ಓಝೋನ್ ಪದರು ನಾಶದಿಂದ ಉಂಟಾಗುವ ಪರಿಣಾಮಗಳು ಮತ್ತು ಪದರಿನ ನಿಯಂತ್ರಣಗಳು

ಓಝೋನ್ ಪದರು ನಾಶದಿಂದ ಉಂಟಾಗುವ ಪರಿಣಾಮಗಳು ಮತ್ತು ಪದರಿನ ನಿಯಂತ್ರಣಗಳು

ನಾವು ಇಂದು ಬಳಸುವ ಸ್ಪ್ರೇ ವಸ್ತುಗಳು, ಬರುಗು ಉಂಟು ಮಾಡುವ ಪದಾರ್ಥಗಳು ಅಗ್ನಿಶಾಮಕಗಳು, ಹವಾನಿಯಂತ್ರಿತ, ಕೆಲವು ಬಗೆಯ ದ್ರಾವಕ ಕೀಟನಾಶಕಗಳು ಮೊದಲಾದವುಗಳು ಗಾಳಿಯನ್ನು ಸೇರಿ ಅದರಲ್ಲಿನ ಅಣುಗಳೊಂದಿಗೆ ಬೆರೆಯುತ್ತವೆ. ಕಾಲಾನಂತರ ಓಜೋನ್‌ ನಾಶಗೊಂಡು ದುರ್ಬಲವಾಗುತ್ತದೆ. ಹೀಗೆ ಓಜೋನ್‌ ಅನಿಲವು ನಾಶವಾಗುವುದನ್ನೇ “ಓಜೋನ್‌ ವಲಯ ಪತನʼʼ ಎಂದು ಕರೆಯುವರು. ಮಾನವನ ಚಟುವಟಿಕೆಗಳಿಂದ ಓಝೋನ್ ವಲಯಕ್ಕೆ ಹಾನಿ ಆದರೆ ಮಾನವನನ್ನು ʻʻಓಜೋನ್‌ ಭಕ್ಷಕʼʼ ಎಂದು ಪರಿಗಣಿಸಬಹುದು. ಓಜೋನ್‌ ಪದರಿನ ನಾಶದಿಂದ ಆಗುವ ಪರಿಣಾಮಗಳನ್ನು ಈ ಕೆಳಗಿನಂತೆ ತಿಳಿಯಬಹುದು.

ಓಝೋನ್ ಪದರು ನಾಶದಿಂದ ಉಂಟಾಗುವ ಪರಿಣಾಮಗಳು

  1. ಓಜೋನ್ ಪದರು ಹಾಳಾಗುವುದರಿಂದ ಅತಿ ನೇರಳೆ ಕಿರಣಗಳು ಭೂಮಿಯನ್ನು ತಲುಪುತ್ತವೆ. ಆಗ ಮಾನವನ ದೇಹದ ಮೇಲೆ ಈ ಕಿರಣಗಳು ದುಷ್ಪರಿಣಾಮವನ್ನು ಬೀರುತ್ತವೆ. ಮಾನವನ ಶರೀರದಲ್ಲಿ ಇರುವ DNA ದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತದೆ. ಇದರಿಂದ ಅವರಿಗೆ ಜನಿಸುವ ಮಕ್ಕಳು ಅಂಗವಿಕಲರಾಗುತ್ತವೆ. ಈ ನೇರಳೆ ಕಿರಣಗಳು ಚರ್ಮದ ಕ್ಯಾನ್ಸರ್, ಕಣ್ಣಿನ ಕ್ಯಾನ್ಸರ್, ಉಸಿರಾಟದ ತೊಂದರೆ ಮುಂತಾದ ಕಾಯಿಲೆಗಳನ್ನು ಸೃಷ್ಟಿಸುತ್ತವೆ.
  2. ಅತಿಯಾದ ನೇರಳೆ ಕಿರಣಗಳಿಂದ ಮಾನವನ ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ. ಕಣ್ಣಿನ ರೆಟಿನಾಗಳು ಹಾಳಾಗಿ ಕುರುಡುತನ ಬರುತ್ತದೆ.
  3. ಓಜೋನ್ ಪದರಿನ ನಾಶದಿಂದ ಭೂಮಿಯ ಮೇಲಿನ ನಾನಾ ಜೀವಿಗಳು ರೋಗ ರುಜಿನಗಳಿಂದ ನರಳಿ ಸಾಯುತ್ತವೆ.
  4. ಓಜೋನ್ ಪದರು ಹಾಳಾಗುವುದರಿಂದ ರೋಗ ನಿರೋಧಕ ಶಕ್ತಿ ಕುಂದಿ ಮಾನವನ ದೇಹ ನೂರಾರು ಕಾಯಿಲೆಗಳ ಗೂಡಾಗುತ್ತವೆ.
  5. ಇದರಿಂದ ಕೃಷಿ ಬೆಳೆಗಳು ಹಾಗೂ ಜಲಚರ ಪ್ರಾಣಿಗಳು ನಾಶವಾಗುತ್ತವೆ.
  6. ಓಝೋನ್ ಪದರು ನಾಶವಾದರೆ ಭೂಮಂಡಲದ ಉಷ್ಣತೆ ಹೆಚ್ಚಾಗುತ್ತದೆ. ಮಣ್ಣಿನ ಆರ್ದ್ರತೆ ಕಡಿಮೆಯಾಗುತ್ತದೆ ಇದರಿಂದ ಫಸಲು ಹಾಳಾಗುತ್ತದೆ.
  7. ಪಾಚಿಗಳು, ಮೀನುಗಳು, ಏಡಿಗಳಂತಹ ಜಲಚರಗಳು ಸಹ ನೇರಳಾತೀತ ಕಿರಣಗಳಿಂದ ಅಪಾಯಕ್ಕೆ ಈಡಾಗುತ್ತವೆ.

ಓಜೋನ್ ಪದರಿನ ನಿಯಂತ್ರಣಗಳು:

  1. ಸಿ ಎಫ್ ಸಿ ರಹಿತವಾದ ರೆಫ್ರಿಜರೇಟರ್ ಹಾಗೂ ಹವಾ ನಿಯಂತ್ರಿತ ವಸ್ತುಗಳನ್ನು ಬಳಸದಂತೆ ಕ್ರಮ ಕೈಗೊಳ್ಳಬೇಕು.
  2. ಓಝೋನ್ ಸ್ನೇಹಿ ರಾಸಾಯನಿಕಗಳನ್ನು ಬಳಸುವುದು.
  3. 1987ರ ಮಾಂಟ್ರಿಯಲ್ ಪ್ರೋಟೋಕಾಲ್‌ನಲ್ಲಿ ಭಾಗವಹಿಸಿದ ಅಭಿವೃದ್ಧಿ ಹೊಂದಿದ ದೇಶಗಳು ಓಝೋನ್ ವಿನಾಶಕ ವಸ್ತುಗಳನ್ನು ನಿಷೇಧಿಸಲು ನಿರ್ಧರಿಸಿದವು. ಅದು 2000 ಇಸವಿಗೆ ಸ್ವಲ್ಪ ಸಕಾರಗೊಂಡಂತಾಗಿದೆ.
  4. 1990 ರಲ್ಲಿ ಲಂಡನ್ ನಲ್ಲಿ ನಡೆದ ಸಮಾವೇಶದಲ್ಲಿ ಮಾಂಟ್ರಿಯಲ್ ನಡವಳಿಕೆಗೆ ತಿದ್ದುಪಡಿಯನ್ನು ತಂದು ಅಭಿವೃದ್ಧಿ ಹೊಂದಿದ ದೇಶಗಳು ಓಝೋನ್ ವಿನಾಶಕ ವಸ್ತುಗಳ ಬದಲಾಗಿ ಪರ್ಯಾಯ ರಸಾಯನಿಕಗಳನ್ನು ಬಳಸಲು ನಿರ್ಧರಿಸಿದವು.
  5. 1992 ರಲ್ಲಿ ಭಾರತವು ಸಹ ಮಾಂಟ್ರಿಯಲ್ ನಡುವಳಿಕೆಗೆ ಸಹಿ ಹಾಕಿತ್ತು. 1998ರಲ್ಲಿ ಅರಣ್ಯ ಸಚಿವಾಲಯವು ಓಝೋನ್ ವಿನಾಶಕಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ನಿಯಮಗಳನ್ನು ರೂಪಿಸಿದೆ. ಇದರ ಪ್ರಕಾರ 2003ರ ಹೊತ್ತಿಗೆ ಓಝೋನ್ ವಿನಾಶಕಗಳನ್ನು ಬಳಸುವುದು ಕಡಿಮೆ ಮಾಡಬೇಕು. ಭಾರತ ಈಗ ಹ್ಯಾಲೋಜನ್‌ಗಳ ಬಳಕೆಯನ್ನು ನಿಲ್ಲಿಸಿದೆ.

ಉಪಸಂಹಾರ

ಓಜೋನ್ ಪದರ ನಾಶವು ಮಾನವ ಆರೋಗ್ಯ, ಪರಿಸರ ಹಾಗೂ ಜೀವಜಾಲದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅತಿನೇರಳೆ ಕಿರಣಗಳ ಪ್ರಮಾಣ ಹೆಚ್ಚಿದಂತೆ ಅನೇಕ ರೋಗಗಳು ಹಾಗೂ ಪರಿಸರ ಅಸಮತೋಲನ ಉಂಟಾಗುತ್ತಿದೆ. ಆದ್ದರಿಂದ ಓಜೋನ್ ಸ್ನೇಹಿ ಉತ್ಪನ್ನಗಳನ್ನು ಬಳಸುವುದು ಮತ್ತು ಹಾನಿಕಾರಕ ರಾಸಾಯನಿಕಗಳ ಬಳಕೆಯನ್ನು ತಗ್ಗಿಸುವುದು ಅತ್ಯವಶ್ಯಕ. ಸರ್ಕಾರಗಳು ಕೈಗೊಂಡಿರುವ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಪರಿಸರ ಸಂರಕ್ಷಣೆಯ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂಬ ಅರಿವು ಮೂಡಬೇಕು.

ಓಝೋನ್ ಪದರ ನಾಶಕ್ಕೆ ಕಾರಣಗಳು

ಓಝೋನ್ ಪದರ ನಾಶಕ್ಕೆ ಕಾರಣಗಳು

 ಓಜೋನ್‌ ರಂಧ್ರವನ್ನು ಅಂಟಾರ್ಟಿಕಾ ಸಮೀಕ್ಷೆಯಲ್ಲಿ ಬ್ರಿಟಿಷ್ ವಿಜ್ಞಾನಿ ಡಾ. ಜೆ ಪೋರಮನ್ ರವರು 1982 ರಲ್ಲಿ ದಕ್ಷಿಣ ಧ್ರುವದಲ್ಲಿ ಪತ್ತೆ ಹಚ್ಚಿದರು. 1987 ರಲ್ಲಿ ಓಝೋನ್ ಪದರಿನ ಸ್ಥಿತಿ ತಿಳಿಯಲು ನಾಸಾದಿಂದ ವಿಸ್ತೃತ ಪ್ರಮಿಕ್ಷೆ ನಡೆಸಲಾಯಿತು. ಓಜೋನ್‌ ಪದರು ಆರಂಭದಲ್ಲಿ ನಿಧಾನಗತಿಯಲ್ಲಿ ನಾಶವಾಗಲು ಆರಂಭಿಸಿತು. 1974 ರಲ್ಲಿ ಓಝೋನ್ ಪದರಿಗೆ ರಂಧ್ರವಿರುವುದು ಗೊತ್ತಾಯಿತು. ಓಜೋನ್ ಪದರು ಈಗಾಗಲೇ 4% ರಿಂದ 8% ರಷ್ಟು ನಾಶವಾಗಿದೆ. ಇದರ ನಾಶದ ಪರಿಣಾಮ ಈಗಾಗಲೇ ರಷ್ಯಾ, ಅಮೇರಿಕಾ, ಕೆನಡಾ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳ ಮೇಲೆ ಆಗಿದೆ. ಓಝೋನ್ ಪದರಿನ ನಾಶಕ್ಕೆ ಈ ಕೆಳಗಿನ ಅಂಶಗಳು ಕಾರಣಗಳಾಗಿವೆ. ಅವುಗಳೆಂದರೆ ಓಜೋನ್ ಪದರವು ವೇಗವರ್ಧಕಗಳಾದ ನೈಟ್ರಿಕ್ ಆಕ್ಸೈಡ್(NO) ನೈಟ್ರಸ್ ಆಕ್ಸೈಡ್(N2O) ಹೈಡ್ರಾಕ್ಸಿಲ್‌ (OH) ಪರಮಾಣ್ವಿಕ ಕ್ಲೋರಿಕ್ (CL) ಹಾಗೂ ಪರಮಾಣ್ವಿಕ ಬ್ರೋಮಿನ್ (Br) ಗಳಿಂದ ಹಾಳಾಗುತ್ತದೆ. ಇವುಗಳ ಜೊತೆಗೆ ಈ ಕೆಳಗಿನ ಕಾರಣಗಳಿಂದ  ಓಜೋನ್ ಪದರು ನಶಿಸಿಹೋಗುತ್ತದೆ.

1.ಕ್ಲೋರೋ ಪ್ಲೋರೋ ಕಾರ್ಬನ್‌ಗಳು: (CFCs)

ಕ್ಲೋರೋ ಪ್ಲೋರೋ ಕಾರ್ಬನ್‌ಗಳು ಶೀತಕಾರಕ ಅನಿಲವಾಗಿದ್ದು ಇದನ್ನು ಏರ್‌ಕಂಡೀಷನ್‌ ಹಾಗೂ ರೆಪ್ರಜರೇಟರ್‌ನಲ್ಲಿ ಬಳಕೆ ಮಾಡಲಾಗುತ್ತದೆ. ಇದು ರೆಪ್ರಜರೇಟರ್‌ನಲ್ಲಿ ಆವಾಹಕ ನೊರೆಯನ್ನುಂಟು ಮಾಡುವ ಅನಿಲವಾಗಿದೆ. CFCs  ಸ್ಥಿರವಾದ ಅನಿಲವಾದ ಕಾರಣ ಭೂಮಿಯ ಹತ್ತಿರ ಅದು ವಿಘಟನೆಗೊಳ್ಳದೆ. ವಾಯುಮಂಡಲದಲ್ಲಿ ಅತೀ ಎತ್ತರದವಾದ ಪ್ರದೇಶವನ್ನು ತಲುಪಿ ಅಲ್ಲಿ ವಿಘಟನೆ ಹೊಂದಿ ಕ್ಲೋರಿನ್ ಅನ್ನು ಬಿಡುಗಡೆ ಮಾಡುತ್ತದೆ. ಹೀಗೆ ಬಿಡುಗಡೆಗೊಂಡ ಕ್ಲೋರಿನ್ ಅಣುವು ವಿಭಜನೆಯಾದ ಓಜೋನಿನೊಂದಿಗೆ ಸೇರಿ ಅಸ್ಥಿರವಾದ ಮಧ್ಯಂತರ ಸಂಯುಕ್ತ ವಸ್ತುವಾದ ಕ್ಲೋರಿನ್ ಮೋನಾಕ್ಸೈಡ್ ಆಗಿ ಬದಲಾವಣೆ ಹೊಂದುತ್ತದೆ. ಈ ಕ್ಲೋರಿನ್ ಮಾನಾಕ್ಸೈಡ್ ಮತ್ತೆ ವಿಘಟನೆಗೊಂಡು ನವಜಾತ ಆಮ್ಲಜನಕ ಮತ್ತು ಕ್ಲೋರಿನ್ ಆಗಿ ಬದಲಾಗುತ್ತದೆ. ಹೀಗೆ ಬೇರ್ಪಟ ಕ್ಲೋರಿನ್ ಮತ್ತೊಂದು ಓಜೋನ್‌ ಅಣುವನ್ನು ನಾಶಪಡಿಸಲು ರೆಡಿಯಾಗುತ್ತದೆ. ಹೀಗೆ ಒಂದು ಕ್ಲೋರಿನ್ ಅಣುವು ಸುಮಾರು 1 ಲಕ್ಷ ಓಜೋನ್‌ ಕಣಗಳನ್ನು ನಾಶಪಡಿಸುವುದಲ್ಲದೆ ಅದರ ಪರಿಣಾಮ ಸುಮಾರು 100 ವರ್ಷಗಳವರೆಗೆ ಮುಂದುವರೆಯುತ್ತದೆ.

2.  ಹ್ಯಾಲೋಜನ್‌ಗಳು: (ಹ್ಯಾಲೋನ್‌ಗಳು)

ಇದನ್ನು ಪ್ರಮುಖವಾಗಿ ಅಗ್ನಿಶಾಮಕಗಳಲ್ಲಿ ಬಳಕೆಮಾಡಲಾಗುತ್ತದೆ. ಇದು ಅಲ್ಲದೆ ವಾಯು, ನೌಕೆ, ಗಗನ ನೌಕೆ, ಹಡಗು ಹಾಗೂ ಜಲಾಂತರ್ಗಾಮಿಗಳಲ್ಲಿ ಇದನ್ನು ಬಳಸುತ್ತಾರೆ. ಇವು ಓಜೋನ್ ಪದರಿನ ನಾಶದಲ್ಲಿ CFCs ಗಿಂತ 3ರಿಂದ 10 ಪಟ್ಟು ಹೆಚ್ಚಾಗಿರುತ್ತವೆ.

3.  ಬ್ರೋಮಿನ್ ಸಂಯುಕ್ತಗಳು:

ಬ್ರೊಮಿನ್ ಸಂಯುಕ್ತಗಳಾದ ಹ್ಯಾಲೋನ್, ಹೈಡ್ರೋಬ್ರೋಮೊ, ಫ್ಲೋರ್ ಕಾರ್ಬನ್‌ಗಳು ಅಗ್ನಿಶಾಮಕಗಳಲ್ಲಿ ಹಾಗೂ ಬ್ರೂಮೆಡ್‌ಗಳನ್ನು ಕ್ರಿಮಿನಾಶಕಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ.

4.  ಕಾರ್ಬನ್ ಟೆಟ್ರಾಕ್ಲೋರೈಡ್: (CC14)

 ಇದನ್ನು ಅಗ್ನಿಶಾಮಕ ದಳ, ಕೈಗಾರಿಕೆ, ಪ್ರಯೋಗಾಲಯ, ದ್ರಾವಕವಾಗಿ ಪೆಟ್ರೋ, ರಸಾಯನಿಕ, ಕ್ರೀಟನಾಶಕ ಹಾಗೂ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದು ಸಹ ಓಜೋನ್‌ನ್ನು CFCs ಯಷ್ಟೇ ಪರಇಣಾಮಕಾರಿಯಾಗಿ ನಾಶಮಾಡುತ್ತದೆ.

5. ಮಿಥೇಲ್ ಪ್ರೊಮೈಡ್‌: (CHBr)

 ಮೀಥೇಲ್ ಬ್ರೊಮೈಡ್‌ನ್ನು ಕೀಟನಾಶಕಗಳಲ್ಲಿ ಬಳಸುತ್ತಾರೆ. ಇದು ಸಹ CFC ಯಷ್ಟೇ ಪರಿಣಾಮಕಾರಿಯಾಗಿ ಓಜೋನನ್ನು ನಾಶಗೊಳಿಸುತ್ತದೆ.

6. ಮಿಥೇಲ್ ಕ್ಲೋರೋಫಾರ್ಮ್:

 ಇದನ್ನು ಕೈಗಾರಿಕಾ ದ್ರಾವಕವಾಗಿ ವಿದ್ಯುತ್ ಹಾಗೂ ಲೋಹಗಳ ಉಪಕರಣ ತಯಾರಿಕೆಯಲ್ಲಿ ಹಾಗೂ ಔಷಧಿಗಳಲ್ಲಿ ಬಳಸುತ್ತಾರೆ. ಇದರ ಓಜೋನ್ ವಿನಾಶ ಸಾಮರ್ಥ್ಯವು CFC ಗಿಂತ 10 ಪಟ್ಟು ಕಡಿಮೆ.

ಉಪಸಂಹಾರ

ಓಜೋನ್ ಪದರದ ನಾಶವು ಮಾನವ ಆರೋಗ್ಯ, ಪರಿಸರ ಹಾಗೂ ಜೀವ ವೈವಿಧ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ಕೈಗಾರಿಕೆಗಳಲ್ಲಿ ಬಳಸುವ ಹಾನಿಕಾರಕ ರಸಾಯನಿಕಗಳು ಈ ನಾಶಕ್ಕೆ ಪ್ರಮುಖ ಕಾರಣಗಳಾಗಿವೆ. ಓಜೋನ್ ಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹಾನಿಕಾರಕ ಅನಿಲಗಳ ಬಳಕೆಯನ್ನು ಕಡಿಮೆ ಮಾಡುವುದು ಅತ್ಯವಶ್ಯಕ. ಸರ್ಕಾರ, ಕೈಗಾರಿಕೆ ಮತ್ತು ನಾಗರಿಕರು ಒಟ್ಟಾಗಿ ಪರಿಸರ ಸಂರಕ್ಷಣೆಗೆ ಕೈಜೋಡಿಸಿದಾಗ ಮಾತ್ರ ಓಜೋನ್ ಪದರನ್ನು ಉಳಿಸಲು ಸಾಧ್ಯ. ಭವಿಷ್ಯದ ಪೀಳಿಗೆಗೆ ಸುರಕ್ಷಿತ ಭೂಮಿಯನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ.

ಹಸಿರು ಮನೆ ಪರಿಣಾಮದ ದುಷ್ಪರಿಣಾಮಗಳು ಮತ್ತು ನಿವಾರಣೋಪಾಯಗಳು

ಹಸಿರು ಮನೆ ಪರಿಣಾಮದ ದುಷ್ಪರಿಣಾಮಗಳು ಮತ್ತು ನಿವಾರಣೋಪಾಯಗಳು

ಹಸಿರು ಮನೆ ಪರಿಣಾಮವು ಇಂದಿನ ಜಗತ್ತಿನ ಅತ್ಯಂತ ಗಂಭೀರ ಪರಿಸರ ಸಮಸ್ಯೆಯಾಗಿದೆ. ಮಾನವ ಚಟುವಟಿಕೆಗಳಿಂದಾಗಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ ಭೂಮಿಯ ಸಹಜ ಸಮತೋಲನ ಹದಗೆಡುತ್ತಿದೆ. ಇದರ ಪರಿಣಾಮವಾಗಿ ಜಾಗತಿಕ ತಾಪಮಾನ ಏರಿಕೆ, ಪ್ರಕೃತಿ ವಿಕೋಪಗಳು ಹಾಗೂ ಜೀವ ವೈವಿಧ್ಯಕ್ಕೆ ಅಪಾಯ ಉಂಟಾಗಿದೆ.

ಹಸಿರು ಮನೆ ಪರಿಣಾಮದ ದುಷ್ಪರಿಣಾಮಗಳು:

 ಹಸಿರು ಮನೆ ಪರಿಣಾಮ ಈ ಕೆಳಗಿನ ಕಾರಣಗಳಿಂದ ಸಂಭವಿಸುತ್ತದೆ.

  1. ಜಾಗತಿಕ ತಾಪಮಾನವು ಹಸಿರು ಮನೆ ಪರಿಣಾಮದಿಂದ ಏರಿಕೆಯಾಗಿದೆ.
  2. ಮಿತಿಮೀರಿದ ಜನಸಂಖ್ಯೆ, ಫಾಸಿಲ್‌ ಇಂಧನಗಳ ಅತಿಯಾದ ಬಳಕೆ ಹಾಗೂ ಕಾಡುಗಳ ನಾಶದಿಂದ ಹಸಿರು ಮನೆ ಪರಿಣಾಮದ ಮೇಲೆ ದುಷ್ಪರಿಣಾಮ ಬೀರುತ್ತದೆ.
  3.  ಭೂಮಂಡಲದ ಶಾಖದಿಂದಾಗಿ ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ. ಕಳೆದ ಒಂದು ಶತಮಾನದಲ್ಲಿ ಸಾಗರದ ನೀರಿನ ಮಟ್ಟ ಶೇಕಡ 15ರಷ್ಟು ಏರಿಕೆಯಾಗಿದೆ.
  4.  ಭೂಮಿಯ ತಾಪಮಾನದ ಹೆಚ್ಚಾಗುವಿಕೆಯಿಂದ ಹಿಮ ಪ್ರದೇಶದಲ್ಲಿನ ಹಿಮಗಡ್ಡೆಗಳು ಕರಗಿ ಸಾಗರದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ. ಈಗಾಗಲೇ ಹಲವು ಕಡೆಗಳಲ್ಲಿ ಸಾಗರದ ನೀರಿನ ಮಟ್ಟ ಏರಿಕೆಯಾಗಿರುವುದು ದೃಢಪಟ್ಟಿದೆ.
  5. ಭೂ ಮೇಲ್ಮೈ ಉಷ್ಣತೆ ಹೆಚ್ಚಾದಂತೆ ಬಿರುಗಾಳಿ ಹೆಚ್ಚಾಗುವ ಸಂಭವ ಇರುತ್ತದೆ. ಉದಾ: 2002 ರಲ್ಲಿ ಆಂಧ್ರದಲ್ಲಿ ಬಿರುಗಾಳಿ ಬೀಸಿ ಸಾವಿರಾರು ಜನರು ಪ್ರಾಣ ತೆತ್ತರು.
  6.  ಭೂಮಿಯ ತಾಪಮಾನ ಹೆಚ್ಚಾದರೆ ಕೆರೆ, ಬಾವಿ, ನದಿ, ಸರೋವರಗಳು ಒಣಗಿ ಹೋಗಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ.
  7.  ಭೂಮಿಯ ತಾಪಮಾನದ ಪ್ರಮಾಣ ದಿನೇ ದಿನೇ ಹೆಚ್ಚಾದರೆ ಅಂತರ್ಜಲ ಇಂಗಿ ಹೋಗುತ್ತದೆ.
  8.  ವಾತಾವರಣದಲ್ಲಿನ ಬಿಸಿ ಗಾಳಿಯಿಂದ ಜನರ ಚರ್ಮದ ಮೇಲೆ ತೀವ್ರತರದ ಪರಿಣಾಮ ಬೀರುತ್ತದೆ.
  9. ಭೂಮಿಯ ತಾಪಮಾನದ ಪರಿಣಾಮದಿಂದ ಪಶು ಪಕ್ಷಿಗಳು, ಜಲಚರ ಪ್ರಾಣಿಗಳು ಹಾಗೂ ಮಾನವ ಜೀವಿ ನೀರಿಲ್ಲದೆ ಸಾಯಬಹುದು.
  10.  ಭೂಮಿಯ ಅತಿಯಾದ ಉಷ್ಣಾಂಶದಿಂದ ಕೃಷಿ ಬೆಳೆಗಳು, ನೆರಳು ನೀಡುವ ಮರಗಳು ಹಾಗೂ ದಟ್ಟವಾದ ಕಾಡುಗಳು ಕಾಡ್ಗಿಚ್ಚಿಗೆ ಬಲಿಯಾಗಬಹುದು.

ಹಸಿರು ಮನೆ ಪರಿಣಾಮದ ನಿವಾರಣೋಪಾಯಗಳು:

  1. ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲಗಳನ್ನು ನಿಯಂತ್ರಿಸಲು CFCs ಮತ್ತು ಪಳೆಯುಳಿಕೆ ಆಧಾರಿತ ಇಂಧನಗಳ ಬಳಕೆಯನ್ನು ಕಡಿಮೆಗೊಳಿಸುವುದು.
  2.  ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಗೆ ಕಡವಾಣವನ್ನು ಹೇರುವುದು.
  3.  15 ವರ್ಷ ಮೀರಿದ ಯಾವುದೇ ವಾಹನಗಳನ್ನು ರಸ್ತೆಗೆ ಇಳಿಸದಂತೆ ಕ್ರಮ ಕೈಗೊಳ್ಳುವುದು.
  4.  ಶಕ್ತಿ ಸಾಧನಗಳನ್ನು ಪ್ರಯೋಜನಕಾರಿಯಾಗಿ ಬಳಸಿಕೊಳ್ಳಬೇಕು.
  5. ರೆಫ್ರಿಜರೇಟರ್ ಹಾಗೂ ಹವಾನಿಯಂತ್ರಿತ ವ್ಯವಸ್ಥೆಗಳ ತಯಾರಿಕೆಯಲ್ಲಿ ಕ್ಲೋರೋ ಫ್ಲೋರೋ ಕಾರ್ಬನ್ ರಹಿತ ತಂತ್ರಜ್ಞಾನವನ್ನು ಬಳಕೆ ಮಾಡಬೇಕು.
  6.  ಉರುವಲು ಸೌದೆಗಾಗಿ, ಅಣೆಕಟ್ಟು, ರಸ್ತೆ, ಸೇತುವೆ ಹಾಗೂ ಕಟ್ಟಡಗಳ ನಿರ್ಮಾಣಕ್ಕಾಗಿ ಅಧಿಕ ಸಂಖ್ಯೆಯ ಮರಗಳನ್ನು ಕಡಿಯುವುದನ್ನು ಕಡಿಮೆಮಾಡಬೇಕು.
  7.  ಮರವಿದ್ದರೆ ನಾಡು-ನಾಡಿದ್ದರೆ ನಾವು ಎಂಬ ಉಕ್ತಿಯನ್ನು ಅನುಸರಿಸಬೇಕು.
  8.  ಮಿಥೇನ್ ಸಂಗ್ರಹಿಸಿ ಅದನ್ನು ಇಂಧನವಾಗಿ ಬಳಸುವುದು.
  9. ಗಿಡಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವುದನ್ನು ಒಂದು ಹವ್ಯಾಸವಾಗುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು.
  10. ಪಕ್ಕದಲ್ಲಿ ಕಾಡು ಹಾಳಾಗುತ್ತಿದೆ ನನಗೆನಾಗಬೇಕಾಗಿದೆ ಎಂಬ ಉದಾಸಿನ ಮನಸ್ಸಿನಿಂದ ನಡೆದುಕೊಳ್ಳುವುದನ್ನು ಬಿಡಬೇಕು.
  11.  ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.
  12.  ಕಲ್ಲಿದ್ದಲು, ಪೆಟ್ರೋಲ್‌, ಸೀಮೆಎಣ್ಣೆ ಹಾಗೂ ಅಣು ವಿದ್ಯುತ್ ಸ್ಥಾವರಗಳನ್ನು ತಡೆಗಟ್ಟಬೇಕು.

ಉಪಸಂಹಾರ

ಹಸಿರು ಮನೆ ಪರಿಣಾಮವನ್ನು ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ಭೂಮಿಯ ಮೇಲೆ ಜೀವಿಸುವುದು ಕಷ್ಟಕರವಾಗಬಹುದು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇಂಧನ ಬಳಕೆಯಲ್ಲಿ ಮಿತಿಯು, ಮರ ನೆಡುವ ಅಭ್ಯಾಸ ಮತ್ತು ಶುದ್ಧ ಶಕ್ತಿ ಬಳಕೆ ಅಗತ್ಯವಾಗಿದೆ. ಸರ್ಕಾರದ ಪ್ರಯತ್ನಗಳ ಜೊತೆಗೆ ಸಾರ್ವಜನಿಕ ಜಾಗೃತಿಯೂ ಅತಿ ಮುಖ್ಯವಾಗಿದೆ. ಇಂದೇ ನಾವು ಕೈಗೊಳ್ಳುವ ಸಣ್ಣ ಕ್ರಮಗಳು ನಾಳೆಯ ಭದ್ರ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತವೆ. ಪರಿಸರವನ್ನು ಉಳಿಸಿದರೆ ಮಾತ್ರ ಮಾನವ ಜೀವನ ಉಳಿಯುತ್ತದೆ.

ಹಸಿರು ಮನೆ ಅನಿಲಗಳು

ಹಸಿರು ಮನೆ ಅನಿಲಗಳು

ಭೂಮಿಯ ವಾತಾವರಣದಲ್ಲಿ ಇರುವ ಕೆಲವು ಅನಿಲಗಳು ಸೂರ್ಯನಿಂದ ಬರುವ ಉಷ್ಣತೆಯನ್ನು ಹಿಡಿದುಕೊಳ್ಳುವ ಮೂಲಕ ಭೂಮಿಯನ್ನು ಬಿಸಿಯಾಗಿಸುತ್ತವೆ. ಇವುಗಳನ್ನು ಹಸಿರುಮನೆ ಅನಿಲಗಳು ಎಂದು ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಾನವ ಚಟುವಟಿಕೆಗಳಿಂದ ಈ ಅನಿಲಗಳ ಪ್ರಮಾಣ ಅತಿಯಾಗಿ ಹೆಚ್ಚಾಗಿದೆ.

1. ಇಂಗಾಲದಡೈಆಕ್ಸೈಡ್:

ಭೂಮೇಲ್ಮೈ ಕಾಯುವಿಕೆಗೆ ಪ್ರಮುಖವಾದ ಕಾರಣವೆಂದರೆ ಹಸಿರುಮನೆ ಅನಿಲ ಇಂಗಾಲದ ಡೈ ಆಕ್ಸೈಡ್. ಇದು ಶೇ 60ರಷ್ಟು ಭೂಮಿಯ ತಾಪಮಾನಕ್ಕೆ ಕಾರಣವಾಗಿದೆ. ಕೈಗಾರಿಕಾ ಕ್ರಾಂತಿಗೆ ಮುನ್ನ ಭೂಮಿಯ ತಾಪಮಾನ 280 ರಷ್ಟು ಇತ್ತು. ಆದರೆ ಈಗ ಅದು 380 ರಷ್ಟು ಹೆಚ್ಚಳವಾಗಿದೆ. ಅಂದರೆ ಕೈಗಾರಿಕಾ ಕ್ರಾಂತಿಯ ನಂತರ ಶೇಕಡ 30ರಷ್ಟು ಅಧಿಕವಾಗಿದೆ. ಕೈಗಾರಿಕೆ, ಅರಣ್ಯನಾಶ, ನಗರಗಳ ಬೆಳವಣಿಗೆ, ವಾಹನ ಸಂಚಾರ ಮುಂತಾದವುಗಳಿಂದ ಇಂಗಾಲದ ಡೈಆಕ್ಸೈಡ್‌ ಬಿಡುಗಡೆಯಾಗಿ ವಾಯುಮಂಡಲದಲ್ಲಿ ಸೇರಿಕೊಳ್ಳುತ್ತದೆ. ಇಂಗಾಲದ ಡೈ ಆಕ್ಸಡ್‌ನ್ನು ಬಿಡುಗಡೆ ಮಾಡುವ ಅತಿ ದೊಡ್ಡ ದೇಶವೆಂದರೆ ಅದು ಅಮೆರಿಕ. ಸಿಮೆಂಟ್, ಕಬ್ಬಿಣ ಉಕ್ಕು, ರಸಾಯನಿಕ ಉತ್ಪಾದನೆಯಲ್ಲಿ, CO2 ಬಿಡುಗಡೆಯಾಗುತ್ತದೆ. ಪ್ರಾಣಿಗಳ ಉಸಿರಾಟದಲ್ಲಿ ಸಹ CO2 ಬಿಡುಗಡೆಯಾಗುತ್ತದೆ.

2. ಮೀಥೇನ್:

ಮಿಥೇನ್ ಸಹಭೂಮಂಡಲದ ಕಾಯುವಿಕೆಗೆ ಶೇಕಡ 18ರಷ್ಟು ಕಾರಣವಾಗಿದೆ. ಆಮ್ಲಜನಕದ ಕೊರತೆಯುಳ್ಳ ತೇವಾಂಶದ ಭಾಗಗಳಲ್ಲಿ ಮೀಥೇನ್ ಬ್ಯಾಕ್ಟೀರಿಯ ಸಾಯುವ ವಸ್ತುವನ್ನು ವಿಘಟನೆ ಮಾಡುವುದರ ಮೂಲಕ ಮೀಥೇನ್ ಬಿಡುಗಡೆ ಮಾಡುತ್ತದೆ. ಹೀಗಾಗಿ ಇದು ಜವಗೂ ಪ್ರದೇಶ ಭತ್ತದ ಗದ್ದೆ, ನೆಲಭರ್ತಿ, ಹಸು, ಎಮ್ಮೆ, ಕುರಿ, ಮೇಕೆ, ಗೆದ್ದಲು ಹಾಗೂ ಪಚನ ಕ್ರಿಯೆಗಳಲ್ಲಿ ಕಂಡುಬರುತ್ತದೆ. ಸ್ವಾಭಾವಿಕ ಅನಿಲ, ಕಚ್ಚಾ ತೈಲ ಸಾಗಾಣಿಕೆ, ಉತ್ಪಾದನೆ ಸಂಗ್ರಹಣೆ ಹಾಗೂ ಹಂಚಿಕೆಯಲ್ಲಿ ಮೀಥೇನ್ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರೊಂದಿಗೆ ಮಾನವನು ಎಸೆಯುವ ಘನ ತ್ಯಾಜ್ಯ ವಸ್ತುಗಳಿಂದಲೂ ಮೀಥೇನ್ ಉತ್ಪತ್ತಿಯಾಗುತ್ತದೆ.

3.  ನೈಟ್ರಸ್ ಆಕ್ಸೈಡ್: 

 ಇದು ಮಣ್ಣಿನಲ್ಲಿ ನೈಟ್ರೀಕರಣ ಹಾಗೂ ಡಿ ನೈಟ್ರೀಕರಣದ ಸೂಕ್ಷ್ಮಾಣು ಜೀವಿಗಳ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುತ್ತದೆ ಇದು ಹಸಿರು ಮನೆ ಅನಿಲವಲ್ಲದೆ ಓಜೋನ್ ಪದರು ಹಾಳಾಗಲು ಕಾರಣವಾಗುತ್ತದೆ. ರಸಾಯನಿಕ ಗೊಬ್ಬರಗಳು, ಪಳೆಯುಳಿಕೆ ಇಂಧನ ದಹನ, ಜೈವಿಕ ರಾಶಿ ದಹನ ಕ್ರಿಯೆ ಹಾಗೂ ಲೈಲಾನ್ ಮತ್ತು ಪಾಲಿ ತಯಾರಿಕೆಯಲ್ಲಿಯೂ ಉತ್ಪತ್ತಿಯಾಗುತ್ತದೆ. ಇದು ವಾಯುಮಂಡಲದಲ್ಲಿ ಸೇರಿಕೊಂಡಾಗ ಭೂಮಿಯ ತಾಪಮಾನದಲ್ಲಿ ಹೆಚ್ಚಳವಾಗುತ್ತದೆ. ನೈಟ್ರಸ್ ಆಕ್ಸೈಡ್ ಈಗಾಗಲೇ ಶೇಕಡ 15ರಷ್ಟು ಹೆಚ್ಚಾಗಿದೆ. ವಾತಾವರಣದಲ್ಲಿ 1 ಕೆ.ಜಿ ನೈಟ್ರೇಸ್ ಆಕ್ಸೈಡ್ 100 ವರ್ಷಗಳಲ್ಲಿ 296 ಕೆ.ಜಿ ಯಷ್ಟು ಹೆಚ್ಚುತ್ತದೆ.

4. ಕ್ಲೋರೋ ಫ್ಲೋರೋ ಕಾರ್ಬನ್: 

ಇದೊಂದು ಮಾನವ ನಿರ್ಮಿತ ರಸಾಯನಿಕ. ಇದು ಪ್ಲೋರಿನ್, ಕ್ಲೋರಿನ್ ಹಾಗೂ ಕಾರ್ಬನ್‌ಗಳ ಸಂಯೋಗದಿಂದ ತಯಾರಾಗಿದೆ. ಇದನ್ನು ಸಾಂಕೇತಿಕವಾಗಿ CFCs  ಎಂದು ಕರೆಯುತ್ತಾರೆ. ಇದನ್ನು ಥಾಮಸ್ ಮಿಡಗ್ಲಿ ಎಂಬ ವಿಜ್ಞಾನಿ 1728 ರಲ್ಲಿ ವಸ್ತುಗಳನ್ನು ತಂಪುಗೊಳಿಸಲು ಕಂಡುಹಿಡಿದನು. ಇದು ಶೇಕಡ 15ರಷ್ಟು ಭೂಮಂಡಲದ ತಾಪಮಾನಕ್ಕೆ ಕಾರಣವಾಗಿದೆ.  CFCs ನ್ನುಅಲುಮಿನಿಯಂ ಸೆಮಿಕಂಡಕ್ಟರ್ ಉತ್ಪಾದನೆ, ವಿದ್ಯುತ್ ಸಾಗಾಣಿಕೆ, ಸರ್ಕ್ಯೂಟ್ ಬ್ರೇಕ್‌ಗಳಲ್ಲಿ, ಶೈತ್ಯಗಾರ, ರೆಫ್ರಿಜರೇಟರ್, ಪೋಮ್‌ ಪ್ಲಾಸ್ಟಿಕ್ ಹಾಗೂ ಸಿಂಪಡಣಾ ಕ್ಯಾನ್‌, ಸೌಂದರ್ಯ ವರ್ಧಕಗಳ ಉತ್ಪಾದನೆಯಲ್ಲಿ ಬಳಸುತ್ತಾರೆ. CFCs ಒಮ್ಮೆ ವಾಯುಮಂಡಲವನ್ನು ಸೇರಿಕೊಂಡರೆ ಸುಮಾರು 75 ವರ್ಷಗಳ ಕಾಲ ಉಳಿಯಬಲ್ಲದು.

5. ಪರ್‌ಪ್ಲೋರೋ ಕಾರ್ಬನ್: 

 ಹಸಿರು ಮನೆ ಅನಿಲಗಳಲ್ಲಿ ಪರ್‌ಪ್ಲೋರೋ ಕಾರ್ಬನ್‌ ಅತ್ಯಂತ ಶಕ್ತಿಶಾಲಿ ಅನಿಲಗಳಾಗಿದ್ದು. ಇವುಗಳು ಇಂಧನ ದಹಿಸುವಿಕೆಯಿಂದ ಬಿಡುಗಡೆಗೊಳ್ಳುತ್ತವೆ. ವಾತಾವರಣದಲ್ಲಿ ಇವುಗಳು ಸುಮಾರು 50000 ವರ್ಷಗಳ ಕಾಲ ಜೀವಿಸಬಲ್ಲವುಗಳಾಗಿವೆ.

6. ಸಲ್ಫರ್ ಹೆಕ್ಸಾ ಫ್ಲೋರೈಡ್: 

 ಇದು ಕೂಡ ಭೂಮಂಡಲದ ಕಾಯುವಿಕೆಗೆ ಕಾರಣವಾಗಿದೆ. ಇದು ಕಾರ್ಬನ್ ಡೈಆಕ್ಸೈಡ್‌ ಗಿಂತ ಸುಮಾರು 22,200 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಪಳಿಯುಳಿಕೆ ಇಂಧನ, ಉರವಲು ಅರೆಬರೆ ಸುಡುವುದರಿಂದ, ಊದು ಕುಲುಮೆ, ಅಡುಗೆ ಒಲೆ, ಕಾರ್ಖಾನೆ, ಧೂಮಪಾನ, ಸ್ವಯಂಚಾಲಿತ ವಾಹನ ಹಾಗೂ ವಿಮಾನಗಳ ಇಂಧನಗಳ ದಹನ ಕ್ರಿಯೆ ಮುಂತಾದವುಗಳಿಂದ ಬಿಡುಗಡೆಯಾಗುತ್ತದೆ.

ಉಪಸಂಹಾರ

ಹಸಿರುಮನೆ ಅನಿಲಗಳ ಹೆಚ್ಚಳವು ಭೂಮಿಯ ಹವಾಮಾನ ಸಮತೋಲನವನ್ನು ಗಂಭೀರವಾಗಿ ಹದಗೆಡಿಸುತ್ತಿದೆ. ಇವುಗಳಿಂದ ಜಾಗತಿಕ ತಾಪಮಾನ ವೃದ್ಧಿ, ಹಿಮನದಿಗಳ ಕರಗುವಿಕೆ ಹಾಗೂ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಪರಿಸರವನ್ನು ಉಳಿಸಲು ಕೈಗಾರಿಕಾ ಮಾಲಿನ್ಯ ನಿಯಂತ್ರಣ, ಅರಣ್ಯ ಸಂರಕ್ಷಣೆ ಮತ್ತು ಪರ್ಯಾಯ ಇಂಧನಗಳ ಬಳಕೆ ಅತ್ಯಾವಶ್ಯಕವಾಗಿದೆ. ಪ್ರತಿಯೊಬ್ಬರೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಭವಿಷ್ಯದ ಭೂಮಿಯನ್ನು ರಕ್ಷಿಸಬಹುದು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಜಾಗತಿಕ ತಾಪಮಾನ

ಜಾಗತಿಕ ತಾಪಮಾನ

ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್‌, ಮಿಥೇನ್ ಹಾಗೂ ನೀರಾವಿಗಳು ಭೂಮಿಯ ಮೇಲ್ಮೈಯಿಂದ ಪ್ರತಿಫಲನಗೊಳ್ಳುವ ಶಾಖವನ್ನು ಹಿಡಿದು ಇಟ್ಟುಕೊಂಡಾಗ ವಾತಾವರಣದಲ್ಲಿ ಉಷ್ಣತೆ ಅಧಿಕಗೊಳ್ಳುತ್ತದೆ. ಇದನ್ನು ಹಸಿರು ಮನೆ ಪರಿಣಾಮ ಎಂದು ಕರೆಯುವರು. ಭೂಮಂಡಲ ಬಿಸಿಯಾಗಲು ಮುಖ್ಯವಾದ ಕಾರಣವೆಂದರೆ ಇಂಗಾಲದ ಡೈಆಕ್ಸೈಡ್‌, ಮಿಥೇನ್ ಹಾಗೂ ನೀರಾವಿಗಳು. ಇದರೊಂದಿಗೆ ಕ್ಲೋರೋಫ್ಲೋರೋ ಕಾರ್ಬನ್‌ಗಳೆಂಬ ಮಾನವ ಕಂಡುಹಿಡಿದ ಕೃತಕ ಹಸಿರು ಮನೆ ಅನಿಲವೂ ಸೇರಿಕೊಂಡಿದೆ. ಇದರಿಂದಾಗಿ ಹಸಿರು ಮನೆ ಪರಿಣಾಮದ ತೀವ್ರತೆ ಹೆಚ್ಚಿ ಭೂಮಿಯ ವಾಯುಮಂಡಲ ಅಪಾಯಕಾರಿ ಮಟ್ಟದಲ್ಲಿ ಬಿಸಿಯಾಗಿದೆ.

ಇಂದಿನ ವಾಯುಮಂಡಲದ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಇದು ವಾಯುಗುಣದ ಬದಲಾವಣೆಗೆ ಕಾರಣವಾಗಿದೆ. 1970 ರಿಂದ 1999ರ ಅವಧಿಯಲ್ಲಿ ಹೆಚ್ಚಾದ ತಾಪಮಾನದ ಶೇಖರಣೆಯ ಹೊರತಾಗಿ ಸಮುದ್ರ ಹಾಗೂ ಭೂಮಿಯ ಮೇಲ್ಮೈ ಈ ಎರಡರಲ್ಲಿಯೂ ಆದ ಸರಾಸರಿ ಹೆಚ್ಚಳವನ್ನು ದಾಖಲು ಮಾಡಲಾಗಿದೆ.  20ನೇ ಶತಮಾನದಲ್ಲಿ ಜಾಗತಿಕ ಉಷ್ಣತೆಯಲ್ಲಿ 0.8 c (1.4 F) ನಷ್ಟು ಏರಿಕೆಯಾಗಿದೆ. ಇದರಲ್ಲಿ 1980 ನಂತರ 3/2 ಭಾಗದಷ್ಟು ಏರಿಕೆಯನ್ನು ದಾಖಲಿಸಲಾಗಿದೆ.  ಶೇಕಡ 90ರಷ್ಟು ಜಾಗತಿಕ ತಾಪಮಾನ ಹಸಿರು ಮನೆ ಅನಿಲದ ಸಾಂದ್ರತೆಯ ಏರಿಕೆಯ ಪರಿಣಾಮವೆಂದು ವಿಜ್ಞಾನಿಗಳ ಅಭಿಮತವಾಗಿದೆ. 

ನಮ್ಮ ಭೂಮಿಯ ಮೇಲ್ಮೈನ ಸರಾಸರಿ ತಾಪಮಾನ 15° c (59F) ಇದೆ. ಆದರೆ ಕಳೆದ ಶತಮಾನಗಳಲ್ಲಿ ಈ ತಾಪಮಾನದ ಪ್ರಮಾಣ 0.6 c (1F) ನಷ್ಟು ಹೆಚ್ಚಳವಾಗಿದೆ. 2100  ವೇಳೆಗೆ ಅದು 1.4 ರಿಂದ 5.80 c ಅಂದರೆ (2.5 ರಿಂದ 10.4 ಸೆ.) ಹೆಚ್ಚಳವಾಗುವ ಸಾಧ್ಯತೆ ಇದೆ. ತಾಪಮಾನದ ಹೆಚ್ಚಳದಿಂದ ಧ್ರುವ ಪ್ರದೇಶಗಳ ಹಿಮಕರಗಿ ನೀರಾಗುತ್ತದೆ. ಮತ್ತು ಸಾಗರದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತದೆ. ಇದರೊಂದಿಗೆ ತಾಪಮಾನದ ಏರಿಕೆಯಾಗುವ ಸಂಭವವು ಹೆಚ್ಚಾಗಿದೆ. ಭೂಮಿಯು ತನ್ನ 4.65 ಬಿಲಿಯನ್ ವರ್ಷಗಳಲ್ಲಿ  ಹಲವಾರು ಬಾರಿ ಬೆಚ್ಚನೆಯಿಂದ ಕೂಡಿದ್ದು ಹಾಗೂ ಹಲವು ತಂಪಾಗಿದೆ. ಆದರೆ ಇತ್ತೀಚಿಗೆ ತಾಪಮಾನದಲ್ಲಿ ತೀವ್ರತೆಯನ್ನು ಭೂಮಿ ಎದುರಿಸುವಂತಾಗಿದೆ.

ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣಗಳು

  1. ಜೈವಿಕ ಇಂಧನಗಳನ್ನು ಅಳತೆ ಮೀರಿ ಉರಿಸುವುದು ಹಾಗೂ ವಾಹನಗಳು ಬಿಡುವ ಹೊಗೆ ಮತ್ತು ಸೌದೆಯನ್ನು ದಹಿಸುವುದರಿಂದ ಭೂಮಂಡಲದಲ್ಲಿ ಅಧಿಕ ಹೊಗೆ ಹರಡಿಕೊಳ್ಳುತ್ತದೆ. ಇದರಿಂದ ಇಂಗಾಲದ ಡೈಆಕ್ಸೈಡ್‌ ಪ್ರಮಾಣ ಹೆಚ್ಚಾಗುತ್ತದೆ. ಅರಣ್ಯ ನಾಶದಿಂದಾಗಿಯೂ ತಾಪಮಾನ ಏರಿಕೆಯಾಗುತ್ತಿದೆ.
  2. ಭತ್ತದ ಗದ್ದೆಗಳು ಮತ್ತು ಹಸುಗಳ ಸಗಣಿಯಲ್ಲಿರುವ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯಿಂದ ಮೀಥೇನ್ ಉತ್ಪಾದನೆಯಾಗಿ ವಾತಾವರಣ ಸೇರುತ್ತದೆ. ಹೀಗಾಗಿ ಜಾಗತಿಕ ತಾಪಮಾನದಲ್ಲಿ ಹೆಚ್ಚಳ ಕಂಡುಬರುತ್ತದೆ.
  3. ರಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಅತಿಯಾದ ಬಳಕೆ ಮಾಡುವುದು, ಘನ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಸಹ ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತದೆ.
  4.  ಮಿತಿಮೀರಿದ ಕೈಗಾರಿಕೆಗಳ ಸ್ಥಾಪನೆ ಹಾಗೂ ಘನ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಸುರಿಯುವುದು.
  5.  ವಾಹನಗಳ ಹೊಗೆ, ಪೆಟ್ರೋಲ್‌ ದಹನ ಇತ್ಯಾದಿ ಕಾರಣಗಳಿಂದ ಉಷ್ಣತೆಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಓಜೋನ್ ಪದರದ ಶಿಥಿಲತೆಯಿಂದ ಭೂ ಮಂಡಲ ಕಾವೇರುತ್ತದೆ.
  6.  ಅಣುಸ್ಥಾವರ ಮತ್ತು ಶಾಖೋತ್ಪನ್ನ ಘಟಕಗಳನ್ನು ಅತಿಯಾಗಿ ಸ್ಥಾಪನೆ ಮಾಡುವುದರಿಂದ ಭೂಮಂಡಲ ಅತ್ಯಂತ ಹೆಚ್ಚು ತಾಪಮಾನದಿಂದ ಕೂಡಿರುತ್ತದೆ.
  7.  ಜನಸಂಖ್ಯೆಯ ನಿರಂತರ ಏರಿಕೆಯೂ ಭೂಮಿಯ ತಾಪಮಾನಕ್ಕೆ ಕಾರಣವಾಗಿದೆ.

ಜಾಗತಿಕ ತಾಪಮಾನದ ಪರಿಣಾಮಗಳು

  1.  ಜಾಗತಿಕ ತಾಪಮಾನದಲ್ಲಿ ಉತ್ತರ ಧ್ರುವ ಪ್ರದೇಶಗಳು ಹೆಚ್ಚು ಶಾಕಯುಕ್ತವಾಗುವ ಕಾರಣ ಅಲ್ಲಿನ ಮಂಜುಗಡ್ಡೆಗಳು ಕಡಿಮೆಯಾಗುತ್ತವೆ. ಆಗ ಚಳಿಗಾಲದಲ್ಲಿ ಕೆಲವು ಪ್ರದೇಶಗಳಲ್ಲಿ ಮಂಜು ಬೀಳದೇ ಹೋಗಬಹುದು. ಸಮಶೀತೋಷ್ಣವಲಯದ ಮಂಜು ಅವಧಿಗಿಂತ ಮುಂಚಿತವಾಗಿ ಕರಗಿ ಹೋಗುವುದರಿಂದ ಕಾಲಮಾನಗಳ ಅವಧಿಯಲ್ಲಿ ಹೆಚ್ಚು ಕಡಿಮೆಯಾಗುತ್ತದೆ. ಆಗ ಚಳಿಗಾಲ ಮತ್ತು ರಾತ್ರಿಯ ವೇಳೆ ಉಷ್ಣಾಂಶ ಹೆಚ್ಚಾಗುವುದು.
  2.  ಬೆಚ್ಚನೆಯ ಪ್ರದೇಶಗಳು ಅರ್ದ್ರತೆಯಿಂದ ಕೂಡಿರುವುದರಿಂದ ನೀರಾವಿ ಹೆಚ್ಚಾಗುತ್ತದೆ. ಇದರಿಂದ ಮಳೆಯ ಪ್ರಮಾಣ ಅಧಿಕವಾಗುತ್ತದೆ. ಇದರೊಂದಿಗೆ ಬಿರುಗಾಳಿ ತೀವ್ರವಾಗುತ್ತದೆ. ಆಗ ಮಣ್ಣಿನಲ್ಲಿನ ತೇವಾಂಶ ಶಾಖದಿಂದ ಬೇಗನೆ ಆವಿಯಾಗಿ ಮಣ್ಣು ಬರಡಾಗುತ್ತದೆ.
  3. ಸಾಗರದ ಮೇಲ್ಮೈ ಪದರ ಬಿಸಿಯಾಗುತ್ತಿದ್ದಂತೆ ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ. ಇದರಿಂದ ಮಂಜುಗಡ್ಡೆ ಶೀಘ್ರವಾಗಿ ಕರಗುವುದರಿಂದ ಸಮುದ್ರಕ್ಕೆ ಉಕ್ಕಿ ಹರಿಯುತ್ತದೆ. ಆಗ ತೀರ ಪ್ರದೇಶಗಳು ಮುಳುಗಡೆಯಾಗುವ ಭೀತಿ ಎದುರಾಗುತ್ತದೆ.
  4.  ವಾತಾವರಣ ಬಿಸಿಯಾಗುತ್ತಿದ್ದಂತೆ ಪ್ರಾಣಿ ಪಕ್ಷಿಗಳು ಬದಲಾದ ಪರಿಸ್ಥಿತಿಗೆ ಒಗ್ಗಿಕೊಳ್ಳಲಾಗದೆ ತುಂಬಾ ವೇದನೆಯನ್ನು ಪಡುತ್ತವೆ. ಸಾವಿರಾರು ಜಾತಿಯ ಸಸ್ಯಗಳು ನಾಶವಾಗುತ್ತದೆ. ಪ್ರಾಣಿಗಳು ತಂಪು ಪ್ರದೇಶಗಳ ಕಡೆಗೆ ಗುಳೇ ಹೋಗುತ್ತವೆ.
  5.  ಜನರು ತುಂಬಾ ಒತ್ತಡಗಳಿಗೆ ಒಳಗಾಗಬಹುದು ಉಷ್ಣವಲಯದ ಸೊಳ್ಳೆ ಹಾಗೂ ಇತರ ಜೀವಿಗಳು ಉಷ್ಣವಲಯದಿಂದ ಶೀತ ವಲಯದ ಕಡೆಗೆ ಪ್ರಯಾಣಿಸಬಹುದು. ಇದರಿಂದ ರೋಗಗಳು ಅಲ್ಲಿ ತೀವ್ರವಾಗಿ ಹರಡಬಹುದು.
  6.  ಜಾಗತಿಕ ತಾಪಮಾನದಿಂದ ಹಿಮನದಿಗಳು ಕರಗುತ್ತವೆ.
  7.  ಕೃಷಿ ಭೂಮಿ ಕಡಿಮೆಯಾಗಿ ಆಹಾರ ಧಾನ್ಯಗಳು ಜನರಿಗೆ ಸಿಗದೇ ಹೋಗಬಹುದು.
  8.  ಹೆಚ್ಚಿನ ಹಿಮಪಾತಗಳು ಅತಿಯಾದ ಮಳೆ ಮತ್ತು ಹೆಚ್ಚಿನ ಪ್ರಮಾಣದ ಚಂಡಮಾರುತಗಳು ಉಂಟಾಗಬಹುದು.
  9.  ಮಳೆಯ ಹಂಚಿಕೆಯು ಬದಲಾವಣೆಯಾದರೆ ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ಸಂಕಷ್ಟವನ್ನು ಅನುಭವಿಸ ಬೇಕಾಗವುದು.
  10. ಶೀತ ವಲಯಗಳು ಮತ್ತು ತಗ್ಗು ಪ್ರದೇಶಗಳು ಸಾಗರದಲ್ಲಿ ಮುಳುಗಿ ಹೋಗಬಹುದು.

ಉಪಸಂಹಾರ 

ಜಾಗತಿಕ ತಾಪಮಾನವು ಭೂಮಿಯ ಜೀವ ವೈವಿಧ್ಯತೆ, ಹವಾಮಾನ ಹಾಗೂ ಮಾನವ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅರಣ್ಯ ನಾಶ, ಇಂಧನದ ಅತಿಯಾದ ಬಳಕೆ ಮತ್ತು ಮಾಲಿನ್ಯ ಈ ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸುತ್ತಿವೆ. ಪ್ರಕೃತಿಯನ್ನು ರಕ್ಷಿಸುವುದು ಮತ್ತು ಹಸಿರುಮನೆ ಅನಿಲಗಳ ನಿಯಂತ್ರಣವೇ ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ಹೊಣೆಗಾರಿಕೆಯೂ ಮಹತ್ವದ್ದಾಗಿದೆ. ಇಂದು ಎಚ್ಚೆತ್ತುಕೊಂಡರೆ ಮಾತ್ರ ಭವಿಷ್ಯದ ಪೀಳಿಗೆಗೆ ಸುರಕ್ಷಿತ ಭೂಮಿಯನ್ನು ಉಳಿಸಬಹುದು.

ವಾಯುಗುಣದ ಬದಲಾವಣೆಗೆ ಕಾರಣಗಳು

ವಾಯುಗುಣದ ಬದಲಾವಣೆಗೆ ಕಾರಣಗಳು

ವಾಯುಗಣದ ಬದಲಾವಣೆಗೆ ಎರಡು ಅಂಶಗಳು ಪ್ರಮುಖವಾಗಿ ಕಾರಣಗಳಾಗಿವೆ. ಅವುಗಳೆಂದರೆ ನೈಸರ್ಗಿಕ ಕಾರಣಗಳು ಮತ್ತು ಮಾನವ ನಿರ್ಮಿತ ಕಾರಣಗಳು.

ವಾಯುಗಣದ ಬದಲಾವಣೆಗೆ ಎರಡು ಅಂಶಗಳು ಪ್ರಮುಖವಾಗಿ ಕಾರಣಗಳಾಗಿವೆ. ಅವುಗಳೆಂದರೆ ನೈಸರ್ಗಿಕ ಕಾರಣಗಳು ಮತ್ತು ಮಾನವ ನಿರ್ಮಿತ ಕಾರಣಗಳು.

1. ನೈಸರ್ಗಿಕ ಕಾರಣಗಳು: (Natural Causes)

ಭೂಮಿಯ ವಾಯುಗುಣ ಯಾವಾಗಲೂ ಒಂದೇ ರೀತಿಯಾಗಿರುವುದಿಲ್ಲ. ಅದು ನಿರಂತರವಾಗಿ ಬದಲಾವಣೆಗೆ ಒಳಗಾಗುತ್ತಲೇ ಇರುತ್ತದೆ. ವಿವಿಧ ನೈಸರ್ಗಿಕ ಕಾರಣಗಳಿಂದಾಗಿ ವಾಯುಗುಣ ಬದಲಾಗುತ್ತಿರುವುದು ನಮಗೆ ಗೋಚರಿಸುತ್ತದೆ.

1.ಭೂಖಂಡಗಳ ಚಲನೆ:  ಭೂ ಖಂಡಗಳು ವಿವಿಧ ವಾಯುಗುಣ ವಲಯಗಳಿಗೆ ಬದಲಾವಣೆಗೊಂಡಿವೆ. ಅಂಟಾರ್ಟಿಕ ಖಂಡ ಹಿಂದೆ ಉಷ್ಣವಲಯವಾಗಿದ್ದು ಈಗ ಹಿಮಾಲಯವಾಗಿ ಬದಲಾದ ಕಾರಣ ಅಲ್ಲಿ ಕಲ್ಲಿದ್ದಲು ನಿಕ್ಷೇಪಗಳು ಕಂಡುಬಂದಿವೆ.

2.ಜ್ವಾಲಾಮುಖಿಗಳು:  ಪದೇ ಪದೇ ಭೂಮಿಯ ಮೇಲೆ ಜ್ವಾಲಾಮುಖಿಗಳು ಸಂಭವಿಸುವುದರಿಂದ ಗಂಧಕದ ಡೈಆಕ್ಸೈಡ್‌, ನೀರು, ಆವಿ, ಗಾಳಿ ಹಾಗೂ ದೂಳು ವಾಯುಮಂಡಲದಲ್ಲಿ ಸೇರುತ್ತದೆ. ಇದು ನೂರಾರು ವರ್ಷಗಳವರೆಗೆ ಹೀಗೆ ನಿರಂತರವಾಗಿ ನಡೆದಾಗ ವಾಯುಗುಣದಲ್ಲಿ ಸಹಜವಾಗಿ ಬದಲಾವಣೆ ಕಂಡುಬರುತ್ತದೆ.

3.ಭೂಮಿ ಅಕ್ಷದ ಬದಲಾವಣೆ: ಭೂಮಿಯು ತನ್ನ ಕಕ್ಷೆಯ ಮೇಲೆ 23½  ಕೋನದಲ್ಲಿ ಓರೆಯಾಗಿ ಸುತ್ತುತ್ತದೆ. ಈ ಓರೆಯಾಗುವಿಕೆ ಒಂದೇ ರೀತಿಯಾಗಿರದೆ  ಅದು ಒಂದು ಶತಮಾನದಲ್ಲಿ ಅರ್ಧ ಡಿಗ್ರಿಉಷ್ಟು ಬದಲಾವಣೆ ಹೊಂದಿದೆಯೆಂದು ಅಂದಾಜು ಮಾಡಲಾಗಿದೆ.  ಈ ಕಾರಣದಿಂದಲೂ ವಾಯುಗುಣದಲ್ಲಿ ಬದಲಾವಣೆ ಕಂಡು ಬರುತ್ತದೆ.

2.ಮಾನವ ನಿರ್ಮಿತ ಕಾರಣಗಳು: (Man Included Causes)

ಇತ್ತೀಚಿನ ದಶಕಗಳಲ್ಲಿ ವಾಯುಗುಣದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವುದು ದೃಢಪಟ್ಟಿದೆ. ಮಾನವನ ವಿವಿಧ ಬಗೆಯ ಅಹಿತಕರ ಘಟನೆಗಳ ಕಾರಣ ವಾಯುಮಂಡಲದಲ್ಲಿ ತೀವ್ರತರವಾದ ಬದಲಾವಣೆಗಳು ಗೋಚರಿಸುತ್ತವೆ. ಕೈಗಾರಿಕಾ ಕ್ರಾಂತಿಯ ನಂತರ ವಾಯುಮಂಡಲದ ಉಷ್ಣಾಂಶದಲ್ಲಿ ಸಾಕಷ್ಟು ಏರುಪೇರುಗಳು ಕಂಡುಬಂದವು. ವಿದ್ಯುತ್ ಉತ್ಪಾದನೆ, ಕಾಗದ ಉತ್ಪಾದನೆ, ವ್ಯವಸಾಯ, ಪ್ರಾಣಿ ಸಾಗಾಣಿಕೆ, ಮೀನುಗಾರಿಕೆ ವಿಸ್ತಾರ ಹೊಂದಿದಂತೆ ಕಾಡುಗಳ ನಾಶವು ಹೆಚ್ಚಾಯಿತು. ಇದರಿಂದಾಗಿ ನೈಸರ್ಗಿಕ ಪರಿಸರದಲ್ಲಿ ಬದಲಾವಣೆಗಳಾಗಿ ವಾಯುಮಂಡಲದಲ್ಲಿ ಬಿಸಿಯಾಗಿದೆ. 18ನೇ ಶತಮಾನದ ಆರಂಭದಲ್ಲಿ ಜಾಗತಿಕ ತಾಪಮಾನ 14c ಸೆ ನಷ್ಟಿತ್ತು. 2017ರ ವೇಳೆಗೆ ಅದು 10 ಡಿಗ್ರಿ ಸೆ ನಷ್ಟು ಹೆಚ್ಚಾಗಿದೆ. 2015ರ ಕಾನ್ಫರೆನ್ಸ್ ಆಫ್ ಪಾರ್ಟಿಸ್‌ ಸಮಾವೇಶದಲ್ಲಿ ಜಗತ್ತಿನ 195 ದೇಶಗಳು ಭಾಗವಹಿಸಿ ಜಾಗತಿಕ ತಾಪಮಾನವು ಕೈಗಾರಿಕಾ ಪೂರ್ವ ಹಂತಕ್ಕಿಂತ 1.5° ಸೆ ಗಿಂತ ಹೆಚ್ಚಾಗದಂತೆ ನಿಯಂತ್ರಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಆದರೂ ಯಾವ ಪ್ರಯೋಜನಗಳೂ ಸದ್ಯಕ್ಕೆ ಕಂಡು ಬರುತ್ತಿಲ್ಲ.

1. ಕಾಡುಗಳ ನಾಶ: (Deforeststion) ಪ್ರಪಂಚದಲ್ಲಿ ಹಲವಾರು ಕಾರಣಗಳಿಂದ ಕಾಡುಗಳು ನಾಶಗೊಂಡಿವೆ. ವ್ಯವಸಾಯ, ಅಣೆಕಟ್ಟು ನಿರ್ಮಾಣ, ರೈಲು ಹಳಿಗಳ ನಿರ್ಮಾಣ, ನೀರಾವರಿ, ಪಶು ಸಂಗೋಪನೆ, ಅರಣ್ಯ ವಸ್ತುಗಳ ಬಳಕೆ, ವಸತಿ ಯೋಜನೆ, ಕಾಡಿಗೆ ಬೆಂಕಿ ಮೊದಲಾದ ಕಾರಣಗಳಿಂದ ಕಾಡುಗಳು ನಾಶವಾಗಿವೆ. ಇದರ ಪರಿಣಾಮದಿಂದ ವಾಯುಮಂಡಲದಲ್ಲಿ ಇಂಗಾಲಾಮ್ಲ ಹೆಚ್ಚಾಗಿದೆ. ಇದು ವಾಯುಗುಣದ ಬದಲಾವಣೆಗೆ ಕಾರಣವಾಗಿದೆ. ಇತ್ತೀಚಿಗೆ ಕಾಡುಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಅದರಿಂದ ಯಾವುದೇ ಯಶಸ್ಸು ಕಂಡುಬಂದಿಲ್ಲ.

2.ಕೈಗಾರಿಕೆಗಳ ಸ್ಥಾಪನೆ: (Establishment of Industries) ಪ್ರಪಂಚದಲ್ಲಿ ಬಿಲಿಯನ್ ಕೈಗಾರಿಕೆಗಳು ಸ್ಥಾಪನೆಯಾಗಿವೆ.. ಅವುಗಳಲ್ಲಿ ಸಿಮೆಂಟ್, ಕಬ್ಬಿಣ ಮತ್ತು ಉಕ್ಕು ರಾಸಾಯನಿಕ ಗೊಬ್ಬರ ಮುಂತಾದ ಕಾರ್ಖಾನೆಗಳು 23% ಅಧಿಕ ಹಸಿರು ಮನೆ ಅನಿಲಗಳಾದ ಇಂಗಾಲದ ಡೈಆಕ್ಸೈಡ್‌ ಹಾಗೂ ಇತರೆ ಅನಿಲಗಳನ್ನು ಉತ್ಪಾದಿಸುತ್ತವೆ. ಇವುಗಳು ವಾಯುಗುಣದ ಬದಲಾವಣೆಗೆ ಕಾರಣಗಳಾಗಿವೆಯಲ್ಲದೆ ಮಾನವನ ಆರೋಗ್ಯದ ಮೇಲೂ ಪರಿಣಾಮ ಬೀರಿವೆ.

3.ಶಾಕೋತ್ಪನ್ನ ಘಟಕಗಳು: (Thermal Plants) ಇಂದು ಮಾನವನ ಅಗತ್ಯಗಳಲ್ಲಿ ಒಂದಾದ ವಿದ್ಯುತ್ ಶಕ್ತಿ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ವಿಶ್ವದೆಲ್ಲೆಡೆ ಜಲವಿದ್ಯುತ್, ಅಣುವಿದ್ಯುತ್, ಶಾಖವಿದ್ಯುತ್, ಸೌರವಿದ್ಯುತ್, ಪವನವಿದ್ಯುತ್, ಮೊದಲಾದ ವಿದ್ಯುತ್ ಉತ್ಪಾದನೆ ಘಟಕಗಳನ್ನು  ಆರಂಭಿಸಲಾಗಿದೆ. ಇವುಗಳಲ್ಲಿ ಶಾಕೋತ್ಪನ್ನ ಪ್ರಮಾಣವೇ ಇಂದು ಹೆಚ್ಚಾಗಿದೆ. ಈ ಘಟಕಗಳಿಗೆ ಅಧಿಕ ಪ್ರಮಾಣದ ಕಲ್ಲಿದ್ದಲನ್ನು ಬಳಸುತ್ತಾರೆ. ಇದು ವಾಯುಮಂಡಲದಲ್ಲಿನ ಇಂಗಾಲದ ಡೈಆಕ್ಸೈಡ್‌ ಹೆಚ್ಚಳಕ್ಕೆ ಕಾರಣವಾಗಿದೆ. ಶೇಕಡ 25ರಷ್ಟು ಇಂಗಾಲದ ಡೈಆಕ್ಸೈಡ್‌ ವಾತಾವರಣವನ್ನು ಸೇರುವುದೆಂದು ಅಂದಾಜಿಸಲಾಗಿದೆ. ಶಾಕೋತ್ಪನ್ನ ಕೇಂದ್ರಗಳಲ್ಲಿ 1 ಕಿ.ವ್ಯಾಟ್‌ ವಿದ್ಯುತ್ ಉತ್ಪಾದಿಸಿದರೆ 950 ಗ್ರಾಂ ಇಂಗಾಲದ ಡೈಆಕ್ಸೈಡ್‌ ವಾಯು ಮಂಡಲವನ್ನು ಸೇರುತ್ತದೆ.

4.ಸಾರಿಗೆ: (Transport) ಆಧುನಿಕ ಜಗತ್ತಿನಲ್ಲಿ ಸಾರಿಗೆ-ಸಂಪರ್ಕಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಸಾರಿಗೆ ಸಂಪರ್ಕಗಳು ನಮ್ಮ ದೇಶದ ನರನಾಡಿಗಳು ಇದ್ದ ಹಾಗೆ. ರಸ್ತೆ ಸಾರಿಗೆ, ರೈಲು ಸಾರಿಗೆ, ವಾಯು ಸಾರಿಗೆ ಹಾಗೂ ಜಲ ಸಾರಿಗೆಗಳು ಇವೆ. ಇವೆಲ್ಲಾ ಸಾರಿಗೆಗಳಿಗೆ ಬಳಕೆಯಾಗುವುದು ಪೆಟ್ರೋಲಿಯಂ ಇಂಧನಗಳು. ಪೆಟ್ರೋಲಿಯಂ ಬಳಕೆಯಿಂದ ಸೋರಿದ ಹೊಗೆಯಲ್ಲಿ ಅಪಾರ ಪ್ರಮಾಣದ ಇಂಗಾಲದ ಮೊನಾಕ್ಸೈಡ್ ಹಾಗೂ ಸಾರಜನಕ ಆಕ್ಸೈಡ್‌ಗಳು ವಾಯುಮಂಡಲವನ್ನು ಸೇರುತ್ತವೆ. ಇವುಗಳು ವಾಯುಗುಣದ ಬದಲಾವಣೆ ಕಾರಣವಾಗುತ್ತದೆ.

5.ಕೃಷಿ: (Agriculture) ಆಧುನಿಕ ಬೇಸಾಯ ಪದ್ಧತಿಯಲ್ಲಿ ಮಾನವನು ಹೆಚ್ಚು ಇಳುವರಿಗಾಗಿ ವಿವಿಧ ಬಗೆಯ ರಸಗೊಬ್ಬರ ಕ್ರಿಮಿನಾಶಕ ಹಾಗೂ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾನೆ. ಇದರಿಂದ ಇಂಗಾಲದ ಡೈಆಕ್ಸೈಡ್‌ ಭೂಮಂಡಲವನ್ನು ಸೇರಿ ವಾಯುಗುಣದ ಏರುಪೇರಿಗೆ ಕಾರಣವಾಗುತ್ತದೆ.

6.ಘನ ತ್ಯಾಜ್ಯ: (Solid Waste)  ಮಾನವನಿಂದ ದಿನವೊಂದಕ್ಕೆ ಸುಮಾರು 60 ದಶಲಕ್ಷ ಟನ್‌ಗಳಷ್ಟು ಘನ ತ್ಯಾಜ್ಯ ಉತ್ಪಾದನೆ ಯಾಗುತ್ತದೆ ಎಂದು ಅಂದಾಜಿಸಲಾಗಿದೆ. ನಗರ ಪ್ರದೇಶಗಳಲ್ಲಿ ಘನ ತ್ಯಾಜ್ಯ ಉತ್ಪಾದನೆ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇವುಗಳನ್ನು ವಿಲೇವಾರಿ ಮಾಡಲು ಈಗ ಸ್ಥಳವೇ ಇಲ್ಲದಂತಾಗಿದೆ. ಕೆಲವೊಂದು ತ್ಯಾಜ್ಯಗಳು ಕೊಳೆತು ಗಬ್ಬು ವಾಸನೆ ಹರಡುತ್ತವೆ. ಘನ ತ್ಯಾಜ್ಯ ವಸ್ತುಗಳಿಂದ ಇಂಗಾಲಾಮ್ಲ ಹಾಗೂ ಮಿಥೇನ್ ಬಿಡುಗಡೆ ಹೊಂದಿ ವಾಯುಮಂಡಲವನ್ನು ಸೇರುತ್ತವೆ. ಇವುಗಳು ವಾಯುಗುಣದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ.

7.ತೈಲ ಮತ್ತು ಅನಿಲ ಬಾವಿಗಳು:  ಇಂದು ಜಗತ್ತಿನಲ್ಲಿ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೆ ಹೋಗುತ್ತಿದೆ. ಹೆಚ್ಚುತ್ತಿರುವ ವಾಹನಗಳಿಗೆ ಇಂಧನದ ಅಗತ್ಯವಿದೆ. ಹಾಗಾಗಿ ಜಗತ್ತಿನಾದ್ಯಂತ ತೈಲ ಬಾವಿಗಳನ್ನು ನಿರಂತರವಾಗಿ ಕೊರೆಯಲಾಗುತ್ತದೆ. ಹೀಗೆ ತೈಲ ಮತ್ತು ಅನಿಲ ಬಾವಿಗಳನ್ನು ಕೊರೆದಾಗ ಅಪಾರ ಪ್ರಮಾಣದಲ್ಲಿ ಮಿಥೇನ್‌ ಬಿಡುಗಡೆಯಾಗುತ್ತದೆ. ಜೊತೆಗೆ ಸಮುದ್ರದಲ್ಲಿ ಇಂಧನ ಸೋರಿಕೆಯಾಗುವುದು. ಇವೆಲ್ಲಾ ಕಾರಣಗಳಿಂದ ವಾಯುಮಂಡಲದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ.

8.ಕೊಳ್ಳುಬಾಕತನ:  ಮೂಲಭೂತ ಅಗತ್ಯಗಳು ಈಡೇರಿದ ನಂತರ ತೆಪ್ಪಗಿರದ ಮನುಷ್ಯ ತಾನು ಸಮಾಜದಲ್ಲಿ ದೊಡ್ಡವನು ಎಂದು ತೋರಿಸಿಕೊಳ್ಳುವುದಕ್ಕೋ ಅಥವಾ ತನ್ನ ಸಾಮಾಜಿಕ ಅಂತಸ್ತನ್ನು ಹೆಚ್ಚಿಸಿಕೊಳ್ಳುವುದಕ್ಕೋ ತನಗೆ ಬೇಡವಾದ ವಸ್ತುಗಳನ್ನು ಅಥವಾ ಅಗತ್ಯವನ್ನು ಮೀರಿದ ವಸ್ತುಗಳನ್ನು ದಿನೇ ದಿನೇ ಕೊಂಡುಕೊಳ್ಳುತ್ತಾನೆ. ಉದಾ: ಚಿನ್ನ, ಮನೆ,ಉಡುಪು ಇತ್ಯಾದಿಗಳನ್ನು ಕೊಳ್ಳುವುದು ಹೆಚ್ಚಾಗಿದೆ. ಈ ಅಧಿಕ ಕೊಳ್ಳುವಿಕೆಯಿಂದ ಪ್ರತಿ ವಸ್ತುಗಳ ಉತ್ಪಾದನೆಗೂ ಅಧಿಕ ಸಂಪನ್ಮೂಲದ ಅಗತ್ಯತೆ ಇರುತ್ತದೆ. ಇದು ವಾಯುಗುಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಉಪಸಂಹಾರ

ವಾಯುಗುಣದ ಬದಲಾವಣೆ ನೈಸರ್ಗಿಕವಾಗಿಯೂ ಹಾಗೂ ಮಾನವ ನಿರ್ಮಿತ ಕಾರಣಗಳಿಂದಲೂ ಸಂಭವಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ವಿಶೇಷವಾಗಿ ಕೈಗಾರಿಕೆ, ಸಾರಿಗೆ, ಕಾಡುಗಳ ನಾಶ ಮತ್ತು ಅತಿಯಾದ ಸಂಪನ್ಮೂಲ ಬಳಕೆ ವಾಯುಗುಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಪರಿಸರ ಸ್ನೇಹಿ ತಂತ್ರಜ್ಞಾನಗಳ ಬಳಕೆ, ಅರಣ್ಯ ಸಂರಕ್ಷಣೆ ಹಾಗೂ ಜಾಗೃತ ಜೀವನಶೈಲಿ ಅಗತ್ಯವಾಗಿದೆ. ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯುತ ನಡೆ ಮಾತ್ರ ಭವಿಷ್ಯದ ಪೀಳಿಗೆಗೆ ಸುರಕ್ಷಿತ ಭೂಮಿಯನ್ನು ನೀಡಲು ಸಹಕಾರಿಯಾಗುತ್ತದೆ.