“ ಭಾರತೀಯ ಪ್ರತಿಯೊಬ್ಬ ಪ್ರಜೆಯೂ ತನ್ನ ದೇಶಕ್ಕಾಗಿ ನಿರ್ವಹಿಸಬೇಕಾದ ಕಾರ್ಯಗಳನ್ನು ಮೂಲಭೂತ ಕರ್ತವ್ಯಗಳು ಎಂದು ಕರೆಯಲಾಗುತ್ತದೆ.” ಸಂವಿಧಾನದ ಕರ್ತವ್ಯಗಳು ಮೂಲಭೂತ ಹಕ್ಕುಗಳನ್ನು ಗೊತ್ತುಪಡಿಸಿದ ಹಾಗೆ ಮೂಲಭೂತ ಹಕ್ಕುಗಳನ್ನು ಸಹ ಸಂವಿಧಾನದಲ್ಲಿ ನಿರ್ಧರಿಸುವ ಅಗತ್ಯ ಹಿಂದಿನ ಸಂವಿಧಾನ ರಚನಾಕಾರರಿಗೆ ಕಾಣಲಿಲ್ಲ. ಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿಯೇ ಹೋಗುವುದರಿಂದ ಯಾರೂ ಸಹ ಕರ್ತವ್ಯಗಳನ್ನು ನಿರ್ವಹಿಸದೇ ಹಕ್ಕುಗಳನ್ನು ಅನುಭವಿಸಲು ಸಾಧ್ಯವಿಲ್ಲ ಎಂಬ ಭರವಸೆಯ ಮೇಲೆ ಹಾಗೆ ಮಾಡಲಾಯಿತು ಎನ್ನಲಾಗಿದೆ. ಆದರೆ ರಷ್ಯಾ, ಚೈನಾ ಹಾಗೂ ಇತರೆ ಸಮಾಜವಾದಿ ದೇಶಗಳಲ್ಲಿ ಮೂಲಭೂತ ಕರ್ತವ್ಯಗಳಿಗೆ ಹೆಚ್ಚು ಒತ್ತು ಕೊಟ್ಟಿರುವುದನ್ನು ನೋಡಬಹುದಾಗಿದೆ. ಜಪಾನಿನಲ್ಲಿಯೂ ಸಹ ಹಕ್ಕುಗಳ ಜೊತೆಗೆ ಕರ್ತವ್ಯಗಳೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಈ ಕಾರಣದಿಂದಾಗಿ ಹಕ್ಕು ಮತ್ತು ಕರ್ತವ್ಯಗಳನ್ನು ಒಂದು ನಾಣ್ಯದ ಎರಡು ಮುಖಗಳೆಂದು ಹೇಳಬಹುದಾಗಿದೆ. ಇದನ್ನರಿತ ಭಾರತ ಸಂವಿಧಾನದ ರಚನಾಕಾರರು ಪಟ್ಟಿ ಮಾಡಿದ ಕರ್ತವ್ಯಗಳನ್ನು ಪ್ರಜೆಗಳು ಸುಮಾರು ಮೂರು ದಶಕಗಳ ಬಳಿಕವೂ ಉದಾಸೀನ ಮಾಡುತ್ತಲೇ ಬಂದರು. ಇದನ್ನರಿತ ಶ್ರೀಮತಿ ಇಂದಿರಾಗಾಂಧಿ ಸರ್ಕಾರ 1975 ಫೆಬ್ರುವರಿ ತಿಂಗಳಲ್ಲಿ ಸಂವಿಧಾನ ಸುಧಾರಣೆಗಾಗಿ ಸ್ವರ್ಣಸಿಂಗ್ ರವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಅದೇ ವರ್ಷ ಮೇ ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಈ ಸಮಿತಿಯು ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಸೇರಿಸಲು ಶಿಫಾರಸ್ಸು ಮಾಡಿತು. ಸ್ವರ್ಣ ಸಿಂಗ್ ಸಮಿತಿಯ ಶಿಫಾರಸ್ಸಿನನ್ವಯ ಸಂಸತ್ತು 1976 ರಲ್ಲಿ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಭಾರತೀಯ ಪ್ರಜೆಗಳ ಮೂಲಭೂತ ಕರ್ತವ್ಯಗಳನ್ನು ಸಂವಿಧಾನಕ್ಕೆ ಸೇರಿಸಿತು. ಈ ತಿದ್ದುಪಡಿಯ ಪ್ರಕಾರ ಸಂವಿಧಾಕ್ಕೆ 4(A) ಭಾಗ ಮತ್ತು 51(A) ವಿಧಿಯನ್ನು ಹೊಸದಾಗಿ ಸೇರಿಸಿ 10 ಮೂಲಭೂತ ಕರ್ತವ್ಯಗಳನ್ನು ನಿಗದಿಗೊಳಿಸಿತು. ಮುಂದುವರೆದು 2002 ರಲ್ಲಿ ಸಂವಿಧಾನದ 86 ನೇ ತಿದ್ದುಪಡಿಯ ಮೂಲಕ ಮತ್ತೊಂದು ಕರ್ತವ್ಯವನ್ನು ಸೇರಿಸಿತು. ಪ್ರಸ್ತುತ ಈಗ 11 ಮೂಲಭೂತ ಕರ್ತವ್ಯಗಳಿದ್ದು ಅವುಗಳು ಈ ಕೆಳಗಿನಂತಿವೆ.
1. ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ಸಂವಿಧಾನಾತ್ಮಕ ಆದರ್ಶ ಹಾಗೂ ಸಂಸ್ಥೆಗಳನ್ನು ಗೌರವಿಸುವುದು:
ಭಾರತದ ಪ್ರಜೆಗಳಾದ ನಾವು ರಾಷ್ಟ್ರಗೀತೆಯನ್ನು ನಿಗದಿಪಡಿಸಿದ ಸಮಯದಲ್ಲಿಯೇ ಹಾಡಿ ಮುಗಿಸಬೇಕು. ಪ್ರತಿಯೊಬ್ಬರೂ ರಾಷ್ಟ್ರಗೀತೆಯನ್ನು ಹಾಡುವಾಗ ಎದ್ದು ನಿಂತು ಗೌರವ ಸೂಚಿಸಬೇಕು. 2002 ರ ಧ್ವಜ ಸಂಹಿತೆಯ ಪ್ರಕಾರ ಅದನ್ನು ಉಪಯೋಗಿಸುವ ಮೂಲಕ ಗೌರವ ಕೊಡಬೇಕು. ಇದರೊಂದಿಗೆ ಸಂವಿಧಾನದ ಆದರ್ಶಗಳಾದ ಸಮಾಜವಾದ, ಜಾತ್ಯಾತೀತತೆ, ಗಣತಂತ್ರ ವ್ಯವಸ್ಥೆ, ಸಾಮಾಜಿಕ ನ್ಯಾಯ ಮುಂತಾದವುಗಳನ್ನು ಪಾಲಿಸುವ ಮೂಲಕ ಗೌರವಿಸಬೇಕು.ಇದು ಅಲ್ಲದೆ ಸಂಸತ್ತು, ಸರ್ವೋಚ್ಛ ನ್ಯಾಯಾಲಯ, ಚುನಾವಣಾ ಆಯೋಗ ಮುಂತಾದ ಸಂಸ್ಥೆಗಳನ್ನು ಸಹ ಗೌರವಿಸಿ ಅವುಗಳಿಗೆ ವಿಧೇಯತೆಯನ್ನು ತೋರಬೇಕು. ರಾಷ್ಟ್ರ ರಕ್ಷಣೆಗಾಗಿ ದುಡಿಯುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ.
2. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಉದಾತ್ತ ಮೌಲ್ಯಗಳನ್ನು ಪಾಲಿಸುವುದು:
ಭಾರತವು ಸುಮಾರು 300 ವರ್ಷಗಳಿಗೂ ಅಧಿಕ ವರ್ಷಗಳ ಕಾಲ ಬ್ರಿಟೀಷರ ದಾಸ್ಯಕ್ಕೆ ಒಳಗಾಗಿತ್ತು. ಬ್ರಿಟೀಷರಿಂದ ಭಾರತವನ್ನು ಬಿಡುಗಡೆಗೊಳಿಸಲು ದೇಶದ ಮಹಾನ್ ನಾಯಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದರು. ಅನೇಕ ಮಹನೀಯರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದರು. ಬ್ರಿಟೀಷರ ವಿರುದ್ಧ ನಿರಂತರ ಹೋರಾಟ ನಡೆಯಿತು. ಈ ಹೋರಾಟಕ್ಕೆ ಫ್ರಾನ್ಸಿನ ಕ್ರಾಂತಿಯ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳು ಭಾರತೀಯರ ಮೇಲೆ ಪ್ರಭಾವ ಬೀರಿದವು. ಅಂತಿಮವಾಗಿ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಡುವಲ್ಲಿ ಯಶಸ್ವಿಯಾದರು. ಹಾಗಾಗಿ ನಮ್ಮ ಹೋರಾಟಗಾರರು ಪಾಲಿಸಿಕೊಂಡು ಬಂದಿದ್ದ ತ್ಯಾಗ, ಬಲಿದಾನ ಹಾಗೂ ಅಹಿಂಸೆ ಇತ್ಯಾದಿ ಉದಾತ್ತ ಮೌಲ್ಯಗಳನ್ನು ಇಂದಿನ ನಮ್ಮ ಪ್ರಜೆಗಳು ತಮ್ಮ ನಿತ್ಯ ಜೀವನದಲ್ಲಿ ಪಾಲಿಸುವುದು ಅವರ ಆದ್ಯ ಕರ್ತವ್ಯಗಳಾಗಿವೆ.
3. ಭಾರತದ ಸಾರ್ವಭೌಮತೆ, ಐಕ್ಯತೆ ಹಾಗೂ ಅಖಂಡತೆಯನ್ನು ಎತ್ತಿ ಹಿಡಿಯುವುದು:
ಭಾರತದ ಪರಮಾಧಿಕಾರಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯಗಳನ್ನು ಮಾಡದಂತೆ ಪ್ರಜೆಗಳು ಎಚ್ಚರವಹಿಸುವುದು ಬಹಳ ಮುಖ್ಯವಾದ ಕರ್ತವ್ಯ. ಪ್ರಜೆಗಳು ತಮ್ಮ ನಡುವಿನ ಜಾತಿ, ಧರ್ಮ, ಮೇಲು-ಕೀಳು, ಸ್ಪೃಶ್ಯ –ಅಸ್ಪೃಶ್ಯ , ಬಡವ-ಶ್ರೀಮಂತ, ಧರ್ಮ, ಪ್ರದೇಶ, ಸ್ಥಾನಮಾನ ಹಾಗೂ ಭಾಷೆಗಳನ್ನು ಬದಿಗೊತ್ತಿ ನಾವೆಲ್ಲಾ ಭಾರತೀಯರು ಎನ್ನುವ ಭಾವನೆಗಳನ್ನು ಮೂಡಿಸಿಕೊಳ್ಳಬೇಕು. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ದೇಶ ಎಂಬುದನ್ನು ಯಾವ ಪ್ರಜೆಗಳೂ ಮರೆಯಬಾರದು. ಸಹೋದರತೆಯನ್ನು ರೂಢಿಸಿಕೊಂಡು ನಾವೆಲ್ಲಾ ಒಂದೇ ಕುಟುಂಬದ ಸದಸ್ಯರು ಎನ್ನುವ ತತ್ವವನ್ನು ಎಲ್ಲಡೆ ಸಾರಬೇಕು. ಸರ್ವೇಜನ ಸುಖಿನೋಭವಂತು ಮತ್ತು ವಸುದೈವ ಕುಟುಂಬಕಂ ಎನ್ನುವ ಎರಡು ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅಖಂಡತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳಲ್ಲಿ ತೊಡಗದಿರುವುದೇ ಪ್ರಜೆಗಳ ಮೂಲ ಕರ್ತವ್ಯವಾಗಬೇಕು.
4. ದೇಶದ ರಕ್ಷಣೆಗೆ ಕರೆ ಬಂದಾಗ ದೇಶಸೇವೆಗೆ ಸದಾ ಸಿದ್ಧರಾಗಿರುವುದು:
ಭಯೋತ್ಪಾದನೆ ಹಾಗೂ ಕೋಮುಭಾವನೆಯಿಂದ ಪ್ರತಿಯೊಂದು ದೇಶಗಳು ಇಂದು ಸಂಕಷ್ಟವನ್ನು ಎದುರಿಸುತ್ತಿವೆ. ಅದರಲ್ಲೂ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇದು ಸರ್ವೇಸಾಮನ್ಯವಾಗಿದೆ. ಆದುದರಿಂದ ದೇಶ ಇಂತಹ ಆಪತ್ತಿಗೆ ಸಿಲುಕಿದಾಗ ಪ್ರಜೆಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಬೇಕಾಗುತ್ತದೆ. ಪ್ರಜೆಗಳು ಜೀವ ನೀಡಿದರೆ ದೇಶ ಜೀವಂತವಾಗಿರುತ್ತದೆ. ಮಾತೃಭೂಮಿಗೋಸ್ಕರ ಪೌರನು ಯಾವ ತ್ಯಾಗಕ್ಕೂ ಸಿದ್ಧನಿರಬೇಕು. ಅದು ಆತನ ಕರ್ತವ್ಯವೂ ಹೌದು ಯುದ್ಧದ ಸಂದರ್ಭದಲ್ಲಿ ಅಷ್ಟೇ ಅಲ್ಲದೇ ಪ್ರವಾಹ, ಭೂಕಂಪ, ನೆರೆಹಾವಳಿ, ಪ್ರಕೃತಿ ವಿಕೋಪಗಳು ಮುಂತಾದ ಸಂದರ್ಭದಲ್ಲಿಯೂ ಪ್ರಜೆಗಳು ಧೃತಿಗೆಡದೆ ಸಹಾಯಹಸ್ತ ನೀಡಬೇಕು.
5. ಭಾರತದ ಸಾರ್ವಭೌಮತೆ, ಐಕ್ಯತೆ ಹಾಗೂ ಅಖಂಡತೆಯನ್ನು ಎತ್ತಿ ಹಿಡಿಯುವುದು:
ಭಾರತದ ಪರಮಾಧಿಕಾರಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯಗಳನ್ನು ಮಾಡದಂತೆ ಪ್ರಜೆಗಳು ಎಚ್ಚರವಹಿಸುವುದು ಬಹಳ ಮುಖ್ಯವಾದ ಕರ್ತವ್ಯ. ಪ್ರಜೆಗಳು ತಮ್ಮ ನಡುವಿನ ಜಾತಿ, ಧರ್ಮ, ಮೇಲು-ಕೀಳು, ಸ್ಪೃಶ್ಯ –ಅಸ್ಪೃಶ್ಯ , ಬಡವ-ಶ್ರೀಮಂತ, ಧರ್ಮ, ಪ್ರದೇಶ, ಸ್ಥಾನಮಾನ ಹಾಗೂ ಭಾಷೆಗಳನ್ನು ಬದಿಗೊತ್ತಿ ನಾವೆಲ್ಲಾ ಭಾರತೀಯರು ಎನ್ನುವ ಭಾವನೆಗಳನ್ನು ಮೂಡಿಸಿಕೊಳ್ಳಬೇಕು. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ದೇಶ ಎಂಬುದನ್ನು ಯಾವ ಪ್ರಜೆಗಳೂ ಮರೆಯಬಾರದು. ಸಹೋದರತೆಯನ್ನು ರೂಢಿಸಿಕೊಂಡು ನಾವೆಲ್ಲಾ ಒಂದೇ ಕುಟುಂಬದ ಸದಸ್ಯರು ಎನ್ನುವ ತತ್ವವನ್ನು ಎಲ್ಲಡೆ ಸಾರಬೇಕು. ಸರ್ವೇಜನ ಸುಖಿನೋಭವಂತು ಮತ್ತು ವಸುದೈವ ಕುಟುಂಬಕಂ ಎನ್ನುವ ಎರಡು ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅಖಂಡತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳಲ್ಲಿ ತೊಡಗದಿರುವುದೇ ಪ್ರಜೆಗಳ ಮೂಲ ಕರ್ತವ್ಯವಾಗಬೇಕು.
6. ದೇಶದ ರಕ್ಷಣೆಗೆ ಕರೆ ಬಂದಾಗ ದೇಶಸೇವೆಗೆ ಸದಾ ಸಿದ್ಧರಾಗಿರುವುದು:
ಭಯೋತ್ಪಾದನೆ ಹಾಗೂ ಕೋಮುಭಾವನೆಯಿಂದ ಪ್ರತಿಯೊಂದು ದೇಶಗಳು ಇಂದು ಸಂಕಷ್ಟವನ್ನು ಎದುರಿಸುತ್ತಿವೆ. ಅದರಲ್ಲೂ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇದು ಸರ್ವೇಸಾಮನ್ಯವಾಗಿದೆ. ಆದುದರಿಂದ ದೇಶ ಇಂತಹ ಆಪತ್ತಿಗೆ ಸಿಲುಕಿದಾಗ ಪ್ರಜೆಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಬೇಕಾಗುತ್ತದೆ. ಪ್ರಜೆಗಳು ಜೀವ ನೀಡಿದರೆ ದೇಶ ಜೀವಂತವಾಗಿರುತ್ತದೆ. ಮಾತೃಭೂಮಿಗೋಸ್ಕರ ಪೌರನು ಯಾವ ತ್ಯಾಗಕ್ಕೂ ಸಿದ್ಧನಿರಬೇಕು. ಅದು ಆತನ ಕರ್ತವ್ಯವೂ ಹೌದು ಯುದ್ಧದ ಸಂದರ್ಭದಲ್ಲಿ ಅಷ್ಟೇ ಅಲ್ಲದೇ ಪ್ರವಾಹ, ಭೂಕಂಪ, ನೆರೆಹಾವಳಿ, ಪ್ರಕೃತಿ ವಿಕೋಪಗಳು ಮುಂತಾದ ಸಂದರ್ಭದಲ್ಲಿಯೂ ಪ್ರಜೆಗಳು ಧೃತಿಗೆಡದೆ ಸಹಾಯಹಸ್ತ ನೀಡಬೇಕು.
7. ಪ್ರಜೆಗಳ ನಡುವೆ ಸಾಮರಸ್ಯ ಮತ್ತು ಸಹೋದರತೆಯನ್ನು ಬೆಳೆಸುವುದು ಹಾಗೂ ಮಹಿಳೆಯರನ್ನು ಗೌರವಿಸುವುದು:
ಭಾರತವು ವೈವಿಧ್ಯತೆಗಳಿಂದ ಕೂಡಿದ ಏಕತೆಯ ರಾಷ್ಟ್ರವಾಗಿದೆ. ಇಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಪ್ರಾದೇಶಿಕ ಹಾಗೂ ಭಾಷಾ ವೈವಿಧ್ಯತೆ ಇದೆ. ಇವುಗಳ ನಡುವೆ ಸಾಮರಸ್ಯತೆಯನ್ನು ಉಂಟುಮಾಡಿ ಸಮಾಜದಲ್ಲಿ ನಾವೆಲ್ಲಾ ಒಂದೇ ಎಂಬ ಭಾವನಾತ್ಮಕ ಬೆಸುಗೆಯನ್ನು ಹಾಕಬೇಕಾದದ್ದು ಅಗತ್ಯವಾಗಿದೆ. ಪ್ರತಿಯೊಬ್ಬ ಪ್ರಜೆಯೂ ಸಹೋದರತೆಯ ಭಾವನೆಯನ್ನು ಮೂಡಿಸಿಕೊಳ್ಳಬೇಕು. ಜೊತೆಗೆ ಸ್ತ್ರೀಯರಿಗೆ ಗೌರವ ಕೊಡಬೇಕು. ಯಾವುದೇ ಸಮಾಜ ಸ್ತ್ರೀಯರನ್ನು ಕಡೆಗಣಿಸಿದರೆ ಆ ಸಮಾಜ ಉದ್ಧಾರವಾಗದು ಎಂಬುದನ್ನೂ ಅರಿತುಕೊಳ್ಳಬೇಕು. ಸ್ತ್ರೀಯರನ್ನು ಗೌರವಿಸುವುದೇ ಪ್ರಜೆಗಳ ಆದ್ಯ ಕರ್ತವ್ಯವಾಗಬೇಕು.
8. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಗೌರವಿಸುವುದು:
ಪ್ರಾಚೀನ ಕಾಲದಿಂದಲೂ ಭಾರತವು ಶ್ರೀಮಂತ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದೆ. ಇಲ್ಲಿ ಭವ್ಯ ಕಲಾಪರಂಪರೆ, ಭಾರತೀಯ ವಾಸ್ತುಶಿಲ್ಪ, ಸಂಗೀತ, ನೃತ್ಯ, ಚಿತ್ರಕಲೆ ಹಾಗೂ ಲಲಿತ ಕಲೆಗಳು ಒಂದೊಂದು ಕ್ಷೇತ್ರದಲ್ಲಿ ತನ್ನದೇ ಆದ ಸೊಬಗಿನಿಂದ ಕಂಗೊಳಿಸುತ್ತಿದೆ. ಮಹಾರಾಷ್ಟ್ರದ ಅಜಂತಾ, ಎಲ್ಲೋರಾ ಹಾಗೂ ಎಲಿಫೆಂಟಾ, ಕರ್ನಾಟಕದ ಬಾದಾಮಿಯಲ್ಲಿ ಕಂಡುಬರುವ ಭಿತ್ತಿಚಿತ್ರಗಳು ಮಥುರಾದ ದೇವಾಲಯಗಳು, ಅಮರಾವತಿ, ನಾಗಾರ್ಜುನಕೊಂಡ, ಸಾಂಚಿ ಕಾರ್ಲೆಗಳಲ್ಲಿನ ಬೌದ್ಧ ಸ್ತೂಪಗಳು ಮತ್ತು ಮಧುರೈ, ಕಾಂಚಿ ಹಾಗೂ ತಂಜಾವೂರುಗಳಲ್ಲಿನ ದೇವಾಲಯಗಳು, ಹಂಪೆ, ಹಳೇಬೀಡು, ಬೇಲೂರಿನ ಶಿಲ್ಪಗಳು, ಗುಲಬರ್ಗಾ, ಬೀದರ್ ಹಾಗೂ ಬಿಜಾಪುರದಲ್ಲಿನ ಮಸೀದಿಗಳು, ಅರಮನೆಗಳು, ಉದ್ಯಾನವನಗಳು ಒಂದೇ ಎರಡೇ ಹಲವಾರು ಸಾಂಸ್ಕೃತಿಕ ಶ್ರೀಮಂತಿಕೆಯ ಅಧ್ಬುತಗಳು. ಇಂತಹ ಶ್ರೀಮಂತಿಕೆಯನ್ನು ಭಾರತೀಯರಾದ ನಾವುಗಳು ಸದಾ ಗೌರವಿಸುತ್ತಾ ಮುಂದಿನ ಪೀಳಿಗೆಯು ಸಹ ಅವುಗಳನ್ನು ಗೌರವಿಸುವಂತೆ ಮಾಡಬೇಕಾದುದು ನಮ್ಮ ಕರ್ತವ್ಯವಾಗಿದೆ.
9. ಪರಿಸರ ಸಂರಕ್ಷಣೆ:
ಭಾರತವು ಒಂದು ಕಡೆ ನೆಲ ಹಾಗೂ ಮೂರುಕಡೆಗಳಲ್ಲಿ ಸಾಗರಗಳನ್ನು ಹೊಂದಿ ಪರ್ಯಾಯ ಪ್ರಸ್ಥಭೂಮಿ ಎಂದು ಹೆಸರಾಗಿದೆ. ದೇಶದಲ್ಲಿ ಅರಣ್ಯ, ಸಸ್ಯಸಂಪತ್ತು, ಪ್ರಾಣಿಸಂಪತ್ತು, ಪಕ್ಷಿಸಂಕುಲ ತುಂಬಿ ತುಳುಕುತ್ತಿದೆ. ಆದರೆ ಇಂದಿನ ಮಿತಿಮೀರಿದ ಜನಸಂಖ್ಯೆಯಿಂದಾಗಿ ಭಾರತದ ಪರಿಸರ ಹಿಂದೆಂದಿಗಿಂತಲೂ ಇಂದು ಕಲುಷಿತಗೊಂಡಿದೆ. ಅರಣ್ಯಗಳು ಕಡಿಮೆಯಾಗುತ್ತಿವೆ. ಜಲಮೂಲಗಳು ಬತ್ತಿಹೋಗುತ್ತಿವೆ. ಜಲಚರಗಳು ನಾಶವಾಗುತ್ತಿವೆ. ವನ್ಯಪ್ರಾಣಿಗಳು ಕಾಣೆಯಾಗಿವೆ. ವಾಯುಮಾಲಿನ್ಯ, ಜಲಮಾಲಿನ್ಯ ಹಾಗೂ ಭೂಮಾಲಿನ್ಯದಿಂದಾಗಿ ರೋಗರುಜಿನಗಳು ದಿನೇ ದಿನೇ ಅಟ್ಟಹಾಸ ಮೆರೆಯುತ್ತಿವೆ. ಹಾಗಾಗಿ ಭಾರತೀಯರು ಪರಿಸರವನ್ನು ರಕ್ಷಿಸಿ ದೇಶವನ್ನು ಇಂತಹ ಅಪಾಯಗಳಿಂದ ಪಾರುಮಾಡುವ ಹೊಣೆಗಾರಿಕೆಯನ್ನು ಹೊರಬೇಕಾದುದು ಅನಿವಾರ್ಯವಾಗಿದೆ.
10. ವೈಜ್ಞಾನಿಕ ಮನೋಭಾವವನನ್ನು ಬೆಳಿಸಿಕೊಳ್ಳುವುದು:
ಭಾರತದ ಮನುಕುಲಕ್ಕೆ ಮಾರಕವಾದ ಜಾತೀಯತೆ, ಸಂಕುಚಿತ ಮನೋಭಾವ, ಭಾಷಾ ವೈವಿಧ್ಯತೆ, ಪ್ರಾದೇಶಿಕತೆ, ಕೋಮುವಾದ, ಅಸ್ಪೃಶ್ಯತೆ, ಕಂದಾಚಾರಗಳು, ಪೂರ್ವಾಗ್ರಹ, ಮೌಢ್ಯಗಳು, ರೂಢಿ ಸಂಪ್ರದಾಯಗಳು ಮತ್ತು ಸಾಮಾಜಿಕ ಅನಿಷ್ಟಗಳಾದ ಸತಿ, ದೇವದಾಸಿ ಹಾಗೂ ವೇಶ್ಯಾವೃತ್ತಿ ಮುಂತಾದವುಗಳನ್ನು ಹೋಗಲಾಡಿಸಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಮಾನವೀಯ ಗುಣಗಳಾದ ದಯೆ, ಕರುಣೆ, ಅನುಕಂಪ, ಸಹಕಾರ, ತ್ಯಾಗ ಮುಂತಾದವುಗಳನ್ನು ಅಳವಡಿಸಿಕೊಳ್ಳಬೇಕು.
12. ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿ ಗೌರವಿಸುವುದು:
ಸ್ವತಂತ್ರ ಭಾರತದಲ್ಲಿ ನಡೆಯುವ ಸಾರ್ವಜನಿಕ ಪ್ರತಿಭಟನೆ, ಹರತಾಳ ಹಾಗೂ ಹಿಂಸಾಚಾರದಂತಹ ಸಂದರ್ಭಗಳಲ್ಲಿ ಭಾರತೀಯರು ಅದರಲ್ಲೂ ಯುವಕರು ಸಾರ್ವಜನಿಕ ಆಸ್ತಿಗಳನ್ನು ನಾಶಪಡಿಸುವುದು, ಕಟ್ಟಡಗಳಿಗೆ ಕಲ್ಲು ಎಸೆಯುವುದು, ಬಸ್ಸುಗಳಿಗೆ ಬೆಂಕಿ ಹಚ್ಚುವುದು ಮುಂತಾದ ಹಿಂಸಾಕೃತ್ಯಗಳಲ್ಲಿ ತೊಡಗುತ್ತಾರೆ. ಹೀಗೆ ನಾಶಗೊಂಡ ಆಸ್ತಿಗಳ ಪುನರ್ ನಿರ್ಮಾಣಕ್ಕೆ ಸಾರ್ವಜನಿಕರ ತೆರಿಗೆ ಹಣದಿಂದಲೇ ಖರ್ಚುವೆಚ್ಚಗಳನ್ನು ಮಾಡಬೇಕಾಗುತ್ತದೆ. ಜೊತೆಗೆ ಹಿಂಸಾಚಾರಕ್ಕೆ ಒಳಗಾದ ವ್ಯಕ್ತಿಗಳಿಗೆ ಅಥವಾ ಆಸ್ತಿ ಪಾಸ್ತಿಗಳ ಹಾನಿಗಳನ್ನು ತುಂಬಿಕೊಡಲು ಸಾರ್ವಜನಿಕರ ಹಣವನ್ನೇ ಸರ್ಕಾರ ನೀಡುತ್ತದೆ. ಹಾಗಾಗಿ ಪ್ರಜೆಗಳು ಇತರರ ಮೇಲೆ ಹಿಂಸಾಚಾರ ನೆಡೆಸುವುದನ್ನು ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಧಕ್ಕೆ ತರುವುದನ್ನು ನಿಲ್ಲಿಸಿ ದೇಶದ ಸಮಗ್ರತೆಗೆ ಪಣತೊಡಬೇಕಾದುದು ಅವರ ಕರ್ತವ್ಯವಾಗಿದೆ.
13. ದೇಶದ ಅಭಿವೃದ್ಧಿಗೆ ಶ್ರಮಿಸುವುದು:
ಯಾವುದೇ ದೇಶದ ಅಭಿವೃದ್ಧಿಯು ಆ ದೇಶದ ಜನರನ್ನು ಅವಲಂಬಿಸಿದೆ. ಒಂದು ದೇಶದ ಸಂಪತ್ತು ಎಂದರೆ ಆ ದೇಶದ ಪ್ರಜೆಗಳೇ ಆಗಿದ್ದಾರೆ. ಅವರು ತಮ್ಮ ಆಸಕ್ತಿದಾಯಕ ಮತ್ತು ಸಾಮರ್ಥ್ಯವಿರುವ ಕ್ಷೇತ್ರದಲ್ಲಿ ಶ್ರದ್ಧೆಯಿಂದ ದುಡಿದು ಪ್ರಗತಿ ಸಾಧಿಸಬೇಕು. ಆಗ ಮಾತ್ರ ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ.
14. ವರ್ಷ ವಯಸ್ಸಿನ ಒಳಗಿನ ಮಕ್ಕಳಿಗೆ ಶಿಕ್ಷಣ ನೀಡುವುದು:
ಸಂವಿಧಾನದ 86 ನೇ ತಿದ್ದುಪಡಿಯ ಮೂಲಕ 2002 ರಲ್ಲಿ ಸಂವಿಧಾನದ ಮೂರನೇ ಭಾಗಕ್ಕೆ 21 ವಿಧಿ ಸೇರಿಸಿ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿತು. ಇದರಿಂದ 14 ವರ್ಷ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡುವುದು ಸರ್ಕಾರದ ಕರ್ತವ್ಯವೆಂದು ಪರಿಗಣಿಸಲಾಯಿತು.
ಉಪಸಂಹಾರ
ಮೂಲಭೂತ ಕರ್ತವ್ಯಗಳು ಜಾಗೃತ ನಾಗರಿಕನ ಲಕ್ಷಣಗಳಾಗಿವೆ. ಪ್ರಜೆಗಳು ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸಿದರೆ ಮಾತ್ರ ಹಕ್ಕುಗಳಿಗೆ ನಿಜವಾದ ಅರ್ಥ ಸಿಗುತ್ತದೆ. ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರಭಕ್ತಿ ಈ ಕರ್ತವ್ಯಗಳ ಮೂಲ ಉದ್ದೇಶವಾಗಿದೆ. ಹೀಗಾಗಿ ಪ್ರತಿಯೊಬ್ಬ ಭಾರತೀಯನು ಮೂಲಭೂತ ಕರ್ತವ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.