ಮಧ್ಯಕಾಲೀನ ಭಾರತದ ಇತಿಹಾಸ
- ದೆಹಲಿ ಸುಲ್ತಾನರು
- ವಿಜಯನಗರ ಸಾಮ್ರಾಜ್ಯ
- ಕಬೀರ್, ನಾನಕ್, ಮೀರಾಬಾಯಿ, ಸೂಫಿ ಪಂಥ
- ರಜಪೂತರು
- ಮೊಘಲ್ ಸಾಮ್ರಾಜ್ಯ
- ಮರಾಠರು
- ಯುರೋಪಿಯನ್ನರ ಆಗಮನ
ದೆಹಲಿ ಸುಲ್ತಾನರ ಕೊಡುಗೆಗಳು
13ನೇ ಶತಮಾನದಿಂದ 16ನೇ ಶತಮಾನದವರೆಗೆ ಭಾರತದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ಆಡಳಿತವೇ ದೆಹಲಿ ಸುಲ್ತಾನರ ಆಡಳಿತ. ಇವರು ಆಡಳಿತ, ಸೇನಾ ವ್ಯವಸ್ಥೆ, ಸಾಹಿತ್ಯ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.
ಅಲ್ಲಾವುದ್ದೀನ್ ಖಿಲ್ಜಿಯ ಸುಧಾರಣೆಗಳು
ಅಲ್ಲಾವುದ್ದೀನ್ ಖಿಲ್ಜಿ ದೆಹಲಿ ಸುಲ್ತಾನರ ಶಕ್ತಿಶಾಲಿ ಆಡಳಿತಗಾರರಲ್ಲಿ ಒಬ್ಬರು. ಅವರ ಆಡಳಿತದಲ್ಲಿ ರಾಜಕೀಯ, ಆರ್ಥಿಕ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿ ಹಲವು ಮಹತ್ವದ ಸುಧಾರಣೆಗಳನ್ನು ಜಾರಿಗೆ ತರಲಾಯಿತು.
ಅಲ್ಲಾವುದ್ದೀನ್ ಖಿಲ್ಜಿಯ ದಕ್ಷಿಣ ದಂಡಯಾತ್ರೆಗಳು
ಅಲ್ಲಾವುದ್ದೀನ್ ಖಿಲ್ಜಿ ಮಧ್ಯಕಾಲೀನ ಭಾರತದ ಶಕ್ತಿಶಾಲಿ ಸುಲ್ತಾನರಲ್ಲಿ ಒಬ್ಬನಾಗಿದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ದಕ್ಷಿಣ ಭಾರತದಲ್ಲಿ ಅನೇಕ ದಂಡಯಾತ್ರೆಗಳನ್ನು ನಡೆಸಿದನು. ಈ ದಂಡಯಾತ್ರೆಗಳು ದೆಹಲಿ ಸುಲ್ತಾನರ ಸಾಮ್ರಾಜ್ಯಕ್ಕೆ ಅಪಾರ ಸಂಪತ್ತು ಮತ್ತು ರಾಜಕೀಯ ಪ್ರಭಾವವನ್ನು ತಂದುಕೊಟ್ಟವು.
ಕುತುಬ್-ಉದ್-ದೀನ್-ಐಬಕ್ ಮತ್ತು ದೆಹಲಿ ಸಾಮ್ರಾಜ್ಯದ ಸ್ಥಾಪನೆ
ಕುತುಬ್-ಉದ್-ದೀನ್ ಐಬಕ್ ದೆಹಲಿ ಸುಲ್ತಾನತಿಯ ಸ್ಥಾಪಕನಾಗಿ ಭಾರತದ ಮಧ್ಯಯುಗೀನ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದನು.
ಗುಲಾಮನಾಗಿ ಆರಂಭಿಸಿದ ಅವನ ಜೀವನ ಕೊನೆಗೆ ದೆಹಲಿಯ ಸುಲ್ತಾನನಾಗುವ ಮಹತ್ತರ ಸಾಧನೆಗೆ ದಾರಿ ಮಾಡಿಕೊಟ್ಟಿತು.
ಮಹಮ್ಮದ್-ಬಿನ್ – ತುಘಲಕನ ಆಡಳಿತಾತ್ಮಕ ಪ್ರಯೋಗಗಳು
ಹುಚ್ಚುದೊರೆಯೆಂದು ಖ್ಯಾತನಾದ ಮಹಮ್ಮದ್ ಬಿನ್ ತುಗಲಕ್. ಅವನ ಆಡಳಿತಾತ್ಮಕ ಪ್ರಯೋಗಗಳ ಕಾರಣ ಮತ್ತು ಹಿನ್ನೆಲೆಯ ಮೂಲಕ ಅವನ ಅಸಾಧಾರಣ ವ್ಯಕ್ತಿತ್ವದ ಪರಿಚಯ ಮಾಡಿಕೊಳ್ಳಬಹುದು.
ವಿಜಯನಗರ ಸಾಮ್ರಾಜ್ಯದ ಸಾಮಾಜಿಕ ಸ್ಥಿತಿಗತಿ
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಮಾಜವು ವರ್ಣವ್ಯವಸ್ಥೆ, ಸಂಪ್ರದಾಯಗಳು ಮತ್ತು ವಿವಿಧ ವೃತ್ತಿಗಳ ಆಧಾರದ ಮೇಲೆ ರೂಪುಗೊಂಡಿತ್ತು. ಈ ಯುಗದಲ್ಲಿ ಜನರ ಜೀವನಶೈಲಿ, ಆಚರಣೆಗಳು ಮತ್ತು ಹಬ್ಬಗಳು ಸಮಾಜದ ವೈವಿಧ್ಯತೆ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತವೆ.
ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ಕೊಡುಗೆಗಳು
ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಇದರ ಆಡಳಿತ, ಸಂಸ್ಕೃತಿ, ಧರ್ಮ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳು ಭಾರತೀಯ ನಾಗರಿಕತೆಯನ್ನು ಸಮೃದ್ಧಗೊಳಿಸಿವೆ.
ವಿಜಯನಗರದ ವಿದೇಶಿ ವರದಿಗಳು
ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದ ಅತ್ಯಂತ ವೈಭವಶಾಲಿ ಹಾಗೂ ಸಮೃದ್ಧ ಸಾಮ್ರಾಜ್ಯಗಳಲ್ಲಿ ಒಂದಾಗಿತ್ತು. ಹಲವು ವಿದೇಶಿ ಪ್ರವಾಸಿಗರು ಇಲ್ಲಿ ಭೇಟಿ ನೀಡಿ ತಮ್ಮ ಅನುಭವಗಳನ್ನು ದಾಖಲಿಸಿದ್ದು, ಅವುಗಳಿಂದ ಆ ಕಾಲದ ಸಮಾಜ, ಆರ್ಥಿಕತೆ ಮತ್ತು ಸಂಸ್ಕೃತಿಯ ಚಿತ್ರಣ ತಿಳಿದುಬರುತ್ತದೆ.
ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪ
ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದ ಇತಿಹಾಸದಲ್ಲಿ ಕಲೆ ಮತ್ತು ವಾಸ್ತುಶಿಲ್ಪದ ಮಹತ್ವದ ಯುಗವಾಗಿತ್ತು. ಅದರ ದೇವಾಲಯಗಳು, ಅರಮನೆಗಳು ಮತ್ತು ಶಿಲ್ಪಗಳು ಭಾರತೀಯ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ.
ತಾಳಿಕೋಟೆ ಕದನ (ಕಾರಣಗಳು ಮತ್ತು ಪರಿಣಾಮಗಳು)
1565ರ ಜನವರಿ 23ರಂದು ನಡೆದ ತಾಳಿಕೋಟೆ ಕದನವು ಭಾರತೀಯ ಇತಿಹಾಸದಲ್ಲಿ ಮಹತ್ವದ ತಿರುವು ತಂದ ಯುದ್ಧವಾಗಿದೆ. ಈ ಯುದ್ಧವು ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾಗಿ ದಕ್ಷಿಣ ಭಾರತದ ರಾಜಕೀಯ ಸ್ಥಿತಿಯನ್ನು ಸಂಪೂರ್ಣವಾಗಿ ಬದಲಿಸಿತು.
ಶ್ರೀ ಕೃಷ್ಣದೇವರಾಯನ ಸಾಧನೆಗಳು
ಕೃಷ್ಣದೇವರಾಯ ವಿಜಯನಗರ ಅರಸರಲ್ಲಿಯೇ ಶ್ರೇಷ್ಠದೊರೆ ಎಂದು ಪ್ರಸಿದ್ಧನಾಗಿದ್ದಾನೆ. ಸುಮಾರು 20 ವರ್ಷಗಳ ಕಾಲದ ಇವನ ಆಳ್ವಿಕೆ ವಿಜಯನಗರದ ಸುವರ್ಣಯುಗ. ನಿಮಗೊಂದು ಪಕ್ಷಿನೋಟ.
ಶಂಕರಾಚಾರ್ಯರ ಜೀವನ ಮತ್ತು ಬೋಧನೆಗಳು
ಶ್ರೀ ಶಂಕರಾಚಾರ್ಯರು ಭಾರತೀಯ ತತ್ತ್ವಶಾಸ್ತ್ರದಲ್ಲಿ ಅತ್ಯಂತ ಪ್ರಭಾವಶಾಲಿ ಆಚಾರ್ಯರಲ್ಲಿ ಒಬ್ಬರು. ಅವರು ಅದ್ವೈತ ವೇದಾಂತದ ತತ್ವವನ್ನು ಪ್ರಸಾರ ಮಾಡಿ ಭಾರತದ ಆಧ್ಯಾತ್ಮಿಕ ಚಿಂತನೆಗೆ ಮಹತ್ತರ ದಿಕ್ಕು ನೀಡಿದರು.
ಭಕ್ತಿ ಪಂಥದ ಪರಿಣಾಮಗಳು
ಭಕ್ತಿ ಆಂದೋಲನವು ಭಾರತೀಯ ಸಮಾಜದಲ್ಲಿ ಮಹತ್ತರವಾದ ಧಾರ್ಮಿಕ ಹಾಗೂ ಸಾಮಾಜಿಕ ಬದಲಾವಣೆಗಳನ್ನು ತಂದ ಚಳುವಳಿಯಾಗಿದೆ. ಇದು ಸಮಾನತೆ, ಭಕ್ತಿ ಮತ್ತು ಮಾನವೀಯತೆಯ ಮೌಲ್ಯಗಳನ್ನು ಜನರಲ್ಲಿ ಬೆಳಸಿತು.
ಕನಕದಾಸರು (1465-1563)
ಭಕ್ತಿ ಸಾಹಿತ್ಯದ ಮಹಾನ್ ದಾಸರಲ್ಲಿ ಒಬ್ಬರಾದ ಕನಕದಾಸರು ಸಮಾಜ ಸುಧಾರಣೆಯ ಸಂದೇಶವನ್ನು ತಮ್ಮ ಕೀರ್ತನೆಗಳ ಮೂಲಕ ಸಾರಿದರು. ಸಮಾನತೆ, ಮಾನವೀಯತೆ ಮತ್ತು ಭಕ್ತಿಯ ಮಹತ್ವವನ್ನು ಜನರಿಗೆ ಬೋಧಿಸಿದ ಮಹಾನ್ ಚಿಂತಕರಾಗಿದ್ದರು.
ಪುರಂದರದಾಸರು(1484-1564)
ಪುರಂದರದಾಸ ಅವರು ಕನ್ನಡ ಭಕ್ತಿ ಸಾಹಿತ್ಯ ಮತ್ತು ಕರ್ನಾಟಕ ಸಂಗೀತದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದ ಮಹಾನ್ ಸಂತರು. ಭಕ್ತಿ, ನೀತಿ ಮತ್ತು ಸಮಾಜಸुधಾರಣೆಯ ಸಂದೇಶವನ್ನು ತಮ್ಮ ಕೀರ್ತನೆಗಳ ಮೂಲಕ ಜನರಿಗೆ ಹರಡಿದರು.
ರಾಮಾನುಜಾಚಾರ್ಯರ ಜೀವನ ಮತ್ತು ಬೋಧನೆಗಳು
ಭಾರತೀಯ ಆಧ್ಯಾತ್ಮಿಕ ಇತಿಹಾಸದಲ್ಲಿ ರಾಮಾನುಜಾಚಾರ್ಯ ಮಹತ್ವದ ಸ್ಥಾನ ಹೊಂದಿದ್ದಾರೆ. ಅವರ ವಿಶಿಷ್ಟಾದ್ವೈತ ತತ್ವಶಾಸ್ತ್ರ ಮತ್ತು ಸಾಮಾಜಿಕ ಸಮಾನತೆಯ ಸಂದೇಶವು ಇಂದಿಗೂ ಸಮಾಜಕ್ಕೆ ದಾರಿ ತೋರಿಸುತ್ತಿದೆ.
ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳು
ಮಧ್ವಾಚಾರ್ಯರು ಹಿಂದೂ ಧಾರ್ಮಿಕ ಹಾಗೂ ತತ್ತ್ವಶಾಸ್ತ್ರದ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿದ ಮಹಾನ್ ಆಚಾರ್ಯರು. ಅವರು ಪ್ರತಿಪಾದಿಸಿದ ದ್ವೈತ ತತ್ತ್ವಶಾಸ್ತ್ರ ಭಕ್ತಿ, ಜ್ಞಾನ ಮತ್ತು ಆಧ್ಯಾತ್ಮಿಕ ಜೀವನಕ್ಕೆ ಹೊಸ ದಾರಿಯನ್ನು ತೋರಿಸಿತು.
ರಜಪೂತರ ಮೂಲ
ರಜಪೂತಗಳ ಮೂಲದ ಪ್ರಶ್ನೆ ಭಾರತೀಯ ಇತಿಹಾಸಲೇಖನದಲ್ಲಿ ದೀರ್ಘಕಾಲದಿಂದಲೂ ಚರ್ಚೆಗೆ ಒಳಗಾಗಿರುವ ಮಹತ್ವದ ವಿಷಯವಾಗಿದೆ. ಕೆಲ ಪಂಡಿತರು ರಾಜಪುತರಿಗೆ ವಿದೇಶೀ ಮೂಲವಿದೆ ಎಂದು ವಾದಿಸಿದರೆ, ಇನ್ನಿತರರು ಅವು ಸಂಪೂರ್ಣವಾಗಿ ಭಾರತೀಯ ಮೂಲದವರೇ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ವಿಭಿನ್ನ ಸಾಕ್ಷ್ಯಗಳು ಮತ್ತು ವಿಧಾನಗಳನ್ನು ಆಧರಿಸಿದ ಈ ಪರಸ್ಪರ ವಿರೋಧಿ ಅಭಿಪ್ರಾಯಗಳು ಪಂಡಿತರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿವೆ.
ರಜಪೂತರ ಕಾಲದ ಸಾಹಿತ್ಯ
ಮಧ್ಯಯುಗದ ರಾಜಪುತ ರಾಜಸಭೆಗಳು ಕೇವಲ ಯುದ್ಧವೀರತೆಯ ಕೇಂದ್ರಗಳಾಗಿರಲಿಲ್ಲ; ಅವು ಬೌದ್ಧಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಚೈತನ್ಯಮಯ ಕೇಂದ್ರಗಳಾಗಿದ್ದವು.
ರಜಪೂತರ ಕಾಲದ ಸಾಮಾಜಿಕ ಜೀವನ
ರಜಪೂತರ ಕಾಲದ ಸಾಮಾಜಿಕ ವ್ಯವಸ್ಥೆ ಚಾತುರ್ವಣ್ರ ಪದ್ಧತಿಯ ಅಡಿಪಾಯದ ಮೇಲೆ ನಿರ್ಮಾಣವಾಗಿತ್ತು. ಇದರಿಂದ ಜಾತಿ ಪದ್ಧತಿ ಆ ಕಾಲದಲ್ಲಿಯೂ ಅತ್ಯಂತ ಕಠಿಣವಾಗಿತ್ತು ಎಂಬುದನ್ನು ತಿಳಿಯಬಹುದು.
ರಜಪೂತರ ಕಾಲದ ಆಡಳಿತ
ರಾಜಪೂತ ರಾಜ್ಯಗಳಾದ ಮೇವಾರ್, ಮಾರ್ವಾರ್, ಅಂಬರ್ ಮೊದಲಾದವುಗ ಆಡಳಿತ ವ್ಯವಸ್ಥೆ ವಿಭಿನ್ನ ರೂಪಗಳಲ್ಲಿ ಕಂಡುಬಂದರೂ, ಅದರ ಮೂಲ ಸ್ವರೂಪ ಸಾಮಾನ್ಯವಾಗಿತ್ತು.
ರಜಪೂತರ ಕಲೆ ಹಾಗೂ ವಾಸ್ತುಶಿಲ್ಪ
ರಜಪೂತ ಅರಸರು ಸಾಹಿತ್ಯ ಪೋಷಕರು ಮತ್ತು ಧರ್ಮ ಸಹಿಷ್ಣುರಾಗಿದ್ದಂತೆ ಕಲಾಭಿಮಾನಿಗಳು ಮತ್ತು ಕಲೋಪಾಸಕರಾಗಿದ್ದರು. ಭಾರತೀಯ ಕಲಾ ಪರಂಪರೆಯಲ್ಲಿ ರಜಪೂತರಿಂದ ಹೊಸದೊಂದು ಯುಗ ಆರಂಭಗೊಂಡಿತು. ರಜಪೂತರಿಂದ ರಚನೆಗೊಂಡ ಕಲಾಸ್ಮಾರಕಗಳೆಂದರೆ:- ದೇವಾಲಯಗಳು, ಅರಮನೆಗಳು, ಕೋಟೆಕೊತ್ತಲಗಳು, ಸ್ನಾನಘಟ್ಟಗಳು, ನೀರಾವರಿ ಅಣೆಕಟ್ಟುಗಳು ಮೊದಲಾದವು.
ಮೂರನೆಯ ಪೃಥ್ವಿರಾಜ್ (1178-1192)
ಚೌಹಾನ್ ಸಂತತಿಯಲ್ಲಿ ಮೂರನೆಯ ಪೃಥ್ವಿರಾಜ್ ಚೌಹಾನ್ ಅತ್ಯಂತ ಪ್ರಸಿದ್ಧ ದೊರೆ. ಇವನು ಚೌಹಾನರ ಇತಿಹಾಸದಲ್ಲಿ ನೂತನ ಯುಗವೊಂದನ್ನು ಆರಂಭಿಸಿದನು
ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪಕ್ಕೆ ಮೊಘಲ್ ಕೊಡುಗೆಗಳು
ಮೊಘಲ್ ಸಾಮ್ರಾಜ್ಯವು ಭಾರತದ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಈ ಯುಗದಲ್ಲಿ ಶಿಕ್ಷಣ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಲ್ಲಿ ವಿಶಿಷ್ಟ ಅಭಿವೃದ್ಧಿ ಕಂಡುಬಂದಿದ್ದು, ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಮೃದ್ಧಗೊಳಿಸಿದೆ.
ಮೊಗಲರ ಕಂದಾಯ ಪದ್ಧತಿ
ಮೊಗಲ್ ಸಾಮ್ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಭೂಕಂದಾಯ ಅತ್ಯಂತ ಪ್ರಮುಖವಾದ ಆದಾಯ ಮೂಲವಾಗಿತ್ತು. ಅಕ್ಬರ್ ಕಾಲದಲ್ಲಿ ಜಾರಿಗೆ ಬಂದ ದಹಸಾಲಿ ಪದ್ಧತಿ ಕಂದಾಯ ವ್ಯವಸ್ಥೆಗೆ ಹೊಸ ರೂಪ ನೀಡಿತು.
ಮೊಗಲರ ಆಡಳಿತ
ಮೊಗಲ್ ಸಾಮ್ರಾಜ್ಯದ ಆಡಳಿತ ವ್ಯವಸ್ಥೆ ಭಾರತ ಇತಿಹಾಸದಲ್ಲಿ ಅತ್ಯಂತ ಸಂಘಟಿತ ಹಾಗೂ ಬಲಿಷ್ಠ ಆಡಳಿತ ವ್ಯವಸ್ಥೆಯಾಗಿತ್ತು. ಸಾಮ್ರಾಟನ ಕೈಯಲ್ಲಿ ಎಲ್ಲಾ ಅಧಿಕಾರಗಳು ಕೇಂದ್ರಿಕೃತವಾಗಿದ್ದು, ಕೇಂದ್ರದಿಂದ ಗ್ರಾಮ ಮಟ್ಟದವರೆಗೆ ಆಡಳಿತ ವ್ಯವಸ್ಥೆ ರೂಪುಗೊಂಡಿತ್ತು.
ಮೊಗಲರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ
ಮೊಗಲ್ ಕಾಲದಲ್ಲಿ ಭಾರತದ ಸಮಾಜ ಮತ್ತು ಆರ್ಥಿಕ ವ್ಯವಸ್ಥೆ ಪ್ಯೂಡಲ್ ತಳಹದಿಯ ಮೇಲೆ ನಿರ್ಮಿತವಾಗಿತ್ತು. ಈ ಕಾಲದಲ್ಲಿ ಕೃಷಿ, ಕೈಗಾರಿಕೆ ಮತ್ತು ವ್ಯಾಪಾರವು ದೇಶದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಆಧಾರವಾಗಿತ್ತು.
ಔರಂಗಜೇಬ್ (ಕ್ರಿ.ಶ. 1658-1707) ಧಾರ್ಮಿಕ ನೀತಿ ಮತ್ತು ದಖ್ಖನ್ ನೀತಿ
ಮೊಗಲ್ ಸಾಮ್ರಾಜ್ಯದ ಕೊನೆಯ ಮಹತ್ವದ ಚಕ್ರವರ್ತಿಯಾಗಿದ್ದ ಔರಂಗಜೇಬ್ ತನ್ನ ಆಡಳಿತದಲ್ಲಿ ಹಲವು ಪ್ರಮುಖ ನೀತಿಗಳನ್ನು ಅನುಸರಿಸಿದನು. ಅವನ ಧಾರ್ಮಿಕ ನೀತಿ ಮತ್ತು ದಖ್ಖನ್ ನೀತಿಗಳು ಸಾಮ್ರಾಜ್ಯದ ಭವಿಷ್ಯಕ್ಕೆ ದೊಡ್ಡ ಪರಿಣಾಮ ಬೀರಿದವು.
ಷಹಜಹಾನ್ – ಕಲೆ ಮತ್ತು ವಾಸ್ತುಶಿಲ್ಪ : (ಕ್ರಿಶ. 1627-1658)
ಮೊಗಲ್ ಸಾಮ್ರಾಜ್ಯದ ಮಹಾನ್ ಚಕ್ರವರ್ತಿಗಳಲ್ಲಿ ಒಬ್ಬರಾದ ಷಹಜಹಾನ್ ಅವರ ಆಳ್ವಿಕೆಯ ಕಾಲವನ್ನು ಕಲೆ ಮತ್ತು ವಾಸ್ತುಶಿಲ್ಪದ ಸುವರ್ಣಯುಗವೆಂದು ಕರೆಯಲಾಗುತ್ತದೆ. ಅವರ ಕಾಲದಲ್ಲಿ ನಿರ್ಮಾಣವಾದ ಸ್ಮಾರಕಗಳು ಇಂದಿಗೂ ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರುತ್ತಿವೆ.
ಶಿವಾಜಿಯ ದಿಗ್ವಿಜಯಗಳು
ಛತ್ರಪತಿ ಶಿವಾಜಿ ಮಹಾರಾಜ ಭಾರತೀಯ ಇತಿಹಾಸದಲ್ಲಿ ಧೈರ್ಯ ಮತ್ತು ಸ್ವಾಭಿಮಾನದ ಪ್ರತೀಕವಾಗಿದ್ದಾರೆ. ಅವರ ವಿಜಯಗಳು ಮತ್ತು ಯುದ್ಧತಂತ್ರಗಳು ಮರಾಠ ಸಾಮ್ರಾಜ್ಯದ ಸ್ಥಾಪನೆಗೆ ಮಹತ್ವದ ಅಡಿಪಾಯವನ್ನು ಹಾಕಿದವು.
ಮೂರನೇ ಪಾಣಿಪತ್ ಯುದ್ಧ (1761)
ಕ್ರಿ.ಶ. 1761ರಲ್ಲಿ ನಡೆದ ಮೂರನೇ ಪಾಣಿಪತ್ ಯುದ್ಧವು ಭಾರತದ ಇತಿಹಾಸದಲ್ಲಿನ ಅತ್ಯಂತ ಮಹತ್ವದ ಯುದ್ಧಗಳಲ್ಲಿ ಒಂದಾಗಿದೆ. ಈ ಯುದ್ಧವು ಮರಾಠ ಸಾಮ್ರಾಜ್ಯದ ವಿಸ್ತರಣೆಗೆ ದೊಡ್ಡ ಹೊಡೆತ ನೀಡಿದ್ದು, ಭಾರತದ ರಾಜಕೀಯ ಇತಿಹಾಸದ ದಿಕ್ಕನ್ನು ಬದಲಿಸಿತು.
ಪೇಶ್ವೆಯವರ ಕೈಕೆಳಗೆ ಮರಾಠ ಸಾಮ್ರಾಜ್ಯದ ಏಳಿಗೆ
ಶಿವಾಜಿ ಮಹಾರಾಜರ ಮರಣದ ನಂತರ ಮರಾಠ ಸಾಮ್ರಾಜ್ಯದಲ್ಲಿ ಮಹತ್ವದ ರಾಜಕೀಯ ಬದಲಾವಣೆಗಳು ನಡೆದವು. ಈ ಸಂದರ್ಭದಲ್ಲಿ ಪೇಶ್ವೆಗಳು ನಿಜವಾದ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡು ಮರಾಠ ಸಾಮ್ರಾಜ್ಯದ ವಿಸ್ತರಣೆಗೆ ಕಾರಣರಾದರು.
ಶಿವಾಜಿಯ ಆಡಳಿತ ಪದ್ಧತಿ
ದಕ್ಷ ಆಡಳಿತಗಾರ,ರಾಜನೀತಿ ನಿಪುಣನಾಗಿದ್ದ ಶಿವಾಜಿಯು ನಿರಂಕುಶಾಧಿಕಾರಿಯಂತೆ ವರ್ತಿಸಲಿಲ್ಲ. ಪ್ರಜೆಗಳ ಕಲ್ಯಾಣದಲ್ಲಿಯೇ ತೃಪ್ತಿ ಕಾಣುತ್ತಿದ್ದ ಅವನ ಬಗ್ಗೆ ಒಂದು ಪಕ್ಷಿನೋಟ.
ಭಾರತಕ್ಕೆ ಆಂಗ್ಲರ ಆಗಮನ
ಭಾರತಕ್ಕೆ ವ್ಯಾಪಾರದ ಸಲುವಾಗಿ ಆಗಮಿಸಿದ ಆಂಗ್ಲರು ನಂತರ ದೇಶದ ಸಾರ್ವಭೌಮರಾದದ್ದು ಸಮಯಸಾಧಕತನಕ್ಕೆ ಒಂದು ಅತ್ಯುತ್ತಮ ಉದಾಹರಣೆ
ಭಾರತದಲ್ಲಿ ಡಚ್ಚರು
ಕ್ರಿ.ಶ.1587ರಲ್ಲಿ ಡಚ್ಚರು ಸ್ಪೇನಿನ ಎರಡನೆಯ ಫಿಲಿಪ್ನ ವಿರುದ್ಧ ದಂಗೆ ಎದ್ದು ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ನಂತರ ಭಾರತಕ್ಕೆ ಆಗಮಿಸಿದರು.
ಯುರೋಪಿಯನ್ನರ ಆಗಮನ – ಒಂದು ಟಿಪ್ಪಣಿ
ಭಾರತದ ಸಂಪತ್ತು ಮತ್ತು ವಾಣಿಜ್ಯ ಅವಕಾಶಗಳು ಯುರೋಪಿನ ರಾಷ್ಟ್ರಗಳನ್ನು ಬಹಳ ಆಕರ್ಷಿಸಿತು. ಹೊಸ ಸಮುದ್ರಮಾರ್ಗದ ಹುಡುಕಾಟದಿಂದ ಯುರೋಪಿಯನ್ನರು ಭಾರತಕ್ಕೆ ಬಂದರು ಮತ್ತು ಇಲ್ಲಿ ವ್ಯಾಪಾರ ಹಾಗೂ ರಾಜಕೀಯ ಪ್ರಭಾವವನ್ನು ಸ್ಥಾಪಿಸಲು ಆರಂಭಿಸಿದರು.
ಕರ್ನಾಟಿಕ್ ಯುದ್ಧಗಳು
18ನೇ ಶತಮಾನದಲ್ಲಿ ಭಾರತದಲ್ಲಿ ಯುರೋಪಿಯನ್ ಶಕ್ತಿಗಳ ಪೈಪೋಟಿ ತೀವ್ರವಾಗಿತ್ತು. ಬ್ರಿಟಿಷ್ ಮತ್ತು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಗಳ ನಡುವೆ ನಡೆದ ಕರ್ನಾಟಕ ಯುದ್ಧಗಳು ದಕ್ಷಿಣ ಭಾರತದ ರಾಜಕೀಯವನ್ನು ಸಂಪೂರ್ಣವಾಗಿ ಬದಲಾಯಿಸಿದವು.
ಭಾರತದಲ್ಲಿ ಪೋರ್ಚುಗೀಸರು
ಭಾರತಕ್ಕೆ ಹೊಸ ಸಮುದ್ರಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸಿದ ಮೊದಲ ಯುರೋಪಿಯನ್ನರೆಂದರೆ ಪೋರ್ಚುಗೀಸರು. ಕ್ರಿ.ಶ. 1498ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪ್ರಥಮ ಪೋರ್ಚುಗೀಸ್ ನಾವಿಕನೆಂದರೆ ವಾಸ್ಕೋ-ಡ-ಗಾಮಾ. ಈತನ ಭೂ ಅನ್ವೇಷಣೆಯ ನಂತರ ಭಾರತಕ್ಕೆ ಪೋರ್ಚುಗೀಸರು ಡಚ್ಚರು, ಫ್ರೆಂಚರು ಹಾಗೂ ಇಂಗ್ಲೀಷರು ಒಬ್ಬೊಬ್ಬರಾಗಿ ಆಗಮಿಸಿದರು





































