ರಜಪೂತರ ಕಲೆ ಹಾಗೂ ವಾಸ್ತುಶಿಲ್ಪ

ರಜಪೂತರ ಕಲೆ ಹಾಗೂ ವಾಸ್ತುಶಿಲ್ಪ

ರಜಪೂತ ಅರಸರು ಸಾಹಿತ್ಯ ಪೋಷಕರು ಮತ್ತು ಧರ್ಮ ಸಹಿಷ್ಣುರಾಗಿದ್ದಂತೆ ಕಲಾಭಿಮಾನಿಗಳು ಮತ್ತು ಕಲೋಪಾಸಕರಾಗಿದ್ದರು. ಭಾರತೀಯ ಕಲಾ ಪರಂಪರೆಯಲ್ಲಿ ರಜಪೂತರಿಂದ ಹೊಸದೊಂದು ಯುಗ ಆರಂಭಗೊಂಡಿತು. ರಜಪೂತರಿಂದ ರಚನೆಗೊಂಡ ಕಲಾಸ್ಮಾರಕಗಳೆಂದರೆ:- ದೇವಾಲಯಗಳು, ಅರಮನೆಗಳು, ಕೋಟೆಕೊತ್ತಲಗಳು, ಸ್ನಾನಘಟ್ಟಗಳು, ನೀರಾವರಿ ಅಣೆಕಟ್ಟುಗಳು ಮೊದಲಾದವು. ರಜಪೂತರ ಕಲಾಸ್ಮಾರಕಗಳು ಒರಿಸ್ಸಾ, ಖಜುರಾಹೋ, ರಾಜಸ್ಥಾನ, ಗುಜರಾತ್, ಮಧ್ಯಭಾರತ ಮತ್ತು ಕಾಥೇವಾಡಗಳಲ್ಲಿ ಕಂಡುಬರುತ್ತದೆ.

1. ಕೋಟೆಗಳು : ರಜಪೂತರ ಕಾಲದಲ್ಲಿ ಅಭೇದ್ಯ ಮತ್ತು ಪ್ರಬಲ ದುರ್ಗ ಅಥವಾ ಕೋಟೆಗಳು ನಿರ್ಮಾಣಗೊಂಡವು. ರಣತಂಬೂರ್, ಚಿತ್ತೂರು, ಕುಂಭಲಘಡ, ಗ್ವಾಲಿಯರ್, ಚಾಂದೇರಿ, ಮಾಂಡು ಮತ್ತು ಅಸೀರ್‌ಘಡದ ಕೋಟೆಗಳು ಪ್ರಮುಖ ಕೋಟೆಗಳಾಗಿವೆ. ಇಂತಹ ಕೋಟೆಗಳಲ್ಲಿ ಸರಳ ರೀತಿಯ ಕಲೆಯಿದ್ದು ಕಲಾ ರಮ್ಯತೆಯು ಕಂಡುಬರುವುದಿಲ್ಲ.

2 ಅರಮನೆಗಳು : ರಜಪೂತರ ಕಲೆಯು ಅರಮನೆಗಳಲ್ಲಿಯೂ ಪ್ರತಿಬಿಂಬಿತವಾಗಿದೆ. ಮಹಮ್ಮದೀಯರ ಧಾಳಿಗೆ ಸಿಕ್ಕು ಅನೇಕ ಅರಮನೆಗಳು ಶಿಥಿಲಗೊಂಡಿವೆ. ಕೆಲವು ಅರಮನೆಗಳು ಯಥಾವತ್ತಾಗಿ ಉಳಿದುಬಂದಿವೆ. ಇವುಗಳಲ್ಲಿ ಗ್ವಾಲಿಯರ್‌ನ ಮಾನ್‌ಸಿಂಹನ ಅರಮನೆ, ಅಂಬರ್ ಮತ್ತು ಉದಯ್‌ ಪುರದ ಅರಮನೆಗಳು ಪ್ರಮುಖವಾಗಿವೆ.

ಜಯಪುರದ ಹವಾಮಹಲ್ (Hawa Mahal) ರಾಜಸ್ಥಾನದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ. ಇದನ್ನು ಗಾಳಿಯ ಅರಮನೆ ಎಂದೂ ಕರೆಯಲಾಗುತ್ತದೆ.

ಹವಾಮಹಲ್ ನಿರ್ಮಾಣ ಮತ್ತು ಇತಿಹಾಸ:
1799ರಲ್ಲಿ ಜೈಪುರದ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಅವರು ಈ ಮಹಲ್‌ನ್ನು ನಿರ್ಮಿಸಿದರು. ಇದನ್ನು ಪ್ರಸಿದ್ಧ ವಾಸ್ತುಶಿಲ್ಪಿ ಲಾಲ್ ಚಂದ್ ಉಸ್ತಾದ್ ವಿನ್ಯಾಸಗೊಳಿಸಿದರು. ಈ ಕಟ್ಟಡವು ರಾಜಮಹಲ್ ಸಮುಚ್ಚಯದ ಒಂದು ಭಾಗವಾಗಿದ್ದು, ನಗರ ಜೀವನವನ್ನು ಅರಮನೆಯೊಳಗಿನಿಂದಲೇ ವೀಕ್ಷಿಸಲು ಸಹಾಯ ಮಾಡುತ್ತಿತ್ತು.

ವಾಸ್ತುಶಿಲ್ಪ ವೈಶಿಷ್ಟ್ಯಗಳು:
ಹವಾಮಹಲ್‌ ಐದು ಮಹಡಿಗಳ ಎತ್ತರದ ಕಟ್ಟಡವಾಗಿದ್ದು, ಗುಲಾಬಿ ಬಣ್ಣದ ಮರಳುಗಲ್ಲಿನಿಂದ ನಿರ್ಮಿತವಾಗಿದೆ. ಇದರಲ್ಲಿ ಸುಮಾರು 953 ಸಣ್ಣ ಕಿಟಕಿಗಳು (ಜರೋಕಾಗಳು) ಇವೆ. ಈ ಕಿಟಕಿಗಳ ಮೂಲಕ ಗಾಳಿ ನಿರಂತರವಾಗಿ ಹರಿಯುವುದರಿಂದ ಒಳಗೆ ಸದಾ ತಂಪಾದ ವಾತಾವರಣ ಇರುತ್ತಿತ್ತು—ಆದ್ದರಿಂದ “ಹವಾಮಹಲ್” ಎಂಬ ಹೆಸರು ಬಂದಿದೆ. ಕಟ್ಟಡದ ಮುಂಭಾಗವು ಜೇನುಗೂಡು (honeycomb) ಆಕಾರವನ್ನು ಹೊಂದಿದೆ.

ಉದ್ದೇಶ:
ಪರ್ದಾ ಪದ್ಧತಿಯನ್ನು ಪಾಲಿಸುವ ರಾಜಮಹಿಳೆಗಳು ಸಾರ್ವಜನಿಕ ರಸ್ತೆಗಳಲ್ಲಿ ನಡೆಯುವ ಉತ್ಸವಗಳು, ಮೆರವಣಿಗೆಗಳು ಮತ್ತು ದಿನನಿತ್ಯದ ಚಟುವಟಿಕೆಗಳನ್ನು ಯಾರಿಗೂ ಕಾಣಿಸದೇ ವೀಕ್ಷಿಸಲು ಈ ಮಹಲ್ ಬಳಸುತ್ತಿದ್ದರು.

ಸಾಂಸ್ಕೃತಿಕ ಮಹತ್ವ:
ಹವಾಮಹಲ್ ಜೈಪುರದ ರಜಪೂತ ವಾಸ್ತುಶಿಲ್ಪದ ಅದ್ಭುತ ಮಾದರಿಯಾಗಿದ್ದು, ರಾಜಸ್ಥಾನದ ಸಂಸ್ಕೃತಿ ಮತ್ತು ಕಲೆಗಳ ಪ್ರತೀಕವಾಗಿದೆ. ಇಂದು ಇದು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣವಾಗಿದೆ.

ಮಾನ್‌ಸಿಂಗ್ ಅರಮನೆ (Man Singh Palace) ರಾಜಸ್ಥಾನದ ಜೈಪುರದಲ್ಲಿ ಇರುವ ಪ್ರಮುಖ ಐತಿಹಾಸಿಕ ಸ್ಮಾರಕವಾಗಿದೆ. ಇದು ರಾಜಪುತ ಹಾಗೂ ಮೊಘಲ್ ವಾಸ್ತುಶಿಲ್ಪದ ಸೊಗಸಾದ ಸಂಯೋಜನೆಯನ್ನು ಪ್ರದರ್ಶಿಸುತ್ತದೆ.

ಇತಿಹಾಸ:
ಈ ಅರಮನೆಯನ್ನು 16ನೇ ಶತಮಾನದಲ್ಲಿ ಅಂಬರ್‌ನ ಮಹಾರಾಜ ಮಾನ್‌ಸಿಂಗ್ I ಅವರು ನಿರ್ಮಿಸಿದರು. ಅವರು ಮೊಘಲ್ ಸಾಮ್ರಾಟ ಅಕ್ಬರ್ ಅವರ ನಿಷ್ಠಾವಂತ ಸೇನಾನಿ ಹಾಗೂ ಸೇನಾಪತಿಯಾಗಿದ್ದರು. ಈ ಅರಮನೆ ಅಂಬರ್ ಕೋಟೆಯ ಒಳಭಾಗದಲ್ಲಿದೆ.

ವಾಸ್ತುಶಿಲ್ಪ:
ಮಾನ್‌ಸಿಂಗ್ ಅರಮನೆ ನಾಲ್ಕು ಮಹಡಿಗಳನ್ನೊಳಗೊಂಡಿದ್ದು, ಕೆಂಪು ಮತ್ತು ಹಳದಿ ಮರಳುಗಲ್ಲಿನಿಂದ ನಿರ್ಮಾಣವಾಗಿದೆ. ಅರಮನೆಯ ಗೋಡೆಗಳ ಮೇಲೆ ಸುಂದರ ಚಿತ್ರಕಲೆಗಳು, ಹೂವಿನ ಅಲಂಕಾರಗಳು ಮತ್ತು ಭೌಮಿತೀಯ ವಿನ್ಯಾಸಗಳು ಕಾಣಸಿಗುತ್ತವೆ. ಒಳಾಂಗಣದಲ್ಲಿರುವ ಸಭಾಂಗಣಗಳು, ಮಂಟಪಗಳು ಮತ್ತು ದರ್ಬಾರ್ ಹಾಲ್‌ಗಳು ಅದರ ವೈಭವವನ್ನು ತೋರಿಸುತ್ತವೆ.

ವಿಶೇಷತೆ:
ಈ ಅರಮನೆ ರಾಜಕುಟುಂಬದ ವಾಸಸ್ಥಳವಾಗಿತ್ತು. ಅರಮನೆಯಲ್ಲಿನ ಚಿತ್ರಗಳು ಹಾಗೂ ಅಲಂಕಾರಗಳು ರಾಜಪುತ ಸಂಸ್ಕೃತಿ ಮತ್ತು ಮೊಘಲ್ ಕಲೆಯ ಪ್ರಭಾವವನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಮಹತ್ವ:
ಮಾನ್‌ಸಿಂಗ್ ಅರಮನೆ ಅಂಬರ್ ಕೋಟೆಯ ಪ್ರಮುಖ ಆಕರ್ಷಣೆಯಾಗಿದ್ದು, ಜೈಪುರದ ಇತಿಹಾಸ, ಶಿಲ್ಪಕಲೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಅತ್ಯಂತ ಉಪಯುಕ್ತವಾಗಿದೆ.

3. ದೇವಾಲಯಗಳು : ರಜಪೂತರ ಕಾಲದ ಕಲೆಯು ರಮ್ಯತೆ ಮತ್ತು ವೈಭವವನ್ನು ಕಂಡಿರುವುದು ದೇವಾಲಯಗಳಲ್ಲಿ. ರಜಪೂತರ ಕಾಲದ ಪ್ರಮುಖ ದೇವಾಲಯಗಳೆಂದರೆ:-

ಬಂದೇಲ್ ಖಂಡದಲ್ಲಿನ –ಖುಜುರಾಹೋ ದೇವಾಲಯಗಳು (ಇಲ್ಲಿ 80 ಕ್ಕೂ ಹೆಚ್ಚು ದೇವಾಲಯಗಳಿವೆ)

ಓರಿಸ್ಸಾದ – ಭುವನೇಶ್ವರ, ಪುರಿ ಮತ್ತು ಕೊರ್ನಾಕ್‌ ದೇವಾಲಯ

ಜೋಧಪುರದ – ಓಸಿಯಾ ದೇವಾಲಯ,

ಚಿತ್ತೂರಿನ – ಕಾಳಿಕಾಮಾತಾ ದೇವಾಲಯ,

ಉದಯಪುರದ – ಏಕಲಿಂಗ ದೇವಾಲಯ,

ಮೌಂಟ್ ಅಬುನಲ್ಲಿರುವ – ಅಮೃತಶಿಲೆಯ ಜೈನದೇವಾಲಯಗಳು

ಇವುಗಳು ರಜಪೂತರ ಕಲೆಯನ್ನು ಪ್ರತಿಬಿಂಬಿಸುವ ಮೇರು ಕಲಾಕೃತಿಗಳಾಗಿವೆ.

ದೇವಾಲಯಗಳ ಪ್ರಧಾನ ಲಕ್ಷಣಗಳು

ರಜಪೂತರ ದೇವಾಲಯಗಳಲ್ಲಿ ಗರ್ಭಗೃಹ, ಭವ್ಯವಾದ ಶಿಖರಗಳು, ಶಿಖರದ ಮೇಲಿನ ಚಿನ್ನದ ಕಳಸ, ಗರ್ಭಗೃಹದ ಮುಂದೆ ವಿಶಾಲವಾದ ಸಭಾಮಂಟಪ, ಕಂಬಗಳಲ್ಲಿನ ಸೂಕ್ಷ್ಮಕೆತ್ತನೆ ಇವುಗಳು ಪ್ರಧಾನ ಲಕ್ಷಣಗಳಾಗಿ ಕಂಡುಬರುತ್ತವೆ. ಮಥುರಾದ ಸೂರ್ಯ ದೇವಾಲಯವು ಸೌಂದರ್ಯಕ್ಕೆ ಹೆಸರಾಗಿದೆ. ರುದ್ರಮಾಲಾ ದೇವಾಲಯವು ಅತ್ಯಂತ ವಿಶಾಲ ಮತ್ತು ಅಲಂಕೃತವಾದ ದೇವಾಲಯವೆಂದೇ ಖ್ಯಾತವಾಗಿದೆ. ರಜಪೂತರ ಕಾಲದ ಕೊನೆಯ ದಿನಗಳಲ್ಲಿ ನಿರ್ಮಾಣಗೊಂಡ ದೇವಾಲಯಗಳು ಹೊರಭಾಗದಲ್ಲಿ ಮೊದಲಿನ ದೈವಿಕ ಮತ್ತು ನೈತಿಕ ಚಿತ್ರಗಳ ಜೊತೆಗೆ ಅಶ್ಲೀಲವಾದ ಚಿತ್ರಗಳನ್ನು ಹೊಂದಿದೆ.

ಶಿಲ್ಪಕಲೆ : ರಜಪೂತರ ಕಾಲದಲ್ಲಿ ಶಿಲ್ಪಕಲೆಯು ಕೂಡ ಅಭಿವೃದ್ಧಿಗೊಂಡಿತು. ‘ಆಕೃತಿ ಶಿಲ್ಪಕಲೆ’ ಅಥವಾ ‘ಪ್ಲಾಸ್ಟಿಕ್ ಶಿಲ್ಪಕಲೆಯು’ ಪರಮೋನ್ನತಿ ತಲುಪಿತ್ತು. ಖಜುರಾಹೋದ ಮೂರ್ತಿಶಿಲ್ಪ ಶೃಂಗಾರ ಮೂರ್ತಿಶಿಲ್ಪವೆನಿಸಿದೆ. ಇದರಲ್ಲಿ ಬಿಡಿಸಲ್ಪಟ್ಟ ಮೂರ್ತಿಯ ಮುಖಭಾವ, ದುಂಡನೆಯ ಕೆನ್ನೆಗಳು, ಎದ್ದು ಕಾಣುತ್ತಿರುವ ನೇತ್ರ, ನಾಸಿಕ, ಹುಬ್ಬು, ತುಟಿಗಳು ಆಕರ್ಷಕವಾಗಿ ಮೂಡಿಬಂದಿದೆ.

ಚಂದೇಲರ ಪ್ರಮುಖ ನಗರ ಮಹೋಬದಲ್ಲಿ ಬುದ್ಧ ಹಾಗೂ ತಾರಾ ಮೂರ್ತಿಗಳಿವೆ. ಬ್ರಿಟೀಷ್ ಮ್ಯೂಸಿಯಂ ನಲ್ಲಿರುವ ‘ಸರಸ್ವತಿ ಮೂರ್ತಿ’ ಅಂದಿನ ಶಿಲ್ಪಕಲೆಗೆ ಅತ್ಯುತ್ತಮ ನಿದರ್ಶನವಾಗಿದೆ. ಮೌಂಟ್ ಅಬುದಲ್ಲಿನ ಮೂರ್ತಿಶಿಲ್ಪವು ಅತ್ಯಂತ ಸೂಕ್ಷ್ಮ ಮತ್ತು ಶ್ರೀಮಂತ ಶಿಲ್ಪವೆನಿಸಿದೆ. ಹೀಗೆ ರಜಪೂತರ ಕಾಲದಲ್ಲಿ ಕಲಾ ಶ್ರೀಮಂತಿಕೆಯು ವೈಭವ ಪೂರ್ಣವಾದ ಔನ್ನತ್ಯದ ಸ್ಥಿತಿಯನ್ನು ತಲುಪಿತ್ತು.

ಖಜುರಾಹೋ ದೇವಾಲಯಗಳು:     

ಬಂದೇಲಖಂಡದ ‘ಖಜುರಾಹೊ’ ಇಂದಿನ ಮಧ್ಯಪ್ರದೇಶ ರಾಜ್ಯದಲ್ಲಿದೆ. ಖಜುರಾಹೊ ರಜಪೂತರ ದೇವಾಲಯಗಳ ತವರು ಮನೆ. ಇಲ್ಲಿ ದೇವಾಲಯಗಳ ದೊಡ್ಡ ಸಮೂಹವೇ ಕಂಡು ಬಂದಿದೆ. ಇದಕ್ಕೆ ಮೂಲ ಕಾರಣರಾದವರೆಂದರೆ ಚಂದೇಲ ಆರಸರು. ಇವರು ಕ್ರಿ.ಶ.950ರಿಂದ 1050ರ ಅವಧಿಯಲ್ಲಿ ಖಜುರಾಹೋದಲ್ಲಿ ಅನೇಕ ದೇವಾಲಯಗಳನ್ನು ಕ್ರಿಯಾತ್ಮಕವಾಗಿ ನಿರ್ಮಿಸಿದ್ದಾರೆ. ಖಜುರಾಹೋ ಎಂದರೆ ಖರ್ಜೂರ ವೃಕ್ಷಗಳ ಮಾರ್ಗ ಎಂದರ್ಥ. ಖುಜರಾಹೋ ಮಧ್ಯಪ್ರದೇಶದ ಬಂದೇಲ ಖಂಡದ ಒಂದು ಸಣ್ಣ ಕುಗ್ರಾಮ. ಇದು ಸುಮಾರು 8 ಕಿ.ಮೀ. ವಿಸ್ತಾರ ಹೊಂದಿದೆ. ಇಲ್ಲಿ ಸುಮಾರು 85ಕ್ಕಿಂತಲೂ ಅಧಿಕ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಶೈವ, ವೈಷ್ಣವ ಹಾಗು ಜೈನಧರ್ಮಗಳಿಗೆ ಸಂಬಂಧಿಸಿದ ಹಲವಾರು ದೇವಾಲಯಗಳು ಇವೆ. ಇವುಗಳನ್ನು ನಾಗರಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಎಲ್ಲಾ ದೇವಾಲಯಗಳು ನದಿಯ ದಡದಲ್ಲಿ ನಿರ್ಮಾಣವಾಗಿವೆ. ಈ ದೇವಾಲಯಗಳು ಮಧ್ಯದಲ್ಲಿ ಉಬ್ಬಿಕೊಂಡಂತೆ ಇರುವ ಎತ್ತರವಾದ ದ್ವಾರಗೋಪುರವನ್ನು ಹೊಂದಿವೆ. ಈ ದೇವಾಲಯಗಳ ಶಿಖರಗಳು ಪಿರಾಮಿಡ್ಡಿನಾಕಾರದಲ್ಲಿದೆ. ಖಜುರಾಹೊ ದೇವಾಲಯದ ದೊಡ್ಡ ಶಿಖರದ ಸುತ್ತಲೂ ಚಿಕ್ಕಚಿಕ್ಕ ಶಿಖರಗಳನ್ನು ನಿರ್ಮಿಸಲಾಗಿದೆ. ದೇವಾಲಯಗಳು ಗಾತ್ರ ಹಾಗೂ ರೂಪಗಳಲ್ಲಿ ಎಲ್ಲಿಯೂ ತಮ್ಮ ಪ್ರಭುತ್ವವನ್ನು ಕಳೆದುಕೊಂಡಿಲ್ಲ. ದೇವಾಲಯಗಳು ಮುಖ್ಯವಾಗಿ ನಾಲ್ಕು ಭಾಗಗಳನ್ನು ಹೊಂದಿದ್ದು, ಅವುಗಳೆಂದರೆ ಪ್ರವೇಶ ಮಂಟಪ, ಮಧ್ಯ ಮಂಟಪ, ಅಂತರಾಳ ಹಾಗೂ ಗರ್ಭ ಗೃಹ ಪ್ರಮುಖವಾದವುಗಳಾಗಿವೆ. ಗರ್ಭಗೃಹವು ಕತ್ತಲೆಯಿಂದ ಕೂಡಿದ್ದುದಾಗಿದ್ದು, ಅದರ ಸುತ್ತ ಪ್ರದಕ್ಷಿಣಾ ಪಥವಿದೆ. ದೇವಾಲಯದ ಸುತ್ತಲೂ ಅಸಂಖ್ಯಾತ ಶಿಲ್ಪಗಳಿದ್ದು, ಸುಂದರವಾದ ಕೆತ್ತನೆಯಿಂದ ಕೂಡಿದೆ. ದೇವಾಲಯಕ್ಕೆ ಸಾಮಾನ್ಯವಾಗಿ ಒಂದೇ ಪ್ರವೇಶದ್ವಾರವಿದೆ. ಮೆಟ್ಟಿಲುಗಳನ್ನು ಏರಿ ದೇವಾಲಯ ಪ್ರವೇಶಿಸಬೇಕಾಗುತ್ತದೆ.

ಖಜುರಾಹೊ ಒಂದರಲ್ಲಿಯೇ 30ಕ್ಕಿಂತ ಹೆಚ್ಚು ದೇವಾಲಯಗಳಿವೆ. ಅವುಗಳನ್ನು ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ದೇವಾಲಯಗಳ ಸಮುಚ್ಚಯ ಎಂದು ಕರೆಯಲಾಗಿದೆ. ಆದ ಕಾರಣ ಖಜುರಾಹೊವನ್ನು ಎರಡನೆಯ ವಾರಣಾಸಿ ಎಂದು ಹೆಸರಿಸಲಾಗಿದೆ. ಪೂರ್ವ ಸಮುಚ್ಚಯದಲ್ಲಿ ಬ್ರಹ್ಮ, ವಿಷ್ಣು, ವರುಣ ದೇವಾಲಯಗಳನ್ನು ನಿರ್ಮಿಸಿದ್ದರೆ. ಪಶ್ಚಿಮದಲ್ಲಿ ಲಕ್ಷ್ಮಣ, ಮತಂಗ, ವರಾಹ, ವಿಶ್ವನಾಥ, ನಂದಿ ಹಾಗೂ ಕಂದಾರಿಯ ಮಹಾದೇವ ದೇವಾಲಯಗಳನ್ನು ನಿರ್ಮಿಸಲಾಗಿದೆ. ಹಾಗೆಯೇ ದಕ್ಷಿಣದಲ್ಲಿ ದುಲ್ ಮಹಾದೇವ ಹಾಗೂ ಚತುರ್ಭುಜ ದೇವಾಲಯಗಳನ್ನು ಕಟ್ಟಲಾಗಿದೆ. ಖಜುರಾಹೊದ ದೇವಾಲಯಗಳಲ್ಲಿ ಅತ್ಯಂತ ಮನಮೋಹಕವಾಗಿ ಕಾಣುವ ದೇವಾಲಯವೆಂದರೆ ವಿಶ್ವನಾಥ ದೇವಾಲಯ. ಇದನ್ನು ಕ್ರಿಶ. 1002ರಲ್ಲಿ ಧಂಗವರ್ಮ ಎಂಬುವನ ನಿರ್ಮಿಸಿದನು. ಈ ದೇವಾಲಯ ಪ್ರಾಂಗಣವನ್ನು ಹೊಂದಿದ್ದು, ಕಿರಿದಾದ ಹಾಗೂ ಹಿರಿದಾದ ಶಿಖರಗಳನ್ನು ಹೊಂದಿದೆ. ಮಹಾದೇವ ದೇವಾಲಯ ಖುಜರಾಹೋವಿನ ಅತ್ಯಂತ ಪ್ರಸಿದ್ದ ದೇವಾಲಯವಾಗಿದೆ. ಇದು 166 ಅಡಿ ಎತ್ತರ, 101 ಅಡಿ ಉದ್ದ ಹಾಗೂ 101 ಆಡಿ ಅಗಲವಾಗಿದೆ. ಈ ದೇವಾಲಯವು ಸುಮಾರು 650ಕ್ಕಿಂತಲೂ ಹೆಚ್ಚು ಮೂರ್ತಿ ಶಿಲ್ಪಗಳನ್ನು ಹೊಂದಿದೆ. ಇದರ ಮೇಲ್ಟಾವಣಿ ಗುಮ್ಮಟಾಕಾರದಲ್ಲಿ ಇದೆ.

ಈ ದೇವಾಲಯದ ಪ್ರತಿಶಿಲ್ಪಗಳು ದುಂಡನೆಯ ಕೆನ್ನೆಗಳನ್ನು ಹೊಂದಿದ್ದು, ಮುಖಕ್ಕೆ ಅಂದವನ್ನು ಹೆಚ್ಚಿಸುವ ನೇತ್ರ, ಹುಬ್ಬು, ಕಣ್ಣು, ನಾಸಿಕ ಹಾಗೂ ತುಟಿಗಳನ್ನು ಹೊಂದಿದೆ. ಒಸ್ಸಿಮಾ ಎಂಬಲ್ಲಿ ರಜಪೂತರು ಸುಮಾರು 16 ಹಿಂದೂ ಹಾಗೂ ಜೈನ ದೇವಾಲಯಗಳನ್ನು ನಿರ್ಮಿಸಿದರು. ಚಿತ್ತೂರಿನ ಕಾಳಿಕಾ ದೇಗುಲ ಹಾಗೂ ಉದಯಪುರದ ಏಕಲಿಂಗ ದೇವಾಲಯ ರಜಪೂತರ ಕಲಾ ನೈಪುಣ್ಯತೆಗೆ ಕನ್ನಡಿ ಹಿಡಿದಂತಿದೆ. ಗುಜರಾತಿನ ಸೋಮನಾಥ ದೇವಾಲಯ ಆ ಕಾಲದ ಅತಿ ದೊಡ್ಡ ಶ್ರೀಮಂತ ದೇವಾಲಯವಾಗಿತ್ತು. ಇದನ್ನು ಘಜಿಮಹಮದ್ ನಾಶಗೊಳಿಸಿದನು. ಮಥುರಾ ರಜಪೂತರ ಕಲಾಕೇಂದ್ರವಾಗಿತ್ತು. ಒಟ್ಟಿನಲ್ಲಿ ಖಜುರಾಹೊದ ದೇವಾಲಯಗಳು ರಜಪೂತರ ಹೆಸರನ್ನು ಇಡೀ ವಿಶ್ವದಾದ್ಯಂತ ಅಜರಾಮರವಾಗಿಸಿವೆ.

ಕೋನಾರ್ಕ್ (ಸೂರ್ಯ ದೇವಾಲಯ)

ಕೋನಾರ್ಕ್ ಓರಿಸ್ಸಾದ ಒಂದು ಪ್ರಸಿದ್ಧ ದೇವಾಲಯದ ತಾಣವಾಗಿದೆ. ಓರಿಸ್ಸಾನಿಂದ ಸುಮಾರು 68 ಕಿ.ಮೀ. ದೂರದಲ್ಲಿರುವ ಕೋನಾರ್ಕ್ ಸುಮಾರು 5000 ಜನಸಂಖ್ಯೆಯನ್ನು ಒಳಗೊಂಡಿದೆ. ಓರಿಸ್ಸಾದ ಪುರಿ ಜಿಲ್ಲೆಯಲ್ಲಿರುವ ಕೋನಾರ್ಕ್‌ ನಲ್ಲಿ ಒಟ್ಟು 28 ದೇವಾಲಯಗಳಿದ್ದು, ಇವುಗಳಲ್ಲಿ ಸೂರ್ಯದೇವಾಲಯ ಅತ್ಯಂತ ಪ್ರಮುಖವಾದುದ್ದಾಗಿದೆ. ಸೂರ್ಯನ ಕಿರಣಗಳು ಮೊದಲು ಈ ದೇವಾಲಯದ ಒಳಗಿನ ವಿಗ್ರಹದ ಮೇಲೆ ಒಂದು ನಿರ್ದಿಷ್ಟ ಕೋನದ ಮೇಲೆ ಬೀಳುತ್ತವೆ. ಹೀಗಾಗಿ ಈ ದೇವಾಲಯಕ್ಕೆ ಕೋನ+ಆರ್ಕ=ಕೋನಾರ್ಕ ಎಂಬ ಹೆಸರು ಬಂದಿದೆ. ಈ ದೇವಾಲಯವನ್ನು ಒಂದನೆಯ ನರಸಿಂಹನ ಆಳ್ವಿಕೆಯಲ್ಲಿ ಕಟ್ಟಲಾಯಿತು. ಈಗ ಕೋನಾರ್ಕ ದೇವಾಲಯ ಪಾಳು ಬಿದ್ದು, ಒಂದು ಚೌಕೋನ ಅಂಗಳದ ಮಧ್ಯದಲ್ಲಿ ಇದೆ. ರೇಖಾನಾಗರ ಶೈಲಿಯಲ್ಲಿ ರಚಿತವಾದ ಕೋನಾರ್ಕ್ ದೇವಾಲಯ ಬಂಗಾಳ ಕೊಲ್ಲಿಯ ಸಮುದ್ರ ತೀರದಲ್ಲಿದೆ. ಇದು 865 ಅಡಿ ಉದ್ದ, 540 ಅಡಿ ಅಗಲ ಹಾಗೂ 16 ಅಡಿ ಎತ್ತರದ ಪೀಠದ ಮೇಲೆ ನಿಂತಿದೆ. ಈ ದೇಗುಲದ ನಿರ್ಮಾಣಕ್ಕೆ 12,000 ಜನರು ಸತತವಾಗಿ 12ವರ್ಷಗಳ ಕಾಲ ಶ್ರಮಿಸಿ ನಿರ್ಮಿಸಿದ್ದಾರೆ. ಸುಮಾರು 12 ವರ್ಷಗಳವರೆಗೆ ಬಂದ ಕಂದಾಯದಿಂದ ಇದನ್ನು ನಿರ್ಮಿಸಲಾಗಿದೆ. ಕೋನಾರ್ಕ್ ದೇವಾಲಯದ ನಿರ್ಮಾಣದಲ್ಲಿ ಬಿಳಿ ಮರಳುಕಲ್ಲು ಹಾಗೂ ಕಪ್ಪು ಹಸಿರಿನ ಕ್ಲೋರೈಡ್ ಶಿಲ್ಪ ಶಿಲೆಗಳನ್ನು ಬಳಸಲಾಗಿದೆ. ಇದನ್ನು ನಿರ್ಮಿಸಲು 2000 ಟನ್‌ ಗಳಷ್ಟು ಶಿಲೆಯನ್ನು ಬಳಸಲಾಗಿದೆ. ಕೋನಾರ್ಕ್ ದೇವಾಲಯವನ್ನು ದೂರದಿಂದ ವೀಕ್ಷಿಸಿದಾಗ ಅದು ಕಪ್ಪಾಗಿ ಕಾಣುತ್ತದೆ. ಆದುದರಿಂದ ಸೂರ್ಯದೇವಾಲಯವನ್ನು ಕಷ್ಟು ದೇವಾಲಯ ಅಥವಾ ಬ್ಲಾಕ್ ಪಗೋಡಾ ಎಂದು ಕರೆಯಲಾಗಿದೆ. ಇದರ ಒಟ್ಟು ಎತ್ತರ 228 ಅಡಿಗಳು. ಈ ಸೂರ್ಯದೇಗುಲ ಏಳು ಕುದುರೆಗಳಿಂದ ಎಳೆಯಲ್ಪಡುತ್ತಿರುವ ಒಂದು ಬೃಹತ್ ರಥದ ಮಾದರಿಯ ದೇವಾಲಯವಾಗಿರುವುದು ಒಂದು ವಿಶೇಷ ವಿಶಿಷ್ಠವಾದ ರಥ ದೇಗುಲ 4 ಅಡಿ ಎತ್ತರದ ವೇದಿಕೆಯ ಮೇಲೆ ನಿಂತಿವೆ. ಇದರ ಎರಡೂ ಪಾರ್ಶ್ವಗಳಲ್ಲಿ 9.9 ಅಡಿ ವ್ಯಾಸದ 8 ಕಡ್ಡಿಗಳಿರುವ 12 ಬೃಹತ್ ಚಕ್ರಗಳನ್ನು ಆಳವಡಿಸಲಾಗಿದೆ. ಪ್ರತಿ ಚಕ್ರವೂ 3 ಮೀಟರ್ ವ್ಯಾಸವನ್ನು ಹೊಂದಿದೆ. ಈ ಚಕ್ರಗಳನ್ನು 7 ಕುದುರೆಗಳನ್ನು ಎಳೆದೊಯ್ಯುತ್ತಿರುವಂತೆ ಕಂಡುಬರುತ್ತದೆ. ಪ್ರತಿ ಕುದುರೆಯು 5 ಅಡಿ 2 ಅಂಗುಲ 3 ಮೀಟರ್ ವ್ಯಾಸವನ್ನು ಹೊಂದಿದೆ. ಈ ಚಕ್ರಗಳನ್ನು 7 ಕುದುರೆಗಳನ್ನು ಎಳೆದೊಯ್ಯುತ್ತಿರುವಂತೆ ಕಂಡುಬರುತ್ತದೆ. ಪ್ರತಿ ಕುದುರೆಯು 5 ಅಡಿ 2 ಅಂಗುಲ ಎತ್ತರವಿದೆ. ಈ 7 ಅಶ್ವಗಳು ವಾರದ 7 ದಿನಗಳನ್ನು 24 ಚಕ್ರಗಳು ದಿನದ 24 ಗಂಟೆಗಳನ್ನು ಚಕ್ರದಲ್ಲಿರುವ 8 ಕಡ್ಡಿಗಳು ದಿನದ 8 ಮುಹೂರ್ತಗಳನ್ನು ಪ್ರತಿಬಿಂಬಿಸುತ್ತವೆ ಎಂದು ನಂಬಲಾಗಿದೆ. ಚಕ್ರಗಳ ಮೇಲೆ ಬೀಳುವ ಸೂರ್ಯನ ಬೆಳಕಿನ ಆಧಾರದ ಮೇಲೆ ಅಲ್ಲಿನ ಸ್ಥಳೀಯರು ನಿಖರವಾದ ಸಮಯವನ್ನು ಹೇಳುತ್ತಾರೆ. ಪ್ರತಿಯೊಂದು ಚಕ್ರಗಳು ವಿವಿಧ ವಿನ್ಯಾಸಗಳಿಂದ ಕೆತ್ತಲ್ಪಟ್ಟಿದ್ದು, ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಸದ್ಯ ಒಂದನ್ನು ಬಿಟ್ಟು ಉಳಿದೆಲ್ಲಾ ಚಕ್ರಗಳು ಹಾಳಾಗಿವೆ. ಇದು ಅತ್ಯಂತ ದುಃಖಕರ ಸಂಗತಿ. ಉಳಿದವುಗಳು ಹಾಳಾಗದಂತೆ ಹಾಗು ಜನರಿಂದ ರಕ್ಷಿಸಲು 3 ಅಡಿ ತಂತಿಬೇಲಿಯನ್ನು ಅಳವಡಿಸಲಾಗಿದೆ. ಇಲ್ಲಿನ ಯುದ್ದಾಶ್ವಗಳನ್ನು ಓರಿಸ್ಸಾ ಸರ್ಕಾರ ರಾಜ್ಯ ಲಾಂಛನವನ್ನಾಗಿ ಸ್ವೀಕರಿಸಿ ನಮ್ಮ ದೇಶದ ಪುರಾತನ ಪರಂಪರೆಗೆ ಗೌರವ ತೋರಿದೆ.

ಸೂರ್ಯದೇವಾಲಯದ ಮಹಾದ್ವಾರದ ವಿಮಾನ ಈಗ ನಮಗೆ ಕಾಣಸಿಗುವುದಿಲ್ಲ. ಆದರೆ, ಇದರ ಮೇಲಿದ್ದ ನವಗ್ರಹ ಕೆತ್ತನೆಯ 20 ಟನ್ ಭಾರದ ಕಲ್ಲು ಚಪ್ಪಡಿ ಜಾರಿಬಿದ್ದು, ಒಡೆದು ಹೋಗಿದೆ. ಸೂರ್ಯದೇವಾಲಯದ ರಕ್ಷಣೆಗಾಗಿ 35 ಅಡಿ ಉದ್ದ ಹಾಗೂ 7 ಅಂಗುಲ ದಪ್ಪ ಕಬ್ಬಿಣದ ತೊಲೆಗಳನ್ನು ಬಳಸಲಾಗಿದೆ. ಈ ದೇವಾಲಯದ ಕಲ್ಲಿನ ಬಾಗಿಲುಗಳು ಸುಂದರ ಕೆತ್ತನೆಯಿಂದ ಕೂಡಿದೆ. ದೇಗುಲದ ಹೊರಮೈನ ಪೂರ್ವ ಗೋಡೆಯ ಮೇಲೆ ಉದಯ ಸೂರ್ಯನ ಮುಖ ಸಂತೋಷವನ್ನು, ಮಧ್ಯಾಹ್ನದ ಸೂರ್ಯ ಕೋಪವನ್ನು ಹಾಗು ಸಾಯಂಕಾಲದ ಸೂರ್ಯ ದಣಿವಿನ ಮುಖಭಾವವನ್ನು ವ್ಯಕ್ತಪಡಿಸುತ್ತದೆ. ದೇವಾಲಯದ ಮುಂದೆ ಒಂದು ಸ್ತಂಭವನ್ನು ನಿಲ್ಲಿಸಲಾಗಿತ್ತು. ಇದನ್ನು ಈಗ ಅದನ್ನು ಪುರಿಗೆ ಕೊಂಡೊಯ್ದು ಜಗನ್ನಾಥ ದೇವಾಲಯದ ಮುಂದೆ ನೆಡಲಾಗಿದೆ. ದೇವಾಲಯದ ತಳಭಾಗ, ಹೊರಭಾಗ ಹಾಗೂ ಮೇಲ್ಟಾವಣಿಯಲ್ಲಿ ಅನೇಕ ಶಿಲ್ಪಗಳನ್ನು ಕೆತ್ತಲಾಗಿದ್ದು, ಅವುಗಳು ವಿವಿಧ ಭಂಗಿಯಲ್ಲಿವೆ. ಈ ದೇವಾಲಯಲ್ಲಿ ಅಸಂಖ್ಯಾತ ರತಿ ಕ್ರೀಡೆಯ ದೃಶ್ಯಾವಳಿಗಳನ್ನು ಕೆತ್ತಲಾಗಿದೆ.

ಒಟ್ಟಿನಲ್ಲಿ ಕೊನಾರ್ಕ್ ಸೂರ್ಯದೇವಾಲಯವು ಆಧುನಿಕ ಭಾರತದ ವಿಸ್ಮಯಗಳಲ್ಲಿ ಒಂದು ಎನಿಸಿದೆ. ಆದರೆ ಭಾರತೀಯರ ದುರಾದೃಷ್ಟವೆಂಬಂತೆ 17ನೆಯ ಶತಮಾನದಲ್ಲಿ ಮುಸ್ಲಿಂರು ಆಕ್ರಮಣ ಮಾಡಿ ದೇವಾಲಯವನ್ನು ಸರ್ವನಾಶಗೊಳಿಸಿದರು. ಅಂದಿನಿಂದ ಈ ದೇವಾಲಯದಲ್ಲಿ ಪೂಜೆ ನಡೆದಿಲ್ಲ.

ಮೂರನೆಯ ಪೃಥ್ವಿರಾಜ್ (1178-1192)

ಮೂರನೆಯ ಪೃಥ್ವಿರಾಜ್ (1178-1192)

ಚೌಹಾನ್ ಸಂತತಿಯಲ್ಲಿ ಮೂರನೆಯ ಪೃಥ್ವಿರಾಜ್ ಚೌಹಾನ್ ಅತ್ಯಂತ ಪ್ರಸಿದ್ಧ ದೊರೆ. ಈತ ದೆಹಲಿ ಹಾಗೂ ಅಜೇರ್‌ಗಳನ್ನು ತನ್ನ ಆಡಳಿತ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದನು. ಇವನು ಚೌಹಾನರ ಇತಿಹಾಸದಲ್ಲಿ ನೂತನ ಯುಗವೊಂದನ್ನು ಆರಂಭಿಸಿದನು. ಸೋಮೇಶ್ವರ ಹಾಗೂ ಕರ್ಪೂರದೇವಿಯರು ಇವನ ತಂದೆ-ತಾಯಿಗಳು, ಚಾಂದ್‌ ಬರ್ದಾಯಿ ರಚಿಸಿದ ಪೃಥ್ವಿರಾಜರಾಸೋ, ಹಮ್ಮಿರ ಕಾವ್ಯ, ಜಯಂಕರನ ಪೃಥ್ವಿರಾಜ ವಿಜಯ, ಫೆರಿಸ್ತಾ ರಚಿಸಿದ ಕೃತಿಗಳು ಪೃಥ್ವಿರಾಜನ ಜೀವನ ಚರಿತ್ರೆಯ ಮೇಲೆ ಸಾಕಷ್ಟು ಬೆಳಕು ಚಲ್ಲುತ್ತವೆ. ಪೃಥ್ವಿರಾಜ್ ಚೌಹಾನ್ ಕ್ರಿಶ 1178 ರಿಂದ 1192 ರವರೆಗೆ ಆಳ್ವಿಕೆ ಮಾಡಿದನು. ಪೃಥ್ವಿರಾಜ್ ಅಪ್ರಾಪ್ತ ವಯಸ್ಕನಾಗಿದ್ದಾಗ ಆತನ ತಾಯಿ ಕರ್ಪೂರದೇವಿ ರಾಜಪ್ರತಿನಿಧಿಯಾಗಿ ಕಾರ್ಯಭಾರ ನಿರ್ವಹಿಸಿದಳು. ಇಚ್ಛಿನಿದೇವಿ, ಶಶಿವ್ರತಾ, ಸಂಯೋಗಿತಾ ಈತನ ರಾಣಿಯರಾಗಿದ್ದರು. ಚಾಂದ್ ಬರ್ದಾಯಿಯ ಪೃಥ್ವಿರಾಜ್ ರಾಸೋ ಕೃತಿಯಲ್ಲಿ ಬರೆದಂತೆ ಗಹಡವಾಲದ ಜಯಚಂದ್ರನ ಮಗಳಾದ ಸಂಯುಕ್ತ ಪೃಥ್ವಿರಾಜನ ಪರಾಕ್ರಮಗಳಿಗೆ ಮಾರುಹೋಗಿ ಅವನನ್ನೇ ತನ್ನ ಪತಿಯಾಗಿ ಸ್ವೀಕರಿಸಬೇಕೆಂಬ ಹಂಬಲವುಳ್ಳವಳಾಗಿದ್ದಳು. ಆದರೆ ಪೃಥ್ವಿರಾಜನಿಗೂ ಅವಳ ತಂದೆ ಜಯಚಂದ್ರನಿಗೂ ಅನುವಂಶಿಕ ದ್ವೇಷವಿದ್ದಿತು. ಇದರಿಂದ ಅವಳು ತನ್ನ ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟುಕೊಳ್ಳುವಂತಹ ಪ್ರಸಂಗ ಬಂದಿತು. ಆದರೂ ಸಂಯುಕ್ತ ಗುಪ್ತವಾಗಿ ಪೃಥ್ವಿರಾಜನ ಜೊತೆಗೆ ಪತ್ರ ವ್ಯವಹಾರವನ್ನು ಇಟ್ಟುಕೊಂಡಿದ್ದಳು. ಇದೇ ಸಂದರ್ಭದಲ್ಲಿ ಜಯಚಂದ್ರ ತನ್ನ ಮಗಳ ವಿವಾಹದ ಸಲುವಾಗಿ ಸ್ವಯಂವರವನ್ನು ಏರ್ಪಡಿಸಿದ್ದನು. ಸ್ವಯಂವರಕ್ಕಾಗಿ ಜಯಚಂದ್ರ ಎಲ್ಲಾ ರಜಪೂತ ದೊರೆಗಳನ್ನು ಕನೂಜಿಗೆ ಆಹ್ವಾನಿಸಿದನು. ಆದರೆ ಪೃಥ್ವಿರಾಜನಿಗೆ ಉದ್ದೇಶಪೂರ್ವಕವಾಗಿ ಆಹ್ವಾನ ಪತ್ರಿಕೆಯನ್ನು ಕಳುಹಿಸಿರಲಿಲ್ಲ. ಇದು ಅಲ್ಲದೆ ಅವನ ಒಂದು ಪ್ರತಿಮೆಯನ್ನು ಕಾವಲುಗಾರ ನಿಲ್ಲುವ ಸ್ಥಳದಲ್ಲಿ ನಿಲ್ಲಿಸಿದನು. ಸ್ವಯಂವರದಲ್ಲಿ ಸಂಯುಕ್ತ ಯಾರನ್ನೂ ವರಿಸದೆ ಪೃಥ್ವಿರಾಜನ ಪ್ರತಿಮೆಗೆ ಹೋಗಿ ಹಾರವನ್ನು ಹಾಕಿದಳು. ಇದರಿಂದ ಅಲ್ಲಿದ್ದ ಎಲ್ಲ ರಜಪೂತ ಅರಸರು ದಿಗ್ಧಮೆಗೊಂಡರು. ಅಲ್ಲೆ ತನ್ನ ಸೈನಿಕರೊಂದಿಗೆ ಅಡಗಿಕೊಂಡಿದ್ದ ಪೃಥ್ವಿರಾಜನು ಧಿಡೀರನೆ ಸಂಯುಕ್ತಿಯನ್ನು ಅಪಹರಿಸಿಕೊಂಡು ಅಲ್ಲಿಂದ ಕಾಲುಕಿತ್ತನು. ಪೃಥ್ವಿರಾಜ ಕ್ಷೇಮವಾಗಿ ಸಂಯುಕ್ತಿಯೊಂದಿಗೆ ರಾಜಧಾನಿಯನ್ನು ಸೇರಿದನು. ಅರಮನೆಯಲ್ಲಿ ವಿಧಿವತ್ತಾಗಿ ಸಂಯುಕ್ತಿಯನ್ನು ಮದುವೆಯಾದನು. ಪೃಥ್ವಿರಾಜ್ ಚೌಹಾನ್ ಘೋರ್ ಸಂತತಿಯ ಖುಸ್ರಾವ್ ಮಲ್ಲಿಕ್‌ ನ್ನು ಸೋಲಿಸಿ ಪಶ್ಚಿಮ ಪಂಜಾಬ್ ನ್ನು ವಶಪಡಿಸಿಕೊಂಡನು. ಪೃಥ್ವಿರಾಜ್ ತ್ರಿತ 1182ರಲ್ಲಿ ಭಡನಕರನ್ನು ಸೋಲಿಸಿ ತಿವಾರಿ, ಭವಾನಿ ಹಾಗೂ ಆಳ್ವಾರ್‌ನ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡನು. ಅದೇವರ್ಷ ಚಂದೇಲ ದೊರ ಪರಮಾರ್ಥಿಯನ್ನು ಸೋಲಿಸಿ ಮಹೋಬ ಹಾಗೂ ಕಾಲಿಂಜರ್‌ಗಳನ್ನು ಗೆದ್ದುಕೊಂಡನು.

ತರೈನ್ ಕದನಗಳು :

ಮೊದಲನೆಯ ತರೈನ್ ಕದನ: (1191)

ಪೃಥ್ವಿರಾಜ್ ಚೌಹಾನ್ ತನ್ನ ಆಳ್ವಿಕೆಯ ಅಂತಿಮ ದಿನಗಳಲ್ಲಿ ಟರ್ಕರ ದಾಳಿಯನ್ನು ಎದುರಿಸಬೇಕಾಯಿತು. ಘೋರಿ ಮಹಮ್ಮದ್ ಖುಸ್ತು ಮಲಿಕ್‌ನನ್ನು ಪದಚ್ಯುತಗೊಳಿಸಿದ ನಂತರ ಚೌಹಾನ್ ರಾಜ್ಯದ ಪಂಜಾಬ್ ಪ್ರದೇಶದಲ್ಲಿ ತನ್ನ ಸೈನಿಕ ಕಾರ್ಯಚರಣೆಯನ್ನು ಆರಂಭಿಸಿದನು. ಇದಾದ ಮೇಲೆ ಇಡೀ ಭಾರತವನ್ನೇ ಗೆಲ್ಲಬೇಕೆಂಬ ಮಹದಾಸೆಯಿಂದ ಘೋರಿ ಪೃಥ್ವಿರಾಜನಿಗೆ ಸೇರಿದ್ದ ಸಿರ್ ಹಿಂದನ್ನು ವಶಪಡಿಸಿಕೊಂಡು ತನ್ನ ಸಂಬಂಧಿಕನೊಬ್ಬನನ್ನು ಅದರ ಉಸ್ತುವಾರಿಗೆ ನೇಮಿಸಿದನು. ಹೀಗೆ ಏಕಾಏಕಿ ಮುಸಲ್ಮಾನರು ಸರಹಿಂದದವರೆಗೆ ಬಂದುದು ಚೌಹಾನರಿಗೆ ನುಂಗಲಾರದ ತುತ್ತಾಯಿತು. ಆಗ ದೆಹಲಿಯ ಪ್ರಾಂತಾಡಳಿತ ನೋಡಿಕೊಳ್ಳುತ್ತಿದ್ದ ಗೋವಿಂದರಾಜನ ಮಗ ಚಂದ್ರರಾಜನು ಶಿಹಾಬ್-ಉದ್-ದೀನ್ ಎಂಬ ಮುಸ್ಲಿಂನು ತಮ್ಮ ನಗರಗಳನ್ನು ಲೂಟಿಮಾಡಿ, ಅಲ್ಲಿನ ಅನೇಕ ಸ್ತ್ರೀಯರ ಮಾಜಭಂಗ ಮಾಡಿದ್ದಾನೆ. ಇದರಿಂದಾಗಿ ಅನೇಕ ರಜಪೂತ ಮಹಿಳೆಯರು ಹಾಗೂ ಪುರುಷರು ಬೆಟ್ಟ ಗುಡ್ಡಗಳ ಕಡೆಗೆ ಓಡಿ ಹೋಗಿ ಅವಿತುಕೊಂಡಿದ್ದಾರೆ. ಅವನು ಈಗ ಮುಲ್ತಾನಿನಲ್ಲಿ ರಾಜಧಾನಿಯನ್ನು ಸ್ಥಾಪಿಸಿದ್ದಾನೆ ಎಂಬುದಾಗಿ ಪೃಥ್ವಿರಾಜನಿಗೆ ವರದಿ ಮಾಡಿದನು. ಈ ವಿಷಯವನ್ನು ಕೇಳಿ ಪೃಥ್ವಿರಾಜನು ಕೆಂಡಾಮಂಡಲವಾದನು. ಘೋರಿ ಮಹಮ್ಮದನ ಅಕ್ರಮ ಪ್ರವೇಶವನ್ನು ತಡೆಗಟ್ಟಲು ರಜಪೂತರ ಒಕ್ಕೂಟವನ್ನು ರಚಿಸಿದನು. ತನ್ನ ಎರಡು ಲಕ್ಷ ಸೈನ್ಯ ಹಾಗೂ ಮೂರು ಸಾವಿರ ಗಜಪಡೆಯೊಂದಿಗೆ ಘೋರಿಯನ್ನು ದಂಡಿಸಲು ಹೊರಟನು. ಈ ವಿಷಯ ಹೇಗೋ ಘೋರಿಗೆ ತಿಳಿದುಹೋಯಿತು. ಆತ ಕ್ರಿ.ಶ 1191 ರಲ್ಲಿ ಪೃಥ್ವಿರಾಜ ಚೌಹಾನನ ಮೇಲೆ ಯುದ್ಧ ಸಾರಿದನು. ದೆಹಲಿಯಿಂದ 80 ಮೈಲು ದೂರ ಹಾಗೂ ಥಾನೇಶ್ವರದಿಂದ 14 ಮೈಲು ದೂರದಲ್ಲಿದ್ದ ತರೈನ್ ಎಂಬ ಹಳ್ಳಿಯಲ್ಲಿ ಉಭಯ ಬಣಗಳು ಮುಖಾಮುಖಿಯಾಗಿ ಸಂಧಿಸಿದವು. ಪೃಥ್ವಿರಾಜನಿಗೆ ಅನೇಕ ರಜಪೂತ ದೊರೆಗಳು ಬೆಂಬಲ ಸೂಚಿಸಿದರು. ಆದರೆ ಗಹಡವಾಲದ ಜಯಚಂದ್ರ ಮಾತ್ರ ಪೃಥ್ವಿರಾಜನಿಗೆ ಬೆಂಬಲ ನೀಡಲಿಲ್ಲ.

ಮಧ್ಯಯುಗೀನ ಭಾರತದಲ್ಲಿ ರಜಪೂತರು ಶೌರ್ಯ, ಸಾಹಸ, ಧೈರ್ಯ ಸ್ವಾಮಿನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು. ಇವರು ತಮ್ಮ ಜೀವದ ಹಂಗು ತೊರೆದು ಘೋರಿ ಮಹಮ್ಮದನ ವಿರುದ್ಧ ಹೋರಾಡಿದರು. ಯುದ್ಧ ಭಯಂಕರವಾಗಿ ನಡೆಯುತ್ತಿದ್ದಾಗ ಮಹಮ್ಮದನ ಎಡ ಹಾಗೂ ಬಲ ಪಾರ್ಶ್ವದ ಸೇನಾಪಡೆಗಳು ಅಸಮರ್ಥವಾದವು. ಪರಿಣಾಮವಾಗಿ ಈ ಸೇನಾಪಡೆಗಳು ವಿಧಿಯಿಲ್ಲದೆ ಬೇರಡೆ ಪಲಾಯನ ಮಾಡಿದವು. ತದನಂತರ ಮಧ್ಯದ ಸೇನಾಪಡೆಯೂ ಸಹ ಕುಸಿಯತೊಡಗಿತು. ಆದರೂ ಎದೆಗುಂದದ ಘೋರಿ ಹಾಗೆಯೇ ಯುದ್ಧವನ್ನು ಮುಂದುವರೆಸಿದನು. ಆದರೆ ಸುಲ್ತಾನ್ ಘೋರಿ ಬಿಟ್ಟ ಬಾಣವೊಂದು ಪೃಥ್ವಿರಾಜನ ಸೋದರನಾದ ಗೋವಿಂದರೈನ ಎರಡು ಹಲ್ಲುಗಳು ಉದುರುವಂತೆ ಮಾಡಿತು. ಆಗ ಗೋವಿಂದ ರೈ ಪ್ರತಿಯಾಗಿ ಈಟಿಯೊಂದನ್ನು ಬೀಸಿದನು. ಪರಿಣಾಮವಾರಿ ಘೋರಿ ಮಹಮ್ಮದ್ ಗಾಯಗೊಂಡು ಮೂರ್ಚೆ ಹೋದನು. ಇದೇ ಸಂದರ್ಭದಲ್ಲಿ ಖಿಲ್ಟಿ ಶ್ರೀಮಂತನೊಬ್ಬ ಘೋರಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋದನು. ಪ್ರಥಮ ತರೈನ್ ಕದನದಲ್ಲಿ ಘೋರಿಗೆ ಹೀನಾಯವಾಗಿ ಸೋಲುಂಟಾಯಿತು. ಪೃಥ್ವಿರಾಜನ ದಳಪತಿ ಸ್ಕಂದನು ತರೈನ್ ಯುದ್ಧದ ಗೆಲುವಿಗೆ ಕಾರಣನಾದನು. ಡಾ|| ಈಶ್ವರಿ ಪ್ರಸಾದ ಹೇಳಿದಂತೆ ಮುಸಲ್ಮಾನರು ಹಿಂದೆಂದೂ ಇಂತಹ ಸೋಲನ್ನು ವಿಧರ್ಮಿಯರ ಕೈಯಲ್ಲಿ ಅನುಭವಿಸಿರಲಿಲ್ಲ ಎಂದು ಹೇಳಿದ್ದಾರೆ.

ಎರಡನೆಯ ತರೈನ್ ಕದನ: (1192)

ಮೊದಲನೆಯ ತರೈನ್ ಯುದ್ಧದಲ್ಲಿ ಸೋಲಿನಿಂದ ಅವಮಾನಿತನಾಗಿದ್ದ ಘೋರಿ ಮಹಮ್ಮದ್ ಪೃಥ್ವಿರಾಜನ ವಿರುದ್ಧ ಮತ್ತೊಮ್ಮೆ ಯುದ್ಧ ಘೋಷಿಸಿದನು. ಈ ಯುದ್ಧಕ್ಕಾಗಿ ಅವನು 1,20,000 ಸೈನ್ಯವನ್ನು ಕಟ್ಟಿದನು. ಇಂತಹ ಬೃಹತ್ ಸೇನೆಯೊಂದಿಗೆ ಘೋರಿ ಮಹಮ್ಮದ್ ಬಂದು ಭಟಂದವನ್ನು ಆಕ್ರಮಿಸಿದನು. ನಂತರ ದೆಹಲಿಯಿಂದ 80 ಮೈಲಿ ದೂರದ ಹಾಗೂ ಥಾನೇಶ್ವರದಿಂದ 10 ಮೈಲಿ ದೂರದಲ್ಲಿದ್ದ ತರೈನ್ ಎಂಬ ಪ್ರದೇಶಕ್ಕೆ ಬಂದು ಬೀಡು ಬಿಟ್ಟನು. ಇದು ಎರಡನೆಯ ತರೈನ್ ಕದನಕ್ಕೆ ಕಾರಣವಾಯಿತು. ಈ ಯುದ್ಧ ಭಾರತದ ಇತಿಹಾಸದಲ್ಲಿ ಮತ್ತೊಂದು ಅಧ್ಯಾಯವನ್ನು ಸೃಷ್ಟಿಸಿತು. ಯುದ್ಧ ಭೂಮಿಗೆ ಆಗಮಿಸಿದ ಘೋರಿ ಪೃಥ್ವಿರಾಜನು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಒತ್ತಾಯಿಸಿ ತನ್ನ ರಾಯಭಾರಿಯನ್ನು ಪೃಥ್ವಿರಾಜನ ಬಳಿ ಕಳುಹಿಸಿದನು. ಆದರೆ ಪೃಥ್ವಿರಾಜ್‌ ಚೌಹಾನ್ ಅದನ್ನು ತಿರಸ್ಕರಿಸಿದನು. ಘೋರಿ ಮಹಮ್ಮದನ ದಾಳಿಯ ಮುನ್ಸೂಚನೆಯನ್ನು ಅರಿತಿದ್ದ ಪೃಥ್ವಿರಾಜ್ ಘೋರಿ ಮಹಮ್ಮದನನ್ನು ಸೋಲಿಸಲು ದೃಢ ನಿರ್ಧಾರ ಮಾಡಿ 150 ರಜಪೂತ ರಾಜರ ಒಕ್ಕೂಟವನ್ನು ರಚಿಸಿದನು. ಪ್ರಥಮ ಯುದ್ಧದಲ್ಲಿ ಪೃಥ್ವಿರಾಜನ ಗೆಲುವಿಗೆ ಕಾರಣನಾದ ಸ್ಕಂದನ ಬದಲು ಉದಯರಾಜ ಎಂಬ ದಳಪತಿ ಎರಡನೆಯ ತರೈನ್ ಕದನದ ಮುಂದಾಳತ್ವವನ್ನು ವಹಿಸಿಕೊಳ್ಳಲು ನಿರ್ಧರಿಸಿದನು. 300,000 ಅಶ್ವದಳ ಹಾಗು 300 ಗಜದಳದೊಂದಿಗೆ ಪೃಥ್ವಿರಾಜ್ ತರೈನ್ ಬಳಿ ಬಂದು ಬೀಡುಬಿಟ್ಟನು. ಎರಡೂ ಸೈನ್ಯಗಳ ನಡುವೆ ತರೈನ್ ಎಂಬಲ್ಲಿ 1192ರಲ್ಲಿ ಭಯಂಕರ ಕದನ ನಡೆಯಿತು. ಯುದ್ಧವು ಬೆಳಿಗ್ಗೆ ಆರಂಭವಾಗಿ ಸಾಯಂಕಾಲದವರೆಗೆ ಮುಂದುವರೆಯಿತು. ರಜಪೂತರು ಜೀವದ ಹಂಗು ತೊರೆದು ಮೊದಲ ತರೈನ್ ಯುದ್ಧದಲ್ಲಿ ಹೋರಾಡಿದಂತೆ ಇಲ್ಲಿಯೂ ಹೋರಾಟ ಆರಂಭಿಸಿದರು. ಆದರೆ, ಅದೃಷ್ಟ ಲಕ್ಷ್ಮಿ ಕೈಕೊಟ್ಟಿದ್ದರ ಪರಿಣಾಮವಾಗಿ ಪೃಥ್ವಿರಾಜನ ಸೇನೆ ಸಂಪೂರ್ಣವಾಗಿ ಸೋತಿತು. ಫೆರಿಸ್ತಾನ ಪ್ರಕಾರ “ರಜಪೂತರ ಅಪಾರ ಸೈನ್ಯ ಘೋರಿ ಮಹಮ್ಮದನ ಮುಂದೆ ಒಂದು ಬೃಹತ್ ಕಟ್ಟಡ ನಡುಗಿದಂತೆ ನಡುಗಿ ಮಣ್ಣುಪಾಲಾಯಿತು”. ಯುದ್ಧದಲ್ಲಿ ಒಟ್ಟು ಒಂದು ಲಕ್ಷ ಸೈನ್ಯ ನಾಶವಾಯಿತು. ಪೃಥ್ವಿರಾಜನ ಸಹೋದರ ಗೋವಿಂದರಾಜ ರಣರಂಗದಲ್ಲಿ ಮಡಿದನು. ಪೃಥ್ವಿರಾಜ ರಣರಂಗದಲ್ಲಿ ಸೋತು ಓಡಿಹೋಗುತ್ತಿದ್ದಾಗ ಮಹಮ್ಮದ್ ಘೋರಿಗೆ ‘ಶಿರ್ಸುತಿ’ ಬಳಿ ಸೆರೆಸಿಕ್ಕನು. ನಂತರ ಅವನನ್ನು ಕೊಲೆ ಮಾಡಲಾಯಿತು. ಇದಾದ ನಂತರ ಘೋರಿ ಅಜೀರ್ ಮೇಲೆ ಧಾಳಿ ಮಾಡಿ ಅಲ್ಲಿದ್ದ ದೇವಾಲಯಗಳನ್ನು ನಾಶಗೊಳಿಸಿದನು. ಅದರ ಅವಶೇಷಗಳ ಮೇಲೆ ಗೋರಿ ಹಾಗೂ ಮಸೀದಿಗಳನ್ನು ನಿರ್ಮಿಸಿದನು.

ಪರಿಣಾಮಗಳು:               

1) ತರೈನ್ ಯುದ್ಧದಲ್ಲಿ ಪೃಥ್ವಿರಾಜನಿಗಾದ ಸೋಲು ಇಡೀ ರಜಪೂತ ಸಾಮ್ರಾಜ್ಯದ ಶಕ್ತಿಯನ್ನು ಉಡುಗಿಸಿತು.

2) ಈ ಕದನವು ಇಡೀ ಭಾರತದ ಸಂಸ್ಕೃತಿಯ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರಿತು.

3) ಎರಡನೆಯ ತರೈನ್ ಕದನವು ರಜಪೂತ ಅರಸರ ಹಾಗೂ ಜನರ ಆತ್ಮಸ್ಥೆರ್ಯವನ್ನು ಉಡುಗಿಸಿತು.

4) ತರೈನ್ ಕದನವು ಭಾರತದಲ್ಲಿ ಮುಸ್ಲಿಂ ರಾಜ್ಯ ಸ್ಥಾಪನೆಗೆ ಅಡಿಪಾಯವನ್ನು ಹಾಕಿತು.

5) ರಜಪೂತರ ಸೋಲಿನಿಂದ ಮುಸ್ಲಿಂ ಸತ್ತೆಯ ಸ್ಥಾಪನೆಗೆ ಇದ್ದ ಅಡಚಣೆ ಮಾಯವಾಯಿತು.

6) ಪೃಥ್ವಿರಾಜನ ಕೊಲೆಯ ನಂತರ ಮಹಮ್ಮದ್ ಘೋರಿ ಆತನ ಮಗನನ್ನು ತನ್ನ ಸಾಮಂತನನ್ನಾಗಿ ನೇಮಿಸಿಕೊಂಡನು.

ಪೃಥ್ವಿರಾಜನ ಸಾವಿನ ನಂತರ ಅವನ ಸಹೋದರ ಅಜೀರನ್ನು ವಶಪಡಿಸಿಕೊಂಡು ಆಳ್ವಿಕೆ ನಡೆಸಿದನು. ಆದರೆ ಕುತುಬ್-ಉದ್-ದೀನ್-ಐಬಕ್ ಅಣ್ಣೀರನ್ನು ವಶಪಡಿಸಿಕೊಳ್ಳುವುದರ ಮೂಲಕ ರಜಪೂತ ಸಂತತಿಯ ಅವನತಿಗೆ ಕಾರಣನಾದನು.

ರಜಪೂತರ ಸಾಂಸ್ಕೃತಿಕ ಕೊಡುಗೆಗಳು ಹರ್ಷವರ್ಧನನ ಮರಣದ ನಂತರ ಉತ್ತರ ಭಾರತದಲ್ಲಿ ಸುಮಾರು 12ನೆಯ ಶತಮಾನದವರೆಗೆ ಆಳ್ವಿಕೆ ಮಾಡಿದ ರಜಪೂತರು ನಿಜವಾಗಿಯೂ ಅದೃಷ್ಟವಂತರು. ಈ ಅವಧಿಯಲ್ಲಿ ರಜಪೂತರ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ವ್ಯವಸ್ಥೆ ಅತ್ಯಂತ ಪ್ರಮಾಣಬದ್ಧವಾಗಿದ್ದಿತು. ಸ್ವಾಭಿಮಾನಿಗಳು, ಹುಟ್ಟು ಹೋರಾಟಗಾರರು, ಪ್ರಾಮಾಣಿಕರು, ಸ್ವತಂತ್ರಪ್ರಿಯರು ಹಾಗೂ ವೀರಯೋಧರಾಗಿದ್ದ ರಜಪೂತರು ಪರಕೀಯರ ದಾಳಿಗಳಿಂದ ಭಾರತದ ಸಂಸ್ಕೃತಿ ಹಾಗೂ ಸಮಾಜವನ್ನು ರಕ್ಷಿಸಲು ಹರಸಾಹಸ ಮಾಡಿದರು. ರಾಜಭಕ್ತಿ, ಸ್ವಾಮಿನಿಷ್ಠೆ, ಸರಳತೆ ಅವರ ಹುಟ್ಟು ಗುಣಗಳಾಗಿದ್ದವು. ಇವರ ಸಮಾಜ ಅತ್ಯಂತ ಉತ್ಕೃಷ್ಟವಾಗಿದ್ದು ಹೇಡಿಗಳಿಗೆ ಅವಕಾಶ ನೀಡಿರಲಿಲ್ಲ. ರಜಪೂತರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಹೇಳಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಯುದ್ಧದಲ್ಲಿ ರಜಪೂತರು ಸೋತರೂ ಸ್ವಾಮಿನಿಷ್ಠೆಗೆ ದ್ರೋಹ ಬಗೆಯಲಿಲ್ಲ. ಅವರು ಅಸಮರ್ಥರ, ನಿದ್ರಿಸುತ್ತಿದ್ದವರ ಹಾಗೂ ಹೇಡಿಗಳ ಮೇಲೆ ಎಂದಿಗೂ ದಾಳಿ ಮಾಡುತ್ತಿರಲಿಲ್ಲ. ಆದರೆ ಕಾಲಾನಂತರ ರಜಪೂತರ ಒಗ್ಗಟ್ಟಿನಲ್ಲಿ ಕೊರತೆ ಕಂಡು ಬಂದ ಕಾರಣದಿಂದ 12ನೆಯ ಶತಮಾನದ ನಂತರ ಭಾರತ ವಿದೇಶಿ ಮುಸಲ್ಮಾನರ ಕಪಿಮುಷ್ಠಿಗೆ ಸಿಲುಕಿತು.

ಭೋಜರಾಜ (ಕ್ರಿ.ಶ.1000-1055)

ಭೋಜರಾಜ (ಕ್ರಿ.ಶ.1000-1055)

ಭೋಜರಾಜನು ಪರಮಾರ ದೊರೆಗಳಲ್ಲಿ ಅತ್ಯಂತ ಪ್ರಸಿದ್ಧನಾಗಿದ್ದನು. ಈತ ಕ್ರಿ.ಶ.1000 ದಿಂದ 1055ರವರೆಗೆ ಆಳ್ವಿಕೆ ಮಾಡಿದನು. ಚಿಕ್ಕ ರಾಜ್ಯವಾಗಿದ್ದ ಪರಮಾರರ ರಾಜ್ಯ ಭೋಜರಾಜನ ಕಾಲದಲ್ಲಿ ವಿಶಾಲವಾಗಿ ಹರಡಿತು. ಇವನು ದಂಡನಾಯಕ ಮಾತ್ರ ಆಗಿರದೆ ಸಾಹಿತಿಯೂ ಆಗಿದ್ದನು. ‘ಧಾರಾನಗರ’ ಈತನ ರಾಜಧಾನಿಯಾಗಿದ್ದಿತು. ಭೋಜಚರಿತೆ, ಸರಸ್ವತಿ ಕಂಠಾಭರಣ ಹಾಗೂ ಶಬ್ದಾನುಶಾಸನ ಈತನ ಸಾಧನೆಗಳ ಕುರಿತು ಬರೆದಿವೆ.

ಭೋಜರಾಜನ ದಂಡಯಾತ್ರೆಗಳು:

1) ಕಲ್ಯಾಣಿ ಚಾಲುಕ್ಯರ ಮೇಲೆ ಸೇಡು: ಪರಮಾರರ ಬದ್ಧ ವೈರಿಯಾಗಿದ್ದ ಕಲ್ಯಾಣಿ ಚಾಲುಕ್ಯರ ಮೇಲೆ ಸೇಡು ತೀರಿಸಿಕೊಳ್ಳಲು ಭೋಜರಾಜನು ಕಾತರನಾಗಿದ್ದನು. ಇದೇ ಸಮಯದಲ್ಲಿ ಚಾಲುಕ್ಯರ ಅರಸನಾದ ಎರಡನೆಯ ಜಯಸಿಂಹ ಭೋಜರಾಜನ ಅರಮನೆಯ ಸಂಪತ್ತೆಲ್ಲವನ್ನು ಲೂಟಿ ಮಾಡಿದನು. ಇದರಿಂದ ಕುಪಿತಗೊಂಡ ಭೋಜರಾಜನು ಕಲಚೂರಿ ದೊರೆ ಗಾಂಗೇಯದೇವ ಹಾಗು ತಂಜಾವೂರಿನ ರಾಜೇಂದ್ರ ಚೋಳನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಚಾಲುಕ್ಯರ ಮೇಲೆ ಯುದ್ಧ ಸಾರಿದನು. ಇವರೀರ್ವರೂ ಗೋದಾವರಿ ನದಿ ತೀರದಲ್ಲಿ ಸಂಧಿಸಿದರು. ಆರಂಭದಲ್ಲಿ ಭೋಜರಾಜನ ಸೈನ್ಯಕ್ಕೆ ಯಶಸ್ಸು ಲಭಿಸಿತು. ಆದರೆ ತಕ್ಷಣವೇ ಎಚ್ಚೆತ್ತುಕೊಂಡ ಜಯಸಿಂಹ ಮಿತ್ರಕೂಟವನ್ನು ಸಂಪೂರ್ಣವಾಗಿ ಸೋಲಿಸಿ ಹಿಮ್ಮೆಟ್ಟಿಸಿದನು.

2) ಇಂದ್ರರಥನ ಮೇಲೆ ದಾಳಿ: ಆದಿನಗರವನ್ನು ಆಳುತ್ತಿದ್ದ ಇಂದ್ರರಥನನ್ನು ಸೋಲಿಸಲು ಭೋಜರಾಜನು ಸೇನಾಸಮೇತ ಹೊರಟನು. ಇವರಿಬ್ಬರ ನಡುವೆ ನಡೆದ ಯುದ್ಧದಲ್ಲಿ ಇಂದ್ರರಥ ಸೋಲನುಭವಿಸಿದನು.

3) ಲಾಟರ ವಿರುದ್ಧ ಯುದ್ಧ: ಲಾಟರ ಅರಸನಾದ ಕೀರ್ತಿರಾಜನನ್ನು ಭೋಜರಾಜ ಸೋಲಿಸಿದನೆಂದು ಆ ಕಾಲದ ಶಾಸನಗಳು ಹೇಳಿವೆ.

4) ತ್ರಿಪುರಿ ಗಂಗೇವಾಡಿಯ ವಿರುದ್ಧ ವಿಜಯ: ತ್ರಿಪುರಿ ಗಾಂಗೇಯ ರಾಜನು ಭೋಜರಾಜನ ಕಡುವೈರಿಯಾಗಿದ್ದನು. ಹೀಗಾಗಿ ಅವನನ್ನು ಸೋಲಿಸಲು ಭೋಜ ರಾಜನು ಹೊರಟನು. ದೀರ್ಘಕಾಲದ ಹೋರಾಟದ ನಂತರ ಗಾಂಗೇಯದೇವ ಭೋಜರಾಜನಿಂದ ಸೋತು ಶರಣಾಗತನಾದನು. ದರ್ಪದಿಂದ ಆಳ್ವಿಕೆ ಮಾಡುತ್ತಿದ್ದನು.

5) ಕೊಂಕಣದ ಮೇಲೆ ದಂಡಯಾತ್ರೆ: ಕೊಂಕಣ ಪ್ರಾಂತ್ಯದ ಅಧಿಪತಿಯಾಗಿದ್ದ ಕೇಶಿದೇವನು ಅಹಂಕಾರ ಹಾಗೂ ಇವನನ್ನು ಬಗ್ಗು ಬಡಿಯಲು ಭೋಜರಾಜ ಕ್ರಿ.ಶ.1020ರಲ್ಲಿ ಕೊಂಕಣದ ಮೇಲೆ ದಾಳಿ ಮಾಡಿದನು. ಈ ಯುದ್ಧದಲ್ಲಿ ಭೋಜರಾಜ ಗೆಲುವನ್ನು ಸಾಧಿಸುವ ಮೂಲಕ ಕೊಂಕಣದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದನು.

6) ಕನ್ಯಾಕುಬ್ಜದ ವಿರುದ್ಧ ದಂಡಯಾತ್ರೆ: ಶಾಸನಗಳು ಹೇಳುವ ಪ್ರಕಾರ ಭೋಜರಾಜನು ಕನ್ಯಾಕುಬ್ಬದ ಮೇಲೆ ದಾಳಿ ಮಾಡಿ ಅಲ್ಲಿನ ರಾಜನನ್ನು ಸೋಲಿಸಿದನು ಎಂದು ತಿಳಿದುಬರುತ್ತದೆ.

7) ಚಂದೇಲರ ವಿರುದ್ಧ ದಂಡಯಾತ್ರೆ: ಚಂದೇಲರ ಅರಸನಾದ ವಿಧ್ಯಾದರ ಹಾಗೂ ಭೋಜನ ನಡುವೆ ಭೀಕರ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಭೋಜನು ಸೋಲನುಭವಿಸಿದನು. ಭೋಜನ ಪ್ರಯತ್ನವನ್ನು ಚಂದೇಲರು ಭಗ್ನಗೊಳಿಸಿದರೆಂದು ಶಾಸನಗಳಿಂದ ತಿಳಿದುಬರುತ್ತದೆ.

8) ಗ್ವಾಲಿಯರದ ಕೀರ್ತಿರಾಜನ ಮೇಲೆ ದಾಳಿ: ಗ್ವಾಲಿಯರದ ದೊರೆ ಕೀರ್ತಿರಾಜನ ವಿರುದ್ಧ ಭೋಜನು ಯುದ್ಧವನ್ನು ಸಾರಿದನು. ಈತನನ್ನು ತೀವ್ರವಾಗಿ ವಿರೋಧಿಸಿದ ಕೀರ್ತಿರಾಜನು ಭೋಜರಾಜನನ್ನು ಯುದ್ಧದಲ್ಲಿ ಸೋಲಿಸಿ ಹಿಂದಕ್ಕೆ ಅಟ್ಟಿದನು.

9) ಚಹಮಾನರ ವಿರುದ್ಧ ಹೋರಾಟ: ಚಹಮಾನರ ರಾಜನಾದ ವಿಕ್ರಮನು ಭೋಜರಾಜನ ವಿರುದ್ಧ ಹೋರಾಡಿ ಸೋಲನುಭವಿಸಿದನು.

10) ಘಜ್ನಿ ಮಹಮ್ಮದನ ವಿರುದ್ಧ ದಂಡಯಾತ್ರೆ: ಘಜ್ಜಿ ಮಹಮ್ಮದನ ವಿರುದ್ಧ ಪಂಜಾಬಿನ ದೊರೆಯಾದ ಆನಂದಪಾಲನು ಭೋಜರಾಜನ ಜೊತೆ ಮೈತ್ರಿಯನ್ನು ಏರ್ಪಡಿಸಿಕೊಂಡು ಯುದ್ಧ ಸಾರಿದನು. ಆದರೆ ಮಹಮ್ಮದ್‌ನ ಉಪಟಳ ಹೆಚ್ಚಾಯಿತು. ಆಗ ಆನಂದಪಾಲನ ಮಗ ತ್ರಿಲೋಚನಾಪಾಲನು ಭೋಜರಾಜನ ಜೊತೆ ಸೇರಿಕೊಂಡು ಮಹಮ್ಮದನ ವಿರುದ್ಧ ಹೋರಾಟ ಆರಂಭಿಸಿದನು. ಇವರಿಬ್ಬರೂ ಸೇರಿ ಮುಸ್ಲಿಂರ ಆಕ್ರಮಣದಿಂದ ಭಾರತವನ್ನು ರಕ್ಷಿಸಿದರು. ಇದು ಭೋಜರಾಜನ ಬಹುಮುಖ್ಯವಾದ ಸಾಧನೆಯಾಯಿತು.

11) ಸೋಮೇಶ್ವರನ ವಿರುದ್ಧ ದಾಳಿ: ಚಾಲುಕ್ಯ ದೊರೆ ಒಂದನೆಯ ಸೋಮೇಶ್ವರ ಭೋಜರಾಜನಿಂದ ತನ್ನ ತಂದೆಗೆ ಆದ ಅವಮಾನವನ್ನು ಮರೆತಿರಲಿಲ್ಲ. ಹೀಗಾಗಿ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಒಂದನೆಯ ಸೋಮೇಶ್ವರ ಆತನ ವಿರುದ್ಧ ಯುದ್ಧ ಘೋಷಿಸಿ ಧಾರಾನಗರ, ಉಜೈನಿ ಹಾಗೂ ಮಾಂಡುಗಳನ್ನು ವಶಪಡಿಸಿಕೊಂಡನು. ಸೋಮೇಶ್ವರನ ದಾಳಿಗೆ ಹೆದರಿ ಭೋಜರಾಜ ರಾಜಧಾನಿಯನ್ನು ತೊರೆದು ಪಲಾಯನ ಮಾಡಿದನು.

12) ಭೋಜನ ಸಾಂಸ್ಕೃತಿಕ ಸಾಧನೆಗಳು:

ಎ) ಧರ್ಮ: ಭೋಜರಾಜನು ಮಹಾನ್ ಪರಾಕ್ರಮಿಯಾಗಿದ್ದಂತೆ ಉತ್ತಮ ಆಡಳಿತಗಾರನೂ ಹಾಗೂ ಸಾಹಿತ್ಯ ಪ್ರೇಮಿಯೂ ಆಗಿದ್ದನು. ಇವನು ಶೈವ ಧರ್ಮದ ಅನುಯಾಯಿಯಾಗಿದ್ದು ಧರ್ಮದ ಕುರಿತು ‘ಸತ್ಯ ಪ್ರಕಾಶ’ ಎಂಬ ಕೃತಿಯನ್ನು ರಚಿಸಿದನು. ಇವನು ಜೈನ ಧರ್ಮದ ರಕ್ಷಕನೂ ಆಗಿದ್ದನು. ತನ್ನ ಆಡಳಿತಾವಧಿಯಲ್ಲಿ ವಿವಿಧ ಧರ್ಮದ ಗುರುಗಳನ್ನು ಕರೆದು ಚರ್ಚೆ ಹಾಗೂ ಗೋಷ್ಠಿಗಳನ್ನು ನಡೆಸಿದನು.

ಬಿ) ಶಿಕ್ಷಣ: ಭೋಜನು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದನು. ಆದ್ದರಿಂದ ಭೋಜನು ಧಾರಾನಗರದಲ್ಲಿ ಒಂದು ಸಂಸ್ಕೃತ ವಿದ್ಯಾಕೇಂದ್ರವನ್ನು ಸ್ಥಾಪಿಸಿದನು.

ಇವನು ಸಾಹಿತ್ಯ ಪ್ರೇಮಿಯಾಗಿದ್ದು, ಸ್ವತಃ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಇವನು ರಚಿಸಿದ ಚಂಪೂ ಕಾವ್ಯಕ್ಕೆ ರಾಮಾಯಣ ಚಂಪೂ ಎಂದು ಕರೆಯಲಾಗಿದೆ. ಆಯುರ್ವೇದ ಸರ್ವಸ್ಯ, ಸರಸ್ವತಿ ಕಂಠಾಭರಣ, ವ್ಯವಹಾರ ಸಮುಚ್ಚಯ, ಶಬ್ದಾನುಶಾಸನ, ಸಮರಾಂಗನ ಸೂತ್ರಧಾರ, ನಾಮಮಲ್ಲಿಕಾ, ತತ್ವಪ್ರಕಾಶ, ರಾಜಮಾರ್ತಂಡ ಹಾಗು ಶೃಂಗಾರ ಪ್ರಕಾಶ ಮೊದಲಾದ ಕೃತಿಗಳನ್ನು ಸ್ವತಃ ಭೋಜರಾಜನೇ ರಚಿಸಿದನು. ಧನಪಾಲ, ಉವಟ, ಸೋಲಹನ, ಕವಿತ್ರಿ ಸೀತ ಮುಂತಾದ ಕವಿ ಪಂಡಿತರು ಭೋಜನ ಆಸ್ಥಾನದಲ್ಲಿದ್ದರು. ಈತನ ರಾಣಿ ಅರುಂಧತಿ ಸಹ ವಿದ್ವಂಸಳಾಗಿದ್ದಳು. ಕಲೆ: ಭೋಜರಾಜ ಅನೇಕ ದೇವಾಲಯಗಳು, ಸರೋವರಗಳು ಹಾಗೂ ಕೆರೆಗಳನ್ನು ನಿರ್ಮಿಸಿದನು. ಇವನು ಭೋಜಪುರ ಎಂಬ ನಗರವನ್ನು ನಿರ್ಮಿಸಿದನು. ಧಾರಾನಗರದಲ್ಲಿ ಸರಸ್ವತಿ ದೇಗುಲವನ್ನು ಕಟ್ಟಿಸಿದನು. ಧಾರಾನಗರದಲ್ಲಿ ಶಾಲೆಯನ್ನು ನಿರ್ಮಿಸಿದನು. ಇದು ಅಂದಿನ ಪ್ರಸಿದ್ಧ ವಿಶ್ವವಿದ್ಯಾಲಯವಾಗಿತ್ತು. ಧಾರಾನಗರದಲಿ ಭೋಜ ಸರೋವರವನ್ನು ನಿರ್ಮಿಸಿದನು.

ಕಲೆ: ಭೋಜರಾಜನ ನಂತರ ಜಯಸಿಂಹ, ಉದಯಾದಿತ್ಯ, ಜಗತ್‌ ದೇವ, ನರವರ್ಮನ್, ಯಶೋವರ್ಮನ್, ಜಯವರ್ಮನ್, ವಿಂಧ್ಯವರ್ಮನ್, ಅರ್ಜುನವರ್ಮ, ದೇವಪಾಲ, ಚೈತುಗಿದೇವ, ಎರಡನೆಯ ಜಯವರ್ಮ, ಎರಡನೆಯ ಜಯಸಿಂಹಮ ಎರಡನೆಯ ಅರ್ಜುನವರ್ಮ ಹಾಗೂ ಎರಡನೆಯ ಭೋಜರಾಜ ಪರಮಾರರ ದೊರೆಗಳಾದರು. ಆದರೆ ಎರಡನೆಯ ಭೋಜರಾಜನ ಕಾಲದಲ್ಲಿ 1305ರಲ್ಲಿ ಅಲ್ಲಾವುದ್ದೀನ್ ಖಲ್ಟಿ ಮಾಳವವನ್ನು ಆಕ್ರಮಿಸಿ ಭೋಜರಾಜನ ಸೋಲಿಗೆ ಕಾರಣನಾದನು. ಭೋಜರಾಜನ ಸೋಲಿನ ನಂತರ ಪರಮಾರರ ಸಂತತಿ ಅವನತಿ ಹೊಂದಿತು.

ಪರಮಾರ ಭೋಜರಾಜ (ಕ್ರಿ.ಶ.1000-1055)

ಪರಮಾರ ಭೋಜರಾಜ (ಕ್ರಿ.ಶ.1000-1055)

ಭೋಜರಾಜನು ಪರಮಾರ ದೊರೆಗಳಲ್ಲಿ ಅತ್ಯಂತ ಪ್ರಸಿದ್ಧನಾಗಿದ್ದನು. ಈತ ಕ್ರಿ.ಶ.1000 ದಿಂದ 1055ರವರೆಗೆ ಆಳ್ವಿಕೆ ಮಾಡಿದನು. ಚಿಕ್ಕ ರಾಜ್ಯವಾಗಿದ್ದ ಪರಮಾರರ ರಾಜ್ಯ ಭೋಜರಾಜನ ಕಾಲದಲ್ಲಿ ವಿಶಾಲವಾಗಿ ಹರಡಿತು. ಇವನು ದಂಡನಾಯಕ ಮಾತ್ರ ಆಗಿರದೆ ಸಾಹಿತಿಯೂ ಆಗಿದ್ದನು. ‘ಧಾರಾನಗರ’ ಈತನ ರಾಜಧಾನಿಯಾಗಿದ್ದಿತು. ಭೋಜಚರಿತೆ, ಸರಸ್ವತಿ ಕಂಠಾಭರಣ ಹಾಗೂ ಶಬ್ದಾನುಶಾಸನ ಈತನ ಸಾಧನೆಗಳ ಕುರಿತು ಬರೆದಿವೆ.

ಭೋಜರಾಜನ ದಂಡಯಾತ್ರೆಗಳು:

1) ಕಲ್ಯಾಣಿ ಚಾಲುಕ್ಯರ ಮೇಲೆ ಸೇಡು: ಪರಮಾರರ ಬದ್ಧ ವೈರಿಯಾಗಿದ್ದ ಕಲ್ಯಾಣಿ ಚಾಲುಕ್ಯರ ಮೇಲೆ ಸೇಡು ತೀರಿಸಿಕೊಳ್ಳಲು ಭೋಜರಾಜನು ಕಾತರನಾಗಿದ್ದನು. ಇದೇ ಸಮಯದಲ್ಲಿ ಚಾಲುಕ್ಯರ ಅರಸನಾದ ಎರಡನೆಯ ಜಯಸಿಂಹ ಭೋಜರಾಜನ ಅರಮನೆಯ ಸಂಪತ್ತೆಲ್ಲವನ್ನು ಲೂಟಿ ಮಾಡಿದನು. ಇದರಿಂದ ಕುಪಿತಗೊಂಡ ಭೋಜರಾಜನು ಕಲಚೂರಿ ದೊರೆ ಗಾಂಗೇಯದೇವ ಹಾಗು ತಂಜಾವೂರಿನ ರಾಜೇಂದ್ರ ಚೋಳನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಚಾಲುಕ್ಯರ ಮೇಲೆ ಯುದ್ಧ ಸಾರಿದನು. ಇವರೀರ್ವರೂ ಗೋದಾವರಿ ನದಿ ತೀರದಲ್ಲಿ ಸಂಧಿಸಿದರು. ಆರಂಭದಲ್ಲಿ ಭೋಜರಾಜನ ಸೈನ್ಯಕ್ಕೆ ಯಶಸ್ಸು ಲಭಿಸಿತು. ಆದರೆ ತಕ್ಷಣವೇ ಎಚ್ಚೆತ್ತುಕೊಂಡ ಜಯಸಿಂಹ ಮಿತ್ರಕೂಟವನ್ನು ಸಂಪೂರ್ಣವಾಗಿ ಸೋಲಿಸಿ ಹಿಮ್ಮೆಟ್ಟಿಸಿದನು.

2) ಇಂದ್ರರಥನ ಮೇಲೆ ದಾಳಿ: ಆದಿನಗರವನ್ನು ಆಳುತ್ತಿದ್ದ ಇಂದ್ರರಥನನ್ನು ಸೋಲಿಸಲು ಭೋಜರಾಜನು ಸೇನಾಸಮೇತ ಹೊರಟನು. ಇವರಿಬ್ಬರ ನಡುವೆ ನಡೆದ ಯುದ್ಧದಲ್ಲಿ ಇಂದ್ರರಥ ಸೋಲನುಭವಿಸಿದನು.

3) ಲಾಟರ ವಿರುದ್ಧ ಯುದ್ಧ: ಲಾಟರ ಅರಸನಾದ ಕೀರ್ತಿರಾಜನನ್ನು ಭೋಜರಾಜ ಸೋಲಿಸಿದನೆಂದು ಆ ಕಾಲದ ಶಾಸನಗಳು ಹೇಳಿವೆ.

4) ತ್ರಿಪುರಿ ಗಂಗೇವಾಡಿಯ ವಿರುದ್ಧ ವಿಜಯ: ತ್ರಿಪುರಿ ಗಾಂಗೇಯ ರಾಜನು ಭೋಜರಾಜನ ಕಡುವೈರಿಯಾಗಿದ್ದನು. ಹೀಗಾಗಿ ಅವನನ್ನು ಸೋಲಿಸಲು ಭೋಜ ರಾಜನು ಹೊರಟನು. ದೀರ್ಘಕಾಲದ ಹೋರಾಟದ ನಂತರ ಗಾಂಗೇಯದೇವ ಭೋಜರಾಜನಿಂದ ಸೋತು ಶರಣಾಗತನಾದನು. ದರ್ಪದಿಂದ ಆಳ್ವಿಕೆ ಮಾಡುತ್ತಿದ್ದನು.

5) ಕೊಂಕಣದ ಮೇಲೆ ದಂಡಯಾತ್ರೆ: ಕೊಂಕಣ ಪ್ರಾಂತ್ಯದ ಅಧಿಪತಿಯಾಗಿದ್ದ ಕೇಶಿದೇವನು ಅಹಂಕಾರ ಹಾಗೂ ಇವನನ್ನು ಬಗ್ಗು ಬಡಿಯಲು ಭೋಜರಾಜ ಕ್ರಿ.ಶ.1020ರಲ್ಲಿ ಕೊಂಕಣದ ಮೇಲೆ ದಾಳಿ ಮಾಡಿದನು. ಈ ಯುದ್ಧದಲ್ಲಿ ಭೋಜರಾಜ ಗೆಲುವನ್ನು ಸಾಧಿಸುವ ಮೂಲಕ ಕೊಂಕಣದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದನು.

6) ಕನ್ಯಾಕುಬ್ಜದ ವಿರುದ್ಧ ದಂಡಯಾತ್ರೆ: ಶಾಸನಗಳು ಹೇಳುವ ಪ್ರಕಾರ ಭೋಜರಾಜನು ಕನ್ಯಾಕುಬ್ಬದ ಮೇಲೆ ದಾಳಿ ಮಾಡಿ ಅಲ್ಲಿನ ರಾಜನನ್ನು ಸೋಲಿಸಿದನು ಎಂದು ತಿಳಿದುಬರುತ್ತದೆ.

7) ಚಂದೇಲರ ವಿರುದ್ಧ ದಂಡಯಾತ್ರೆ: ಚಂದೇಲರ ಅರಸನಾದ ವಿಧ್ಯಾದರ ಹಾಗೂ ಭೋಜನ ನಡುವೆ ಭೀಕರ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಭೋಜನು ಸೋಲನುಭವಿಸಿದನು. ಭೋಜನ ಪ್ರಯತ್ನವನ್ನು ಚಂದೇಲರು ಭಗ್ನಗೊಳಿಸಿದರೆಂದು ಶಾಸನಗಳಿಂದ ತಿಳಿದುಬರುತ್ತದೆ.

8) ಗ್ವಾಲಿಯರದ ಕೀರ್ತಿರಾಜನ ಮೇಲೆ ದಾಳಿ: ಗ್ವಾಲಿಯರದ ದೊರೆ ಕೀರ್ತಿರಾಜನ ವಿರುದ್ಧ ಭೋಜನು ಯುದ್ಧವನ್ನು ಸಾರಿದನು. ಈತನನ್ನು ತೀವ್ರವಾಗಿ ವಿರೋಧಿಸಿದ ಕೀರ್ತಿರಾಜನು ಭೋಜರಾಜನನ್ನು ಯುದ್ಧದಲ್ಲಿ ಸೋಲಿಸಿ ಹಿಂದಕ್ಕೆ ಅಟ್ಟಿದನು.

9) ಚಹಮಾನರ ವಿರುದ್ಧ ಹೋರಾಟ: ಚಹಮಾನರ ರಾಜನಾದ ವಿಕ್ರಮನು ಭೋಜರಾಜನ ವಿರುದ್ಧ ಹೋರಾಡಿ ಸೋಲನುಭವಿಸಿದನು.

10) ಘಜ್ನಿ ಮಹಮ್ಮದನ ವಿರುದ್ಧ ದಂಡಯಾತ್ರೆ: ಘಜ್ಜಿ ಮಹಮ್ಮದನ ವಿರುದ್ಧ ಪಂಜಾಬಿನ ದೊರೆಯಾದ ಆನಂದಪಾಲನು ಭೋಜರಾಜನ ಜೊತೆ ಮೈತ್ರಿಯನ್ನು ಏರ್ಪಡಿಸಿಕೊಂಡು ಯುದ್ಧ ಸಾರಿದನು. ಆದರೆ ಮಹಮ್ಮದ್‌ನ ಉಪಟಳ ಹೆಚ್ಚಾಯಿತು. ಆಗ ಆನಂದಪಾಲನ ಮಗ ತ್ರಿಲೋಚನಾಪಾಲನು ಭೋಜರಾಜನ ಜೊತೆ ಸೇರಿಕೊಂಡು ಮಹಮ್ಮದನ ವಿರುದ್ಧ ಹೋರಾಟ ಆರಂಭಿಸಿದನು. ಇವರಿಬ್ಬರೂ ಸೇರಿ ಮುಸ್ಲಿಂರ ಆಕ್ರಮಣದಿಂದ ಭಾರತವನ್ನು ರಕ್ಷಿಸಿದರು. ಇದು ಭೋಜರಾಜನ ಬಹುಮುಖ್ಯವಾದ ಸಾಧನೆಯಾಯಿತು.

11) ಸೋಮೇಶ್ವರನ ವಿರುದ್ಧ ದಾಳಿ: ಚಾಲುಕ್ಯ ದೊರೆ ಒಂದನೆಯ ಸೋಮೇಶ್ವರ ಭೋಜರಾಜನಿಂದ ತನ್ನ ತಂದೆಗೆ ಆದ ಅವಮಾನವನ್ನು ಮರೆತಿರಲಿಲ್ಲ. ಹೀಗಾಗಿ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಒಂದನೆಯ ಸೋಮೇಶ್ವರ ಆತನ ವಿರುದ್ಧ ಯುದ್ಧ ಘೋಷಿಸಿ ಧಾರಾನಗರ, ಉಜೈನಿ ಹಾಗೂ ಮಾಂಡುಗಳನ್ನು ವಶಪಡಿಸಿಕೊಂಡನು. ಸೋಮೇಶ್ವರನ ದಾಳಿಗೆ ಹೆದರಿ ಭೋಜರಾಜ ರಾಜಧಾನಿಯನ್ನು ತೊರೆದು ಪಲಾಯನ ಮಾಡಿದನು.

12) ಭೋಜನ ಸಾಂಸ್ಕೃತಿಕ ಸಾಧನೆಗಳು:

ಎ) ಧರ್ಮ: ಭೋಜರಾಜನು ಮಹಾನ್ ಪರಾಕ್ರಮಿಯಾಗಿದ್ದಂತೆ ಉತ್ತಮ ಆಡಳಿತಗಾರನೂ ಹಾಗೂ ಸಾಹಿತ್ಯ ಪ್ರೇಮಿಯೂ ಆಗಿದ್ದನು. ಇವನು ಶೈವ ಧರ್ಮದ ಅನುಯಾಯಿಯಾಗಿದ್ದು ಧರ್ಮದ ಕುರಿತು ‘ಸತ್ಯ ಪ್ರಕಾಶ’ ಎಂಬ ಕೃತಿಯನ್ನು ರಚಿಸಿದನು. ಇವನು ಜೈನ ಧರ್ಮದ ರಕ್ಷಕನೂ ಆಗಿದ್ದನು. ತನ್ನ ಆಡಳಿತಾವಧಿಯಲ್ಲಿ ವಿವಿಧ ಧರ್ಮದ ಗುರುಗಳನ್ನು ಕರೆದು ಚರ್ಚೆ ಹಾಗೂ ಗೋಷ್ಠಿಗಳನ್ನು ನಡೆಸಿದನು.

ಬಿ) ಶಿಕ್ಷಣ: ಭೋಜನು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದನು. ಆದ್ದರಿಂದ ಭೋಜನು ಧಾರಾನಗರದಲ್ಲಿ ಒಂದು ಸಂಸ್ಕೃತ ವಿದ್ಯಾಕೇಂದ್ರವನ್ನು ಸ್ಥಾಪಿಸಿದನು.

ಇವನು ಸಾಹಿತ್ಯ ಪ್ರೇಮಿಯಾಗಿದ್ದು, ಸ್ವತಃ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಇವನು ರಚಿಸಿದ ಚಂಪೂ ಕಾವ್ಯಕ್ಕೆ ರಾಮಾಯಣ ಚಂಪೂ ಎಂದು ಕರೆಯಲಾಗಿದೆ. ಆಯುರ್ವೇದ ಸರ್ವಸ್ಯ, ಸರಸ್ವತಿ ಕಂಠಾಭರಣ, ವ್ಯವಹಾರ ಸಮುಚ್ಚಯ, ಶಬ್ದಾನುಶಾಸನ, ಸಮರಾಂಗನ ಸೂತ್ರಧಾರ, ನಾಮಮಲ್ಲಿಕಾ, ತತ್ವಪ್ರಕಾಶ, ರಾಜಮಾರ್ತಂಡ ಹಾಗು ಶೃಂಗಾರ ಪ್ರಕಾಶ ಮೊದಲಾದ ಕೃತಿಗಳನ್ನು ಸ್ವತಃ ಭೋಜರಾಜನೇ ರಚಿಸಿದನು. ಧನಪಾಲ, ಉವಟ, ಸೋಲಹನ, ಕವಿತ್ರಿ ಸೀತ ಮುಂತಾದ ಕವಿ ಪಂಡಿತರು ಭೋಜನ ಆಸ್ಥಾನದಲ್ಲಿದ್ದರು. ಈತನ ರಾಣಿ ಅರುಂಧತಿ ಸಹ ವಿದ್ವಂಸಳಾಗಿದ್ದಳು. ಕಲೆ: ಭೋಜರಾಜ ಅನೇಕ ದೇವಾಲಯಗಳು, ಸರೋವರಗಳು ಹಾಗೂ ಕೆರೆಗಳನ್ನು ನಿರ್ಮಿಸಿದನು. ಇವನು ಭೋಜಪುರ ಎಂಬ ನಗರವನ್ನು ನಿರ್ಮಿಸಿದನು. ಧಾರಾನಗರದಲ್ಲಿ ಸರಸ್ವತಿ ದೇಗುಲವನ್ನು ಕಟ್ಟಿಸಿದನು. ಧಾರಾನಗರದಲ್ಲಿ ಶಾಲೆಯನ್ನು ನಿರ್ಮಿಸಿದನು. ಇದು ಅಂದಿನ ಪ್ರಸಿದ್ಧ ವಿಶ್ವವಿದ್ಯಾಲಯವಾಗಿತ್ತು. ಧಾರಾನಗರದಲಿ ಭೋಜ ಸರೋವರವನ್ನು ನಿರ್ಮಿಸಿದನು.

ಕಲೆ: ಭೋಜರಾಜನ ನಂತರ ಜಯಸಿಂಹ, ಉದಯಾದಿತ್ಯ, ಜಗತ್‌ ದೇವ, ನರವರ್ಮನ್, ಯಶೋವರ್ಮನ್, ಜಯವರ್ಮನ್, ವಿಂಧ್ಯವರ್ಮನ್, ಅರ್ಜುನವರ್ಮ, ದೇವಪಾಲ, ಚೈತುಗಿದೇವ, ಎರಡನೆಯ ಜಯವರ್ಮ, ಎರಡನೆಯ ಜಯಸಿಂಹಮ ಎರಡನೆಯ ಅರ್ಜುನವರ್ಮ ಹಾಗೂ ಎರಡನೆಯ ಭೋಜರಾಜ ಪರಮಾರರ ದೊರೆಗಳಾದರು. ಆದರೆ ಎರಡನೆಯ ಭೋಜರಾಜನ ಕಾಲದಲ್ಲಿ 1305ರಲ್ಲಿ ಅಲ್ಲಾವುದ್ದೀನ್ ಖಲ್ಟಿ ಮಾಳವವನ್ನು ಆಕ್ರಮಿಸಿ ಭೋಜರಾಜನ ಸೋಲಿಗೆ ಕಾರಣನಾದನು. ಭೋಜರಾಜನ ಸೋಲಿನ ನಂತರ ಪರಮಾರರ ಸಂತತಿ ಅವನತಿ ಹೊಂದಿತು.

ಪ್ರಮುಖ ರಜಪೂತ ರಾಜವಂಶಗಳು

ಪ್ರಮುಖ ರಜಪೂತ ರಾಜವಂಶಗಳು

ಪರಿಚಯ
ರಾಜಪೂತರು ಪ್ರಾರಂಭಿಕ ಮಧ್ಯಯುಗೀನ ಭಾರತದಲ್ಲಿ ಶಕ್ತಿಶಾಲಿ ಯೋಧ ವರ್ಗವಾಗಿ ಹೊರಹೊಮ್ಮಿದರು. ಧೈರ್ಯ, ಗೌರವ, ನಿಷ್ಠೆ ಮತ್ತು ರಾಜಧರ್ಮ ಎಂಬ ಆದರ್ಶಗಳನ್ನು ಅವರು ಮೈಗೂಡಿಸಿಕೊಂಡಿದ್ದರು. 8ರಿಂದ 12ನೇ ಶತಮಾನಗಳ ನಡುವೆ ಉತ್ತರ ಹಾಗೂ ಮಧ್ಯ ಭಾರತದ ವಿವಿಧ ಭಾಗಗಳಲ್ಲಿ ಆಳಿದ ಚೌಹಾನರು, ಪರಮಾರರು ಮತ್ತು ಪ್ರತಿಹಾರರು ಪ್ರಮುಖ ರಾಜಪೂತ ವಂಶಗಳಾಗಿದ್ದರು. ಈ ವಂಶಗಳು ಹೊರಗಿನ ಆಕ್ರಮಣಗಳಿಗೆ ತಡೆಯೊಡ್ಡಿದಷ್ಟೇ ಅಲ್ಲದೆ, ಕಲೆ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಧರ್ಮಕ್ಕೆ ಉತ್ತೇಜನ ನೀಡಿ ಮಧ್ಯಯುಗೀನ ಭಾರತೀಯ ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದವು.

ಗೂರ್ಜರ ಪ್ರತಿಹಾರರು (ರಾಜಧಾನಿ – ಕನೂಜ್)

ಗೂರ್ಜರ ಪ್ರತಿಹಾರರು ರಾಮಾಯಣ ಕಾವ್ಯದ ಪ್ರಸಿದ್ಧ ಸೂರ್ಯವಂಶಕ್ಕೆ ಸೇರಿದ ಲಕ್ಷ್ಮಣನ ಹಾಗೂ ಹರಿಚಂದ್ರನೆಂಬ ಬ್ರಾಹ್ಮಣನ ವಂತಜರೆಂದು ಹೇಳಲಾಗಿದೆ. ಇವರು ಕ್ರಿ.ಶ.6ನೆಯ ಶತಮಾನದ ಉತ್ತರಾರ್ಧದ ಸುಮಾರಿಗೆ ಪ್ರಾಬಲ್ಯಾ ಬಂದರು. ಮೊದಲನೆಯ ನಾಗಭಟನು ಪ್ರತಿಹಾರ ಸ್ಥಾಪಕನಾಗಿದ್ದನು. ಇವನು ಕ್ರಿ.ಶ.725ರಿಂದ 740ರವರೆಗೆ ಆಳ್ವಿಕೆ ಮಾಡಿದನೆಂದು ಹೇಳಲಾಗಿದೆ. ಇವನು ಅರಬ್ಬರ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದನು. ಅನಂತರ ಬಲಿಷ್ಠ ಮೇಚ್ಚ ದೊರೆಯ ಬೃಹತ್ ಸೇನೆಯನ್ನು ಸೆದೆಬಡಿದನು. ಈತನ ಆಳ್ವಿಕೆಯ ನಂತರ ವತ್ಸರಾಜ ಕ್ರಿ.ಶ.778ರಲ್ಲಿ ಅಧಿಕಾರಕ್ಕೆ ಬಂದನು.

ವತ್ಸರಾಜ : (ಕ್ರಿ.ಶ 778-805)

ವತ್ಸರಾಜನು ಗೂರ್ಜರ ಪ್ರತಿಹಾರರ ಪ್ರಮುಖ ದೊರೆಯಾಗಿದ್ದಾನೆ. ಇವನು ಒಂದನೆಯ ನಾಗಭಟನಿಮೊಮ್ಮಗ. ಇವನು ಅತ್ಯಂತ ಧೈರ್ಯಶಾಲಿಯಾದ ಅರಸನಾಗಿದ್ದನು. ಇವನು ತನ್ನ ಆಡಳಿತಾವಧಿಯಲ್ಲಿ ಸಾಕಷ್ಟು ಯುದ್ಧಗಳನ್ನು ಮಾಡಿದನು. ಇದರಿಂದ ವತ್ಸರಾಜನ ಸಾಮ್ರಾಜ್ಯ ಸಾಕಷ್ಟು ವಿಸ್ತಾರ ಹೊಂದಿದ್ದಿತು. ಇವನು ಬಂಗಾಳದ ಅರಸನಾದ ಧರ್ಮಪಾಲನನ್ನು ಸೋಲಿಸಿದನು. ನಂತರ ರಜಪೂತಾನದ ರಾಜನನ್ನು ಸೋಲಿಸಿ ಹಿಮ್ಮೆಟ್ಟಿಸಿದನು. ಇದಾದ ಕೆಲವೇ ದಿನಗಳಲ್ಲಿ ವತ್ಸರಾಜನು ಕನೂಜ್ ಮೇಲೆ ದಾಳಿ ನಡೆಸಿ ಅಲ್ಲಿನ ರಾಜನಾದ ಇಂದ್ರಾಯುಧನನ್ನು ಸೋಲಿಸಿದನು. ಸೋತ ಇಂದ್ರಾಯುಧ ವತ್ಸರಾಜನ ಮಾಂಡಲಿಕ ದೊರೆಯಾದನು. ಇದನ್ನು ಸಹಿಸದ ಧರ್ಮಪಾಲನು ವತ್ಸರಾಜನ ವಿರುದ್ಧ ದಂಡೆತ್ತಿ ಬಂದನು. ಹೀಗೆ ಗೌಡದೇಶದ ಧರ್ಮಪಾಲ ಹಾಗೂ ವತ್ಸರಾಜ ಕನೂಜ್‌ನ ವಿಷಯದಲ್ಲಿ ಪರಸ್ಪರ ಯುದ್ಧಕ್ಕೆ ನಿಂತರು. ಈ ಯುದ್ಧದಲ್ಲಿ ಧರ್ಮಪಾಲ ಸೋತು ಶರಣಾದನು. ಈ ಯುದ್ಧದ ವಿಷಯವನ್ನು ರಾಘವಪುರ ಶಿಲಾಶಾಸನ ತಿಳಿಸುತ್ತದೆ. ವತ್ಸರಾಜನ ಅಧಿಕಾರಾವಧಿಯಲ್ಲಿ ಪ್ರತಿಹಾರರು, ಪಾಲರು ಹಾಗೂ ರಾಷ್ಟ್ರಕೂಟರ ನಡುವೆ ತ್ರಿಕೋನ ಸ್ಪಧೆ ಏರ್ಪಟ್ಟಿತು. ಆದರೆ, ರಾಷ್ಟ್ರಕೂಟ ದೊರೆ ಧ್ರುವನು ವತ್ಸರಾಜನನ್ನು ಯುದ್ಧವೊಂದರಲ್ಲಿ ಸೋಲಿಸಿ ಓಡಿಸಿದನು. ಹೀಗೆ ಯುದ್ಧದಲ್ಲಿ ಪರಾಭವಗೊಂಡ ವತ್ಸರಾಜ ಮಾನಸಿಕವಾಗಿ ಕೊರಗಿ ನಿಧನನಾದನು.

ಎರಡನೆಯ ನಾಗಭಟ: (ಕ್ರಿ.ಶ.905-833)

ವತ್ಸರಾಜನ ಮರಣದ ನಂತರ ಎರಡನೆಯ ನಾಗಭಟನು ಸಿಂಹಾಸನಕ್ಕೆ ಬಂದನು. ಇವನು ಕ್ರಿ.ಶ.805 ರಿಂದ 833ರವರೆಗೆ ಆಡಳಿತ ನಡೆಸಿದನು. ಇವನು ಅಪ್ರತಿಮ ಶೂರನಾಗಿದ್ದು, ಪ್ರತಿಹಾರ ರಾಜ್ಯವನ್ನು ವಿಸ್ತರಿಸಿದನು. ಕ್ರಿ.ಶ.807ರ ತಾಮ್ರ ಶಾಸನದ ಪ್ರಕಾರ ಎರಡನೆಯ ನಾಗಭಟನು ರಾಷ್ಟ್ರಕೂಟರ ಅರಸನಾದ ಮೂರನೆಯ ಗೋವಿಂದನಿಂದ ಪರಾಭವ ಹೊಂದಿದನೆಂದು ತಿಳಿದುಬಂದಿದೆ. ಈತನ ಪ್ರಮುಖ ಯುದ್ಧಗಳೆಂದರೆ,

1) ಕನೂಜ್ ಮೇಲಿನ ಆಕ್ರಮಣ: ಎರಡನೆಯ ನಾಗಭಟನು ಕನೂಜ್ ಮೇಲೆ ದಾಳಿ ಮಾಡಿ ಅಲ್ಲಿನ ಅರಸನಾದ ಚಕ್ರಾಯುಧನನ್ನು ಸೋಲಿಸಿದನು. ಅನಂತರ ಕನೂಜ್ ಎರಡನೆಯ ನಾಗಭಟನ ಆಡಳಿತಕ್ಕೆ ಒಳಪಟ್ಟಿತು. ಅಂದಿನಿಂದ ಕನೂಜ್ ಎರಡನೆಯ ನಾಗಭಟನ ರಾಜಧಾನಿಯಾಯಿತು.

2) ಧರ್ಮಪಾಲನನ್ನು ಸೋಲಿಸಿದುದು: ಕನೂಜ್ ಅರಸನಾದ ಚಕ್ರಾಯುಧನು ಧರ್ಮಪಾಲನ ಆಶ್ರಯದಲ್ಲಿದ್ದನು. ಎರಡನೆಯ ನಾಗಭಟನಿಂದ ಚಕ್ರಾಯುಧ ಪರಾಭವಗೊಂಡ ನಂತರ ಧರ್ಮಪಾಲನು ನಾಗಭಟನ ವಿರುದ್ಧ ಹೋರಾಟ ಆರಂಭಿಸಿದನು. ಈ ಹೋರಾಟದಲ್ಲಿ ಧರ್ಮಪಾಲನು ಸೋಲನುಭವಿಸಿದನು. ಈ ಯುದ್ಧದ ಕುರಿತು ಗ್ವಾಲಿಯರ್ ಶಾಸನ ಮಾಹಿತಿ ಒದಗಿಸುತ್ತದೆ.

3) ರಾಷ್ಟ್ರಕೂಟರ ವಿರುದ್ಧ ದಾಳಿ: ಧರ್ಮಪಾಲನನ್ನು ಪರಾಭವಗೊಳಿಸಿದ ನಾಗಭಟನು ರಾಷ್ಟ್ರಕೂಟರ ಪ್ರದೇಶಗಳ ಕಡೆಗೆ ಗಮನಹರಿಸಿದನು. ಆದರೆ, ರಾಷ್ಟ್ರಕೂಟರ ದೊರೆ 3ನೆಯ ಗೋವಿಂದ ನಾಗಭಟನನ್ನು ಸೋಲಿಸಿ ಆತನ ಮುಂದುವರಿಕೆಗೆ ತಡೆಯೊಡ್ಡಿದನು. ಗ್ವಾಲಿಯರ್ ಶಾಸನವೇ ಹೇಳುವಂತೆ ಎರಡನೆಯ ನಾಗಭಟನು ಆಂದ್ರ, ಸಿಂದ್, ವಿದರ್ಭ ಹಾಗೂ ಕಳಿಂಗ ರಾಜ್ಯಗಳನ್ನು ಗೆದ್ದುಕೊಂಡನು.

4) ಮುಸ್ಲಿಮರ ಮೇಲೆ ದಾಳಿ: ಎರಡನೆಯ ನಾಗಭಟನು ಬಕ್ಷರನ ಸುಲ್ತಾನನನ್ನು ಸೋಲಿಸಿದನೆಂದು ಗ್ವಾಲಿಯರ್ ಶಾಸನವೇ ಹೇಳುತ್ತದೆ. ಅದು ಅಲ್ಲದೆ ಎರಡನೆಯ ನಾಗಭಟನು ತನ್ನ ಸಾಮಂತನಾದ ಗೋವಿಂದರಾಜನ ಜೊತೆಗೂಡಿ ಮುಸ್ಲಿಂರನ್ನು ಓಡಿಸಿದನೆಂದು ಹೇಳಲಾಗಿದೆ. ನಾಗಭಟನ ನಂತರ ಅವನ ಮಗ ರಾಮಭದ್ರ ಅಧಿಕಾರಕ್ಕೆ ಬಂದನು. ಇವನು ಕೇವಲ 3 ವರ್ಷಗಳ ಕಾಲ ಆಳ್ವಿಕೆಯನ್ನು ಮಾಡಿದನು. ಇವನ ನಂತರ ಇವನ ಮಗನಾದ ಮಿಹಿರ ಭೋಜ ತನ್ನ ತಂದೆಯನ್ನು ಕೊಂದು ಅಧಿಕಾರಕ್ಕೆ ಬಂದನು.

ಮಿಹಿರ ಭೋಜ : (ಕ್ರಿ.ಶ. 836-865)

ಇವನು ಗೂರ್ಜರ ಪ್ರತಿಹಾರ ಚಕ್ರವರ್ತಿಗಳಲ್ಲಿಯೇ ಅತ್ಯಂತ ಶಕ್ತಿಶಾಲಿ ಹಾಗೂ ಪ್ರಸಿದ್ಧ ಅರಸನಾಗಿದ್ದನು. ಇವನು ಪ್ರತಿಹಾರ ಸಾಮ್ರಾಜ್ಯವನ್ನು ಸಾಕಷ್ಟು ವಿಸ್ತರಿಸಿದನು. ಈತ ಧ್ರುವ ಹಾಗೂ ಧರ್ಮಪಾಲರಿಗೆ ಸರಿಸಮವಾದ ಸ್ಥಾನವನ್ನು ಪಡೆದನು. ಇವನು ಭಗವತಿಯ ಪರಮಭಕ್ತನಾಗಿದ್ದನು. ಪ್ರಭಾಸ, ಆದಿ ಹಾಗೂ ಮಿಹಿರ ಎಂಬ ಬಿರುದುಗಳನ್ನು ಪಡೆದಿದ್ದನು. ಇವನು ಕ್ರಿಶ. 836ರಲ್ಲಿ ‘ಬರಾಹ್’ ತಾಮ್ರಶಾಸನವನ್ನು ಹೊರಡಿಸಿದನು.

ದಿಗ್ವಿಜಯಗಳು:

1) ಬಂದೇಲ್‌ಖಂಡದ ವಶ : ಬಂದೇಲ್ ಖಂಡವು ತನ್ನ ತಂದೆಯ ಕಾಲದಿಂದಲೂ ಸ್ವತಂತ್ರವಾಗಿದ್ದ ಕಾರಣದಿಂದ ಮಿಹಿರಬೋಜನು ಅಧಿಕಾರಕ್ಕೆ ಬಂದ ತಕ್ಷಣವೇ ಬಂದೇಲ್ ಖಂಡದ ಮೇಲೆ ದಂಡೆತ್ತಿಹೋಗಿ ಅಲ್ಲಿನ ರಾಜನಾದ ಜಯಶಕ್ತಿಯನ್ನು ಸೋಲಿಸಿ ಅದನ್ನು ತನ್ನ ರಾಜ್ಯದಲ್ಲಿ ಸೇರ್ಪಡೆಗೊಳಿಸಿದನು.

2) ರಾಜಪುತಾನದ ವಿರುದ್ಧ ದಂಡಯಾತ್ರೆ : ಮಿಹಿರಭೋಜನು ರಜಪೂತಾನದ ವಿರುದ್ಧ ದಾಳಿ ಮಾಡಿ ಅದನ್ನು ಗೆದ್ದು ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು. ಈತನ ರಜಪೂತಾನದ ದಾಳಿಯ ಕುರಿತು ವರಾಹ ಹಾಗೂ ದೌಲತ್‌ಪುರದ ಶಾಸನಗಳು ಮಾಹಿತ ನೀಡುತ್ತವೆ.

3) ಪಂಜಾಬ್ ಮೇಲಿನ ದಾಳಿ: ಕಲ್ದಣನು ತನ್ನ ರಾಜತರಂಗಿಣಿಯಲ್ಲಿ ಬರೆದಂತೆ ಪಂಜಾಬಿನ ಕರ್ನಲ್ ಪ್ರಾಂತ್ಯವು ಮಿಹಿರಭೋಜನ ಸಾಮ್ರಾಜ್ಯದ ಒಂದು ಭಾಗವಾಗಿತ್ತು. ಆದರೆ, ಇದನ್ನು ಕಾಶ್ಮೀರದ ಶಂಕರ ವರ್ಮನ್ ಎಂಬ ಅರಸ ಗೆದ್ದುಕೊಂಡಿದ್ದನು. ಆದರೆ, ಮಿಹಿರಭೋಜನು ಪುನಃ ಪಂಜಾಬ್ ಮೇಲೆ ದಾಳಿ ಮಾಡಿ ಶಂಕರವರ್ಮನನ್ನು ಸೋಲಿಸಿ ಪಂಜಾಬನ್ನು ವಶಪಡಿಸಿಕೊಂಡನು.

4) ಪಶ್ಚಿಮ ಭಾರತದ ವಿರುದ್ಧ ದಾಳಿ: ಮಿಹಿರ ಭೋಜನ ಪಶ್ಚಿಮ ಭಾರತದಲ್ಲಿ ನೆಲೆಯೂರಿದ್ದ ಹೂಣರ ವಿರುದ್ಧ ದಾಳಿ ಮಾಡಿದನು. ಈ ದಂಡಯಾತ್ರೆಯ ನಾಯಕತ್ವವನ್ನು ಬಲವರ್ಮ ವಹಿಸಿದ್ದನು. ಮಿಹಿರ ಭೋಜನ ದಾಳಿಗೆ ಹೆದರಿದ ಹೂಣರು ಭಾರತದಿಂದ ಕಾಲೆಗೆದರು.

5) ಮಧ್ಯಭಾರತದ ಮೇಲೆ ದಾಳಿ: ಮಿಹಿರ ಭೋಜನು ಮಧ್ಯಭಾರತದ ಪ್ರದೇಶಗಳಾದ ಗ್ವಾಲಿಯರ್, ಝಾನ್ಸಿಗಳನ್ನು ವಶಪಡಿಸಿಕೊಂಡು ಅಲ್ಲಿ ತನ್ನ ಪ್ರತಿನಿಧಿಗಳನ್ನು ನೇಮಿಸಿದನು ಎಂದು ಗ್ವಾಲಿಯರ್ ಹಾಗೂ ದೇಘರ್ ಶಾಸನಗಳು ಹೇಳಿವೆ. 6) ರಾಷ್ಟ್ರಕೂಟರೊಂದಿಗೆ ಹೋರಾಟ: ರಾಷ್ಟ್ರಕೂಟ ದೊರೆಗಳಾದ ಅಮೋಘವರ್ಷ ಹಾಗೂ ಕೃಷ್ಣರ ವಿರುದ್ಧ ಮಿಹಿರಭೋಜನು ದಾಳಿ ಮಾಡಿ ಅವರನ್ನು ಸೋಲಿಸಿ ಕನೂಜನ್ನು ವಶಪಡಿಸಿಕೊಂಡನು. ನಂತರ ನರ್ಮದಾ ನದಿಯವರೆಗೆ ತನ್ನ ರಾಜ್ಯವನ್ನು ವಿಸ್ತರಿಸಿದನು. ರಾಷ್ಟ್ರಕೂಟರು ಹಾಗು ಮಿಹಿರಭೋಜನ ನಡುವೆ ಹಲವಾರು ಯುದ್ಧಗಳು ನಡೆದು ಅವರಿಬ್ಬರೂ ಸಾಕಷ್ಟು ಬಳಲಿದರು.

6) ಪಾಲರೊಂದಿಗೆ ಯುದ್ಧ: ಪಾಲ ದೊರೆ ದೇವಪಾಲನು ಅತ್ಯಂತ ಶಕ್ತಿಶಾಲಿ ಹಾಗು ಸಮರ್ಥ ದೊರೆಯಾಗಿದ್ದನು. ಇವನು ವಿಂದ್ಯಾಚಲ ಪೂರ್ವಗಡಿ ಭಾಗಗಳು ಹಾಗೂ ಉತ್ತರ ಗಡಿ ಪ್ರದೇಶಗಳ ರಾಜ್ಯಗಳಿಂದ ಅಧಿಕ ಪ್ರಮಾಣದ ತೆರಿಗೆಯನ್ನು ವಸೂಲಿಮಾಡಿ ದರ್ಪದಿಂದ ಮೆರೆಯುತ್ತಿದ್ದನು. ಇದರಿಂದ ಮಿಹಿರಭೋಜನು ದೇವಪಾಲನ ವಿರುದ್ಧ ಹಲವಾರು ಬಾರಿ ದಂಡಯಾತ್ರೆಯನ್ನು ಕೈಗೊಂಡನು. ಈ ದಂಡಯಾತ್ರೆಗಳು ಇಬ್ಬರಿಗೂ ಸಮಬಲದ ಗೆಲವುಗಳನ್ನು ತಂದುಕೊಟ್ಟವು.

ಮಿಹಿರಭೋಜನ ನಂತರ ಮಹೇಂದ್ರಪಾಲ ಹಾಗೂ ಎರಡನೆಯ ಭೋಜ ಕ್ರಮವಾಗಿ ಪ್ರತಿಹಾರರ ದೊರೆಗಳಾಗಿ ಅಧಿಕಾರ ಚಲಾಯಿಸಿದರು. ಇವರ ನಂತರ ಒಂದನೆಯ ಮಹಿಪಾಲ ಪ್ರತಿಹಾರರ ದೊರೆಯಾದನು.

ಒಂದನೆಯ ಮಹಿಪಾಲ:

ಎರಡನೆಯ ಭೋಜನ ನಂತರ ಒಂದನೆಯ ಮಹಿಪಾಲನು ಪ್ರತಿಹಾರರ ಅರಸನಾದನು. ಇವನು ಅತ್ಯಂತ ಶಕ್ತಿಶಾಲಿ ಅರಸನಾಗಿದ್ದು, ಕನೋಜನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡನು. ಈತ ಅಧಿಕಾರಕ್ಕೆ ಬಂದ ಹೊಸದರಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದನು. ಆದರೂ ಮಹಿಪಾಲ ದಕ್ಷ ಆಡಳಿತ ನಡೆಸುವ ಮೂಲಕ ಹೆಸರುವಾಸಿಯಾದನು.

1) ರಾಷ್ಟ್ರಕೂಟರೊಂದಿಗೆ ಯುದ್ಧ: ಸಿಂಹಾಸನಕ್ಕೆ ಬಂದ ಹೊಸದರಲ್ಲಿಯೇ ಒಂದನೆಯ ಮಹಿಪಾಲನಿಗೆ ರಾಷ್ಟ್ರಕೂಟರೊಂದಿಗೆ ಹೋರಾಟ ಮಾಡುವ ಸಂದರ್ಭ ಬಂದಿತು. ರಾಷ್ಟ್ರಕೂಟ ದೊರೆ ಇಂದ್ರನು ಕನೂಜನ್ನು ಸೂರೆಗೊಂಡು ಮಾಳವ ಹಾಗೂ ಉಚೈನಿಗಳನ್ನು ವಶಪಡಿಸಿಕೊಂಡನು. ಮಹಿಪಾಲ ಈ ಯುದ್ಧದಲ್ಲಿ ಸೋತು ರಣರಂಗದಿಂದ ಪಲಾಯನ ಮಾಡಿದನು. ಆದರೆ ಮಹಿಪಾಲ ಮತ್ತೊಮ್ಮೆ ರಾಷ್ಟ್ರಕೂಟರ ಅರಸ 3ನೆಯ ಇಂದ್ರನ ಕಾಲದಲ್ಲಿ ಕನೂಜನ್ನು ಮರಳಿ ಪಡೆದನು.

2) ಪಾಲರೊಂದಿಗೆ ಮಹಿಪಾಲನ ನೀತಿ: ಮಹಿಪಾಲನು ಪಾಲರೊಂದಿಗೆ ಯಾವುದೇ ರೀತಿಯಲ್ಲಿ ಯುದ್ಧಕ್ಕೆ ಹೋಗದೆ ಪಾಲರಿಗೆ ಸೋನೆ ನದಿಯ ಪೂರ್ವ ಭಾಗದಲ್ಲಿ ಪ್ರದೇಶಗಳನ್ನು ನೀಡಿದನು.

3) ಮಹಿಪಾಲನ ಇತರೆ ಯುದ್ಧಗಳು: ಮಹಿಪಾಲನು ಮೇಖಲ, ಕಳಿಂಗ, ಕೇರಳ ಹಾಗು ಕುಂತಲ ಮುಂತಾದ ಪ್ರದೇಶಗಳನ್ನು ಗೆದ್ದು ತನ್ನ ರಾಜ್ಯದಲ್ಲಿ ವಿಲೀನಗೊಳಿಸಿದನು. ಧಾರಾ ಹಾಗೂ ಉಜೈನಿಗಳನ್ನು ಗೆದ್ದನೆಂದು ಪ್ರತಾಪಗಡ ಶಾಸನ ತಿಳಿಸುತ್ತದೆ.

4) ಸಾಮ್ರಾಜ್ಯ ವಿಸ್ತರಣೆ: ಮಹಿಪಾಲನ ಸಾಮ್ರಾಜ್ಯವು ಪಶ್ಚಿಮ ಬಿಹಾರದ ಗಡಿಗಳವರೆಗೂ ವಿಸ್ತರಿಸಿದ್ದಿತು. ಇವನಿಗೆ ನಿರ್ಭಯರಾಜನೆಂಬ ಬಿರುದು ಇದ್ದಿತು. ಮಹಿಪಾಲನು ಸಾಹಿತ್ಯಾಭಿಮಾನಿಯಾಗಿದ್ದು ಸ್ವತಃ ತಾನೇ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಇವನ ಆಸ್ಥಾನದ ಕವಿ ರಾಜಶೇಖರನು ಬಾಲರಾಮಾಯಣ, ಬಾಲಭಾರತ, ಕರ್ಪೂರಮಂಜರಿ ಹಾಗು ಕಾವ್ಯಮೀಮಾಂಸ ಎಂಬ ಕೃತಿಗಳನ್ನು ರಚಿಸಿದನು. ವಿದ್ಯಪಾಲ ಎಂಬುದು ಇವನ ಮೇರು ಕೃತಿ. ರಾಜಶೇಖರನ ಕರ್ಪೂರ ಮಂಜರಿಯು ಭಾರತೀಯ ಇತಿಹಾಸದಲ್ಲಿನ ಸಾಹಿತ್ಯದ ಅತ್ಯಂತ ಶ್ರೇಷ್ಠ ಸುಖಾಂತ ನಾಟಕವಾಗಿದೆ. ಇವನ ನಂತರ ಎರಡನೆಯ ಮಹೇಂದ್ರಪಾಲ, ದೇವಪಾಲ, ಎರಡನೆಯ ವಿನಾಯಕಪಾಲ, ಎರಡನೆಯ ಮಹಿಪಾಲ, ವಿಜಯಪಾಲ ಹಾಗೂ ರಾಜ್ಯಪಾಲ ಅಧಿಕಾರ ನಡೆಸಿದರು. ನಂತರ ಬಂದ ಚಂದೇಲರು, ಕಳಚೂರಿಗಳು ಹಾಗೂ ಚೌಹಾನರು ಗೂರ್ಜರ ಪ್ರತಿಹಾರರನ್ನು ಮೂಲೆಗುಂಪು ಮಾಡಿದರು. ಅಂದಿಗೆ ಪ್ರತಿಹಾರರ ರಾಜ್ಯ ಅವನತಿ ಹೊಂದಿತು.

ಚೌಹಾನರು (ರಾಜಧಾನಿ-ಅಜ್ಮೀರ್, ಜೈಪುರ)

ರಜಪೂತರಲ್ಲಿ ಚೌಹಾನ ಸಂತತಿಯೇ ಅತ್ಯಂತ ಪ್ರಮುಖವಾದುದು. ಇವರು ಏಳನೆಯ ಶತಮಾನದಲ್ಲಿಯೇ ಶಾಕಂಬರಿಯನ್ನು ಪಡೆದುಕೊಂಡಿದ್ದರು. ಹೀಗಾಗಿ ಚೌಹಾನ ವಂಶದಲ್ಲಿ ಶಾಕಂಭರೀಯ ಚೌಹಾನರು, ರಣಸ್ತಂಭಪುರದ ಚೌಹಾನರು, ನಾಡೋಲಿಯ ಚೌಹಾನರು, ಜಾಬಾಲಿಪುರದ ಚೌಹಾನರು, ಸತ್ಯಪುರದ ಚೌಹಾನರು ಹಾಗೂ ದೇವಾಡದ ಚೌಹಾನರು ಎಂಬ ವಿವಿಧ ಶಾಖೆಗಳು ಇದ್ದವು. ಈ ಶಾಖೆಗಳಲ್ಲಿ ಶಾಕಂಬರಿಯ ಚೌಹಾನರೇ ಪ್ರಮುಖರು. ‘ಜೈಪುರ’ ಇವರ ರಾಜಧಾನಿಯಾಗಿತ್ತು. ಇವರು ಪ್ರತಿಹಾರರ ಸಾಮಂತರಾಗಿದ್ದರು. ಚಾಂದ್ ಬರ್ದಾಯಿಯ ಪೃಥ್ವಿರಾಜರಾಸೋ, ನಯಚಂದ್ರನ ಹಮ್ಮಿರ ಕಾವ್ಯ ಹಾಗೂ ಫೆರಸ್ತನ ಬರವಣಿಗೆಗಳು ಚೌಹಾನರ ಇತಿಹಾಸದ ಮೇಲೆ ಬೆಳಕು ಚಲ್ಲುತ್ತವೆ. ಇವರ ಮೂಲದ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲವಾದರೂ ಚಾಂದ್‌ ಬರ್ದಾಯಿಯ ಪ್ರಕಾರ ಬ್ರಹ್ಮನು ಮೌಂಟ ಅಬುವಿನಲ್ಲಿ ಯಜ್ಞ ಕೈಗೊಂಡಾಗ ಆ ಯಜ್ಞಕುಂಡದ ಮೂಲಕ ಚೌಹಾನರ ಮೂಲ ಪುರುಷ ಹೊರಬಂದನೆಂದು ಹೇಳಲಾಗಿದೆ.

ವಸುದೇವ ಚೌಹಾನ ಸಂತತಿಯ ಸ್ಥಾಪಕ. ಇವನ ನಂತರ ಬಂದ ಇಮ್ಮಡಿ ವಿಗ್ರರಾಜ ಕ್ರಿ.ಶ 973ರ ವರೆಗೆ ಆಳ್ವಿಕೆ ನಡೆಸಿದನು. ಇವನು ಅನಿಲ್‌ವಾಡದ ಮೊದಲನೆಯ ಮೂಲ ರಾಜನನ್ನು ಸೋಲಿಸಿದನೆಂದು ಹೇಳಲಾಗಿದೆ. ತದನಂತರ ಕ್ರಿಶ 1105 ರಲ್ಲಿ ಮೊದಲನೆಯ ಪೃಥ್ವಿರಾಜ ಅಧಿಕಾರಕ್ಕೆ ಬಂದನು. ಇವನ ಮಗ ಅಜಯರಾಜನು ಅಜಮೀರ ನಗರವನ್ನು ನಿರ್ಮಿಸಿದನು. ಅಜಯರಾಜನ ನಂತರ ಅವನ ಮಗ ಅರ್ಣೋರಾಜ ಅಧಿಕಾರಕ್ಕೆ ಬಂದನು. ಇವನು ಕಾಂಚನದೇವಿಯನ್ನು ಮದುವೆಯಾದನು. ಇವನು ಕ್ರಿ.ಶ 1153ರವರೆಗೆ ಅಧಿಕಾರ ಚಲಾಯಿಸಿದನು.

ನಾಲ್ಕನೆಯ ವಿಗ್ರರಾಜ: (1153-1163)

ಅರ್ಣೋರಾಜನ ಮಗನಾದ ವಿಗ್ರರಾಜ ಕ್ರಿ.ಶ 1153 ರಿಂದ 1163ರ ವರೆಗೆ ಆಳ್ವಿಕೆ ನಡೆಸಿದನು. ಇವನು ಚೌಹಾನರಲ್ಲಿಯೇ ಪ್ರಸಿದ್ಧ ದೊರೆಯಾಗಿದ್ದನು. ಇವನಿಗೆ ಬಿಸಿಲದೇವ ಎಂದು ಇನ್ನೊಂದು ಹೆಸರಿದ್ದೀತು. ಇವನ ಆಡಳಿತಾವಧಿಯಲ್ಲಿ ಚೌಹಾನರ ಸಾಮ್ರಾಜ್ಯ ವಿಶಾಲವಾಗಿ ಹರಡಿತ್ತು. ಇವನು ದೆಹಲಿಯನ್ನು ತೋಮರ ರಾಜನಿಂದ ವಶಪಡಿಸಿಕೊಂಡನು. ನಂತರ ಚಾಲುಕ್ಯ ಅರಸ ಕುಮಾರ ಪಾಲನ ಮೇಲೆ ದಂಡಯಾತ್ರೆಯನ್ನು ಕೈಗೊಂಡು ತನ್ನ ತಂದೆಗೆ ಆಗಿದ್ದ ಅವಮಾನದ ಸೇಡನ್ನು ತೀರಿಸಿಕೊಂಡನು. ಈತ ಮುಸ್ಲಿಂ ರೊಂದಿಗೆ ಸಾಕಷ್ಟು ಯುದ್ಧಗಳನ್ನು ಮಾಡಿದನು. ಅವರಿಂದ ಯಮುನಾ ಹಾಗೂ ಸೆಟ್ಲಜ್ ನದಿಗಳ ನಡುವಣ ಪ್ರದೇಶಗಳನ್ನು ವಶಪಡಿಸಿಕೊಂಡನು. ಪರಮಾರರಿಂದ ಜ್ವಾಲಾಪುರವನ್ನು ಗೆದ್ದುಕೊಂಡನು. ಹೀಗೆ ವಿಶಾಲ ಸಾಮ್ರಾಜ್ಯವನ್ನು ನಿರ್ಮಿಸಿದ್ದ ನಾಲ್ಕನೆಯ ವಿಗ್ರರಾಜನಿಗೆ ʻಮಹಾರಾಜಾಧಿರಾಜ ಹಾಗೂ ಪರಮೇಶ್ವರ’ ಇಂಬ ಬಿರುದುಗಳನ್ನು ನೀಡಲಾಗಿತ್ತು. ಈತ ದಿಗ್ವಿಜಯಿಶಾಲಿಯಾಗಿದ್ದುದು ಅಲ್ಲದೆ ಉತ್ತಮ ಕವಿಯೂ ಆಗಿದ್ದನು. ಇವನು ‘ಹರಕೇಲಿ’ಎಂಬ ನಾಟಕವನ್ನು ರಚಿಸಿದ್ದಾನೆ. ಇವನ ಆಸ್ಥಾನದ ಕವಿಯಾಗಿದ್ದ ಸೋಮದೇವ ʻಲಲಿತಾವಿಗ್ರಹ’ ಎಂಬ ನಾಟಕವನ್ನು ಬರೆದಿದ್ದಾನೆ. ಈ ಮೇಲಿನ ಎರಡು ನಾಟಕಗಳ ತುಣುಕುಗಳನ್ನು ಅಜ್ಜರನ ಒಂದು ಪ್ರಧಾನವಾದ ಮಸೀದಿಯಲ್ಲಿನ ಹಾಸುಗಲ್ಲುಗಳ ಮೇಲೆ ಕೆತ್ತಲಾಗಿದೆ. ವಿಗ್ರರಾಜನು ಅಣ್ಣೀರಿನಲ್ಲಿ ಒಂದು ಶಾಲೆಯೊಂದನ್ನು ಸ್ಥಾಪಿಸಿದನು. ವಿಗ್ರರಾಜನ ನಂತರ ಅವನ ಸೋದರ ಸೋಮೇಶ್ವರನ ಮಗ ಮೂರನೆಯ ಪೃಥ್ವಿರಾಜ ಸಿಂಹಾಸನಕ್ಕೆ ಬಂದನು.

ಮಾಳವದ ಪರಮಾರರು: (ರಾಜಧಾನಿ ಧಾರಾ)

ಗೂರ್ಜರ ಪ್ರತಿಹಾರರಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಪರಮಾರರು ಅಧಿಕಾರಕ್ಕೆ ಬಂದರು. ಇವರು ರಾಷ್ಟ್ರಕೂಟ ಅರಸರ ಸಾಮಂತರಾಗಿದ್ದರು. ರಜಪೂತಾನದ ಸಿರೋಹಿ ರಾಜ್ಯದ ಮೌಂಟ್ ಅಬು ಪರಮಾರರ ಮೂಲ ಸ್ಥಳ. ಇವರ ಮೊದಲ ರಾಜಧಾನಿ ಉಜೈನಿ ಆಗಿದ್ದು, ನಂತರ ಧಾರಾ ನಗರವನ್ನು ಎರಡನೆಯ ರಾಜಧಾನಿಯನ್ನಾಗಿ ಮಾಡಿಕೊಂಡರು. ಉಪೇಂದ್ರ ಪರಮಾರ ಮನೆತನದ ಸ್ಥಾಪಕ. ಇವನು ಮೌಂಟ್ ಅಬು ಬಳಿಯ ಚಂದ್ರವತಿಯ ಕಡೆಯಿಂದ ಬಂದವನೆಂದು ಹೇಳಲಾಗಿದೆ. ಇವನ ನಂತರ ಒಂದನೆಯ ವೈರಸಿಂಹ, ಸೀಯಕ, ಎರಡನೆಯ ವೈರಸಿಂಹ, ಎರಡನೆಯ ಸೀಯಕ ಕ್ರಮವಾಗಿ ಮಾಳವವನ್ನು ಆಳಿದರು.

ವಾಕ್ಷತಿ ಮುಂಜ;

ಇವನು ಪರಮಾರರ ಏಳನೆಯ ದೊರೆ. ಈತ ಕ್ರಿ.ಶ.993ರಲ್ಲಿ ಅಧಿಕಾರಕ್ಕೆ ಬಂದನು. ಇವನಿಗೆ ವಾಕ್ರತಿ, ಉತ್ಸಲ, ಅಮೋದವಂಶ ಎಂಬ ಬಿರುದುಗಳಿದ್ದವು.

ಇವನ ಸಾಮ್ರಾಜ್ಯ ಪೂರ್ವದ ಬಿಲ್ಲಾದಿಂದ ಪಶ್ಚಿಮದ ಸಬರಮತಿವರೆಗೆ ವಿಸ್ತರಿಸಿದ್ದಿತು. ವಾಕೃತಿ ಅನೇಕ ಯುದ್ಧಗಳನ್ನು ಮಾಡಿದ್ದಾನೆ. ಅವುಗಳೆಂದರೆ,

1) ಕಲಚೂರಿಗಳ ಮೇಲೆ ದಾಳಿ: ಕಲಚೂರಿ ಚಕ್ರವರ್ತಿ ಎರಡನೆಯ ಯುವರಾಜನು ವಾಕ್ರತಿ ಮುಂಜಿನಿಂದ ಸೋತು ತ್ರಿಪುರಿಯನ್ನು ಆತನಿಗೆ ನೀಡಿದನು.

2) ಗುಜರಾತಿನ ಚಾಲುಕ್ಯರ ವಿರುದ್ಧ ದಂಡಯಾತ್ರೆ: ವಾಕೃತಿ ಮುಂಜ ಗುಜರಾತಿನ ಚಾಲುಕ್ಯ ಅರಸನಾದ ಒಂದನೆಯ ಮೂಲರಾಜನನ್ನು ಸೋಲಿಸಿ ಅವನನ್ನು ಮಾರ್ವಾಟದ ಮರುಭೂಮಿಯವರೆಗೆ ಅಟ್ಟಿಸಿಕೊಂಡು ಹೋದನು.

3) ಚೋಳರ ವಿರುದ್ಧ ವಿಜಯ: ಮುಂಜನು ಚೋಳರ ವಿರುದ್ಧ ಹಲವಾರು ಬಾರಿ ವಿಜಯಸಾಧಿಸಿದ್ದನೆಂದು ಅನೇಕ ಇತಿಹಾಸಕಾರರು ಹೇಳಿದ್ದಾರೆ.

4) ಚಾಹಮಾನರ ವಿರುದ್ಧ ಹೋರಾಟ: ವಾಕ್ಷತಿ ಮುಂಜನು ಚಾಹಮಾನರ ಬಲಿರಾಜನನ್ನು ಸೋಲಿಸಿ ಮೌಂಟ ಅಬು ಹಾಗು ಜೋದಪುರ ಪ್ರದೇಶವನ್ನು ವಶಪಡಿಸಿಕೊಂಡನೆಂದು ಕಂತೇರಿ ಶಾಸನದಲ್ಲಿ ತಿಳಿಸಲಾಗಿದೆ. ಮೌಂಟ ಅಬುವನ್ನು ಗೆದ್ದ ನಂತರ ಮುಂಜ ತನ್ನ ಮಗನಾದ ಅರಣ್ಯ ರಾಜನನ್ನು ಮೌಂಟ ಅಬುವಿನ ಪ್ರಾಂತಾಧಿಕಾರಿಯನ್ನಾಗಿ ನೇಮಿಸಿದನು.

5) ಗುಹಿಲರ ಮೇಲಿನ ದಾಳಿ: ಮುಂಜನು ಗುಹಿಲರ ಅರಸನಾದ ಶಕ್ತಿ ಕುಮಾರನ ವಿರುದ್ಧ ದಂಡಯಾತ್ರೆಯನ್ನು ಕೈಗೊಂಡನು. ಈ ಯುದ್ಧದಲ್ಲಿ ಶಕ್ತಿಕುಮಾರ ಸೋತು ಮುಂಜನಿಗೆ ಸಾಕಷ್ಟು ಪ್ರಮಾಣದಲ್ಲಿ ಸಂಪತ್ತನ್ನು ನೀಡಿದನು.

6) ಹೂಣರ ಮೇಲೆ ದಾಳಿ: ಮುಂಜನು ಉತ್ತರ ಮಾಳವದಲ್ಲಿ ಹೂಣರನ್ನು ಸೋಲಿಸಿದನು.

7) ಲಾಟರ ವಿರುದ್ಧ ದಂಡಯಾತ್ರೆ: ತಪತಿ ನದಿಯ ದಡದಲ್ಲಿದ್ದ ಲಾಟ ದೇಶವು ಕಲ್ಯಾಣಿ ಚಾಲುಕ್ಯರ ಅರಸನಾದ ಎರಡನೆಯ ತೈಲಪನ ಆಳ್ವಿಕೆಗೆ ಒಳಪಟ್ಟಿತು. ಆಗ ಮಂಜನು ಲಾಟದ ಮೇಲೆ ದಾಳಿ ಮಾಡಿ ಎರಡನೆಯ ತೈಲಪನ ದಂಡನಾಯಕನಾದ ಬಾರಪ್ಪನನ್ನು ಸೋಲಿಸಿ ಲಾಟನ್ನು ವಶಪಡಿಸಿಕೊಂಡನು.

8) ಕರ್ನಾಟಕದ ಚಾಲುಕ್ಯರ ವಿರುದ್ಧ ಹೋರಾಟ: ಎರಡನೆಯ ತೈಲಪನ ವಿರುದ್ಧ ಮುಂಜ ಆರು ಬಾರಿ ದಂಡಯಾತ್ರೆಯನ್ನು ಕೈಗೊಂಡನಾದರೂ ಅವನನ್ನು ಸಂಪೂರ್ಣವಾಗಿ ಸೋಲಿಸಲು ಅವನಿಂದ ಸಾಧ್ಯವಾಗಿರಲಿಲ್ಲ. ಇದರಿಂದ ವ್ಯಾಕುಲನಾದ ಮುಂಜ ಏಳನೆಯ ಬಾರಿಗೆ ಚಾಲುಕ್ಯ ದೊರೆ ತೈಲಪನ ವಿರುದ್ಧ ದಂಡಯಾತ್ರೆಗೆ ಸಿದ್ಧತೆಯನ್ನು ಮಾಡಿಕೊಂಡನು. ಆಗ ಮುಂಜನ ದಂಡನಾಯಕನಾದ ರುದ್ರಾದಿತ್ಯ ಮುಂದೆ ಆಗಬಹುದಾಗಿದ್ದ ಅಪಾಯವನ್ನು ತನ್ನ ಒಡೆಯನಿಗೆ ತಿಳಿಸಿದನು. ಆದರೂ ರುದ್ರಾದಿತ್ಯನ ಮಾತನ್ನು ತಿರಸ್ಕರಿಸಿ ಗೋದಾವರಿ ನದಿಯನ್ನು ದಾಟಿ ಚಾಲುಕ್ಯರ ವಿರುದ್ಧ ಧಾಳಿ ಮಾಡಿದನು. ಆದರೆ ತೈಲಪನ ಸೈನಿಕರು ಮುಂಜನನ್ನು ಸುತ್ತುವರೆದು ಸೆರೆಹಿಡಿದರು. ಸೆರೆಸಿಕ್ಕ ಮುಂಜನನ್ನು ತೈಲಪ ಬಂಧನದಲ್ಲಿ ಇರಿಸಿದನು. ಕಾರಾಗೃಹದಲ್ಲಿ ಇದ್ದಾಗ ತೈಲಪನ ತಂಗಿ ಮುಂಜನಲ್ಲಿ ಅನುರಕ್ತಳಾದಳು. ಈ ವಿಷಯ ಗೊತ್ತಾಗುತ್ತಲೇ ತೈಲಪ ಮುಂಜನನ್ನು ಹಿಡಿದು ರುಂಡವನ್ನು ತುಂಡರಿಸಿದನು. ಹೀಗೆ ಮಹಾನ್ ಪರಾಕ್ರಮಿಯಾಗಿದ್ದ ಮುಂಜನ ಬದುಕು ದುರಂತದಲ್ಲಿ ಅಂತ್ಯವಾಯಿತು.

ಮುಂಜನು ಕೇವಲ ದಿಗ್ವಿಜಯಿಯಾಗಿರದೆ ಕಲಾಪೋಷಕನೂ ಆಗಿದ್ದನು. ಇವನು ಅನೇಕ ಕವಿಗಳಿಗೆ ಆಶ್ರಯದಾತನಾಗಿದ್ದನು. ಪದ್ಮಗುಪ್ತನೆಂಬ ಕವಿ ‘ಸಾಹಸಾಂಕಚರಿತ’ ಎಂಬ ಕೃತಿಯನ್ನು ರಚಿಸಿದನು. ಧನಂಜಯ ‘ದಶರೂಪಕ’ವನ್ನು ಬರೆದನು. ಭಟ್ಟಹಾಲಾಯುಧ, ಅಮಿತಗತಿ, ಶುಭನ ಎಂಬುವವರೂ ಸಹ ಉತ್ತಮ ಕವಿಗಳಾಗಿದ್ದರು. ಮುಂಜನು ತನ್ನ ಅಧಿಕಾರಾವಧಿಯಲ್ಲಿ ಅನೇಕ ಕೆರೆಗಳನ್ನು ಹಾಗೂ ದೇವಾಲಯಗಳನ್ನು ನಿರ್ಮಿಸಿದನು.

ಉಪಸಂಹಾರ
ಈ ರೀತಿಯಾಗಿ ಚೌಹಾನರು, ಪರಮಾರರು ಮತ್ತು ಪ್ರತಿಹಾರರು ಎಂಬ ವಂಶಗಳ ಮೂಲಕ ರಾಜಪೂತರು ಸೈನಿಕ ಶಕ್ತಿ, ಸಾಂಸ್ಕೃತಿಕ ಪೋಷಣೆ ಮತ್ತು ಪ್ರಾದೇಶಿಕ ಆಡಳಿತದ ದೀರ್ಘಕಾಲಿಕ ಪರಂಪರೆಯನ್ನು ಭಾರತೀಯ ಇತಿಹಾಸದಲ್ಲಿ ಬಿಟ್ಟುಹೋಗಿದ್ದಾರೆ.

ಆಧಾರಗಳು

ಆಧಾರಗಳು

ಚರಿತ್ರೆಯ ರಚನೆಯಲ್ಲಿ ಆಧಾರಗಳು ಅದ್ವಿತೀಯವಾದ ಪಾತ್ರವನ್ನು ವಹಿಸುತ್ತವೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ʻಆಧಾರ’ ಈ ಮೂರು ಅಕ್ಷರಗಳ ಅರ್ಥ ಬಹುವ್ಯಾಪಕ. ಇತಿಹಾಸಕ್ಕೆ ಆಧಾರಗಳೇ ಉಸಿರು. ಆಧಾರಗಳಿಲ್ಲದೆ ರಚನೆಗೊಂಡ ಚರಿತ್ರೆ ನಾವಿಕನಿಲ್ಲದ ದೋಣಿಯಂತೆ, ಚುಕ್ಕಾಣಿಯಿಲ್ಲದ ಹಡಗಿನಂತೆ.

ಪ್ರಾಚೀನ ಭಾರತದ ಇತಿಹಾಸ ರಚನೆಗೆ ಸಂಬಂಧಿಸಿದಂತೆ ಸಾಕಷ್ಟು ವಿಪುಲ ಆಧಾರಗಳು ಲಭ್ಯವಾಗುವುದಿಲ್ಲ. ದೊರೆತಿರುವ ಅಲ್ಪಸ್ವಲ್ಪ ಆಧಾರಗಳನ್ನು ಆಧರಿಸಿ ಇತಿಹಾಸವನ್ನು ರಚಿಸಲಾಗಿದೆ. ಅಲ್ಬೆರೂನಿ ‘ತಕ್ವಿಕ್ ಅಲ್ ಹಿಂದ್’ ಎಂಬ ಕೃತಿಯಲ್ಲಿ ʻಭಾರತೀಯರಿಗೆ ಐತಿಹಾಸಿಕ ಪ್ರಜ್ಞೆಯ ಅರಿವಿಲ್ಲ. ಪ್ರಚಲಿತ ವಿಷಯಗಳ ಕುರಿತು ಪ್ರಶ್ನಿಸಿದಾಗ ಅಡುಗೂಲಜ್ಜಿಯ ಕಥೆ ಹೇಳಲು ಆರಂಭಿಸುತ್ತಾರೆ’ ಎಂದು ಅಭಿಪ್ರಾಯ ಪಟ್ಟಿದ್ದಾನೆ. ಈ ಅಭಿಪ್ರಾಯದಿಂದ ಭಾರತೀಯರಲ್ಲಿ ಚಾರಿತ್ರಿಕ ಪ್ರಜ್ಞೆಯ ಅರಿವು ಇರಲಿಲ್ಲ ಎಂಬುದು ತಿಳಿದುಬರುತ್ತದೆ. ಆದರೆ ಅಲ್ಬೆರೂನಿಯ ಅಭಿಪ್ರಾಯದಲ್ಲಿಯೇ ಭಾರತೀಯರು ಪುರಾಣಗಳನ್ನು, ಮಹಾಕಾವ್ಯಗಳನ್ನೆಲ್ಲಾ ರಚಿಸಿದ್ದಾರೆ. ಆದರೆ ಚಾರಿತ್ರಿಕ ಕೃತಿಗಳನ್ನು ರಚಿಸಿರುವುದಿಲ್ಲ. ಹೀಗಾಗಿ ವಾಸ್ತವವಾದಿಗಳಾಗಿರದೆ ಅದೃಷ್ಟವಾದಿಗಳಾಗಿರುವುದು ಮತ್ತು ದಂತಕಥೆಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದು ಕಂಡುಬರುತ್ತದೆ.

ಪ್ರಾಚೀನ ಭಾರತದ ಇತಿಹಾಸ ರಚನೆಯಲ್ಲಿ ಸಹಕಾರಿಯಾದ ಮೂಲಾಧಾರಗಳನ್ನು ಹೀಗೆ ವರ್ಗೀಕರಿಸಿ ಅವುಗಳ ಗುಣಾತ್ಮಕ ಮೌಲ್ಯವನ್ನು ಪರಿಗಣಿಸಬಹುದಾಗಿದೆ. ಅವುಗಳೆಂದರೆ

1. ಪ್ರಾಕ್ತನಶಾಸ್ತ್ರಾದಾರಗಳು (ಪುರಾತತ್ವ ಆಧಾರಗಳು)

2. ಲಿಖಿತ ಆಧಾರಗಳು. (ಸಾಹಿತ್ಯಾಧಾರಗಳು)

1. ಪ್ರಾಕ್ತನ ಶಾಸ್ತ್ರಾಧಾರಗಳು

ಇತಿಹಾಸ ರಚನೆಯಲ್ಲಿ ಪ್ರಾಕ್ತನಶಾಸ್ತ್ರಾಧಾರಗಳು ಗಮನಾರ್ಹವಾದ ಪಾತ್ರವನ್ನು ಹೊಂದಿವೆ ಇವುಗಳನ್ನು ಅವು ದೊರೆತಿರುವ ಅವಶೇಷಗಳಿಗೆ ಅನುಗುಣವಾಗಿ 4 ಭಾಗಗಳಾಗಿ ವಿಂಗಡಿಸಬಹುದಾಗಿದೆ.

1.ಭೂಸಂಶೋಧನೆ,

2. ಶಾಸನಗಳು,

3. ನಾಣ್ಯಗಳು,

4. ಐತಿಹಾಸಿಕ ಸ್ಮಾರಕಗಳು.

1. ಭೂಸಂಶೋಧನೆ :

ಭೂಸಂಶೋಧನೆ ಎಂದರೆ ಭೂ ಉತ್ಖನನ ಎಂದರ್ಥ (ವೈಜ್ಞಾನಿಕವಾಗಿ ಭೂಮಿಯನ್ನು ಅಗೆಯುವುದು), ಭಾರತದಲ್ಲಿ ಬ್ರಿಟೀಷ್ ವೈಸ್ರಾಯ್ ಆಗಿದ್ದ ಲಾರ್ಡ್ ಕರ್ಜನ್ ಪ್ರಾಕ್ತನ ಇಲಾಖೆಯನ್ನು ಪ್ರಾರಂಭಿಸಿದರು. ಸರ್ಜಾನ್ ಮಾರ್ಷಲ್ ಈ ಇಲಾಖೆಯ ನಿರ್ದೇಶಕರಾಗಿದ್ದಾಗ ಭೂ ಉತ್ಖನದ ಕಾರ್ಯ ಆರಂಭಗೊಂಡಿತು.

1921-22ರಲ್ಲಿ ಹರಪ್ಪ ಮತ್ತು ಮೆಹೆಂಜೋದಾರೋಗಳಲ್ಲಿ ನಡೆದ ಭೂ ಉತ್ಖನನಗಳು ಭಾರತವು ಪ್ರಾಚೀನ ಕಾಲದಲ್ಲಿಯೇ ʻನಾಗರೀಕತೆಗಳ ತೊಟ್ಟಿಲು ರಾಷ್ಟ್ರ’ವಾಗಿತ್ತೆಂದು ತಿಳಿಯುತ್ತದೆ. ತಕ್ಷಶಿಲೆಯ ಉತ್ಖನನವು ಕುಶಾನರ ಇತಿಹಾಸದ ಮೇಲೂ, ಪಾಟಲಿಪುತ್ರದ ಉತ್ಖನನವು ಮೌರ್ಯರ ಇತಿಹಾಸದ ಮೇಲೂ ಬೆಳಕು ಚೆಲ್ಲಲು ಸಹಕಾರಿಯಾಗಿದೆ. ದಕ್ಷಿಣ ಭಾರತದ ಪಾಂಡಿಚೇರಿ, ಅರಿಕಮೇಡು, ಆದಿತ್ಯನಲ್ಲೂರು, ತಿನ್ನವೆಲ್ಲಿ, ಮಸ್ಕಿ, ಬ್ರಹ್ಮಗಿರಿ, ಚಂದ್ರವಳ್ಳಿ, ಸನ್ನತಿಯ ಉತ್ಖನನಗಳು, ಶಿಲಾಯುಗ ಮತ್ತು ತಾಮ್ರಯುಗದ ಚರಿತ್ರೆಯನ್ನು ಬೆಳಕಿಗೆ ತಂದಿವೆ. ಒಟ್ಟಿನಲ್ಲಿ ಭೂ ಉತ್ಖನನದಿಂದ ಭೂಮಿಯ ಗರ್ಭದಲ್ಲಿನ ಐತಿಹಾಸಿಕ ಅವಶೇಷಗಳನ್ನು ಹೊರತೆಗೆದಾಗ ಇತಿಹಾಸವನ್ನು ರಚಿಸಲು ಸಹಕಾರಿಯಾಗುತ್ತದೆ.

ನಾಣ್ಯಗಳು :

ಪ್ರಾಚೀನ ಭಾರತದ ಇತಿಹಾಸ ರಚನೆಯಲ್ಲಿ ನಾಣ್ಯಗಳು ಕೂಡ ಮಹತ್ತರ ಪಾತ್ರವಹಿಸುತ್ತವೆ. ನಾಣ್ಯಗಳ ವ್ಯವಸ್ಥಿತ ಅಧ್ಯಯನಕ್ಕೆ ʻನ್ಯುಮಿಸ್‌ಮ್ಯಾಟಿಕ್ಸ್’ ಎಂದು ಕರೆಯಲಾಗಿದೆ. ನಮಗೆ ಚಿನ್ನ, ಬೆಳ್ಳಿ, ತಾಮ್ರ, ಸೀಸ ಮೊದಲಾದ ಲೋಹದ ನಾಣ್ಯಗಳು ದೊರೆತಿವೆ. ಈ ನಾಣ್ಯಗಳು ರಾಜರ ಕಾಲ, ಹೆಸರು, ಬಿರುದು, ಸ್ಥಳ, ವಿದೇಶಗಳೊಡನೆ ಹೊಂದಿದ್ದ ಸಂಬಂಧ, ಲಲಿತಕಲೆಗಳ ಬಗ್ಗೆ ಆಸಕ್ತಿ ಮೊದಲಾದ ಹಲವು ವಿಚಾರಗಳ ಬಗ್ಗೆ ಸ್ಪಷ್ಟಿಕರಿಸುತ್ತವೆ. ಉದಾ: ವಿಷ್ಣುವರ್ದನನ ನಾಣ್ಯಗಳು ಕಂಚಿಗೊಂಡ, ನೊಳಂಬವಾಡಿಗೊಂಡ, ಮಲಪರೋಳಂಡ ಎಂಬ ವಿವರ ಒಳಗೊಂಡಿದೆ. ಸಮುದ್ರಗುಪ್ತನ ನಾಣ್ಯಗಳು ಅವನು ವೀಣಾಪಾಣಿಯಾಗಿ ಕುಳಿತಿರುವ ಚಿತ್ರವನ್ನು ಒಳಗೊಂಡಿವೆ. ನಾಣ್ಯಗಳು ವಿನಿಮಯದ ಮಾಧ್ಯಮವಾಗಿ ವ್ಯಾಪಾರ ವಾಣಿಜ್ಯದಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದ್ದವು.

ಇತಿಹಾಸ ಅಧ್ಯಯನಕ್ಕೆ ನಾಣ್ಯಗಳ ಉಪಯೋಗಗಳು :

  1. ನಾಣ್ಯಗಳಿಂದ ಅದನ್ನು ಟಂಕಿಸಿದ ಅರಸನ ಹೆಸರು, ಅವನ ಕಾಲ, ಅವನ ಸಂತತಿ, ರಾಜಲಾಂಛನ ಮುಂತಾದವು ತಿಳಿಯುತ್ತದೆ.
  2. ನಾಣ್ಯಗಳಿಂದ ಅರಸನ ವೈಯಕ್ತಿಕ ಧರ್ಮದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಉದಾ : ಕುಶಾನರ ನಾಣ್ಯದ ಮೇಲೆ ಇರುವ ಶಿವನ ಚಿತ್ರ, ಚಾಲುಕ್ಯರ
  3. ನಾಣ್ಯಗಳಲ್ಲಿನ ವರಾಹ ಚಿತ್ರ, ಸಮುದ್ರಗುಪ್ತನ ನಾಣ್ಯಗಳ ಮೇಲಿನ ಲಕ್ಷ್ಮಿಯ ಚಿತ್ರ ಸಂಬಂಧಿತ ಅರಸರ ಆರಾಧನೆಯನ್ನು ಸಾಭೀತುಪಡಿಸುತ್ತದೆ. ನಾಣ್ಯಗಳ ಮುಖೇನ ಅರಸರ ಬಿರುದಾವಳಿಗಳು ಬೆಳಕಿಗೆ ಬರುತ್ತದೆ. ಅದು ಎಷ್ಟೋ ಸಲ ಅವನ ಸಾಧನೆಯನ್ನು ದಾಖಲುಗೊಳಿಸುತ್ತದೆ. ಉದಾ ಹೊಯ್ಸಳ ವಿಷ್ಣುವರ್ಧನನ ತಲಕಾಡುಗೊಂಡ, ಮಲೆಷ್ಟೊರೊಳಂಡ ಬಿರುದುಗಳು. ಸಮುದ್ರ ಗುಪ್ತನ ಶಾಸನಗಳಲ್ಲಿ ಅವನ ಶತೃಗಳನ್ನು ನಿಗ್ರಹಿಸಿ ಸ್ವರ್ಗವನ್ನು ಗೆದ್ದಿದ್ದನೆಂದು ಉಲ್ಲೇಖಿಸುತ್ತದೆ.
  4. ನಾಣ್ಯಗಳಿಂದ ಅರಸರ ಕಲಾಭಿರುಚಿಯನ್ನು ಮನಗಾಣಬಹುದು. ಉದಾ : ಸಮುದ್ರಗುಪ್ತನ ನಾಣ್ಯಗಳಲ್ಲಿ ಅವನು ವೀಣೆ ನುಡಿಸುತ್ತಿರುವ ಚಿತ್ರವಿದ್ದು, ಅದು ಸಂಗೀತದಲ್ಲಿ ಇದ್ದ ಅವನ ಆಸಕ್ತಿಯನ್ನು ಹೊರಗೆಡಹುತ್ತದೆ.
  5. ಪ್ರಾಚೀನ ಕಾಲದ ನಾಣ್ಯಗಳು ದೊರೆತ ಸ್ಥಳವನ್ನು ಅವಲಂಬಿಸಿ ಅರಸರ ಸಾಮ್ರಾಜ್ಯದ ಮೇರೆಯನ್ನು ಗುರುತಿಸಬಹುದು.
  6. ವಿದೇಶಿ ನಾಣ್ಯಗಳು ಸ್ವದೇಶದಲ್ಲಿ ಸಿಕ್ಕ ಪ್ರದೇಶದ ಆಧಾರದ ಮೇಲೆ ಆ ಪ್ರದೇಶ ಪ್ರಾಚೀನ ಕಾಲದಲ್ಲಿ ವಿದೇಶದೊಂದಿಗೆ ವ್ಯಾಪಾರಿ ಸಂಪರ್ಕ ಹೊಂದಿತ್ತೆಂದು ತಿಳಿದು ಬರುತ್ತದೆ. ಉದಾಹರಣೆಗೆ ಬೆಂಗಳೂರು ಮತ್ತು ತಲಕಾಡುಗಳಲ್ಲಿ ದೊರೆತ ರೋಮನ್ ನಾಣ್ಯಗಳಿಂದ ಇದು ದೃಢಪಟ್ಟಿದೆ.
  7. ಹೊರಡಿಸಿದ ನಾಣ್ಯಗಳ ಲೋಹದ ಮೌಲ್ಯವು ಆಯಾ ಕಾಲದ ಆರ್ಥಿಕ ಪರಿಸ್ಥಿತಿಯನ್ನು ತೋರಿಸುವ ಕೈಗನ್ನಡಿಯಾಗಿದೆ. ಉದಾಹರಣೆಗೆ ಗುಪ್ತರ ಕಾಲದ ಚಿನ್ನದ ನಾಣ್ಯಗಳು ಆರ್ಥಿಕ ಸುಭಿಕ್ಷತೆಯ ದ್ಯೋತಕವಾದರೆ, ಮಹಮ್ಮದ್ ಬಿನ್ ತುಗಲಕ್ ಕಾಲದ ತಾಮ್ರದ ನಾಣ್ಯಗಳು ಆರ್ಥಿಕ ಪರಿಸ್ಥಿತಿಯ ಹಿನ್ನಡೆಗೆ ದಾಖಲೆಯಾಗಿದೆ.
  8. ನಾಣ್ಯಗಳ ಸಹಾಯದಿಂದ ಕಾಲ ಗಣನೆಯು ಸುಲಭವಾಗುತ್ತದೆ.
  9. ನಾಣ್ಯಗಳು ಆಯಾ ಕಾಲದ ಕಲಾ ಬೆಳವಣಿಗೆ ಮತ್ತು ಲೋಹ ವಿಜ್ಞಾನದ ಪ್ರಗತಿಯ ಮೇಲೆ ಬೆಳಕು ಚೆಲ್ಲುತ್ತದೆ.

ಐತಿಹಾಸಿಕ ಸ್ಮಾರಕಗಳು : ಚರಿತ್ರೆಯ ರಚನೆಯಲ್ಲಿ ಐತಿಹಾಸಿಕ ಸ್ಮಾರಕಗಳ ಪಾತ್ರ ವಿಶಿಷ್ಟವಾದುದು. ಭಾರತದಲ್ಲಿ ಬೆಳವಣಿಗೆ ಗೊಂಡ ಕಲೆಯ ಬಗ್ಗೆ ಅಧ್ಯಯನ ಮಾಡಲು ಸ್ಮಾರಕಗಳೇ ಆಧಾರ. ಕಟ್ಟಡಗಳು, ಚೈತಾಲಯಗಳು, ದೇವಾಲಯಗಳು, ಮಂದಿರಗಳು, ಬಸದಿಗಳು, ಮೂರ್ತಿಶಿಲ್ಪಗಳು ಕಲಾ ಪರಂಪರೆಯ ಬೆಳವಣಿಗೆಗೆ ಕೈಗನ್ನಡಿಯಿದ್ದಂತೆ. ಸ್ಮಾರಕಗಳ ಸೂಕ್ಷ್ಮ ಅಧ್ಯಯನ ಮಾಡಿ ನೋಡಿದಾಗ ರಾಜರ ಆಸ್ಥಾನ, ವೈಭವ, ಜನರ ಉಡಿಗೆ-ತೊಡಿಗೆ, ಸಮಕಾಲೀನ ಪ್ರಾಣಿಸಂಕುಲ, ಸಸ್ಯವರ್ಗ, ಸೇನಾ ಸಂಘಟನೆ, ಶಸ್ತ್ರಾಸ್ತ್ರಗಳು, ನೃತ್ಯ ಮೊದಲಾದ ವಿಚಾರಗಳು ಸ್ಪಷ್ಟವಾಗಿ ತಿಳಿದುಬರುತ್ತವೆ. ಅಂತಹ ಪ್ರಮುಖ ಸ್ಮಾರಕಗಳೆಂದರೆ ಮೌರ್ಯರ ಕಾಲದ ಸ್ತೂಪಗಳು, ಸ್ತಂಭಗಳು, ವಿಹಾರಗಳು, ಜೈನ ಬಸದಿಗಳು ಮತ್ತು ತೀರ್ಥಂಕರರ ಮೂರ್ತಿಗಳು, ಎಲ್ಲೋರ ಅಜಂತ, ಖಜುರಾಹೋ, ಆಗ್ರಾ, ಸಾಂಚಿ, ಮಹಾಬಲಿಪುರಂ, ನಾಸಿಕ್, ಕಾರ್ಲೆ, ಬೇಲೂರು, ಹಳೇಬೀಡು, ದೇವಾಲಯಗಳು- ಹೀಗೆ ಕಂಡುಬರುವ ಸ್ಮಾರಕಗಳು ಚರಿತ್ರೆಯ ರಚನೆಗೆ ಸಹಕಾರಿಯಾಗುವುದರ ಜೊತೆಗೆ ಪ್ರವಾಸಿಗರ ಕಣ್ಮನಗಳಿಗೆ ಅನಿರ್ವಚನೀಯ ಸೌಂದರ್ಯ ನೀಡುವಂತಿದೆ.