನ, ಬಸ್ಸು ಹಾಗೂ ರೈಲು ಸಂಸ್ಥೆಗಳೊಂದಿಗೆ ನಿರಂತರವಾಗಿ ಸಂಪರ್ಕವನ್ನು ಇಟ್ಟುಕೊಳ್ಳುವುದು.
  8.  ಪ್ರವಾಸಿಗರಿಗಾಗಿ ಗುಣಮಟ್ಟದ ಹೋಟೆಲ್‌ಗಳನ್ನು ನಿರ್ಮಿಸುವುದು.
  9.  ವಿದೇಶಗಳಲ್ಲಿ ಭಾರತೀಯ ಪ್ರವಾಸೋದ್ಯಮ ಪ್ರಚಾರ ಕಚೇರಿಗಳನ್ನು ಸ್ಥಾಪಿಸುವುದು.

ಅನುಷ್ಠಾನ:  ಭಾರತದ ಬ್ರಿಟಿಷ್ ಸರ್ಕಾರವು ಸಾರ್ಜೆಂಟ್ ವರದಿಯನ್ನು ಒಪ್ಪಿಕೊಂಡು ಅದನ್ನು 1948 ರಲ್ಲಿ ಜಾರಿಗೊಳಿಸಿತು ಆ ಪ್ರಕಾರ ಸಾರಿಗೆ ಸಚಿವಾಲಯದ ಅಡಿಯಲ್ಲಿ ಪ್ರವಾಸಿ ಸಂಚಾರಿ ಸಮಿತಿಯನ್ನು ನೇಮಕ ಮಾಡಲಾಯಿತು. 1949ರಲ್ಲಿ ಸಚಿವಾಲಯದ ಅಡಿಯಲ್ಲಿದ್ದ ಪ್ರವಾಸಿ ಸಂಚಾರಿ ಶಾಖೆಯನ್ನು ಪ್ರತ್ಯೇಕಿಸಿ ಸ್ವತಂತ್ರ ಶಾಖೆಯನ್ನು ತೆರೆಯಲಾಯಿತು. 1956ರಲ್ಲಿ ಈ ಸಂಚಾರಿ ಪ್ರವಾಸಿ ಶಾಖೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಯಿತು ಅವುಗಳೆಂದರೆ.

  1. ಪ್ರವಾಸಿ ಸಂಚಾರಿ ವಿಭಾಗ: ಈ ವಿಭಾಗವು ಹೋಟೆಲ್, ವಸತಿ, ವಿಶ್ರಾಂತಿ ಗೃಹ ಮೊದಲಾದವುಗಳ ಮೇಲ್ವಿಚಾರಣೆ ಮಾಡುವುದು, ಪ್ರವಾಸಿ ಅಂಕಿ ಅಂಶಗಳನ್ನು ಸಂಗ್ರಹಿಸುವುದು, ಪ್ರವಾಸಿ ಮಾರ್ಗದರ್ಶಿಗಳಿಗೆ ತರಬೇತಿ ನೀಡುವುದು ಹಾಗೂ ಪ್ರವಾಸಿ ಏಜೆಂಟರ ನೇಮಕ ಮೊದಲಾದವುಗಳನ್ನು ನೋಡಿಕೊಳ್ಳಬೇಕಾಗಿತ್ತು.

2.. ಪ್ರವಾಸಿ ಆಡಳಿತ ವಿಭಾಗ:  ನೂತನ ಪ್ರವಾಸಿ ಕಚೇರಿ ತೆರೆಯುವುದು, ವಾರ್ಷಿಕ ಆಯವ್ಯ ತಯಾರಿಸುವುದು ಪ್ರವಾಸಿ ಕಚೇರಿಗಳ ಮೇಲ್ವಿಚಾರಣೆ ಮಾಡುವುದು, ಪ್ರವಾಸಿ ಕಚೇರಿಗಳ ತಪಾಸಣೆ ಮಾಡುವುದು, ಪ್ರವಾಸಿ ಆಡಳಿತ ವಿಭಾಗದ ಕರ್ತವ್ಯಗಳಾಗಿವೆ.

  1. ಪ್ರವಾಸಿ ಪ್ರಚಾರ ವಿಭಾಗ: ಪ್ರವಾಸೋದ್ಯಮ ಇಲಾಖೆಯು ಪ್ರಚಾರಕ್ಕಾಗಿ ಜಾಹೀರಾತು ನೀಡುವುದು, ಮಾರ್ಗದರ್ಶಿ ಕೈಪಡಿ ತಯಾರಿಸುವುದು, ಪ್ರವಾಸಿ ಸಾಹಿತ್ಯವನ್ನು ಪ್ರಕಟಿಸಿ ಹಂಚುವುದು, ಕಿರು ಹೊತ್ತಿಗೆ ಹಾಗೂ ಬಿತ್ತಿ ಪತ್ರ ಪ್ರಕಟಿಸುವುದು ಪ್ರವಾಸಿ ಪ್ರಚಾರ ವಿಭಾಗದ ಕಾರ್ಯಗಳಾಗಿವೆ.

  1. ಪ್ರವಾಸಿ ಮಾಹಿತಿ ವಿತರಣಾ ವಿಭಾಗ: ಪ್ರವಾಸ ಸಾಹಿತ್ಯವನ್ನು ವಿದೇಶಗಳಲ್ಲಿ ಹಂಚುವುದು, ಪ್ರಕಟಿಸುವುದು, ಇದರ ಕಾರ್ಯಗಳಾಗಿವೆ. ಸಾರ್ಜೆಂಟ್ ವರದಿಯ ಪ್ರಕಾರ ಭಾರತ ಸರ್ಕಾರವು 10 ಪ್ರವಾಸಿ ಕಚೇರಿಗಳನ್ನು ತೆರೆಯಿತು ಅವುಗಳಲ್ಲಿ ನಾಲ್ಕು ಪ್ರಾದೇಶಿಕ ಕಚೇರಿಗಳನ್ನು ದೆಹಲಿ, ಕಲ್ಕತ್ತಾ, ಮದ್ರಾಸ್ ಹಾಗೂ ಮುಂಬೈಗಳಲ್ಲಿ ತೆರೆಯಲಾಯಿತು. ಉಳಿದ ಆರು ಮಾಹಿತಿ ಕೇಂದ್ರಗಳನ್ನು ಆಗ್ರ, ಕೊಚ್ಚಿನ್, ಬೆಂಗಳೂರು, ಔರಂಗಬಾದ್, ಪಣಜಿ, ಪೋರ್ಟ್ ಬ್ಲೈರ್, ಭುವನೇಶ್ವರ, ಜೈಪುರ ಖಜುರಾಹೋ ಹಾಗೂ ವಾರಣಾಸಿಗಳಲ್ಲಿ ತೆರೆಯಲಾಯಿತು. ವಿದೇಶಗಳಲ್ಲಿಯೂ ಸಹ ಭಾರತದ ಪ್ರವಾಸೋದ್ಯಮ ಕಚೇರಿಗಳನ್ನು ನ್ಯೂಯಾರ್ಕ್‌, ಲಂಡನ್, ಪ್ಯಾರಿಸ್, ಫ್ರಾಂಕ್‌ಫರ್ಟ್ ಮೆಲ್ಬೋರ್ನ್ ಹಾಗೂ ಕೊಲಂಬೋಗಳಲ್ಲಿ ಸ್ಥಾಪಿಸಲಾಯಿತು 1958ರ ವೇಳೆಗೆ ಪ್ರತ್ಯೇಕ ಪ್ರವಾಸೋದ್ಯಮ ಇಲಾಖೆಯನ್ನು ತೆರೆಯಲಾಯಿತು.

ಎಲ್ .ಕೆ. ಜಾ ಸಮಿತಿ  (L.K Jha Committee)

1962 ರಲ್ಲಿ ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಯಿತು. ಹೀಗಾಗಿ ಭಾರತ ಸರ್ಕಾರವು ಎಲ್ ಕೆ ಜಾ ಸಮಿತಿಯನ್ನು ರಚಿಸಿತು. ಎಲ್ ಕೆ ಜಾ ಸಮಿತಿ ನೀಡಿದ ಶಿಫಾರಸ್ಸುಗಳು ಈ ಕೆಳಗಿನಂತಿವೆ.

  1. ವಿದೇಶಿ ಪ್ರವಾಸಿಗರಿಗೆ ವೀಸಾರಹಿತ ಅವಕಾಶ ನೀಡುವುದು.
  2.  ವಿದೇಶಗಳಲ್ಲಿ ಹೆಚ್ಚಿನ ಸೇವಾ ಕಚೇರಿಗಳನ್ನು ತೆರೆಯುವುದು.
  3.  ಮುಂದಿನ ಐದು ವರ್ಷಗಳಲ್ಲಿ 5500 ಹೆಚ್ಚುವರಿ ಹೋಟೆಲ್ ಕೊಠಡಿಗಳ ಸ್ಥಾಪನೆ.
  4.  ಏರ್ ಇಂಡಿಯ ಹಾಗೂ ಇಂಡಿಯನ್ ಏರ್‌ಲೈನ್ ಪ್ರವಾಸಿಗರಿಗೆ ತುರ್ತು ಕಾಯ್ದಿರಿಸುವಿಕೆ ಸೌಲಭ್ಯ ನೀಡುವುದು.
  5.  ಖಾಸಗಿ ಪ್ರವಾಸಿ ಸಂಸ್ಥೆಗಳು, ಹೋಟೆಲ್, ವಸತಿಗೃಹಗಳು ಮೊದಲಾದವುಗಳನ್ನು ತೆರೆಯಲು ಅನುಮತಿ ನೀಡುವುದು.
  6.  ಪ್ರವಾಸ ಅಧಿಕಾರಿಗಳಿಗೆ ತರಬೇತಿ ನೀಡುವುದು.
  7.  ವಿವಿಧ ಸರ್ಕಾರಿ ಇಲಾಖೆಗಳ ನಡುವೆ  ಪ್ರವಾಸ ಉದ್ಯಮಕ್ಕೆ ಸಂಬಂಧಿಸಿದಂತೆ ಸಮನ್ವಯ ಸಾಧಿಸುವುದು.
  8.  ವಿದೇಶಗಳಲ್ಲಿ ನೂತನ ಪ್ರವಾಸಿ ಕಚೇರಿಗಳನ್ನು ಸ್ಥಾಪಿಸುವುದು.
  9.  ಪ್ರವಾಸಿ ತಾಣಗಳಲ್ಲಿ ಖರೀದಿ ಹಾಗೂ ಮನರಂಜನೆಗೆ ಅವಕಾಶ ಕಲ್ಪಿಸುವುದು.

1967ರಲ್ಲಿ ಇಂದಿರಾಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ ಪ್ರವಾಸೋದ್ಯಮ ಹಾಗೂ ನಾಗರೀಕ ವಿಮಾನಯಾನ ಸಚಿವಾಲಯವನ್ನು ಪ್ರತ್ಯೇಕಿಸಿ ಪ್ರವಾಸೋದ್ಯಮ ಸಚಿವಾಲಯವನ್ನು ಆರಂಭಿಸಲಾಯಿತು.

 1956 ರಲ್ಲಿ ಭಾರತಕ್ಕೆ 17000 ವಿದೇಶಿ ಪ್ರವಾಸಿಗರು ಬಂದಿದ್ದರೆ 2014 4863 ಕೋಟಿಗೆ ಏರಿತು 2003 ರಲ್ಲಿ ಅದು 1593 ಮಿಲಿಯನ್ ಗೆ ಏರಿತು 2025ರಲ್ಲಿ ಅದು ಕೇವಲ 9.6 ಮಿಲಿಯನ್ ಗೆ ಇಳಿಕೆಯಾಗಿದೆ.

ಭಾರತದಲ್ಲಿ ಪ್ರವಾಸೋದ್ಯಮದ ಬೆಳವಣಿಗೆ

ಭಾರತದಲ್ಲಿ ಪ್ರವಾಸೋದ್ಯಮದ ಬೆಳವಣಿಗೆ

ಪೀಠಿಕೆ:

ಇಡೀ ಪ್ರಪಂಚದಲ್ಲಿಯೇ ಭಾರತವು ವಿಶಿಷ್ಟವಾದ ಭೌಗೋಳಿಕ ಸ್ಥಾನವನ್ನು ಹೊಂದಿದೆ. ಇಲ್ಲಿ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಸಂಪತ್ತು ಅಗಾಧವಾಗಿದೆ. ಭಾರತವು ಪ್ರಾಚೀನ ಕಾಲದಿಂದಲೂ ಯಾತ್ರಿಕರ ಸ್ವರ್ಗ ಎಂದು ಹೆಸರಾಗಿದೆ. ಭಾರತವು ಎಲ್ಲಾ ಋತುಮಾನಗಳಿಗೂ ಪ್ರವಾಸಕ್ಕೆ ಸರಿಹೊಂದುವ ದೇಶವಾಗಿದೆ. ಹೀಗಾಗಿ ಅಲೆಕ್ಸಾಂಡರ್ ಭಾರತವು ಹಾಲು-ಜೇನಿನ ನಾಡು ಎಂದು ಹೇಳಿದ್ದಾರೆ. ಮ್ಯಾಕ್ಸ್ ಮುಲ್ಲರ್, ಭಾರತವು ಭೂಮಿಯ ಮೇಲಿನ ಸ್ವರ್ಗ ಎಂದು ಹೇಳಿದ್ದಾರೆ. ಭಾರತದ ಯಾವುದೇ ಮೂಲೆಗೆ ಹೋದರು ಐತಿಹಾಸಿಕ ಸ್ಮಾರಕಗಳು, ಗಿರಿಧಾಮಗಳು, ಜಲಪಾತಗಳು, ವನ್ಯ ಪ್ರಾಣಿಧಾಮಗಳು, ಹುಲ್ಲುಗಾವಲುಗಳು, ನದಿಗಳು, ಸಾಗರ, ಸಮುದ್ರಗಳು, ಮಸೀದಿಗಳು, ಚರ್ಚುಗಳು, ಕೋಟೆ ಕತ್ತಲುಗಳು ಕಂಡುಬರುತ್ತವೆ. ಹಾಗಾಗಿ ಇಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಪ್ರಾಚೀನ ಕಾಲದಲ್ಲಿ ಪ್ರವಾಸಿಗರು ಭಾರತಕ್ಕೆ ವಿವಿಧ ಕಾರಣಗಳಿಗಾಗಿ ಬರುತ್ತಿದ್ದರು ಅವುಗಳನ್ನು ಈ ಕೆಳಗಿನಂತೆ ನೋಡೋಣ.

1. ಸಿಂಧೂ ನದಿ ನಾಗರಿಕತೆಯ ಕಾಲ:

ಸಿಂಧೂ ನಾಗರಿಕತೆಯ ಜನರು ಪ್ರಪಂಚದ ವಿವಿಧ ನಾಗರಿಕತೆಗಳ ಜೊತೆಗೆ ಆಗಲೇ ಸಂಪರ್ಕದಲ್ಲಿದ್ದ ಸಾಕಷ್ಟು ದಾಖಲೆಗಳು ನಮಗೆ ಸಿಕ್ಕಿವೆ. ಅವರು ಮೆಸಪೊಟಮಿಯ, ಈಜಿಪ್ಟ್‌, ಬ್ಯಾಬಿಲೋನಿಯ, ಪರ್ಶೀಯ ,ಚೀನಿ, ಗ್ರೀಕ್ ಹಾಗೂ ರೋಮನ್ ನಾಗರಿಕತೆಗಳೊಂದಿಗೆ ವ್ಯಾಪಾರಿ ಸಂಬಂಧವನ್ನು ಹೊಂದಿದ್ದರು. ಆ ಕಾಲದಲ್ಲಿ ಎತ್ತಿನ ಗಾಡಿ, ಕುದುರೆ ಗಾಡಿ ಹಾಗೂ ಹಡಗುಗಳನ್ನು ಪ್ರಯಾಣಕ್ಕಾಗಿ ಬಳಕೆ ಮಾಡುತ್ತಿದ್ದರು. ಪಶ್ಚಿಮ ಏಷ್ಯಾ ನಗರಗಳಲ್ಲಿ ಸಿಂಧೂ ನಾಗರಿಕತೆಯ ಕಾಲದ ಮುದ್ರೆಗಳು ಭತ್ತದ ಕಾಳುಗಳು ದೊರಕಿವೆ. ಭಾರತದ ಪೂರ್ವ ಕರಾವಳಿಯ ತನಕ  ರೋಮನ್ ಹಡಗುಗಳು ಬರುತ್ತಿದ್ದವು ಎಂಬುದಕ್ಕೆ ಅರಕ ಮೆಡುವಿನಲ್ಲಿ ರೋಮನ್ ನಾಣ್ಯಗಳು ದೊರಕಿವೆ.

2. ಬೌದ್ಧ ಯುಗ: ಗೌತಮ ಬುದ್ಧನು ಜ್ಞಾನೋದಯ ಪಡೆದ ನಂತರ ತನ್ನ ಧರ್ಮ ಪ್ರಚಾರಕ್ಕಾಗಿ ಊರೂರು ಪ್ರವಾಸ ಕೈಗೊಳ್ಳುತ್ತಿದ್ದನು. ಹಾಗಾಗಿ ತಾಮ್ರ ಲಿಪ್ತಿ, ಪಾಟಲೀಪುತ್ರ, ಕೌಶಂಬಿ, ವಿಧಿಸ, ಕಾಶಿ, ಉಜ್ಜಯಿನಿ ಮೊದಲಾದ ಕಡೆಗಳಲ್ಲಿ ರಸ್ತೆ ಮಾರ್ಗಗಳು ಹಾಕಲ್ಪಟ್ಟವು.

3. ಕಾವ್ಯಗಳ ಯುಗ: ಮಹಾಭಾರತ ಹಾಗೂ ರಾಮಾಯಣದ ಕಾಲದಲ್ಲಿ ಹಸ್ತಿನಾಪುರ, ಅಯೋಧ್ಯ, ಪಂಪಾ ಕ್ಷೇತ್ರ ಮುಂತಾದ ಕಡೆಗಳಲ್ಲಿ, ವೈದಿಕ ಕಾಲದಲ್ಲಿ ಕಾಶಿ, ಪ್ರಯಾಗ, ಅಮರನಾಥ ಮುಂತಾದ ನಗರಗಳು ಪ್ರಯಾಣಕ್ಕಾಗಿ ರಸ್ತೆ ಮಾರ್ಗಗಳನ್ನು ನಿರ್ಮಿಸಿದವು.

4. ಧಾರ್ಮಿಕ ಯುಗ: ಭಾರತೀಯ ಸಾಧು ಸಂತರು, ಧರ್ಮ ಗುರುಗಳು ಭಾರತದ ವಿವಿಧ ಭಾಗಗಳಿಗೆ ಧರ್ಮ ಪ್ರಚಾರಕ್ಕಾಗಿ ಭೇಟಿ ನೀಡುತ್ತಿದ್ದರು. ಹಾಗೆಯೇ ಅಜಂತಾ, ಎಲ್ಲೋರಾ, ಕಾರ್ಲೆ ಹಾಗೂ ನಾಗಾರ್ಜುನಕೊಂಡಗಳಿಗೂ ಭೇಟಿ ನೀಡುತ್ತಿದ್ದರಿಂದ ಪ್ರವಾಸದ ಪರಿಕಲ್ಪನೆಗಳು ಆಗಲೇ ಬೆಳೆದು ಬಂದವು. ಮಹಾವೀರ ಕುಂದ ಗ್ರಾಮ, ಜೃಂಬಿಕವನ, ಕಾಶಿ, ಪ್ರಯಾಗಳಿಗೆ ಸಂಚಾರ ಕೈಗೊಳ್ಳುತ್ತಿದ್ದನು. ಚಂದ್ರಗುಪ್ತನು ಭದ್ರಬಾಹುವಿನೊಂದಿಗೆ ದಕ್ಷಿಣ ಭಾರತಕ್ಕೆ ಪ್ರವಾಸ ಕೈಗೊಂಡು ಶ್ರವಣಬೆಳಗೊಳದಲ್ಲಿ ನೆಲೆಸಿ ಅಲ್ಲಿಗೆ ಸಲ್ಲೇಖನ ವ್ರತವನ್ನು ಕೈಗೊಂಡನು. ಅಂದಿನಿಂದ ಪ್ರವಾಸಿಗರು ಶ್ರವಣಬೆಳಗೊಳಕ್ಕೆ ಭೇಟಿ ನೀಡಲು ಆರಂಭಿಸಿದರು.

5. ಅಶೋಕನ ಯುಗ: ಅಶೋಕನು ಬೌದ್ಧ ಧರ್ಮಪ್ರಚಾರಕ್ಕಾಗಿ ತನ್ನ ಮಗ ಮಹೇಂದ್ರ ಹಾಗೂ ಮಗಳಾದ ಸಂಗಮಿತ್ರೆಯರನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟಿದ್ದನು. ಮೌರ್ಯರ ಕಾಲದಲ್ಲಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದರು. ಪ್ರವಾಸಿಗರ ಯೋಗ ಕ್ಷೇಮಕ್ಕಾಗಿ ಮೌರ್ಯರು ಒಂದು ನಿಗಮವನ್ನು ಸ್ಥಾಪಿಸಿದರು.

6. ಗುಪ್ತರ ಯುಗ: ವಿದೇಶದಿಂದ ಭಾರತಕ್ಕೆ ಬಂದ ಪ್ರವಾಸಿಗರನ್ನು ನೋಡಿಕೊಳ್ಳುವುದಕ್ಕಾಗಿ ಗುಪ್ತರು ʻʻಅಂತಪಾಲʼʼ ಎಂಬ ಅಧಿಕಾರಿಯನ್ನು ನೇಮಕ ಮಾಡಿದ್ದರು. ದರೋಡೆಕೋರರಿಂದ ಪ್ರವಾಸಿಗರನ್ನು ರಕ್ಷಿಸಲು ಗುಪ್ತರ ಆಡಳಿತ ಸದಾ ಎಚ್ಚರವಹಿಸುತ್ತಿತ್ತು. ಪ್ರವಾಸಿಗರು ಹಗಲು ಸಂಚರಿಸಿ ರಾತ್ರಿ ಧರ್ಮ ಶಾಲೆಗಳಲ್ಲಿ ಉಳಿದುಕೊಳ್ಳುತ್ತಿದ್ದರು.

7. ಹರ್ಷನ ಯುಗ: ಹರ್ಷವರ್ಧನ ಕಾಲದಲ್ಲಿ ಪ್ರಸಿದ್ಧ ವಿದ್ವಾಂಸನಾದ ಬಾಣಬಟ್ಟ ಅತ್ಯಂತ ಕಿರಿಯ ವಯಸ್ಸಿನಲ್ಲಿ ತನ್ನ ಸಂಗಡಿಗರೊಂದಿಗೆ ದೀರ್ಘಕಾಲ ಪ್ರವಾಸ ಕೈಗೊಂಡಿದ್ದನೆಂದು ಇತಿಹಾಸ ಹೇಳುತ್ತದೆ. ಆತ ಅಜಂತಾ, ಎಲ್ಲೋರಾ, ಕಾರ್ಲೆ, ಬಾಜ, ಬೇಡ್ಕ ಹಾಗೂ ನಾಸಿಕ್‌ಗಳಿಗೆ ಭೇಟಿ ನೀಡಿದ್ದನಂತೆ. ಅವುಗಳೆ ಮುಂದೆ ಹೆದ್ದಾರಿಗಳಾದವು.

8. ಪ್ರವಾಸಿ ಪ್ರಮುಖ ಸ್ಥಳಗಳು: ಸಿಂಧೂ ನಾಗರಿಕತೆಯ ಅವಶೇಷಗಳು, ಜೈನ, ಬೌದ್ಧ ಹಾಗೂ ವೈದಿಕ ಧರ್ಮಕ್ಕೆ ಸೇರಿದ ದೇವಾಲಯಗಳು, ಶಿಲ್ಪಗಳು ಅಜಂತಾ, ಎಲ್ಲೋರಾ, ನಾಗಾರ್ಜುನಕೊಂಡ, ಸಾಂಚಿ, ಸಾರನಾಥ, ಎಲಿಫೆಂಟಾ, ಪಾಟಲೀಪುತ್ರ, ಖಜರಾಹೋ, ಐಹೊಳೆ, ಪಟ್ಟದಕಲ್ಲು, ಮಹಾಬಲಿಪುರಂ, ತಾಂಜಾವೂರು ಹಾಗೂ ಹಂಪಿ ಮೊದಲಾದವುಗಳು ಪ್ರಮುಖ ಪ್ರವಾಸಿ ಕೇಂದ್ರಗಳಾಗಿ ಪ್ರಖ್ಯಾತಿ ಹೊಂದುತ್ತಿರುವುದು ಈಗ ಇತಿಹಾಸ.

 ಹಾಗೆಯೇ ಮುಸ್ಲಿಂರ ಕಾಲದ ಮಸೀದಿಗಳು, ಅರಮನೆಗಳು, ಗೋರಿಗಳು, ಮಿನಾರ್‌ಗಳು, ಗುಮ್ಮಟಗಳು, ತಾಜ್‌ಮಹಲ್ ಕೆಂಪುಕೋಟೆ, ಮೋತಿ ಮಸೀದಿ, ಗೋಲಗುಮ್ಮಟ, ಚಾರ್ಮಿನಾರ್, ಭಾರ ಕಮಾನ್, ಕುತುಬ್ ಮಿನಾರ್ ಮೊದಲಾದವುಗಳು ಇಂದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

9. ವಿದೇಶಿ ಪ್ರವಾಸಿಗಳ ಯುಗ: ವಿದೇಶ ಪ್ರವಾಸಿಕರಾದ ಮೆಗಸ್ತಾನೀಸ್‌, ಹೂವೆನ್‌ತ್ಸ್ಯಾಂಗ್‌, ಫಾಹಿಯನ್, ಇತ್ಸಿಂಗ್ಸ್‌, ನಿಕೋಲೋ ಕೋಂತಿ, ಬಾರ್ಬೊಸಾ, ಅಬ್ದುಲ್‌ ರಜಾಕ್‌, ಅಲ್‌ಬುರನಿ, ಮಾರ್ಕೊಪೋಲೊ ಹಾಗೂ ನಿಕೋಲೋ ಪೋಲೊ ಪೋರ್ಚುಗೀಸರು, ಡಚ್ಚರು ಹಾಗೂ ಆಂಗ್ಲರು ಹೀಗೆ ಪ್ರವಾಸಿಗರ ದಂಡೇ ಭಾರತಕ್ಕೆ ಹರಿದು ಬಂದಿತು. ಅವರು ತಮ್ಮ ಪ್ರವಾಸದ ಅನುಭವಗಳನ್ನು ತಮ್ಮದೇ ಆದ ಕೃತಿಗಳಲ್ಲಿ ವಿವರಿಸಿದ್ದಾರೆ.

10.  ಶಿಕ್ಷಣಕ್ಕಾಗಿ ಪ್ರವಾಸ: ವಿದೇಶಿ ಪ್ರವಾಸಕರು ಭಾರತಕ್ಕೆ ಬಂದಿಲ್ಲದೆ ಇಲ್ಲಿನ ತಕ್ಷಶಿಲಾ, ವಿಕ್ರಮಶೀಲ, ದಗ್ದ, ಕಂಚಿ ಹಾಗೂ ನಲಂದಗಳಿಗೂ ಭೇಟಿ ನೀಡುತ್ತಿದ್ದರು. ಕೆಲವರಂತೂ ಇಂತಹ ವಿಶ್ವವಿದ್ಯಾನಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

11. ಆಧುನಿಕ ಯುಗ: ಆಧುನಿಕ ಯುಗದಲ್ಲಿ ಭಾರತದ ಅನೇಕ ನಾಯಕರು ವಿದೇಶಗಳಿಗೆ ಶಿಕ್ಷಣ, ಆಡಳಿತ ಹಾಗೂ ಆರ್ಥಿಕ ಬೆಳವಣಿಗೆಯ ಅನುಭವ ಪಡೆಯಲು ಪ್ರವಾಸ ಮಾಡುತ್ತಿದ್ದರು. ಅಂತವರಲ್ಲಿ ರಾಜರಾಮ ಮೋಹನ್‌ರಾಯ್‌, ಸ್ವಾಮಿ ವಿವೇಕಾನಂದ, ದಾದಾಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ, ಗಾಂಧೀಜಿ, ಜವರಲಾಲ್ ನೆಹರು ಹಾಗೂ ಡಾ|| ಬಿ.ಆರ್ ಅಂಬೇಡ್ಕರ್ ಮೊದಲಾದವರು ಪ್ರಮುಖರಾಗಿದ್ದಾರೆ.

ಸ್ವಾತಂತ್ರ್ಯವನ್ನು ಗಳಿಸಿದ ನಂತರ ಭಾರತದಲ್ಲಿ ಪ್ರವಾಸೋದ್ಯಮವು ಪ್ರಗತಿಪಥದತ್ತ ಮುನ್ನಡೆಯುತ್ತಿದೆ.  ಹೆಚ್ಚುತ್ತಿರುವ ಪ್ರವಾಸಿಗರ ಬೇಡಿಕೆಯನ್ನು ಈಡೇರಿಸಲು ಸಮರ್ಥವಾಗುತ್ತಿದೆ. ಊಟ, ವಸತಿ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರವಾಸೋದ್ಯಮವು ಸಾಕಷ್ಟು ಬಲಶಾಲಿಯಾಗಿದೆ. ಭಾರತದ ಹೋಟೆಲ್‌ಗಳು ಉತ್ತಮ ಸೌಕರ್ಯಗಳನ್ನು ಒದಗಿಸುತ್ತಿವೆ. ಆದುದರಿಂದ ಭಾರತದಲ್ಲಿ ಹೋಟೆಲ್‌ಗಳ ಸಂಖ್ಯೆಯು ಹೆಚ್ಚಾಗಿದೆ. ಬಸ್ಸು, ರೈಲು, ವಿಮಾನ ಪ್ರಯಾಣವು ದಿನದಿಂದ ದಿನಕ್ಕೆ ಏರುತ್ತಲೆ ಹೊರಟಿದೆ. ಸಾವಿರಾರು ವಿಮಾನಗಳು, ಲಕ್ಷಾಂತರ ಬಸ್ಸುಗಳು, ಸಾವಿರಾರು ರೈಲುಗಳು, ಪ್ರಯಾಣಿಕರನ್ನು ಹೊತ್ತು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಗಳಿಗೆ ಸಂಚರಿಸುತ್ತಿವೆ.

ಆಧುನಿಕ ಪ್ರವಾಸೋದ್ಯಮ (Modern Tourism)

ಆಧುನಿಕ ಪ್ರವಾಸೋದ್ಯಮ (Modern Tourism)

ಆಧುನಿಕ ಪ್ರವಾಸೋದ್ಯಮದ ಅಂಶಗಳು ಈ ಕೆಳಗಿನಂತಿವೆ.

1. ರೈಲ್ವೆ ಪ್ರವಾಸ (Rail Tour)

19ನೇ ಶತಮಾನದ ಆರಂಭದಲ್ಲಿ ಪ್ರಪಂಚದಲ್ಲಿ ರೈಲು ಮಾರ್ಗದ ನಿರ್ಮಾಣದಿಂದ ಪ್ರಯಾಣದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯಾಯಿತು. ಅತಿಯಾದ ವೇಗ, ಸುರಕ್ಷತೆ ಹಾಗೂ ಕಡಿಮೆ ವೆಚ್ಚದ ರೈಲ್ವೆ ಸಾರಿಗೆ ಬಹುಬೇಗನೆ ಜನಪ್ರಿಯವಾಯಿತು. 1825 ರಲ್ಲಿ ಪ್ರಪ್ರಥಮ ಬಾರಿಗೆ ಸರಕು ಸಾಗಾಣಿ ರೈಲು ಆರಂಭವಾಯಿತು. ತದನಂತರ 1830 ರ ಅವಧಿಯಲ್ಲಿ ಇಂಗ್ಲೆಂಡಿನ ಲಿವರ್‌ಫೂಲ್ ಮತ್ತು ಮ್ಯಾಂಚೆಸ್ಟರ್ ನಡುವೆ ಪ್ರಥಮ ರೈಲು ಮಾರ್ಗ ನಿರ್ಮಾಣವಾಯಿತು. 1841ರ ವೇಳೆಗೆ ಇಂಗ್ಲೆಂಡಿನ ಥಾಮಸ್ ಕುಕ್‌ ಕಂಪನಿಯು 570 ಪ್ರವಾಸಿಗರ ತಂಡವನ್ನು ಇಂಗ್ಲೆಂಡಿನ ಲೈಸೆಸ್ಟರ್ ನಿಂದ ಲಾಬೋರಾಗೆ ರೈಲಿನಲ್ಲಿ ಕರೆದುಕೊಂಡು ಹೋಯಿತು. ಇದು ಪ್ರಪಂಚದ ಮೊದಲ ರೈಲು ಪ್ರಯಾಣ ಎಂಬ ಕೀರ್ತಿಗೆ ಪಾತ್ರವಾಯಿತು. 1843ರಲ್ಲಿ ಸುಮಾರು 3000 ವಿದ್ಯಾರ್ಥಿಗಳನ್ನು ಕರೆದುಕೊಂಡು. ಡರ್ಬಿಯವರೆಗೆ ಪ್ರಯಾಣಿಸಿತು. 1845ರಲ್ಲಿ ಮಾಸ್‌ ಪ್ರವಾಸ ಆರಂಭವಾಯಿತು. 1848ರಲ್ಲಿ ಸ್ಕಾಟ್‌ಲ್ಯಾಂಡಿಗೆ ಪ್ರವಾಸ ಏರ್ಪಡಿಸಿತು. ಈ ಕಂಪನಿ ಆಲ್ಪ್‌ ಪರ್ವತಗಳಿಗೆ ಪ್ರವಾಸ ಏರ್ಪಡಿಸಿತು.  1855 ರಲ್ಲಿ ಖಂಡಾಂತರ ಪ್ರವಾಸ ಏರ್ಪಡಿಸಲಾಯಿತು. ಈ ಕಂಪನಿಯು ಪ್ರಪಂಚದ ಅತ್ಯಂತ ದೊಡ್ಡ ಪ್ರವಾಸಿ ಏಜೆನ್ಸಿಯಾಗಿ ಬೆಳೆಯಿತು. ವಿಶ್ವದಾದ್ಯಂತ ಇದರ ಶಾಖೆಗಳಿವೆ. ಹೀಗಾಗಿ ಥಾಮಸ್ ಕುಕ್‌ನನ್ನು ವಿಶ್ವದ ಪ್ರವಾಸ ಉದ್ಯಮದ ಪಿತಾಮಹ ಎಂದು ಕರೆಯುತ್ತಾರೆ.

 ಫುಲ್‌ಮನ್ ಕಂಪನಿ: ಇಂಗ್ಲೆಂಡಿನಿಂದ ಸ್ಪೂರ್ತಿಗೊಂಡ ಆಸ್ಟ್ರಿಯಾ, ಫ್ರಾನ್ಸಿಸ್, ಸ್ವಿಜರ್ಲ್ಯಾಂಡ್ ಹಾಗೂ ಅಮೆರಿಕೆಗಳು ಸಹ ರೈಲು ಸಂಚಾರದಲ್ಲಿ ಪ್ರಗತಿಯನ್ನು ಸಾಧಿಸಿದವು. ಹಾಗೆಯೇ  1853ರಲ್ಲಿ ಭಾರತದಲ್ಲಿಯೂ ರೈಲು ಮಾರ್ಗವನ್ನು ಹಾಕಲಾಯಿತು. ಪ್ರಥಮ ರೈಲು ಬಾಂಬೆ ಇಂದ ಠಾಣಾದ ವರೆಗೆ ಸಂಚರಿಸಿತು. 1870ರಲ್ಲಿ ಅಮೆರಿಕಾದ ಪುಲ್‌ಮನ್ ಗ್ರ್ಯಾಂಡ್ ಟೂರನ್ನು ರೈಲಿನಲ್ಲಿ ಏರ್ಪಡಿಸಿದನು. ಅದು ಪ್ರತಿರಾತ್ರಿಗೆ 2 ಡಾಲರ್ ಶುಲ್ಕವನ್ನು ವಿಧಿಸಿತು. ತದನಂತರ ಅಮೆರಿಕದಲ್ಲಿ ತಯಾರಾದ ಪುಲ್‌ಮನ್ ಕಾರುಗಳನ್ನು  ಇಂಗ್ಲೆಂಡಿಗೆ ಆಮದು ಮಾಡಿಕೊಳ್ಳಲಾಯಿತು.  1872 ರಲ್ಲಿ ಪುಲ್‌ಮನ್ ಕಂಪನಿ 750 ಕಾರುಗಳನ್ನು ತಯಾರಿಸಿತ್ತು. ಈ ಕಂಪನಿಯಲ್ಲಿ ಆಗಲೇ ರೂ.30,000 ಕಾರ್ಮಿಕರು ಕೆಲಸ ಮಾಡುತ್ತಿದ್ದರು. 150 ದೇಶಗಳಲ್ಲಿ ಈ ಕಂಪನಿ ತನ್ನ ಶಾಖೆಗಳನ್ನು ತೆರೆದಿತ್ತು. 1950ರ ವೇಳೆ ಅತಿ ವೇಗದ ರೈಲು ಪ್ರಯಾಣ ಆರಂಭವಾಯಿತು. 1960ರಲ್ಲಿ ವಿದ್ಯುತ್ ರೈಲು ತಯಾರಾಯಿತು. ಆಗ ಅದು 160 ಕಿಮೀ ವೇಗದಲ್ಲಿ ಚಲಿಸಿತು. ಜಪಾನಿನ ರೈಲು 210 ಕಿಮೀ ವೇಗದಲ್ಲಿ ಕೇವಲ 3 ಗಂಟೆಗಳಲ್ಲಿ ಟೋಕಿಯೋ ಮತ್ತು ಒಸಾಕಗಳ ನಡುವೆ ಓಡಲು ಆರಂಭಿಸಿತು. 1981ರ ವೇಳೆಗೆ 360 ಕಿ.ಮೀ ವೇಗದಲ್ಲಿ ಓಡುವ ರೈಲನ್ನು ಫ್ರಾನ್ಸ್‌ ಶೋಧಿಸಿತು.  ಅದು ಈಗ 560 ಕಿಮೀ ಅಂತರವನ್ನು 1 ಗಂಟೆ 48 ನಿಮಿಷಗಳಲ್ಲಿ ಕ್ರಮಿಸುತ್ತದೆ. ಚೀನಾದಲ್ಲಿ ಇತ್ತೀಚಿಗೆ ಗಂಟೆಗೆ 700 ರಿಂದ 1000 ಕಿ.ಮೀ ವೇಗದ ರೈಲನ್ನು ಓಡಿಸಲಾಗುತ್ತಿದೆ. ಭಾರತದಲ್ಲಿಯೂ ಬುಲೆಟ್ ರೈಲು ಹಾಗೂ ವಂದೇ ಭಾರತ ರೈಲುಗಳು ಓಡಾಡುತ್ತಿವೆ. ದೇಶದಲ್ಲಿ ಇವುಗಳಲ್ಲದೆ ಸೂಪರ್ ಫಾಸ್ಟ್ ರೈಲುಗಳು ಸಾಕಷ್ಟಿವೆ.

2. ಹಡಗು ಪ್ರವಾಸ:  ಜಲ ಸಾರಿಗೆಯು ಅತ್ಯಂತ ಅಗ್ಗದ ಸಾರಿಗೆಯಾಗಿದೆ. ಉಪ್ಪು ನೀರಿನ ಸ್ನಾನವು ಆರೋಗ್ಯಕ್ಕೆ ಹಿತಕರವಾದುದು ಎಂಬ ಭಾವನೆ ಜನರಲ್ಲಿ ಬೆಳೆದ ಹಾಗೆ ಸಮುದ್ರದಲ್ಲಿನ ಹಡಗು ಸಂಚಾರ ಹೆಚ್ಚಾಯಿತು. 1758 ರಲ್ಲಿ ʻಕಾಕ್ಸ್‌ ಅಂಡ್‌ ಕಿಂಗ್‌ʼ ಎಂಬ ಪ್ರವಾಸಿ ಸಂಸ್ಥೆ ಶ್ರೀಮಂತರನ್ನು ಹಡಗಿನ ಮೂಲಕ ಅಮೇರಿಕಾ ಪ್ರವಾಸಕ್ಕೆ ಕರೆದುಕೊಂಡು ಹೋಯಿತು. 1840 ರಲ್ಲಿ ಕುನಾರ್ಡ್‌ ಸ್ಟೀಮ್‌ ಶಿಪ್‌ ಕಂಪನಿ ಪ್ರಥಮ ಬಾರಿಗೆ ಹಡಗು ಪ್ರವಾಸವನ್ನು ಏರ್ಪಡಿಸಿತು. 1866 ರಲ್ಲಿ ಥಾಮಸ್‌ ಕುಕ್‌ ಕಂಪನಿಯು ಸಹ ಪ್ರವಾಸ ಹಮ್ಮಿಕೊಂಡಿತು. 19 ನೇ ಶತಮಾನದ ಅಂತ್ಯದಲ್ಲಿ ಜಲಸಾರಿಗೆ ತೀವ್ರವಾಗಿ ಬೆಳೆಯಿತು. ಆದರೆ 20 ನೇ ಶತಮಾನದ ಮಧ್ಯ ಭಾಗದಲ್ಲಿ ವಿಮಾನ ಸಾರಿಗೆ ಆರಂಭವಾದ ಮೇಲೆ ಹಡಗು ಸಾರಿಗೆ ಪ್ರಯಾಣ ಕಡಿಮೆಯಾಯಿತು.

3. ಮೋಟಾರು ವಾಹನಗಳ ಪ್ರವಾಸ (Motars Tours)

1890 ರಿಂದ ಈಚೆಗೆ ಮೋಟಾರ್ ವಾಹನಗಳು ಪ್ರವಾಸಕ್ಕೆ ಬಳಕೆಯಾದವು. ಜರ್ಮನಿಯ ಕಾರ್ಲಬೆಂಜ್ ಪ್ರಥಮ ಬಾರಿಗೆ ಮೋಟಾರು ಕಾರು ತಯಾರಿಸಿದನು. ಅಂದಿನಿಂದ ಭೂಸಾರಿಗೆ ಆರಂಭವಾಯಿತು. 1908ರ ವೇಳೆಗೆ ಹೆನ್ರಿ ಫೋರ್ಡ್ ತಯಾರಿಸಿದ ಮಾಡೆಲ್ ಟೀ ಕಾರುಗಳು ರೈಲ್ವೆ ಏಕಸ್ವಾಮ್ಯವನ್ನು ಮುರಿದವು. 1930ರಲ್ಲಿ ಪ್ರವಾಸಕ್ಕೆ ಬಸ್ಸುಗಳು ಬಳಕೆಯಾದವು.

4. ವಿಮಾನ ಸಾರಿಗೆ (Air Transport)

1900ರಲ್ಲಿ ರೈಟ್ ಸಹೋದರರಿಂದ ವಿಮಾನ ಕಂಡು ಹಿಡಿಯಲ್ಪಟದಟ್ಟಂದಿನಿಂದ ಇಂದಿನವರೆಗೆ ವಾಯು ಸಂಚಾರ ದ್ವಿಗುಣಗೊಂಡಿದೆ. ಇದು ಪ್ರವಾಸೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿತು. ವೇಗ, ಸುರಕ್ಷಿತ ಹಾಗೂ ಸೌಕರ್ಯಕ್ಕೆ ವಿಮಾನ ಸಾರಿಗೆ ಹೆಸರಾಯಿತು. ವಾಯು ಸಾರಿಗೆ ಹೆಚ್ಚದಂತೆ ಪ್ರಪಂಚದ ಎಲ್ಲಾ ದೇಶಗಳಲ್ಲಿ ರನ್ ವೇಗಳು ಸ್ಥಾಪನೆಯಾದವು. ಕಡಿಮೆ ವೇಗದಿಂದ ಅತಿ ವೇಗದ ವಿಮಾನಗಳು ಹಾರಾಟವನ್ನು ಆರಂಭಿಸಿದವು. ಎಲ್ಲಾ ಸಾರಿಗೆಗಳಿಗಿಂತ ವಿಮಾನ ಸಾರಿಗೆ ಇಂದು ಹೆಚ್ಚು ಜನಪ್ರಿಯವಾಗಿದೆ.

ಪ್ರವಾಸೋದ್ಯಮ ನಡೆದು ಬಂದ ದಾರಿ (Tourism Through the ages)

ಪ್ರವಾಸೋದ್ಯಮ ನಡೆದು ಬಂದ ದಾರಿ (Tourism Through the ages)

ಮಾನವ ತನ್ನ ಕುತೂಹಲಕ್ಕಾಗಿ ಪ್ರಾಚೀನ ಕಾಲದಿಂದಲೂ ಪ್ರವಾಸ ಹೋಗುತ್ತಿದ್ದನು. ಉದಾಹರಣೆಗೆ ಆಹಾರವನ್ನು ಆರಿಸಿ ಬೇರೇಡೆ ವಲಸೆ ಹೋಗುವುದು, ಕೃಷಿ ಭೂಮಿಯ ಹುಡುಕಾಟಕ್ಕಾಗಿ ಪ್ರವಾಸಕೈಗೊಳ್ಳುವುದು ಮಾಡುತ್ತಿದ್ದನು. ಆದರೆ ಆಧುನಿಕ ಕಾಲದಲ್ಲಿ ಮಾತ್ರ ಪ್ರವಾಸೋದ್ಯಮಕ್ಕೆ ಒಂದು ನಿರ್ದಿಷ್ಟವಾದ ಅರ್ಥ ಬಂದಿದೆ.

 1. ಪ್ರಾಚೀನ ಕಾಲ (Ancient age)

ಕ್ರಿಸ್ತಪೂರ್ವದಲ್ಲಿ ಅಲೆಮಾರಿ ಜನಾಂಗವು ಆಗಾಗ ಆಹಾರ ಮತ್ತು ವಲಸೆಗಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರವಾಸ ಹೋಗುತ್ತಿದ್ದರು. ಅದು ಇಂದಿನ ಆಧುನಿಕ ಜಗತ್ತಿನಲ್ಲಿ ಸುಸಂಘಟಿತವಾದ ಹಾಗೂ ಸ್ಥಿರವಾದ ಪ್ರವಾಸೋದ್ಯಮವಾಗಿ ಬೆಳೆದು ಬಂದಿತ್ತು.

 ಕ್ರಿಸ್ತಪೂರ್ವದಲ್ಲಿ ಅಂದರೆ ಸುಮಾರು ಸಾವಿರಾರು ವರ್ಷಗಳ ಹಿಂದೆ ಬಿಡುವಿನ ಅವಧಿಯಲ್ಲಿ ಪ್ರವಾಸಗಳು ಈಜಿಪ್ಟ್‌ ಹಾಗೂ ಬೆಬಿಲೋನಿಯಗಳಲ್ಲಿ ಆರಂಭವಾದವು. ಅದರಂತೆ ಭಾರತದಲ್ಲಿ ಸಿಂಧೂ ನಾಗರಿಕತೆ ಹಾಗೂ ವೇದಗಳ ಕಾಲದ ನಾಗರಿಕತೆಯ ಜನರು ನಿಸರ್ಗ ತಾಣಗಳಿಗೆ ಅಥವಾ ಅರಣ್ಯಗಳಿಗೆ ಪ್ರವಾಸವನ್ನು ಕೈಗೊಳ್ಳುತ್ತಿದ್ದರು. ಈಜಿಪ್ಟ್‌ನಲ್ಲಿ ನದಿ ಪಿರಾಮಿಡ್‌ಗಳು ನಿರ್ಮಾಣವಾದ ನಂತರ ಅವುಗಳನ್ನು ನೋಡಲು ಏಷ್ಯಾ ಮೈನರ್, ಗ್ರೀಸ್ ಹಾಗೂ ರೋಮನ್ ಪ್ರವಾಸಿಗಳು ಬರುತ್ತಿದ್ದರು. ಕ್ರಿ.ಪೂ 6ನೇ ಶತಮಾನದ ವೇಳೆಗೆ ಪರ್ಶಿಯನ್ನರು ಭಾರತಕ್ಕೆ ಬಂದರು ಇಲ್ಲಿಗೆ ಆಗಮಿಸಿದ ಪ್ರವಾಸಿಗರು ತಮ್ಮ ಅನುಭವಗಳನ್ನು ಕಥನ ರೂಪದಲ್ಲಿ ರಚಿಸಿದರು. ಹೆರೋಡಾಟಸ್‌, ಅರಿಸ್ಟಾಟಲ್, ಪೈಥಾಗೋರಸ್, ಮುಂತಾದವರು ಏಷ್ಯಾ ಮೈನರ್‌ಗೆ ಸಂಚರಿಸಿ ಪ್ರವಾಸ ಮಾಹಿತಿ ನೀಡಿದ್ದಾರೆ. ಪ್ರಾಚೀನ ಈಜಿಪ್ಟ್‌ನಲ್ಲಿ ಅನೇಕ ಧಾರ್ಮಿಕ ಹಬ್ಬಗಳನ್ನು ಆಚರಿಸುತ್ತಿದ್ದರು. ಇವುಗಳನ್ನು ನೋಡಲೆಂದು ದೂರದ ದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ಈಜಿಪ್ಟಿಯನ್ನರು ಬಂದ ಪ್ರವಾಸಿಗರಿಗೆ ಕೆಲವೊಂದು ಸೇವೆಗಳನ್ನು ನೀಡುತ್ತಿದ್ದರು. ಅವರಿಗೆ ಉತ್ತಮವಾದ ಆಹಾರ, ಪಾನೀಯ, ಮಾರ್ಗದರ್ಶನ, ತಿಂಡಿ ತಿನಿಸುಗಳು, ಕಲಾ ವಸ್ತುಗಳು ಕೊನೆಗೆ ವೇಶ್ಯೆಯರನ್ನು ನೀಡಲಾಗುತ್ತಿತ್ತು.

 ಕ್ರಿಸ್ತಪೂರ್ವಆರನೇ ಶತಮಾನದಲ್ಲಿ ಗೌತಮ ಬುದ್ಧನು ಪ್ರತಿದಿನ 20-30 ಕಿ.ಮಿ ಕಾಲ್ನಡಿಗೆಯಿಂದ ಪ್ರಯಾಣಿಸಿ ಧರ್ಮಬೋಧೆ ಮಾಡುತ್ತಿದ್ದರು. ಜನರು ಬುದ್ಧನ ಯಾತ್ರಾಸ್ಥಳಗಳಿಗೆ ನಿರಂತರವಾಗಿ ಪ್ರವಾಸವನ್ನು ಕೈಗೊಳ್ಳುತ್ತಿದ್ದರು.

 ಪ್ರಾಚೀನ ರೋಮನ್ನರು ಆಧುನಿಕ ಪ್ರವಾಸೋದ್ಯಮದ ಅನೇಕ ಲಕ್ಷಣಗಳನ್ನು ಅಂದೇ ಜಾರಿಗೆ ತಂದಿದ್ದರು. ಸಮುದ್ರ ಪ್ರದೇಶಗಳು ಸುರಕ್ಷಿತವಾದ ಕಾರಣ ಪ್ರವಾಸಿಗರು ನಿರ್ಭಯವಾಗಿ ಪ್ರವಾಸ ಮಾಡುತ್ತಿದ್ದರು. ಅವರ ಅಂದಿನ holy-days  ಇಂದಿನ Holidays ಆಗಿದೆ.  ಅವರ ನಾಣ್ಯಗಳು ವಿಶ್ವದಾದ್ಯಂತ ಚಲಾವಣೆಯಲ್ಲಿ ಇದ್ದವು. ರೋಮನ್ನರು ನಗರ ಜೀವನದಿಂದ ಬೇಸತ್ತು ನೇಪಲ್ಸ್‌, ಸಿಸಲಿ, ಟ್ರಾಯ್‌, ಈಜಿಪ್ಟ್, ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಈ ಸಮಯದಲ್ಲಿಯೇ ಪ್ರವಾಸಕ್ಕೆ ಸಂಬಂಧಿಸಿದ ಆಡಳಿತ ವ್ಯವಸ್ಥೆ ರೂಪಗೊಂಡಿತು. ಗ್ರೀಕ ಬರಹಗಾರರು ಸಹ ರೋಮನ್ ಸಾಮ್ರಾಜ್ಯದ ಪ್ರವಾಸದ ಬಗ್ಗೆ ತಿಳಿದುಕೊಂಡಿದ್ದರು.

  1. ಮಧ್ಯಯುಗದ ಕಾಲ (Medieval age)

ರೋಮನ್ ಸಾಮ್ರಾಜ್ಯ ಪತನಗೊಂಡ ನಂತರ ಮಧ್ಯ ಯುಗ ಆರಂಭವಾಯಿತು. ಕ್ರಿ.ಶ 1453 ರಲ್ಲಿ ಕಾನ್‌ಸ್ಟಾಂಟಿನೋಪಾಲ್‌ನ್ನು ಆಟೋಮನ್ ತುರ್ಕರು ವಶಪಡಿಸಿಕೊಳ್ಳುವ ಮೂಲಕ ಮಧ್ಯಯುಗದ ಆರಂಭಕ್ಕೆ ನಾಂದಿ ಹಾಡಿದರು. ಆ ಕಾಲದಲ್ಲಿ ಹೆದ್ದಾರಿ ದರೋಡೆ ಸಾಮಾನ್ಯವಾಗಿ ಜನರು ತಮ್ಮ ಹತ್ತಿರದ ನಗರಗಳಿಗೆ ಪ್ರವಾಸ ಹೋಗುತಿದ್ದರು. ಆದರೆ ಸಾಹಸ ಪ್ರವೃತ್ತಿಯುಳ್ಳವರು ಮಾತ್ರ ಹಣ ಸಂಪಾದನೆ ಹಾಗೂ ಕೀರ್ತಿ ಪಡೆಯಲು ಪ್ರವಾಸ ಮಾಡುತ್ತಿದ್ದರು. ವರ್ತಕರು ಹೊಸ ವ್ಯಾಪಾರದ ಅವಕಾಶಗಳನ್ನು ಹುಡುಕಿ ಪ್ರವಾಸ ಕೈಗೊಳ್ಳುತ್ತಿದ್ದರು. ಆ ಕಾಲದಲ್ಲಿ ಕುದುರೆ ಕಾಲ್ನಡಿಗೆ ಹಾಗೂ ಪಲ್ಲಕ್ಕಿಗಳ ಮೂಲಕ ಸವಾರಿ ಹೋಗುತ್ತಿದ್ದರು.

ಮಧ್ಯಯುಗದ ಕೊನೆಯ ಶತಮಾನದಲ್ಲಿ ಪ್ರಯಾಣಕ್ಕೆ ವ್ಯಾಪಾರ ಮತ್ತು ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಉದ್ದೇಶಗಳು ಪ್ರೇರಣೆ ನೀಡಿದವು. ಕ್ರೈಸ್ತರು ರೋಂ, ಇಂಗ್ಲೆಂಡಿನ ಕ್ಯಾಂಟರ್‌ಬರಿ, ಜೆರುಸಲೇಮ, ಗ್ಯಾಲೇಶಿಯಾ, ಬೆತ್ಲೆಹೆಮ್‌, ಜೂಡಿಯಾ ಇಸ್ರೇಲ್‌ಗಳಿಗೆ ಭೇಟಿ ನೀಡಲು ಆರಂಭಿಸಿದರು. ಮುಸಲ್ಮಾನರು ಮೆಕ್ಕಾ, ಮದೀನಾ ಹಾಗೂ ಬಾಗ್ದಾದ್‌ಗಳಿಗೆ ಹೋಗಿ ಬರುತ್ತಿದ್ದರು. ಇವರನ್ನು ಹಜ್‌ ಯಾತ್ರಿಗಳು ಎಂದು ಕರೆಯುತ್ತಿದ್ದರು. ಹಾಗೆಯೇ ಮುಸ್ಲಿಂ ಸಂತರ ದರ್ಗಾ ಗಳಿಗೆ ಭೇಟಿ ನೀಡುತ್ತಿದ್ದರು. ಉದಾ:  ಶೇಕ್‌ ಸಲೀಂ ಚೀಸ್ತಿ, ಗುಲ್ಬರ್ಗದ ಬಂದೇನವಾಜ್‌ ದರ್ಗಾ, ಹಿಂದೂಗಳ ಕಾಶಿ, ಬದರಿನಾಥ, ರಾಮೇಶ್ವರಂ, ತಿರುಪತಿ, ಕೇದಾರಗಳಿಗೆ ಭೇಟಿ ನೀಡುತ್ತಿದ್ದರು. ಬೌದ್ಧ ಧರ್ಮಕ್ಕೆ ಮಾರುಹೋಗಿ ಹುಯೆನ್‌ತ್ಸ್ಯಾಂಗ್‌, ಫಾಹಿಯಾನ್‌, ಇತ್ಸಿಂಗ್‌, ಮಾರ್ಕೊಪೋಲ್‌, ನಿಕೋಲೊ ಪೋಲೊ, ಚೀನಾ ಹಾಗು ಭಾರತಕ್ಕೆ ಸಂಚರಿಸಿ ತಮ್ಮ ಅನುಭವಗಳನ್ನು ತಮ್ಮದೇ ಆದ ಕಥಾನಕದಲ್ಲಿ ಬರೆದಿದ್ದಾರೆ. ನಾವಿಕರ ದಿಕ್ಸೂಚಿಯನ್ನು ಕಂಡುಹಿಡಿದ ನಂತರ ಹಡಗು ಸಂಚಾರ ಸುಲಭವಾಯಿತು. ತದನಂತರ ಕೋಲಂಬಸ್‌, ವಾಸ್ಕೋಡಗಾಮಾ, ಫ್ರಾನ್ಸಿಸ್ಕೋ ಜಲಮಾರ್ಗದ ಮೂಲಕ ಹೊಸ ಸಮುದ್ರ ಮಾರ್ಗಗಳನ್ನು ಕಂಡುಹಿಡಿದರು. ಇಸ್ಲಾಂ ವಿದ್ವಾಂಸನಾದ ಇಬ್ನ ಬತೂತ ಸುಮಾರು 7500 ಮೈಲಿಗಳಷ್ಟು ಪ್ರಯಾಣ ಮಾಡಿ ತನ್ನ ಪ್ರವಾಸದ ಅನುಭವಗಳನ್ನು ತನ್ನ ಗ್ರಂಥವಾದ ʻʻರಿಹ್ಲʼʼದಲ್ಲಿ ದಾಖಲಿಸಿದ್ದಾನೆ.  ʻʻರಿಹ್ಲʼʼ  ಎಂದರೆ ಪ್ರಯಾಣ ಎಂದರ್ಥ.

  1. ಆಧುನಿಕ ಕಾಲ (Modern Age) 

ಯುರೋಪಿನಲ್ಲಿ ಕ್ರಿಸ್ತಶಕ 1500 ರಲ್ಲಿ ನವೋದಯ ಯುಗ ಆರಂಭವಾಯಿತು. ಆಗ ಶ್ರೀಮಂತರು ಬಾರಿ ಪ್ರಮಾಣದ ಪ್ರವಾಸವನ್ನು ಆರಂಭ ಮಾಡಿದರು. ಪುನರುಜ್ಜೀವನ, ಮತ ಸುಧಾರಣೆ, ಭೌಗೋಳಿಕ ಅನ್ವೇಷಣೆಯಿಂದ ವಾಣಿಜ್ಯ ಬೆಳವಣಿಗೆ ಹಾಗೂ ಸಾರಿಗೆ ಸೌಲಭ್ಯಗಳ ವಿಸ್ತರಣೆಯಾಯಿತು. ಉತ್ಸಾಹಿ ಪ್ರವಾಸಿಗರು ಹೊಸ ನಾಡುಗಳತ್ತ ಪ್ರಯಾಣ ಬೆಳೆಸಿದರು. ಉದಾ:  ಆಂಗ್ಲರು ಅಮೆರಿಕಗೆ ಹೊರಟರು ಈ ಸಮಯದಲ್ಲಿ ವಾಹನಗಳು ರೇಡಿಯೋ ಹಡಗು ಸಂಪರ್ಕ ಆಧುನಿಕ ವಸತಿಗೃಹಗಳ ನಿರ್ಮಾಣದಿಂದಾಗಿ ಪ್ರವಾಸಿ ಚಟುವಟಿಕೆ ಜೋರಾಯಿತು. ಹೀಗಾಗಿ ಸಮುದ್ರ ವಿಹಾರ ಧಾಮಗಳು ಮತ್ತು ಸ್ಪಾಗಳು ಬೆಳೆದು ಬಂದವು. ಇದೇ ಸಂದರ್ಭದಲ್ಲಿ ಗ್ರ್ಯಾಂಡ್ ಟೂರ್ ಕಲ್ಪನೆ ಬೆಳೆದು ಬಂದಿತು.

  1. ಗ್ರ್ಯಾಂಡ್ ಟೂರ್: ಇಂಗ್ಲೆಂಡಿನಲ್ಲಿ ಗ್ರ್ಯಾಂಡ್ ಟೂರ್ ಕಲ್ಪನೆ ಬಂದುದು 18ನೇ ಶತಮಾನದ ವೇಳೆಗೆ ಇಂಗ್ಲೆಂಡಿನ ಸುಮಾರು 20000 ಪ್ರವಾಸಿಗರು ಇತರೆ ದೇಶಗಳ ಗೃಹ ನಿರ್ಮಾಣ, ಪುರಾತನ ನಿರ್ಮಾಣ, ಉದ್ಯಾನವನಗಳು ಹಾಗೂ ರಸ್ತೆಗಳ ನಿರ್ಮಾಣಗಳ ಮಾಹಿತಿ ತಿಳಿದು ತಮ್ಮ ದೇಶದಲ್ಲಿ ಹಾಗೆಯೇ ನಿರ್ಮಿಸಲು ಯೋಚಿಸಿ ಪ್ರಪಂಚದ ಯೂರೋಪ್ ಖಂಡಕ್ಕೆ ಪ್ರವಾಸ ಹೊರಟರು. ಈ ಪ್ರವಾಸ 3 ರಿಂದ 4 ವಾರಗಳ ಅವಧಿಯದಾಗಿತ್ತು. 1763 ರಿಂದ 1793ರ 30 ವರ್ಷಗಳ ಅವಧಿಯಲ್ಲಿ ಇಂಗ್ಲೆಂಡಿನ ಜನಸಾಮಾನ್ಯರು ತಮ್ಮ ಸಂಪತ್ತನ್ನು ಗ್ರ್ಯಾಂಡ್ ಟೂರಿಗೆ ಸುರಿದರು. ಅವರಲ್ಲಿ ಹಲವರು ಶೈಕ್ಷಣಿಕ ಪ್ರವಾಸ ಕೈಗೊಂಡರು.

ರಷ್ಯಾದ ಪೀಠದ ಮಹಾಶಯ ಯುರೋಪಿನಾದ್ಯಂತ ಪ್ರವಾಸ ಕೈಗೊಂಡು ಅಲ್ಲಿನ ಶಿಕ್ಷಣ, ಆರ್ಥಿಕತೆ, ಸಾಮಾಜಿಕ ಸ್ಥಿತಿ, ಸಾಂಸ್ಕೃತಿಕ ಪರಂಪರೆ, ಕಲೆ, ಸಾಹಿತ್ಯ ಹಾಗೂ ಕೈಗಾರಿಕಾ ಬೆಳವಣಿಗೆಯ ಕುರಿತು ಅಧ್ಯಯನ ಮಾಡಿದನು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಗ್ರ್ಯಾಂಡ್ ಟೂರ್ ಹೋಗುತ್ತಿದ್ದರು. ಇಂತಹ ಪ್ರವಾಸಿಗರಿಗೆ ವಸತಿ ಊಟ ನೀಡಲು ಅಲ್ಲಿನ ರೆಸಾರ್ಟ್ ಗಳು ಹಾಗೂ ಹೋಟೆಲ್‌ಗಳು ಸಿದ್ಧಗೊಂಡವು. ಪ್ರವಾಸಿಗರಿಗೆ ಹಣ ನೀಡಲು ಬ್ಯಾಂಕುಗಳು ಆರಂಭವಾದವು. 1760ರಲ್ಲಿ ಪ್ರವಾಸಿ ಚೆಕ್ ಸೌಲಭ್ಯ ಜಾರಿಗೆ ಬಂದಿತು.

ಕೈಗಾರಿಕಾ ಕ್ರಾಂತಿಯ ಪ್ರಭಾವ:  ಕೈಗಾರಿಕಾ ಕ್ರಾಂತಿಯು ಪ್ರವಾಸೋದ್ಯಮಕ್ಕೆ ಸ್ಪೂರ್ತಿಯಾಯಿತು. ಅದಕ್ಕೆ ಈ ಕೆಳಗಿನ ಅಂಶಗಳು ಕಾರಣವಾದವು.

  1. ಸಾರಿಗೆ ಸಂಪರ್ಕಗಳ ತೀವ್ರ ಬೆಳವಣಿಗೆ.
  2.  ತಾಂತ್ರಿಕ ಅಭಿವೃದ್ಧಿಯ ಪರಿಣಾಮದಿಂದ ಸಾರಿಗೆ ಸಂಪರ್ಕದಲ್ಲಿ ಹೊಸ ಕ್ರಾಂತಿಯಾದುದು.
  3. ಕಾರ್ಮಿಕರಿಗೆ ವೇತನ ಸಹಿತ ರಜೆ ಹಾಗೂ ಪ್ರವಾಸಕ್ಕೆ ತಗುಲುವ ವೆಚ್ಚವನ್ನು ಬರೆಸಲು ಮುಂದಾದದು.
  4. ಸಮಯ ಮತ್ತು ಸಂಪತ್ತಿನ ಹೆಚ್ಚಳ.
  5. ಪ್ರವಾಸೋದ್ಯಮ ನಡೆಸುವ ಉದ್ಯಮದ ಬೆಳವಣಿಗೆ
  6.  ಸುರಕ್ಷತೆಯ ಪ್ರಯಾಣ ಸೌಲಭ್ಯಗಳು
  7.  ನಗರೀಕರಣ ಕೈಗಾರಿಕರಣದ ಪ್ರಭಾವ
  8.  ವಾರ್ಷಿಕ ರಜೆ ಸೌಲಭ್ಯಗಳ ರೂಢಿ.

ವೇತನ ಸಹಿತ ರಜೆ ಸೌಲಭ್ಯಗಳು (Paid Holidays)

19ನೇ ಶತಮಾನಕ್ಕಿಂತ ಮೊದಲು ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಕಡಿಮೆ ವೇತನವನ್ನು ನೀಡಿ ಹೆಚ್ಚು ಸಮಯದವರೆಗೆ ದುಡಿಸಿಕೊಳ್ಳಲಾಗುತ್ತಿದ್ದು ಕಾರ್ಮಿಕರು ದೈಹಿಕ ಹಾಗೂ ಮಾನಸಿಕ ವೇದನೆಯಿಂದ ಬಳಲುತ್ತಿದ್ದರು. ಇದು ಪ್ರವಾಸೋದ್ಯಮದ ಮೇಲೆ ತೀವ್ರ ಪರಿಣಾಮ ಬೀರಿತು. ಕೈಗಾರಿಕಾ ಕ್ರಾಂತಿಯು ಸಂಪತ್ತಿನ ಹೆಚ್ಚಳ ಹಾಗೂ ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದ ವೇತನವನ್ನು ನೀಡಲು ಉತ್ತೇಜನ ನೀಡಿತು. ಜೊತೆಗೆ ವೇತನ ಸಹಿತ ರಜೆಯನ್ನು ನೀಡಿ ಕಾರ್ಮಿಕರನ್ನು ಪ್ರವಾಸಕ್ಕೆ ಹೋಗಿ ಬರುವಂತೆ ಪ್ರೋತ್ಸಾಹಿಸಲಾಯಿತು. ಇದರಿಂದ ಸಾಮೂಹಿಕ ಪ್ರವಾಸದ ಪರಿಕಲ್ಪನೆಗೆ ನಾಂದಿಯಾಯಿತು. ಇದರಿಂದ ಕಾರ್ಮಿಕರು ಬಿಡುವು ಮಾಡಿಕೊಂಡು ಪ್ರವಾಸ ಹೋಗಲು ಆರಂಭಿಸಿದರು.