ವರ್ಧನರ ಸಾಹಿತ್ಯ

ವರ್ಧನರ ಸಾಹಿತ್ಯ

ವರ್ಧನರು ಸಾಹಿತ್ಯ ಮತ್ತು ಸಂಸ್ಕೃತಿಯ ಏಳಿಗೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಈ ಸಂತತಿಯ ಪ್ರಖ್ಯಾತ ದೊರೆಯಾದ ಹರ್ಷವರ್ಧನನು ಸಾಹಿತ್ಯ ಮತ್ತು ಶಿಕ್ಷಣದ ಉದಾರ ಪೋಷಕನಾಗಿದ್ದನು. ತನ್ನ ರಾಜಾದಾಯದ 1/4 ಭಾಗವನ್ನು ಸಾಹಿತ್ಯದ ಅಭಿವೃದ್ಧಿಗೆ ಬಳಸುತ್ತಿದ್ದನು. ಅಂದರೆ ಆ ಹಣವನ್ನು ಕವಿಗಳ, ವಿದ್ವಾಂಸರ ಸನ್ಮಾನಕ್ಕೆ, ಕೊಡುಗೆಗೆ ಮತ್ತು ತಾಳೆಗರಿಗಳ ಪ್ರತಿಮಾಡಿಸಲು ಬಳಸುತ್ತಿದ್ದನು. ಸ್ವತ: ವಿದ್ವಾಂಸ ಮತ್ತು ಬರಹಗಾರನಾಗಿದ್ದ.

ಹರ್ಷವರ್ಧನನು 3 ನಾಟಕಗಳನ್ನು ಬರೆದಿದ್ದಾನೆ. ಸಂಸ್ಕೃತ ಭಾಷೆಯ ಅವುಗಳೆಂದರೆ,

(1) ನಾಗಾನಂದ 

(2) ಪ್ರಿಯದರ್ಶಿನಿ

(3) ರತ್ನಾವಳಿ.

ಈ ನಾಟಕಗಳ ಕತೃ ಹರ್ಷನೇ ಅಥವಾ ಬೇರೆಯವರೇ ಎಂಬ ಬಗ್ಗೆ ವಿದ್ವಾಂಸರಲ್ಲಿ ಜಿಜ್ಞಾಸೆಯುಂಟು. ಆದಾಗ್ಯೂ ಕತೃತ್ವವನ್ನು ನಿರಾಕರಿಸುವ ಗಟ್ಟಿ ಸಾಕ್ಷ್ಯಗಳು ದೊರೆಯಲಿಲ್ಲವಾಗಿ ಹರ್ಷನದೇ ಎಂದು ನಂಬಲಾಗಿದೆ. ರತ್ನಾವಳಿ ಮತ್ತು ಪ್ರಿಯದರ್ಶಿಕಾಗಳು ಪ್ರೇಮ ಮತ್ತು ಆಸ್ಥಾನ ಅಂತಃಕಲಹವನ್ನು ಪ್ರಸ್ತಾಪಿಸುತ್ತವೆ. ನಾಗಾನಂದವು ಬೌದ್ಧ ತಾತ್ವಿಕ ಚಿಂತನೆಯ ನಾಟಕವಾಗಿದೆ. 12ನೇ ಶತಮಾನದ ಕವಿಯಾದ ಜಯದೇವನು ತನ್ನ ಪ್ರಸಿದ್ಧ ಗೀತ ಗೋವಿಂದದಲ್ಲಿ ಹರ್ಷನನ್ನು ಬಾಸ ಮತ್ತು ಕಾಳಿದಾಸರಿಗೆ ಹೋಲಿಸಿದ್ದಾನೆ.

ಹರ್ಷನ ಆಸ್ಥಾನದಲ್ಲಿ ಬಾಣ, ಮಯೂರ, ಮಾತಂಗ, ದಿವಾಕರ, ಸಿದ್ದಸೇನ, ಹರಿದತ್ತ ಮುಂತಾದವರು ಇದ್ದರು.

ಬಾಣ: ಹರ್ಷಚರಿತ, ಕಾದಂಬರಿ, ಚಂಡಿಶತಕ, ಪಾರ್ವತಿ ಪರಿಣಯ

ಭತೃಹರಿ : ಭತೃಹರಿ ಶತಕ

ಮಯೂರ : ಸೂರ್ಯಶತಕ, ಅಷ್ಟಕ

ಹ್ಯೂಯನ್ ತ್ಸಾಂಗ್ : ಸಿ.ಯೂ.ಕಿ

ಹರ್ಷನು ತನ್ನ ಆಸ್ಥಾನದ ಎಲ್ಲಾ ವಿದ್ವಾಂಸರುಗಳಿಂದಲೂ ಬುದ್ಧನ ಪೂರ್ವಜನ್ಮಕ್ಕೆ ಸಂಬಂಧಿಸಿದಂತೆ ಪದ್ಯ ಬರೆಸಿ ಅದನ್ನು ಸಂಪಾದಿಸಿ ‘ಜಾತಕ ಮಾಲಾ’ ಎಂದು ಕೃತಿಗೆ ಹೆಸರು ಕೊಟ್ಟನು. ಬಾಣನ ಹರ್ಷಚರಿತವು ಹರ್ಷನ ಆತ್ಮಚರಿತ್ರೆಯೇ ಆಗಿದೆ.

ನಳಂದ ವಿಶ್ವವಿದ್ಯಾನಿಲಯ

ಗುಪ್ತರ ದೊರೆಯಾದ ಒಂದನೇ ಕುಮಾರಗುಪ್ತನಿಂದ(ಶಕ್ರಾದಿತ್ಯ) ಕ್ರಿಶ 5ನೆಯ ಶತಮಾನದಲ್ಲಿ ನಳಂದ ವಿಶ್ವವಿದ್ಯಾನಿಲಯವು ಸ್ಥಾಪಿಸಲ್ಪಟ್ಟಿತು. ಇದನ್ನು ನಂತರದ ಕಾಲದಲ್ಲಿ ಇತರ ಗುಪ್ತ ದೊರೆಗಳಾದ ಬುಧಗುಪ್ತ, ತಥಾಗತಗುಪ್ತ, ಬಾಲಾದಿತ್ಯರು ಬೆಳೆಸಿದರು. ಶಕದೊರೆಗಳು, ಕಾಮರೂಪದ ಬಾಸ್ಕರವರ್ಮ ಮುಂತಾದವರು ಆಶ್ರಯಧಾತರಾಗಿದ್ದರು. ವರ್ಧನರ ಕಾಲದಲ್ಲಿ ಏಳೆಯ ಶೃಂಗವನ್ನು ಮುಟ್ಟಿದ ಇದಕ್ಕೆ ಹರ್ಷವರ್ಧನನು ಮಹಾಪೋಷಕನಾಗಿದ್ದನು. ಅನೇಕ ಕಟ್ಟಡಗಳನ್ನು ನಿರ್ಮಿಸಿ, ವಿಶ್ವವಿದ್ಯಾಲಯದ ನಿರ್ವಹಣೆಗೆ ಸುಮಾರು 100 ಹಳ್ಳಿಗಳ ಭೂಕಂದಾಯವನ್ನು ದಾನವಾಗಿ ನೀಡಿದನು.

ಪ್ರಾಚೀನ ಭಾರತದ ಅತ್ಯಂತ ಪ್ರಸಿದ್ಧ ವಿಶ್ವವಿದ್ಯಾಲಯವಾದ ನಳಂದವು ‘ನಾಲಂದ’ ಎಂಬಲ್ಲಿತ್ತು. ಇದು ಈಗಿನ ಬಿಹಾರ ರಾಜ್ಯದ ರಾಜಘರ್ ಗೆ ಏಳು ಮೈಲಿ ದೂರದಲ್ಲಿರುವ ಇಂದಿನ ಬರಗಾಂವ್ ಗ್ರಾಮವೇ ಆಗಿದೆಯೆಂದು ಧೃಡಪಟ್ಟಿದೆ. ಇಲ್ಲಿ 1975 ರಲ್ಲಿ ಕನ್ನಿಂಗ್ ಹ್ಯಾಂ ಮತ್ತು 1913 ರಲ್ಲಿ ಡಾ|ಸ್ಪೂನರ್ ರವರು ಉತ್ಖನನ ನಡೆಸಿದ್ದಾರೆ.

ಹ್ಯಯನ್‌ತ್ಸಾಂಗ್ ಮತ್ತು ಇಕ್ಸಿಂಗರ ಪ್ರಕಾರ ಮತ್ತು ಭೂ ಉತ್ಖನನದಲ್ಲಿ ಕೆಲಮಟ್ಟಿಗೆ ದೃಡಪಟ್ಟರು ವಂತೆ ನಳಂದವು ಬಹುದೊಡ್ಡ ವಿಶ್ವವಿದ್ಯಾಲಯವಾಗಿತ್ತು. ಇಲ್ಲಿ 8 ದೊಡ್ಡ ಹಜಾರಗಳು, 300 ಇತರ ಕೊಠಡಿಗಳು ಇದ್ದವು. ಇವುಗಳನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿತ್ತು. ವಿದ್ವಾಂಸರ ವಾಸಕ್ಕೆ ಮಹಡಿ ಮನೆಗಳಿದ್ದವು. ವಿಶ್ವವಿದ್ಯಾಲಯದ ಆವರಣದಲ್ಲಿ ಸ್ತೂಪಗಳು, ವಿಹಾರಗಳು, ಗೋಪುರಗಳಿದ್ದವು, ಮಾವಿನ ತೋಪುಗಳಿದ್ದವು,  ತಾವರೆ ಹೂವಿನ ಪುಷ್ಕರಣಿಗಳಿದ್ದವು.

ಖಗೋಳ ವೀಕ್ಷಣಾಲಯವೂ ಇತ್ತು. 3 ಅಂತಸ್ತಿನ ಮೂರು ಬೃಹತ್ ಕಟ್ಟಡಗಳಲ್ಲಿ ಗ್ರಂಥಾಲಯವಿತ್ತು. ಅವುಗಳನ್ನು ರತ್ನದಧಿ, ರತ್ನರಂಜಕ ಮತ್ತು ರತ್ನಸಾಗರಗಳೆಂದು ಕರೆಯಲಾಗುತ್ತಿತ್ತು. ಗ್ರಂಥಾಲಯವಿದ್ದ ಪ್ರದೇಶವನ್ನು ‘ಧರ್ಮಗಂಜ್ ‘ ಎಂದು ಕರೆಯಲಾಗುತ್ತಿತ್ತು. ಗ್ರಂಥಾಲಯದಲ್ಲಿ ಅಪೂರ್ವ ಓಲೆಗರಿಗಳನ್ನು, ಹಸ್ತಪ್ರತಿಗಳನ್ನು ಸಂಗ್ರಹಿಸಿಡಲಾಗಿತ್ತು.

ವಿಶ್ವವಿದ್ಯಾಲಯದಲ್ಲಿ 1500 ಅಧ್ಯಾಪಕರಿದ್ದರು. ದಿಗ್‌ನಾಗ್, ಸ್ಥಿರಮತಿ, ಧರ್ಮಪಾಲ ಹಾಗು ಶೀಲಭದ್ರ, ಶಾಂತರಕ್ಷಿತ, ಬುದ್ಧಕೀರ್ತಿ, ಕಮಲಶೀಲ, ಪದ್ಮಸಂಭವ, ಮುಂತಾದ ಪ್ರಸಿದ್ಧ ಪ್ರಾಧ್ಯಾಪಕ ಪಂಡಿತರಿದ್ದರು. ಧರ್ಮಪಾಲನು ಪ್ರಸಿದ್ಧ ವಿದ್ವಾಂಸನಾಗಿದ್ದು ಮೂಲತ: ಕಂಚಿಯವನಾಗಿದ್ದನು. ಇವನ ನಂತರ ಶೀಲಭದ್ರನು ಕುಲಪತಿಯಾದನು. ಇವನು ಸಮತಟ ಪ್ರದೇಶದವನಾಗಿದ್ದನು.

ಹೂಯನ್‌ ತ್ಸಾಂಗ್ ನಳಂದದ ಪ್ರಸಿದ್ದ ವಿದ್ಯಾರ್ಥಿಯಾಗಿದ್ದನು. ಮೂಲತ: ಚೀನಾದೇಶದವನಾದ ಇವನು ಯಾತ್ರಿಕನಾಗಿ ಭಾರತಕ್ಕೆ ಬಂದು ನಳಂದದಲ್ಲಿ ಅಧ್ಯಯನ ಮಾಡಿದ್ದನು. ಇವನು ಎಲ್ಲಾ ಪರೀಕ್ಷೆಗಳಲ್ಲೂ ಉತ್ತೀರ್ಣಗೊಂಡು ಧರ್ಮಾಚಾರ್ಯ, ಮೋಕ್ಷಚಾರ್ಯ ಮತ್ತು ಮಹಾಯಾನದೇವ ಎಂಬ ಪದವಿಗಳನ್ನು ಪಡೆದಿದ್ದನು.

ಚೀಣಾದಿಂದ ಬಂದ ʻಇತ್ಸಿಂಗ್ʼ ಸಹ 10 ವರ್ಷಗಳ ಕಾಲ ಇಲ್ಲಿಯೇ ಅಧ್ಯಯನ ಮಾಡಿದ್ದನು. ದೇಶವಿದೇಶಗಳಿಂದ ಸುಮಾರು 10,000 ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದರು. ಇದೊಂದು ವಸತಿ ವಿಶ್ವವಿದ್ಯಾನಿಲಯವಾಗಿದ್ದು ಉಚಿತ ಊಟ, ಉಪಹಾರ, ಉಡುಪು ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿತ್ತು.

ನಳಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಾಗಿ ಪ್ರವೇಶಪಡೆಯುವುದು ಸುಲಭವಾಗಿರಲಿಲ್ಲ. ಅಂದರೆ ಪ್ರವೇಶ ಕೋರಿ ಬಂದವರಿಗೆಲ್ಲ ಪ್ರವೇಶ ಸಿಗುತ್ತಿರಲಿಲ್ಲ. ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಮೂರು ತಿಂಗಳ ಕಾಲ ತರಬೇತಿಯನ್ನು ನೀಡಲಾಗುತ್ತಿತ್ತು. ಈ ನಡುವೆ ಅಭ್ಯರ್ಥಿಯ ನಡೆನುಡಿಯ ಮತ್ತು ಜ್ಞಾಪಕಶಕ್ತಿಯನ್ನು ಪರೀಕ್ಷಿಸಲಾಗುತ್ತಿತ್ತು. ಕೊನೆಗೆ ಪರೀಕ್ಷೆಯನ್ನು ಎದುರಿಸಬೇಕಾಗುತ್ತಿತ್ತು. ಈ ಪರೀಕ್ಷೆಯು ಅತ್ಯಂತ ಕಠಿಣ ವಾಗಿದ್ದು ಪಾಸಾದ ಅಭ್ಯರ್ಥಿಯನ್ನು ವಿದ್ಯಾರ್ಥಿಯಾಗಿ ಸೇರಿಸಿಕೊಳ್ಳಲಾಗುತ್ತಿತ್ತು. ಇಲ್ಲಿ ಸ್ತ್ರೀಯರಿಗೂ ಪ್ರವೇಶಾ ವಕಾಶವಿದ್ದು, ಅವರು ಸನ್ಯಾಸಿಗಳ ಮತ್ತು ವಿದ್ಯಾರ್ಥಿಗಳ ಕೊಠಡಿಗೆ ಮಾತ್ರ ಹೋಗುವಂತಿರಲಿಲ್ಲ. ಬೇಕಿದ್ದರೆ ಹೊರಗಡೆ ಮಾತನಾಡಬಹುದಿತ್ತು.

ನಳಂದ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತವು ಮಾಧ್ಯಮವಾಗಿತ್ತು. ಇಲ್ಲಿಯ ಪಠ್ಯ ವಿಷಯಗಳೆಂದರೆ, ಮಹಾಯಾನ, ಹೀನಯಾನ, ವೈದಿಕ ಸಾಹಿತ್ಯ, ವ್ಯಾಕರಣ, ವೈದ್ಯಕೀಯಶಾಸ್ತ್ರ, ಕಲೆ ಮತ್ತು ತಂತ್ರವಿದ್ಯೆ. ವ್ಯಾಸಂಗವು 3 ಹಂತಗಳಲ್ಲಿ ನಡೆಯುತ್ತಿತ್ತು. ಅವುಗಳೆಂದರೆ;

1. 8 ರಿಂದ 13 ವರ್ಷದವರೆಗೆ ಪ್ರಾಥಮಿಕ ಹಂತ

2. 13 ರಿಂದ20 ವರ್ಷದವರೆಗೆ ಮಾಧ್ಯಮಿಕ ಹಂತ

3. ನಂತರ ಉಚ್ಚ ಶಿಕ್ಷಣ ಹಂತ

ನಳಂದದಲ್ಲಿ ಶಿಕ್ಷಣವು ಉಪನ್ಯಾಸ, ಚರ್ಚೆ, ಪ್ರಶೋತ್ತರ, ತಾಳೆಗರಿಗಳ ಪ್ರತಿಮಾಡುವಿಕೆ, ಅನುವಾದ ಮತ್ತು ವಾದ ವಿವಾದದ ಮೂಲಕ ದೊರೆಯುತ್ತಿತ್ತು. ಉಚ್ಚ ಶಿಕ್ಷಣವು ಆಧುನಿಕ ಸಂಶೋಧನಾ ರೂಪದಲ್ಲಿದ್ದು ಕೊಟ್ಟ ಸಮಸ್ಯೆಗಳನ್ನು ಅಧ್ಯಯನ ಮಾಡಿ ಪರಿಹರಿಸಬೇಕಾಗಿತ್ತು. ಪ್ರಬಂಧಗಳನ್ನು ರಚಿಸಿ ಮಂಡಿಸಬೇಕಾಗಿತ್ತು. ಇದನ್ನು ಪರೀಕ್ಷಿಸಿ ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತಿತ್ತು.

ಪ್ರಾಚೀನ ಕಾಲದಲ್ಲಿ ನಳಂದ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವುದು ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಇದೊಂದು ಅಂತರರಾಷ್ಟ್ರೀಯ ವಿದ್ಯಾಕೇಂದ್ರವಾಗಿದ್ದು, ದೇಶವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಸುತ್ತ-ಮುತ್ತಲ ರಾಜ್ಯಗಳಲ್ಲದೆ ಆಗ್ನೆಯ ಏಷ್ಯಾ ದೇಶಗಳಿಂದಲೂ ರಾಜಾಶ್ರಯ ಈ ವಿಶ್ವವಿದ್ಯಾಲಯಕ್ಕೆ ದೊರೆಯುತ್ತಿತ್ತು.

ನಳಂದ ವಿಶ್ವವಿದ್ಯಾಲಯವು ಪ್ರಾಚೀನ ಭಾರತದಲ್ಲಿ ಹೆಸರುವಾಸಿಯಾಗಲು ಕಾರಣವೆಂದರೆ;

1. ಇಲ್ಲಿ ಸಿಗುತ್ತಿದ್ದ ಉಚಿತ ಶಿಕ್ಷಣ

2. ಬೌದ್ಧ ವಿಷಯಗಳೊಂದಿಗೆ ಇತರ ವಿಷಯಗಳಿಗೂ ಅವಕಾಶ

3. ಪಠ್ಯದಲ್ಲಿ ಲೌಕಿಕ ವಿಷಯಗಳಿಗೂ ಮಹತ್ವ

4. ಪ್ರಸಿದ್ಧ ವಿದ್ವಾಂಸರ ಬೋಧನೆ.

5. ಉತ್ತಮ ಗ್ರಂಥಾಲಯಗಳು ಮತ್ತು ವಸತಿ ಗೃಹಗಳ ಸೌಕರ್ಯ

6. ರಾಜಮಹಾರಾಜರ ಬೆಂಬಲದ ಪ್ರತಿಷ್ಠೆ

7. ದೊಡ್ಡದೊಡ್ಡ ಕಟ್ಟಡಗಳು ಗಾಂಭೀರ್ಯ ಮತ್ತು ಮಹತ್ವವನ್ನು ಸಾರುತ್ತಿದ್ದುದು.

8. ಇಲ್ಲಿ ನೀಡಿದ್ದ ಬೌದ್ಧಿಕ ಸ್ವಾತಂತ್ರ್ಯ

ಇಂತಹ ಪ್ರಸಿದ್ಧ ವಿಶ್ವವಿದ್ಯಾಲಯವನ್ನು 12ನೆಯ ಶತಮಾನದಲ್ಲಿ ಹೂಣರ ನಾಯಕ ಮಿಹಿರಗುಲ ನಾಶಪಡಿಸಿದನು. ಆದರೆ ರಾಜಾ ಬಾಲಾದಿತ್ಯ ಜೀರ್ಣೋದ್ದಾರ ಮಾಡಿದ್ದನಾದರೂ, 12ನೆಯ ಶತಮಾನದ ಅಂತ್ಯದಲ್ಲಿ ಮತ್ತೆ ದಾಳಿಗೀಡಾಯಿತು. ಬಿಹಾರವನ್ನು ಗೆದ್ದ ಬಕ್ತಿಯಾರ್ ಖಲ್ಟಿಯು ನಳಂದ ವಿಶ್ವವಿದ್ಯಾಲಯ ವನ್ನು ನಾಶಮಾಡಿದನು. ಗ್ರಂಥಭಂಡಾರಕ್ಕೆ ಬೆಂಕಿ ಇಟ್ಟು ಪೂರ್ಣನಾಶ ಗೊಳಿಸಿದ್ದಲ್ಲದೆ ವಿದ್ಯಾರ್ಥಿಗಳನ್ನು ಮತ್ತು ವಿದ್ವಾಂಸರನ್ನೂ ಹಿಂಸಿಸಿದ. ಪರಿಣಾಮವಾಗಿ ಗತಕಾಲದ ಜ್ಞಾನ ಕೇಂದ್ರವೊಂದು ಅವನತಿ ಹೊಂದಿತು. 

ಗುಪ್ತರ ಸುವರ್ಣಯುಗ

ಗುಪ್ತರ ಸುವರ್ಣಯುಗ

ಗುಪ್ತರ ಕಾಲವನ್ನು ಸುವರ್ಣಯುಗವೆಂದು ಕರೆಯುತ್ತಾರೆ. ಗುಪ್ತರ ಕಾಲದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಅತ್ಯದ್ಭುತ ಪ್ರಗತಿಯೇ ಇದಕ್ಕೆ ಕಾರಣವಾಗಿದೆ.

1. ಗುಪ್ತ ದೊರೆಗಳು ವಿಶಾಲ ಭೂಪ್ರದೇಶವನ್ನು ಒಂದುಗೂಡಿಸಿ ಬಹುದೊಡ್ಡ ಸಾಮ್ರಾಜ್ಯವನ್ನು ಆಳಿದರು.

2. ಸಮುದ್ರಗುಪ್ತ, ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನಂತಹ ಮಹಾನ್ ದೊರೆಗಳು ಗುಪ್ತ ವಂಶದಲ್ಲಿ ಆಳ್ವಿಕೆ ನಡೆಸಿದರು. ಇವರು ಪರಕೀಯ ಆಳ್ವಿಕೆಯನ್ನು ನಿರ್ಮೂಲಗೊಳಿಸಿ ಸುಭದ್ರ ಆಡಳಿತವನ್ನು ಸ್ಥಾಪಿಸಿದರು.

3. ಗುಪ್ತ ಅರಸರು ಸಾಮ್ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಿ ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದರು.

4. ಆರ್ಥಿಕವಾಗಿ ಗುಪ್ತರ ಕಾಲವು ಸುಸ್ಥಿತಿಯ ಮತ್ತು ಏಳೆಯ ಕಾಲವಾಗಿತ್ತು. ವ್ಯಾಪಾರ ಮತ್ತು ವಾಣಿಜ್ಯ ಉಚ್ಛಾಯಸ್ಥಿತಿಯಲ್ಲಿದ್ದವು.

5. ಕಾಳಿದಾಸ, ಬಾಸ, ವಿಷ್ಣುಶರ್ಮ, ಶೂದ್ರಕರಂತಹ ಇನ್ನೂ ಅನೇಕ ಕವಿಗಳು, ವಿದ್ವಾಂಸರು, ಸಾಹಿತಿಗಳು ನಾಟಕಕಾರರೂ ಇದ್ದು ಸಾಹಿತ್ಯಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದರು.

6. ಇಡೀ ಪ್ರಪಂಚವೇ ವಿಜ್ಞಾನ ಕ್ಷೇತ್ರದಲ್ಲಿ ಗಾಢ ನಿದ್ರೆಯಲ್ಲಿದ್ದಾಗ ಎಚ್ಚೆತ್ತ ಕಾಲವೇ ಗುಪ್ತ ಯುಗವಾಗಿದೆ. ಇಡೀ ಪ್ರಪಂಚಕ್ಕೆ ಜ್ಞಾನದೀವಿಗೆ ಹಿಡಿದ ಆರ್ಯಭಟ, ವರಾಹಮಿಹಿರ, ಬ್ರಹ್ಮಗುಪ್ತ ರಂತಹ ಮಹಾನ್ ವಿಜ್ಞಾನಿಗಳು ಗುಪ್ತ ಕಾಲದಲ್ಲಿ ಇದ್ದುದು ಒಂದು ಹೆಗ್ಗಳಿಕೆ.

7. ಧಾರ್ಮಿಕವಾಗಿ ಜೈನ ಮತ ಮತ್ತು ಬೌದ್ಧಮತಗಳು ಅವನತಿಯ ಹಾದಿ ಹಿಡಿದರೂ ಹಿಂದೂಧರ್ಮ ಮಾತ್ರ ಪುನರುಜ್ಜಿವನವಾಯಿತು, ಪುಷ್ಪಾವಸ್ತೆಯ ಹಿಂದೂಧರ್ಮ ಪರಾಕಾಷ್ಠೆ ತಲುಪಿತು.

8. ಹಿಂದೂ ಕಲೆ ಮತ್ತು ವಾಸ್ತುಶಿಲ್ಪ ಉದಯವಾದದ್ದು ಮತ್ತು ಏಳಿಗೆ ಹೊಂದಿದ್ದು ಗುಪ್ತರ ಕಾಲದಲ್ಲಿ ವಿದೇಶಿ ಪ್ರಭಾವದಿಂದ ಮುಕ್ತವಾದ ಭಾರತೀಯ ಕಲೆ ಪರಿಪೂರ್ಣವಾಗಿ ಅರಳಿತು. ನವ ಮನ್ವಂತರಕ್ಕೆ ಕಾರಣವಾಯಿತು.

ವಿವಿಧ ವಿದ್ವಾಂಸರ ಅಭಿಪ್ರಾಯವನ್ನು ಗಮನಿಸುವುದಾದರೆ

ಬರ್ನೆಟ್ ಪ್ರಕಾರ: ʻಗುಪ್ತರ ಕಾಲವು ಗ್ರೀಕ್‌ ಪರಿಕ್ಲಿಸ್ ಮತ್ತು ರೋಮಿನ ಆಗಸ್ವಸ್‌ನ ಕಾಲದಂತೆ’

ಸ್ಮಿತ್ ಪ್ರಕಾರ: ʻಗುಪ್ತರ ಕಾಲವನ್ನು ಇಂಗ್ಲೆಂಡಿನ ಎಲಿಜಬೆತ್ ಮತ್ತು ಸ್ಟುಆರ್ಟ್ ಕಾಲಕ್ಕೆ ಹೋಲಿಸಬಹುದು’

ಮ್ಯಾಕ್ಸ್ ಮುಲ್ಲರ್ ಪ್ರಕಾರ: ʻಗುಪ್ತರ ಕಾಲ ಹಿಂದೂ ಧರ್ಮದ ಪುನರುಜೀವನದ ಕಾಲ’

ಡಾ॥ ಕುಮಾರಸ್ವಾಮಿಯವರ ಪ್ರಕಾರ: ʻಗುಪ್ತರ ಕಾಲದಲ್ಲಿ ಆದುದು ಹಿಂದೂ ಧರ್ಮದ ಪುನರುಜೀವನ ಅಲ್ಲ. ಬದಲಿಗೆ ಅತ್ಯುನ್ನತಿ ಕಾಲ’.

ಈ ಮೇಲಿನ ಕಾರಣಗಳಿಂದ ಗುಪ್ತರ ಕಾಲವನ್ನು ಭಾರತೀಯ ಸಂಸ್ಕೃತಿಯ ಸುವರ್ಣಯುಗವೆಂದು ಕರೆಯಲಾಗಿದೆ.

ಅದೊಂದು ಮಿಥ್ಯೆ:

ಗುಪ್ತರ ಕಾಲದ ಸುವರ್ಣಯುಗ ಕಲ್ಪನೆಯು ಒಂದು ಮಿಥ್ಯ, ಕಲ್ಪನೆ ಎಂಬ ಅಭಿಪ್ರಾಯವೂ ಇದೆ. ರೋಮಿಲಾ ಥಾಪರ್, ಡಿ.ಎನ್.ಜಾ, ಆರ್.ಡಿ.ಶರ್ಮ, ಡಿ.ಡಿ.ಕೋಶಾಂಬಿ ಮುಂತಾದವರು ಸುವರ್ಣಯುಗವು ಸುಳ್ಳೆಂದು ವಾದಿಸಿದ್ದಾರೆ. ಅವರ ಪ್ರಕಾರ

1. ಶ್ರೇಷ್ಠತೆಯ ಕಲ್ಪನೆ ಉಚ್ಚವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಕೆಳವರ್ಗದ ಪರಿಸ್ಥಿತಿ ಚಿಂತಾಜನಕವಾಗಿತ್ತು.

2. ಗುಪ್ತರಕಾಲದಲ್ಲಿ ಉಳಿಗಮಾನ್ಯ ಪದ್ಧತಿ ಅಸ್ತಿತ್ವದಲ್ಲಿತ್ತು. ಇದನ್ನು ಜಹಗೀರು ಪದ್ಧತಿ, ಪಾಳೆಗಾರಿಕೆ ಪದ್ಧತಿ ಎಂಬೆಲ್ಲಾ ಹೆಸರುಗಳಿಂದ ಕರೆಯುತ್ತಾರೆ. ಇದರ ಪ್ರಕಾರ ದೇವಾಲಯಗಳಿಗೆ ಮತ್ತು ಬ್ರಾಹ್ಮಣರಿಗೆ ದಾನ ಕೊಡಲಾಗುತ್ತಿತ್ತು. ಹೀಗಾಗಿ ರೈತರು ಪರರ ದಾಸ್ಯಕ್ಕೆ ಒಳಗಾದರು. ಅವರು ಭೂ ಉತ್ಪನ್ನದ ಕೆಲವು ಭಾಗವನ್ನು ಈ ಊಳಿಗಮಾನ್ಯ ಪ್ರಭುವಿಗೆ ಕೊಡಬೇಕಾಗುತ್ತಿತ್ತು. ಪರಿಣಾಮವಾಗಿ ರೈತರ ಪರಿಸ್ಥಿತಿ ಚಿಂತಾಜನಕವಾಯಿತು.

3. ಪುರೋಹಿತ ವರ್ಗವು ಪ್ರಾಬಲ್ಯಗೊಂಡು ಜಾತಿವ್ಯವಸ್ಥೆ ಜಟಿಲಗೊಂಡಿತು

4. ಆರ್ಥಿಕ ಪ್ರಗತಿ ಮೇಲ್ವರ್ಗಕ್ಕೆ ಮಾತ್ರ ಸೀಮಿತವಾಯಿತು.

5. ತೆರೆಗೆಗಳಿಂದ ಜನಸಾಮಾನ್ಯರ ಶೋಷಣೆ ನಿರಂತರವಾಯಿತು.

6. ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ವ್ಯವಸ್ಥೆ ಹದಗೆಟ್ಟಿತು.

7. ಸಂಸ್ಕೃತ ಸಾಹಿತ್ಯ ಜನಸಾಮಾನ್ಯರನ್ನು ತಲುಪಲಿಲ್ಲ. ಕೇವಲ ವಿದ್ವಾಂಸರ ಮತ್ತು ಆಸ್ಥಾನ ಭಾಷೆಯಾಗಿ ಜನರಿಂದ ದೂರವಾಯಿತು.

8. ಹಿಂದೂ ಧರ್ಮದ ಪುನರುಜ್ಜಿವನವೆಂದರೆ ಅದು ತನ್ನ ಗರ್ಭದಲ್ಲಿ ಇಟ್ಟುಕೊಂಡ ವರ್ಣಾಶ್ರಮ ಧರ್ಮದ ಪುನರುಜ್ಜಿವನವೇ ಆಗಿದೆ. ಪರಿಣಾಮವಾಗಿ ಜಾತಿ ವ್ಯವಸ್ಥೆ ಮತ್ತಷ್ಟು ಕಠಿಣವಾಯಿತು. ಮೇಲು-ಕೀಳು ಕಲ್ಪನೆ ಮತ್ತಷ್ಟು ವ್ಯಾಪಕವಾಯಿತು. ಕೆಳಜಾತಿಯ ಜನರ ಪರಿಸ್ಥಿತಿ ಪ್ರಾಣಿಗಳಿಗಿಂತ ಕೀಳಾಯಿತು. ಸಮಾನತೆ ಶೂನ್ಯವಾಯಿತು.

ಉಪಸಂಹಾರ:

ಆಗ ಬ್ರಿಟೀಶರು ಆಳುತ್ತಿದ್ದರು. ಅವರು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಹೀಗಳೆಯುತ್ತಿದ್ದರು. ಇಂತಹ ಸಂದರ್ಭದಲ್ಲಿ ಜನರನ್ನು ಜಾಗೃತಗೊಳಿಸಲು ಮತ್ತು ರಾಷ್ಟ್ರೀಯತೆಯ ಕಿಡಿ ಹೊತ್ತಿಸಲು ‘ಸುವರ್ಣಯುಗ’ ಕಲ್ಪನೆಯನ್ನು ತರಲಾಯಿತು. ಆದರೆ ಈಗ ಅದರ ಅವಶ್ಯಕತೆಯಿಲ್ಲ. ಹೀಗಾಗಿ ಗುಪ್ತರ ಕಾಲದ ಸುವರ್ಣಯುಗವನ್ನು ಮೇಲ್ವರ್ಗಕ್ಕೆ, ಬ್ರಾಹ್ಮಣಶಾಹಿ ಧರ್ಮಕ್ಕೆ, ಸಂಸ್ಕೃತ ಭಾಷೆಗೆ, ಸಾಹಿತ್ಯ ಮತ್ತು ಕಲಾರಂಗಕ್ಕೆ ಮಾತ್ರ ಸೀಮಿತ ಗೊಳಿಸಬಹುದು. ಉಳಿದಂತೆ ‘ಸುವರ್ಣಯುಗ’ವನ್ನು ಮಿಥೈಯೆಂದೆ ಗುರುತಿಸಬಹುದು.

ಕುಶಾನರ ಸಾಂಸ್ಕೃತಿಕ ಕೊಡುಗೆಗೆಳು

ಕುಶಾನರ ಸಾಂಸ್ಕೃತಿಕ ಕೊಡುಗೆಗೆಳು

ಪ್ರಾಚೀನ ಭಾರತದಲ್ಲಿ ಮೌರ್ಯರ ಪತನಾನಂತರ ಪ್ರಾಬಲ್ಯಕ್ಕೆ ಬಂದಿದ್ದ ಕುಶಾನರು ಭಾರತದ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಮೂಲಾಗ್ರ ಕೊಡುಗೆಗಳನ್ನು ಸಮರ್ಪಿಸಿದ್ದಾರೆ. ಧರ್ಮ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಲ್ಲಿ ಅಸಾಧಾರಣ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರ ಸಾಂಸ್ಕೃತಿಕ ಕೊಡುಗೆಗಳನ್ನು ಕೆಳಕಂಡಂತೆ ಅವಲೋಕಿಸಬಹುದು. 

ಧರ್ಮ:

ಕುಶಾನರ ಕಾಲದಲ್ಲಿ ಬೌದ್ಧಪಂಥವು ಬೆಳವಣಿಗೆ ಹೊಂದಿ ಅಭ್ಯುದಯವನ್ನು ತಲುಪಿತ್ತು. ಕಾನಿಷ್ಕನು ಬೌದ್ಧ ಮತಾವಲಂಬಿಯಾಗಿದ್ದು ಚೌದ್ಧಧರ್ಮದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದನು. ಇದರಿಂದಾಗಿ ಕಾನಿಷ್ಕನನ್ನು 2ನೇ ಬುದ್ಧನೆಂದೇ ಕರೆಯಲಾಗಿದೆ. ಬೌದ್ಧಪಂಥದ ಅಭಿವೃದ್ಧಿಗಾಗಿ ಕಾನಿಷ್ಕ ಕೈಗೊಂಡ ಕ್ರಮಗಳು ಅಪಾರ ಮತ್ತು ಅವಿಸ್ಮರಣೀಯ.

ಧರ್ಮದ ಶ್ರೇಯೋಭಿವೃದ್ಧಿಗಾಗಿ ಹಳೆಯ ಸಂಘರಾಮಗಳನ್ನು ದುರಸ್ಥಿಗೊಳಿಸಿದನು ಅನೇಕ ಹೊಸ ಸಂಘರಾಮಗಳ ನಿರ್ಮಾಣಕ್ಕೆ ಅಪಾರ ಪ್ರೋತ್ಸಾಹ ನೀಡಿದನು. ಮದ್ಯವಿಷ್ಯಾ, ಟಿಬೆಟ್, ಬರ್ಮ, ಜಪಾನ್, ಕೋರಿಯಾ ಹಾಗೂ ಚೀನಾ ಮುಂತಾದ ವಿದೇಶಗಳಿಗೆ ಧರ್ಮಪ್ರಸಾರಕರನ್ನು ಕಳುಹಿಸಿದ್ದನು.

4ನೇ ಬೌದ್ಧಸಮ್ಮೇಳನ:

ಬೌದ್ಧಪಂಥದ ಪ್ರಜ್ವಲತೆಗಾಗಿ ಕಾಶ್ಮೀರದ ಶ್ರೀನಗರದ ಬಳಿಯಿರುವ ಕುಂಡಲವನ ದಲ್ಲಿ 4ನೇ ಬೌದ್ಧ ಸಮ್ಮೇಳನವನ್ನು ಸಮಾವೇಶಗೊಳಿಸಿದ್ದನು. ಈ ಸಮ್ಮೇಳನವು ಕ್ರಿ.ಶ 100ರಲ್ಲಿ ನಡೆಯಿತು. ವಸುಮಿತ್ರನು ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದನು. ಅಶ್ವಘೋಷನು ಉಪಾಧ್ಯಕ್ಷನಾಗಿದ್ದನು. ನಾಗಾರ್ಜುನ ಮತ್ತು ಪಾರ್ಶ್ವರಂತಹ ಬೌದ್ಧವಿದ್ವಾಂಸರುಗಳು ಆಗಮಿಸಿದ್ದರು.

ಈ ಸಮ್ಮೇಳನವು ಮಹತ್ವಪೂರ್ಣ ಸಾಧನೆಗಳನ್ನು ಮಾಡಿತು. ಅವುಗಳೆಂದರೆ :

1. ಬುದ್ಧನ ಉಪದೇಶಗಳನ್ನು ಸಂಕಲಿಸಿತು.

2. ಬೌದ್ಧ ಅನುಯಾಯಿಗಳಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕಿತು.

3. ಬೌದ್ಧ ಸಾಹಿತ್ಯವನ್ನು ಪುನ‌ರ್ ಪರಿಶೀಲಿಸಿ ತ್ರಿಪಿಠಕಗಳ ಮೇಲೆ ಮಹಾಬಾಷ್ಯ ವನ್ನುರಚಿಸಲಾಯಿತು. ಬೌದ್ಧ ಧರ್ಮದ ವಿಶ್ವಕೋಶದಂತೆ ಇರುವ ಇದನ್ನುʻಮಹಾವಿಭಾಶ’ ಎಂದೇ ಹೆಸರಿಸಲಾಗಿದೆ. 

ಹೀನಯಾನ, ಮಹಾಯಾನ ಪಂಥಗಳು:

ಕಾನಿಷ್ಕನ ಆಳ್ವಿಕೆಯ ಕಾಲದಲ್ಲಿ ಬೌದ್ಧಪಂಥಕ್ಕೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳು ಕಂಡುಬಂದವು, ಈಗಾಗಲೆ ಹಿಂದೂ ಧಾರ್ಮಿಕ ತತ್ವಗಳಿಂದ ಪ್ರಭಾವಿತಗೊಂಡ ಬೌದ್ಧ ಪಂಥದ ಕೆಲವು ಅನುಯಾಯಿಗಳು ಬುದ್ಧನನ್ನು ದೈವತ್ವಕ್ಕೇರಿಸಿ ಮೂರ್ತಿಪೂಜೆ ಆರಂಭಿಸಿದರು. ಇವರನ್ನು ಮಹಾಯಾನ ಬೌದ್ಧಪಂಥದವರೆಂದು ಹೆಸರಿಸಲಾಯಿತು. ಬುದ್ಧನನ್ನು ಪೂಜಿಸದಿರುವ ಬೌದ್ಧಪಂಥೀಯರು ಹೀನಯಾನ ಪಂಥದವರೆಂದು ಕರೆದು ಕೊಂಡರು, ಕಾನಿಷ್ಕ ಮಹಾಯಾನ ಬೌದ್ಧ ಪಂಥವನ್ನು ಅವಲಂಬಿಸಿ ಅದಕ್ಕೆ ಅಪಾರ ಪ್ರೋತ್ಸಾಹ ನೀಡಿದನು. ಹೀಗಾಗಿ ಮಹಾಯಾನ ಪಂಥವು ಹೆಚ್ಚು ಅಭಿವೃದ್ಧಿಗೊಂಡಿತು. ಮಹಾಯಾನ ಬೌದ್ಧಪಂಥವು ಭಾರತ, ಮದ್ಯ ಏಷ್ಯಾ, ಟಿಬೇಟ್, ಚೀನಾ ಹಾಗೂ ಜಪಾನ್‌ಗಳಲ್ಲಿ ಪ್ರಬಲವಾದ ಧಾರ್ಮಿಕಪಂಥವಾಗಿ ಬೆಳೆಯಿತು. ಕಾನಿಷ್ಕನು ಬೌದ್ಧಪಂಥದ ಏಳಿಗೆಗಾಗಿ ಅಪಾರವಾಗಿ ಶ್ರಮಿಸಿದ್ದರಿಂದ ಧರ್ಮವು ಔನ್ನತ್ಯದ ಸ್ಥಿತಿಗೆ ಬರಲು ಕಾರಣವಾಯಿತು. 

ಸಾಹಿತ್ಯ:

ಕುಶಾನರ ಕಾಲದಲ್ಲಿ ಸಾಹಿತ್ಯ ಕೂಡ ಹೆಚ್ಚು ಅಭಿವೃದ್ಧಿ ಹೊಂದಿತು. ಕುಶಾನ ದೊರೆಗಳು ಸಾಹಿತ್ಯಾಭಿಮಾನಿ ಗಳಾಗಿದ್ದು ಸಾಹಿತ್ಯದ ಬೆಳೆವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ಇದರಿಂದಾಗಿ ಹಲವಾರು ಪ್ರಮುಖ ಕೃತಿಗಳು ರಚನೆಯಾದವು. ಕುಶಾನರ ಕಾಲದ ಪ್ರಮುಖ ಸಾಹಿತ್ಯಕ, ಧಾರ್ಮಿಕ ಕೃತಿಗಳು ಮತ್ತು ಅವುಗಳ ಐತಿಹಾಸಿಕ ಮೌಲ್ಯವನ್ನು ಅವಲೋಕಿಸಬಹುದು.

ಅಶ್ವಘೋಷ:

ಕಾನಿಷ್ಕನ ಆಸ್ಥಾನದಲ್ಲಿದ್ದ ‘ಅಶ್ವಘೋಷ’ ಕವಿಯಾಗಿ, ತತ್ವಜ್ಞಾನಿಯಾಗಿ, ನಾಟಕಕಾರನಾಗಿ, ಸಂಗೀತಗಾರನಾಗಿ ಪ್ರಖ್ಯಾತಿ ಹೊಂದಿದ್ದನು. ಇವನ ಪ್ರಮುಖ ಕೃತಿಗಳೆಂದರೆ :

1. ಬುದ್ಧಚರಿತ:

ಬುದ್ಧನ ಜೀವನ ಚರಿತ್ರೆಯ ಬಗ್ಗೆ ವಿವರಣೆ ನೀಡುತ್ತದೆ. 

2. ಸೌಂದರಾನಂದ:

ಬುದ್ಧನ ಜೀವನದ ಪ್ರಮುಖ ಘಟನೆಗಳ ಬಗ್ಗೆ ವಿಶ್ಲೇಷಿಸುತ್ತದೆ.

3. ವಜ್ರಸೂಚಿ:

ಸಮಕಾಲೀನವಾಗಿದ್ದ ಜಾತಿಪದ್ಧತಿಯನ್ನು ಖಂಡಿಸುತ್ತದೆ.

4. ಸರಿಪುತ್ರಪ್ರಕರಣ:

ಇದು ನಾಟಕ ರೂಪದಲ್ಲಿದ್ದು ಸರಿಪುತ್ರ ಮತ್ತು ಮೊಗ್ಗಲ್ಲನರ ಮತಾಂತರದ ಬಗ್ಗೆ ವಿವರ ನೀಡುತ್ತದೆ. ಫ್ರೆಂಚ್ ವಿದ್ವಾಂಸ ‘ಸೆಲ್ವನ್‌ವಿ’ ಅಭಿಪ್ರಾಯಪಡುವಂತೆ ‘ಅಶ್ವಘೋಷನ ಸಾಹಿತ್ಯದ ಶ್ರೀಮಂತಿಕೆ ಮತ್ತು ವೈವಿಧ್ಯತೆಯು ನಮಗೆ ಮಿಲ್ಟನ್, ಗಯಟೆ, ಕಾಂಟ್, ವಾಲ್ವೇರ್’ ಮೊದಲಾದವರ ನೆನಪನ್ನು ಗಮನಕ್ಕೆ ತರುತ್ತದೆ. ಅಶ್ವಘೋಷನು ಕಾಳಿದಾಸ ಮತ್ತು ಭಾಸಕವಿಯಿಂದ ಪ್ರಭಾವಿತನಾಗಿರ ಬೇಕೆಂದು ಕೆಲವು ವಿದ್ವಾಂಸರ ಅಭಿಪ್ರಾಯ.

ನಾಗಾರ್ಜುನ : ಇವನ ಕೃತಿಗಳು:

1. ಶತಸಾಹಸಿಕ ಪ್ರಜ್ಞಾಪರಿಮಿತ

2. ಮಾಧ್ಯಮಿಕ ಸೂತ್ರ

3. ಸಹೃಲೇಖ

ನಾಗಾರ್ಜುನ ಕಾನಿಷ್ಕನ ಆಸ್ಥಾನದ ಮತ್ತೋರ್ವ ಪ್ರಖ್ಯಾತ ಕವಿ. ಮಹಾಯಾನ ಪಂಥದ ಪ್ರತಿಪಾದಕನಾದ ನಾಗಾರ್ಜುನ ಮಾದ್ಯಮಿಕ ಸೂತ್ರದಲ್ಲಿ ಸಾಪೇಕ್ಷ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾನೆ. ಪ್ರಜ್ಞಾಪರಿಮಿತ ವೇದಾಂತದ ಕೃತಿಯಾಗಿದೆ.

‘ಸಹೃಲೇಖ’ ಕೃತಿಯು ನಾಲ್ಕು ಆರ್ಯಸತ್ಯಗಳು ಮತ್ತು ಅಷ್ಟಾಂಗ ಸಿದ್ದಮಾರ್ಗಗಳನ್ನು ಕುರಿತು ವಿಶ್ಲೇಷಿಸುತ್ತದೆ. ಈ ಕೃತಿಯ ಸರ್ವೋತ್ಕೃಷ್ಟ ಅಂಶವೆಂದರೆ ಮಿತ್ರರು ಮತ್ತು ವೈರಿಗಳಲ್ಲಿ ಯಾವುದೇ ಭೇದಭಾವವನ್ನು ಮಾಡಬಾರದೆಂಬುದು. ನಾಗಾರ್ಜುನನ್ನು ಭಾರತದ ಮಾರ್ಟಿನ್ ಲೂಥರ್ ಮತ್ತು ಭಾರತದ ಐನ್ ಸ್ಟೈನ್ ಎಂದೇ ಕರೆಯಲಾಗಿದೆ. ನಾಗಾರ್ಜುನನ ವಿದ್ವತ್ತನ್ನು ಗಮನಿಸಿದ ಚೀನಿ ಯಾತ್ರಿಕ ಹ್ಯುಯನ್ ತ್ಸಾಂಗ್ ಹೇಳುವಂತೆ ‘ಜಗತ್ತಿನ ನಾಲ್ಲು ಜ್ಯೋತಿಗಳಲ್ಲಿ ನಾಗಾರ್ಜುನನು ಕೂಡ ಒಬ್ಬನಾಗಿದ್ದಾನೆ’.

ಚರಕ:

ಕುಶಾನರ ಕಾಲದಲ್ಲಿದ್ದ ಚರಕನು ಆಯುರ್ವೇದ ಔಷಧ ಶಾಸ್ತ್ರದ ಮಹಾನ್ ಪಂಡಿತನೆನಿಸಿದ್ದನು. ಇವನು ಕಾನಿಷ್ಕನ ಆಸ್ಥಾನದ ಪ್ರಖ್ಯಾತ ವೈದ್ಯನಾಗಿದ್ದನು. ಇವನು ‘ಚರಕಸಂಹಿತೆ’ ಯೆಂಬ ವೈದ್ಯಕೀಯ ಕೃತಿಯನ್ನು ರಚಿಸಿದ್ದಾನೆ. ಇದು ಕ್ರಿ.ಶ 7ನೇಶತಮಾನದಲ್ಲಿ ಪರ್ಶಿಯನ್ ಭಾಷೆಗೂ ಕ್ರಿಶ ೫ನೇ ಶತಮಾನದಲ್ಲಿ ಅರೇಬಿಕ್ ಭಾಷೆಗೂ ಭಾಷಾಂತರವಾಯಿತು. ಕಾನಿಷ್ಕನ ಕಾಲಾವಧಿಯಲ್ಲಿ ವಸುಮಿತ್ರ ಮತ್ತು ಪಾರ್ಶ್ವ ಎಂಬ ವಿದ್ವಾಂಸರುಗಳಿದ್ದರು. ವಸುಮಿತ್ರನು ನಾಲ್ಕನೇ ಬೌದ್ಧ ಮಹಾಸಮ್ಮೇಳನದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದನು. ಕುಶಾನರ ಕಾಲದಲ್ಲಾದ ಸಾಹಿತ್ಯದ ಚಟುವಟಿಕೆಗಳ ನ್ನು ಗಮನಿಸಿ ಡಾ|ಹೆಚ್.ಜಿ.ರಾಲಿಸನ್ ರವರು ‘ಕುಶಾನರ ಕಾಲವು ಗುಪ್ತರ ಯುಗಕ್ಕೆ ಅತ್ಯುತ್ತಮ ಪೂರ್ವಭಾವಿ ಪೀಠಿಕೆಯಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಲೆ ಮತ್ತು ವಾಸ್ತುಶಿಲ್ಪ

ಕುಶಾನರು ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಿದ್ದರಿಂದ ಕಲಾ ಶ್ರೀಮಂತಿಕೆಯು ಸೃಷ್ಟಿಗೊಂಡಿತ್ತು. ಕಲಾವೈಭವ, ಕಲಾಕೌಶಲ್ಯತೆ, ಕುಸುರಿಯ ಕೆತ್ತನೆಯಿಂದ ಕಲೆಯಲ್ಲಿ ವೈಭವದ ಅಂಕುರಾರ್ಪಣೆ ಕಂಡುಬಂದಿತು. ಕುಶಾನರ ಕಾಲದ ಬೆಳವಣಿಗೆಯು ಭಾರತೀಯ ಕಲೆಯಲ್ಲಿ ಹೊಸದೊಂದು ಯುಗ ಆರಂಭಿಸಿತು. ಗಾಂಧಾರವನ್ನು ಕೇಂದ್ರಸ್ಥಾನವಾಗಿ ಮಾಡಿಕೊಂಡು ಕುಶಾನರು ಕಲೆಯನ್ನು ಅಭಿವೃದ್ಧಿ ಪಡಿಸಿದ್ದರಿಂದ ‘ಗಾಂಧಾರಕಲೆ’ ಎಂದೇ ಕರೆಯಲಾಗಿದೆ. ಈ ಕಲೆಯು ಗ್ರೀಕ್ ಮತ್ತು  ಭಾರತೀಯ ಕಲೆಯ ಲಕ್ಷಣಗಳಿರುವುದರಿಂದ ‘ಗ್ರೀಕೊ ಬೌದ್ಧಕಲೆ’ ಎಂದು ಸಹ ಹೆಸರಿಸಲಾಗಿದೆ. ಏಷ್ಯಾಮೈನಾರ್ ಮತ್ತು ರೋಂ ಸಾಮ್ರಾಜ್ಯದ ಹೆಲೆನಿಸ್ಟಿಕ್ ಕಲೆಯ ಲಕ್ಷಣಗಳು ಸಹ ಸಂಮ್ಮಿಲನಗೊಂಡಿರುವುದರಿಂದ ‘ಗ್ರೀಕೋ-ರೋಮನ್ ಕಲೆ’ ಎಂದೂ ಸಹ ಹೆಸರಿಸಲಾಗಿದೆ.

1. ಗಾಂಧಾರ ಕಲಾ ಶೈಲಿ:

ಈಗಿನ ಅಫಘಾನಿಸ್ತಾನವನ್ನು ಹಿಂದೆ ಗಾಂಧಾರ ದೇಶವೆಂದು ಕರೆಯುತ್ತಿದ್ದರು. ಇಲ್ಲಿಗೆ ಬಂದು ನೆಲಸಿದ ಗ್ರೀಕ್ ಶಿಲ್ಪಗಳು ಹೊಸ ಕಲಾ ಶೈಲಿಯನ್ನೇ ಹುಟ್ಟುಹಾಕಿದರು. ಅದನ್ನು ‘ಗಾಂಧಾರ ಶಿಲ್ಪ ಶೈಲಿ’ ಎಂದೇ ಕರೆಯಲಾಗಿದೆ. ಇದರ ಪ್ರಮುಖ ಕಲಾ ಕೇಂದ್ರಗಳೆಂದರೆ:

* ಜಲಾಲಾಬಾದ್,

* ಹಡ್ಡ

* ಬಮಿಯಾನ್,

* ಸ್ವಾಟ್ ಕಣಿವೆ ಮತ್ತು ಪೆಶಾವರ್ ಜಿಲ್ಲೆ.

ಗಾಂಧಾರ ಶಿಲ್ಪಕಲೆಯು ಭಾರತವು ಗ್ರೀಸ್ ಮತ್ತು ರೋಮ್ ರಾಜ್ಯಗಳೊಂದಿಗೆ ಹೊಂದಿದ್ದ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಪರ್ಕದ  ಫಲವಾಗಿದೆ. ಮಹಾಯಾನ ಪಂಥ ಬೆಳೆದಂತೆ ಗಾಂಧಾರ ಶಿಲ್ಪಕಲೆಯು ಚೀನಾ, ಟಿಬೆಟ್ ಮತ್ತು ಜಪಾನ್ ಗಳಿಗೂ ಪರಿಚಯವಾಯಿತು, ಆದರೆ ಮುಂದೆ ಕುಶಾನರ ನಂತರ ಗಾಂಧಾರ ಕಲೆಯು ತನ್ನ ಮಹತ್ವವನ್ನು ಕಳೆದುಕೊಂಡು ಕಣ್ಮರೆಯಾಯಿತು. ಮೂರ್ತಿಶಿಲ್ಪದಲ್ಲಿ ಉಬ್ಬುಶಿಲ್ಪಗಳಿಗೆ ಪ್ರಾಧಾನ್ಯತೆಯನ್ನು ನೀಡಿರುವುದು ಕಂಡುಬರುತ್ತದೆ. ಮಹಾಯಾನ ಪಂಥದವರು ಬುದ್ಧನನ್ನು ದೈವತ್ವದ ಮಟ್ಟಕ್ಕೇರಿಸಿದ್ದರಿಂದ ಮೂರ್ತಿಗಳ ಕೆತ್ತನೆಗೆ ಪ್ರೇರಣೆ ದೊರಕಿತು. ಮೂರ್ತಿಗಳ ರಚನೆಯಲ್ಲಿ ಕಲ್ಲು, ತಿಳಿಗಚ್ಚು ಹಾಗೂ ಜೇಡಿಮಣ್ಣನ್ನು ಬಳಸುತ್ತಿದ್ದರು. ಈ ಕಲೆಯಲ್ಲಿ ಬುದ್ಧನ ವಿವಿಧ ರೂಪದ ಮೂರ್ತಿಯನ್ನು ರಚಿಸಲಾಯಿತು. ಬುದ್ಧನ ಜನನ, ರಾಜಕುಮಾರನಾಗಿ, ಸನ್ಯಾಸಿಯಾಗಿ ಸಿದ್ದಾರ್ಥನು ಬುದ್ಧನಾದ ಬಗೆಯನ್ನು ಚಿತ್ರಿಸಲಾಗಿದೆ. ಬುದ್ಧನ ಬಾಲ್ಯಾವಸ್ಥೆಯಿಂದ ಹಿಡಿದು ಜ್ಞಾನೋದಯನಾದ ಕಾಲದವರೆಗಿನ ವಿವರಗಳು ದೊರಕುತ್ತವೆ. ವಿ.ಎ.ಸ್ಮಿತ್ ಅಭಿಪ್ರಾಯಪಡುವಂತೆ ‘ಯಾವುದೇ ಲೌಕಿಕ ಅಭಿರುಚಿಯನ್ನು ಕಡೆಗಣಿಸದೆ ಶಿಲ್ಪಿಯು ಎಲ್ಲಾ ಅಂಶಗಳನ್ನು ಸೂಕ್ತವಾಗಿ ಬಳಸಿರುವುದು ಕಂಡುಬರುತ್ತದೆ”.

ಗಾಂಧಾರ ಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳು
1. ಮನುಷ್ಯಾಕೃತಿಯ ವಿಗ್ರಹಗಳು:

ಕುಶಾನರಿಗಿಂತ ಹಿಂದೆ ಬುದ್ಧನ ವಿಗ್ರಹಗಳನ್ನು ಕೆತ್ತುತ್ತಿರಲಿಲ್ಲ. ಮತ್ತು ಪೂಜಿಸುತ್ತಿರಲಿಲ್ಲ. ಬದಲಿಗೆ ಬುದ್ಧನ ಪ್ರತೀಕಗಳನ್ನು (symbols) ಮಾತ್ರ ಪೂಜಿಸುತ್ತಿದ್ದರು. ಅವುಗಳೆಂದರೆ:-

1. ಬುದ್ಧನ ಪಾದದ ಗುರುತು,

2. ಛತ್ರಿ,

3. ಖಾಲಿಸ್ಥಾನ,

4. ಬುದ್ಧನ ಅಸ್ಥಿ ಪಂಜರದ ಅವಶೇಷಗಳು,

ಆದರೆ ಮೊಟ್ಟಮೊದಲಿಗೆ ಗಾಂಧಾರ ಶೈಲಿಯಲ್ಲಿ ಬುದ್ಧನ ವಿಗ್ರಹಗಳನ್ನು ಕೆತ್ತಲು ಪ್ರಾರಂಭಿಸಿದರು. ಇವುಗಳು ಮನುಷ್ಯಾಕೃತಿಯ ನಿಂತ, ಕುಳಿತ ಅಥವಾ ಮಲಗಿದ ಪ್ರತಿಮೆಯೋಪಾದಿಯಲ್ಲಿದ್ದವು.

2. ಗ್ರೀಕ್ ದೇವರ ಹೋಲಿಕೆ:

ಗ್ರೀಕ್ ಶಿಲ್ಪಿಗಳು ಭಾರತೀಯ ಬುದ್ಧನನ್ನು ಕೆತ್ತುವಾಗಲೂ ತಮ್ಮ ಹಿಂದಿನ ಗ್ರೀಕ್  ತಂತ್ರಗಾರಿಕೆಯನ್ನು, ವಿಧಾನ ಮತ್ತು ಸ್ವರೂಪವನ್ನು ಮರೆಯಲಾಗಲಿಲ್ಲ. ಬದಲಿಗೆ ಬುದ್ಧನ ಮೂರ್ತಿಯಲ್ಲಿಯೂ ಅದನ್ನು ಕಂಡರಿಸಿದರು. ಪರಿಣಾಮವಾಗಿ ಗಾಂಧಾರ ಬುದ್ಧನ ಮೂರ್ತಿಗಳು ಗ್ರೀಕರ ದೇವರಾದ ‘ಅಪೊಲೊ’ ವನ್ನು ಹೋಲುವಂತಿವೆ. 

3. ಕೇಶಾಲಂಕಾರ ಮತ್ತು ಉದ್ದನೆಯ ಗಡ್ಡ ಮೀಸೆ:

ಗ್ರೀಕ್ ಶಿಲ್ಪಗಳಿಂದ ಕೆತ್ತಲ್ಪಟ್ಟ ಬುದ್ದನಲ್ಲಿ ಗ್ರೀಕೊ-ರೋಮನ್ ದೇವತಾಶಾಸ್ತ್ರ ಲಕ್ಷಣಗಳು ಬೆರೆತು ನಿರೂಪಿತವಾಗಿದೆ. ಪ್ರಮುಖವಾಗಿ ಕೇಶಾಲಂಕಾರಕ್ಕೆ ಗಮನ ಕೊಡಲಾಗಿದೆ. ತಲೆಗೂದಲು ಮೆಟ್ಟಿಲು ಮೆಟ್ಟಿಲಾಗಿ ಮೇಲೆರುತ್ತದೆ. ತಲೆಯನ್ನು ಆಭರಣಗಳೊಂದಿಗೆ ಅಲಂಕರಿಸಲಾಗಿದೆ. ಗ್ರೀಕ್ ಸಂಪ್ರದಾಯಕ್ಕೆ ಅನುಗುಣವಾಗಿ ಉದ್ದನೆಯ ಮೀಸೆ, ಗಡ್ಡವನ್ನು ಕೆತ್ತಲಾಗಿದೆ. ಭಾರತೀಯ ಬುದ್ಧನನ್ನು ಒಳಗೊಂಡು ಯಕ್ಷರು, ಗರುಡರು, ನಾಗರು, ಮುನಿಗಳು ಹಾಗೂ ಪುರೋಹಿತರಿಗೂ ಗಡ್ಡ ಮತ್ತು ಮೀಸೆಯನ್ನು ಬಿಡಲಾಗಿದೆ. ಈ ಶಿಲ್ಪಗಳು ಗ್ರೀಕ್‌ ಅಟ್ಲಾಂಟಿಸ್, ಬಚಾಂಟ್ಸ್, ನ್ಯೂಸ್, ಹೆರಾಕ್ಸಿಸ್, ಈರೋಸ್, ಹರ್ಮಿಸ್ ರಂತೆ ಕಂಡುಬರುತ್ತಾರೆ.

4. ಎದ್ದು ಕಾಣುವ ಸ್ನಾಯು:

ಮೊದಲಿಗೆ ಗ್ರೀಕ್ ಶಿಲ್ಪಿಗಳು ಸಿದ್ದಾರ್ಥನ ಜೀವನ ಚರಿತ್ರೆಯನ್ನು ಆಲಿಸಿದರು. ಸುಖದ ಸುಪ್ಪತ್ತಿಗೆ ಯಲ್ಲಿರಬೇಕಾದ ಅರಸನೊಬ್ಬ ರಾಜ್ಯವನ್ನು, ಅರಮನೆ ಯನ್ನು, ಹೆಂಡತಿ-ಮಕ್ಕಳನ್ನು ತೊರೆದು ಅಲೆಯುತ್ತಿರುವ ಚಿತ್ರವನ್ನು ಕಲ್ಪಿಸಿಕೊಂಡರು. ಪ್ರಪಂಚದ ದುಃಖ ದುಮ್ಮಾನವನ್ನು ಹೋಗಲಾಡಿಸುವ ಬಗ್ಗೆ ಚಿಂತಿಸುತ್ತಾ ಸದಾ ಜಿಜ್ಞಾಸೆಯಲ್ಲಿ ಅನ್ನ ಆಹಾರದ ಪರಿವೆ ಇಲ್ಲದೆ ಇರುವ ವ್ಯಕ್ತಿಯೊಬ್ಬ ಹೇಗಿರಬಹುದು ಎಂಬುದನ್ನು ಮನಸ್ಸಿನಲ್ಲಿಯೇ ಚಿತ್ರಿಸಿಕೊಂಡರು. ಇಂತಹ ವ್ಯಕ್ತಿ ಜ್ಞಾನೋದಯಿಯಾಗಿ ಸಿದ್ದಾರ್ಥ, ಬುದ್ಧನಾದ ಕಥೆ ಅವರ ಮನಸ್ಸಿಗೆ ನಾಟಿತು. ಅಂತೆಯೆ ಗ್ರೀಕ್ ಶಿಲ್ಪಿಗಳು ವಾಸ್ತವಿಕವಾಗಿ ಕೆತ್ತ ತೊಡಗಿದರು. ಪರಿಣಾಮವಾಗಿ ಗುಳಿ ಬಿದ್ದ ಕಪಾಳ, ಒಳಹೋದ ಕಣ್ಣಿನ ಮತ್ತು ಎದ್ದು ಕಾಣುವ ಸ್ನಾಯುವನ್ನು ಒಳಗೊಂಡ ಬುದ್ಧನನ್ನು ಕಲ್ಲಿನಲ್ಲಿ ಕಂಡರಿಸಿದರು. 

5. ಬುದ್ಧನಿಗೆ ನೆರಿಗೆಗಳುಳ್ಳ ವಸ್ತ್ರವಿನ್ಯಾಸದ ಪಾರದರ್ಶಕ ಉಡುಪು:

ಬುದ್ಧನಿಗೆ ತೊಡಿಸಿರುವ ಪೋಷಾಕನ್ನು ಚಿತ್ರಿಸುವಲ್ಲಿ ಗ್ರೀಕ್ ಶಿಲ್ಪಿಗಳು ತಮ್ಮ  ಪ್ರತಿಭೆಯನ್ನು ಮೆರೆದಿದ್ದಾರೆ. ಬುದ್ಧನ ಉಡುಪು ನೆರಿಗೆಯನ್ನು ಹೊಂದಿದ್ದು ಮಡಿಕೆಯೋಪಾದಿಯಲ್ಲಿದೆ. ದೇಹ ರಚನೆಯು ತೊಟ್ಟ ಬಟ್ಟೆಯ ಮೇಲಿನಿಂದಲೇ ಕಾಣುತ್ತಿದ್ದು, ಪಾರದರ್ಶಕವಾಗಿದೆ. ಉಡುಪು ಗ್ರೀಕರ ಟೋಗ ಮಾದರಿಯದಾಗಿದೆ.

6. ವಸ್ತು ವಿಷಯ ಮತ್ತು ಯೋಗಾಸನಭಂಗಿಯಲ್ಲಿ ಭಾರತೀಯತೆ:

ಈಗಿನ ಅಫಘಾನಿಸ್ತಾನದಲ್ಲಿ (ಗಾಂಧಾರ) ನೆಲಸಿದ್ದ ಗ್ರೀಕರು ತಮ್ಮ ಶಿಲ್ಪಕೆತ್ತನೆಗೆ ವಸ್ತು ವಿಷಯವಾಗಿ ಭಾರತೀಯ ಭಗವಾನ್ ಬುದ್ಧನನ್ನು ಆರಿಸಿಕೊಂಡರು. ಅಲ್ಲದೆ ಅವರ ಕೆತ್ತನೆಯಲ್ಲಿ ಭಾರತೀಯ ಮುನಿಗಳು, ಗರುಡರು, ಯಕ್ಷರು ಸಹ ಕಾಣಿಸಿಕೊಂಡರು. ಭಗವಾನ್ ಬುದ್ಧ ಕುಳಿತ ಭಂಗಿ ಯೋಗಾಸನ ಮಾದರಿ ಯದಾಗಿತ್ತು, ಕೆತ್ತಿದವನು ವಿದೇಶಿ ಹಿನ್ನೆಲೆಯ ಗ್ರೀಕ್ ಶಿಲ್ಪಿಯಾದರು ಅವರ ವಸ್ತು ವಿಷಯ ಭಾರತೀಯವಾಗಿದ್ದುದು ಮಹತ್ವದ ವಿಷಯವಾಗಿದೆ. ಆದ್ದರಿಂದ ಡಾ॥ ಆರ್.ಸಿ.ಮಜುಂದಾರ್ ಹೇಳುವಂತೆ ‘ಗಾಂಧಾರ ಶಿಲ್ಪಿ ಗ್ರೀಕ್ ಕೈಯಿ ಹೊಂದಿದ್ದರೆ ಹೃದಯ ಮಾತ್ರ ಭಾರತೀಯವಾಗಿತ್ತು ಎಂದಿದ್ದಾರೆ’

ಇತ್ತೀಚೆಗೆ 2001 ರಲ್ಲಿ ಅಫಘಾನಿಸ್ತಾನದ ಮತಾಂಧ ತಾಲಿಬಾನ್ ಸರ್ಕಾರವು ಅಮೂಲ್ಯ ಗಾಂಧಾರ ವಿಗ್ರಹಗಳನ್ನು ಭಗ್ನ ಗೊಳಿಸಿದೆ. ಫಿರಂಗಿ, ಟ್ಯಾಂಕ್, ಮದ್ದು ಗುಂಡುಗಳನ್ನು ಬಳಸಿ ವಿಗ್ರಹ ಭಂಜನೆ ಮಾಡಿ ತಾನೂ ನಾಶವಾಗಿದೆ. ಆ ಮೂಲಕ ತನ್ನ ನಾಡಿನ ಅಮೂಲ್ಯ ಸಂಸ್ಕೃತಿಯೊಂದನ್ನು ಸರ್ವನಾಶ ಮಾಡಿದೆ. ಇವುಗಳಲ್ಲಿ ಪ್ರಮುಖವಾಗಿ :

1. ಬಾಮಿಯಾನ್ ಬಂಡೆಯಲ್ಲಿಕೆತ್ತಲಾಗಿದ್ದ ಬುದ್ಧನ ವಿಗ್ರಹ. ಇದು 175 ಅಡಿ ಎತ್ತರವಿದ್ದು, ಜಗತ್ತಿನಲ್ಲಿಯೇ ಅತಿ ಎತ್ತರವಾಗಿತ್ತು.ಹ್ಯುಯನ್‌ ತ್ಸಾಂಗ್ ಇಲ್ಲಿಗೆ ಬೇಟಿಕೊಟ್ಟು ಈ ವಿಗ್ರಹವನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾನೆ.

2. ತಾಲಿಬಾನಿಗಳಿಂದನಾಶವಾದ ಮತ್ತೊಂದು ಪ್ರಸಿದ್ಧ ವಿಗ್ರಹವೆಂದರೆ ಸಾದ್ರಿ ಬಹಲೂಲ್ ಬುದ್ಧ. ಇದು 86 ಅಡಿ ಎತ್ತರವಿತ್ತು.3. ಕಾಬೂಲಿನ ರಾಷ್ಟ್ರೀಯ ಸಂಗ್ರಹಾಲಯದಲ್ಲಿದ್ದ ಸಾವಿರಾರು ವಿಗ್ರಹಗಳ ಅಂಗಛೇದವನ್ನು ತಾಲಿಬಾನ್ ಸರ್ಕಾರ ವ್ಯವಸ್ಥಿತವಾಗಿ ಮಾಡಿತು.

3. ಇಡೀ ವಿಶ್ವವೇ ಮನವಿ ಮಾಡಿಕೊಂಡರೂ ತಾಲಿಬಾನ್ ಸರ್ಕಾರ ಕಿವಿಗೊಡದೆ ತನ್ನ ವಿಗ್ರಹ ಭಂಜನೆಯ ಕೆಲಸವನ್ನು ಮುಂದುವರೆಸಿತು. ಸಂಸ್ಕೃತಿ ಮತ್ತು ನಾಗರೀಕತೆಯ ಇತಿಹಾಸದಲ್ಲಿ ತಮಗೆ ಸಂಸ್ಕೃತಿ ಮತ್ತು ನಾಗರೀಕತೆಯೇ ಇಲ್ಲವೆಂದು ಜಗತ್ತಿಗೆ ಜಾಹೀರು ಪಡಿಸಿತು. ಇದು ತಾಲಿಬಾನಿಗಳ ಕುಕೃತ್ಯದ ಕರ್ಮಕಾಂಡದ ವಿಗ್ರಹನಾಶದ ಕಥೆಯಾಗಿದೆ.

2. ಮಥುರಾ ಕಲಾ ಶೈಲಿ

ಮಥುರಾವನ್ನು ಕೇಂದ್ರಸ್ಥಾನವಾಗಿ ಹೊಂದಿ ಕಲೆಯು ಬೆಳವಣಿಗೆ ಹೊಂದಿದ್ದರಿಂದ ಮಥುರಾ ಕಲಾ ಶೈಲಿ ಎಂದೇ ಹೆಸರಾಗಿದೆ. ಮಥುರಾ ಶಿಲ್ಪದಲ್ಲಿ ಜೈನ ತೀರ್ಥಂಕರರು, ಬುದ್ಧ, ಬೋಧಿಸತ್ವರು ಹಾಗೂ ಸುಂದರಿಯರು, ಲಾವಣ್ಯವತಿಯರು, ಬ್ರಹ್ಮ, ವಿಷ್ಣು, ಶಿವ, ಸೂರ್ಯ, ಮಹಿಷಾಸುರ ಮರ್ದಿನಿ ಮೊದಲಾದ ಮೂರ್ತಿಗಳನ್ನು ಕೆತ್ತಲಾಗಿದೆ. ಕೆಲವು ಯುವತಿಯರ ಶಿಲ್ಪಗಳು ಅತ್ಯಂತ ನಯನ ಮನೋಹರವಾಗಿ ಮೂಡಿಬಂದಿವೆ. ‘ಯುವತಿಯು ಹಕ್ಕಿಗಳ ಜೊತೆ ಹಾಡುತ್ತಿರುವ ದೃಶ್ಯ, ಯುವತಿಯೊಬ್ಬಳು ಸ್ನಾನಮಾಡಿ ತಲೆಗೂದಲನ್ನು ಹಿಂಡುವಾಗ ನೀರನ್ನು ಹಕ್ಕಿಯು ಹೀರಲು ಯತ್ನಿಸುತ್ತಿರುವುದು, ಅಮೋಹಿನಿ ಉಬ್ಬುಶಿಲ್ಪ, ಕಾನಿಷ್ಕನ ಶಿಲ್ಪ ಅತ್ಯುತ್ತಮ ಶಿಲ್ಪಗಳಾಗಿವೆ. ಮಥುರಾ ಕಲಾ ಶೈಲಿಯಲ್ಲಿ ಭಾರತೀಯ ಅಂಶಗಳೇ ಹೆಚ್ಚಾಗಿರುವುದರಿಂದ ರಾಲಿನ್‌ನ್ ರವರು ಇದನ್ನು ‘ದೇಶಿಯ ಕಲಾ ಶೈಲಿ’ಯೆಂದೇ ವರ್ಣಿಸಿದ್ದಾರೆ. ಬುದ್ಧನ ಮೂರ್ತಿಯನ್ನು ಚಲಾವಣೆಗೆ ತಂದು ಭಾರತೀಕರಣಗೊಳಿಸಿದ ಕೀರ್ತಿ ಮಥುರಾ ಕಲಾ ಪಂಥದವರಿಗೆ ಸಲ್ಲುತ್ತದೆ ಎಂದು ಪ್ರೊ|| ರೋಮಿಲಾ ಥಾಪರ್ ಅಭಿಪ್ರಾಯಪಟ್ಟಿದ್ದಾರೆ.

3. ಸಾರನಾಥ ಕಲಾಪಂಥ

ಸಾರನಾಥ ಕಲಾಶೈಲಿಯು ಮಥುರಾ ಶೈಲಿಯಂತೆಯೇ ದೇಶಿಯ ಅಂಶಗಳನ್ನು ಒಳಗೊಂಡಿತ್ತು. ಇದು ವಿದೇಶಿಯ ಪ್ರಭಾವದಿಂದ ಮುಕ್ತಗೊಂಡಿತು. ʻಬಿಕ್ಷುಬಲನು’ ಕಾನಿಷ್ಕನ  ಆಳ್ವಿಕೆಯ ಕಾಲದಲ್ಲಿ ಬೋದಿಸತ್ವ ಮೂರ್ತಿಯನ್ನು ಸಾರನಾಥದಲ್ಲಿ ಕೆತ್ತಿಸಿದ್ದನು.

ವಾಸ್ತುಶಿಲ್ಪ

ಕುಶಾನರ ಕಾಲದಲ್ಲಿ ಮೂರ್ತಿಶಿಲ್ಪದಂತೆಯೇ ವಾಸ್ತುಶಿಲ್ಪಕೂಡ ಹೆಚ್ಚು ಅಭಿವೃದ್ಧಿಗೊಂಡಿತು. ಕಾನಿಷ್ಕನು ʻಎಜಿಸಿಲಾನ್’ಎಂಬ ಗ್ರೀಕ್ ವಾಸ್ತುಶಿಲ್ಪಿಗೆ ಆಶ್ರಯ ನೀಡಿದ್ದನು. ಪೇಷಾವರ್, ಕಾನಿಷ್ಕಪುರ, ತಕ್ಷಶಿಲೆ, ಮಥುರಾ ಮೊದಲಾದ ಪ್ರದೇಶಗಳಲ್ಲಿ ಅಪಾರ ಸಂಖ್ಯೆಯ ಕಟ್ಟಡಗಳು ನಿರ್ಮಿಸಲ್ಪಟ್ಟವು. ಅಂತಹವುಗಳಲ್ಲಿ ಸ್ತೂಪಗಳು, ವಿಹಾರಗಳು ಹಾಗೂ ಸಂಘರಾಮಗಳು ಸೇರಿವೆ. ಇಂತಹ ಅಮೂಲ್ಯ ಸ್ಮಾರಕಗಳು ಭಗ್ನಾವಶೇಷ ಸ್ಥಿತಿಯಲ್ಲಿವೆ. ಕಾನಿಷ್ಕನು ಅನೇಕ ಗೋಪುರಗಳನ್ನು ನಿರ್ಮಿಸಿದನು. ಕಾಶ್ಮೀರದಲ್ಲಿ ಕಾನಿಷ್ಕಪುರ ಎಂಬ ನಗರವನ್ನು ನಿರ್ಮಿಸಿದನು. ತಕ್ಷಶಿಲೆಯ ಸಿರ್‌ಸುರ್‌ ನಗರಕ್ಕೆ ಅಡಿಗಲ್ಲು ಹಾಕಿದನು. ಕಾನಿಷ್ಕನು ಪುರುಷಪುರವನ್ನು (ಪೇಷಾವರ್) ಅಭಿವೃದ್ಧಿಪಡಿಸಿದಂತೆ, ‘ಹುವಿಷ್ಕನು’ ಮಥುರಾವನ್ನು ಸ್ಮಾರಕಗಳು ಮತ್ತು ಶಿಲ್ಪಗಳಿಂದ ಅಂದಗೊಳಿಸಿದನು. ಹುವಿಷ್ಕನು ಕಾಶ್ಮೀರದಲ್ಲಿ ಹುವಿಷ್ಕಪುರ ಎಂಬ ನಗರವನ್ನು ನಿರ್ಮಿಸಿದನು.

ಮಹಾವೀರನ ಜೀವನ ಮತ್ತು ಬೋಧನೆಗಳು: ಜೈನ ಧರ್ಮದ 24 ನೇತೀರ್ಥಂಕರ

ಮಹಾವೀರನ ಜೀವನ ಮತ್ತು ಬೋಧನೆಗಳು: ಜೈನ ಧರ್ಮದ 24 ನೇತೀರ್ಥಂಕರ

ಪೀಠಿಕೆ:

ವರ್ಧಮಾನ ಎಂದೂ ಕರೆಯಲ್ಪಡುವ ಮಹಾವೀರ, ಜೈನ ಧರ್ಮದ 24 ನೇ ಮತ್ತು ಕೊನೆಯ ತೀರ್ಥಂಕರ, ಧರ್ಮವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಧ್ಯಾತ್ಮಿಕ ನಾಯಕ.

ಮಹಾವೀರನ ಪ್ರಮುಖ ಬೋಧನೆಗಳು ಅಹಿಂಸೆ, ಸತ್ಯ, ಬಾಂಧವ್ಯ ಮತ್ತು ಸ್ವಯಂ-ಶಿಸ್ತುಗಳಿಗೆ ಒತ್ತು ನೀಡಿವೆ. ಜೈನ ತತ್ತ್ವಶಾಸ್ತ್ರದ ಮೇಲೆ ಅವರ ಆಳವಾದ ಪ್ರಭಾವವು ಲಕ್ಷಾಂತರ ಜನರಿಗೆ ನೈತಿಕ ಮತ್ತು ಆಧ್ಯಾತ್ಮಿಕ ಜೀವನದ ಅನ್ವೇಷಣೆಯಲ್ಲಿ ಮಾರ್ಗದರ್ಶನ ನೀಡುತ್ತಲೇ ಇದೆ.

ಬಾಲ್ಯ

ಜೈನ ಧರ್ಮದ 24 ನೇ ತೀರ್ಥಂಕರರಾದ ವರ್ಧಮಾನ ಮಹಾವೀರರು ಕ್ರಿ.ಪೂ.599 ರಲ್ಲಿ  ಶುಕ್ಲ ತ್ರಯೋದಶಿಯ ಶುಭ ದಿನದಂದು ಇಂದಿನ ಬಿಹಾರದ ಪಾಟ್ನಾದಿಂದ ಸುಮಾರು 27 ಮೈಲಿ ದೂರದಲ್ಲಿರುವ ವೈಶಾಲಿ ಬಳಿಯ ಕುಂದಗ್ರಾಮದಲ್ಲಿ ಜನಿಸಿದರು. ಅವರು ಪ್ರಾಚೀನ ವೈಶಾಲಿ ಗಣರಾಜ್ಯದ ರಾಜಕುಮಾರರಾಗಿದ್ದ ಸಿದ್ಧಾರ್ಥ ಮತ್ತು ತ್ರಿಶಾಲಾದೇವಿಯವರಿಗೆ ಜನಿಸಿದರು. ಪಾರ್ಶ್ವನಾಥನ ಬೋಧನೆಗಳನ್ನು ಅನುಸರಿಸಿದ ಕುಟುಂಬದಲ್ಲಿ ಬೆಳೆದ ಮಹಾವೀರನು ಚಿಕ್ಕ ವಯಸ್ಸಿನಿಂದಲೇ ಜೈನ ಧರ್ಮದ ತತ್ವಗಳಿಗೆ ತೆರೆದುಕೊಂಡನು. ಅವರ ಶಿಕ್ಷಣವು ಸಂಪೂರ್ಣವಾಗಿತ್ತು ಮತ್ತು ಅವರಿಗೆ ಸಮೃದ್ಧ ಜೀವನಕ್ಕಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಯಿತು.

ವಿವಾಹಿತ ಜೀವನ

16 ನೇ ವಯಸ್ಸಿನಲ್ಲಿ, ವರ್ಧಮಾನನು ಯಶೋಧರ ಎಂಬ ಸುಂದರ ಮಹಿಳೆಯನ್ನು ಮದುವೆಯಾದನು ಮತ್ತು ಅವರಿಗೆ ಅನೋಜಾ (ಅಥವಾ ಪ್ರಿಯದರ್ಶಿನಿ) ಎಂಬ ಮಗಳು ಇದ್ದಳು. ಕೌಟುಂಬಿಕ ಜೀವನದ ಸೌಕರ್ಯಗಳ ಹೊರತಾಗಿಯೂ, ವರ್ಧಮಾನನು ಆಳವಾದ ಅಸಮಾಧಾನವನ್ನು ಅನುಭವಿಸಿದನು, ಅದು ಅವನನ್ನು ಧ್ಯಾನ ಮತ್ತು ಆಧ್ಯಾತ್ಮಿಕ ಜ್ಞಾನೋದಯವನ್ನು ಅನುಸರಿಸಲು ಕಾರಣವಾಯಿತು. ಅವರ ಹೆತ್ತವರ ಮರಣದ ನಂತರ, ಅವರು ತಮ್ಮ ಸಹೋದರನ ಅನುಮತಿಯನ್ನು ಪಡೆದು ಮತ್ತು 30 ನೇ ವಯಸ್ಸಿನಲ್ಲಿ ತಮ್ಮ ಕುಟುಂಬವನ್ನು ತೊರೆದರು.

ಕಠೋರ ತಪಸ್ಸು

13 ವರ್ಷಗಳ ಕಾಲ ವರ್ಧಮಾನನು ತಪಸ್ವಿಯಾಗಿ ಭಾರತದಾದ್ಯಂತ ಅಲೆದಾಡಿದನು. ಈ ಅವಧಿಯಲ್ಲಿ, ಅವರು ಕಟ್ಟುನಿಟ್ಟಾದ ಕಟ್ಟುಪಾಡುಗಳಿಗೆ ಬದ್ಧರಾಗಿದ್ದರು, ಒಂದೇ ಸ್ಥಳದಲ್ಲಿ ಒಂದು ದಿನಕ್ಕಿಂತ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಐದು ದಿನಗಳಿಗಿಂತ ಹೆಚ್ಚು ಕಾಲ ಯಾವುದೇ ಪಟ್ಟಣದಲ್ಲಿ  ಇರುತ್ತಿರಲಿಲ್ಲ. ಸಂಪೂರ್ಣ ಪರಿತ್ಯಾಗವನ್ನು ಸ್ವೀಕರಿಸುವ ಮೂಲಕ ಅವರು ಬೆತ್ತಲೆಯಾಗಿ ಅಲೆದಾಡಲು ಆಯ್ಕೆ ಮಾಡಿಕೊಂಡರು ಎಂದು ಹೇಳಲಾಗುತ್ತದೆ. ಈ ಜೀವನಶೈಲಿಯು ಅನೇಕರಿಂದ ಅಪಹಾಸ್ಯ ಮತ್ತು ಹಗೆತನವನ್ನು ಆಹ್ವಾನಿಸಿತು, ಜನರು ಕಲ್ಲುಗಳನ್ನು ಎಸೆಯುತ್ತಾರೆ ಮತ್ತು ಅವನನ್ನು ಹೆದರಿಸುತ್ತಾರೆ. ಆದರೂ ವರ್ಧಮಾನನು ಸತ್ಯದ ಅನ್ವೇಷಣೆಯಲ್ಲಿ ಹಿಂಜರಿಯಲಿಲ್ಲ.

ಅವರ ಪ್ರಯಾಣದಲ್ಲಿ ಗೋಶಾಲಾ ಎಂಬ ವ್ಯಕ್ತಿಯೊಂದಿಗೆ ಒಡನಾಟವನ್ನು ಹೊಂದಿದ್ದರು. ಅವರು ನಂತರ ಅಜೀವಿಕ ಪಂಥವನ್ನು ಮುನ್ನಡೆಸಲು ಹೊರಟರು. 42 ನೇ ವಯಸ್ಸಿನಲ್ಲಿ, ವರ್ಷಗಳ ತಪಸ್ವಿ ಅಭ್ಯಾಸಗಳ ನಂತರ, ವರ್ಧಮಾನನು ವೈಶಾಖ ಮಾಸದಲ್ಲಿ ಜೃಂಭಿಕಾ ಗ್ರಾಮದ ಬಳಿ ರಿಜುಪಾಲಿಕಾ ನದಿಯ ದಡದಲ್ಲಿ ಜ್ಞಾನೋದಯವನ್ನು ಪಡೆದನು. ಈ ಆಳವಾದ ಅನುಭವವನ್ನು ಅನುಸರಿಸಿ, ಅವರು ಕೆವಲಿನ್ ಅಥವಾ ಜಿನಾ ಎಂದು ಕರೆಯಲ್ಪಟ್ಟರು, ಅಂದರೆ “ವಿಜಯಶಾಲಿ”, ಇದು ಐದು ಇಂದ್ರಿಯಗಳ ಮೇಲೆ ಅವರ ಪಾಂಡಿತ್ಯವನ್ನು ಪ್ರತಿಬಿಂಬಿಸುವ ಶೀರ್ಷಿಕೆಯಾಗಿದೆ. ಹೀಗಾಗಿಯೇ ಅವರಿಗೆ ಮಹಾವೀರ ಎಂಬ ಹೆಸರು ಬಂದಿದೆ. ಅವರ ಅನುಯಾಯಿಗಳನ್ನು ಜೈನರೆಂದು ಕರೆಯಲು ಆರಂಭಿಸಿದರು.

ಧರ್ಮ ಪ್ರಚಾರ

ಮಹಾವೀರನು ತನ್ನ ಉಳಿದ ಜೀವನವನ್ನು ರಾಜಗೃಹ, ಚಂಪಾ, ಅಂಗ, ಮಗಧ, ಮಿಥಿಲಾ ಮತ್ತು ಕೋಸಲ ಪ್ರದೇಶಗಳಲ್ಲಿ ತನ್ನ ಜ್ಞಾನೋದಯದ ದೈವಿಕ ಸಂದೇಶವನ್ನು ಹರಡಲು ಮೀಸಲಿಟ್ಟನು. ಅವರ ಬೋಧನೆಗಳು ನೈತಿಕ ಜೀವನ ಮತ್ತು ಆಧ್ಯಾತ್ಮಿಕ ಶಿಸ್ತನ್ನು ಒತ್ತಿಹೇಳಿದವು.

ನಿರ್ವಾಣ

ಸುದೀರ್ಘ ಮತ್ತು ಪ್ರಭಾವಶಾಲಿ ಜೀವನದ ನಂತರ, ಮಹಾವೀರ ಕ್ರಿ.ಪೂ. 527 ರಲ್ಲಿ ರಾಜಗೃಹದ ಬಳಿಯ ಪಾವಾದಲ್ಲಿ 72 ನೇ ವಯಸ್ಸಿನಲ್ಲಿ ನಿರ್ವಾಣವನ್ನು ಪಡೆದರು.

ಮಹಾವೀರನ ಬೋಧನೆಗಳು

ಮಹಾವೀರನ ಬೋಧನೆಗಳ ತಿರುಳನ್ನು ಆಗಮ ಸಿದ್ಧಾಂತ, ಜೈನ ಪವಿತ್ರ ಗ್ರಂಥಗಳಲ್ಲಿ ಕಾಣಬಹುದು. ಅವರ ತತ್ವಗಳನ್ನು 12 ಜೈನ ಅಂಗಗಳಲ್ಲಿ ಅಚರಾಂಗ, ಉಪಾಂಗ, ದವಲ, ಮತ್ತು ಜಯದವಲ ಸೇರಿದಂತೆ ಪ್ರಮುಖ ಪಠ್ಯಗಳಲ್ಲಿ ಕಾಣಬಹುದು.

1. ಮೂರು ರತ್ನಗಳು

1. ಸಮ್ಯಕ್ ಜ್ಞಾನ (ಸರಿಯಾದ ಜ್ಞಾನ)

2. ಸಮ್ಯಕ್ ಚಿಂತನ (ಸರಿಯಾದ ಚಿಂತನೆ)

3. ಸಮ್ಯಕ್ ಚಾರಿತ್ರ್ಯ (ಸರಿಯಾದ ನಡತೆ)

2. ಐದು ಮಹಾ ತತ್ವಗಳು

ಮಹಾವೀರರು ನೈತಿಕ ಜೀವನಕ್ಕಾಗಿ ಐದು ಪ್ರಮುಖ ತತ್ವಗಳನ್ನು ಒತ್ತಿ ಹೇಳಿದರು:

1. ಅಹಿಂಸಾ (ಎಲ್ಲಾ ಜೀವಿಗಳಿಗೆ ಅಹಿಂಸೆ)

2. ಸತ್ಯ (ಸತ್ಯತೆ)

3. ಅಸ್ತೇಯ (ಕಳ್ಳತನ ಮಾಡದ)

4. ಅಪರಿಗ್ರಹ (ಭೌತಿಕ ಆಸ್ತಿಗಳಿಗೆ ಅಂಟಿಕೊಳ್ಳದಿರುವುದು)

5. ಬ್ರಹ್ಮಚರ್ಯ (ಇಂದ್ರಿಯ ಬಯಕೆಗಳ ಮೇಲಿನ ನಿಯಂತ್ರಣ)

ಪಾರ್ಶ್ವನಾಥ ಮೊದಲ ನಾಲ್ಕನ್ನು ಬೋಧಿಸಿದರೆ, ಮಹಾವೀರನು ಬ್ರಹ್ಮಚರ್ಯದ ಮಹತ್ವವನ್ನು ಎತ್ತಿ ತೋರಿಸುವ ಬ್ರಹ್ಮಚರ್ಯದ ತತ್ವವನ್ನು ಸೇರಿಸಿದನು.

3. ಅಹಿಂಸೆ

ಮಹಾವೀರನ ಬೋಧನೆಗಳ ಕೇಂದ್ರವು ಅಹಿಂಸಾ ಅಥವಾ ಅಹಿಂಸೆಯ ಪರಿಕಲ್ಪನೆಯಾಗಿದೆ, ಇದನ್ನು ಅವರು ಅತ್ಯುನ್ನತ ಧಾರ್ಮಿಕ ತತ್ವವೆಂದು ಘೋಷಿಸಿದರು. ಅವರು ಪ್ರಾಣಿ ಹಿಂಸೆಯನ್ನು ಬಲವಾಗಿ ಖಂಡಿಸಿದರು ಮತ್ತು ಎಲ್ಲಾ ಜೀವ ರೂಪಗಳ ರಕ್ಷಣೆಯನ್ನು ಪ್ರತಿಪಾದಿಸಿದರು. ಮಹಾವೀರನ ಪ್ರಕಾರ, ಎಲ್ಲಾ ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು, ಮರಗಳು, ಕಲ್ಲುಗಳು, ಮಣ್ಣು, ನೀರು ಮತ್ತು ಬೆಂಕಿ-ಜೀವನವನ್ನು ಹೊಂದಿವೆ ಮತ್ತು ಅವು ಬಳಲಬಾರದು. ಅಹಿಂಸೆಯ ಈ ಆಳವಾದ ಬದ್ಧತೆಯು ಅನೇಕ ಜೈನರು ಕೃಷಿಯನ್ನು ತ್ಯಜಿಸಲು ಕಾರಣವಾಯಿತು, ಕೃಷಿ ಪದ್ಧತಿಯಲ್ಲಿ ಕೀಟಗಳು ಮತ್ತು ಸಸ್ಯಗಳಿಗೆ ನೋವನ್ನುಂಟುಮಾಡುತ್ತವೆ ಎಂದು ನಂಬಿದ್ದರು.

4. ಕರ್ಮ ಮತ್ತು ಪುನರ್ಜನ್ಮ

ಜೈನರು ಕರ್ಮ ಮತ್ತು ಪುನರ್ಜನ್ಮದ ನಂಬಿಕೆಗಳಿಗೆ ಬದ್ಧರಾಗಿರುತ್ತಾರೆ, ಕರ್ಮವನ್ನು ಆತ್ಮಕ್ಕೆ ಅಂಟಿಕೊಳ್ಳುವ ಶೇಷವಾಗಿ ನೋಡುತ್ತಾರೆ. ಒಬ್ಬರ ಕ್ರಿಯೆಗಳು (ಕರ್ಮಗಳು) ಭವಿಷ್ಯದ ಪುನರ್ಜನ್ಮದ ಸಂದರ್ಭಗಳನ್ನು ನಿರ್ದೇಶಿಸುತ್ತವೆ ಎಂದು ಮಹಾವೀರರು ಕಲಿಸಿದರು. ನೀತಿವಂತ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ವ್ಯಕ್ತಿಗಳು ತಮ್ಮ ಆತ್ಮಗಳನ್ನು ಶುದ್ಧೀಕರಿಸಬಹುದು ಮತ್ತು ಪುನರ್ಜನ್ಮದ ಚಕ್ರವನ್ನು ಮುರಿಯಬಹುದು. 

ಉಪಸಂಹಾರ

ಮಹಾವೀರರ ಜೀವನ ಮತ್ತು ಬೋಧನೆಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಲೇ ಇವೆ. ಅಹಿಂಸೆ, ಸತ್ಯ ಮತ್ತು ನೈತಿಕ ಜೀವನಕ್ಕೆ ಅವರ ಒತ್ತು ಆಧ್ಯಾತ್ಮಿಕ ವಿಮೋಚನೆ ಮತ್ತು ಸಾಮರಸ್ಯದ ಅಸ್ತಿತ್ವವನ್ನು ಸಾಧಿಸಲು ಸಮಯರಹಿತ ಚೌಕಟ್ಟನ್ನು ಒದಗಿಸುತ್ತದೆ. ಕೊನೆಯ ತೀರ್ಥಂಕರನಾಗಿ ಶಾಂತಿ ಮತ್ತು ಸದಾಚಾರದ ನಾಯಕರಾಗಿ ಮಹಾವೀರನ ಪರಂಪರೆಯು ಜೈನ ತತ್ತ್ವಶಾಸ್ತ್ರದೊಳಗೆ ಮತ್ತು ಅದರಾಚೆಗೆ ಆಳವಾಗಿ ಪ್ರತಿಧ್ವನಿಸುತ್ತದೆ.

ಸಿಂಧೂ ನಾಗರಿಕತೆಯ ನಗರ ಯೋಜನೆ

ಸಿಂಧೂ ನಾಗರಿಕತೆಯ ನಗರ ಯೋಜನೆ

ಸಿಂಧೂ ನಾಗರಿಕತೆ, ಅತ್ಯಂತ ಗಮನಾರ್ಹವಾದ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿದ್ದು, ನಂಬಲಾಗದ ನಗರ ಯೋಜನೆಗಳ ಪರಂಪರೆಯನ್ನು ಬಿಟ್ಟುಹೋಗಿದೆ. ನಗರಗಳು, ನಿರ್ದಿಷ್ಟವಾಗಿ ಹರಪ್ಪ ಸಂಸ್ಕೃತಿಯ, ಸುಧಾರಿತ ಮತ್ತು ನಿಖರವಾದ ವಿನ್ಯಾಸಗಳನ್ನು ಪ್ರದರ್ಶಿಸಿದವು, ಅದು ಅನೇಕ ವಿಧಗಳಲ್ಲಿ, ಅವರ ಕಾಲಕ್ಕಿಂತ ಮುಂದಿತ್ತು. ಅವರ ನಗರ ಯೋಜನೆಯ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ನೋಡೋಣ:

1. ನಗರ ಯೋಜನೆ: ವಿಶಾಲವಾದ, ಉತ್ತಮವಾಗಿ-ರಚನಾತ್ಮಕ ಬೀದಿಗಳು:

ಮೊಹೆಂಜೋದಾರೊದಂತಹ ಗಮನಾರ್ಹ ನಗರಗಳನ್ನು ಒಳಗೊಂಡಂತೆ ಹರಪ್ಪ ಸಂಸ್ಕೃತಿಯ ನಗರಗಳು ಆಧುನಿಕ ನಗರ ವಿನ್ಯಾಸಕ್ಕೆ ಪ್ರತಿಸ್ಪರ್ಧಿಯಾಗುವಂತೆ ನಿಖರವಾಗಿ ಯೋಜಿಸಲಾಗಿದೆ. ಬೀದಿಗಳು ಅಗಲ ಮತ್ತು ನೇರವಾಗಿರುವುದು ಮಾತ್ರವಲ್ಲದೆ ಗ್ರಿಡ್ ಮಾದರಿಯಲ್ಲಿಯೂ ಸಹ ಹಾಕಲ್ಪಟ್ಟವು, ಕೆಲವು ಬೀದಿಗಳು 32 ಅಡಿ ಅಗಲ ಮತ್ತು ಒಂದು ಮೈಲಿ ಉದ್ದದವರೆಗೆ ವಿಸ್ತರಿಸಲ್ಪಟ್ಟಿವೆ. ಇದು ಗಮನಾರ್ಹವಾದ ದಟ್ಟಣೆಯ ಹರಿವಿಗೆ ಅವಕಾಶ ಮಾಡಿಕೊಟ್ಟಿತು. ಐತಿಹಾಸಿಕ ಪುರಾವೆಗಳು ಮೊಹೆಂಜೊದಾರೊದ ಮುಖ್ಯ ಬೀದಿಯಲ್ಲಿ ಏಳು ಬಂಡಿಗಳು ಅಕ್ಕಪಕ್ಕದಲ್ಲಿ ಚಲಿಸಬಹುದೆಂದು ಸೂಚಿಸುತ್ತವೆ. ಸೆಕೆಂಡರಿ ಬೀದಿಗಳು ಕಿರಿದಾಗಿದ್ದರೂ (9 ರಿಂದ 34 ಅಡಿಗಳವರೆಗೆ), ಅದೇ ನೇರವಾದ, ಆಯತಾಕಾರದ ವಿನ್ಯಾಸವನ್ನು ನಿರ್ವಹಿಸಿ, ನಗರದ ಸಮರ್ಥ ಚಲನೆಯನ್ನು ಹೆಚ್ಚಿಸಿತು.

ಅಂತಹ ವ್ಯವಸ್ಥೆಯು ಸಿಂಧೂ ನಾಗರಿಕತೆಯು ಸೌಂದರ್ಯಶಾಸ್ತ್ರಕ್ಕೆ ಮಾತ್ರವಲ್ಲದೆ ಕ್ರಿಯಾತ್ಮಕತೆಗೆ ಆದ್ಯತೆ ನೀಡಿದೆ. ಇದು ತಮ್ಮ ನಗರಗಳಲ್ಲಿ ವ್ಯಾಪಾರ, ಸಂವಹನ ಮತ್ತು ಸಾರಿಗೆಯನ್ನು ಸುಗಮಗೊಳಿಸುವ ಸಂಘಟಿತ ನಗರ ಪರಿಸರವನ್ನು ಸೃಷ್ಟಿಸಿದೆ.

2. ಬೀದಿ ದೀಪಗಳು ಮತ್ತು ಕಸದ ತೊಟ್ಟಿಗಳು: ಆರಂಭಿಕ ಸಾರ್ವಜನಿಕ ಉಪಯುಕ್ತತೆಗಳು:

ಸಿಂಧೂ ನಗರ ಯೋಜನೆಯ ಅತ್ಯಂತ ಆಕರ್ಷಕ ಅಂಶವೆಂದರೆ ಸಾರ್ವಜನಿಕ ಮೂಲಸೌಕರ್ಯಕ್ಕೆ ಅವರ ಗಮನ. ಉತ್ಖನನ ಸ್ಥಳಗಳಲ್ಲಿ ಗಮನಾರ್ಹ ಸಂಖ್ಯೆಯ ದೀಪ ಸ್ತಂಭಗಳು ಕಂಡುಬಂದಿವೆ, ಇದು ಬೀದಿ ದೀಪ ವ್ಯವಸ್ಥೆಯ ಉಪಸ್ಥಿತಿಯನ್ನು ಸೂಚಿಸುತ್ತದೆ. ಇದು ಆ ಯುಗದ ಪ್ರಭಾವಶಾಲಿ ಸಾಧನೆಯಾಗಿದೆ. ಇದು ಕತ್ತಲ ರಾತ್ರಿಗೆ ಬೆಳಕನ್ನು ಒದಗಿಸುತ್ತ ಆ ಹೊತ್ತಿನಲ್ಲೂ ನಗರಗಳನ್ನು ಹೆಚ್ಚು ಸಂಚಾರಯೋಗ್ಯವಾಗಿಸುತ್ತಿತ್ತು.

ಬೀದಿ ದೀಪಗಳ ಜೊತೆಗೆ, ನಗರಗಳು ಪ್ರತಿ ರಸ್ತೆಯಲ್ಲೂ ಸಾರ್ವಜನಿಕ ಬಾವಿಗಳನ್ನು ಹೊಂದಿದ್ದು, ನಿವಾಸಿಗಳಿಗೆ ನೀರಿನ ಅಗತ್ಯವನ್ನು ಪೂರೈಸುತ್ತಿತ್ತು. ಕಸದ ತೊಟ್ಟಿಗಳನ್ನು ಆಯಕಟ್ಟಿನ ರೀತಿಯಲ್ಲಿ ಬೀದಿಗಳಲ್ಲಿ ಇರಿಸಲಾಯಿತು, ಇದು ಮನೆಯ ತ್ಯಾಜ್ಯವನ್ನು ನಿರ್ವಹಿಸಲು ಮತ್ತು ಎಲ್ಲೆಂದರಲ್ಲಿ ಕಸವನ್ನು ಬಿಸಾಕುವ ಪ್ರವೃತ್ತಿಯನ್ನು ತಡೆಗಟ್ಟಲು ನವೀನ ಪರಿಹಾರವಾಗಿದೆ. ಇದು ಉನ್ನತ ಮಟ್ಟದ ನಾಗರಿಕ ಜಾಗೃತಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

3. ಸುಧಾರಿತ ಒಳಚರಂಡಿ ವ್ಯವಸ್ಥೆ: ಸ್ವಚ್ಛತೆ ಮತ್ತು ನೈರ್ಮಲ್ಯ:

ಸಿಂಧೂ ನಾಗರಿಕತೆಯ ನಗರಗಳಲ್ಲಿನ ಒಳಚರಂಡಿ ವ್ಯವಸ್ಥೆಗಳು ಅಸಾಮಾನ್ಯವಾದುದೇನೂ ಆಗಿರಲಿಲ್ಲ. ಬೀದಿಗಳ ಎರಡೂ ಬದಿಗಳಲ್ಲಿ ಚರಂಡಿಗಳನ್ನು ನಿರ್ಮಿಸಲಾಗಿದೆ. ಸಣ್ಣ ಬೀದಿಗಳಿಗೆ 1 ರಿಂದ 2 ಅಡಿ ಮತ್ತು ಮುಖ್ಯ ಚರಂಡಿಗಳಿಗೆ 5 ಅಡಿ ಆಳದಲ್ಲಿ ವ್ಯತ್ಯಾಸವಿದೆ. ಈ ಅಂತರ್‌ಸಂಪರ್ಕಿತ ಚರಂಡಿಗಳು ನದಿಗಳಿಗೆ ದಾರಿ ಮಾಡಿಕೊಟ್ಟು, ಸಮರ್ಥ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಖಾತ್ರಿಪಡಿಸಿದವು. ಗಮನಾರ್ಹವಾದ ವಿಷಯವೆಂದರೆ ಚರಂಡಿಗಳನ್ನು ಕಲ್ಲು ಮತ್ತು ಸುಟ್ಟ ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ ಮತ್ತು ಕಲ್ಲಿನ ಚಪ್ಪಡಿಗಳಿಂದ ಮುಚ್ಚಲಾಗಿದೆ. ಇದು ಬಾಳಿಕೆ ಮತ್ತು ವಿನ್ಯಾಸ ಪರಿಣತಿಯನ್ನು ಪ್ರದರ್ಶಿಸುತ್ತದೆ.

ಶೌಚಾಲಯದಿಂದ ಮನೆಯ ತ್ಯಾಜ್ಯ ನೀರನ್ನು ಟೈಲ್ಡ್ ಪೈಪ್‌ಗಳ ಮೂಲಕ ಬೀದಿ ಚರಂಡಿಗಳಿಗೆ ಬಿಡಲಾಗುತ್ತಿತ್ತು. ಇದರಿಂದ ನೀರು  ಎಲ್ಲಿಯೂ ನಿಲ್ಲುತ್ತಿರಲಿಲ್ಲ. ಆಧುನಿಕ ಮಾದರಿಯ ಮ್ಯಾನ್‌ಹೋಲ್‌ಗಳು ಇದ್ದು, ಇದರಿಂದ ಜನರು ನಿಯಮಿತವಾಗಿ ಚರಂಡಿಗಳನ್ನು ಸ್ವಚ್ಛಗೊಳಿಸಲು ಅವಕಾಶ ಸಿಗುತ್ತಿತ್ತು. ಕೆಲವು ನಗರಗಳು ಚರಂಡಿಗಳ ಬಳಿ ಬಾವಿಗಳನ್ನು ಹೊಂದಿದ್ದವು. ಆದರೂ ಇದು ಸಾಂದರ್ಭಿಕವಾಗಿ ಮಾಲಿನ್ಯಕ್ಕೆ ಕಾರಣವಾಯಿತು, ಇದೊಂದು  ಪ್ರಾಚೀನ ಕಾಲದ ಅದ್ಭುತ ವ್ಯವಸ್ಥೆಯಲ್ಲಿ ಒಂದು ಸಣ್ಣ ದೋಷವಾಗಿದೆ.

ಉಪಸಂಹಾರ:

ಸಿಂಧೂ ನಾಗರಿಕತೆಯ ನಗರ ಯೋಜನೆಯು ಭೂತಕಾಲಕ್ಕೆ ಆಕರ್ಷಕ ಕಿಟಕಿಯನ್ನು ಒದಗಿಸುತ್ತದೆ, ಇದು ಆದೇಶ, ಸ್ವಚ್ಛತೆ ಮತ್ತು ಸಾರ್ವಜನಿಕ ಕಲ್ಯಾಣವನ್ನು ಗೌರವಿಸುವ ಸಮಾಜವನ್ನು ಬಹಿರಂಗಪಡಿಸುತ್ತದೆ. ಅವರ ಮುಂದುವರಿದ ನಗರ ವಿನ್ಯಾಸಗಳು, ಸಮಗ್ರ ಒಳಚರಂಡಿ ವ್ಯವಸ್ಥೆಗಳು ಮತ್ತು ಚಿಂತನಶೀಲ ಸಾರ್ವಜನಿಕ ಉಪಯುಕ್ತತೆಗಳು ಉನ್ನತ ಮಟ್ಟದ ನಾಗರಿಕ ಸಂಘಟನೆಯನ್ನು ಸೂಚಿಸುತ್ತವೆ. ಸಿಂಧೂ ನಾಗರಿಕತೆಯು ನಗರ ಅಭಿವೃದ್ಧಿಯ ವಿಷಯದಲ್ಲಿ ಅದರ ಕಾಲಕ್ಕಿಂತ ಬಹಳ ಮುಂದಿದೆ ಎಂಬುದನ್ನು  ತೋರಿಸುತ್ತದೆ.

ಭಾರತೀಯ ಇತಿಹಾಸದಲ್ಲಿ ನವಶಿಲಾಯುಗದ ಅವಧಿ

ಭಾರತೀಯ ಇತಿಹಾಸದಲ್ಲಿ ನವಶಿಲಾಯುಗದ ಅವಧಿ

ಹೊಸ ಶಿಲಾಯುಗ ಎಂದೂ ಕರೆಯಲ್ಪಡುವ ನವಶಿಲಾಯುಗದ ಅವಧಿಯು ಭಾರತೀಯ ಇತಿಹಾಸದಲ್ಲಿ ಮಹತ್ವದ ಯುಗವನ್ನು ಗುರುತಿಸುತ್ತದೆ, ಅಲೆಮಾರಿ ಜೀವನಶೈಲಿಯಿಂದ ನೆಲೆಸಿದ ಕೃಷಿ ಸಮುದಾಯಗಳಿಗೆ ಪರಿವರ್ತನೆಯಿಂದ ನಿರೂಪಿಸಲ್ಪಟ್ಟಿದೆ. ಈ ಅವಧಿಯು ಸರಿಸುಮಾರು 7000 BCE ನಿಂದ 1000 BCE ವರೆಗೆ ವ್ಯಾಪಿಸಿದೆ, ಇದು ಭಾರತೀಯ ಉಪಖಂಡದಲ್ಲಿ ನಾಗರೀಕತೆಯ ಉದಯವನ್ನು ಪ್ರತಿನಿಧಿಸುತ್ತದೆ, ಉಪಕರಣಗಳು, ಕೃಷಿ ಮತ್ತು ಸಾಮಾಜಿಕ ಸಂಘಟನೆಯಲ್ಲಿ ಪ್ರಗತಿಯನ್ನು ಹೊಂದಿದೆ.

ನವಶಿಲಾಯುಗ ಕಾಲದ ಪ್ರಮುಖ ಲಕ್ಷಣಗಳು
1. ಕೃಷಿಗೆ ಪರಿವರ್ತನೆ

* ನವಶಿಲಾಯುಗದ ಅವಧಿಯು ಬೇಟೆಯಾಡುವಿಕೆ ಮತ್ತು ಸಂಗ್ರಹಣೆಯಿಂದ ಕೃಷಿಗೆ ಪ್ರಾಥಮಿಕ ಜೀವನೋಪಾಯದ ಮಾರ್ಗವನ್ನು ಕಂಡಿತು.

* ಜನರು ಗೋಧಿ, ಬಾರ್ಲಿ, ಮಸೂರ ಮತ್ತು ಅಕ್ಕಿಯಂತಹ ಬೆಳೆಗಳನ್ನು ಮತ್ತು ದನ, ಕುರಿ ಮತ್ತು ಮೇಕೆಗಳಂತಹ ಸಾಕುಪ್ರಾಣಿಗಳನ್ನು ಬೆಳೆಸಿದರು.

2. ಸೆಟ್ಲ್ಮೆಂಟ್ ಪ್ಯಾಟರ್ನ್ಸ್

* ಶಾಶ್ವತ ಗ್ರಾಮಗಳ ಸ್ಥಾಪನೆಯಿಂದ ಅವಧಿಯನ್ನು ಗುರುತಿಸಲಾಗಿದೆ.

* ಆರಂಭಿಕ ವಸಾಹತುಗಳು ನದಿಗಳ ಬಳಿ ನೆಲೆಗೊಂಡಿವೆ, ಇದು ಕೃಷಿ ಮತ್ತು ಫಲವತ್ತಾದ ಮಣ್ಣಿಗೆ ನೀರನ್ನು ಒದಗಿಸಿತು.

ಭಾರತದಲ್ಲಿನ ಪ್ರಮುಖ ನವಶಿಲಾಯುಗದ ತಾಣಗಳು ಸೇರಿವೆ:
ಮೆಹರ್‌ಗಢ್ (ಇಂದಿನ ಪಾಕಿಸ್ತಾನ):

7000 BCE ಗೆ ಹಿಂದಿನ ಕೃಷಿ ವಸಾಹತುಗಳಲ್ಲಿ ಒಂದಾಗಿದೆ.

ಬುರ್ಜಾಹೋಮ್ (ಕಾಶ್ಮೀರ):

ಪಿಟ್ ವಾಸಸ್ಥಾನಗಳು ಮತ್ತು ಉಪಕರಣಗಳಿಗೆ ಹೆಸರುವಾಸಿಯಾಗಿದೆ.

ಚಿರಂದ್ (ಬಿಹಾರ):

ಭತ್ತದ ಕೃಷಿಯ ಪುರಾವೆ.

ಬ್ರಹ್ಮಗಿರಿ (ಕರ್ನಾಟಕ):

ಬೂದಿ ದಿಬ್ಬಗಳು ಮತ್ತು ಪಶುಪಾಲನೆಗೆ ಹೆಸರುವಾಸಿಯಾಗಿದೆ.

3. ಉಪಕರಣ ಮತ್ತು ಕುಂಬಾರಿಕೆ ಪ್ರಗತಿಗಳು

* ಕೃಷಿ, ಬೇಟೆ ಮತ್ತು ನಿರ್ಮಾಣಕ್ಕಾಗಿ ನಯಗೊಳಿಸಿದ ಕಲ್ಲಿನ ಉಪಕರಣಗಳನ್ನು ಬಳಸುವುದರೊಂದಿಗೆ ಉಪಕರಣಗಳು ಹೆಚ್ಚು ಪರಿಷ್ಕರಿಸಲ್ಪಟ್ಟವು.

* ಕುಂಬಾರಿಕೆಯು ಒಂದು ಅತ್ಯಗತ್ಯ ಕರಕುಶಲವಾಗಿ ಹೊರಹೊಮ್ಮಿತು, ಸಂಗ್ರಹಣೆ ಮತ್ತು ಅಡುಗೆಗಾಗಿ ಕೈಯಿಂದ ಮಾಡಿದ ಮತ್ತು ನಂತರ ಚಕ್ರ-ನಿರ್ಮಿತ ಮಡಕೆಗಳ ಉತ್ಪಾದನೆಯೊಂದಿಗೆ.

ಈ ಯುಗದ ಚಿತ್ರಿಸಿದ ಮಡಿಕೆಗಳು ಕಲಾತ್ಮಕ ಅಭಿವ್ಯಕ್ತಿಯ ಆರಂಭಿಕ ಚಿಹ್ನೆಗಳನ್ನು ತೋರಿಸುತ್ತದೆ.

4. ಪ್ರಾಣಿಗಳ ಸಾಕಣೆ

* ಕೃಷಿಯ ಜೊತೆಗೆ, ಪ್ರಾಣಿಗಳ ಪಳಗಿಸುವಿಕೆಯು ನವಶಿಲಾಯುಗದ ಜೀವನದ ನಿರ್ಣಾಯಕ ಭಾಗವಾಯಿತು.

* ಜನರು ದನ, ಕುರಿ, ಮೇಕೆ ಮತ್ತು ಹಂದಿಗಳನ್ನು ಆಹಾರ, ಕಾರ್ಮಿಕ ಮತ್ತು ಇತರ ಸಂಪನ್ಮೂಲಗಳಿಗಾಗಿ ಸಾಕಿದರು.

5. ಸಾಮಾಜಿಕ ಸಂಸ್ಥೆ

* ಶಾಶ್ವತ ವಸಾಹತುಗಳ ಹೊರಹೊಮ್ಮುವಿಕೆಯು ಸಂಘಟಿತ ಸಮಾಜಗಳ ಅಭಿವೃದ್ಧಿಗೆ ಕಾರಣವಾಯಿತು.

* ಕಾರ್ಮಿಕರ ವಿಭಜನೆ ಇತ್ತು, ವಿಭಿನ್ನ ವ್ಯಕ್ತಿಗಳು ಕೃಷಿ, ಉಪಕರಣ ತಯಾರಿಕೆ ಮತ್ತು ಕುಂಬಾರಿಕೆಯಲ್ಲಿ ಪರಿಣತಿ ಹೊಂದಿದ್ದರು.

6. ಧಾರ್ಮಿಕ ನಂಬಿಕೆಗಳು

* ನವಶಿಲಾಯುಗದ ಅವಧಿಯಲ್ಲಿ ಆರಂಭಿಕ ಧಾರ್ಮಿಕ ಆಚರಣೆಗಳು ಪ್ರಾರಂಭವಾದವು.

* ಜನರು ಸಮಾಧಿ ಆಚರಣೆಗಳು ಮತ್ತು ಮರಣಾನಂತರದ ಜೀವನದಲ್ಲಿ ನಂಬಿಕೆಯನ್ನು ಸೂಚಿಸುವ ಸಮಾಧಿ ವಸ್ತುಗಳ ಪುರಾವೆಗಳೊಂದಿಗೆ ಪ್ರಕೃತಿ ಮತ್ತು ನೈಸರ್ಗಿಕ ಶಕ್ತಿಗಳನ್ನು ಪೂಜಿಸಿದರು.

ಭಾರತದಲ್ಲಿನ ಪ್ರಮುಖ ನವಶಿಲಾಯುಗದ ತಾಣಗಳು
1. ಮೆಹರ್ಗಢ್

ಬಲೂಚಿಸ್ತಾನದಲ್ಲಿ (ಇಂದಿನ ಪಾಕಿಸ್ತಾನ) ಇದೆ.

ಅತ್ಯಾಧುನಿಕ ಉಪಕರಣಗಳು ಮತ್ತು ಕುಂಬಾರಿಕೆಯೊಂದಿಗೆ ಬೇಸಾಯ ಮತ್ತು ದನಗಾಹಿಗಳ ಆರಂಭಿಕ ಪುರಾವೆಗಳು.

2. ಬುರ್ಜಾಹೋಮ್

ಕಾಶ್ಮೀರದಲ್ಲಿದೆ.

ಪಿಟ್ ವಾಸಸ್ಥಾನಗಳು, ಕಲ್ಲಿನ ಉಪಕರಣಗಳು ಮತ್ತು ಬೇಟೆಯಾಡುವುದು ಮತ್ತು ಬೇಸಾಯದ ಪುರಾವೆಗಳಿಗೆ ಹೆಸರುವಾಸಿಯಾಗಿದೆ.

3. ಚಿರಂಡ್

ಬಿಹಾರದಲ್ಲಿದೆ.

ಭತ್ತದ ಕೃಷಿ, ಕುಂಬಾರಿಕೆ ಮತ್ತು ಮೂಳೆ ಉಪಕರಣಗಳ ಪುರಾವೆ.

4. ದೌಜಲಿ ಹ್ಯಾಡಿಂಗ್

ಅಸ್ಸಾಂನಲ್ಲಿ ಕಂಡುಬಂದಿದೆ.

ನಯಗೊಳಿಸಿದ ಕಲ್ಲಿನ ಉಪಕರಣಗಳು ಮತ್ತು ಕೈಯಿಂದ ಮಾಡಿದ ಮಡಿಕೆಗಳಿಗೆ ಹೆಸರುವಾಸಿಯಾಗಿದೆ.

5. ಬ್ರಹ್ಮಗಿರಿ

ಕರ್ನಾಟಕದಲ್ಲಿದೆ.

ಬೂದಿ ದಿಬ್ಬಗಳ ಪುರಾವೆ ಮತ್ತು ಜಾನುವಾರುಗಳ ಆರಂಭಿಕ ಪಳಗಿಸುವಿಕೆ.

ಬಲೂಚಿಸ್ತಾನದಲ್ಲಿ (ಇಂದಿನ ಪಾಕಿಸ್ತಾನ) ಇದೆ.

ಅತ್ಯಾಧುನಿಕ ಉಪಕರಣಗಳು ಮತ್ತು ಕುಂಬಾರಿಕೆಯೊಂದಿಗೆ ಬೇಸಾಯ ಮತ್ತು ದನಗಾಹಿಗಳ ಆರಂಭಿಕ ಪುರಾವೆಗಳು.

ಭಾರತೀಯ ಇತಿಹಾಸದಲ್ಲಿ ನವಶಿಲಾಯುಗ ಕಾಲದ ಮಹತ್ವ
1. ನಾಗರಿಕತೆಯ ಅಡಿಪಾಯ

ನವಶಿಲಾಯುಗದ ಅವಧಿಯು ಸಿಂಧೂ ಕಣಿವೆ ನಾಗರಿಕತೆಯಂತಹ ನಗರ ನಾಗರಿಕತೆಗಳ ನಂತರದ ಬೆಳವಣಿಗೆಗೆ ಅಡಿಪಾಯವನ್ನು ಹಾಕಿತು.

2. ತಂತ್ರಜ್ಞಾನದಲ್ಲಿ ಪ್ರಗತಿಗಳು

ಉಪಕರಣಗಳ ಪರಿಷ್ಕರಣೆ ಮತ್ತು ಕುಂಬಾರಿಕೆಯ ಆವಿಷ್ಕಾರವು ಗಮನಾರ್ಹ ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸಿತು.

3. ಕೃಷಿ ಕ್ರಾಂತಿ

ಕೃಷಿಯ ಅಳವಡಿಕೆಯು ಮಾನವ ಸಮಾಜವನ್ನು ಪರಿವರ್ತಿಸಿತು, ಜನಸಂಖ್ಯೆಯ ಬೆಳವಣಿಗೆ ಮತ್ತು ಶಾಶ್ವತ ವಸಾಹತುಗಳನ್ನು ಸಕ್ರಿಯಗೊಳಿಸಿತು.

4. ಸಾಂಸ್ಕೃತಿಕ ವಿಕಾಸ

ನವಶಿಲಾಯುಗದ ಯುಗವು ಕುಂಬಾರಿಕೆ-ತಯಾರಿಕೆ, ಉಪಕರಣ-ತಯಾರಿಕೆ ಮತ್ತು ನೈಸರ್ಗಿಕ ಅಂಶಗಳ ಆರಾಧನೆಯಂತಹ ಸಾಂಸ್ಕೃತಿಕ ಆಚರಣೆಗಳ ಆರಂಭವನ್ನು ಗುರುತಿಸಿತು.

5. ಚಾಲ್ಕೋಲಿಥಿಕ್ ಯುಗಕ್ಕೆ ಪರಿವರ್ತನೆ

ನವಶಿಲಾಯುಗವು ಕಲ್ಲಿನ ಉಪಕರಣಗಳ ಜೊತೆಗೆ ಲೋಹದ ಉಪಕರಣಗಳು, ವಿಶೇಷವಾಗಿ ತಾಮ್ರವನ್ನು ಪರಿಚಯಿಸುವುದರೊಂದಿಗೆ ಚಾಲ್ಕೊಲಿಥಿಕ್ ಯುಗಕ್ಕೆ ಪರಿವರ್ತನೆಯಾಯಿತು.

ನವಶಿಲಾಯುಗದ ಅವಧಿಯು ಭಾರತೀಯ ಇತಿಹಾಸದಲ್ಲಿ ಪರಿವರ್ತನೆಯ ಹಂತವನ್ನು ಪ್ರತಿನಿಧಿಸುತ್ತದೆ, ಇದು ನೆಲೆಸಿದ ಜೀವನ, ಕೃಷಿ ಮತ್ತು ಸಾಮಾಜಿಕ ಸಂಘಟನೆಯ ಉದಯವನ್ನು ಗುರುತಿಸುತ್ತದೆ. ಅದರ ಕೊಡುಗೆಗಳು ಕಂಚಿನ ಯುಗದಲ್ಲಿ ಅನುಸರಿಸಿದ ಸಾಂಸ್ಕೃತಿಕ ಮತ್ತು ತಾಂತ್ರಿಕ ಪ್ರಗತಿಗಳಿಗೆ ಮತ್ತು ಆರಂಭಿಕ ಭಾರತೀಯ ನಾಗರಿಕತೆಗಳ ಉಗಮಕ್ಕೆ ಅಡಿಪಾಯವನ್ನು ಹಾಕಿದವು.