ಸಾಗರ ಜಲಚರ ಪರಿಸರ ವ್ಯವಸ್ಥೆ

ಸಾಗರ ಜಲಚರ ಪರಿಸರ ವ್ಯವಸ್ಥೆ

ಸಾಗರ ಜಲಚರ ಪರಿಸರ ವ್ಯವಸ್ಥೆ

ಸಾಗರದ ನೀರು ಲವಣಾಂಶಗಳಿಂದ ಕೂಡಿದ ಕಾರಣ ಆ ನೀರನ್ನು ಕೃಷಿ ಹಾಗೂ ಕುಡಿಯುವ ನೀರಿಗಾಗಿ ಬಳಕೆ ಮಾಡಲಾಗುವುದಿಲ್ಲ. ಸಾಗರಗಳು ಭೂಮಿಯ ಶೇಕಡ 71 ಭಾಗವನ್ನು ಹೊಂದಿವೆ. ಇವುಗಳ ಆಳ ಅಂದಾಜು 3800 ಕಿ.ಮೀಗೂ ಹೆಚ್ಚಿದೆ. ನದಿ ಹಾಗೂ ತೊರೆಗಳಿಂದ ಹರಿಯುವ ನೀರು, ಸಮುದ್ರವನ್ನು ಸೇರುತ್ತದೆ. ಅಲ್ಲಿ ಹೆಚ್ಚು ಬೆಳಕು ಹಾಗೂ ಆಳ ಕಡಿಮೆ ಇರುವುದರಿಂದ ಸಾಗರ ಪ್ರದೇಶದಲ್ಲಿ ಹಲವು ಬಗೆಯ ಸಸ್ಯಗಳು ಕಂಡುಬರುತ್ತವೆ ಕ್ರಿಮಿಕೀಟ, ಮೀನು, ತಿಮಿಂಗಿಲಗಳು, ಬಹುತೇಕ ಸಾಗರದ ಎಲ್ಲಾ ಕಡೆಗಳಲ್ಲಿ ಲಭ್ಯವಿರುತ್ತದೆ. ಸಾಗರದಲ್ಲಿ ಹವಳದ ದ್ವೀಪಗಳು ಇವೆ. ಮನ್ನಾರ್ ಗಲ್ಫ್‌ನಲ್ಲಿ 3600 ವಿವಿಧ ಪ್ರಭೇದ ಪ್ರಾಣಿಗಳು ಇವೆ. ಸಮುದ್ರದ ಹಸು, ಕಡಲು ಕುದುರೆಗಳು ಇಲ್ಲಿ ವಾಸಿಸುತ್ತವೆ.

ಸಾಗರದಲ್ಲಿರುವ ಆಳ, ಉಷ್ಣತೆ, ಬೆಳಕು ಮುಂತಾದ ಭೌತಿಕ ಅಂಶಗಳಿಗೆ ಅನುಸಾರವಾಗಿ ಸಮುದ್ರವನ್ನು 3 ವಲಯಗಳನ್ನಾಗಿ ವಿಂಗಡಿಸಲಾಗಿದೆ.

  1. ತೀರಕ್ಕೆ ಸಮೀಪದ ಪ್ರದೇಶ
  2. ದ್ಯುತಿ ವಲಯ
  3. ಅಂಧಕಾರ ಕೂಪ

1. ತೀರಕ್ಕೆ ಸಮೀಪದ ಪ್ರದೇಶ: (Littoral region)

ಇದು ಸಾಗರಗಳ ಖಂಡಾವರಣ ಪ್ರದೇಶವನ್ನು ಅಂದರೆ ಸುಮಾರು 200 ಮೀ ಆಳದವರೆಗಿನ ಸಾಗರದ ಅಂಚಿನ ಭಾಗವನ್ನು ಒಳಗೊಂಡಿದೆ. ಸುಮಾರು 50 ಮೀ ಆಳದವರೆಗೆ ಸೂರ್ಯನ ಕಿರಣಗಳು ಸುಲಭವಾಗಿ ಒಳಗೆ ಸೇರುವುದರಿಂದ ಮತ್ತು ಅಲೆಗಳಿಂದ ನೀರು ಮಿಶ್ರಣ ಹೊಂದುತ್ತದೆ. ಹಾಗಾಗಿ ಇಲ್ಲಿ ಅತಿ ಹೆಚ್ಚಾಗಿ ಹಸಿರು ಅಲ್ಗೆಗಳು ಎಂಬ ಸಸ್ಯ ಸಮುದಾಯ ಕಂಡುಬರುತ್ತದೆ. ಇಲ್ಲಿ ಶಂಕು ಹುಳುಗಳು, ಕೀಟಗಳು ಹಾಗೂ ಜಲ ಚಿಟ್ಟೆಗಳು ಹೆಚ್ಚಾಗಿ ವಾಸಿಸುತ್ತವೆ. ಈ ವಲಯದಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಹಾಗಾಗಿ ಈ ಪ್ರದೇಶವನ್ನು ʻʻಅಂಚಿನ ವಲಯʼʼ ಎಂದು ಕರೆಯುತ್ತಾರೆ.

2. ದ್ಯುತಿ ವಲಯ: (Eupothic Region)

ಸಾಗರದಲ್ಲಿ ಸೂರ್ಯನ ಕಿರಣಗಳು ನೀರಿನ ಆಳದಲ್ಲಿ ಎಲ್ಲಿಯವರೆಗೆ ಹೋಗಿ ತಲುಪುತ್ತವೆಯೋ ಆ ಪ್ರದೇಶವನ್ನು ದ್ಯುತಿ ವಲಯ ಎಂದು ಕರೆಯಲಾಗುವುದು. ಈ ಪ್ರದೇಶದಲ್ಲಿ ಜೀವಿಗಳು ಹೆಚ್ಚಿನ ಪ್ರಮಾಣದಲ್ಲಿ ಹಾಗೂ ವೈವಿಧ್ಯಮಯವಾಗಿ ಕಂಡುಬರುತ್ತದೆ. ಭೂಮಿಯ ಮೇಲೆ ನಡೆಯುವ ದ್ಯುತಿ ಸಂಶ್ಲೇಷಣೆಯ ಶೇ 90ರಷ್ಟು ಸಾಗರ ಮತ್ತು ಸಮುದ್ರ ದ್ಯುತಿ ವಲಯದಲ್ಲಿಯೇ ಆಗುತ್ತದೆ. ಇಲ್ಲಿ ಚಿಕ್ಕ ಹಾಗೂ ದೊಡ್ಡ ಮೀನುಗಳು, ತಿಮಿಂಗಲ, ಡಾಲ್ಫಿನ್, ಆಮೆ ಹಾಗೂ ಮತ್ತು ಅಷ್ಟ ಪಾದಿಗಳು ವಾಸಿಸುತ್ತವೆ. 

 3. ಅಂಧಕಾರ ಕೂಪ: (Abbas)

ದ್ಯುತಿ ವಲಯದ ತಳಭಾಗದಲ್ಲಿರುವ ಸೂರ್ಯನ ಬೆಳಕು ಪ್ರವೇಶಮಾಡಲಾಗದ ನೀರಿನ ಭಾಗವನ್ನು ʻʻಅಂಧಕಾರ ಕೂಪ ಅಥವಾ ಅಂಧಕಾರವಲಯʼʼ ಎಂದು ಕರೆಯಲಾಗಿದೆ. ಈ ವಲಯದಲ್ಲಿ ಸಸ್ಯರಾಶಿಗಳ ಸಂಖ್ಯೆ ಬಹಳ ಕಡಿಮೆ. ವಿವಿಧ ಪ್ರಾಣಿಗಳು ಮತ್ತು ವಿಘಟಕ ಜೀವಿಗಳು ಮಾತ್ರ ಕಂಡುಬರುತ್ತವೆ. ಈ ವಲಯದಲ್ಲಿನ ಪ್ರಾಣಿಗಳು ದ್ಯುತಿವಲಯದ ಸತ್ತ ಪ್ರಾಣಿಗಳನ್ನು ತಿಂದು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತವೆ.

ಸಾಗರದ ಉಪಯೋಗಗಳು:̇

  1. ಸಿಗಡಿ ಏಡಿ ಹಾಗೂ ಮೀನುಗಳು ಕರಾವಳಿ ತೀರದ ಜನರ ಪ್ರಮುಖ ಆಹಾರ ಪದಾರ್ಥಗಳಾಗಿವೆ.
  2. ಸಾಗರದ ತಳಗಳು ಫಾಸಿಲ್‌ ಇಂಧನ ಹಾಗೂ ಅಮೂಲ್ಯ ಖನಿಜ ಸಂಪತ್ತನ್ನು ಹೊಂದಿದೆ.
  3. ಸಮುದ್ರದ ಪಾಚಿಗಳು, ಐಸ್‌ಕ್ರೀಂ ಹಾಗೂ ಸೌಂದರ್ಯವರ್ಧಕ ವಸ್ತುಗಳ ತಯಾರಿಕೆಗೆ ಅಗತ್ಯವಾದ ʻಅಗಾರ್ʼ ಗಳಿಂದ ಪಡೆಯುತ್ತವೆ. ಸಮುದ್ರದ ಪಾಚಿಗಳಿಗೆ ಜೀವ ರಕ್ಷಕ ಔಷಧಿಗಳ ಗುಣಗಳಿವೆ.
  4. ಸಮುದ್ರ ತೀರ ಪ್ರದೇಶಗಳು ಪ್ರವಾಸಿ ಸ್ಥಳಗಳಾಗಿವೆ

ಉಪಸಂಹಾರ

ಸಾಗರ ಮತ್ತು ಅಳಿವೆ ಪರಿಸರ ವ್ಯವಸ್ಥೆಗಳು ನಮ್ಮ ಆಹಾರ, ಇಂಧನ ಮತ್ತು ಬಯೋಮೂಲಗಳಲ್ಲಿ ಮಹತ್ವವನ್ನು ಹೊಂದಿವೆ. ಇವುಗಳ ವೈವಿಧ್ಯತೆಯು ಜಲಚರ ಜೀವಿಗಳ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಸೂರ್ಯನ ಬೆಳಕು, ಉಷ್ಣತೆ, ಆಳ ಮುಂತಾದ ಭೌತಿಕ ಅಂಶಗಳು ಜೀವಿಗಳ ವಾಸಸ್ಥಳವನ್ನು ನಿರ್ಧರಿಸುತ್ತವೆ. ಸಮುದ್ರ ಮತ್ತು ಅಳಿವೆ ಪರಿಸರದ ಸಂರಕ್ಷಣೆಯ ಮೂಲಕ ನಾವು ಈ ಅಮೂಲ್ಯ ಸಂಪತ್ತನ್ನು ಭವಿಷ್ಯಕಾಲಕ್ಕೂ ಉಳಿಸಬಹುದು.