ಭಾರತದ ಜೈವಿಕ ಭೌಗೋಳಿಕ ವಲಯಗಳು
ಭಾರತದ ಜೀವ ವೈವಿಧ್ಯತೆಯು ಅಪಾರ ಸಂಖ್ಯೆಯಲ್ಲಿದೆ. ಇದು ಪಶ್ಚಿಮದಲ್ಲಿ ಉಷ್ಣವಲಯದ ಆಫ್ರಿಕಾ ಹಾಗೂ ಪೂರ್ವದಲ್ಲಿ ಮಲೇಶಿಯಾಗಳ ನಡುವೆ ಇದೆ. ಇದು ಭಿನ್ನವಾದ ಹವಾಗುಣ ಹಾಗೂ ಭೂ ಸ್ವರೂಪವನ್ನು ಹೊಂದಿದೆ. ಹಾಗಾಗಿ ಭಾರತವು ಹೊಂದಿರುವ ಜೀವ ಪ್ರಭೇದಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸಗೊಳ್ಳುತ್ತಾ ಹೋಗುತ್ತದೆ. 2001ರಲ್ಲಿನ ಭಾರತ ಪರಿಸರ ಪರಿಸ್ಥಿತಿ ವರದಿಯನ್ನು ಆಧರಿಸಿ 1990 ರಲ್ಲಿನ ವಿಂಗಡನೆಗೆ ಅನುಸಾರವಾಗಿ 10 ಭೌಗೋಳಿಕ ವಲಯಗಳನ್ನು ಗುರುತಿಸಲಾಗಿದೆ ಅವುಗಳೆಂದರೆ.
1. ಹೊರಗಿನ ಹಿಮಾಲಯ: (Outer Himalayas)
ಹೊರಗಿನ ಹಿಮಾಲಯ ಪ್ರದೇಶವು ಟಿಬೇಟ್ ಪ್ರಸ್ಥಭೂಮಿ, ಲಡಾಖ, ರಾಹುಲ್, ಸ್ಪಿತಿ ಕಣಿವೆಯ ಕೆಲವು ಭಾಗಗಳನ್ನು ಒಳಗೊಂಡಿದ್ದು ಇದು ಶೀತ ಭೂಮಿಯಾಗಿದೆ. ಇದು ಭಾರತ ದೇಶದ 5.7% ಭೂಭಾಗವನ್ನು ಆವರಿಸಿರುವ ಜೀವರಾಶಿ ಪ್ರದೇಶವಾಗಿದೆ. ಇದು ಸಸ್ಯ ವರ್ಗಗಳಿಂದ ಕೂಡಿದೆ. ಕಪ್ಪು ಕತ್ತಿನ ಕೊಕ್ಕರೆಯಂತಹ ಅಪರೂಪದ ಜೀವಿಗಳು ಇಲ್ಲಿ ಕಂಡುಬರುತ್ತವೆ.
2. ಹಿಮಾಲಯ ಪರ್ವತಗಳು: (The Himalayas)
ಇದೊಂದು ಜೀವ ವೈವಿಧ್ಯತೆಯಿಂದ ಕೂಡಿದ ವಿಶಿಷ್ಟ ಪ್ರದೇಶವಾಗಿದೆ. ಈ ಪ್ರದೇಶಗಳು ದೇಶದ ಉತ್ತರ ಭಾಗದಲ್ಲಿ ವಾಯುವ್ಯದಿಂದ ಈಶಾನ್ಯದವರೆಗೂ ವಿಸ್ತರಿಸಿವೆ. ಇವುಗಳು ಸುಮಾರು 300 ರಿಂದ 6000 ಮೀಟರ್ ಎತ್ತರವಾಗಿವೆ. ಇದು ಭಾರತದ ಭೂಪ್ರದೇಶದ 7.2% ರಷ್ಟು ವಿಸ್ತಾರ ಹೊಂದಿದ್ದು ಕಾಡುಗಳ ಹುಲ್ಲುಗಾವಲು ಮತ್ತು ಅರ್ದ್ರತೆಯಿಂದ ಕೂಡಿದ ಎಲೆ ಉದುರುವ ಅರಣ್ಯ ಭಾಗಗಳನ್ನು ಹೊಂದಿದೆ. ಇಲ್ಲಿ ಕಂಡುಬರುವ ಅಪರೂಪದ ಪ್ರಭೇದಗಳೆಂದರೆ ಹಂಗೂರ್ ಮತ್ತು ಕಸ್ತೂರಿ ಜಿಂಕೆ.
3. ಮರುಭೂಮಿ ಪ್ರದೇಶ: (The desert)
ಇದು ಭಾರತದ ಪಶ್ಚಿಮ ಭಾಗದಲ್ಲಿ ಕಂಡುಬರುತ್ತದೆ. ಈ ಪ್ರದೇಶವು ರಾಜಸ್ಥಾನದ ಮರಳು ಭೂಮಿ ಮತ್ತು ಗುಜರಾತಿನ ಲವಣ ಮರುಭೂಮಿಯಿಂದ ಕೂಡಿದೆ. ಇದು ಭಾರತದ ಭೂ ಪ್ರದೇಶ ಶೇಕಡಾ 67% ರಷ್ಟು ಇದೆ. ತೋಳ, ಮರುಭೂಮಿ ಬೆಕ್ಕು, ಹೌಬಾರಾ ಬಸ್ಟರ್ಡ್ ಹಾಗೂ ಗ್ರೇಟ್ ಇಂಡಿಯನ್ ಬಸ್ಟರ್ಡ್ ಮುಂತಾದ ಅಪಾಯದಂಚಿನಲ್ಲಿರುವ ಪ್ರಭೇದಗಳು ಇಲ್ಲಿ ವಾಸಿಸುತ್ತಿವೆ.
4. ಅರೆ ಶುಷ್ಕ ವಲಯ: ( Semi arid region)
ಅರಾವಳಿ ಬೆಟ್ಟಗಳನ್ನು ಒಳಗೊಂಡ ಮರುಭೂಮಿ ಹಾಗೂ ದಕ್ಷಿಣದ ಪರ್ಯಾಯ ಪ್ರಸ್ಥಭೂಮಿಯ ನಡುವೆ ಇರುವ ಭೂಭಾಗವೇ ಅರೆ ಶುಷ್ಕ ವಲಯ ಎಂದು ಹೆಸರಾಗಿದೆ. ಇದು ಭಾರತದ ಭೂಪ್ರದೇಶದ 15.6 ರಷ್ಟು ಇದೆ. ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೃತಕ ಹಾಗೂ ನೈಸರ್ಗಿಕ ಸರೋವರಗಳು ಉಂಟು. ಹಾಗೆಯೇ ಜೌಗು ಪ್ರದೇಶಗಳು ಸಹ ಇಲ್ಲಿವೆ. ಇಲ್ಲಿ ತೋಳ, ಸಿಂಹ, ಚಿರತೆ, ಕ್ಯಾರೆಕಲ್ ಹಾಗೂ ಗುಳ್ಳೆನರಿ ಮುಂತಾದ ಪ್ರಾಣಿಗಳು ವಾಸಿಸುತ್ತಿವೆ.
5. ಪಶ್ಚಿಮ ಘಟ್ಟಗಳು: (The western ghats)
ಇವು ಗುಜರಾತಿನ ತಪತಿ ನದಿಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಹಾಗೆಯೇ ಪಶ್ಚಿಮ ಕರಾವಳಿಯ ತೀರ ಪ್ರದೇಶದವರೆಗೂ ಹಬ್ಬಿವೆ. ಇದು ಭಾರತದ ಭೂ ವಿಸ್ತೀರ್ಣದ 58% ರಷ್ಟು ಇದೆ. ಇಲ್ಲಿ ಸಾಕಷ್ಟು ಜೀವ ವೈವಿಧ್ಯತೆಯನ್ನು ಕಾಣಬಹುದಾಗಿದೆ.
6. ದಕ್ಷಿಣದ ಪ್ರಸ್ಥಭೂಮಿ:(Deccan plaleau)
ಇದು ಪರ್ಯಾಯ ಪ್ರಸ್ಥಭೂಮಿಯ ಕೇಂದ್ರ ಹಾಗೂ ದಕ್ಷಿಣ ಭಾಗಗಳನ್ನು ಪೂರ್ಣವಾಗಿ ಒಳಗೊಂಡಿದ್ದು ಅತ್ಯಂತ ವಿಸ್ತಾರವಾಗಿದೆ. ಇಲ್ಲಿ ಬಹುತೇಕ ಅರಣ್ಯಗಳು ಎಲೆ ಉದುರುವ ಅರಣ್ಯಗಳಾಗಿವೆ. ಭಾರತದ ಭೂ ಭಾಗದ 42ರಷ್ಟು ಪ್ರದೇಶವನ್ನು ಹೊಂದಿದೆ. ಚಿರತೆ, ಸಾಂಬಾರ್, ನೀಲ್‌ಗಾಯ್, ಚೌಸಿಂಗ್ ಇತ್ಯಾದಿ ಪ್ರಾಣಿಗಳು ಹೇರಳವಾಗಿ ಇಲ್ಲಿ ಕಂಡುಬರುತ್ತವೆ. ಬೊಗಳುವ ಜಿಂಕೆ, ಗೌರ್, ಕೆಸರು ಜಿಂಕೆ ಮುಂತಾದವುಗಳು ಸಹ ವಾಸಿಸುತ್ತವೆ. ಇಲ್ಲಿ ವಿಶಿಷ್ಟ ಶೋಲಾ ಅರಣ್ಯ ಸಹ ಕಂಡುಬರುತ್ತದೆ.
7. ಗಂಗಾ ಮೈದಾನ: (The gangetic plain)
ಪಶ್ಚಿಮದಲ್ಲಿ ಪಂಜಾಬಿನಿಂದ ಪೂರ್ವದಲ್ಲಿ ಬಂಗಾಳದವರೆಗೂ, ಉತ್ತರದಲ್ಲಿ ಹಿಮಾಲಯದವರೆಗೂ ಕಂಡುಬರುವ ಪ್ರದೇಶವೇ ಗಂಗಾ ಮೈದಾನ. ಭಾರತದ ಒಟ್ಟು ಭೂಪ್ರದೇಶದ 11ರಷ್ಟು ವಿಸ್ತರಿಸಿದೆ. ಘೇಂಡಾಮೃಗ, ಆನೆ, ಎಮ್ಮೆ, ಕೆಸರು ಜಿಂಕೆ, ಚಿಕ್ಕ ಜಿಂಕೆ ಮುಂತಾದ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.
8. ಈಶಾನ್ಯ ವಲಯ: (The north east zone)
ಈ ವಲಯವು ಪರ್ವತ, ಗುಡ್ಡ, ಬೆಟ್ಟ, ಕಣಿವೆ ಹಾಗೂ ಮೈದಾನಗಳಿಂದ ಕೂಡಿದೆ. ಇಲ್ಲಿ ವಾರ್ಷಿಕ ಹೆಚ್ಚು ಮಳೆ ಬೀಳುತ್ತದೆ. ಹೀಗಾಗಿ ಇದೊಂದು ಸಮೃದ್ಧಿಯಿಂದ ಕೂಡಿದ ಪ್ರದೇಶವಾಗಿದೆ. ಭಾರತದಲ್ಲಿ ನೈಜ ಸಸ್ಯವರ್ಗವಿರುವುದು ಇಲ್ಲಿಯೇ. ಇಂಡೋ ಮಲಯಾನ್ ಹಾಗೂ ಇಂಡೋ-ಚೀನಾ ಜೀವ ಭೌಗೋಳಿಕ ಪ್ರದೇಶಗಳ ನಡುವಿನ ಸ್ಥಿತ್ಯಂತರ ವಲಯ ಇದಾಗಿದೆ. ಹೀಗಾಗಿ ಇದನ್ನು ಜೀವ ಭೌಗೋಳಿಕ ಪ್ರದೇಶಗಳ ಹೆಬ್ಬಾಗಿಲು ಎನ್ನುವರು. ಆನೆ, ಘೇಂಡಾಮೃಗ, ಕಾಡೆಮ್ಮೆ, ಜಿಂಕೆ ಮುಂತಾದ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.
9. ಕರಾವಳಿ ತೀರ ಪ್ರದೇಶ: (Coastal region)
ಇದು ಭಾರತದ ಪಶ್ಚಿಮ ಹಾಗೂ ಪೂರ್ವ ಕರಾವಳಿಯನ್ನು ಒಳಗೊಂಡಿದ್ದು ಭಾರತದ ಭೂ ಭಾಗದ ಶೇಕಡ 25ರಷ್ಟು ವಿಸ್ತಾರ ಹೊಂದಿದೆ. ಕರಾವಳಿ ಉದ್ದಕ್ಕೂ ಮ್ಯಾಂಗ್ರೋ ಕಾಡುಗಳು ಕಂಡುಬಂದಿವೆ. ಮರಳು ಬೀಚು ಸಾಮಾನ್ಯವಾಗಿ ಕಂಡುಬರುತ್ತದೆ. ಕರಾವಳಿಯ ಒಟ್ಟು ಉದ್ದ 6100 ಕಿಲೋಮೀಟರ್ಗಳು. ಸರ್ವೆಮರ, ಪಂಡಾಸನ್, ಸಮುದ್ರದ ಹುಲ್ಲು ಇಲ್ಲಿನ ಪ್ರಮುಖ ಸಸ್ಯ ವರ್ಗವಾಗಿದೆ.
10. ದ್ವೀಪ ಪ್ರದೇಶ: (The islands)
ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು ದೇಶದ ವಿಸ್ತೀರ್ಣದ ಶೇಕಡ 0.03% ರಷ್ಟು ಒಳಗೊಂಡಿದೆ. ಈ ದ್ವೀಪಗಳು ಹವಳದ ದಿಬ್ಬಗಳಿಂದ ಕೂಡಿದೆ. ಇಲ್ಲಿ ಸುಮಾರು 2200 ಪ್ರಭೇದದ ಸಸ್ಯ ಸಂಕುಲವಿದೆ. ಇವುಗಳಲ್ಲಿ 200 ದೇಶೀಯ ಪ್ರಭೇದಗಳಾಗಿವೆ. 255 ಪಕ್ಷಿ ಪ್ರಭೇದಗಳಿವೆ. ಇವುಗಳಲ್ಲಿ 112 ದೇಶಿಯ ಪ್ರಭೇದಗಳೆಂದು ಗುರುತಿಸಲಾಗಿದೆ.
ಜೀವ ಭೌಗೋಳಿಕ ವಲಯಗಳು
| ವಲಯಗಳು | ಶೇ% | ವಲಯಗಳು | ಶೇ% | ||
| 1. | ಹೊರ ಹಿಮಾಲಯ | 5.7 | 6. | ದಕ್ಕನ್ ಪ್ರಸ್ಥಭೂಮಿ | 42 |
| 2. | ಹಿಮಾಲಯ ಗಳು | 7.2 | 7. | ಗಂಗಾ ಮೈದಾನ | 11 |
| 3. | ಮರುಭೂಮಿ ಪ್ರದೇಶ | 6.7 | 8. | ಈಶಾನ್ಯ ವಲಯ | 5.2 |
| 4. | ಅರೆ ಶುಷ್ಕವಲಯ | 15.6 | 9. | ಕರಾವಳಿ ತೀರ ಪ್ರದೇಶ | 2.5 |
| 5. | ಪಶ್ಚಿಮ ಘಟ್ಟಗಳು | 5.8 | 10. | ದ್ವೀಪ ಪ್ರದೇಶ | 0.3 |
ಉಪಸಂಹಾರ