ಭೂಮಿಯ ವಾತಾವರಣದಲ್ಲಿ ಇರುವ ಕೆಲವು ಅನಿಲಗಳು ಸೂರ್ಯನಿಂದ ಬರುವ ಉಷ್ಣತೆಯನ್ನು ಹಿಡಿದುಕೊಳ್ಳುವ ಮೂಲಕ ಭೂಮಿಯನ್ನು ಬಿಸಿಯಾಗಿಸುತ್ತವೆ. ಇವುಗಳನ್ನು ಹಸಿರುಮನೆ ಅನಿಲಗಳು ಎಂದು ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಾನವ ಚಟುವಟಿಕೆಗಳಿಂದ ಈ ಅನಿಲಗಳ ಪ್ರಮಾಣ ಅತಿಯಾಗಿ ಹೆಚ್ಚಾಗಿದೆ.
1. ಇಂಗಾಲದಡೈಆಕ್ಸೈಡ್:
ಭೂಮೇಲ್ಮೈ ಕಾಯುವಿಕೆಗೆ ಪ್ರಮುಖವಾದ ಕಾರಣವೆಂದರೆ ಹಸಿರುಮನೆ ಅನಿಲ ಇಂಗಾಲದ ಡೈ ಆಕ್ಸೈಡ್. ಇದು ಶೇ 60ರಷ್ಟು ಭೂಮಿಯ ತಾಪಮಾನಕ್ಕೆ ಕಾರಣವಾಗಿದೆ. ಕೈಗಾರಿಕಾ ಕ್ರಾಂತಿಗೆ ಮುನ್ನ ಭೂಮಿಯ ತಾಪಮಾನ 280 ರಷ್ಟು ಇತ್ತು. ಆದರೆ ಈಗ ಅದು 380 ರಷ್ಟು ಹೆಚ್ಚಳವಾಗಿದೆ. ಅಂದರೆ ಕೈಗಾರಿಕಾ ಕ್ರಾಂತಿಯ ನಂತರ ಶೇಕಡ 30ರಷ್ಟು ಅಧಿಕವಾಗಿದೆ. ಕೈಗಾರಿಕೆ, ಅರಣ್ಯನಾಶ, ನಗರಗಳ ಬೆಳವಣಿಗೆ, ವಾಹನ ಸಂಚಾರ ಮುಂತಾದವುಗಳಿಂದ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗಿ ವಾಯುಮಂಡಲದಲ್ಲಿ ಸೇರಿಕೊಳ್ಳುತ್ತದೆ. ಇಂಗಾಲದ ಡೈ ಆಕ್ಸಡ್‌ನ್ನು ಬಿಡುಗಡೆ ಮಾಡುವ ಅತಿ ದೊಡ್ಡ ದೇಶವೆಂದರೆ ಅದು ಅಮೆರಿಕ. ಸಿಮೆಂಟ್, ಕಬ್ಬಿಣ ಉಕ್ಕು, ರಸಾಯನಿಕ ಉತ್ಪಾದನೆಯಲ್ಲಿ, CO2 ಬಿಡುಗಡೆಯಾಗುತ್ತದೆ. ಪ್ರಾಣಿಗಳ ಉಸಿರಾಟದಲ್ಲಿ ಸಹ CO2 ಬಿಡುಗಡೆಯಾಗುತ್ತದೆ.
2. ಮೀಥೇನ್:
ಮಿಥೇನ್ ಸಹಭೂಮಂಡಲದ ಕಾಯುವಿಕೆಗೆ ಶೇಕಡ 18ರಷ್ಟು ಕಾರಣವಾಗಿದೆ. ಆಮ್ಲಜನಕದ ಕೊರತೆಯುಳ್ಳ ತೇವಾಂಶದ ಭಾಗಗಳಲ್ಲಿ ಮೀಥೇನ್ ಬ್ಯಾಕ್ಟೀರಿಯ ಸಾಯುವ ವಸ್ತುವನ್ನು ವಿಘಟನೆ ಮಾಡುವುದರ ಮೂಲಕ ಮೀಥೇನ್ ಬಿಡುಗಡೆ ಮಾಡುತ್ತದೆ. ಹೀಗಾಗಿ ಇದು, ಜವಗೂ ಪ್ರದೇಶ ಭತ್ತದ ಗದ್ದೆ, ನೆಲಭರ್ತಿ, ಹಸು, ಎಮ್ಮೆ, ಕುರಿ, ಮೇಕೆ, ಗೆದ್ದಲು ಹಾಗೂ ಪಚನ ಕ್ರಿಯೆಗಳಲ್ಲಿ ಕಂಡುಬರುತ್ತದೆ. ಸ್ವಾಭಾವಿಕ ಅನಿಲ, ಕಚ್ಚಾ ತೈಲ ಸಾಗಾಣಿಕೆ, ಉತ್ಪಾದನೆ ಸಂಗ್ರಹಣೆ ಹಾಗೂ ಹಂಚಿಕೆಯಲ್ಲಿ ಮೀಥೇನ್ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರೊಂದಿಗೆ ಮಾನವನು ಎಸೆಯುವ ಘನ ತ್ಯಾಜ್ಯ ವಸ್ತುಗಳಿಂದಲೂ ಮೀಥೇನ್ ಉತ್ಪತ್ತಿಯಾಗುತ್ತದೆ.
3. ನೈಟ್ರಸ್ ಆಕ್ಸೈಡ್:
ಇದು ಮಣ್ಣಿನಲ್ಲಿ ನೈಟ್ರೀಕರಣ ಹಾಗೂ ಡಿ ನೈಟ್ರೀಕರಣದ ಸೂಕ್ಷ್ಮಾಣು ಜೀವಿಗಳ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುತ್ತದೆ ಇದು ಹಸಿರು ಮನೆ ಅನಿಲವಲ್ಲದೆ ಓಜೋನ್ ಪದರು ಹಾಳಾಗಲು ಕಾರಣವಾಗುತ್ತದೆ. ರಸಾಯನಿಕ ಗೊಬ್ಬರಗಳು, ಪಳೆಯುಳಿಕೆ ಇಂಧನ ದಹನ, ಜೈವಿಕ ರಾಶಿ ದಹನ ಕ್ರಿಯೆ ಹಾಗೂ ಲೈಲಾನ್ ಮತ್ತು ಪಾಲಿ ತಯಾರಿಕೆಯಲ್ಲಿಯೂ ಉತ್ಪತ್ತಿಯಾಗುತ್ತದೆ. ಇದು ವಾಯುಮಂಡಲದಲ್ಲಿ ಸೇರಿಕೊಂಡಾಗ ಭೂಮಿಯ ತಾಪಮಾನದಲ್ಲಿ ಹೆಚ್ಚಳವಾಗುತ್ತದೆ. ನೈಟ್ರಸ್ ಆಕ್ಸೈಡ್ ಈಗಾಗಲೇ ಶೇಕಡ 15ರಷ್ಟು ಹೆಚ್ಚಾಗಿದೆ. ವಾತಾವರಣದಲ್ಲಿ 1 ಕೆ.ಜಿ ನೈಟ್ರೇಸ್ ಆಕ್ಸೈಡ್ 100 ವರ್ಷಗಳಲ್ಲಿ 296 ಕೆ.ಜಿ ಯಷ್ಟು ಹೆಚ್ಚುತ್ತದೆ.
4. ಕ್ಲೋರೋ ಫ್ಲೋರೋ ಕಾರ್ಬನ್:
ಇದೊಂದು ಮಾನವ ನಿರ್ಮಿತ ರಸಾಯನಿಕ. ಇದು ಪ್ಲೋರಿನ್, ಕ್ಲೋರಿನ್ ಹಾಗೂ ಕಾರ್ಬನ್‌ಗಳ ಸಂಯೋಗದಿಂದ ತಯಾರಾಗಿದೆ. ಇದನ್ನು ಸಾಂಕೇತಿಕವಾಗಿ CFCs ಎಂದು ಕರೆಯುತ್ತಾರೆ. ಇದನ್ನು ಥಾಮಸ್ ಮಿಡಗ್ಲಿ ಎಂಬ ವಿಜ್ಞಾನಿ 1728 ರಲ್ಲಿ ವಸ್ತುಗಳನ್ನು ತಂಪುಗೊಳಿಸಲು ಕಂಡುಹಿಡಿದನು. ಇದು ಶೇಕಡ 15ರಷ್ಟು ಭೂಮಂಡಲದ ತಾಪಮಾನಕ್ಕೆ ಕಾರಣವಾಗಿದೆ. CFCs ನ್ನುಅಲುಮಿನಿಯಂ ಸೆಮಿಕಂಡಕ್ಟರ್ ಉತ್ಪಾದನೆ, ವಿದ್ಯುತ್ ಸಾಗಾಣಿಕೆ, ಸರ್ಕ್ಯೂಟ್ ಬ್ರೇಕ್‌ಗಳಲ್ಲಿ, ಶೈತ್ಯಗಾರ, ರೆಫ್ರಿಜರೇಟರ್, ಪೋಮ್ ಪ್ಲಾಸ್ಟಿಕ್ ಹಾಗೂ ಸಿಂಪಡಣಾ ಕ್ಯಾನ್, ಸೌಂದರ್ಯ ವರ್ತಕಗಳ ಉತ್ಪಾದನೆಯಲ್ಲಿ ಬಳಸುತ್ತಾರೆ. CFCs ಒಮ್ಮೆ ವಾಯುಮಂಡಲವನ್ನು ಸೇರಿಕೊಂಡರೆ ಸುಮಾರು 75 ವರ್ಷಗಳ ಕಾಲ ಉಳಿಯಬಲ್ಲದು.
5. ಪರ್‌ಪ್ಲೋರೋ ಕಾರ್ಬನ್:
ಹಸಿರು ಮನೆ ಅನಿಲಗಳಲ್ಲಿ ಅತ್ಯಂತ ಶಕ್ತಿಶಾಲಿ ಅನಿಲಗಳಾಗಿದ್ದು. ಇವುಗಳು ಇಂಧನ ದಹಿಸುವಿಕೆಯಿಂದ ಬಿಡುಗಡೆಗೊಳ್ಳುತ್ತವೆ. ವಾತಾವರಣದಲ್ಲಿ ಇವುಗಳು ಸುಮಾರು 50000 ವರ್ಷಗಳ ಕಾಲ ಜೀವಿಸಬಲ್ಲವುಗಳಾಗಿವೆ.
6. ಸಲ್ಫರ್ ಹೆಕ್ಸಾ ಫ್ಲೋರೈಡ್:
ಇದು ಕೂಡ ಭೂಮಂಡಲದ ಕಾಯುವಿಕೆಗೆ ಕಾರಣವಾಗಿದೆ. ಇದು ಕಾರ್ಬನ್ ಡೈಆಕ್ಸೈಡ್ ಗಿಂತ ಸುಮಾರು 22,200 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಪಳಿಯುಳಿಕೆ ಇಂಧನ, ಉರವಲು ಅರೆಬರೆ ಸುಡುವುದರಿಂದ, ಊದು ಕುಲುಮೆ, ಅಡುಗೆ ಒಲೆ, ಕಾರ್ಖಾನೆ, ಧೂಮಪಾನ, ಸ್ವಯಂಚಾಲಿತ ವಾಹನ ಹಾಗೂ ವಿಮಾನಗಳ ಇಂಧನಗಳ ದಹನ ಕ್ರಿಯೆ ಮುಂತಾದವುಗಳಿಂದ ಬಿಡುಗಡೆಯಾಗುತ್ತದೆ.
ಉಪಸಂಹಾರ
ಹಸಿರುಮನೆ ಅನಿಲಗಳ ಹೆಚ್ಚಳವು ಭೂಮಿಯ ಹವಾಮಾನ ಸಮತೋಲನವನ್ನು ಗಂಭೀರವಾಗಿ ಹದಗೆಡಿಸುತ್ತಿದೆ. ಇವುಗಳಿಂದ ಜಾಗತಿಕ ತಾಪಮಾನ ವೃದ್ಧಿ, ಹಿಮನದಿಗಳ ಕರಗುವಿಕೆ ಹಾಗೂ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಪರಿಸರವನ್ನು ಉಳಿಸಲು ಕೈಗಾರಿಕಾ ಮಾಲಿನ್ಯ ನಿಯಂತ್ರಣ, ಅರಣ್ಯ ಸಂರಕ್ಷಣೆ ಮತ್ತು ಪರ್ಯಾಯ ಇಂಧನಗಳ ಬಳಕೆ ಅತ್ಯಾವಶ್ಯಕವಾಗಿದೆ. ಪ್ರತಿಯೊಬ್ಬರೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಭವಿಷ್ಯದ ಭೂಮಿಯನ್ನು ರಕ್ಷಿಸಬಹುದು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.