ಕೈಗಾರೀಕರಣ, ನಗರೀಕರಣ ಮತ್ತು ಆಧುನಿಕ ಕೃಷಿ ಪದ್ಧತಿಗಳ ಪರಿಣಾಮವಾಗಿ ಮಣ್ಣಿನ ಗುಣಮಟ್ಟ ಕುಸಿಯುತ್ತಿದೆ. ಇದರಿಂದ ಪರಿಸರ ಸಮತೋಲನ ಹಾಗೂ ಮಾನವನ ಆರೋಗ್ಯ ಎರಡಕ್ಕೂ ಗಂಭೀರ ಸಮಸ್ಯೆಗಳು ಎದುರಾಗಿವೆ.
ಮಣ್ಣಿನ ಮಾಲಿನ್ಯದ ಪರಿಣಾಮಗಳು:
- ಭೂಮಿಯ ಮಾಲಿನ್ಯದಿಂದಾಗಿ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಮಣ್ಣಿನಲ್ಲಿನ ಬೌದ್ಧಿಕ ಹಾಗೂ ಜೈವಿಕ ರಸಾಯನಿಕಗಳು ನಾಶವಾಗುತ್ತವೆ. ಮಣ್ಣಿನ ಉಷ್ಣಾಂಶತೆ ಹಾಗೂ ಆರ್ದ್ರತೆಯಲ್ಲಿ ಏರುಪೇರು ಕಂಡು ಬರುತ್ತದೆ, ಇದರಿಂದ ಭೂಮಿ ಒಣಗಿ ಬಿರುಕು ಬಿಡುತ್ತದೆ.
- ಕೃಷಿ ಕಾರ್ಯಗಳಿಂದ ಮಣ್ಣಿನ ಸವೆತ ಹೆಚ್ಚಾಗಿ, ಮಣ್ಣಿನ ಪೋಷಕಾಂಶಗಳು ಕಡಿಮೆಯಾಗುತ್ತವೆ. ಪರಿಣಾಮವಾಗಿ ಇಳುವರಿ ಕಡಿಮೆಯಾಗಿ ಲವಣಾಂಶ ಹೆಚ್ಚುತ್ತದೆ. ಕೆರೆ ಹಾಗೂ ಜಲಾಶಯಗಳಲ್ಲಿ ನೀರು ತುಂಬಿ ಕೃಷಿ ನೀರಿನ ಕೊರತೆ ಕಂಡು ಬರಬಹುದು.
- ಅಪಾಯಕಾರಿ ರಸಾಯನಿಕಗಳ ಬಳಕೆಯಿಂದ ಮಾನವನ್ನು ಹಲವಾರು ರೋಗಗಳಿಗೆ ತುತ್ತಾಗಬಹುದು.
- ಸಸ್ಯಗಳ ಫಲವತ್ತತೆ ಕಡಿಮೆಯಾಗುವುದರ ಜೊತೆಗೆ ಪರಿಸರದಲ್ಲಿ ಅಸಮತೋಲನ ಕಂಡುಬರುತ್ತದೆ. ಮಣ್ಣಿನ ಮಾಲಿನ್ಯದಿಂದ ಮಣ್ಣಿನಲ್ಲಿರುವ ಪ್ರಾಣಿ ಹಾಗೂ ಸಸ್ಯವರ್ಗಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಆಗಬಹುದು.
- ಮಣ್ಣಿನ ಮಾಲಿನ್ಯದಿಂದ ನಗರದ ಚರಂಡಿಗಳು ತುಂಬಿಕೊಂಡು ನೀರು ಮನೆಯೊಳಗೂ ಪ್ರವೇಶಿಸಬಹುದು. ಬೆಂಗಳೂರಿನಂತಹ ನಗರದಲ್ಲಿ ಮನೆಯೊಳಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಹೀಗೆ ಆದಾಗ ಅಸಹನೆಯುಕ್ತ ವಾಸನೆ ಕಂಡುಬರುತ್ತದೆ. ತ್ಯಾಜ್ಯ ನಿರ್ವಹಣೆಗೆ ತೊಂದರೆ ಕಾಣಿಸಬಹುದು.
- ಮಣ್ಣಿನ ಶಿಥಿಲೀಕರಣದಿಂದ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಬಂಜರುಭೂಮಿ ನಿರ್ಮಾಣವಾಗಬಹುದು.
- ರೋಗನಿರೋಧಕ ಔಷಧಿಗಳು, ಕೀಟನಾಶಕಗಳು ಹಾಗೂ ಕಳೆನಾಶಕಗಳು ಮಣ್ಣಿನಲ್ಲಿ ಸೇರಿ ಸಸ್ಯ ಬೇರುಗಳಿಗೆ ಸೇರಿಕೊಳ್ಳುತ್ತವೆ. ಇದು ಮಾನವನ ಶರೀರಕ್ಕೂ ಸೇರಿ ಆರೋಗ್ಯವನ್ನು ಹದಗೆಡಿಸಬಹುದು.
- ವಿಷಕಾರಿ ಲೋಹಗಳು ಮಣ್ಣಿನಲ್ಲಿ ಸೇರುವುದರಿಂದ ಸೂಕ್ಷ್ಮಜೀವಿಗಳ ಉಳಿವಿಗೆ ತೊಂದರೆಯಾಗುತ್ತದೆ.
- ಸತ್ತಪ್ರಾಣಿಗಳ ಕಳೇಬರ, ಮಾನವ ಮತ್ತು ಪ್ರಾಣಿಗಳ ಮಲಮೂತ್ರಗಳು, ಕೊಳೆತ ವಸ್ತುಗಳು ಹಾಗೂ ಹಳಸಿದ ಪದಾರ್ಥಗಳು ಮಣ್ಣಿನಲ್ಲಿ ಸೇರುವುದರಿಂದ ಸುತ್ತಲಿನ ಪ್ರದೇಶ ದುರ್ವಾಸನೆಯಿಂದ ಕೂಡಿರುತ್ತದೆ.
- ಜನರು ಎಸೆಯುವ ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಕಪ್ಪುಗಳು, ಮಣ್ಣಿನಲ್ಲಿ ಕೊಳೆಯದೆ ಹಾಗೆ ಉಳಿದುಬಿಡುತ್ತವೆ. ಕೃಷಿ ಕಾರ್ಯ ಕೈಗೊಂಡ ಸಮಯದಲ್ಲಿ ಸಸ್ಯಗಳ ಬೇರುಗಳು ಹೆಚ್ಚು ಆಳಕ್ಕೆ ಇಳಿಯದಂತೆ ಈ ಪ್ಲಾಸ್ಟಿಕ್ ತಡೆಯುತ್ತದೆ. ಜೋರಾಗಿ ಗಾಳಿ ಬೀಸಿದರೆ ಫಲವತ್ತಾಗಿ ಬೆಳೆದ ಬೆಳೆಗಳು ಉದುರಿ ಬೀಳುತ್ತವೆ. ಇದರಿಂದ ಇಳುವರಿ ಕಡಿಮೆಯಾಗಿ ಆಹಾರದ ಅಭಾವ ಕಾಣಿಸಿಕೊಳ್ಳುತ್ತದೆ.
ಮಣ್ಣು ಮಾಲಿನ್ಯವನ್ನು ನಿಯಂತ್ರಿಸುವ ನಿವಾರಣೋಪಾಯಗಳು:
- ಮಣ್ಣಿನ ಮಾಲಿನ್ಯವನ್ನು ತಡೆಯಬೇಕೆಂದರೆ ರಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಬೇಕು.
- ಜೈವಿಕ ಕಿಟನಾಶಕಗಳು ಹಾಗೂ ಜೈವಿಕ ಗೊಬ್ಬರಗಳನ್ನು ಬಳಸುವಂತೆ ರೈತರಿಗೆ ಮಾರ್ಗದರ್ಶನ ನೀಡಬೇಕು. ಆಗ ಇಳುವರಿ ಹೆಚ್ಚಾಗುತ್ತದೆ. ಮಣ್ಣಿನ ಮಾಲಿನ್ಯವು ಕಡಿಮೆಯಾಗುತ್ತದೆ.
- ಆಧುನಿಕ ಬೇಸಾಯ ಪದ್ಧತಿಯನ್ನು ನಿಲ್ಲಿಸಿ ಸಾವಯವ ಕೃಷಿ ಪದ್ಧತಿಯನ್ನು ಹಮ್ಮಿಕೊಳ್ಳಬೇಕು.
- ಸಾಮಾಜಿಕ ಅರಣ್ಣೀಕರಣ ರೈತರ ಹಾಗೂ ಸಾರ್ವಜನಿಕರ ಗುರಿಯಾಗಬೇಕು.
- ಘನ ತ್ಯಾಜ್ಯವನ್ನು ಶುದ್ಧೀಕರಿಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿ ಮಣ್ಣಿನ ಮಾಲಿನ್ಯ ಕಡಿಮೆಯಾಗುತ್ತದೆ.
- ಮಣ್ಣಿನ ಸವೆತವನ್ನು ಕಡಿಮೆ ಮಾಡಲು ಇಳಿಜಾರು ಕ್ರಮದಲ್ಲಿ ಕೃಷಿ ಕಾರ್ಯಗಳನ್ನು ಮಾಡಬೇಕು ನೀರು ಹರಿದು ಹೋಗದಂತೆ ಇಳಿಜಾರಿಗೆ ಅಡ್ಡಲಾಗಿ ಬದುಕುಗಳನ್ನು ನಿರ್ಮಿಸಬೇಕು.
- ಕೈಗಾರಿಕಾ ವಲಯದ ಕೊಳಕು ನೀರು ಹಾಗೂ ನಗರಗಳ ಚರಂಡಿ ನೀರನ್ನು ಹೊಲಗಳ ಕಡೆಗೆ ಹರಿದು ಬರದಂತೆ ನಿಯಂತ್ರಣ ಮಾಡಬೇಕು.
- ಹೊಲಗಳಲ್ಲಿ ಡಿ.ಡಿ.ಟಿಯನ್ನು ಬಳಸಿದಂತೆ ನಿಷೇಧ ಹೇರಬೇಕು.
- ಜೋಳ, ಭತ್ತದ ಹೊಟ್ಟು, ಕಬ್ಬಿನ ಸಿಪ್ಪೆ, ತಂಬಾಕು, ಸೆಣಬು, ತೆಂಗಿನನಾರು ಸಿಪ್ಪೆ, ಕಬ್ಬಿನ ಸಿಪ್ಪೆ, ಮುಂತಾದವುಗಳನ್ನು ವ್ಯರ್ಥವಾಗಿ ಎಸೆಯುವ ಬದಲಾಗಿ ಕಾಗದ ಹಾಗೂ ರಟ್ಟು ತಯಾರಿಸಲು ಬಳಸಬೇಕು.
- ಪರಿಸರ ಕಾಳಜಿ ಪ್ರದರ್ಶನಗಳನ್ನು ಹಳ್ಳಿಗಳಲ್ಲಿ ಮಾಡುವುದರಿಂದ ರೈತರು ಅದರ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ.
ಉಪಸಂಹಾರ
ಮಣ್ಣಿನ ಮಾಲಿನ್ಯವು ಕೃಷಿ, ಆರೋಗ್ಯ ಮತ್ತು ಪರಿಸರದ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಬೀರುತ್ತದೆ. ರಸಾಯನಿಕಗಳ ಅತಿಯಾದ ಬಳಕೆ, ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆ ಮತ್ತು ಕೈಗಾರಿಕಾ ಮಲಿನ ನೀರುಗಳು ಮಣ್ಣಿನ ಫಲವತ್ತತೆಯನ್ನು ಹದಗೆಡಿಸುತ್ತಿವೆ. ಇದನ್ನು ನಿಯಂತ್ರಿಸಲು ಸಾವಯವ ಕೃಷಿ, ಜೈವಿಕ ಗೊಬ್ಬರಗಳ ಬಳಕೆ ಹಾಗೂ ಸಾರ್ವಜನಿಕ ಜಾಗೃತಿ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬರೂ ಪರಿಸರದ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿದರೆ ಮಾತ್ರ ಆರೋಗ್ಯಕರ ಮಣ್ಣು ಮತ್ತು ಸುರಕ್ಷಿತ ಭವಿಷ್ಯವನ್ನು ನಿರ್ಮಿಸಬಹುದು.