ನೀರು ಜೀವದ ಮೂಲವಾಗಿದ್ದು ಮಾನವ ಹಾಗೂ ಪ್ರಕೃತಿಯ ಅಸ್ತಿತ್ವಕ್ಕೆ ಅತ್ಯಗತ್ಯವಾಗಿದೆ. ಆದರೆ ಮಾನವ ಕ್ರಿಯೆಗಳ ಪರಿಣಾಮವಾಗಿ ಇಂದು ಜಲಮೂಲಗಳು ಭಾರೀ ಪ್ರಮಾಣದಲ್ಲಿ ಮಾಲಿನ್ಯಗೊಳ್ಳುತ್ತಿವೆ.
ಜಲಮಾಲಿನ್ಯದ ಪರಿಣಾಮಗಳು: (Results of Water Pollution)
- ಜಲಮಾಲಿನ್ಯದಿಂದಾಗಿ ಹಲವಾರು ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಉದಾ: ಕಾಲರಾ, ಟೈಪಾಯಿಡ್, ಅತಿಸಾರ, ಅಮಶಂಕೆ, ಕಾಮಾಲೆ, ಡೆಂಗ್ಯೂ, ಚಿಕನ್ ಗುನ್ಯಾ, ಕರೋನಾ ಮೊದಲಾದವುಗಳು.
- 1955ರಲ್ಲಿ ದೆಹಲಿಯ ನಿವಾಸಗಳು ಕೊಳಚೆ ನೀರಿನ ಮಾಲಿನ್ಯದಿಂದ ಸುಮಾರು 35000 ಜನರು ಕಾಮಾಲೆ ರೋಗಕ್ಕೆ ತುತ್ತಾದರು.
- ಪ್ರತಿ ವರ್ಷ ಸಮುದ್ರಕ್ಕೆ ಸೇರುವ ತೈಲದಿಂದ ನೀರು ಮಾಲಿನ್ಯಕಾರಕವಾಗುವುದರಿಂದ ಸಸ್ಯಗಳು ಹಾಗೂ ಮೀನುಗಳು ಸಾವನ್ನಪ್ಪುತ್ತವೆ. ಪ್ರತಿವರ್ಷ 50,000 ದಿಂದ 2,50,000ದಷ್ಟು ಪಕ್ಷಿಗಳು ಸಾವನ್ನಪ್ಪುತ್ತವೆ ಎಂದು ವರದಿಯಾಗಿದೆ.
- ಪ್ರತಿ ವರ್ಷ ಸುಮಾರು 10000 ಜನರು ಕೀಟನಾಶಕಗಳ ಪ್ರಭಾವದಿಂದ ಸಾವಿಗೀಡಾಗುತ್ತಾರೆ ಎಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.
- ಮಲಿನಗೊಂಡ ಸರೋವರ, ನದಿ, ಕೆರೆ ಹಾಗೂ ಅಂತರ್ಜಲದ ನೀರನ್ನು ಬಳಸುವುದರಿಂದ ಬೆಳೆಗಳ ಇಳುವರಿ ಕಡಿಮೆಯಾಗುತ್ತದೆ.
- ಗಂಗಾ ನದಿಯ ದಂಡೆಯ ರುದ್ರ ಭೂಮಿಗಳಿಂದ ದಿನವೊಂದಕ್ಕೆ 100-120 ಅರೆಬೆಂದ ಶವಗಳು ಹಾಗೂ ಗಂಗಾ ನದಿಯ ಸಮೀಪವಿರುವ ತೈಲ ಕೇಂದ್ರ ಸಂರಕ್ಷಣಾ ಕೇಂದ್ರವೊಂದರಿಂದ ಹರಿದು ಬಂದ ವ್ಯರ್ಥ ವಸ್ತುವಿನಿಂದ 1968ರಲ್ಲಿ ಮಾಂಘೈರ್ ನದಿ ಹೊತ್ತಿ ಉರಿಯಿತು.
- ವಿವಿಧ ಪ್ರಕಾರದ ಕೀಟನಾಶಕಗಳು ಹಾಗೂ ಕ್ರಿಮಿನಾಶಕಗಳು ಆಧುನಿಕ ವ್ಯವಸಾಯ ಪದ್ಧತಿಗೆ ಬಳಕೆಯಾಗುತ್ತಿರುವುದರಿಂದ ಇವುಗಳಿಂದ ಹೊರಹೊಮ್ಮುವ ವಿಷಕಾರಿ ರಸಾಯನಿಕಗಳು ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತವೆ. ನರಮಂಡಲದ ತೊಂದರೆ, ಲಿವರ್ ಹಾಗೂ ಮೂತ್ರ ಕೋಶದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
- ಸೀಸ ಒಂದು ವಿಷಯುಕ್ತವಾದ ರಸಾಯನಿಕವಾಗಿದ್ದು ಕೈಗಾರಿಕಾ ತ್ಯಾಜ್ಯಗಳ ಮೂಲಕ ನದಿಯ ನೀರನ್ನು ಸೇರಿಕೊಳ್ಳುತ್ತದೆ. ಇದರಿಂದ ಅನೀಮಿಯ ರಕ್ತಹೀನತೆಯಂತಹ ಖಾಯಿಲೆಗಳು ಬರುತ್ತವೆ. ದೇಹದಲ್ಲಿ ಸೀಸದ ಪ್ರಮಾಣ ಹೆಚ್ಚಾದರೆ ನರಮಂಡಲದ ಕಾಯಿಲೆಯಿಂದಾಗಿ ಪಾರ್ಶ್ವವಾಯು ಪೀಡಿತರಾಗುವ ಸಾಧ್ಯತೆ ಹೆಚ್ಚು. ಈ ರೀತಿ ಪಾಶ್ವ ವಾಯುವಿಗೆ ʻʻಲೆಡ್‌ಪಾಲ್ಸಿʼʼ ಎಂದು ಕರೆಯುವರು.
- ದೇಹದಲ್ಲಿ ಕ್ಲೋರೈಡ್ ಪ್ರಮಾಣ ಹೆಚ್ಚಾದರೆ ಹಲ್ಲಿನ ವಿರೂಪತೆ, ಮೂಳೆಗಳು ಬಿರುಸು ಹಾಗೂ ಗಡಸಾಗುವುದು, ಕೀಲು ನೋವು ಮುಂತಾದ ರೋಗಲಕ್ಷಣಗಳು ಕಂಡುಬರುತ್ತವೆ. ಇದರ ಪರಿಣಾಮದಿಂದಾಗಿ ಫ್ಲೋರೋಸಿಸ್ ಎಂಬ ಕಾಯಿಲೆ ಕಾಣಿಸಿಕೊಳ್ಳುತ್ತದೆ.
- ನೀರಿನ ವಿಕಿರಣ ಮಾಲಿನ್ಯದಿಂದ ಥೈರೊಯ್ಡ್ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್ ಹಾಗೂ ಮೂತ್ರಪಿಂಡದ ಕ್ಯಾನ್ಸರ್‌ಗಳು ಬರುತ್ತವೆ.
- ರಸಾಯನಿಕ ಗೊಬ್ಬರಗಳ ಬಳಕೆಯಿಂದ ನೀರಿನಲ್ಲಿ ರಸಾಯನಿಕ ನೈಟ್ರೇಟ್ ಸೇರಿಕೊಳ್ಳುತ್ತದೆ. ಇದರಿಂದ ಮಕ್ಕಳಲ್ಲಿ ನೀಲಿ ಶಿಶು ಕಾಯಿಲೆ ಕಾಣಿಸಿಕೊಳ್ಳುತ್ತದೆ.
- ಅರ್ಸೆನಿಕ್ ಒಂದು ವಿಷಕಾರಿ ರಸಾಯನಿಕವಾಗಿದೆ. ಇದರಿಂದ ಕಪ್ಪು ಪಾದರೋಗ ಬರುತ್ತದೆ. ಕೀಟನಾಶಕಗಳು ನೀರಿನಲ್ಲಿ ಸೇರಿದಾಗ ಅದರ ಜೊತೆಗೆ ಅರ್ಸೆನಿಕ್ ಸಹ ನೀರಿನಲ್ಲಿ ಸೇರಿಕೊಳ್ಳುತ್ತದೆ.
- ತುಂಗಭದ್ರ ನದಿಯ ದಡದಲ್ಲಿರುವ ಕಾರ್ಖಾನೆಯಿಂದ ಹೊರ ಸೂಸಲ್ಪಟ್ಟ ನೀರು ತುಂಗಭದ್ರ ನದಿಯನ್ನು ಸೇರಿತು. ಅಲ್ಲಿನ ನಲವಾಗಲು ಎಂಬ ಗ್ರಾಮದ ಜನರು ನದಿಯ ನೀರನ್ನು ಸೇವಿಸಿದಾಗ ಅವರಿಗೆ ಯಕೃತ್ತಿನ ಕಾಯಿಲೆ, ಕಣ್ಣು ಉರಿ, ಗಂಟಲು ಉರಿ, ಚರ್ಮರೋಗ, ಎದೆ ಉರಿ, ಕೆಮ್ಮು ಮುಂತಾದ ರೋಗಗಳು ಕಾಣಿಸಿಕೊಂಡವು. ಹರಿಹರದ ಭಾಗದ 4 ಹಳ್ಳಿಗಳ 40,000 ಜನ ಭದ್ರಾವತಿಯ ಭದ್ರಾ ನದಿ ದಂಡೆಯ 9 ಹಳ್ಳಿಯ 13,000 ಜನ ತೀವ್ರತರವಾದ ಹಲವು ಕಾಯಿಲೆಗಳಿಂದ ಇಂದಿಗೂ ಬಳಲುತ್ತಿದ್ದಾರೆ.
- ಭಾರವಾದ ಲೋಹಗಳಾದ ಪಾದರಸ, ಕ್ಯಾಡ್ಮಿಯಂ, ಕ್ರೋಮಿಯಂ ಮುಂತಾದ ವಿಷಕಾರಕವಾದ ರಸಾಯನಿಕಗಳು ಮೀನಮಾಟ, ಇಟಾಯಿ ಇಟಾಯಿ ಎಂಬ ಹೊಸ ಹೊಸ ಕಾಯಿಲೆಗಳಿಗೆ ಕಾರಣವಾಗುತ್ತಿವೆ.
|
ರೋಗ |
ಜೀವಿ |
ರೋಗಲಕ್ಷಣ |
|
|
1 |
ಕಾಲಾರಾ |
ಬ್ಯಾಕ್ಟೀರಿಯಾ |
ತೀವ್ರ ವಾಂತಿ ಭೇದಿ ನಿರ್ಜಲೀಕರಣ ಚಿಕಿತ್ಸೆ ದೊರೆಯದಿದ್ದರೆ ಪ್ರಾಣಾಪಾಯ |
|
2 |
ಟೈಪಾಯಿಡ್ |
ಬ್ಯಾಕ್ಟೀರಿಯ |
ಕರುಳು ಬೇನೆ ಚಿಕಿತ್ಸೆ ಬಹಳ ಮುಖ್ಯ |
|
3 |
ಹೆಪಾಟೈಟಸ್ |
ವೈರಸ್ |
ಹಳದಿ ಕಾಮಾಲೆ ಚರ್ಮ ಕಾಯಿಲೆ ಯಕೃತ್ ಊತ ವಾಂತಿ ಹೊಟ್ಟೆ ನೋವು |
|
4 |
ಅತಿಸಾರ |
ಬ್ಯಾಕ್ಟೀರಿಯಾ |
ತೀವ್ರವಂತಿ ಭೇದಿ ಅತಿಸಾರ ನಿರ್ಜಲೀಕರಣ |
|
5 |
ಅಮಿಬಿಕ್ ಅತಿಸಾರ |
ಪ್ರೋಟೋಜೋವಾ |
ಭೇದಿ ಬಹು ದಿನಗಳವರೆಗೆ |
ಜಲ ಮಾಲಿನ್ಯದ ನಿವಾರಣೋಪಾಯಗಳು:
- ನದಿ ತೀರದಲ್ಲಿ ಬಫರ್ ವಲಯಗಳನ್ನು ಸ್ಥಾಪಿಸುವುದು
- ಚರಂಡಿಯ ನೀರು ನದಿ, ಸರೋವರ, ಕೊಳ, ಕೆರೆ ಹಾಗೂ ಹೊಂಡಗಳಿಗೆ ಹರಿದು ಹೋಗದಂತೆ ನಿಯಂತ್ರಿಸಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು.
- ಚರಂಡಿ ನೀರು ಹಾಗೂ ಕೈಗಾರಿಕಾ ತ್ಯಾಜ್ಯ ನೀರನ್ನು ನದಿ ನೀರಿಗೆ ಸೇರಿಸುವ ಮುಂಚೆ ಸಂಸ್ಕರಿಸಬೇಕು.
- ಅಣು ವಿದ್ಯುತ್ ಹಾಗೂ ಥರ್ಮಲ್ ವಿದ್ಯುತ್ ಸ್ಥಾವರಗಳಿಂದ ಬಿಡುವ ಬಿಸಿ ನೀರನ್ನು ತಂಪಾಗಿಸಿ ನಂತರ ಬಿಡಬೇಕು.
- ಧಾರ್ಮಿಕ ಹಾಗೂ ಮೂಢನಂಬಿಕೆಗೆ ಒಳಗಾಗಿ ಹೆಣಗಳನ್ನು ಹಾಗೂ ಅವುಗಳ ಬಟ್ಟೆಗಳನ್ನು ನದಿಗಳಲ್ಲಿ ಬಿಡುವುದನ್ನು ತಡೆಗಟ್ಟಬೇಕು.
- ಕೆರೆ, ಹೊಳೆಗಳು, ಹೊಂಡಗಳು ಹಾಗೂ ನದಿಗಳಲ್ಲಿ ದನ ಕರುಗಳನ್ನು ಈಜಲು ಬಿಡುವುದು ಮತ್ತು ಅವುಗಳ ಮೈತೊಳೆಯುವುದನ್ನು ನಿಯಂತ್ರಿಸಬೇಕು.
- ಕೃಷಿ ಭೂಮಿಗಳಿಗೆ ಅತಿಯಾದ ರಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಉಪಯೋಗಿಸುವುದನ್ನು ತಡೆಯಬೇಕು.
- ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಲಮೂತ್ರಗಳನ್ನು ಶುದ್ಧೀಕರಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು.
- ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಜನರು ಬಯಲು ಶೌಚಾಲಯವನ್ನು ಬಳಸುತ್ತಿದ್ದಾರೆ. ಹಾಗಾಗಿ ಅಧಿಕ ಸಂಖ್ಯೆಯಲ್ಲಿ ಗ್ರಾಮಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಸಾರ್ವಜನಿಕರಲ್ಲಿ ಸ್ಥಳಗಳಲ್ಲಿ ನೈರ್ಮಲ್ಯವನ್ನು ಕಾಪಾಡಬೇಕು.
- ನಾಯಿ, ನರಿ, ಪ್ರಾಣಿಗಳು, ದನ ಕರುಗಳು ಹಾಗೂ ಮುಂತಾದವುಗಳ ಸತ್ತ ದೇಹಗಳನ್ನು ನದಿಯಲ್ಲಿ ಎಸೆಯದಂತೆ ನಿರ್ಬಂಧ ಹೇರಬೇಕು.
- ನೀರಿನ ಬಳಕೆಯನ್ನು ಇತಿಮಿತಿಗೊಳಿಸಬೇಕು.
- ಜಲ ಮಾಲಿನ್ಯಕ್ಕೆ ಕಾರಣವಾಗುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
- ಪ್ರವಾಸ ಹಾಗೂ ನದಿ ನೀರಿನಲ್ಲಿ ಈಜಲು ಹೋದಾಗ ತಿಂದು ಬಿಸಾಕಿದ ಪದಾರ್ಥಗಳು ರಟ್ಟು, ಪ್ಲಾಸ್ಟಿಕ್ ಬಾಟಲಿಗಳು, ಟೀ ಕಪ್ಪುಗಳು, ಊಟದ ತಟ್ಟೆಗಳು, ಮಾಂಸದ ತುಂಡುಗಳನ್ನು ನದಿಗಳಲ್ಲಿ ಎಸೆಯದಂತೆ ಕ್ರಮ ಕೈಗೊಳ್ಳಬೇಕು.
- ಸಮುದ್ರದಲ್ಲಿ ಹಡಗುಗಳಿಂದ ತೈಲ ಸೋರಿಕೆಯನ್ನು ತಡೆಗಟ್ಟುವುದು.
- ಜಲ ಮಾಲಿನ್ಯವನ್ನು ನಿಯಂತ್ರಿಸಲು 1974ರಲ್ಲಿ ಜಲಮಾಲಿನ್ಯ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತರಲಾಗಿದೆ.
ಉಪಸಂಹಾರ
ಜಲಮಾಲಿನ್ಯವು ಮಾನವ ಜೀವನ, ಪ್ರಾಣಿ–ಪಕ್ಷಿಗಳು ಹಾಗೂ ಸಂಪೂರ್ಣ ಪರಿಸರ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಶುದ್ಧ ನೀರಿನಿಂದ ಅನೇಕ ಮಾರಕ ರೋಗಗಳು ಹರಡುತ್ತಿದ್ದು ಜನಜೀವನ ಸಂಕಷ್ಟಕ್ಕೆ ಒಳಗಾಗುತ್ತಿದೆ. ಜಲಮೂಲಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಮೇಲೂ ಇದೆ. ಜಲಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ. ಶುದ್ಧ ನೀರನ್ನು ಉಳಿಸಿಕೊಳ್ಳುವುದೇ ಭವಿಷ್ಯದ ಆರೋಗ್ಯಕರ ಸಮಾಜದ ಮೂಲಾಧಾರವಾಗಿದೆ.