ಆಧುನಿಕ ಯುಗದಲ್ಲಿ ಕೈಗಾರಿಕೆಕರಣ, ನಗರೀಕರಣ ಮತ್ತು ವಾಹನಗಳ ಹೆಚ್ಚಳದಿಂದ ಶಬ್ಧ ಮಾಲಿನ್ಯವು ಗಂಭೀರ ಪರಿಸರ ಸಮಸ್ಯೆಯಾಗಿ ಪರಿಣಮಿಸಿದೆ. ಅತಿಯಾದ ಹಾಗೂ ಅಸಮಂಜಸ ಶಬ್ಧವು ಮನುಷ್ಯನ ದೈನಂದಿನ ಜೀವನದಲ್ಲಿ ಅಶಾಂತಿಯನ್ನುಂಟುಮಾಡುತ್ತದೆ. ಇದು ಕೇವಲ ಕಿವಿಗೆ ಮಾತ್ರವಲ್ಲದೆ ದೇಹದ ಇತರೆ ಅಂಗಗಳು ಹಾಗೂ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಶಬ್ಧ ಮಾಲಿನ್ಯದಿಂದ ಏಕಾಗ್ರತೆ ಕುಂಠಿತವಾಗಿ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಆದ್ದರಿಂದ ಶಬ್ಧ ಮಾಲಿನ್ಯದ ಪರಿಣಾಮಗಳು ಮತ್ತು ನಿವಾರಣೋಪಾಯಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.
ಶಬ್ಧ ಮಾಲಿನ್ಯದ ಪರಿಣಾಮಗಳು: (Results of Sound Pollution)
ಶಬ್ಧ ಮಾಲಿನ್ಯದಿಂದ ಉಂಟಾಗುವ ಪರಿಣಾಮಗಳೆಂದರೆ
- ಶಬ್ಧಗಳಲ್ಲಿನ ಏರುಪೇರಿನಿಂದ ಕೇಳುಗರಿಗೆ ಕಿರಿಕಿರಿಯುಂಟಾಗುತ್ತದೆ.
- ಶಬ್ಧ ಮಾಲಿನ್ಯದಿಂದ ಶ್ರವಣೇಂದ್ರಯಗಳ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತದೆ.
- ಅತಿಯಾದ ಶಬ್ಧದಿಂದ ಮನುಷ್ಯನ ಏಕಾಗ್ರತೆ ಹಾಳಾಗಿ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಗೊಳ್ಳುತ್ತದೆ.
- ಶಬ್ಧದ ತೀವ್ರತೆಯು 100db ಮೀರಿದರೆ ಹೃದಯ ಬಡಿತ ಹೆಚ್ಚುತ್ತದೆ
- ಶಬ್ಧದ ತೀವ್ರತೆಯು 120 db ಮೀರಿದರೆ ನೋವಿನ ಸಂವೇದನೆ ಹೆಚ್ಚುತ್ತದೆ.
- ಶಬ್ಧದ ತ್ರೀವ್ರತೆ 130 db ಮೀರಿದರೆ ವಿಪರೀತ ವಾಂತಿ ಹಾಗೂ ಮಂಪರು ಉಂಟಾಗುತ್ತದೆ.
- ಶಬ್ಧದ ತ್ರೀವ್ರತೆ 140 db ಮೀರಿದರೆ ಕರ್ಣಪಟಲ ಹರಿದು ಹೋಗುತ್ತದೆ.
- ಶಬ್ಧಮಾಲಿನ್ಯದಿಂದ ಶಾರೀರಿಕ ದಣಿವು ಉಂಟಾಗಿ ಮಾನಸಿಕ ದುಗುಡ, ವ್ಯಾಕುಲತೆ, ಭಾವೋದ್ವೇಗ ರಕ್ತದೊತ್ತಡ ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ.
- ಶಬ್ಧ ಮಾಲಿನ್ಯದಿಂದ ನಿದ್ರಾಹೀನತೆ, ದೃಷ್ಞಿದೋಷ, ಕಾಣಿಸಿಕೊಳ್ಳುತ್ತವೆ.
- ಅತಿಯಾದ ಶಬ್ಧಮಾಲಿನ್ಯದಿಂದಾಗಿ ಪ್ರಾಣಿ ಹಾಗೂ ಪಕ್ಷಿಗಳ ವರ್ತನೆಯ ಮೇಲೆಯೂ ಪರಿಣಾಮ ಬೀರುತ್ತದೆ. ಗರ್ಭಿಣಿ ಸ್ತ್ರೀಯರ ಹಾಗೂ ಮಕ್ಕಳ ಮೇಲೂ ಶಬ್ಧ ಮಾಲಿನ್ಯ ಪರಿಣಾಮ ಬೀರುತ್ತದೆ.
ಶಬ್ಧ ಮಾಲಿನ್ಯದ ನಿವಾರಣೋಪಾಯಗಳು:
ಶಬ್ಧ ಮಾಲಿನ್ಯವನ್ನು ತಡೆಗಟ್ಟಲು ಇರುವ ನಿವಾರಣೋಪಾಯಗಳು ಈ ಕೆಳಗಿನಂತಿವೆ.
- ಅತೀ ಹೆಚ್ಚು ಶಬ್ಧವನ್ನು ಉತ್ಪತ್ತಿ ಮಾಡುವ ಕಾರ್ಖಾನೆಗಳನ್ನು ಜನವಸತಿ ಪ್ರದೇಶಗಳಿಂದ ದೂರದಲ್ಲಿ ನಿರ್ಮಿಸಬೇಕು. ಅತಿಯಾದ ಶಬ್ಧವು ಹೊರಗೆ ಬರದಂತೆ ತಡೆಗೋಡೆಗಳನ್ನು ಕಾರ್ಖಾನೆಯ ಸುತ್ತ ಎತ್ತರವಾಗಿ ನಿರ್ಮಿಸಬೇಕು.
- ಗೃಹಪಯೋಗಿ ಉಪಕರಣಗಳು ವಾಹನಗಳು ಹಾಗೂ ಕಾರ್ಖಾನೆಗಳಿಗೆ ಶಬ್ಧವನ್ನು ನಿಯಂತ್ರಣ ಮಾಡುವ ಉಪಕರಣಗಳನ್ನು ಅಳವಡಿಸಬೇಕು.
- ಅನಾವಶ್ಯಕ ಹಾರನ್ಗಳು, ಸೈರನ್ಗಳು ಹಾಗೂ ದ್ವನಿವರ್ಧಕಗಳನ್ನು ನಿಷೇಧಿಸಬೇಕು.
- ಹಳೆಯದಾದ ಅತಿ ಹೆಚ್ಚು ಶಬ್ಧ ಮಾಡುವ ಯಂತ್ರೋಪಕರಣಗಳು ಹಾಗೂ ಇತರೆ ವಸ್ತುಗಳು ಅವಧಿ ಮೀರಿದ ನಂತರ ಬದಲಾಯಿಸಬೇಕು.
- ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಶ್ರವಣಶಕ್ತಿ ಸಂರಕ್ಷಣಾ ಉಪಕರಣಗಳನ್ನು ಪೂರೈಸಬೇಕು.
- ಶಬ್ಧವನ್ನು ನಿಯಂತ್ರಿಸುವ ಆಧುನಿಕ ವಿನ್ಯಾಸವುಳ್ಳ ಬಾಗಿಲು ಕಿಟಕಿಗಳನ್ನು ಮನೆಗಳಿಗೆ ಹಾಗೂ ಕಾರ್ಖಾನೆಗಳಿಗೆ ಅಳವಡಿಸಬೇಕು.
- ಶಾಲಾ ಕಾಲೇಜು, ಆಸ್ಪತ್ರೆ, ಗ್ರಂಥಾಲಯ ಸಾರ್ವಜನಿಕ ಕಚೇರಿಗಳು ಹಾಗೂ ನ್ಯಾಯಾಲಯದ ಸುತ್ತಮುತ್ತ ಶಬ್ಧಕ್ಕೆ ಕಾರಣವಾಗುವ ಯಾವುದೇ ವಾಹನಗಳ ದುರಸ್ತಿ ಕಾರ್ಯಗಾರ ಕಾರ್ಖಾನೆ ಮುಂತಾದವುಗಳನ್ನು ಸ್ಥಾಪಿಸಿದಂತೆ ಎಚ್ಚರಿಕೆ ವಹಿಸಬೇಕು.
- ವಿಮಾನ ನಿಲ್ದಾಣಗಳನ್ನು ವಸತಿ ಕೇಂದ್ರಗಳಿಂದ ಬಹು ದೂರದಲ್ಲಿ ನಿರ್ಮಿಸಬೇಕು.
- ಶಬ್ಧವನ್ನುಂಟು ಮಾಡುವ ಭಾರಿ ವಾಹನಗಳನ್ನು ಊರ ಹೊರಗೆ ನಿಲುಗಡೆ ಮಾಡುವ ವ್ಯವಸ್ಥೆ ಮಾಡಬೇಕು.
- ಶಬ್ಧ ಮಾಲಿನ್ಯವನ್ನು ನಿಯಂತ್ರಣಕ್ಕೆ ತರಲು ಶಾಸನಗಳನ್ನು ರಚಿಸಬೇಕು.
- ಪರಿಸರ ಶಿಕ್ಷಣ ಹಾಗೂ ಸಂಶೋಧನೆಗಳ ಕುರಿತು ಜನಜಾಗೃತಿಯನ್ನು ಉಂಟು ಮಾಡಬೇಕು.
- ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಹಾಗೂ ಹಬ್ಬ ಹರಿದಿನಗಳಲ್ಲಿ ಪಟಾಕಿ ಸಿಡಿಮದ್ದುಗಳ ಬಳಕೆಯನ್ನು ನಿಷೇಧಿಸಬೇಕು.
- ಶಬ್ಧವನ್ನು ನಿಯಂತ್ರಿಸುವ ವಿವಿಧ ಜಾತಿಯ ಮರಗಳನ್ನು ಕಾರ್ಖಾನೆಯ ಸುತ್ತ ಹಾಗೂ ಕಟ್ಟಡಗಳ ಸುತ್ತಲೂ ಬೆಳೆಸಬೇಕು.
ಧ್ವನಿವರ್ಧಕಗಳನ್ನು ಅಗತ್ಯವೆನಿಸಿದಾಗ ಮಾತ್ರ ಬಳಕೆ ಮಾಡಬೇಕು. ಉಪಯೋಗಿಸಲೇಬೇಕಾದ ಸಮಯದಲ್ಲಿ ಶಬ್ಧವು ಜೋರಾಗಿ ಕೇಳಿಸದಂತೆ ಹಿತಮಿತವಾಗಿ ಬಳಕೆ ಮಾಡಬೇಕು.
ಉಪಸಂಹಾರ
ಶಬ್ಧ ಮಾಲಿನ್ಯವು ಮನುಷ್ಯನ ಆರೋಗ್ಯ, ಏಕಾಗ್ರತೆ ಹಾಗೂ ಸಾಮಾಜಿಕ ಜೀವನದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ಇದರಿಂದ ಮಾನಸಿಕ ಒತ್ತಡ, ನಿದ್ರಾಹೀನತೆ ಹಾಗೂ ಶ್ರವಣಶಕ್ತಿ ಹಾನಿ ಹೆಚ್ಚುತ್ತಿದೆ. ಆದ್ದರಿಂದ ಶಬ್ಧ ಮಾಲಿನ್ಯವನ್ನು ನಿಯಂತ್ರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸರ್ಕಾರದ ನಿಯಮಗಳ ಜೊತೆಗೆ ಸಾರ್ವಜನಿಕ ಜಾಗೃತಿ ಹಾಗೂ ಸಹಕಾರ ಅತ್ಯಂತ ಅಗತ್ಯ. ಶಾಂತ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ನಾವು ಎಲ್ಲರೂ ಕೈಜೋಡಿಸಬೇಕಾಗಿದೆ