ಹಸಿರು ಮನೆ ಪರಿಣಾಮವು ಇಂದಿನ ಜಗತ್ತಿನ ಅತ್ಯಂತ ಗಂಭೀರ ಪರಿಸರ ಸಮಸ್ಯೆಯಾಗಿದೆ. ಮಾನವ ಚಟುವಟಿಕೆಗಳಿಂದಾಗಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ ಭೂಮಿಯ ಸಹಜ ಸಮತೋಲನ ಹದಗೆಡುತ್ತಿದೆ. ಇದರ ಪರಿಣಾಮವಾಗಿ ಜಾಗತಿಕ ತಾಪಮಾನ ಏರಿಕೆ, ಪ್ರಕೃತಿ ವಿಕೋಪಗಳು ಹಾಗೂ ಜೀವ ವೈವಿಧ್ಯಕ್ಕೆ ಅಪಾಯ ಉಂಟಾಗಿದೆ.

ಹಸಿರು ಮನೆ ಪರಿಣಾಮದ ದುಷ್ಪರಿಣಾಮಗಳು:

 ಹಸಿರು ಮನೆ ಪರಿಣಾಮ ಈ ಕೆಳಗಿನ ಕಾರಣಗಳಿಂದ ಸಂಭವಿಸುತ್ತದೆ.

  1. ಜಾಗತಿಕ ತಾಪಮಾನವು ಹಸಿರು ಮನೆ ಪರಿಣಾಮದಿಂದ ಏರಿಕೆಯಾಗಿದೆ.
  2. ಮಿತಿಮೀರಿದ ಜನಸಂಖ್ಯೆ, ಫಾಸಿಲ್‌ ಇಂಧನಗಳ ಅತಿಯಾದ ಬಳಕೆ ಹಾಗೂ ಕಾಡುಗಳ ನಾಶದಿಂದ ಹಸಿರು ಮನೆ ಪರಿಣಾಮದ ಮೇಲೆ ದುಷ್ಪರಿಣಾಮ ಬೀರುತ್ತದೆ.
  3.  ಭೂಮಂಡಲದ ಶಾಖದಿಂದಾಗಿ ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ. ಕಳೆದ ಒಂದು ಶತಮಾನದಲ್ಲಿ ಸಾಗರದ ನೀರಿನ ಮಟ್ಟ ಶೇಕಡ 15ರಷ್ಟು ಏರಿಕೆಯಾಗಿದೆ.
  4.  ಭೂಮಿಯ ತಾಪಮಾನದ ಹೆಚ್ಚಾಗುವಿಕೆಯಿಂದ ಹಿಮ ಪ್ರದೇಶದಲ್ಲಿನ ಹಿಮಗಡ್ಡೆಗಳು ಕರಗಿ ಸಾಗರದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ. ಈಗಾಗಲೇ ಹಲವು ಕಡೆಗಳಲ್ಲಿ ಸಾಗರದ ನೀರಿನ ಮಟ್ಟ ಏರಿಕೆಯಾಗಿರುವುದು ದೃಢಪಟ್ಟಿದೆ.
  5. ಭೂ ಮೇಲ್ಮೈ ಉಷ್ಣತೆ ಹೆಚ್ಚಾದಂತೆ ಬಿರುಗಾಳಿ ಹೆಚ್ಚಾಗುವ ಸಂಭವ ಇರುತ್ತದೆ. ಉದಾ: 2002 ರಲ್ಲಿ ಆಂಧ್ರದಲ್ಲಿ ಬಿರುಗಾಳಿ ಬೀಸಿ ಸಾವಿರಾರು ಜನರು ಪ್ರಾಣ ತೆತ್ತರು.
  6.  ಭೂಮಿಯ ತಾಪಮಾನ ಹೆಚ್ಚಾದರೆ ಕೆರೆ, ಬಾವಿ, ನದಿ, ಸರೋವರಗಳು ಒಣಗಿ ಹೋಗಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ.
  7.  ಭೂಮಿಯ ತಾಪಮಾನದ ಪ್ರಮಾಣ ದಿನೇ ದಿನೇ ಹೆಚ್ಚಾದರೆ ಅಂತರ್ಜಲ ಇಂಗಿ ಹೋಗುತ್ತದೆ.
  8.  ವಾತಾವರಣದಲ್ಲಿನ ಬಿಸಿ ಗಾಳಿಯಿಂದ ಜನರ ಚರ್ಮದ ಮೇಲೆ ತೀವ್ರತರದ ಪರಿಣಾಮ ಬೀರುತ್ತದೆ.
  9. ಭೂಮಿಯ ತಾಪಮಾನದ ಪರಿಣಾಮದಿಂದ ಪಶು ಪಕ್ಷಿಗಳು, ಜಲಚರ ಪ್ರಾಣಿಗಳು ಹಾಗೂ ಮಾನವ ಜೀವಿ ನೀರಿಲ್ಲದೆ ಸಾಯಬಹುದು.
  10.  ಭೂಮಿಯ ಅತಿಯಾದ ಉಷ್ಣಾಂಶದಿಂದ ಕೃಷಿ ಬೆಳೆಗಳು ನೆರಳು ನೀಡುವ ಮರಗಳು ಹಾಗೂ ದಟ್ಟವಾದ ಕಾಡುಗಳು ಕಾಡ್ಗಿಚ್ಚಿಗೆ ಬಲಿಯಾಗಬಹುದು.

ಹಸಿರು ಮನೆ ಪರಿಣಾಮದ ನಿವಾರಣೋಪಾಯಗಳು:

  1. ಹಸಿರು ಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲಗಳನ್ನು ನಿಯಂತ್ರಿಸಲು CFCs ಮತ್ತು ಪಳೆಯುಳಿಕೆ ಆಧಾರಿತ ಇಂಧನಗಳ ಬಳಕೆಯನ್ನು ಕಡಿಮೆಗೊಳಿಸುವುದು.
  2.  ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಗೆ ಕಡವಾಣವನ್ನು ಹೇರುವುದು.
  3.  15 ವರ್ಷ ಮೀರಿದ ಯಾವುದೇ ವಾಹನಗಳನ್ನು ರಸ್ತೆಗೆ ಇಳಿಸದಂತೆ ಕ್ರಮ ಕೈಗೊಳ್ಳುವುದು.
  4.  ಶಕ್ತಿ ಸಾಧನಗಳನ್ನು ಪ್ರಯೋಜನಕಾರಿಯಾಗಿ ಬಳಸಿಕೊಳ್ಳಬೇಕು.
  5. ರೆಫ್ರಿಜರೇಟರ್ ಹಾಗೂ ಹವಾನಿಯಂತ್ರಿತ ವ್ಯವಸ್ಥೆಗಳ ತಯಾರಿಕೆಯಲ್ಲಿ ಕ್ಲೋರೋ ಫ್ಲೋರೋ ಕಾರ್ಬನ್ ರಹಿತ ತಂತ್ರಜ್ಞಾನವನ್ನು ಬಳಕೆ ಮಾಡಬೇಕು.
  6.  ಉರುವಲು ಸೌದೆಗಾಗಿ, ಅಣೆಕಟ್ಟು, ರಸ್ತೆ, ಸೇತುವೆ ಹಾಗೂ ಕಟ್ಟಡಗಳ ನಿರ್ಮಾಣಕ್ಕಾಗಿ ಅಧಿಕ ಸಂಖ್ಯೆಯ ಮರಗಳನ್ನು ಕಡಿಯುವುದನ್ನು ಕಡಿಮೆಮಾಡಬೇಕು.
  7.  ಮರವಿದ್ದರೆ ನಾಡು-ನಾಡಿದ್ದರೆ ನಾವು ಎಂಬ ಉಕ್ತಿಯನ್ನು ಅನುಸರಿಸಬೇಕು.
  8.  ಮಿಥೇನ್ ಸಂಗ್ರಹಿಸಿ ಅದನ್ನು ಇಂಧನವಾಗಿ ಬಳಸುವುದು.
  9. ಗಿಡಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವುದನ್ನು ಒಂದು ಹವ್ಯಾಸವಾಗುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು.
  10. ಪಕ್ಕದಲ್ಲಿ ಕಾಡು ಹಾಳಾಗುತ್ತಿದೆ ನನಗೆನಾಗಬೇಕಾಗಿದೆ ಎಂಬ ಉದಾಸಿನ ಮನಸ್ಸಿನಿಂದ ನಡೆದುಕೊಳ್ಳುವುದನ್ನು ಬಿಡಬೇಕು.
  11.  ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.
  12.  ಕಲ್ಲಿದ್ದಲು, ಪೆಟ್ರೋಲ್‌, ಸೀಮೆಎಣ್ಣೆ ಹಾಗೂ ಅಣು ವಿದ್ಯುತ್ ಸ್ಥಾವರಗಳನ್ನು ತಡೆಗಟ್ಟಬೇಕು.

ಉಪಸಂಹಾರ

ಹಸಿರು ಮನೆ ಪರಿಣಾಮವನ್ನು ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ಭೂಮಿಯ ಮೇಲೆ ಜೀವಿಸುವುದು ಕಷ್ಟಕರವಾಗಬಹುದು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇಂಧನ ಬಳಕೆಯಲ್ಲಿ ಮಿತಿಯು, ಮರ ನೆಡುವ ಅಭ್ಯಾಸ ಮತ್ತು ಶುದ್ಧ ಶಕ್ತಿ ಬಳಕೆ ಅಗತ್ಯವಾಗಿದೆ. ಸರ್ಕಾರದ ಪ್ರಯತ್ನಗಳ ಜೊತೆಗೆ ಸಾರ್ವಜನಿಕ ಜಾಗೃತಿಯೂ ಅತಿ ಮುಖ್ಯವಾಗಿದೆ. ಇಂದೇ ನಾವು ಕೈಗೊಳ್ಳುವ ಸಣ್ಣ ಕ್ರಮಗಳು ನಾಳೆಯ ಭದ್ರ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತವೆ. ಪರಿಸರವನ್ನು ಉಳಿಸಿದರೆ ಮಾತ್ರ ಮಾನವ ಜೀವನ ಉಳಿಯುತ್ತದೆ.