ಸರ್. ಜಾನ್ ಸಾರ್ಜೆಂಟ್ ಆಯೋಗ.
ಭಾರತದ ಪ್ರವಾಸೋದ್ಯಮವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಬ್ರಿಟಿಷ್ ಸರ್ಕಾರ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕ್ರಮ ಕೈಗೊಂಡಿತು. ಇದರ ಪರಿಣಾಮವೇ ಸಾರ್ಜೆಂಟ್ ಆಯೋಗ. 1945ರಲ್ಲಿ ಭಾರತದ ಬ್ರಿಟಿಷ್ ಸರ್ಕಾರ ಭಾರತದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸರ್. ಜಾನ್ ಸಾರ್ಜೆಂಟ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು. ಈತ ಭಾರತ ಸರ್ಕಾರದ ಶೈಕ್ಷಣಿಕ ಸಲಹೆಗಾರನಾಗಿದ್ದ. ನಾಡಿನ ಪ್ರವಾಸಿ ಸಂಚಾರದ ಸಾಧಕ ಭಾದಕಗಳನ್ನು ಸಮೀಕ್ಷಿಸುವುದು ಸಾರ್ಜೆಂಟ್ ವರದಿಯ ಮುಖ್ಯ ಉದ್ದೇಶವಾಗಿತ್ತು.
ಉದ್ದೇಶಗಳು (Objectives)
ಸಾರ್ಜೆಂಟ್ ಸಮಿತಿಯ ಉದ್ದೇಶಗಳು ಈ ಕೆಳಗಿನಂತಿವೆ.
- ಪ್ರಪಂಚದ ಮೊದಲ ಹಾಗೂ ದ್ವಿತೀಯ ಮಹಾಯುದ್ಧಗಳ ಮೊದಲು ಭಾರತದ ದೇಶಿಯ ಹಾಗೂ ವಿದೇಶಿ ಪ್ರವಾಸಿಗರ ಸಂಚಾರ ಸ್ವರೂಪ ಹಾಗೂ ವ್ಯಾಪ್ತಿಯ ಕುರಿತು ಅಧ್ಯಯನ ಮಾಡುವುದು.
- ಭಾರತದ ಒಳಗೆ ಹಾಗೂ ಹೊರಗೆ ಭಾರತದ ಪುರಾತತ್ವ ನೆಲೆಗಳು, ತೀರ್ಥಯಾತ್ರೆ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳು, ನೈಸರ್ಗಿಕ ಸುಂದರ ತಾಣಗಳು, ಹವಾಮಾನ ಸ್ಥಳಗಳು, ರಜೆಯ ವಿಶ್ರಾಂತಿ ಕೇಂದ್ರಗಳು, ಐತಿಹಾಸಿಕ ಕೇಂದ್ರಗಳು ಹಾಗೂ ಪ್ರಾಕೃತಿಕ ದೃಶ್ಯಾವಳಿಗಳ ಕುರಿತು ಹೆಚ್ಚು ಪ್ರಚಾರ ಮಾಡುವುದು.
- ದೇಶಿಯ ಹಾಗೂ ವಿದೇಶಿ ಪ್ರವಾಸಿಗರಿಗೆ ಒದಗಿಸುವ ಸಾರಿಗೆ, ವಸತಿ, ಊಟ, ಮಾರ್ಗದರ್ಶಿ ಪುಸ್ತಕಗಳು, ಮಾರ್ಗದರ್ಶಕರು, ಸಾಹಿತ್ಯ ಪೂರೈಕೆ ಮೊದಲಾದ ಸೌಕರ್ಯಗಳ ಕುರಿತು ಮಾಹಿತಿ ನೀಡುವುದು.
- ಭಾರತದ ಪ್ರಾಂತ, ಸ್ಥಳಿಯ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಒದಗಿಸಬಹುದಾದ ಸೌಲಭ್ಯಗಳ ಬಗ್ಗೆ ಕ್ರಮ ಕೈಗೊಳ್ಳುವುದು.
- ಪ್ರವಾಸಿ ಪ್ರಯಾಣದ ಬಗ್ಗೆ ಕ್ರಮ ಕೈಗೊಳ್ಳುವುದು.
- ಬಿತ್ತಿ ಪತ್ರಗಳನ್ನು ಅಂಟಿಸುವ ಮೂಲಕ ಪ್ರವಾಸೋದ್ಯಮದ ಬಗ್ಗೆ ಪ್ರಚಾರ ಮಾಡುವುದು.
- ಪ್ರವಾಸೋದ್ಯಮ ಇಲಾಖೆಯ ಮಾರ್ಗದರ್ಶಕರಿಗೆ ಸೂಕ್ತ ತರಬೇತಿ ನೀಡುವುದು.
- ಪ್ರವಾಸೋದ್ಯಮದ ಅಂಕಿ ಅಂಶಗಳನ್ನು ಸಂಗ್ರಹಿಸುವುದು.
ವರದಿಯ ಶಿಫಾರಸ್ಸುಗಳು (Reports)
ಸಾರ್ಜೆಂಟ್ ಸಮಿತಿಯ 1946 ರ ಅಕ್ಟೋಬರ್‌ನಲ್ಲಿ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿತು. ಅದರ ಮುಖ್ಯಾಂಶಗಳು ಹೀಗಿವೆ.
- ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಪ್ರತ್ಯೇಕ ಸ್ವತಂತ್ರ ಪ್ರವಾಸೋದ್ಯಮವನ್ನು ಸ್ಥಾಪಿಸುವುದು.
- ಪ್ರವಾಸಿ ಪ್ರಚಾರ ಕಚೇರಿಗಳನ್ನು ಮುಂಬೈ, ದೆಹಲಿ, ಕಲ್ಕತ್ತಾ ಹಾಗೂ ಮದ್ರಾಸ್‌ಗಳಲ್ಲಿ ಸ್ಥಾಪಿಸುವುದು.
- ಭಾರತದ ಪ್ರವಾಸೋದ್ಯಮದ ಕುರಿತು ಭಾರತದ ಒಳಗೆ ಹಾಗೂ ವಿದೇಶಗಳಲ್ಲಿ ಪ್ರಚಾರ ಮಾಡುವುದು.
- ಪ್ರವಾಸಿಗರಿಗೆ ಮಾಹಿತಿ ನೀಡಲು ಗೈಡ್‌ಗಳು, ಮಾರ್ಗದರ್ಶಿ ಪುಸ್ತಕಗಳು, ಕೈಪಿಡಿಗಳು ಹಾಗೂ ಬಿತ್ತಿ ಪತ್ರಗಳನ್ನು ಹಂಚುವುದು.
- ಹೋಟೆಲ್‌ಗಳಲ್ಲಿ ಊಟ ವಸತಿಗಳನ್ನು ಸಮರ್ಪಕವಾಗಿ ಒದಗಿಸುವುದು ಹಾಗೂ ಹೋಟೆಲ್ ಸಿಬ್ಬಂದಿ ಹಾಗೂ ಅಧಿಕಾರಗಳೊಂದಿಗೆ ನಿರಂತರ ಸಂಪರ್ಕ ಏರ್ಪಡಿಸುವುದು.
- ಪ್ರವಾಸೋದ್ಯಮದ ಅಂಕಿ ಅಂಶಗಳನ್ನು ತಯಾರಿಸುವುದು.
- ವಿಮಾನ, ಬಸ್ಸು ಹಾಗೂ ರೈಲು ಸಂಸ್ಥೆಗಳೊಂದಿಗೆ ನಿರಂತರವಾಗಿ ಸಂಪರ್ಕವನ್ನು ಇಟ್ಟುಕೊಳ್ಳುವುದು.
- ಪ್ರವಾಸಿಗರಿಗಾಗಿ ಗುಣಮಟ್ಟದ ಹೋಟೆಲ್‌ಗಳನ್ನು ನಿರ್ಮಿಸುವುದು.
- ವಿದೇಶಗಳಲ್ಲಿ ಭಾರತೀಯ ಪ್ರವಾಸೋದ್ಯಮ ಪ್ರಚಾರ ಕಚೇರಿಗಳನ್ನು ಸ್ಥಾಪಿಸುವುದು.
ಅನುಷ್ಠಾನ: ಭಾರತದ ಬ್ರಿಟಿಷ್ ಸರ್ಕಾರವು ಸಾರ್ಜೆಂಟ್ ವರದಿಯನ್ನು ಒಪ್ಪಿಕೊಂಡು ಅದನ್ನು 1948 ರಲ್ಲಿ ಜಾರಿಗೊಳಿಸಿತು ಆ ಪ್ರಕಾರ ಸಾರಿಗೆ ಸಚಿವಾಲಯದ ಅಡಿಯಲ್ಲಿ ಪ್ರವಾಸಿ ಸಂಚಾರಿ ಸಮಿತಿಯನ್ನು ನೇಮಕ ಮಾಡಲಾಯಿತು. 1949ರಲ್ಲಿ ಸಚಿವಾಲಯದ ಅಡಿಯಲ್ಲಿದ್ದ ಪ್ರವಾಸಿ ಸಂಚಾರಿ ಶಾಖೆಯನ್ನು ಪ್ರತ್ಯೇಕಿಸಿ ಸ್ವತಂತ್ರ ಶಾಖೆಯನ್ನು ತೆರೆಯಲಾಯಿತು. 1956ರಲ್ಲಿ ಈ ಸಂಚಾರಿ ಪ್ರವಾಸಿ ಶಾಖೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಯಿತು ಅವುಗಳೆಂದರೆ.
- ಪ್ರವಾಸಿ ಸಂಚಾರಿ ವಿಭಾಗ: ಈ ವಿಭಾಗವು ಹೋಟೆಲ್, ವಸತಿ, ವಿಶ್ರಾಂತಿ ಗೃಹ ಮೊದಲಾದವುಗಳ ಮೇಲ್ವಿಚಾರಣೆ ಮಾಡುವುದು, ಪ್ರವಾಸಿ ಅಂಕಿ ಅಂಶಗಳನ್ನು ಸಂಗ್ರಹಿಸುವುದು, ಪ್ರವಾಸಿ ಮಾರ್ಗದರ್ಶಿಗಳಿಗೆ ತರಬೇತಿ ನೀಡುವುದು ಹಾಗೂ ಪ್ರವಾಸಿ ಏಜೆಂಟರ ನೇಮಕ ಮೊದಲಾದವುಗಳನ್ನು ನೋಡಿಕೊಳ್ಳಬೇಕಾಗಿತ್ತು.
2.. ಪ್ರವಾಸಿ ಆಡಳಿತ ವಿಭಾಗ: ನೂತನ ಪ್ರವಾಸಿ ಕಚೇರಿ ತೆರೆಯುವುದು, ವಾರ್ಷಿಕ ಆಯವ್ಯ ತಯಾರಿಸುವುದು ಪ್ರವಾಸಿ ಕಚೇರಿಗಳ ಮೇಲ್ವಿಚಾರಣೆ ಮಾಡುವುದು, ಪ್ರವಾಸಿ ಕಚೇರಿಗಳ ತಪಾಸಣೆ ಮಾಡುವುದು, ಪ್ರವಾಸಿ ಆಡಳಿತ ವಿಭಾಗದ ಕರ್ತವ್ಯಗಳಾಗಿವೆ.
- ಪ್ರವಾಸಿ ಪ್ರಚಾರ ವಿಭಾಗ: ಪ್ರವಾಸೋದ್ಯಮ ಇಲಾಖೆಯು ಪ್ರಚಾರಕ್ಕಾಗಿ ಜಾಹೀರಾತು ನೀಡುವುದು, ಮಾರ್ಗದರ್ಶಿ ಕೈಪಡಿ ತಯಾರಿಸುವುದು, ಪ್ರವಾಸಿ ಸಾಹಿತ್ಯವನ್ನು ಪ್ರಕಟಿಸಿ ಹಂಚುವುದು, ಕಿರು ಹೊತ್ತಿಗೆ ಹಾಗೂ ಬಿತ್ತಿ ಪತ್ರ ಪ್ರಕಟಿಸುವುದು ಪ್ರವಾಸಿ ಪ್ರಚಾರ ವಿಭಾಗದ ಕಾರ್ಯಗಳಾಗಿವೆ.
- ಪ್ರವಾಸಿ ಮಾಹಿತಿ ವಿತರಣಾ ವಿಭಾಗ: ಪ್ರವಾಸ ಸಾಹಿತ್ಯವನ್ನು ವಿದೇಶಗಳಲ್ಲಿ ಹಂಚುವುದು, ಪ್ರಕಟಿಸುವುದು, ಇದರ ಕಾರ್ಯಗಳಾಗಿವೆ. ಸಾರ್ಜೆಂಟ್ ವರದಿಯ ಪ್ರಕಾರ ಭಾರತ ಸರ್ಕಾರವು 10 ಪ್ರವಾಸಿ ಕಚೇರಿಗಳನ್ನು ತೆರೆಯಿತು ಅವುಗಳಲ್ಲಿ ನಾಲ್ಕು ಪ್ರಾದೇಶಿಕ ಕಚೇರಿಗಳನ್ನು ದೆಹಲಿ, ಕಲ್ಕತ್ತಾ, ಮದ್ರಾಸ್ ಹಾಗೂ ಮುಂಬೈಗಳಲ್ಲಿ ತೆರೆಯಲಾಯಿತು. ಉಳಿದ ಆರು ಮಾಹಿತಿ ಕೇಂದ್ರಗಳನ್ನು ಆಗ್ರ, ಕೊಚ್ಚಿನ್, ಬೆಂಗಳೂರು, ಔರಂಗಬಾದ್, ಪಣಜಿ, ಪೋರ್ಟ್ ಬ್ಲೈರ್, ಭುವನೇಶ್ವರ, ಜೈಪುರ ಖಜುರಾಹೋ ಹಾಗೂ ವಾರಣಾಸಿಗಳಲ್ಲಿ ತೆರೆಯಲಾಯಿತು. ವಿದೇಶಗಳಲ್ಲಿಯೂ ಸಹ ಭಾರತದ ಪ್ರವಾಸೋದ್ಯಮ ಕಚೇರಿಗಳನ್ನು ನ್ಯೂಯಾರ್ಕ್, ಲಂಡನ್, ಪ್ಯಾರಿಸ್, ಫ್ರಾಂಕ್‌ಫರ್ಟ್ ಮೆಲ್ಬೋರ್ನ್ ಹಾಗೂ ಕೊಲಂಬೋಗಳಲ್ಲಿ ಸ್ಥಾಪಿಸಲಾಯಿತು 1958ರ ವೇಳೆಗೆ ಪ್ರತ್ಯೇಕ ಪ್ರವಾಸೋದ್ಯಮ ಇಲಾಖೆಯನ್ನು ತೆರೆಯಲಾಯಿತು.
ಎಲ್ .ಕೆ. ಜಾ ಸಮಿತಿ (L.K Jha Committee)
1962 ರಲ್ಲಿ ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಯಿತು. ಹೀಗಾಗಿ ಭಾರತ ಸರ್ಕಾರವು ಎಲ್ ಕೆ ಜಾ ಸಮಿತಿಯನ್ನು ರಚಿಸಿತು. ಎಲ್ ಕೆ ಜಾ ಸಮಿತಿ ನೀಡಿದ ಶಿಫಾರಸ್ಸುಗಳು ಈ ಕೆಳಗಿನಂತಿವೆ.
- ವಿದೇಶಿ ಪ್ರವಾಸಿಗರಿಗೆ ವೀಸಾರಹಿತ ಅವಕಾಶ ನೀಡುವುದು.
- ವಿದೇಶಗಳಲ್ಲಿ ಹೆಚ್ಚಿನ ಸೇವಾ ಕಚೇರಿಗಳನ್ನು ತೆರೆಯುವುದು.
- ಮುಂದಿನ ಐದು ವರ್ಷಗಳಲ್ಲಿ 5500 ಹೆಚ್ಚುವರಿ ಹೋಟೆಲ್ ಕೊಠಡಿಗಳ ಸ್ಥಾಪನೆ.
- ಏರ್ ಇಂಡಿಯ ಹಾಗೂ ಇಂಡಿಯನ್ ಏರ್‌ಲೈನ್ ಪ್ರವಾಸಿಗರಿಗೆ ತುರ್ತು ಕಾಯ್ದಿರಿಸುವಿಕೆ ಸೌಲಭ್ಯ ನೀಡುವುದು.
- ಖಾಸಗಿ ಪ್ರವಾಸಿ ಸಂಸ್ಥೆಗಳು, ಹೋಟೆಲ್, ವಸತಿಗೃಹಗಳು ಮೊದಲಾದವುಗಳನ್ನು ತೆರೆಯಲು ಅನುಮತಿ ನೀಡುವುದು.
- ಪ್ರವಾಸ ಅಧಿಕಾರಿಗಳಿಗೆ ತರಬೇತಿ ನೀಡುವುದು.
- ವಿವಿಧ ಸರ್ಕಾರಿ ಇಲಾಖೆಗಳ ನಡುವೆ ಪ್ರವಾಸ ಉದ್ಯಮಕ್ಕೆ ಸಂಬಂಧಿಸಿದಂತೆ ಸಮನ್ವಯ ಸಾಧಿಸುವುದು.
- ವಿದೇಶಗಳಲ್ಲಿ ನೂತನ ಪ್ರವಾಸಿ ಕಚೇರಿಗಳನ್ನು ಸ್ಥಾಪಿಸುವುದು.
- ಪ್ರವಾಸಿ ತಾಣಗಳಲ್ಲಿ ಖರೀದಿ ಹಾಗೂ ಮನರಂಜನೆಗೆ ಅವಕಾಶ ಕಲ್ಪಿಸುವುದು.
1967ರಲ್ಲಿ ಇಂದಿರಾಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತೀರ್ಮಾನದಂತೆ ಪ್ರವಾಸೋದ್ಯಮ ಹಾಗೂ ನಾಗರೀಕ ವಿಮಾನಯಾನ ಸಚಿವಾಲಯವನ್ನು ಪ್ರತ್ಯೇಕಿಸಿ ಪ್ರವಾಸೋದ್ಯಮ ಸಚಿವಾಲಯವನ್ನು ಆರಂಭಿಸಲಾಯಿತು.
1956 ರಲ್ಲಿ ಭಾರತಕ್ಕೆ 17000 ವಿದೇಶಿ ಪ್ರವಾಸಿಗರು ಬಂದಿದ್ದರೆ 2014 4863 ಕೋಟಿಗೆ ಏರಿತು 2003 ರಲ್ಲಿ ಅದು 1593 ಮಿಲಿಯನ್ ಗೆ ಏರಿತು 2025ರಲ್ಲಿ ಅದು ಕೇವಲ 9.6 ಮಿಲಿಯನ್ ಗೆ ಇಳಿಕೆಯಾಗಿದೆ.