ಮಳೆ ಕೊಯ್ಲು ಸಂಗ್ರಹಣೆಯ ಲಾಭಗಳು

ಮಳೆ ಕೊಯ್ಲು ಸಂಗ್ರಹಣೆಯ ಲಾಭಗಳು

ನೀರು ಜೀವನದ ಮೂಲ ಸಂಪನ್ಮೂಲವಾಗಿದ್ದು, ಅದರ ಸಂರಕ್ಷಣೆ ಇಂದಿನ ಅಗತ್ಯವಾಗಿದೆ. ಮಳೆ ನೀರಿನ ಕೊಯ್ಲು ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿ ಭವಿಷ್ಯದ ನೀರಿನ ಅಭಾವವನ್ನು ತಡೆಯುವ ಪರಿಣಾಮಕಾರಿ ವಿಧಾನವಾಗಿದೆ.

ʻʻಮಳೆಗಾಲದಲ್ಲಿ ಬಿದ್ದ ನೀರನ್ನು ಸೆರೆಹಿಡಿದು ಸಂಗ್ರಹಿಸಿ ಮಾನವ, ಪಶು, ಪಕ್ಷಿ ಹಾಗೂ ಸಸ್ಯಗಳಿಗೆ ಬಳಕೆ ಮಾಡಿಕೊಳ್ಳುವ ಕ್ರಮವನ್ನು ಮಳೆ ನೀರು ಕೊಯ್ಲು ಎಂದು ಕರೆಯಲಾಗುವುದು.ʼʼ ಮಳೆಗಾಲದಲ್ಲಿ ಬಿದ್ದ ನೀರು ಹಾಗೆ ಹರಿದು ವ್ಯರ್ಥವಾಗಿ ಹೋಗದಂತೆ ಮೇಲ್ಚಾವಣಿ ಅಥವಾ ಮೇಲ್ಮೈಯಿಂದ ಸಂಗ್ರಹಣೆ ಮಾಡಿ ಅಗತ್ಯವಿದ್ದಾಗ ವಿವಿಧ ಉದ್ದೇಶಗಳಿಗಾಗಿ ನೀರನ್ನು ಮರುಬಳಕೆ ಮಾಡಬಹುದು. ಮಳೆ ನೀರು ಕೊಯ್ಲು ಮನೆಗಳಿಗೆ ಸ್ವಯಂ ಸರಬರಾಜಿನ ಸರಳ ಹಾಗೂ ಸುಲಭ ವಿಧಾನವಾಗಿದ್ದು ಇದು ಹೆಚ್ಚು ಖರ್ಚಿನ ವಿಧಾನವಲ್ಲ.  ಈ ರೀತಿಯಾದ ನೀರಿನ ಸಂಗ್ರಹಣೆಯನ್ನು ಮನೆಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ಬೃಹತ್ ಕೈಗಾರಿಕೆಗಳಲ್ಲಿ ಇತ್ತೀಚಿಗೆ ಕಡ್ಡಾಯವಾಗಿ ಅಳವಡಿಸಲಾಗಿದೆ. ಮಳೆ ನೀರಿನ ಕೊಯ್ಲಿನ ಪರಿಣಾಮವಾಗಿ ಅಂತರ್ಜಲದ ಗುಣಮಟ್ಟದಲ್ಲಿಯೂ ಸಹ ಸುಧಾರಣೆ ಕಂಡುಬಂದಿದೆ. 

ಮಳೆ ಕೊಯ್ಲು ಸಂಗ್ರಹಣೆಯ ಲಾಭಗಳು (Benefits of rainwater harvesting)

1.ಇದೊಂದು ಬಹಳ ಸರಳವಾದ ಅಷ್ಟೇ ಸುಲಭವಾದ ವಿಧಾನವಾಗಿದೆ.

2. ಇದಕ್ಕೆ ಹೆಚ್ಚು  ಖರ್ಚು ಆಗುವುದಿಲ್ಲ. ಆದರೆ ಲಾಭ ಮಾತ್ರ ಹೆಚ್ಚು.

3.  ಇದು ಪರಿಸರಸ್ನೇಹಿ ವಿಧಾನವಾಗಿದೆ.

4.  ಮಳೆ ಕೊಯ್ಲಿನಿಂದ ಮಣ್ಣಿನ ಸವಕಳಿಯನ್ನು ತಡೆಗಟ್ಟಿ ಫಲವತ್ತತೆಯನ್ನು ಹೆಚ್ಚಿಸಬಹುದು.

5.  ನೀರಿನ ಸ್ವಾವಲಂಬನೆಯನ್ನು ಸಾಧಿಸಬಹುದಾಗಿದೆ.

6.  ಮಳೆ ನೀರಿನ ಕೊಯ್ಲಿನಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದಾಗಿದೆ.

7.  ಫ್ಲೋರೈಡ್ ಮುಕ್ತ ಶುದ್ದ ಕುಡಿಯುವ ನೀರಿಗಾಗಿ ಮಳೆ ನೀರಿನ ಕೊಯ್ಲು ಬಹಳ ಪರಿಣಾಮಕಾರಿ.

8.   ಮಳೆ ನೀರು ಕೊಯ್ಲಿನ ಪರಿಣಾಮವಾಗಿ ಕೆರೆಕಟ್ಟೆಗಳನ್ನು ಭರ್ತಿ ಮಾಡಬಹುದು.

9.  ಮಳೆ ನೀರು ಕೊಯ್ಲಿನ ಪರಿಣಾಮದಿಂದ ಬರಗಾಲವನ್ನು ತೊಡೆದು ಹಾಕಬಹುದು.

10.  ಅತಿಯಾದ ನೀರಿನ ಬಳಕೆಯನ್ನು ತಡೆಗಟ್ಟುವುದು ಹಾಗೂ ವಿದ್ಯುತ್ ಶಕ್ತಿಯನ್ನು ಉಳಿತಾಯ ಮಾಡುವುದು.

11.  ಮಳೆ ನೀರು ಕೊಯ್ಲಿನಿಂದ ಕುಡಿಯಲು, ಅಡುಗೆ ಮಾಡಲು, ಸ್ನಾನ ಮಾಡಲು, ಬಟ್ಟೆ, ಪಾತ್ರೆಗಳನ್ನು, ದನ ಕರುಗಳ ಮೈ ತೊಳೆಯಲು, ಶೌಚಾಲಯದ ಉಪಯೋಗಕ್ಕಾಗಿ, ಕೈತೋಟ ಹಾಗೂ ಕೃಷಿ ಕಾರ್ಯಗಳಿಗಾಗಿ ನೀರನ್ನು ಬಳಸಬಹುದು.

 ವಿಜಾಪುರ ನಗರದಿಂದ ಹೊರ ಭಾಗದಲ್ಲಿ ನಿರ್ಮಿತಿ ಕೇಂದ್ರವನ್ನು ಸ್ಥಾಪಿಸಿ ಮಳೆ ನೀರು ಕೊಯ್ಲಿಗೆ ಅನುಕೂಲತೆಯನ್ನು ಒದಗಿಸಿಕೊಡಲಾಗಿದೆ. ಇಲ್ಲಿ ಮಳೆ ನೀರು ಕೊಯ್ಲಿನ ಸಂಗ್ರಹದ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ. ಮಳೆ ನೀರು ಕೊಯ್ಲಿನಿಂದ ಸ್ವಚ್ಛ ಹಾಗೂ ಸುಸ್ಥಿರ ನಗರಗಳನ್ನು ನಿರ್ಮಿಸಬಹುದಾಗಿದೆ. ಅಂತರ್ಜಲ ಅಭಿವೃದ್ಧಿಗಾಗಿ

1. ತೆರೆದ ಬಾವಿಗಳನ್ನು ಪುನರುಜ್ಜೀವನಗೊಳಿಸುವುದು.

2.  ಕೊಳವೆ ಬಾವಿಗಳನ್ನು ಪುನರುಜ್ಜೀವನಗೊಳಿಸುವುದು.

3.  ಕೆರೆಕಟ್ಟೆ, ತೊರೆ, ನದಿಗಳು ಹಾಗೂ ಸರೋವರಗಳ ನೀರನ್ನು ಸಂಗ್ರಹಿಸುವುದು.

ಉಪಸಂಹಾರ

ಮಳೆ ನೀರಿನ ಕೊಯ್ಲು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ನೀಡುವ ಅತ್ಯುತ್ತಮ ಜಲಸಂರಕ್ಷಣಾ ವಿಧಾನವಾಗಿದೆ. ಇದು ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಪರಿಸರ ಸಮತೋಲನವನ್ನು ಕಾಪಾಡುತ್ತದೆ. ಮನೆಮಟ್ಟದಿಂದ ಹಿಡಿದು ಸಾರ್ವಜನಿಕ ಸಂಸ್ಥೆಗಳವರೆಗೆ ಮಳೆ ನೀರು ಕೊಯ್ಲನ್ನು ಅಳವಡಿಸಿಕೊಂಡರೆ ನೀರಿನ ಸ್ವಾವಲಂಬನೆ ಸಾಧಿಸಬಹುದು. ಭವಿಷ್ಯದ ತಲೆಮಾರಿಗೆ ನೀರನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ ಮಳೆ ನೀರು ಕೊಯ್ಲನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.