ಮಧ್ಯಕಾಲೀನ ಭಾರತದ ಇತಿಹಾಸ
- ದೆಹಲಿ ಸುಲ್ತಾನರು
- ವಿಜಯನಗರ ಸಾಮ್ರಾಜ್ಯ
- ಕಬೀರ್, ನಾನಕ್, ಮೀರಾಬಾಯಿ, ಸೂಫಿ ಪಂಥ
- ರಜಪೂತರು
- ಮೊಘಲ್ ಸಾಮ್ರಾಜ್ಯ
- ಮರಾಠರು
- ಯುರೋಪಿಯನ್ನರ ಆಗಮನ
ಮಹಮ್ಮದ್-ಬಿನ್ – ತುಘಲಕನ ಆಡಳಿತಾತ್ಮಕ ಪ್ರಯೋಗಗಳು
ಹುಚ್ಚುದೊರೆಯೆಂದು ಖ್ಯಾತನಾದ ಮಹಮ್ಮದ್ ಬಿನ್ ತುಗಲಕ್. ಅವನ ಆಡಳಿತಾತ್ಮಕ ಪ್ರಯೋಗಗಳ ಕಾರಣ ಮತ್ತು ಹಿನ್ನೆಲೆಯ ಮೂಲಕ ಅವನ ಅಸಾಧಾರಣ ವ್ಯಕ್ತಿತ್ವದ ಪರಿಚಯ ಮಾಡಿಕೊಳ್ಳಬಹುದು.
ಶ್ರೀ ಕೃಷ್ಣದೇವರಾಯನ ಸಾಧನೆಗಳು
ಕೃಷ್ಣದೇವರಾಯ ವಿಜಯನಗರ ಅರಸರಲ್ಲಿಯೇ ಶ್ರೇಷ್ಠದೊರೆ ಎಂದು ಪ್ರಸಿದ್ಧನಾಗಿದ್ದಾನೆ. ಸುಮಾರು 20 ವರ್ಷಗಳ ಕಾಲದ ಇವನ ಆಳ್ವಿಕೆ ವಿಜಯನಗರದ ಸುವರ್ಣಯುಗ. ನಿಮಗೊಂದು ಪಕ್ಷಿನೋಟ.
ಮಹಾತ್ಮ ಕಬೀರ್ ಮತ್ತು ಗುರುನಾನಕರು
ಕಬೀರ್ ಮತ್ತು ಗುರುನಾನಕ್ ಇಬ್ಬರೂ ಮಧ್ಯಕಾಲೀನ ಭಾರತದ ಮಹಾನ್ ಸಂತರು ಹಾಗೂ ಸಮಾಜ ಸುಧಾರಕರಾಗಿದ್ದಾರೆ. ಇವರ ಜೀವನ ಮತ್ತು ಬೋಧನೆಯನ್ನು ತಿಳಿಯಿರಿ
ರಜಪೂತರ ಕೊಡುಗೆಗಳು
ರಜಪೂತರು ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅವರು ಭಾರತದ ಇತಿಹಾಸ ದಲ್ಲಿ ಶಾಶ್ವತವಾದ ಗುರುತನ್ನು ಬಿಟ್ಟು ಹೋಗಿದ್ದಾರೆ.
ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ
ಭಾರತವನ್ನಾಳಿದ ಮುಸ್ಲಿಂ ಚಕ್ರವರ್ತಿಗಳಲ್ಲಿ ಅಕ್ಬರ್ ಅತ್ಯಂತ ಶ್ರೇಷ್ಠ ದೊರೆಯಾಗಿದ್ದನು. ಇವನು ಉದಾರವಾದಿ, ಧಾರ್ಮಿಕ ಸಹಿಷ್ಣು ಎಲ್ಲಕ್ಕಿಂತ ಮಿಗಿಲಾಗಿ ಬಡವರ ಬಗ್ಗೆ ಪ್ರೀತಿ ಹಾಗೂ ಅನುಕಂಪವುಳ್ಳವನಾಗಿದ್ದನು. ಅಕ್ಬರನ ತಾಯಿ ಪರ್ಶಿಯನ್ ವಿದ್ವಾಂಸಳಾಗಿದ್ದು ಆಕೆ ಅಕ್ಬರನಲ್ಲಿ ಸಹಿಷ್ಣುತಾ ಭಾವನೆಗಳನ್ನು ಬಿತ್ತಿದಳು. ಅಕ್ಬರನ ಹೆಂಡತಿ ಅಕ್ಬರನಲ್ಲಿ ಧಾರ್ಮಿಕ ಮನೋಭಾವನೆಗಳನ್ನು ಮೂಡಿಸಿದ್ದಳು. ಇವನು ಸೂಫಿ ಸಂತರಿಂದ ಪ್ರಭಾವಿತನಾಗಿದ್ದನು. ಹೀಗಾಗಿ ಅವನು ರಾಜ್ಯದ ವಿವಿಧ ಧರ್ಮಗಳ ತಿರುಳನ್ನು ಅರ್ಥಮಾಡಿಕೊಳ್ಳ ಬಯಸಿದ್ದನು
ಶಿವಾಜಿಯ ಆಡಳಿತ ಪದ್ಧತಿ
ದಕ್ಷ ಆಡಳಿತಗಾರ,ರಾಜನೀತಿ ನಿಪುಣನಾಗಿದ್ದ ಶಿವಾಜಿಯು ನಿರಂಕುಶಾಧಿಕಾರಿಯಂತೆ ವರ್ತಿಸಲಿಲ್ಲ. ಪ್ರಜೆಗಳ ಕಲ್ಯಾಣದಲ್ಲಿಯೇ ತೃಪ್ತಿ ಕಾಣುತ್ತಿದ್ದ ಅವನ ಬಗ್ಗೆ ಒಂದು ಪಕ್ಷಿನೋಟ.
ಭಾರತದಲ್ಲಿ ಪೋರ್ಚುಗೀಸರು
ಭಾರತಕ್ಕೆ ಹೊಸ ಸಮುದ್ರಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದ ಮೊದಲ ಯುರೋಪಿಯನ್ನರೆಂದರೆ ಪೋರ್ಚುಗೀಸರು. ಕ್ರಿ.ಶ. 1498ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪ್ರಥಮ ಪೋರ್ಚುಗೀಸ್ ನಾವಿಕನೆಂದರೆ ವಾಸ್ಕೋ-ಡ-ಗಾಮಾ. ಈತನ ಭೂ ಅನ್ವೇಷಣೆಯ ನಂತರ ಭಾರತಕ್ಕೆ ಪೋರ್ಚುಗೀಸರು ಡಚ್ಚರು, ಫ್ರೆಂಚರು ಹಾಗೂ ಇಂಗ್ಲೀಷರು ಒಬ್ಬೊಬ್ಬರಾಗಿ ಆಗಮಿಸಿದರು






