ಜೀವ ವೈವಿಧ್ಯತೆಯ ಪ್ರಕಾರಗಳು

ಜೀವ ವೈವಿಧ್ಯತೆಯ ಪ್ರಕಾರಗಳು

ಭೂಮಿಯ ಮೇಲೆ ವಾಸಿಸುವ ಸಸ್ಯ, ಪ್ರಾಣಿ ಮತ್ತು ಸೂಕ್ಷ್ಮಜೀವಿಗಳಲ್ಲಿರುವ ವೈವಿಧ್ಯತೆಯನ್ನು ಜೀವವೈವಿಧ್ಯತೆ ಎಂದು ಕರೆಯಲಾಗುತ್ತದೆ. ಈ ವೈವಿಧ್ಯತೆ ಜೀವಿಗಳ ಉಳಿವು ಮತ್ತು ವಿಕಾಸಕ್ಕೆ ಸಹಕಾರಿಯಾಗಿದೆ. ಜೀವವೈವಿಧ್ಯತೆಯ ಪ್ರಕಾರಗಳು ಈ ಕೆಳಗಿನಂತಿವೆ,

  1. ಅನುವಂಶಿಯ ವೈವಿಧ್ಯತೆ
  2. ಜೀವ ಪ್ರಭೇದ ವೈವಿಧ್ಯತೆ
  3. ಪರಿಸರ ವ್ಯವಸ್ಥೆಯ ವೈವಿಧ್ಯತೆ

1. ಅನುವಂಶೀಯ ವೈವಿಧ್ಯತೆ: (Genetic diversity)

 ʻʻಜೀವ ಪ್ರಭೇದಗಳ ನಡುವಿನ ಅನುವಂಶೀಯ ವ್ಯತ್ಯಾಸವನ್ನು ಜೀವವೈವಿಧ್ಯತೆ ಎಂದು ಕರೆಯುವರು.ʼʼ ಭೂಮಿಯ ಮೇಲೆ ಜನಿಸಿದ ಒಂದೇ ಪ್ರಭೇದದ ಜೀವಿಗಳಲ್ಲಿ ವಂಶವಾಹಿನಿಯ ಗುಣಗಳು ಭಿನ್ನವಾಗಿ ಕಂಡುಬರುತ್ತವೆ. ಉದಾ:-  ಭತ್ತದ ತಳಿಗಳಲ್ಲಿ ಸುಮಾರು 5000 ಪ್ರಕಾರಗಳಿವೆ ಎಂದು ಹೇಳಲಾಗುತ್ತದೆ. ಮೂಲತಃ ಮಾನವನು ಹೋಮೋ ಸೇಪಿಯನ್‌ ಪ್ರಭೇದಕ್ಕೆ ಸೇರಿದವನಾಗಿದ್ದರೂ ಇದರಲ್ಲಿಯೇ ಸಾವಿರಾರು ತಳಿಗಳನ್ನು ಗುರುತಿಸಬಹುದಾಗಿದೆ. ಹೀಗಾಗಿ ಅವರ ಮೈಬಣ್ಣ, ಎತ್ತರ, ತೂಕ, ಗಾತ್ರ, ಕಣ್ಣಿನ ಬಣ್ಣ ಹಾಗೂ ಮೆದುಳಿನ ತೂಕದಲ್ಲಿ ಭಿನ್ನತೆಯನ್ನು ಕಾಣಬಹುದಾಗಿದೆ. ಈ ರೀತಿಯ ಭಿನ್ನತೆಯು ಅನುವಂಶಿಯ ವೈವಿಧ್ಯತೆಯನ್ನು ವ್ಯಕ್ತಪಡಿಸುತ್ತದೆ. ಪರಿಸರದ ಲಕ್ಷಣಗಳು ಬದಲಾವಣೆಗೊಂಡಂತೆ ಜೀವಿಗಳ ವಂಶ ವಾಹಿನಿಗಳಲ್ಲಿ ಹೊಂದಾಣಿಕೆಯ ಮೂಲಕ ಬದಲಾವಣೆಗಳು ಕಂಡುಬರುತ್ತವೆ. ಒಂದೇ ರೀತಿಯ ಪ್ರಾಣಿ ಪಕ್ಷಿಗಳಲ್ಲಿಯೂ ಈ ಭಿನ್ನತೆಯನ್ನು ನಾವು ಕಾಣಬಹುದಾಗಿದೆ. ಈ ಬದಲಾವಣೆಯನ್ನು ಪ್ರಭೇದ ನಿರ್ಮಾಣ ಕ್ರಿಯೆ ಎಂದು ಕರೆಯಲಾಗಿದೆ. ಜೀವಿಗಳ ಈ ವೈವಿಧ್ಯತೆಯು ವಂಶಾಭಿವೃದ್ಧಿಗೆ ಕಾರಣವಾಗುತ್ತದೆ. ಒಂದು ವೇಳೆ ವಂಶಾಭಿವೃದ್ಧಿ ಕಡಿಮೆಯಾದರೆ ಜೀವಿಗಳು ನಶಿಸಿ ಹೋಗುತ್ತವೆ.

2. ಜೀವ ಪ್ರಭೇದದ ವೈವಿಧ್ಯತೆ: (Species diversity)

ʻʻಒಂದೇ ಭೂಭಾಗದಲ್ಲಿ ಬೇರೆ ಬೇರೆ ತಳಿಯ ಜೀವಿ ಪ್ರಭೇದಗಳು ವಾಸಿಸುತ್ತಿದ್ದರೆ ಅವುಗಳನ್ನು ಜೀವ ಪ್ರಭೇದದ ವೈವಿಧ್ಯತೆ ಎಂದು ಕರೆಯುವರು.ʼʼ ಒಂದೇ ಭೂ ಭಾಗದಲ್ಲಿ ವಾಸಿಸುವ ಜೀವಿಗಳಲ್ಲಿ ಹಲವಾರು ರೀತಿಯ ಭಿನ್ನತೆಗಳು ಕಂಡುಬರುತ್ತದೆ. ಉದಾ ಸೂಕ್ಷ್ಮಾಣು ಜೀವಿ ವೈವಿಧ್ಯತೆ ಸಸ್ಯ ವೈವಿಧ್ಯತೆ ಹಾಗೂ ಪ್ರಾಣಿ ವೈವಿಧ್ಯತೆ. ಒಂದು ಭಾಗದಲ್ಲಿ ವಾಸಿಸುವ ಜೀವಿಗಳ ಸಂಖ್ಯಾ ಪ್ರಮಾಣ ಹೇಗೆ ಸಮನಾಗಿ ಕಂಡು ಬರುವುದಿಲ್ಲವೋ ಹಾಗೆಯೇ ಅವುಗಳ ಸಂಖ್ಯೆ ಹೆಚ್ಚು ಕಡಿಮೆಯಾಗಿರುತ್ತದೆ. ಜೀವ ಪ್ರಭೇದದ ವಿವಿಧ ರೂಪಗಳನ್ನು ಎರಡು ಭಾಗಗಳಾಗಿ ಗುರುತಿಸಬಹುದು. ಅವುಗಳೆಂದರೆ.

  1. ಜೀವ ಪ್ರಭೇದ ಶ್ರೀಮಂತಿಕೆ 2.  ಜೀವ ಪ್ರಭೇದದ ಸಮತಲ ಹಂಚಿಕೆ.

1. ಜೀವ ಪ್ರಭೇದದ ಶ್ರೀಮಂತಿಕೆ: (Species richness)

  1. ಅಲ್ಫಾ ವೈವಿಧ್ಯತೆ:(Alpha diversity) ಒಂದು ಗೊತ್ತಾದ ಪ್ರದೇಶದಲ್ಲಿ ಕಂಡುಬರುವ ಜೀವಿ ಪ್ರಭೇದಗಳ ಒಟ್ಟು ಸಂಖ್ಯೆಯನ್ನು ಆಲ್ಫಾ ವೈವಿಧ್ಯತೆ ಎಂದು ಕರೆಯುವರು. ಇಲ್ಲಿ ವಾಸಿಸುವ ಜೀವಿಗಳು ನಿರ್ದಿಷ್ಟ ಸಮುದಾಯಕ್ಕೆ ಸೇರಿದವುಗಳಾಗಿರುತ್ತವೆ. ಇಲ್ಲಿನ ಶ್ರೀಮಂತ ಜೀವಿ ಸಮುದಾಯಗಳ ಹಂಚಿಕೆ ಸರಿಸಮಾನವಾಗಿರುತ್ತದೆ.
  2. ಬೀಟಾ ವೈವಿಧ್ಯತೆ: (Beta diversity) ಎರಡು ನೆಲೆಗಳಲ್ಲಿಯೂ ಸಾಮಾನ್ಯವಾಗಿ ಕಂಡುಬರುವ ಜೀವ ವೈವಿಧ್ಯಗಳನ್ನು ಬೀಟಾ ವೈವಿಧ್ಯತೆ ಎಂದು ಕರೆಯುವರು.
  3. ಗಾಮಾ ವೈವಿಧ್ಯತೆ: (Gamma diversity) ಒಂದು ಗೊತ್ತಾದ ಪ್ರದೇಶದಲ್ಲಿ ವಿವಿಧ ರೀತಿಯ ಜೀವ ವೈವಿಧ್ಯಗಳು ಕಂಡುಬಂದರೆ ಅದನ್ನು ಗಾಮ ವೈವಿಧ್ಯತೆ ಎಂದು ಕರೆಯಬಹುದಾಗಿದೆ.

2. ಜೀವ ಪ್ರಭೇದದ ಸಮತಲ ಹಂಚಿಕೆ: (Species eveness)

 ಒಂದು ಪ್ರದೇಶದಲ್ಲಿ ಹಲವಾರು ಜಾತಿಯ ಪ್ರಭೇದಗಳು ವಾಸಿಸುತ್ತವೆ. ಅವುಗಳ ಸಂಖ್ಯೆಯಲ್ಲಿ ಏರುಪೇರು ಆಗಿರುವುದು ಸಹಜವಾದ ಕ್ರಿಯೆ. ಒಂದು ವೇಳೆ ಜೀವಿಗಳ ಸಂಖ್ಯೆಯಲ್ಲಿ ಸಮನಾಗಿದ್ದರೆ ಅದನ್ನು ಸಮತಲ ಹಂಚಿಕೆ ಎಂದು ಕರೆಯಲಾಗುವುದು. ಒಂದು ವೇಳೆ ಸಂಖ್ಯೆಯಲ್ಲಿ ಅಸಮಾನತೆ ಕಂಡು ಬಂದರೆ ಅದನ್ನು ಅಸಮತಲ ಹಂಚಿಕೆ ಎಂದು ಹೇಳಬಹುದು.

ಉಪಸಂಹಾರ

ಜೀವವೈವಿಧ್ಯತೆ ಭೂಮಿಯ ಜೀವಸಂಪತ್ತಿನ ಮೂಲಾಧಾರವಾಗಿದ್ದು, ಅದು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅನುವಂಶೀಯ, ಜೀವ ಪ್ರಭೇದ ಹಾಗೂ ಪರಿಸರ ವ್ಯವಸ್ಥೆಯ ವೈವಿಧ್ಯತೆಗಳು ಪರಸ್ಪರ ಅವಿಭಾಜ್ಯವಾಗಿ ಸಂಬಂಧಿಸಿದ್ದಾಗಿವೆ. ಈ ವೈವಿಧ್ಯತೆಯು ಜೀವಿಗಳ ಹೊಂದಾಣಿಕೆ, ವಂಶಾಭಿವೃದ್ಧಿ ಮತ್ತು ಉಳಿವಿಗೆ ಸಹಕಾರಿಯಾಗುತ್ತದೆ. ಜೀವವೈವಿಧ್ಯತೆ ಕುಗ್ಗಿದರೆ ಪರಿಸರ ಅಸ್ಥಿರತೆ ಉಂಟಾಗುತ್ತದೆ. ಆದ್ದರಿಂದ ಜೀವವೈವಿಧ್ಯತೆಯ ಸಂರಕ್ಷಣೆ ಮಾನವನ ಪ್ರಮುಖ ಜವಾಬ್ದಾರಿಯಾಗಿದೆ.