ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ

ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ

ಭಾರತವು ತನ್ನ ವೈವಿಧ್ಯಮಯ ಭೌಗೋಳಿಕ ಸ್ಥಾನಮಾನದಿಂದಾಗಿ ವೈಶಿಷ್ಟ್ಯಪೂರ್ಣ ಇತಿಹಾಸವನ್ನು ಬೆಳೆಸಿಕೊಂಡಿದೆ. ಹಿಮಾಲಯ ಪರ್ವತ ಶ್ರೇಣಿಯಿಂದ ದಕ್ಷಿಣದ ದಖ್ಖನ್ ಪ್ರಸ್ಥಭೂಮಿವರೆಗೆ, ಭೂಗೋಳದ ವಿವಿಧ ಲಕ್ಷಣಗಳು ಭಾರತದ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಬೆಳವಣಿಗೆ ಮೇಲೆ ಆಳವಾದ ಪ್ರಭಾವ ಬೀರಿವೆ. ಇಂತಹ ಭೌಗೋಳಿಕ ವೈವಿಧ್ಯತೆಯು ಭಾರತದ ಇತಿಹಾಸವನ್ನು ಹೇಗೆ ರೂಪಿಸಿದೆ ಎಂಬುದನ್ನು ಈಗ ಪರಿಶೀಲಿಸೋಣ.

ಭಾರತವನ್ನು ರೂಪಿಸಿದ ಪ್ರಮುಖ ಭೌಗೋಳಿಕ ಲಕ್ಷಣಗಳು

ಉತ್ತರದ ಹಿಮಾಲಯ ಪರ್ವತ, ವಾಯುವ್ಯದಲ್ಲಿ ಸುಲೇಮಾನ್, ಕಿರ್ತಾರ್ ಮತ್ತು ಹಿಂದೂಕುಷ್ ಕಣಿವೆಗಳು, ಈಶಾನ್ಯದಲ್ಲಿ ಮಣಿಪುರ ಪ್ರಸ್ಥಭೂಮಿ, ಪೂರ್ವದಲ್ಲಿ ಬಂಗಾಳಕೊಲ್ಲಿ, ಪಶ್ಚಿಮಘಟ್ಟಗಳು, ಅರಾವಳಿ, ವಿಂಧ್ಯ ಹಾಗೂ ಸಾತ್ಪುರ ಬೆಟ್ಟಗಳು, ದಕ್ಷಿಣದಲ್ಲಿ ದಖ್ಖನ್ ಪ್ರಸ್ಥಭೂಮಿ, ಸಿಂಧೂ, ಗಂಗಾ, ಬ್ರಹ್ಮಪುತ್ರಾ ನದಿಗಳು, ಕರಾವಳಿ ತೀರ ಪ್ರದೇಶ ಮುಂತಾದವುಗಳು ಭಾರತದ ಸಂಸ್ಕೃತಿ ಮತ್ತು ವಿವಿಧ ರಾಜಕೀಯ ಘಟಕಗಳನ್ನು ರೂಪಿಸಿವೆ.

1. ಹಿಮಾಲಯ: ಭಾರತದ ನೈಸರ್ಗಿಕ ರಕ್ಷಕ

ಉತ್ತರದ ಹಿಮಾಲಯ ಪರ್ವತ, ವಾಯುವ್ಯದಲ್ಲಿ ಸುಲೇಮಾನ್, ಕಿರ್ತಾರ್ ಮತ್ತು ಹಿಂದೂಕುಷ್ ಕಣಿವೆಗಳು, ಈಶಾನ್ಯದಲ್ಲಿ ಮಣಿಪುರ ಪ್ರಸ್ಥಭೂಮಿ, ಪೂರ್ವದಲ್ಲಿ ಬಂಗಾಳಕೊಲ್ಲಿ, ಪಶ್ಚಿಮಘಟ್ಟಗಳು, ಅರಾವಳಿ, ವಿಂಧ್ಯ ಹಾಗೂ ಸಾತ್ಪುರ ಬೆಟ್ಟಗಳು, ದಕ್ಷಿಣದಲ್ಲಿ ದಖ್ಖನ್ ಪ್ರಸ್ಥಭೂಮಿ, ಸಿಂಧೂ, ಗಂಗಾ, ಬ್ರಹ್ಮಪುತ್ರಾ ನದಿಗಳು, ಕರಾವಳಿ ತೀರ ಪ್ರದೇಶ ಮುಂತಾದವುಗಳು ಭಾರತದ ಸಂಸ್ಕೃತಿ ಮತ್ತು ವಿವಿಧ ರಾಜಕೀಯ ಘಟಕಗಳನ್ನು ರೂಪಿಸಿವೆ.

2. ಸಿಂಧೂ-ಗಂಗಾ ನದೀ ಬಯಲು: ನಾಗರಿಕತೆಗಳ ಪಯಣ

ಭಾರತೀಯರ ಸಾಂಸ್ಕೃತಿಕ ಜೀವನದಲ್ಲಿ ಸಿಂಧೂ-ಗಂಗಾ ನದಿಗಳು ಸಾಕಷ್ಟು ಪ್ರಭಾವ ಬೀರಿವೆ. ಈ ನದಿಗಳ ಬಯಲಿನಲ್ಲಿ ಸಿಂಧೂ ನಾಗರಿಕತೆ ಹಾಗೂ ವೇದಗಳ ಕಾಲದ ನಾಗರಿಕತೆಗಳು ಬೆಳೆದು ಬಂದವು. ಜೊತೆಗೆ ಮೌರ್ಯರು, ಗುಪ್ತರು, ವರ್ಧನರು, ದೆಹಲಿ ಸುಲ್ತಾನರು ಮತ್ತು ಮೊಗಲರು ಇದೇ ನದಿಗಳ ದಂಡೆಯ ಮೇಲೆ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಮುಲ್ತಾನ್ತ, ಕ್ಷಶಿಲೆ, ಇಂದ್ರಪ್ರಸ್ಥ, ಕನೌಜ್, ಅಯೋಧ್ಯ, ವಾರಣಾಸಿ, ಪಾಟಲಿಪುತ್ರ, ಸಾರನಾಥ, ವೈಶಾಲಿ ಮುಂತಾದ ಸಮೃದ್ಧ ನಗರಗಳು ಇಲ್ಲಿಯೇ ಬೆಳೆದು ಬಂದವು ಮುಂದೆ ಕರಾಚಿ, ಲಾಹೋರ್, ಆಗ್ರಾ, ಕಾನ್ ಪುರ, ಮುರ್ಷಿದಾಬಾದ್, ಢಾಕಾ ಮತ್ತು ಕೋಲ್ಕತ್ತಾ ಮುಂತಾದ ಹೊಸ ನಗರಗಳು ಹುಟ್ಟಿಕೊಂಡವು.

3. ದಖ್ಖನ್ ಪ್ರಸ್ಥಭೂಮಿ: ಸಮೃದ್ಧ ಜನಾಂಗದ ನೆಲೆ

ದಖ್ಖನ್ ಪ್ರಸ್ಥಭೂಮಿ ದಟ್ಟವಾದ ಕಾಡುಗಳನ್ನು ಹೊಂದಿದ್ದು ಜನರನ್ನು ಕಠಿಣ ಪರಿಶ್ರಮ ಮತ್ತು ಯುದ್ಧ ಪ್ರಿಯರನ್ನಾಗಿ ಪರಿವರ್ತಿಸಿತು ಇಲ್ಲಿನ ನದಿ ಬಯಲುಗಳು ನೈಸರ್ಗಿಕ ಸಂಪತ್ತಿನ ಆಗರಗಳಾಗಿದ್ದು ಇಲ್ಲಿನ ಭೂಮಿಗಳನ್ನು ಶ್ರೀಮಂತಗೊಳಿಸಿದೆ. ದಕ್ಷಿಣ ಭಾರತವ ನರ್ಮದಾ, ತಪತಿ, ಮಹಾನರಿ, ಗೋದಾವರಿ, ತುಂಗಭದ್ರಾ, ಕಾವೇರಿ ಮುಂತಾದ ನದಿ ಬಯಲುಗಳು ಶಾತವಾಹನ, ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಯಾದವ, ಹೊಯ್ಸಳ, ವಿಜಯನಗರ, ಬಹಮನಿ, ವಿಜಾಪುರ, ಮೈಸೂರು, ಚೇರ, ಚೋಳ ಮತ್ತು ಪಾಂಡ್ಯ ಸಾಮ್ರಾಜ್ಯಗಳು ಏಳಿಗೆ ಹೊಂದಲು ಕಾರಣವಾದವು ಉದಾ ಪೈಠಾಣ್ ಹಂಪಿ. ಶ್ರೀರಂಗಪಟ್ಟಣ ಶ್ರೀರಂಗಂ ಮತ್ತು ತಂಜಾವೂರು ಮೊದಲಾದ ನಗರಗಳು ಇದೇ ನದಿಗಳ ದಂಡೆಯ ಮೇಲೆ ಬೆಳೆದು ಬಂದವು.

4. ಪೂರ್ವ ಮತ್ತು ಪಶ್ಚಿಮ ಘಟ್ಟಗಳು: ಸಂಪತ್ತಿನ ನಾಡು

ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಕೇವಲ ಹಸಿರಾದ ಬೆಟ್ಟಗಳು ಮಾತ್ರವಲ್ಲ, ಅವು ನೈಸರ್ಗಿಕ ಸಂಪತ್ತುಗಳಿಂದ ಕೂಡಿವೆ. ಹೊನ್ನೆ, ತೇಗ, ಗಂಧದ ಮರಗಳು ಇಲ್ಲಿ ಹೇರಳವಾಗಿ ಬೆಳೆಯುತ್ತವೆ. ಜೊತೆಗೆ, ಈ ಪ್ರದೇಶದಲ್ಲಿ ಗಣನೀಯ ಪ್ರಮಾಣದ ಕಬ್ಬಿಣ ಮತ್ತು ಉಕ್ಕು ಸಂಪತ್ತು ದೊರೆಯುವುದರಿಂದ ಭಾರತದ ಕೈಗಾರಿಕಾ ಬೆಳವಣಿಗೆಗೆ ಪೂರಕವಾಯಿತು.

5. ಕರಾವಳಿ ಬಂದರುಗಳು: ವಾಣಿಜ್ಯ ಮತ್ತು ಸಂಸ್ಕೃತಿಯ ಸೇತುವೆ

ಕರಾವಳಿ ಬಂದರುಗಳಿಂದ ಪರ್ಷಿಯನ್ನರು, ಗ್ರೀಕರು, ಅರಬ್ಬರು, ಯಹೂದಿಗಳು, ಚೀನಿಯರು ಭಾರತದೊಂದಿಗೆ ವ್ಯಾಪಾರ ಸಂಬಂಧ ಬೆಳಸಿದರು. ಇದರಿಂದ ಸಾಂಸ್ಕೃತಿಕ ಸಂಪರ್ಕ ಸಾಧ್ಯವಾಯಿತು. ಆಧುನಿಕ ಕಾಲದಲ್ಲಿ ಪೋರ್ಚುಗೀಸರು, ಡಚ್ಚರು, ಫ್ರೆಂಚರು ಮತ್ತು ಅಂಗ್ಲರು ಮುಂತಾದ ಯೂರೋಪಿಯನ್ನರು ಭಾರತಕ್ಕೆ ಬರಲು ಸಾಧ್ಯವಾಯಿತು. ಇದರಿಂದ ಭಾರತ ವಿದೇಶಿ ವ್ಯಾಪಾರ ಮಾಡುವಂತಾಯಿತು. ಪರಿಣಾಮವಾಗಿ ಭಾರತದ ಸಾಂಬಾರ ಪದಾರ್ಥಗಳು, ರತ್ನಗಳು, ಹತ್ತಿ ಮುಂತಾದವುಗಳು ಭಾರತದಿಂದ ನಿರ್ಯಾತವಾಗಲು ಆರಂಭವಾಯಿತು. ಕಬ್ಬಿಣ, ತಾಮ್ರಸತು, ಬಂಗಾರದ ಗಣಿಗಳು, ವಾಸ್ತುಶಿಲ್ಪಗಳ ಬೆಳವಣಿಗೆಗೆ ಬೇಕಾದ ಶಿಲೆಗಳು ಇಲ್ಲಿ ದೊರಕುತ್ತಿದ್ದುದು ಗಮನಾರ್ಹವಾಗಿತ್ತು.

ಉಪಸಂಹಾರ

ಭಾರತವು ವಿಭಿನ್ನ ಭೌಗೋಳಿಕ ಲಕ್ಷಣಗಳಿಂದ ಸಮೃದ್ಧವಾಗಿದ್ದು, ಇದು ದೇಶದ ವಾಸ್ತವ್ಯ, ಆರ್ಥಿಕತೆ, ಕೃಷಿ, ಮತ್ತು ಸಂಸ್ಕೃತಿಯ ಮೇಲೆ ಮಹತ್ವದ ಪ್ರಭಾವವನ್ನು ಬೀರುತ್ತದೆ. ಇದರ ವಿಶಿಷ್ಟ ಬೌಗೋಳಿಕ ವೈಶಿಷ್ಟ್ಯಗಳು, ಹಿಮಾಲಯ ಪರ್ವತಗಳು, ದಕ್ಷಿಣದ ಸಮುದ್ರ ತೀರಗಳು, ವಿಸ್ತಾರವಾದ ಗಂಗಾ-ಬ್ರಹ್ಮಪುತ್ರ ಮೈದಾನಗಳು ಮತ್ತು ವೈವಿಧ್ಯಮಯ ಪರಿಸರಗಳ ಮೂಲಕ ದೇಶದ ವಾಸ್ತವಿಕ ಚಿತ್ರಣವನ್ನು  ರೂಪಿಸುತ್ತಿದೆ. ಒಟ್ಟಿನಲ್ಲಿ ಭಾರತದ ಭೌಗೋಳಿಕ ವೈಶಿಷ್ಟ್ಯಗಳು ದೇಶದ ಸಾಂಸ್ಕೃತಿಕ ವೈವಿಧ್ಯತೆ, ಆರ್ಥಿಕ ಸಮೃದ್ಧಿ ಮತ್ತು ಜೀವನ ಶೈಲಿಗೆ ಬೆನ್ನೆಲುಬು ಎನಿಸಿವೆ.