ಓಜೋನ್ ರಂಧ್ರವನ್ನು ಅಂಟಾರ್ಟಿಕಾ ಸಮೀಕ್ಷೆಯಲ್ಲಿ ಬ್ರಿಟಿಷ್ ವಿಜ್ಞಾನಿ ಡಾ. ಜೆ ಪೋರಮನ್ ರವರು 1982 ರಲ್ಲಿ ದಕ್ಷಿಣ ಧ್ರುವದಲ್ಲಿ ಪತ್ತೆ ಹಚ್ಚಿದರು. 1987 ರಲ್ಲಿ ಓಝೋನ್ ಪದರದ ಸ್ಥಿತಿ ತಿಳಿಯಲು ನಾಸಾದಿಂದ ವಿಸ್ತೃತ ಪ್ರಮಿಕ್ಷೆ ನಡೆಸಲಾಯಿತು. ಓಜೋನ್ ಪದರು ಆರಂಭದಲ್ಲಿ ನಿಧಾನಗತಿಯಲ್ಲಿ ನಾಶವಾಗಲು ಆರಂಭಿಸಿತು. 1974 ರಲ್ಲಿ ಓಝೋನ್ ಪದರಿಗೆ ರಂಧ್ರವಿರುವುದು ಗೊತ್ತಾಯಿತು. ಓಜೋನ್ ಪದರು ಈಗಾಗಲೇ 4% ರಿಂದ 8% ರಷ್ಟು ನಾಶವಾಗಿದೆ. ಇದರ ನಾಶದ ಪರಿಣಾಮ ಈಗಾಗಲೇ ರಷ್ಯಾ, ಅಮೇರಿಕಾ, ಕೆನಡಾ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳ ಮೇಲೆ ಆಗಿದೆ. ಓಝೋನ್ ಪದರಿನ ನಾಶಕ್ಕೆ ಈ ಕೆಳಗಿನ ಅಂಶಗಳು ಕಾರಣಗಳಾಗಿವೆ. ಅವುಗಳೆಂದರೆ ಓಜೋನ್ ಪದರವು ವೇಗವರ್ಧಕಗಳಾದ ನೈಟ್ರಿಕ್ ಆಕ್ಸೈಡ್(NO) ನೈಟ್ರಸ್ ಆಕ್ಸೈಡ್(N2O) ಹೈಡ್ರಾಕ್ಸಿಲ್ (OH) ಪರಮಾಣ್ವಿಕ ಕ್ಲೋರಿಕ್ (CL) ಹಾಗೂ ಪರಮಾಣ್ವಿಕ ಬ್ರೋಮಿನ್ (Br) ಗಳಿಂದ ಹಾಳಾಗುತ್ತದೆ. ಇವುಗಳ ಜೊತೆಗೆ ಈ ಕೆಳಗಿನ ಕಾರಣಗಳಿಂದ ಓಜೋನ್ ಪದರು ನಶಿಸಿಹೋಗುತ್ತದೆ.
1.ಕ್ಲೋರೋ ಪ್ಲೋರೋ ಕಾರ್ಬನ್‌ಗಳು: (CFCs)
ಕ್ಲೋರೋ ಪ್ಲೋರೋ ಕಾರ್ಬನ್‌ಗಳು ಶೀತಕಾರಕ ಅನಿಲವಾಗಿದ್ದು ಇದನ್ನು ಏರ್‌ಕಂಡೀಷನ್ ಹಾಗೂ ರೆಪ್ರಜರೇಟರ್‌ನಲ್ಲಿ ಬಳಕೆ ಮಾಡಲಾಗುತ್ತದೆ. ಇದು ರೆಪ್ರಜರೇಟರ್‌ನಲ್ಲಿ ಆವಾಹಕ ನೊರೆಯನ್ನುಂಟು ಮಾಡುವ ಅನಿಲವಾಗಿದೆ. CFCs ಸ್ಥಿರವಾದ ಅನಿಲವಾದ ಕಾರಣ ಭೂಮಿಯ ಹತ್ತಿರ ಅದು ವಿಘಟನೆಗೊಳ್ಳದೆ. ವಾಯುಮಂಡಲದಲ್ಲಿ ಅತೀ ಎತ್ತರದವಾದ ಪ್ರದೇಶವನ್ನು ತಲುಪಿ ಅಲ್ಲಿ ವಿಘಟನೆ ಹೊಂದಿ ಕ್ಲೋರಿನ್ ಅನ್ನು ಬಿಡುಗಡೆ ಮಾಡುತ್ತದೆ. ಹೀಗೆ ಬಿಡುಗಡೆಗೊಂಡ ಕ್ಲೋರಿನ್ ಅಣುವು ವಿಭಜನೆಯಾದ ಓಜೋನಿನೊಂದಿಗೆ ಸೇರಿ ಅಸ್ಥಿರವಾದ ಮಧ್ಯಂತರ ಸಂಯುಕ್ತ ವಸ್ತುವಾದ ಕ್ಲೋರಿನ್ ಮೋನಾಕ್ಸೈಡ್ ಆಗಿ ಬದಲಾವಣೆ ಹೊಂದುತ್ತದೆ. ಈ ಕ್ಲೋರಿನ್ ಮಾನಾಕ್ಸೈಡ್ ಮತ್ತೆ ವಿಘಟನೆಗೊಂಡು ನವಜಾತ ಆಮ್ಲಜನಕ ಮತ್ತು ಕ್ಲೋರಿನ್ ಆಗಿ ಬದಲಾಗುತ್ತದೆ. ಹೀಗೆ ಬೇರ್ಪಟ ಕ್ಲೋರಿನ್ ಮತ್ತೊಂದು ಓಜೋನ್ ಅಣುವನ್ನು ನಾಶಪಡಿಸಲು ರೆಡಿಯಾಗುತ್ತದೆ. ಹೀಗೆ ಒಂದು ಕ್ಲೋರಿನ್ ಅಣುವು ಸುಮಾರು 1 ಲಕ್ಷ ಓಜೋನ್ ಕಣಗಳನ್ನು ನಾಶಪಡಿಸುವುದಲ್ಲದೆ ಅದರ ಪರಿಣಾಮ ಸುಮಾರು 100 ವರ್ಷಗಳವರೆಗೆ ಮುಂದುವರೆಯುತ್ತದೆ.
2. ಹ್ಯಾಲೋಜನ್‌ಗಳು: (ಹ್ಯಾಲೋನ್‌ಗಳು)
ಇದನ್ನು ಪ್ರಮುಖವಾಗಿ ಅಗ್ನಿಶಾಮಕಗಳಲ್ಲಿ ಬಳಕೆಮಾಡಲಾಗುತ್ತದೆ. ಇದು ಅಲ್ಲದೆ ವಾಯು, ನೌಕೆ, ಗಗನ ನೌಕೆ, ಹಡಗು ಹಾಗೂ ಜಲಾಂತರ್ಗಾಮಿಗಳಲ್ಲಿ ಬಳಸುತ್ತಾರೆ. ಇವು ಓಜೋನ್ ಪದರಿನ ನಾಶದಲ್ಲಿ CFCs ಗಿಂತ 3ರಿಂದ 10 ಪಟ್ಟು ಹೆಚ್ಚಾಗಿರುತ್ತವೆ.
3. ಬ್ರೋಮಿನ್ ಸಂಯುಕ್ತಗಳು:
ಬ್ರೊಮಿನ್ ಸಂಯುಕ್ತಗಳಾದ ಹ್ಯಾಲೋನ್, ಹೈಡ್ರೋಬ್ರೋಮೊ, ಫ್ಲೋರ್ ಕಾರ್ಬನ್‌ಗಳು ಅಗ್ನಿಶಾಮಕಗಳಲ್ಲಿ ಹಾಗೂ ಬ್ರೂಮೆಡ್‌ಗಳನ್ನು ಕ್ರಿಮಿನಾಶಕಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ.
4. ಕಾರ್ಬನ್ ಟೆಟ್ರಾಕ್ಲೋರೈಡ್: (CC14)
ಇದನ್ನು ಅಗ್ನಿಶಾಮಕ ದಳ, ಕೈಗಾರಿಕೆ, ಪ್ರಯೋಗಾಲಯ, ದ್ರಾವಕವಾಗಿ ಪೆಟ್ರೋ, ರಸಾಯನಿಕ, ಕ್ರೀಟನಾಶಕ ಹಾಗೂ ಔಷಧಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದು ಸಹ ಓಜೋನ್‌ನ್ನು CFCs ಯಷ್ಟೇ ಪರಇಣಾಮಕಾರಿಯಾಗಿ ನಾಶಮಾಡುತ್ತದೆ.
5. ಮಿಥೇಲ್ ಪ್ರೊಮೈಡ್: (CHBr)
ಮೀಥೇಲ್ ಬ್ರೊಮೈಡ್‌ನ್ನು ಕೀಟನಾಶಕಗಳಲ್ಲಿ ಬಳಸುತ್ತಾರೆ. ಇದು ಸಹ CFC ಯಷ್ಟೇ ಪರಿಣಾಮಕಾರಿಯಾಗಿ ಓಜೋನನ್ನು ನಾಶಗೊಳಿಸುತ್ತದೆ.
6. ಮಿಥೇಲ್ ಕ್ಲೋರೋಫಾರ್ಮ್:
ಇದನ್ನು ಕೈಗಾರಿಕಾ ದ್ರಾವಕವಾಗಿ ವಿದ್ಯುತ್ ಹಾಗೂ ಲೋಹಗಳ ಉಪಕರಣ ತಯಾರಿಕೆಯಲ್ಲಿ ಹಾಗೂ ಔಷಧಿಗಳಲ್ಲಿ ಬಳಸುತ್ತಾರೆ. ಇದರ ಓಜೋನ್ ವಿನಾಶ ಸಾಮರ್ಥ್ಯವು CFC ಗಿಂತ 10 ಪಟ್ಟು ಕಡಿಮೆ.
ಉಪಸಂಹಾರ
ಓಜೋನ್ ಪದರದ ನಾಶವು ಮಾನವ ಆರೋಗ್ಯ, ಪರಿಸರ ಹಾಗೂ ಜೀವ ವೈವಿಧ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ಕೈಗಾರಿಕೆಗಳಲ್ಲಿ ಬಳಸುವ ಹಾನಿಕಾರಕ ರಸಾಯನಿಕಗಳು ಈ ನಾಶಕ್ಕೆ ಪ್ರಮುಖ ಕಾರಣಗಳಾಗಿವೆ. ಓಜೋನ್ ಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹಾನಿಕಾರಕ ಅನಿಲಗಳ ಬಳಕೆಯನ್ನು ಕಡಿಮೆ ಮಾಡುವುದು ಅತ್ಯವಶ್ಯಕ. ಸರ್ಕಾರ, ಕೈಗಾರಿಕೆ ಮತ್ತು ನಾಗರಿಕರು ಒಟ್ಟಾಗಿ ಪರಿಸರ ಸಂರಕ್ಷಣೆಗೆ ಕೈಜೋಡಿಸಿದಾಗ ಮಾತ್ರ ಓಜೋನ್ ಪದರನ್ನು ಉಳಿಸಲು ಸಾಧ್ಯ. ಭವಿಷ್ಯದ ಪೀಳಿಗೆಗೆ ಸುರಕ್ಷಿತ ಭೂಮಿಯನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ.