ಪ್ರಾಚೀನ ಭಾರತೀಯ ಇತಿಹಾಸ
- ಇತಿಹಾಸದ ಮೇಲೆ ಭೂಗೋಳದ ಪ್ರಭಾವ
- ಆಧಾರಗಳು
- ಪೂರ್ವ ಇತಿಹಾಸ
- ಸಿಂಧೂ ಕಣಿವೆ ನಾಗರಿಕತೆ
- ವೇದಕಾಲ
- ಹೊಸ ಧರ್ಮದ ಉದಯ
- ಮೌರ್ಯರು
- ಕುಶಾನರು
- ಗುಪ್ತರು
- ವರ್ಧನರು
- ಬಾದಾಮಿ ಚಾಲುಕ್ಯರು
- ರಾಷ್ಟ್ರಕೂಟರು
- ಚೋಳರು
- ಪಲ್ಲವರು
- ಸಂಗಂ ಸಾಹಿತ್ಯ
- ಸಿಂಧ್ ಮೇಲೆ ಅರಬ್ ಆಕ್ರಮಣ
- ಘಜ್ನಿ ಮತ್ತು ಘೋರಿಯ ಆಕ್ರಮಣಗಳು
ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ
ಭಾರತವು ತನ್ನ ವಿಶಿಷ್ಟ ಭೌಗೋಳಿಕತೆಯಿಂದಾಗಿ ವೈಶಿಷ್ಟ್ಯಪೂರ್ಣ ಇತಿಹಾಸವನ್ನು ಬೆಳೆಸಿಕೊಂಡಿದ್ದು, ವೈವಿಧ್ಯತೆಯು ಇತಿಹಾಸವನ್ನು ಹೇಗೆ ರೂಪಿಸಿದೆ ಎಂಬುದನ್ನು ಪರಿಶೀಲಿಸಿ.
ಶಾಸನಗಳ ಮಹತ್ವ
ಶಾಸನಗಳು ಚರಿತ್ರೆಯ ರಚನೆಯಲ್ಲಿ ಸಿಂಹಪಾಲನ್ನು ಹೊಂದಿವೆ. ಶಾಸನಗಳ ಆದ್ಯ ಪ್ರವರ್ತಕನಾದ ಅಶೋಕನಿಂದ ಪ್ರಾರಂಭಿಸಿ ಲಕ್ಷಾಂತರ ಶಾಸನಗಳು ಇತಿಹಾಸದ ಬೆನ್ನುಮೂಳೆಯಾಗಿದೆ.
ಆಧಾರಗಳು
ಚರಿತ್ರೆಯ ರಚನೆಯಲ್ಲಿ ಆಧಾರಗಳು ಅದ್ವಿತೀಯವಾದ ಪಾತ್ರವನ್ನು ವಹಿಸುತ್ತವೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ʻಆಧಾರ’ ಈ ಮೂರು ಅಕ್ಷರಗಳ ಅರ್ಥ ಬಹುವ್ಯಾಪಕ. ಇತಿಹಾಸಕ್ಕೆ ಆಧಾರಗಳೇ ಉಸಿರು. ಆಧಾರಗಳಿಲ್ಲದೆ ರಚನೆಗೊಂಡ ಚರಿತ್ರೆ ನಾವಿಕನಿಲ್ಲದ ದೋಣಿಯಂತೆ, ಚುಕ್ಕಾಣಿಯಿಲ್ಲದ ಹಡಗಿನಂತೆ.
ಸಾಹಿತ್ಯಾಧಾರಗಳು
ಪ್ರಾಚೀನ ಭಾರತದ ಚರಿತ್ರೆಯ ರಚನೆಯಲ್ಲಿ ಸಾಹಿತ್ಯಾಧಾರಗಳು ಪ್ರಮುಖವಾದ ಪಾತ್ರ ವಹಿಸುತ್ತವೆ. ಇವುಗಳನ್ನು ದೇಶೀಯ ಸಾಹಿತ್ಯಾಧಾರಗಳು ಮತ್ತು ವಿದೇಶಿಯ ಸಾಹಿತ್ಯಾಧಾರಗಳೆಂದು ವರ್ಗೀಕರಿಸಿ ಅಧ್ಯಯನ ಮಾಡಬಹುದಾಗಿದೆ.
ಭಾರತೀಯ ಇತಿಹಾಸದ ರಚನೆಗೆ ಪ್ರಾಚೀನ ಮೂಲಗಳ ಪ್ರಾಮುಖ್ಯತೆ
ಭಾರತದ ವಿಶಾಲವಾದ – ಸಂಕೀರ್ಣವಾದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಮೂಲಾಧಾರಗಳು ಬಹುಮುಖ್ಯವಾಗಿದ್ದು, ಭಾರತೀಯ ಇತಿಹಾಸದ ರಚನೆಗೆ ಅಮೂಲ್ಯವಾದ ಕೊಡುಗೆ ನೀಡುತ್ತವೆ.
ಭಾರತೀಯ ಇತಿಹಾಸದಲ್ಲಿ ನವಶಿಲಾಯುಗದ ಅವಧಿ
ಭಾರತದಲ್ಲಿ ನವಶಿಲಾಯುಗವು ಕೃಷಿ, ಮೃಗಪಾಲನೆ ಮತ್ತು ಗ್ರಾಮನೆಲೆಗಳ ಮೂಲಕ ಮಾನವ ಸಮಾಜದ ಹೊಸ ಅಧ್ಯಾಯವನ್ನು ಆರಂಭಿಸಿದ ಪರಿವರ್ತನೆಯ ಯುಗಕ್ಕೆ ನಾಂದಿಯಾಯಿತು.
ಸಿಂದೂ ನಾಗರೀಕತೆಯ ಪೀಠಿಕೆ
ವಿಶ್ವದ ಅತ್ಯಂತ ಪ್ರಾಚೀನ ಮತ್ತು ಪ್ರಮುಖ ನಾಗರೀಕತೆಗಳಲ್ಲಿ ಭಾರತದ ನೆಲದಲ್ಲಿ ಅರಳಿದ ಸಿಂದೂ ಅಥವಾ ಹರಪ್ಪ ನಾಗರೀಕತೆಯೂ ಒಂದು. ಅದರ ಕಿರುಪರಿಚಯ ನಿಮಗಾಗಿ….
ಸಿಂಧೂ ಕಣಿವೆ ನಾಗರಿಕತೆಯ ಧಾರ್ಮಿಕ ಜೀವನ
ವಿಶ್ದದ ಹಳೆಯ ಸಿಂಧೂ ಕಣಿವೆ ನಾಗರಿಕತೆಯು ತನ್ನ ಜನರ ಮೌಲ್ಯಗಳು ಮತ್ತು ಕಾಳಜಿಗಳನ್ನು ಪ್ರತಿಬಿಂಬಿಸುವ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳಿಂದ ಶ್ರೀಮಂತವಾಗಿದೆ.
ಸಿಂದೂ ಬಯಲಿನ ನಾಗರೀಕತೆಯ ಆರ್ಥಿಕ ಜೀವನ
ಸಿಂದೂ ನಾಗರೀಕತೆಯ ಜನರು ವಿವಿಧ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿದ್ದರು. ಇವರು ಭವಿಷ್ಯದ ಸಮಾಜಗಳಿಗೆ ಅಡಿಪಾಯ ಹಾಕುವ ರೀತಿಯಲ್ಲಿ ತಮ್ಮ ಆರ್ಥಿಕ ಜೀವನವನ್ನು ರೂಪಿಸಿಕೊಂಡರು.
ಸಿಂದೂ ಬಯಲಿನ ನಾಗರೀಕತೆಯ ಸಾಮಾಜಿಕ ಜೀವನ
ಹರಪ್ಪಾ ಸಾಮಾಜಿಕ ವ್ಯವಸ್ಥೆಯು ಅವರ ದೈನಂದಿನ ಜೀವನದಲ್ಲಿ ಸೌಂದರ್ಯ ಮತ್ತು ಸಾಮರಸ್ಯವನ್ನು ಗೌರವಿಸುವ ಪ್ರಗತಿಪರ ನಾಗರಿಕತೆಯಾಗಿದೆ. ಅದು ಎಂದೆಂದಿಗೂ ಇತಿಹಾಸಕಾರರನ್ನು ಮಾತ್ರವಲ್ಲದೇ ಜನಸಾಮಾನ್ಯರನ್ನೂ ಆಕರ್ಷಿಸುತ್ತಿದೆ. ಅದರ ಬಗ್ಗೆ ಒಂದು ಇಣುಕು ನೋಟ..
ಸಿಂಧೂ ನಾಗರಿಕತೆಯ ನಗರ ಯೋಜನೆ
ಸಿಂಧೂ ಬಯಲಿನ ನಾಗರೀಕತೆ ಸುಧಾರಿತ ನಗರ ಯೋಜನೆಯ ಮೂಲಕ ಚೌಕಟ್ಟಾದ ಬೀದಿಗಳು, ಒಳಚರಂಡಿ ವ್ಯವಸ್ಥೆ ಹಾಗೂ ಸುವ್ಯವಸ್ಥಿತ ಕಟ್ಟಡಗಳಿಂದ ವಿಶ್ವಕ್ಕೆ ಬೆರಗು ಹುಟ್ಟಿಸಿದೆ.
ಆರ್ಯರ ಕಾಲದ ಸಾಹಿತ್ಯ
ಆರ್ಯರ ಸಂಸ್ಕೃತಿಯನ್ನು ಸಮಗ್ರವಾಗಿ ತಿಳಿಯಲು ನಮಗಿರುವ ಮೂಲಾಧಾರಗಳೆಂದರೆ ಚತುರ್ವೇದಗಳು, ವೇದಾಂಗಗಳು, ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ಗಳು. ಇವುಗಳ ಮೇಲೊಂದು ಪರಿಚಯ
ಆರ್ಯರ ಮೂಲ
ಸಿಂಧೂ ಸಂಸ್ಕೃತಿಯ ಪತನಾ ನಂತರ ಭಾರತದಲ್ಲಿ ಆರ್ಯರ ಸಂಸ್ಕೃತಿಯು ರೂಪುಗೊಂಡಿದ್ದು, ಅವರ ಮೂಲ ತುಂಬ ವಿವಾದಗ್ರಸ್ಥ ವಿಷಯವಾಗಿದೆ. ಅದರ ಮೇಲೊಂದು ಬೆಳಕು….
ಉತ್ತರ ವೈದಿಕ ಕಾಲ
ಉತ್ತರ ವೈದಿಕ ಕಾಲದಲ್ಲಿ ಪೂರ್ವವೈದಿಕ ಕಾಲಕ್ಕಿಂತ ಭಿನ್ನವಾದ ವ್ಯವಸ್ಥೆಯು ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶಿಕ್ಷಣ ಕ್ಷೇತ್ರಗಳಲ್ಲಿ ಕಂಡು ಬಂದು ಹಲವು ಬದಲಾವಣೆಗಳನ್ನು ತಂದಿತು.
ಪೂರ್ವವೇದ ಮತ್ತು ಉತ್ತರ ವೇದಗಳ ಕಾಲದ ನಡುವಿನ ತುಲನೆ
ಭಾರತದ ಇತಿಹಾಸದಲ್ಲಿ ವೇದಗಳ ಕಾಲ ಪ್ರಮುಖ ಘಟ್ಟವಾಗಿದ್ದು, ಇದರಲ್ಲಿನ ಪೂರ್ವವೇದ ಮತ್ತು ಉತ್ತರ ವೇದಗಳ ಕಾಲದ ನಡುವಿನ ಹೋಲಿಕೆ ಮತ್ತು ವ್ಯತ್ಯಾಸಗಳು ಅಧ್ಯಯನಯೋಗ್ಯ ಅಂಶಗಳಾಗಿವೆ.
ಪೂರ್ವವೈದಿಕ ಕಾಲ
ಪೂರ್ವ ವೈದಿಕ ಕಾಲದ ದೈನಂದಿನ ಚಿತ್ರಣವು, ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಭಾಗವಾಗಿದ್ದು ಇದರ ಮಹತ್ವದ ಮೇಲೊಂದು ಅವಲೋಕನ.
ಹೊಸಧರ್ಮಗಳ ಉದಯಕ್ಕೆ ಕಾರಣವಾದ ಅಂಶಗಳು
ಕ್ರಿ.ಪೂ.6ನೇ ಶತಮಾನ ಮಾನವ ಚರಿತ್ರೆಯಲ್ಲಿ ಮಹತ್ವದ ಕಾಲ. ಈ ಶತಮಾನದಲ್ಲಿ ಭಾರತದಲ್ಲೂ ಹೊಸಧರ್ಮಗಳು ಜನ್ಮ ತಾಳಿದವು. ಅವುಗಳ ಉದಯಕ್ಕೆ ಕಾರಣವೆಂದರೆ…..ಮುಂದೆ ಓದಿ
ಜೈನ ಮತ್ತು ಬೌದ್ಧ ಧರ್ಮಗಳ ನಡುವೆ ತುಲನೆ
ಭಾರತದಲ್ಲಿಯೇ ಜನಿಸಿದ ವಿಶ್ವದ ಅತ್ಯಂತ ಪ್ರಾಚೀನ ಮತ್ತು ಪ್ರಮುಖ ಧರ್ಮಗಳಾದ ಜೈನ ಮತ್ತು ಬೌದ್ಧ ಧರ್ಮಗಳು ಸಮಕಾಲೀನವಾಗಿದ್ದು ಅವುಗಳ ನಡುವೆ ಪರಸ್ಪರ ಹೋಲಿಕೆ ಮತ್ತು ವ್ಯತ್ಯಾಸಗಳು ಸಹ ಇವೆ.
ಬೌದ್ಧಧರ್ಮದ ಅಭ್ಯುದಯ ಮತ್ತು ಅವನತಿ
ಭಾರತದಲ್ಲಿ ಜನ್ಮತಾಳಿದ ಬೌದ್ಧಧರ್ಮವು ತಾಯ್ನಾಡಿನಲ್ಲಿ ಅವನತಿಯಾದರೂ ಹೊರರಾಷ್ಟ್ರಗಳಲ್ಲಿ ಇಂದಿಗೂ ಪ್ರಧಾನ ಧರ್ಮವಾಗಿಯೇ ಉಳಿದುಕೊಂಡಿದೆ. ಅದಕ್ಕೆ ಅನೇಕ ಕಾರಣಗಳಿದ್ದು ತಿಳಿಯೋಣ ಬನ್ನಿ..
ಗೌತಮ ಬುದ್ಧನ ಜೀವನ ಹಾಗೂ ಬೋಧನೆ
ಏಷ್ಯಾದ ಬೆಳಕು ಎಂದು ಹೆಸರಾದ ಗೌತಮಬುದ್ಧ ಬೌದ್ಧ ಧರ್ಮದ ಸ್ಥಾಪಕ. ಸತ್ಯ, ಶಾಂತಿ ಮತ್ತು ಕರುಣೆಯ ಕುರಿತು ಅವರ ಕಾಲಾತೀತ ಬೋಧನೆಗಳನ್ನು ತಿಳಿಯಿರಿ.
ಮಹಾವೀರನ ಜೀವನ ಮತ್ತು ಬೋಧನೆಗಳು: ಜೈನ ಧರ್ಮದ 24 ನೇತೀರ್ಥಂಕರ
ಮಹಾವೀರನು ಅಹಿಂಸಾ, ಸತ್ಯ ಮತ್ತು ತ್ಯಾಗದ ಮಾರ್ಗವನ್ನು ಬೋಧಿಸಿ ಮಾನವತೆಯ ನೈತಿಕ ದೀಪಸ್ತಂಭನಾಗಿ ಪರಿಣಮಿಸಿದ ಮಹಾನ್ ತತ್ವಜ್ಞಾನಿ. ಅವನನ್ನು ತಿಳಿಯೋಣ ಬನ್ನಿ.
ಮೌರ್ಯರ ಆಡಳಿತ ವ್ಯವಸ್ಥೆ
ಪ್ರಾಚೀನ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಮೌರ್ಯರು ಸುಭದ್ರ ಮತ್ತು ಸುವ್ಯವಸ್ಥಿತ ಆಡಳಿತವನ್ನು ಸಂಸ್ಥಾಪಿಸಿದ್ದರು. ಇದು ನಂತರದ ಭಾರತದ ಆಡಳಿತ ವ್ಯವಸ್ಥೆಗೆ ಅಡಿಪಾಯವಾಯಿತು.
ಅಶೋಕನ ಶಾಸನಗಳು
ಭಾರತದಲ್ಲಿ ಅಶೋಕನಿಂದಲೇ ಶಾಸನಗಳ ರಚನೆ ಪ್ರಾರಂಭವಾಯಿತು. ಆದ್ದರಿಂದ ಅಶೋಕನನ್ನು ‘ಶಾಸನಗಳ ಆದ್ಯಪ್ರವರ್ತಕ’ನೆಂದೇ ಹೆಸರಿಸಲಾಗಿದೆ. ಅವನ ಶಾಸನಗಳ ಬಗ್ಗೆ ಒಂದು ಪರಿಚಯ…
ಅಶೋಕನ ಆಡಳಿತ ವ್ಯವಸ್ಥೆ
ಅಶೋಕನ ಆಡಳಿತವು ಪ್ರಾಚೀನ ಭಾರತದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿದ್ದು, ವಿಶ್ವದ ರಾಜಮಹಾರಾಜರಿಗೆ ಮತ್ತು ಆಡಳಿತಗಾರರಿಗೆ ಆದರ್ಶ ಮತ್ತು ಮಾದರಿಯಾದ ವ್ಯವಸ್ಥೆಯಾಗಿದೆ
ಅಶೋಕ ಮತ್ತು ಬೌದ್ಧಧರ್ಮದ ಪ್ರಸಾರ
ಬೌದ್ಧಮತಾವಲಂಬಿಯಾದ ಅಶೋಕ ಆ ಧರ್ಮದ ಶ್ರೇಯಸ್ಸಿಗಾಗಿ ಅಪಾರವಾಗಿ ಶ್ರಮಿಸಿ ದೇಶ ವಿದೇಶಗಳಲ್ಲಿ ಹರಡಿ ಅದನ್ನು ವಿಶ್ವ ಧರ್ಮವನ್ನಾಗಿ ಮಾಡಿದ ಕೀರ್ತಿ ಅವರಿಗೇ ಸಲ್ಲುತ್ತದೆ. ಅವರ ಸಾಧನೆಯ ಮೇಲೊಂದು ಬೆಳಕು…
ಅಶೋಕ ಧಮ್ಮ
ತನ್ನ ಶಾಸನಗಳಲ್ಲಿ ಕೆತ್ತಿಸಿದ ಮೂಲಭೂತ ತತ್ವಗಳೇ ಅಶೋಕ ಧಮ್ಮವಾಗಿದ್ದು ಮನುಷ್ಯ-ಮನುಷ್ಯನಾಗಿ ಬಾಳಬೇಕಾದ ನೀತಿ ಸಂಹಿತೆಗಳಾಗಿವೆ. ಬನ್ನಿ ಇದನ್ನು ತಿಳಿಯೋಣ..
ಅಶೋಕನ ಜೀವನ ಮತ್ತು ಸಾಧನೆಗಳು
ಪ್ರಾಚೀನ ಭಾರತದಲ್ಲಿ ಆಳ್ವಿಕೆ ನಡೆಸಿದ ಶ್ರೇಷ್ಟ ಸಾಮ್ರಾಟರಲ್ಲಿ ಅಶೋಕ ಪ್ರಮುಖನಾಗಿದ್ದಾನೆ. ಇವನ ವ್ಯಕ್ತಿತ್ವ ವಿಶ್ವದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದೆ.
ಕುಶಾನರ ಕಾಲದ ಸಾಹಿತ್ಯ
ಕುಶಾನ ದೊರೆಗಳು ಸಾಹಿತ್ಯಾಭಿಮಾನಿಗಳಾಗಿದ್ದು ಸಾಹಿತ್ಯದ ಬೆಳೆವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ಇದರಿಂದಾಗಿ ಹಲವಾರು ಪ್ರಮುಖ ಕೃತಿಗಳು ರಚನೆಯಾದವು.
ಕಾನಿಷ್ಕ (ಕ್ರಿ.ಶ. 78-120)
ಮೂಲತಃ ವಿದೇಶಿಯರಾದ ಕುಶಾನ ಅರಸರಲ್ಲಿಯೇ ಅತ್ಯಂತ ಸಮರ್ಥ ದೊರೆಯೆಂದರೆ ಕಾನಿಷ್ಕ. ಬೌದ್ಧ ಧರ್ಮವನ್ನು ವಿದೇಶಕ್ಕೂ ದಾಟಿಸುವಲ್ಲಿ ಶ್ರಮಿಸಿದ ಮಹಾನ್ ವ್ಯಕ್ತಿತ್ವದ ಮೇಲೊಂದು ಬೆಳಕಿಂಡಿ.
ಕುಶಾನರ ಸಾಂಸ್ಕೃತಿಕ ಕೊಡುಗೆಗೆಳು
ಮೂಲತಃ ವಿದೇಶಿಯರಾದ ಕುಶಾನರು ಪ್ರಾಚೀನ ಭಾರತದಲ್ಲಿ ನೆಲಸಿ ಸಾಹಿತ್ಯದಿಂದ ವಾಸ್ತುಶಿಲ್ಪದವರೆಗೆ ಅಪಾರವಾದ ಸಾಂಸ್ಕೃತಿಕ ಕೊಡುಗೆಗಳನ್ನು ನೀಡಿ ಅಜರಾಮರರಾಗಿದ್ದಾರೆ.
ಸಮುದ್ರಗುಪ್ತ (ಕ್ರಿ.ಶ. 335-375)
ಗುಪ್ತವಂಶದ ದೊರೆಗಳಲ್ಲಿಯೇ ಅತ್ಯಂತ ಪ್ರಸಿದ್ಧನಾದವನೇ ಸಮುದ್ರಗುಪ್ತ. ಇವನು ಸೋಲಿಲ್ಲದ ಸರದಾರ. ಈತನನ್ನು ಭಾರತದ ನೆಪೋಲಿಯನ್ ಎಂದು ಕರೆಯಲಾಗಿದೆ.
ಗುಪ್ತರ ಕಾಲದ ವಿಜ್ಞಾನ ಮತ್ತು ತಂತ್ರಜ್ಞಾನ
ಗುಪ್ತರ ಕಾಲದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನವು ಅಪೂರ್ವವಾದ ಮುನ್ನಡೆಯನ್ನು ಕಂಡಿತು. ಸೊನ್ನೆಯ ವಿಶಿಷ್ಟತೆಯನ್ನು ಜಗತ್ತಿಗೆ ತಿಳಿಸಿ ಕ್ರಾಂತಿಯನ್ನು ಎಬ್ಬಿಸಲಾಯಿತು.
ಗುಪ್ತರ ಕಾಲದ ಧರ್ಮ
ಗುಪ್ತರ ಆಳ್ವಿಕೆಯಿಂದ ಹಿಂದೂ ಧರ್ಮಕ್ಕೆ ಹೊಸ ಚೈತನ್ಯ ಪ್ರಾಪ್ತವಾಯಿತು. ಇಲ್ಲಿಯವರೆಗೂ ಅಷ್ಟಾಗಿ ಇರದ ರಾಜಾಶ್ರಯ ಈಗ ದೊರೆತು ಪ್ರಬಲವಾಯ್ತು. ಪರಿಣಾಮವಾಗಿ ಬೌದ್ಧಧರ್ಮ ಅವನತಿಯತ್ತ ಸಾಗಿದರೆ ಹಿಂದೂಧರ್ಮ ಪುನರುಜ್ಜಿವನವಾಗತೊಡಗಿತು.
ಗುಪ್ತರ ಕಾಲದ ಕಲೆ ಮತ್ತು ವಾಸ್ತುಶಿಲ್ಪ
ಗುಪ್ತರ ಕಾಲದ ಸಾಂಸ್ಕೃತಿಕ ಭವ್ಯತೆ ಕಲಾ ಪ್ರಪಂಚದಲ್ಲೂ ಹೊರಹೊಮ್ಮಿದೆ. ಈ ಕಾಲವು ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಪರಾಕಾಷ್ಟೆಯನ್ನು ಮುಟ್ಟಿದ ಕಾಲವಾಗಿದೆ.
ಗುಪ್ತರ ಕಾಲದ ಆಡಳಿತ
ಗುಪ್ತರು ಮೌರ್ಯರ ಆಡಳಿತ ವ್ಯವಸ್ಥೆಯನ್ನು ಅನುಸರಿಸಿದ್ದರು. ಆದರೆ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಗಳನ್ನು ಮತ್ತು ಸುಧಾರಣೆಗಳನ್ನು ತಂದು ನಾವೀನ್ಯತೆಯನ್ನು ಸಾಧಿಸಿದರು.
ಗುಪ್ತರ ಅವನತಿಗೆ ಕಾರಣಗಳು
ಹೂಣರ ನಾಯಕರಾದ ತೋರಮಾನ ಹಾಗೂ ಮಿಹಿರಗುಲರು ಗುಪ್ತರ ವಂಶವನ್ನು ನಿರ್ನಾಮಗೊಳಿಸಿದರು. ಗುಪ್ತರ ಅವನತಿಗೆ ಇತರ ಅಂಶಗಳನ್ನು ಪಟ್ಟಿಮಾಡಬಹುದು.
ಹ್ಯುಯನ್ತ್ಸಾಂಗ್-ಒಂದು ಟಿಪ್ಪಣಿ (ಕ್ರಿ.ಶ.600-ಕ್ರಿ.ಶ.664)
ಹ್ಯುಯನ್ತ್ಸಾಂಗ್ ಚೀಣಾ ದೇಶದಲ್ಲಿ ಕ್ರಿ.ಶ 600 ರಲ್ಲಿ ಜನಿಸಿದನು. ಬಾಲ್ಯದಿಂದಲೇ ಬೌದ್ಧಧರ್ಮದ ಸೆಳೆತಕ್ಕೆ ಒಳಗಾದನು. ಹೀಗಾಗಿ ತನ್ನ 20ನೇ ವಯಸ್ಸಿನಲ್ಲಿ ಬೌದ್ಧಬಿಕ್ಷುವಾದನು. ನಂತರ ಭಾರತಕ್ಕೆ ಬರಲು ಮಹದಾಕಾಂಕ್ಷೆ ಹೊಂದಿದ್ದನು.
ಹರ್ಷವರ್ಧನ (ಕ್ರಿ.ಶ 606-646)
ರಾಜ್ಯವರ್ಧನನ ಮರಣದ ನಂತರ ಹರ್ಷವರ್ಧನ ಕ್ರಿ.ಶ. 606ರಲ್ಲಿ ಥಾನೇಶ್ವರದ ಸಿಂಹಾಸನಾಧೀಶ್ವರನಾದನು. ಆಗ ಹರ್ಷನಿಗೆ ಕೇವಲ 16 ವರ್ಷ ವಯಸ್ಸು. ದಕ್ಷ ಹಾಗೂ ಪ್ರತಿಭಾವಂತನಾಗಿದ್ದ ಹರ್ಷವರ್ಧನನು ತಾನು ಅಧಿಕಾರವಹಿಸಿಕೊಂಡ ನೆನಪಿಗಾಗಿ ಹರ್ಷಶಕೆ ಎಂಬ ಹೊಸ ಶಕೆಯನ್ನು ಆರಂಭಿಸಿದನು.
ವರ್ಧನರ ಸಾಹಿತ್ಯ
ಉತ್ತರ ಭಾರತವನ್ನಾಳಿದ ವರ್ದನರು ಕವಿ-ಕಲಾವಿದರಿಗೆ,ಸಾಹಿತ್ಯಕೋವಿದರಿಗೆ ಆಶ್ರಯದಾತರಾಗಿದ್ದರು. ಅದರಲ್ಲೂ ಹರ್ಷವರ್ಧನನು ಎಲ್ಲರಿಗೂ ಆದರ್ಶಪ್ರಾಯ ವಿದ್ವಾಂಸನಾಗಿದ್ದನು.
ಕಲೆ ಮತ್ತು ವಾಸ್ತುಶಿಲ್ಪಕ್ಕೆ ಬಾದಾಮಿ ಚಾಲುಕ್ಯರ ಕೊಡುಗೆಗಳು
ದಕ್ಷಿಣ ಭಾರತದ ಇತಿಹಾಸದಲ್ಲಿ ಬಾದಾಮಿ ಚಾಲುಕ್ಯರು ಗಮನಾರ್ಹ ಪ್ರಭಾವ ಬೀರಿದ್ದು, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅವರ ಅನನ್ಯ ಕೊಡುಗೆಗಳ ಯಶೋಗಾಥೆಯನ್ನು ತಿಳಿಯಿರಿ.
ಅಮೋಘವರ್ಷ : ದಕ್ಷಿಣದ ಅಶೋಕ
ಪ್ರಾಚೀನ ಭಾರತದ ಪ್ರಮುಖ ಅರಸನಾದ, ಕ್ರಿ.ಶ 814 ರಿಂದ 878 ವರೆಗೆ ಆಳಿದ ರಾಷ್ಟ್ರಕೂಟ ರಾಜವಂಶದ ಪ್ರಮುಖ ಆಡಳಿತಗಾರನಾದ ಅಮೋಘವರ್ಷನ ಇತಿಹಾಸವು ವರ್ಣರಂಜಿತವಾಗಿದೆ.
ಚೋಳರ ಕಾಲದ ಗ್ರಾಮಾಡಳಿತ
ಉತ್ತರ ಮೇರೂರು ಶಾಸನದ ಒಳನೋಟಗಳ ಮೂಲಕ ಚೋಳರ ಕಾಲದ ಗ್ರಾಮಾಡಳಿತ ಮತ್ತು ಅದರ ಸದಸ್ಯರ ಅರ್ಹತೆ- ಅನರ್ಹತೆ ಹಾಗೂ ಕರ್ತವ್ಯಗಳಲ್ಲದೇ ಆಡಳಿತದ ವಿಶಿಷ್ಟ ಅಂಶಗಳನ್ನು ಗಮನಿಸಿ
ಪಲ್ಲವರ ಕಲೆ ಮತ್ತು ವಾಸ್ತುಶಿಲ್ಪ
ಪಲ್ಲವ ರಾಜನು ಕಲೋಪಾಸಕರಾಗಿದ್ದು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅಪಾರ ಪ್ರೋತ್ಸಾಹ ನೀಡಿದರು. ಪರಿಣಾಮವಾಗಿ ಭಾರತೀಯ ಕಲಾಚರಿತ್ರೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು.
ಸಂಘಂ ಯುಗ ಅಥವಾ ಸಂಘಂ ಸಾಹಿತ್ಯ
ಸಾಹಿತ್ಯದಲ್ಲಿ ಸಂಘಂ ಯುಗ ಅಥವಾ ಸಂಘಂ ಸಾಹಿತ್ಯದ ಮಹತ್ವವನ್ನು ಅರಿಯಿರಿ. ಸಂಘಂ ಸಾಹಿತ್ಯದ ವೈವಿಧ್ಯತೆಯನ್ನು ಹಾಗೂ ಅದರ ಸವಿಯನ್ನು ಸವಿಯಿರಿ.
ಸಿಂಧ್‌ನ ಅರಬ್ ಆಕ್ರಮಣ (ಕ್ರಿ.ಶ 711 )
ಸಿಂದ್ ಪ್ರದೇಶದ ಮೇಲೆ ಅರಬ್ ಆಕ್ರಮಣದ (ಕ್ರಿ.ಶ 711 ) ಮಹತ್ವವನ್ನು ಮತ್ತು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಅದರ ಪ್ರಭಾವವನ್ನು ಅನ್ವೇಷಿಸಿ.
ಭಾರತದಲ್ಲಿ ಟರ್ಕರ ಆಕ್ರಮಣದ ಪರಿಣಾಮಗಳು
ಟರ್ಕರ ಆಕ್ರಮಣದ ಪರಿಣಾಮವಾಗಿ ಭಾರತದ ಇತಿಹಾಸವು ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಬದಲಾವಣೆಗೆ ಕಾರಣವಾಗಿದ್ದು ಅದರ ಮೇಲೊಂದು ಇಣುಕು ನೋಟ.
ಘೋರಿ ಮಹಮ್ಮದನ ಆಕ್ರಮಣಗಳು ಮತ್ತು ಅವುಗಳ ಪರಿಣಾಮಗಳು
12 ನೇ ಶತಮಾನದಲ್ಲಿ ಉತ್ತರ ಭಾರತದ ಇತಿಹಾಸದ ಮೇಲೆ ಮಹಮ್ಮದ್ ಘೋರಿಯ ಆಕ್ರಮಣಗಳನ್ನು ಗಮನಿಸಿ ಮತ್ತು ಅವುಗಳ ಪರಿಣಾಮಗಳನ್ನು ಅಧ್ಯಯನ ಮಾಡಿರಿ














































