ಸ್ಪೀಕರ್ ಎಂಬುದು ಕೇವಲ ಸ್ಥಾನವಲ್ಲ, ಅದು ಸಂಸತ್ತಿನ ಗೌರವದ ಪ್ರತೀಕವಾಗಿದೆ. ಸದನದ ಶಾಂತಿ, ಶಿಸ್ತು ಮತ್ತು ಸಮನ್ವಯವನ್ನು ಕಾಪಾಡುವಲ್ಲಿ ಸ್ಪೀಕರ್ ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಜಾಪ್ರಭುತ್ವದ ಯಶಸ್ಸು ಸ್ಪೀಕರ್ ಅವರ ನ್ಯಾಯಸಮ್ಮತ ಕಾರ್ಯನಿರ್ವಹಣೆಯ ಮೇಲೆ ಅವಲಂಬಿತವಾಗಿದೆ.
ಸ್ಪೀಕರ್ ನ ಕಾರ್ಯಗಳು ಈ ಕೆಳಗಿನಂತಿವೆ
- ಸ್ಪೀಕರ್ ಲೋಕಸಭೆಯ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿ ಸದನದ ಕಲಾಪಗಳನ್ನು ನಿಯಮಾವಳಿಗನುಸಾರ ನಡೆಯುವಂತೆ ನೋಡಿಕೊಳ್ಳುತ್ತಾರೆ. ವಿವಿಧ ವಿಷಯಗಳ ಚರ್ಚೆಗೆ ಸಮಯವನ್ನು ನಿಗದಿ ಮಾಡುತ್ತಾರೆ.
- ಸದನದಲ್ಲಿ ಯಾರು ಮಾತನಾಡಬೇಕು ಮತ್ತು ಎಷ್ಟು ಮಾತನಾಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಸ್ಪೀಕರ್ ಅವರಿಗೆ ಇರುತ್ತದೆ. ಜೊತೆಗೆ ಅನ್‌ಪಾರ್ಲಿಮೆಂಟರಿ ಪದಗಳನ್ನು ಪ್ರಯೋಗಿಸಿ ಮಾತನಾಡದಂತೆ ತಡೆಯುತ್ತಾರೆ.
- ಸದನದಲ್ಲಿ ನಿರ್ದಿಷ್ಟ ಹಾಜರಾತಿ ಇರದೆ ಹೋದರೆ ಸಭೆಯನ್ನು ಮುಂದೂಡುತ್ತಾರೆ. ಸಭೆಯಲ್ಲಿ ಗದ್ದಲ ಮತ್ತು ಕೋಲಹಲವಾದರೂ ಕೆಲವು ನಿಮಿಷಗಳವರೆಗೆ ಸಭೆಯನ್ನು ಮುಂದೂಡುತ್ತಾರೆ.
- ಲೋಕಸಭಾ ಸದಸ್ಯರು ಸ್ಪೀಕರ್ ಅವರ ಅನುಮತಿ ಮೇರೆಗೆ ಪ್ರಶ್ನೆ ಕೇಳುವುದು ಹಾಗೂ ಚರ್ಚೆನಡೆಯುವುದರ ಮೂಲಕ ನಿರ್ಣಯಗಳನ್ನು ಮತ್ತು ಮಸೂದೆಗಳನ್ನು ಮಂಡಿಸಬೇಕು.
- ಸದನದಲ್ಲಿ ಮೊದಲು ಚರ್ಚಿಸಬೇಕಾದ ವಿಷಯಗಳನ್ನು ಸ್ಪೀಕರ್ ತೀರ್ಮಾನಿಸುತ್ತಾರೆ. ಯಾವುದಾದರೂ ಮಸೂದೆ ಅದು ಹಣಕಾಸಿನ ಮಸೂದೆಯೋ ಅಥವಾ ಅಲ್ಲವೋ ಎಂಬುದನ್ನು ತೀರ್ಮಾನಿಸುವ ಅಂತಿಮ ಅಧಿಕಾರ ಅವರಿಗೆ ಇದೆ.
- ಸದನದಲ್ಲಿ ಶಿಸ್ತು, ಶಾಂತಿ ಹಾಗೂ ಸಂಯಮಗಳನ್ನು ಸ್ಪೀಕರ್ ಕಾಪಾಡುತ್ತಾರೆ. ಸದಸ್ಯರು ಒಂದು ವೇಳೆ ಅಶಿಸ್ತಿನಿಂದ ನಡೆದುಕೊಂಡರೆ ಅವರನ್ನು ಸದನದಿಂದ ಹೊರ ಹೋಗುವಂತೆ ಹೇಳುವ ಅಧಿಕಾರವನ್ನು ಸ್ಪೀಕರ್ ಪಡೆದಿದ್ದಾರೆ.
- ಸದನದಲ್ಲಿ ಚರ್ಚೆಯಾದ ಮಸೂದೆಯ ಪರ ವಿರೋಧ ಸಮಾನ ಮತಗಳು ಬಂದರೆ ಸ್ಪೀಕರ್ ತಮ್ಮ ಮತ(Casting Vote)ನ್ನು ಚಲಾಯಿಸಬಹುದು.
- ಅಸಂಬದ್ಧ ಚರ್ಚೆಗಳನ್ನು ಕಲಾಪ ಪಟ್ಟಿಯಿಂದ ತೆಗೆದು ಹಾಕುವ ಅಧಿಕಾರವು ಸ್ಪೀಕರಿಗೆ ಇದೆ.
- ಸ್ಪೀಕರ್ ಅವರು ರೂಲ್ಸ್ ಕಮಿಟಿ ಮತ್ತು ಬಿಸಿನೆಸ್ ಅಡ್ವೆಸರಿ ಕಮಿಟಿಗಳ ಅಧ್ಯಕ್ಷರಾಗಿದ್ದು ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಅಂದಾಜು ಸಮಿತಿ ಹಾಗೂ ಸಾರ್ವಜನಿಕ ಉದ್ಯಮ ಸಮಿತಿಗಳ ಅಧ್ಯಕ್ಷರುಗಳನ್ನು ಸ್ಪೀಕರ್ ಅವರೇ ನೇಮಿಸುತ್ತಾರೆ.
- ಸ್ಪೀಕರ್ ಸ್ಥಾನ ಶ್ರೇಷ್ಠವಾದದ್ದು ಹಾಗೂ ಗೌರವತವಾದುದು ಇವರು ಆಳುವ ಪಕ್ಷದಿಂದ ಆಯ್ಕೆಯಾದರೂ ಸದನದಲ್ಲಿ ಯಾವುದೇ ತಾರತಮ್ಯ ಮಾಡದೆ ಸದನದ ಗೌರವವನ್ನು ಕಾಪಾಡುತ್ತಾರೆ.
- ಲೋಕಸಭೆಯ ಸದಸ್ಯರ ಪಕ್ಷಾಂತರ ಕುರಿತಂತೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಲೋಕಸಭಾ ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ಅಧ್ಯಕ್ಷನಿಗಿರುತ್ತದೆ.
- ಲೋಕಸಭಾ ಸದಸ್ಯರ ರಾಜೀನಾಮೆಯನ್ನು ಸ್ವೀಕರಿಸುವ ಹಾಗೂ ರಾಜೀನಾಮೆಯ ನೈಜತೆಯನ್ನು ಪರಿಶೀಲಿಸುವ ಅಧಿಕಾರಸ್ಪೀಕರ್‌ವರಿಗಿದೆ.
ಉಪಸಂಹಾರ
ಈ ಹಿಂದೆ ಜೀವಿ ಮಾವಲಂಕರ್ ಮತ್ತು ವಿಠ್ಠಲ್‌ಬಾಯಿ ಪಟೇಲರು ಧೈರ್ಯ ಹಾಗೂ ದಿಟ್ಟತನದಿಂದ ನಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕ್ಲಿಪ್ಟನ್ ಬ್ರೌನ್ ಹೇಳಿದಂತೆ ಸ್ಪೀಕರ್ ಗಮನಿಸಬೇಕಾದ ವಿಷಯವೆಂದರೆ I am not government man nar the opposition man and I am the house of the commons man ಸಭೆಯಲ್ಲಿ ಗೊಂದಲ ಹಾಗೂ ಉದ್ರೇಕಗಳುಂಟಾದರೆ ಸ್ಪೀಕರ್ ತಮ್ಮ ನಗುವಿನ ಹಾಗೂ ಹಾಸ್ಯ ಚಟಾಕಿಗಳ ಮೂಲಕ ಸದಸ್ಯರನ್ನು ಸಮಾಧಾನಗೊಳಿಸಬೇಕು.