1993ರ ಪಂಚಾಯತ್ ಅಧಿನಿಯಮದ ಪ್ರಕಾರ ಗ್ರಾಮೀಣ ಮಟ್ಟದಲ್ಲಿ ಜಾರಿಗೊಳಿಸಲಾಗಿರುವ ಮೂರು ಹಂತದ ಪಂಚಾಯಿತಿಗಳಲ್ಲಿ ಜಿಲ್ಲಾ ಪಂಚಾಯತಿಯು ಒಂದು. ಇದು ಮೂರು ಪಂಚಾಯಿತಿಗಳಲ್ಲಿ ಮೂರನೇ ಅಥವಾ ಅತ್ಯುನ್ನತ ಪಂಚಾಯಿತಿ ಸಂಸ್ಥೆಯಾಗಿದೆ. ಒಂದು ಜಿಲ್ಲೆಯಲ್ಲಿನ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಅಥವಾ ಮಹಾನಗರ ಪಾಲಿಕೆಗಳ ವ್ಯಾಪ್ತಿಗಳಪಡುವ ಪ್ರದೇಶವನ್ನು ಹೊರತುಪಡಿಸಿ ಉಳಿದೆಲ್ಲ ಗ್ರಾಮೀಣ ಪ್ರದೇಶಗಳು ಜಿಲ್ಲಾ ಪಂಚಾಯತ ವ್ಯಾಪ್ತಿಗೆ ಬರುತ್ತವೆ.
ರಚನೆ: (Structure)
ಪ್ರತಿಯೊಂದು ಜಿಲ್ಲಾ ಪಂಚಾಯಿತಿಯು ಚುನಾಯಿತ ಸದಸ್ಯರನ್ನು ಒಳಗೊಂಡಿದ್ದು, ತಾಲೂಕು ಪಂಚಾಯತ್ಗೆ ಮತದಾರರಿಂದ ಚುನಾಯಿತರಾದ ಸದಸ್ಯರು ಲೋಕಸಭೆ ಸದಸ್ಯರು, ರಾಜ್ಯಸಭೆ ಹಾಗೂ ವಿಧಾನಪರಿಷತ್ನ ಸದಸ್ಯರು ವಿಧಾನ ಸಭಾಸದಸ್ಯರು ಹಾಗೂ ಜಿಲ್ಲೆಯ ಪಂಚಾಯತ್ ಸದಸ್ಯರು ಇದ್ದು ಇವರೆಲ್ಲರೂ ಮತದಾನ ಮಾಡುವ ಹಕ್ಕನ್ನು ಹೊಂದಿದ್ದಾರೆ. ಸಾಮಾನ್ಯವಾಗಿ 40,000 ಮತದಾರರಿಗೊಬ್ಬರು ಜಿಲ್ಲಾ ಪಂಚಾಯತ್ ಸದಸ್ಯರು ಆಯ್ಕೆಯಾಗುತ್ತಾರೆ. ಆದರೆ ಕಡಿಮೆ ಜನಸಾಂದ್ರತೆ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ 30,000 ಮತದಾರರಿಗೊಬ್ಬ ಮತ್ತು ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಪ್ರತಿ 18,000 ಮತದಾರರಿಗೊಬ್ಬ ಪ್ರತಿನಿಧಿ ಆಯ್ಕೆಯಾಗುತ್ತಾನೆ.
ಚುನಾವಣೆ: (Election)
ಆಯಾ ಜಿಲ್ಲೆಯ ಜನಸಾಂದ್ರತೆಯ ಆಧಾರದ ಮೇಲೆ ಜಿಲ್ಲಾ ಪಂಚಾಯತಿಗೆ ನಿಗದಿಪಡಿಸಿದಷ್ಟು ಮತದಾರರ ಆಧಾರವನ್ನಿಟ್ಟುಕೊಂಡು ಮತಕ್ಷೇತ್ರಗಳನ್ನು ರಚಿಸಲಾಗುತ್ತದೆ. ಆಯಾ ಮತಕ್ಷೇತ್ರದ ಮತದಾರರು ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ತಮ್ಮ ಪ್ರತಿನಿಧಿಯನ್ನು ಜಿಲ್ಲಾ ಪಂಚಾಯತ್ಗೆ ಆಯ್ಕೆ ಮಾಡುತ್ತಾರೆ. ಈ ಚುನಾವಣೆಯು ಏಕವ್ಯಕ್ತಿ ಏಕ ಮತ ಹಾಗೂ ರಹಸ್ಯ ಮತದಾನ ತತ್ವವನ್ನು ಆಧರಿಸುತ್ತದೆ.
ಮೀಸಲಾತಿ: (Reservation)
ಜಿಲ್ಲಾ ಪಂಚಾಯಿತಿಯ ಒಟ್ಟು ಸ್ಥಾನಗಳಲ್ಲಿ ಶೇಕಡಾ 15% ರಷ್ಟು ಪರಿಶಿಷ್ಟಜಾತಿಗೆ, ಶೇಕಡ ೩%ರಷ್ಟು ಪರಿಶಿಷ್ಟ ಪಂಗಡದವರಿಗೆ ೧/೩ ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗದವರಿಗೆ ಹಾಗೂ ಉಳಿದ ಮೀಸಲಾತಿಗಳನ್ನು ಒಳಗೊಂಡಂತೆ ಶೇಕಡ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ.
ಅರ್ಹತೆಗಳು ಮತ್ತು ಅನರ್ಹತೆಗಳು: (Qualification and Disqualification)
ಜಿಲ್ಲಾ ಪಂಚಾಯಿತಿ ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಹಾಗೂ 21 ವರ್ಷ ತುಂಬಿದವರು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. 21 ವರ್ಷ ಪೂರ್ಣಗೊಳ್ಳದವರು ಕ್ರಿಮಿನಲ್ ಮೊಕದ್ದಮೆಗಾಗಿ ಶಿಕ್ಷೆಗೆ ಒಳಪಟ್ಟವರು ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹತೆಯನ್ನು ಹೊಂದಿರುತ್ತಾರೆ.
ಅಧಿಕಾರವಧಿ: (Term of Office)
ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಪಂಚಾಯತ್ ಸದಸ್ಯರ ಅಧಿಕಾರಾವಧಿ ೫ ವರ್ಷಗಳು ಸದಸ್ಯರು ಪಕ್ಷಾಂತರ ಮಾಡಿದರೆ, ರಾಜೀನಾಮೆ ಕೊಟ್ಟರೆ ಅಥವಾ ದುರ್ನಡತೆಯಿಂದಾಗಿ ಸದಸ್ಯರನ್ನು ಪದಚ್ಯುತಿಗೊಳಿಸಿದರೆ ಖಾಲಿ ಸ್ಥಾನಕ್ಕೆ ಮರು ಚುನಾವಣೆಗೆ ಅವಕಾಶವಿದೆ.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರು: (President and Vice President)
ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರು ತಮ್ಮಲ್ಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿಯೂ ಮೀಸಲಾತಿಯನ್ನು ಅನುಸರಿಸಲಾಗುತ್ತದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರು 30 ತಿಂಗಳು ಕಾಲ ಅಧಿಕಾರದಲ್ಲಿ ಇರುತ್ತಾರೆ. ಜಿಲ್ಲಾ ಪಂಚಾಯಿತಿಯ ಒಟ್ಟು ಸದಸ್ಯರಲ್ಲಿ ಬಹುಮತದಿಂದ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಪದಚ್ಯುತಗೊಳಿಸಬಹುದು. ʻʻಅಧ್ಯಕ್ಷರು ತಮ್ಮ ರಾಜೀನಾಮೆ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಹಾಗೂ ಉಪಾಧ್ಯಕ್ಷರು ಅಧ್ಯಕ್ಷರಿಗೆ ನೀಡಿ ಪದತ್ಯಾಗ ಮಾಡಬೇಕು.ʼʼ
ಜಿಲ್ಲಾ ಪಂಚಾಯತ್ ಕಾರ್ಯಗಳು: (Functions of Zilla Panchayat)
ಜಿಲ್ಲಾ ಪಂಚಾಯಿತಿ ಕಾರ್ಯಗಳು ಈ ಕೆಳಗಿನಂತಿವೆ
1) ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವುದು ಪ್ರಕೃತಿ ವಿಕೋಪಗಳಿಗೆ ಪರಿಹಾರ ಒದಗಿಸುವುದು ಹಾಗೂ ಗ್ರಾಮಗಳ ಅಂಕಿ ಅಂಶಗಳನ್ನು ಶೇಖರಿಸುವುದು.
2) ಕೃಷಿ ಹಾಗೂ ತೋಟಗಾರಿಕೆ ಫಾರಂ ಗಳನ್ನು ತೆರೆಯುವುದು ಹಾಗೂ ಅವುಗಳ ನಿರ್ವಹಣೆ ಮಾಡುವುದು ದಾಸ್ತಾನು ಮಳೆಗೆಗಳ ಸ್ಥಾಪನೆ ಮತ್ತು ನಿರ್ವಹಣೆ ಹಾಗೂ ವಸ್ತು ಪ್ರದರ್ಶನಗಳನ್ನು ಏರ್ಪಡಿಸುವುದು.
3) ಜಲಾನಯನ ಅಭಿವೃದ್ಧಿ ಅಂತರ್ಜಲ ಮೂಲಗಳ ಅಭಿವೃದ್ಧಿ ಹಾಗೂ ಸಣ್ಣ ನೀರಾವರಿ ಕಾಮಗಾರಿ ನಿರ್ಮಾಣ.
4) ಹಂದಿ ಸಾಗಾಣಿಕೆ ಕೋಳಿ ಹೈನು ಹಾಗೂ ಪಶುಸಾಗಾಣಿಕೆ ಪ್ರೋತ್ಸಾಹ ಪಶು ಆಸ್ಪತ್ರೆಗಳ ನಿರ್ಮಾಣ ಮತ್ತು ಪಶುಗಳಿಗೆ ತಗಲುವ ಅಂಟು ರೋಗಗಳ ನಿವಾರಣೆ.
5) ಮೀನು ಸಾಗಾಣಿಕೆ ಹಾಗೂ ಮೀನು ಸಾಗಾಣಿಕೆ ಅಭಿವೃದ್ಧಿ ಮತ್ತು ಮೀನುಗಾರರ ಕಲ್ಯಾಣ ಕಾರ್ಯಗಳು.
6) ಗ್ರಾಮೀಣ ಗುಡಿ ಕೈಗಾರಿಕೆ ಪ್ರೋತ್ಸಾಹ ನೀಡುವುದು ಮತ್ತು ಅವುಗಳಿಗೆ ಮಾರುಕಟ್ಟೆಗಳನ್ನು ಒದಗಿಸುವುದು.
7) ಸಣ್ಣ ಕೈಗಾರಿಕೆಗಳ ಪ್ರೋತ್ಸಾಹ.
8) ಗ್ರಾಮೀಣ ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಡುವುದು.
9) ಶುದ್ಧವಾದ ಕುಡಿಯುವ ನೀರಿನ ಸರಬರಾಜು ಮಾಡುವುದು ಹಾಗೂ ಗ್ರಾಮ ನೈರ್ಮಲ್ಯವನ್ನು ಕಾಪಾಡುವುದು.
10) ಸಾಮಾಜಿಕ ಅರಣ್ಯ ನಿರ್ಮಾಣ ಮತ್ತು ಮೇವು ಅಭಿವೃದ್ಧಿಗೆ ಒತ್ತು ನೀಡುವುದು ಬಂಜರು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುವುದು.
11) ಗ್ರಾಮೀಣ ರಸ್ತೆಗಳು ಕಾಲುದಾರಿ ಅಣೆಕಟ್ಟುಗಳ ನಿರ್ಮಾಣ ಮತ್ತು ನಿರ್ವಹಣೆ.
12) ಅಸಂಪ್ರದಾಯಕ ಇಂಧನ ಮೂಲಗಳ ಅಭಿವೃದ್ಧಿ ಹಾಗೂ ಪ್ರೋತ್ಸಾಹ.
13) ಗ್ರಾಮೀಣ ಭಾಗದ ಜನರ ಬಡತನವನ್ನು ಹೋಗಲಾಡಿಸಲು ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದು.
14) ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸ್ಥಾಪನೆ ಹಾಗೂ ಅವುಗಳ ನಿರ್ವಹಣೆ ಆಶ್ರಮ ಶಾಲೆಗಳು ಹಾಗೂ ಅನಾಥಾಶ್ರಮಗಳ ಸ್ಥಾಪನೆ.
15) ಗ್ರಾಮೀಣ ಕರಕುಶಲ ಮತ್ತು ವೃತ್ತಿ ತರಬೇತಿ ಕೇಂದ್ರಗಳ ಸ್ಥಾಪನೆ ಹಾಗೂ ನಿರ್ವಹಣೆ.
16) ಅನೌಪಚಾರಿಕ ಶಿಕ್ಷಣವನ್ನು ಆರಂಭಿಸುವುದು ಮತ್ತು ವಯಸ್ಕ ಸಾಕ್ಷರತಾ ಕಾರ್ಯಗಳನ್ನು ಹಮ್ಮಿಕೊಳ್ಳುವುದು.
17) ಗ್ರಾಮೀಣ ಭಾಗದಲ್ಲಿ ಜಾತ್ರೆ ಹಾಗೂ ಮಾರುಕಟ್ಟೆಗಳನ್ನು ನಿಯಂತ್ರಿಸುವುದು.
18) ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗಳು, ಚಿಕಿತ್ಸಾಲಯಗಳು ನಿರ್ಮಾಣ ಹಾಗೂ ನಿರ್ವಹಣೆ ಗರ್ಭಿಣಿಯರ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳು ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ರೋಗ ನಿರೋಧಕ ಹಾಗೂ ಲಸಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
19) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸುವುದು.
20) ಅಂಗವಿಕಲರು ನಿರಾಶ್ರಿತರು ಹಾಗೂ ಮಾನಸಿಕ ಅಸ್ವಸ್ಥರ ಕಲ್ಯಾಣ ಕಾರ್ಯಕ್ರಮಗಳನ್ನು ಆರಂಭಿಸುವುದು.
21) ದುರ್ಬಲ ವರ್ಗಗಳು ಹಾಗೂ ಪರಿಶಿಷ್ಟ ಜಾತಿ ಅಥವಾ ಜನಾಂಗಗಳ ಶೈಕ್ಷಣಿಕ ಆರ್ಥಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿತಾಸಕ್ತಿಗಳನ್ನು ಕಾಪಾಡುವುದು.
22) ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ನೋಡಿಕೊಳ್ಳುವುದು.
23) ಗ್ರಾಮೀಣ ವಿದ್ಯುದ್ಧೀಕರಣ
24) ಸಹಕಾರ ಚಟುವಟಿಕೆಗಳಿಗೆ ಪ್ರೋತ್ಸಾಹ.
25) ಸಂತೆಗಳನ್ನು ಏರ್ಪಡಿಸುವುದು ಮತ್ತು ನಿಯಂತ್ರಿಸುವುದು.
26) ಗ್ರಂಥಾಲಯಗಳ ಹಾಗೂ ವಾಚನಾಲಯ ಕೊಠಡಿಗಳ ನಿರ್ಮಾಣ ಹಾಗೂ ನಿರ್ವಹಣೆ.
27) ಸಾರ್ವಜನಿಕ ಉದ್ಯಾನವನಗಳ ಹಾಗೂ ಕ್ರೀಡಾಂಗಣಗಳ ಸಂರಕ್ಷಣೆ.
28) ರುದ್ರ ಭೂಮಿ ಸಂರಕ್ಷಣೆ.